robot | Vishva Kannada

ರೋಬೋಟ್ ಲಾಯರ್
ಇತ್ತೀಚೆಗೆ ಕೃತಕ ಬುದ್ಧಿಮತ್ತೆ ತುಂಬ ಸುದ್ದಿಯಲ್ಲಿದೆ. ಅಂತಹ ಒಂದು ಚಾಟ್ ಇಂಜಿನ್ ಚಾಟ್‌ಜಿಪಿಟಿ ಬಗ್ಗೆ ಎರಡು ವಾರಗಳ ಹಿಂದೆ ಬರೆದಿದ್ದೆ. ಗೂಗ್ಲ್‌, ಅಮೆಜಾನ್ ಅಲೆಕ್ಸಾ, ಆಪಲ್ ಸಿರಿ ಇವುಗಳಿಗೆ ಧ್ವನಿ ಮೂಲಕ ಆಜ್ಞೆ ನೀಡುವುದೂ ಕೃತಕ ಬುದ್ಧಿಮತ್ತೆಯ ವ್ಯಾಪ್ತಿಯಲ್ಲಿ ಬರುತ್ತವೆ. ಸದ್ಯಕ್ಕೆ ಇವು ಯಾವುವೂ ಕನ್ನಡವನ್ನು ಕಲಿತಿಲ್ಲ. ಆದುದರಿಂದ ಕೃತಕ ಬುದ್ಧಿಮತ್ತೆಯ ಸವಲತ್ತುಗಳಿಂದಾಗಿ (ತಂತ್ರಾಂಶಗಳಿಂದ) ನಮ್ಮ ಕೆಲಸ ಹೋಗಬಹುದು ಎಂದು ಶಿಕ್ಷಕರು ಮತ್ತು ಲೇಖಕರುಗಳು ಚಿಂತೆ ಪಡಬೇಕಾಗಿಲ್ಲ. ಆದರೆ ಕೃತಕ ಬುದ್ಧಿಮತ್ತೆಯ ಸವಲತ್ತುಗಳು ಕನ್ನಡದಲ್ಲೂ ದೊರೆಯುವ ಕಾಲ ತುಂಬ ದೂರವಿಲ್ಲ. ಗೂಗ್ಲ್ ಅನುವಾದ ಮೊದಲು ಕನ್ನಡಕ್ಕೆ ಕೆಟ್ಟದಾಗಿತ್ತು. ಇತ್ತೀಚೆಗೆ ಅದು ತುಂಬ ಸುಧಾರಿಸಿದೆ. ಬಹುತೇಕ ಅನುವಾದದ ಕೆಲಸಗಳಿಗೆ ಅದು ನೀಡುವ ಅನುವಾದ ಒಂದು ಪ್ರಾರಂಭದ ಹೆಜ್ಜೆಯನ್ನಾಗಿ ಹಲವರು ಬಳಸುತ್ತಿದ್ದಾರೆ. ಗೂಗ್ಲ್ ಅನುವಾದ ನೀಡಿದ ಪಠ್ಯವನ್ನು ಸುಧಾರಿಸಿ ಅಂತಿಮ ರೂಪು ನೀಡುತ್ತಿದ್ದಾರೆ. ವಿಕಿಪೀಡಿಯಾದಲ್ಲೂ ಈ ಯಂತ್ರಾನುವಾದ ಲಭ್ಯವಿದೆ. ಅಂದರೆ ಇಂಗ್ಲಿಷ್ (ಅಥವಾ ಇತರೆ) ಭಾಷೆಯ ವಿಕಿಪೀಡಿಯ ಲೇಖನವನ್ನು ಕನ್ನಡಕ್ಕೆ (ಅಥವಾ ಇತರೆ ಭಾಷೆಗೆ) ವಿಕಿಪೀಡಿಯದಲ್ಲೇ ಅಡಕವಾಗಿರುವ ಯಂತ್ರಾನುವಾದದ ಮೂಲಕ ಅನುವಾದ ಮಾಡಬಹುದು. ಆದರೆ ಈ ಅನುವಾದ ಸುಮಾರು 85% ದಷ್ಟು ಮಾತ್ರ ಸರಿಯಿದೆ. ಅದನ್ನು ಮೂಲವಾಗಿಟ್ಟುಕೊಂಡು ಅದನ್ನು ಸುಧಾರಿಸಿ ಲೇಖನ ಅಂತಿಮಗೊಳಿಸಬಹುದು. ಬಹುತೇಕ ಜನರು ಹಾಗೆ ಮಾಡುತ್ತಿದ್ದಾರೆ ಕೂಡ. ಕೃತಕ ಬುದ್ಧಿಮತ್ತೆಯ ಸವಲತ್ತುಗಳು ಚಾಟ್‌ಜಿಪಿಟಿಯಿಂದ ಮುಂದುವರೆದು ಕಾನೂನು ಕ್ಷೇತ್ರಕ್ಕೂ ಕಾಲಿಟ್ಟರೆ? ಅಂತಹ ಒಂದು ಸುದ್ದಿ ಬಂದಿದೆ.

ನಾನು ಹೇಳಲು ಹೊರಟಿರುವುದು ಕೃತಕ ಬುದ್ಧಿಮತ್ತೆಯ ಮೂಲಕ ಕೆಲವು ಕಾನೂನುಗಳ ಅನುವಾದ ಅಲ್ಲ. ಇದು ರೋಬೋಟ್ ಲಾಯರ್ ಕಥೆ. ಹಾಗೆಂದು ಹೇಳಿ ಸಿನಿಮಾಗಳಲ್ಲಿ ತೋರಿಸುವಂತೆ ಯಂತ್ರಮಾನವನೊಂದು ನ್ಯಾಯಾಲಯದಲ್ಲಿ ವಾದ ಮಾಡುವ ದೃಶ್ಯವನ್ನು ಊಹಿಸಿಕೊಳ್ಳಬೇಕಾಗಿಲ್ಲ. ಬದಲಿಗೆ ಕಾನೂನು ಕಲಿತು ಸಂದರ್ಭಕ್ಕೆ ಸರಿಯಾಗಿ ಸೂಕ್ತ ಕಾನೂನಿನ ಉಲ್ಲೇಖ ಮಾಡಿ ನ್ಯಾಯಾಲಯದಲ್ಲಿ ಕಕ್ಷಿದಾರನ ಪರವಾಗಿ ವಾದ ಮಂಡಿಸುವ ಕೃತಕ ಬುದ್ಧಿಮತ್ತೆಯ ಇಂಜಿನ್ ತಂತ್ರಾಂಶ ಎನ್ನಬಹುದು.

ಕಾಲ್ಪನಿಕ ಚಿತ್ರ

ಕೃತಕ ಬುದ್ಧಿಮತ್ತೆ (artificial intelligence) ಎನ್ನುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚೆಗೆ ತುಂಬ ಸುದ್ದಿ ಮಾಡುತ್ತಿರುವ ವಿಷಯ. ಇದರಲ್ಲಿ ಯಂತ್ರಗಳು ತಾವೇ ವಿಷಯಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ಸ್ಪಂದಿಸಿ, ತಾವೇ ತೀರ್ಮಾನ ತೆಗೆದುಕೊಂಡು ಕೆಲಸ ಮಾಡುತ್ತವೆ. ಕೆಲವು ಪ್ರಮುಖ ಉದಾಹರಣೆಗೆಳು – ಯಂತ್ರಾನುವಾದ, ಪಠ್ಯದಿಂದ ಧ್ವನಿಗೆ ಹಾಗೂ ಧ್ವನಿಯಿಂದ ಪಠ್ಯಕ್ಕೆ ಪರಿವರ್ತನೆ, ಚಿತ್ರದಿಂದ ಪಠ್ಯಕ್ಕೆ, ಇತ್ಯಾದಿ. ಈ ಬಗ್ಗೆ ಹಿಂದೊಮ್ಮೆ ಹೀಗೆಂದು ಇದೇ ಅಂಕಣದಲ್ಲಿ ಬರೆಯಲಾಗಿತ್ತು.

ಹಲವು ಕ್ಷೇತ್ರಗಳಂತೆ ಕಾನೂನು ಮತ್ತು ನ್ಯಾಯಾಲಯಗಳಿಗೂ ಕೃತಕ ಬುದ್ಧಿಮತ್ತೆ ಪ್ರವೇಶ ಮಾಡುತ್ತಿದೆ. ಅಮೆರಿಕದಲ್ಲಿ ಕೃತಕಬುದ್ಧಿಮತ್ತೆಯ ನ್ಯಾಯವಾದಿ ತಯಾರಾಗಿದೆ. ಇದನ್ನು ವ್ಯಾಪಕವಾಗಿ ರೋಬೋಟ್ ಲಾಯರ್ ಎಂದು ಕರೆಯಲಾಗುತ್ತಿದೆ. ಅಮೆರಿಕದಲ್ಲಿ 2015ರಲ್ಲಿ ಜೋಶುವ ಬ್ರೌಡರ್ ಎಂಬವರು ಡುನಾಟ್‌ಪೇ ಎಂಬ ಕಾನೂನು ಸಲಹೆಗಾರ ತಂತ್ರಾಂಶವನ್ನು ಬಿಡುಗಡೆ ಮಾಡಿದರು. ಅದು ಕೂಡ ಚಾಟ್‌ಜಿಪಿಟಿಯಂತೆ ಒಂದು ಚಾಟ್‌ಬೋಟ್ ಆಗಿತ್ತು. ಜೋಶುವ ಅದನ್ನು ಪ್ರಪಂಚದ ಮೊದಲ ರೋಬೋಟ್ ಲಾಯರ್ ಎಂದು ಕರೆದರು. ಅದಕ್ಕೆ ಕಾನೂನು ಸಂಬಂಧಿ ಪ್ರಶ್ನೆ ಕೇಳಿದರೆ ಅದು ಉತ್ತರಿಸುತ್ತಿತ್ತು. ಪ್ರಾರಂಭದಲ್ಲಿ ಕೆಲವು ಸರಳವಾದ ಸಂದರ್ಭಗಳಲ್ಲಿ ಏನೆಲ್ಲ ಸಾಧ್ಯತೆಗಳಿವೆ ಎಂಬುದನ್ನು ಅದು ವಿವರಿಸುತ್ತಿತ್ತು. ಉದಾಹರಣೆಗೆ ಹಣ ನೀಡಬೇಕಾಗಿತ್ತು, ಅವಧಿಯೊಳಗಡೆ ನೀಡಿಲ್ಲ, ಈಗ ನೋಟೀಸು ಬಂದಿದೆ – ಈ ಸಂದರ್ಭದಲ್ಲಿ ಏನೆಲ್ಲ ಮಾಡಬಹುದು ಎಂಬುದನ್ನು ಅದು ಹೇಳುತ್ತದೆ. ಈ ಕಿರುತಂತ್ರಾಂಶ (ಆಪ್) ಗೂಗ್ಲ್ ಪ್ಲೇ ಸ್ಟೋರಿನಲ್ಲಿದೆ. ನಾನು ಅದನ್ನು ನನ್ನ ಮೊಬೈಲಿನಲ್ಲಿ ಹಾಕಿಕೊಂಡು ಬಳಸಿ ನೋಡಲು ಪ್ರಯತ್ನಿಸಿದೆ. ಆದರೆ ಅದು ಅಮೆರಿಕ, ಆಸ್ಟ್ರೇಲಿಯ ಮತ್ತು ಕೆಲವು ಯುರೋಪಿನ ದೇಶಗಳಿಗೆ ಸೀಮಿತವಾಗಿತ್ತು. ಭಾರತ ಅದರ ಪಟ್ಟಿಯಲ್ಲಿರಲಿಲ್ಲ. ಆದುದರಿಂದ ಅದು ನಿಜವಾಗಿಯೂ ಹೇಗೆ ಕೆಲಸ ಮಾಡುತ್ತಿದೆ ಎಂದು ಪರಿಶೀಲಿಸಲು ನನಗೆ ಆಗಲಿಲ್ಲ.

ಈ ಡುನಾಟ್‌ಪೇ ಚಾಟ್‌ಬೋಟ್ ಅಥವಾ ರೋಬೋಟ್ ಲಾಯರ್ ಅನ್ನು ನಿಜವಾದ ನ್ಯಾಯಾಲಯದಲ್ಲಿ ಕಾನೂನು ಹೋರಾಟವೊಂದರಲ್ಲಿ ಬಳಸಲು ಸಿದ್ಧತೆ ಆಗಿತ್ತು. ಅತಿ ವೇಗವಾಗಿ ವಾಹನ ಚಾಲನೆ ಮಾಡಿದ್ದೀಯ ಎಂದೊಬ್ಬರಿಗೆ ಸಾರಿಗೆ ಪೋಲೀಸರಿಂದ ನೋಟೀಸು ಬಂದಿತ್ತು. ಅವರು ನ್ಯಾಯಾಲಯದಲ್ಲಿ ಹಾಜರಾಗಿ ತಮ್ಮ ವಾದವನ್ನು ಮಂಡಿಸಬೇಕಿತ್ತು. ಇಲ್ಲಿ ವಾದ ಮಂಡಿಸಲು ರೋಬೋಟ್ ಲಾಯರ್ ಸಹಾಯ ಪಡೆಯುವುದೆಂದು ತೀರ್ಮಾನ ಆಗಿತ್ತು. ಆ ಕೇಸು ಕೋರ್ಟಿನಲ್ಲಿ ಫೆಬ್ರವರಿ 22ಕ್ಕೆ ನ್ಯಾಯಾಧೀಶರ ಮುಂದೆ ಬರುವುದಿತ್ತು. ಆದರೆ ಜೋಶುವ ಅವರು ಒಂದು ಟ್ವೀಟ್ ಮೂಲಕ ರೋಬೋಟ್ ಲಾಯರ್ ಅನ್ನು ಕೋರ್ಟಿಗೆ ಕಳುಹಿಸುವ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಲಾಯರುಗಳ ಸಂಘದ ಪ್ರತಿಭಟನೆ ಹಾಗೂ ಎಚ್ಚರಿಕೆ. ರೋಬಾಟ್ ಲಾಯರ್ ತಂದರೆ ಜೋಶುವ ಅವರಿಗೆ 6 ತಿಂಗಳುಗಳ ಜೈಲು ಸಾಧ್ಯತೆಯಿದೆ ಎಂಬ ಭಯದಿಂದ ಅವರು ಈ ತೀರ್ಮಾನ ತೆಗೆದುಕೊಂಡುದುದಾಗಿ ತಮ್ಮ ಟ್ವೀಟ್‌ನಲ್ಲಿ ತಿಳಿದಿದ್ದಾರೆ.  ಕೋರ್ಟಿನಲ್ಲಿ ವಾದ ಮಾಡುವ ವ್ಯಕ್ತಿ ಇಯರ್‌ಫೋನ್ ಧರಿಸಿ ಅದು ಮೊಬೈಲಿನಲ್ಲಿರುವ ಡುನಾಟ್‌ಪೇ ತಂತ್ರಾಂಶಕ್ಕೆ ಸಂಪರ್ಕ ಹೊಂದುತ್ತದೆ. ಆ ತಂತ್ರಾಂಶವು ವಾದವನ್ನು ಆಲಿಸಿ ತನ್ನ ಉತ್ತರವನ್ನು ಇಯರ್‌ಫೋನ್ ಮೂಲಕ ತಿಳಿಸುತ್ತದೆ. ಕಕ್ಷಿದಾರ ಕೋರ್ಟಿನಲ್ಲಿ ರೋಬೋಟ್ ಲಾಯರ್ ತಿಳಸಿದಂತೆ ವಾದ ಮಾಡುತ್ತಾರೆ. ಇದು ಅವರ ಯೋಜನೆ ಆಗಿತ್ತು. ಮೊಬೈಲ್  ಫೋನ್ ಮತ್ತು ಇಯರ್‌ಫೋನ್‌ಗಳನ್ನು ಕೋರ್ಟಿನಲ್ಲಿ ಬಳಕೆ ಮಾಡುವಂತಿಲ್ಲ. ಆದುದರಿಂದ ಇಯರ್‌ಫೋನ್ ಅನ್ನು ಕಿವಿ ಕೇಳದವರು ಬಳಸುವ ಸಾಧನ ಎಂಬಂತೆ ಬಿಂಬಿಸುವ ಯೋಜನೆ ಅವರದಾಗಿತ್ತು. ಆದರೆ ಸದ್ಯಕ್ಕೆ ರೋಬೋಟ್ ಲಾಯರ್ ಕೇವಲ ಸಲಹೆಗೆಳಿಗೆ ಮಾತ್ರ ಸೀಮಿತ. ಕೋರ್ಟಿನಲ್ಲಿ ನಿಜವಾದ ವಾದ ಸದ್ಯಕ್ಕಿಲ್ಲ.

–ಡಾ| ಯು.ಬಿ. ಪವನಜ

gadgetloka @ gmail . com

The post ರೋಬೋಟ್ ಲಾಯರ್ first appeared on Vishva Kannada.

ಹಲ್ಲು ಚಿಕಿತ್ಸೆಗೂ ನ್ಯಾನೋರೋಬೋಟ್‌ಗಳು
ವೈದ್ಯರನ್ನೇ ಜಗಿಯಬಹುದು!

ಹಲವು ದಿನಗಳಿಂದ ಹಲ್ಲು ನೋವಾಗುತ್ತಿದೆ. ನೋವು ಸಹಿಸಲು ಇನ್ನು ಆಗುವುದಿಲ್ಲ ಎಂದು ದಂತವೈದ್ಯರನ್ನು ಕಾಣುತ್ತೀರಿ. ಅವರು ಹಲ್ಲಿನ ಎಕ್ಸ್‌ರೇ ತೆಗೆಯುತ್ತಾರೆ. ಹಲ್ಲಿನ ಬೇರಿನ ಕಾಲುವೆಯಲ್ಲಿ ಸೋಂಕು ಇರುವುದನ್ನು ಅದು ತೋರಿಸುತ್ತದೆ. ನಿಮ್ಮ ಹಲ್ಲಿಗೆ ಬೇರು ಕಾಲುವೆ ಚಿಕಿತ್ಸೆ (root canal treatment) ಆಗಬೇಕು ಎನ್ನುತ್ತಾರೆ. ಅಂದಾಜು ನಾಲ್ಕು ಸಲ ಅವರಲ್ಲಿಗೆ ಭೇಟಿ ಮಾಡುತ್ತೀರಿ. ಪ್ರತಿ ಭೇಟಿಯಲ್ಲೂ ಅವರು ಹಲ್ಲಿನ ಬೇರಿನ ಕಾಲುವೆಯೊಳಗೆ ಸ್ವಲ್ಪ ಔಷಧಿ ತುಂಬಿಸಿ ನಂತರ ಒಂದು ಅರದ ಮಾದರಿಯ ಸರಿಗೆಯಂತಹದ್ದನ್ನು ತುರುಕಿಸಿ ಅದನ್ನು ತಿರುಗಿಸಿ, ಹಿಂದೆ ಮುಂದೆ ಮಾಡಿ, ಸೋಂಕನ್ನು ಬಹುತೇಕ ತೆಗೆಯುತ್ತಾರೆ. ಕೊನೆಗೆ ಮತ್ತೊಮ್ಮೆ ಎಕ್ಸ್‌ರೇ ತೆಗೆದು ಹಲ್ಲಿನ ಒಳಗೆ ಸ್ವಚ್ಛ ಆಗಿರುವುದನ್ನು ಖಚಿತ ಪಡಿಸಿಕೊಳ್ಳುತ್ತಾರೆ. ಅಂತಿಮವಾಗಿ ಹಲ್ಲಿಗೆ ಸಿಮೆಂಟ್ ತುಂಬಿಸಿ ಅದಕ್ಕೊಂದು ಟೋಪಿ ಹಾಕಿ ಕಳುಹಿಸುತ್ತಾರೆ. ಇದೇನೋ ಸರಿ.

ಈ ಚಿಕಿತ್ಸೆಯಲ್ಲಿ ತುಂಬ ಅನುಭವ ಇರುವ ಪರಿಣತ ವೈದ್ಯರು ಮಾಡಿದರೆ ಇದು ಬಹುತೇಕ ಪರಿಪೂರ್ಣವಾಗಿ ಆಗುತ್ತದೆ. ಕೆಲವೊಮ್ಮೆ ಹಲ್ಲಿನ ಬೇರು ನೇರವಾಗಿಲ್ಲದಿದ್ದಲ್ಲಿ ಅದನ್ನು ಪೂರ್ತಿಯಾಗಿ ಅಂದರೆ 100% ಸೋಂಕು ನಿವಾರಣೆ ಮಾಡಲು ಒದ್ದಾಡಬೇಕಾಗುತ್ತದೆ. ಇಂತಹ ಸಂದರ್ಭಗಳಿಗೆಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಹಲ್ಲಿನೊಳಗೆಯೇ ಕಳುಹಿಸಬಹುದಾದ ನ್ಯಾನೋರೋಬೋಟ್‌ಗಳನ್ನು ತಯಾರಿಸಿದ್ದಾರೆ. ಹಾಗೆಂದರೇನು ಎಂದು ತಿಳಿಯುವ ಮೊದಲು ನ್ಯಾನೋರೋಬೋಟ್‌ಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕು.

ಮಾನವನ ದೇಹದೊಳಗೆ ಹೋಗಿ, ರಕ್ತನಾಳಗಳಲ್ಲಿ ಈಜಾಡಿ, ಕೆಲವು ಕೆಲಸಗಳನ್ನು ಮಾಡುವ ಅತಿಸೂಕ್ಷ್ಮ ಯಂತ್ರಗಳು ತಯಾರಾಗುತ್ತಿವೆ. ಅವುಗಳೇ ನ್ಯಾನೋರೋಬೋಟ್‌ಗಳು. ರೋಬೋಟ್‌ಗಳು ಅಂದರೆ ಒಂದು ಮಟ್ಟಿಗೆ ಸ್ವಯಂಚಾಲಿತವಾಗಿ ಹಾಗೂ ಗಣಕ ತಂತ್ರಾಂಶ ಮೂಲಕ ಕೃತಕಬುದ್ಧಿಮತ್ತೆಯನ್ನು ಬಳಸಿ ಕೆಲಸ ಮಾಡುವ ಯಂತ್ರಗಳು. ಯಂತ್ರಮಾನವ ಎಂದೂ ಹೇಳಬಹುದು. ಹಲವಾರು ರೋಬೋಟ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ನ್ಯಾನೋ ಎಂದರೆ 10-9 ಎಂದು ಅರ್ಥ. ಅಂದರೆ ದಶಮಾಂಶ ಚುಕ್ಕಿಯ ನಂತರ 8 ಸೊನ್ನೆ ಬರೆದು ನಂತರ ಒಂದು ಅಂಕಿ ಬರೆಯುವುದು. (0.000000001). ನ್ಯಾನೋ ಮೀಟರ್ ಅಂದರೆ ಒಂದು ಮೀಟರ್‌ನ ಶತಕೋಟಿಯಲ್ಲಿ ಒಂದರಷ್ಟು. ಈ ಲೆಕ್ಕಾಚಾರ ಕಷ್ಟವಲ್ಲವೇ? ಸರಳವಾಗಿ ಹೇಳೋಣ. ಒಂದು ಮಾನವ ಕೂದಲಿನ ಗಾತ್ರ (ದಪ್ಪ ಅಥವಾ ವ್ಯಾಸ) ಸುಮಾರು 80 ಸಾವಿರದಿಂದ 1 ಲಕ್ಷ ನ್ಯಾನೋಮೀಟರ್‌ಗಳಷ್ಟು. ಒಂದು ಬ್ಯಾಕ್ಟೀರಿಯ ಸುಮಾರು 1000 ನ್ಯಾನೋಮೀಟರ್ ಗಾತ್ರದ್ದು. ಕೊರೋನಾವೈರಸ್ ಸುಮಾರು 200 ನ್ಯಾನೋಮೀಟರ್‌ನಷ್ಟು ದೊಡ್ಡದಿದೆ. ನ್ಯಾನೋ ರೋಬೋಟ್ ಅಂದರೆ ನ್ಯಾನೋ ಮೀಟರ್‌ನಷ್ಟು ಚಿಕ್ಕ ರೋಬೋಟ್‌ಗಳು ಎಂದು ಅರ್ಥ ಬರುತ್ತಾದರೂ ನಿಜವಾಗಿ ಅಷ್ಟು ಚಿಕ್ಕ ರೋಬೋಟ್‌ಗಳು ಬಂದಿಲ್ಲ. ಸುಮಾರು 0.1 ರಿಂದ 10 ಮೈಕ್ರೋಮೀಟರ್ (100 ರಿಂದ 10000 ನ್ಯಾನೋಮೀಟರ್) ಗಾತ್ರದ ಯಂತ್ರಗಳು ತಯಾರಾಗುತ್ತಿವೆ. ಇವುಗಳ ಬಳಕೆ ವೈದ್ಯಕೀಯ ಕ್ಷೇತ್ರದಲ್ಲಿ ಜಾಸ್ತಿ.

ರಕ್ತನಾಳದೊಳಗೆಲ್ಲೋ ಒಂದು ಕಡೆ ರಕ್ತ ಹೆಪ್ಪುಗಟ್ಟಿದೆ. ಈ ನ್ಯಾನೋರೋಬೋಟ್ ಅಲ್ಲಿಗೆ ಚಲಿಸಿ ಅದನ್ನು ಸಿಡಿಸಿ ಚೂರುಚೂರಾಗಿಸುತ್ತದೆ. ರಕ್ತನಾಳದ ಗೋಡೆಯಲ್ಲಿ ಆಗುವ ಪದರಗಳನ್ನು ನಾಶಮಾಡಲೂ ನ್ಯಾನೋರೋಬೋಟ್ ಬಳಕೆ ಮಾಡಬಹುದು. ನ್ಯಾನೋರೋಬೋಟ್‌ಗಳು ಕ್ಯಾನ್ಸರ್ ಜೀವಕೋಶಗಳಿರುವಲ್ಲಿಗೆ ಪಯಣಿಸಿ ಅವುಗಳನ್ನು ನಾಶಮಾಡಬಹುದು. ಕಾಯಿಲೆಗಳಿಗೆ ಕಾರಣವಾಗುವ ಪರೋಪಜೀವಿ, ಬ್ಯಾಕ್ಟೀರೀಯಾಗಳನ್ನು ನಾಶಮಾಡಲೂ ನ್ಯಾನೋರೋಬೋಟ್‌ಗಳ ಬಳಕೆ ಮಾಡಬಹುದು. ಕಿಡ್ನಿಯೊಳಗೆ ಬೆಳೆಯುವ ಕಲ್ಲುಗಳನ್ನು ಪುಡಿಪುಡಿ ಮಾಡಲೂ ಇವುಗಳ ಬಳಕೆ ಸಾಧ್ಯ. ಹೀಗೆ ವೈದ್ಯಕೀಯ ಕ್ಷೇತ್ರದಲ್ಲಿ ನ್ಯಾನೋರೋಬೋಟ್‌ಗಳನ್ನು ಹಲವು ರೀತಿಯಲ್ಲಿ ಬಳಸಬಹುದು.

ಕಾಲ್ಪನಿಕ ಚಿತ್ರ

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯವರು ಈಗ ಹಲ್ಲಿನ ಚಿಕಿತ್ಸೆಗೆ ಉಪಯೋಗಿಯಾಗಬಲ್ಲ ನ್ಯಾನೋರೋಬೋಟ್‌ಗಳನ್ನು ತಯಾರಿಸಿದ್ದಾರೆ. ಇದರಲ್ಲಿ ಸಿಲಿಕಾನ್ ಡೈ ಆಕ್ಸೈಡಿನ ಟ್ಯೂಬ್ ಮಾದರಿಯ ಅಣುಗಳಿಗೆ ಕಬ್ಬಿಣದ ಪರಮಾಣುಗಳ ಲೇಪ ಮಾಡಿದ್ದಾರೆ. ಇವನ್ನು ಹಲ್ಲಿನ ಬೇರಿನ ಒಳಗಿನ ಮೃದುವಾದ ಪದಾರ್ಥದಲ್ಲಿ ಬಿಟ್ಟರು. ನಂತರ ಹೊರಗಡೆಯಿಂದ ಅಯಸ್ಕಾಂತದ ಮೂಲಕ ಪರದೆಯಲ್ಲಿ ನೋಡಿಕೊಂಡು ಇವುಗಳ ಚಲನೆಯನ್ನು ನಿಯಂತ್ರಿಸಿದರು. ಹೀಗೆ ತಮಗೆ ಬೇಕೆಂದಲ್ಲಿಗೆ ಈ ನ್ಯಾನೋರೋಬೋಟ್‌ಗಳನ್ನು ಚಲಾಯಿಸಲು ವಿಜ್ಞಾನಿಗಳು ಸಮರ್ಥರಾದರು. ಕಾಂತೀಯ ಶಕ್ತಿಯ ಕಂಪನಾಂಕವನ್ನು ಬದಲಿಸಿ ತಮಗೆ ಬೇಕೆಂದಲ್ಲಿಗೆ ಈ ನ್ಯಾನೋರೋಬೋಟ್‌ಗಳನ್ನು ಕಳುಹಿಸಲು ಹಾಗೂ ಅವನ್ನು ವಾಪಾಸು ಕರೆಸಿಕೊಳ್ಳಲು ಅವರು ಶಕ್ತರಾದರು. ನ್ಯಾನೋರೋಬೋಟ್‌ಗಳ ಚಲನೆಯನ್ನು, ಅದರ ಸುತ್ತಮುತ್ತಲಿನ ದೃಶ್ಯವನ್ನು ಸೂಕ್ಷ್ಮದರ್ಶಕ ಯಂತ್ರದ ಮೂಲಕ ಪರಿಶೀಲನೆ ಮಾಡಿ ನ್ಯಾನೋರೋಬೋಟ್ ಎಲ್ಲಿದೆ, ಅಲ್ಲೇನು ಕಾಣಿಸುತ್ತಿದೆ, ಸೋಂಕು ಇದೆಯೇ ಇಲ್ಲವೇ ಎಂದೆಲ್ಲ ವಿಜ್ಞಾನಿಗಳು ಅರ್ಥ ಮಾಡಿಕೊಳ್ಳಬಲ್ಲರು. ಸೋಂಕು ಇರುವ ಪ್ರದೇಶದಲ್ಲಿ ನ್ಯಾನೋರೋಬೊಟ್ ಇದ್ದಲ್ಲಿ ಸೋಂಕನ್ನು ಗುಣಪಡಿಸಲು ಬೇಕಾದ ಕೆಲಸವನ್ನು ಅವರು ಕೈಗೆತ್ತಿಕೊಳ್ಳುತ್ತಾರೆ. ನ್ಯಾನೋರೋಬೋಟ್ ಬ್ಯಾಕ್ಟಿರಿಯಾದ ಪಕ್ಕದಲ್ಲಿದ್ದರೆ ಕಾಂತೀಯ ಶಕ್ತಿಯನ್ನು ಹೆಚ್ಚು ಕಡಿಮೆ ಮಾಡಿ ನ್ಯಾನೋರೋಬೋಟ್‌ನ ಉಷ್ಣತೆಯನ್ನು ಹೆಚ್ಚಿಸುತ್ತಾರೆ. ಇದರಿಂದಾಗಿ ಪಕ್ಕದಲ್ಲಿರುವ ಬ್ಯಾಕ್ಟೀರಿಯ ನಾಶವಾಗುತ್ತದೆ. ತನ್ಮೂಲಕ ಸೋಂಕನ್ನು ಗುಣಪಡಿಸಬಹುದು.

1987ರಲ್ಲಿ ಇನ್ನರ್‌ಸ್ಪೇಸ್ ಎಂಬ ಹೆಸರಿನ ಇಂಗ್ಲಿಷ್ ಸಿನಿಮಾವೊಂದು ಬಂದಿತ್ತು. ಅದರಲ್ಲಿ ವ್ಯಕ್ತಿಯೊಬ್ಬನನ್ನು ಅತಿ ಚಿಕ್ಕ ಗಾತ್ರಕ್ಕಿಳಿಸಿ ಇನ್ನೊಬ್ಬ ವ್ಯಕ್ತಿಯ ದೇಹದ ರಕ್ತನಾಳದೊಳಕ್ಕೆ ಇಂಜೆಕ್ಷನ್ ಮೂಲಕ ಕಳುಹಿಸಲಾಗುತ್ತದೆ. ಆ ಸಿನಿಮಾದಲ್ಲಿ ಕಥೆ ಮುಂದೇನಾಗುತ್ತದೆ ಎಂದು ಇಲ್ಲಿ ವಿವರಣೆಗಳು ಬೇಡ. ಈ ನ್ಯಾನೋರೋಬೋಟ್‌ಗಳು ಬಹುತೇಕ ಅದೇ ಮಾದರಿಯಲ್ಲಿ ದೇಹದೊಳಗಡೆ ರಕ್ತನಾಳಗಳೊಳಗೆ ಎಲ್ಲ ಸಂಚರಿಸಿ, ತಮಗೆ ಕಂಡ ದೃಶ್ಯಗಳನ್ನು ಚಿತ್ರೀಕರಿಸಿ, ಬೇಕಾದ ಕಡೆ ಔಷಧ ಸಾಗಿಸಿ, ಬೇಡವಾದ ಅಂಗಾಂಶಗಳನ್ನು ನಾಶಪಡಿಸಿ -ಹೀಗೆ ಹಲವು ಉಪಯುಕ್ತ ಕೆಲಸಗಳನ್ನು ಮಾಡಬಲ್ಲವು. ಅಂತಹ ನ್ಯಾನೋರೋಬೋಟ್‌ಗಳಲ್ಲಿ ವಿಶೇಷವಾದ ಒಂದು ನಮೂನೆಯ ರೋಬೋಟ್‌ಗಳು ಹಲ್ಲಿನೊಳಗೆ ಚಲಿಸಿ ಹಲ್ಲನ್ನು ಸೋಂಕುಮುಕ್ತಗೊಳಿಸಬಲ್ಲವು. ಅಂದ ಹಾಗೆ ಇವೆಲ್ಲ ಇನ್ನೂ ಪ್ರಯೋಗಶಾಲೆಯಲ್ಲಿವೆ. ಆದಷ್ಟು ಬೇಗನೆ ಇವೆಲ್ಲ ಜನರ ಉಪಯೋಗಕ್ಕೆ ಬರಲಿ ಎಂದು ಆಶಿಸೋಣ.

–ಡಾ| ಯು.ಬಿ. ಪವನಜ

gadgetloka @ gmail . com

The post ಹಲ್ಲು ಚಿಕಿತ್ಸೆಗೂ ನ್ಯಾನೋರೋಬೋಟ್‌ಗಳು first appeared on Vishva Kannada.

ಸತ್ತ ಜೇಡನಿಂದ ರೋಬೋಟ್
ಜೇಮ್ಸ್ ಬಾಂಡ್ ಸಿನಿಮಾವೊಂದರಲ್ಲಿ ಒಂದು ದೃಶ್ಯ. ಜೇಮ್ಸ್ ಬಾಂಡ್ ಮಲಗಿರುತ್ತಾನೆ. ಮೇಲಿನಿಂದ ಒಂದು ಜೇಡವನ್ನು ಆತನ ಮೇಲಕ್ಕೆ ನಿಧಾನವಾಗಿ ಇಳಿಸುತ್ತಾರೆ. ಅದು ಭಯಂಕರ ವಿಷಪೂರಿತ ಜೇಡ ಆಗಿರುತ್ತದೆ. ಜೇಮ್ಸ್ ಬಾಂಡ್ ಎಂದಿನಂತೆ ಸಾಯದೆ ಬಚಾವಾಗುತ್ತಾನೆ. ಆ ಸಿನಿಮಾದಲ್ಲಿ ಜೇಡವನ್ನು ದೂರ ನಿಯಂತ್ರಣದ ಮೂಲಕ ಕಳುಹಿಸಿರಲಿಲ್ಲ. ಬದಲಿಗೆ ಮೇಲಿನಿಂದ ಒಂದು ದಾರದ ಮೂಲಕ ಕಳುಹಿಸಿರುತ್ತಾರೆ. ಈಗ ಆ ವಿಷಯ ಯಾಕೆ ಅಂತೀರಾ? ನಾನೀಗ ಹೇಳಹೊರಟಿರುವುದು ಸತ್ತ ಜೇಡವನ್ನು ರೋಬೋಟ್ ಆಗಿ ಪರಿವರ್ತಿಸುವ ಬಗ್ಗೆ. ಅಮೆರಿಕಾದ ರೈಸ್ ವಿಶ್ವ ವಿದ್ಯಾಲಯದ ವಿಜ್ಞಾನಿಗಳು ಸತ್ತ ಜೇಡವನ್ನು ರೋಬೋಟ್ ಆಗಿ ಪರಿವರ್ತಿಸಿದ್ದಾರೆ. ಈ ಸಂಚಿಕೆಯಲ್ಲಿ ಅದರ ಬಗ್ಗೆ ತಿಳಿಯೋಣ.

ಬಹುತೇಕ ಪ್ರಾಣಿಗಳು ಸತ್ತಾಗ ಕೈಕಾಲು ನೀಡಿ ಬಿದ್ದಿರುತ್ತವೆ. ದನ, ನಾಯಿ, ಬೆಕ್ಕು, ಇತ್ಯಾದಿ ಪ್ರಾಣಿಗಳಲ್ಲಿ ಇದನ್ನು ಗಮನಿಸಿರಬಹುದು. ಆದರೆ ಜೇಡ ಸತ್ತಾಗ ಅದರ ಕಾಲುಗಳು ಮುದುರುತ್ತವೆ. ಇದು ಯಾಕೆ ಹೀಗೆ ಎಂದು ವಿಜ್ಞಾನಿಗಳು ಪ್ರಶ್ನಿಸಿಕೊಂಡು ಸಂಶೋಧನೆ ಮಾಡಿದರು. ಆಗ ಅವರಿಗೆ ಕಂಡುಬಂದುದು ಜೇಡನ ಒಂದು ವಿಶಿಷ್ಟ ಗುಣವೈಶಿಷ್ಟ್ಯ. ಮನುಷ್ಯ, ನಾಯಿ, ಬೆಕ್ಕು, ಇತ್ಯಾದಿ ಪ್ರಾಣಿಗಳಲ್ಲಿ ಕೈ ಕಾಲು ಬಿಡಿಸಿ ಮಡಚಿ ಮಾಡಲು ಸ್ನಾಯುಗಳ ಬಳಕೆ ಆಗುತ್ತದೆ. ಅದು ಉಬ್ಬಿ, ಕುಬ್ಬಿ ಈ ಕೆಲಸ ಆಗುತ್ತದೆ. ಆದರೆ ಜೇಡನಲ್ಲಿ ಬೇರೆಯ ವಿಧಾನದಲ್ಲಿ ಕೈಕಾಲು ಮಡಚಿ ಬಿಡಿಸಿ ಆಗುತ್ತದೆ. ಜೇಡನ ಕೈಕಾಲುಗಳಲ್ಲಿ ಈ ಕೆಲಸ ಹೈಡ್ರಾಲಿಕ್ ವಿಧಾನದಲ್ಲಿ ಆಗುತ್ತದೆ. ಅದರ ಕೈಕಾಲುಗಳಲ್ಲಿ ಸ್ನಾಯುಗಳಂತೆ ಕೊಠಡಿಗಳಿವೆ. ಈ ಕೊಠಡಿಗಳ ಒಳಗೆ ಒಂದು ರೀತಿಯ ಗಾಳಿ + ದ್ರವ ಇದೆ. ಇದು ಒತ್ತಡ ಹಾಕಿ, ತೆಗೆದು ಕೈಕಾಲು ಮಡಚುವ ಬಿಡಿಸುವ ಕೆಲಸ ಆಗುತ್ತದೆ. ಜೇಡ ಸತ್ತಾಗ ಈ ಕೊಠಡಿಗಳು ಖಾಲಿ ಆಗುತ್ತವೆ. ಅದರಿಂಗಾಗಿ ಅದರ ಕೈಕಾಲುಗಳು ಮಡಚಿಕೊಳ್ಳುತ್ತವೆ.

ಜೇಡನ ಹೈಡ್ರಾಲಿಕ್ ವಿಧಾನದಲ್ಲಿ ಕೈಕಾಲು ಮಡಚುವ ಬಿಡಿಸುವ ಕೆಲಸವನ್ನು ನಾವು ಮಾಡಿದರೆ ಹೇಗೆ ಎಂದು ವಿಜ್ಞಾನಿಗಳು ಆಲೋಚಿಸಿದರು. ಅವರು ಸೂಕ್ತ ದ್ರವ + ಗಾಳಿಯನ್ನು ಸತ್ತ ಜೇಡನಿಗೆ ಅತಿ ಸೂಕ್ಷ್ಮ ಸಿರಿಂಜ್ ಮೂಲಕ ಚುಚ್ಚಿ ಕಳುಹಿಸಿದರು. ಜೇಡನ ತಲೆಯಲ್ಲಿ ಇದಕ್ಕೆಂದೇ ಒಂದು ಬೇರೆ ಬೇರೆ ಚಿಕ್ಕ ಚಿಕ್ಕ ವಿಭಾಗಗಳಿರುವ ಕೊಠಡಿ ಇದೆ. ಅಲ್ಲಿಂದ ಅದು ಬೇರೆ ಬೇರೆ ಕೈ ಕಾಲುಗಳಿಗೆ ಗಾಳಿ + ದ್ರವವನ್ನು ತಳ್ಳಿ ಆ ಕೈ ಅಥವಾ ಕಾಲು ಮಡಚುವಂತೆ ಅಥವಾ ಬಿಡಿಸಿಕೊಳ್ಳುವಂತೆ ಮಾಡುತ್ತದೆ. ವಿಜ್ಞಾನಿಗಳು ದ್ರವ + ಗಾಳಿಯನ್ನು ಈ ಪ್ರಧಾನ ಕೊಠಡಿಗೆ ಚುಚ್ಚಿದರು. ಅಲ್ಲಿಂದ ಅದು ಕೈಕಾಲುಗಳಿಗೆ ಪ್ರವಹಿಸಿತು. ಆಗ ಮಡಚಿಕೊಂಡಿದ್ದ ಸತ್ತ ಜೇಡನ ಕೈಕಾಲುಗಳು ಬಿಡಿಸಿಕೊಂಡವು. ಸಿರಿಂಜನ್ನು ಹಿಂದೆ ಮುಂದೆ ಮಾಡುವ ಮೂಲಕ ವಿಜ್ಞಾನಿಗಳು ಸತ್ತ ಜೇಡನ ಕೈಕಾಲುಗಳನ್ನು ಬಿಡಿಸಿ  ಮಡಚಿ ಮಾಡುವಲ್ಲಿ ಯಶಸ್ವಿಯಾದರು. ಇದೊಂದು ಅದ್ಭುತ ಆವಿಷ್ಕಾರ ಎನ್ನಬಹುದು.

ಗ್ರೀಕ್ ಭಾಷೆಯಲ್ಲಿ ನೆಕ್ರೊ ಎಂದರೆ ಸತ್ತ ಅಥವಾ ಶವ ಎಂದು ಅರ್ಥ. ರೋಬೋಟ್ ಎಂದರೆ ಯಂತ್ರಮಾನವ ಅಥವಾ ಕೈಕಾಲುಗಳನ್ನು ಬಳಸಿ ಬಹುತೇಕ ಮಾನವನಂತೆ ಕೆಲಸ ಮಾಡುವ ಯಂತ್ರ. ಈ ಎರಡು ಪದಗಳ ಜೋಡಣೆಯೇ ನೆಕ್ರೋಬೋಟ್. ಸತ್ತ ಜೇಡನಿಗೆ ಸಿರಿಂಜಿನಲ್ಲಿ ಚುಚ್ಚಿ ಕೈಕಾಲು ಬಿಡಿಸಿ ಮಡಚಿ ಬೇಕಾದ ರೀತಿಯಲ್ಲೆ ಕೆಲಸ ಮಾಡಿಸಿಕೊಳ್ಳುವುದಕ್ಕೆ ವಿಜ್ಞಾನಿಗಳು ನೆಕ್ರೋಬಾಟಿಕ್ಸ್ ಎಂದು ಕರೆದಿದ್ದಾರೆ.

ಈ ಪ್ರಯೋಗಗಳಿಗೆ ವಿಜ್ಞಾನಿಗಳು ಬಳಸಿಕೊಂಡದ್ದು ದೊಡ್ಡ ಗಾತ್ರದ ತೋಳ ಜೇಡ ಎಂಬ ಪ್ರಭೇದವನ್ನು. ಇವುಗಳ ಗಾತ್ರ ಸುಮಾರು 35 ಮಿ.ಮೀ. ತನಕವೂ ಇರಬಲ್ಲುದು. ಪ್ರಯೋಗದಲ್ಲಿ ಜೇಡನ ತೂಕಕ್ಕಿಂತ ಸುಮಾರು 1.2ರಷ್ಟು ಹೆಚ್ಚು ತೂಕವನ್ನು ವಿಜ್ಞಾನಿಗಳು ಇದರ ಮೂಲಕ ಎತ್ತಲು ಯಶಸ್ವಿಯಾಗಿದ್ದರು. ಚಿಕ್ಕ ಗಾತ್ರದ ಜೇಡಗಳಿಗೆ ತಮ್ಮ ದೇಹದ ತೂಕಕ್ಕಿಂತ ತುಂಬ ಜಾಸ್ತಿ ತೂಕವನ್ನು ಎತ್ತಲು ಸಾಧ್ಯವಾಗುತ್ತದೆ. ಆದುದರಿಂದ ಮುಂದಕ್ಕೆ ಈ ಪ್ರಯೋಗಗಳನ್ನು ಚಿಕ್ಕ ಗಾತ್ರದ ಜೇಡವನ್ನು ಬಳಸಿ ಮಾಡಲು ವಿಜ್ಞಾನಿಗಳು ಆಲೋಚನೆ ಮಾಡುತ್ತಿದ್ದಾರೆ.

ವಿಜ್ಞಾನಿಗಳು ಒಂದು ಸತ್ತ ಜೇಡದ ಮೂಲಕ ಪ್ರಯೋಗ ಮಾಡಿದ್ದಾರೆ. ಅದರ ಕೈಕಾಲುಗಳನ್ನು 1000 ಸಲ ಮಡಚಿ ಬಿಡಿಸಿ ಮಾಡಿದ್ದಾರೆ. ಚಿಕ್ಕ ಚಿಕ್ಕ ವಸ್ತುಗಳನ್ನು ಈ ಜೇಡನ ಕೈಕಾಲುಗಳ ಮೂಲಕ ಒಂಡು ಕಡೆಯಿಂದ ಎತ್ತಿ ಇನ್ನೊಂದು ಕಡೆ ಇಟ್ಟಿದ್ದಾರೆ.

ಈ ಸಂಶೋಧನೆಯ ಪ್ರಯೋಜನಗಳೇನು? ಬಹುತೇಕ ಸಂಶೋಧನೆಗಳ ಪ್ರಯೋಜನಗಳು ಮುಂದಕ್ಕೆ ನಿಧಾನವಾಗಿ ಆಗುತ್ತವೆ. ಇದೂ ಹಾಗೆಯೇ ಆಗಲಿದೆ. ಸದ್ಯಕ್ಕೆ ವಿಜ್ಞಾನಿಗಳು ಹೇಳುವಂತೆ ಚಿಕ್ಕ ಚಿಕ್ಕ ಇಲೆಕ್ಟ್ರಾನಿಕ್ ಬಿಡಿಭಾಗಗಳ ಜೋಡಣೆಯಲ್ಲಿ ಇದರ ಬಳಕೆ ಮಾಡಬಹುದು. ಮನುಷ್ಯರು ಕೈ ಹಾಕಲು ಅಸಾಧ್ಯವಾದ, ಕೈಹಾಕಬಾರದ ಸ್ಥಳಗಳಲ್ಲಿ ಈ ರೋಬೋಟ್ ಬಳಸಿ ಬಿಡಿಭಾಗಗಳ ಜೋಡಣೆ ಮಾಡಬಹುದು. ಉದಾಹರಣೆಗೆ ವಿಕಿರಣಗಳು ಇರುವ ಸ್ಥಳಗಳಲ್ಲಿ ಕೆಲಸ ಮಾಡುವುದು. ವಿಕಿರಣಶೀಲ ರಾಸಾಯನಿಕಗಳನ್ನು ಚಿಕ್ಕ ಚಿಕ್ಕ ಕ್ಯಾಪ್ಸೂಲು ಒಳಗೆ ತುಂಬಿಸುವುದು, ಇತ್ಯಾದಿ. ಚಿಕ್ಕ ಚಿಕ್ಕ ಕೀಟಗಳನ್ನು ಬಳಸಿ ಸಂಶೋಧನೆ ಮಾಡುವವರಿಗೆ ಈ ರೋಬೋಟ್ ಉಪಯುಕ್ತ. ಚಿಕ್ಕ ಕೀಟವೊಂದನ್ನು ಎತ್ತಿ ಇತರೆ ಕೀಟಗಳ ಮಧ್ಯೆ ಬಿಡಬೇಕು ಎಂದಿಟ್ಟುಕೊಳ್ಳಿ. ಯಾವುದೇ ಚಿಮಟ ಇತ್ಯಾದಿ ಉಪಕರಣದ ಮೂಲಕ ಈ ಕೆಲಸ ಮಾಡಿದರೆ ಇತರೆ ಕೀಟಗಳು ಯಾವುದೋ ವೈರಿ ಬಂದಿದೆ ಎಂದುಕೊಂಡು ಹೆದರಿ  ಓಡಿ ಹೋಗುತ್ತವೆ. ಆದರೆ ಈ ಶವರೋಬೋಟ್ ಮೂಲಕ ಕೀಟವನ್ನು ಇತರೆ ಕೀಟಗಳ ಮಧ್ಯೆ ಎತ್ತಿ ಇಟ್ಟರೆ ಇತರೆ ಕೀಟಗಳು ಭಯಪಡುವುದಿಲ್ಲ. ಯಾಕೆಂದರೆ ಮಧ್ಯೆ ಬಂದುದು ಜೇಡ ಎಂಬ ಇನ್ನೊಂದು ಕೀಟವೇ. ಇದು ಈ ಶವರೋಬೋಟ್‌ನ ಇನ್ನೊಂದು ಉಪಯೋಗ ಎನ್ನಬಹುದು.

–ಡಾ| ಯು.ಬಿ. ಪವನಜ

gadgetloka @ gmail . com

The post ಸತ್ತ ಜೇಡನಿಂದ ರೋಬೋಟ್ first appeared on Vishva Kannada.

ರೋಬೋಟ್ ಜೇನುನೊಣಗಳು
ಪ್ರಕೃತಿ ಎಲ್ಲವನ್ನೂ ಮಾಡಿದೆ. ನಮಗೆ ಬೇಕಾದ ಆಹಾರವನ್ನೂ ಆಹಾರ ಸರಪಳಿಯನ್ನೂ ಮಾಡಿಟ್ಟಿದೆ. ಸಸ್ಯಗಳು ಹೂ ಬಿಡುತ್ತವೆ. ದುಂಬಿ, ಜೇನು ನೊಣಗಳು ಈ ಹೂವುಗಳ ಮೇಲೆ ಕುಳಿತು ಒಂದರಿಂದ ಇನ್ನೊಂದಕ್ಕೆ ಪರಾಗಸ್ಪರ್ಶ ಮಾಡುತ್ತವೆ. ಇದರಿಂದಾಗಿ ಹೂ ಕಾಯಿಯಾಗಿ ಹಣ್ಣಾಗಿ ಅಥವಾ ಧಾನ್ಯವಾಗಿ ನಮಗೆ ಆಹಾರವಾಗುತ್ತದೆ. ಜಗತ್ತಿನ ಸುಮಾರು 35% ಆಹಾರೋತ್ಪತ್ತಿ ಜೇನುನೊಣಗಳನ್ನು ಅವಲಂಬಿಸಿದೆ. ಕೃಷಿಕರು ತಮ್ಮ ಗದ್ದೆ, ತೋಟಗಳಲ್ಲಿ ಜೇನು ಕುಟುಂಬ ಸಾಕಿ ಬೆಳೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಒಂದು ದೊಡ್ಡ ಸಮಸ್ಯೆ ಇಡಿಯ ಜಗತ್ತನ್ನೇ ಕಾಡುತ್ತಿದೆ. ಅದು ಜೇನು ನೊಣಗಳ ನಾಶ. ಹಲವು ಕಾರಣಗಳಿಂದ ಜೇನು ಸಂತತಿ ಕಡಿಮೆಯಾಗುತ್ತಿದೆ. ಇದಕ್ಕೆ ಹಲವಾರು ಕಾರಣಗಳಿವೆ -ಪರಾವಲಂಬಿ ಸೂಕ್ಷ್ಮ ಜೀವಿಗಳು, ಕಾಯಿಲೆಗಳು, ಜೇನು ಸಂತತಿಗೆ ಅಗತ್ಯ ಪರಿಸರದ ನಾಶ, ಸಸ್ಯಗಳಿಗೆ ಜನರು ಬಳಸುವ ರಾಸಾಯನಿಕಗಳು -ಇತ್ಯಾದಿ. ಇದರಿಂದಾಗಿ ಆಹಾರದ ಸಮಸ್ಯೆ ತೋರತೊಡಗಿದೆ. ಈ ಸಮಸ್ಯೆಗೆ ಒಂದು ಹೊಸ ಪರಿಹಾರದ ಸಾಧ್ಯತೆಯನ್ನು ವಿಜ್ಞಾನಿಗಳು ಪ್ರಯೋಗಗಳ ಮೂಲಕ ಮಾಡುತ್ತಿದ್ದಾರೆ. ಅದುವೇ ರೋಬೋಟಿಕ್ ಜೇನು ನೊಣಗಳು. ಹಾಗಂದರೇನು? ಈ ಸಂಚಿಕೆಯಲ್ಲಿ ಅದನ್ನು ಮತ್ತು ಹೇಗೆ ತಂತ್ರಜ್ಞಾನವು ಈ ವಿಷಯದಲ್ಲಿ ಸಹಾಯ ಮಾಡಬಲ್ಲುದು ಎಂಬುದನ್ನು ನೋಡೋಣ.

ವಿಜ್ಞಾನಿಗಳು ಹಲವು ದಶಕಗಳಿಂದ ಜೇನು ನೊಣಗಳನ್ನು ಗಮನಿಸುತ್ತಿದ್ದಾರೆ. ಅವುಗಳ ನಡವಳಿಕೆಗಳ ಬಗ್ಗೆ ಸಂಶೋಧನೆ ಮಾಡಿದ್ದಾರೆ. ಜೇನು ನೊಣಗಳು ತಮಗೆ ಆಹಾರ ಕಂಡುಬಂದಾಗ ವಿಶಿಷ್ಟ ರೀತಿಯಲ್ಲಿ ಹಾರುತ್ತವೆ. ಒಂದು ರೀತಿಯಲ್ಲಿ ನರ್ತನ ಮಾಡುತ್ತವೆ. ಈ ನರ್ತನ ನೋಡಿದ ಉಳಿದ ಜೇನು ನೊಣಗಳು ಪರಾಗವಿರುವ ಹೂವನ್ನು ಆ ನೊಣ ಕಂಡುಹಿಡಿದಿದೆ ಎಂದು ಅರ್ಥ ಮಾಡಿಕೊಳ್ಳುತ್ತವೆ. ಅಷ್ಟು ಮಾತ್ರವಲ್ಲ ಆ ಹೂವುಗಳು ಎಲ್ಲಿವೆ ಎಂಬುದನ್ನೂ ಅರ್ಥ ಮಾಡಿಕೊಂಡು ಅಲ್ಲಿಗೆ ಹಾರುತ್ತವೆ. ವಿಜ್ಞಾನಿಗಳು ಈ ಮಾಹಿತಿಯನ್ನು ಈಗ ಹೊಸ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ.

ವಿಜ್ಞಾನಿಗಳು ಜೇನು ಕುಟುಂಬವನ್ನು ಹತ್ತಿರದಿಂದ ಗಮನಿಸಲು ಕ್ಯಾಮೆರ, ಮೈಕ್ರೋಫೋನ್ ಎಲ್ಲ ಬಳಸಿಕೊಂಡಿದ್ದಾರೆ. ಜೇನು ನೊಣಗಳು ಮಾಡುವ ಸದ್ದಿನಿಂದ ಹಲವು ಮಾಹಿತಿಗಳನ್ನು ವಿಶ್ಲೇಷಣೆ ಮೂಲಕ ಕಂಡುಕೊಂಡಿದ್ದಾರೆ. ಜೇನು ನೊಣ ಹೊರಗಿನಿಂದ ವಾಪಸು ಬಂದಾಗ ಕ್ಯಾಮೆರ ಎಚ್ಚರಿಕೆಯಿಂದ ಗಮನಿಸುತ್ತದೆ. ಈ ಕ್ಯಾಮೆರಗಳು ಅಂತರಜಾಲದ ಮೂಲಕ ವಿಜ್ಞಾನಿಗಳ ಗಣಕಕ್ಕೆ ಸಂಪರ್ಕ ಹೊಂದಿರುತ್ತವೆ. ಆ ಗಣಕಗಳು ಎಚ್ಚರಿಕೆಯಿಂದ ನೊಣಗಳನ್ನು ಗಮನಿಸುತ್ತವೆ. ನೊಣ ಯಾವುದೋ ಒಂದು ಹೂವಿನ ಮೇಲೆ ಕುಳಿತಾಗ ಆ ಹೂವಿನಿಂದ ಅತಿ ಸೂಕ್ಷ್ಮ ಪರಾವಲಂಬಿ ಜೀವಿಗಳು ಜೇನು ನೊಣದ ಕಾಲು ಮೈಗಳ ಮೇಲೆ ಬಂದಿರುತ್ತವೆ. ನೊಣ ತನ್ನ ಪೆಟ್ಟಿಗೆಗೆ ಬಂದಾಗ ಇತರೆ ನೊಣಗಳಿಗೆ ಇವು ವರ್ಗಾವಣೆಯಾಗುತ್ತವೆ. ಬುದ್ಧಿವಂತ ಕ್ಯಾಮೆರ ಇದನ್ನು ಗಮನಿಸಿ ವರದಿ ಮಾಡುತ್ತದೆ. ಈಗ ವಿಜ್ಞಾನಿಗಳ ಕೆಲಸ ಏನೆಂದರೆ ಆ ಹೂವಿನ ಹತ್ತಿರ ನೊಣಗಳು ಹಾರದಂತೆ ನೋಡಿಕೊಳ್ಳುವುದು. ಇದನ್ನು ಹೇಗೆ ಸಾಧಿಸುವುದು?

ಜೇನು ನೊಣಗಳು ಹಾರುವ, ನರ್ತಿಸುವ ವಿಧಾನದಲ್ಲಿ ಹಲವು ಮಾಹಿತಿಗಳು, ಇತರೆ ನೊಣಗಳಿಗೆ ಸಂದೇಶಗಳು ಅಡಕವಾಗಿರುತ್ತವೆ. ಒಂದು ರೀತಿಯಲ್ಲಿ ನರ್ತಿಸಿದರೆ ಆಹಾರ ಕಂಡುಬಂದಿದೆ ಎಂದು ಅರ್ಥ. ವಿಜ್ಞಾನಿಗಳು ಈ ಮಾಹಿತಿಯನ್ನು ಬಳಸಿಕೊಂಡಿದ್ದಾರೆ. ಅವರು ನೊಣದ ಗಾತ್ರದ ರೋಬೋಟ್ ನೊಣಗಳನ್ನು ಸೃಷ್ಟಿಸಿದ್ದಾರೆ. ಇ ಋಓಬೋಟ್ ನೊಣಗಳು ನಿಜವಾದ ಜೇನು ನೊಣಗಳ ಗಾತ್ರದ್ದಾಗಿವೆ. ಜೇನು ನೊಣಗಳಂತೆಯೇ ಇವಕ್ಕೂ ರೆಕ್ಕೆಗಳಿವೆ. ಇವು ಜೇನು ನೊಣದಂತೆ ಹಾರಬಲ್ಲವು. ಇವು ತಮಗೆ ಬೇಕಾದ ವಿದ್ಯುತ್ತನ್ನು ಸೂರ್ಯನಿಂದ ತಮ್ಮಲ್ಲಿರುವ ಸೌರಬ್ಯಾಟರಿಗಳ ಮೂಲಕ ಪಡೆಯುತ್ತವೆ. ಇವು ನಿಜವಾದ ನೊಣಗಳಂತೆಯೇ ನರ್ತಿಸಬಲ್ಲವು. ಒಂದು ಹೂವಿನಲ್ಲಿ ಪರಾವಲಂಬಿ ಸೂಕ್ಷ್ಮ ಜೀವಿಗಳಿವೆ, ಇನ್ನೊಂದು ಕಡೆ ರಾಸಾಯನಿಕ ಬಳಸಿದ್ದಾರೆ, ಮತ್ತೊಂದು ಕಡೆ ಜೇನು ನೊಣಗಳನ್ನೇ ತಿನ್ನುವ ಕೀಟಗಳಿವೆ, ಇತ್ಯಾದಿ ಮಾಹಿತಿಗಳನ್ನು ಇತರೆ ಜೇನು ನೊಣಗಳಿಗೆ ತಲುಪಿಸುವ ಕೆಲಸವನ್ನು ಈ ರೋಬೋಟ್ ನೊಣಗಳು ಮಾಡುತ್ತವೆ. ಅವು ಅದನ್ನು ತಮ್ಮ ವಿಶಿಷ್ಟ ನರ್ತನದ ಮೂಲಕ ಮಾಡುತ್ತವೆ.

ರೋಬೋಟ್ ಜೇನು ನೊಣ ತಯಾರಿಸಿ ಮಾರುವ ಕಂಪೆನಿಗಳು ಅಮೆರಿಕದಲ್ಲಿ ಅಸ್ತಿತ್ವಕ್ಕೆ ಬಂದಿವೆ. ಒಂದು ಕಂಪೆನಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಅದು ತಯಾರಿಸಿ ಮಾರುತ್ತಿರುವ ರೋಬೋಟ್ ಜೇನು ನೊಣಗಳು ಹೂವಿಂದ ಹೂವಿಗೆ ಹಾರಿ ಪರಾಗಸ್ಪರ್ಶವನ್ನೇ ಮಾಡಬಲ್ಲವು. ಇದರಿಂದ ಕೃಷಿಕರಿಗೆ ಹೆಚ್ಚಿನ ಬೆಳೆ ತೆಗೆಯಲು ಅನುಕೂಲ. ಇಂತಹ ರೋಬೋಟ್ ಜೇನು ನೊಣಗಳು ಭಾರತಕ್ಕೆ ಇನ್ನೂ ಬಂದಿಲ್ಲ.

ರೋಬೋಟ್ ಜೇನು ನೊಣಕ್ಕೆ ಇಂಗ್ಲಿಷಿನಲ್ಲಿ ರೋಬೋಬೀ (robobee) ಎನ್ನುತ್ತಾರೆ. ಇವು ಒಂದು ಪೇಪರ್ ಕ್ಲಿಪ್ಪಿನ ಅರ್ಧದಷ್ಟು ಗಾತ್ರದ್ದಾಗಿವೆ. ಇವಕ್ಕೆ ಕೃತಕ ರೆಕ್ಕೆಗಳಿವೆ. ಒಂದು ಗ್ರಾಮಿನ ಹತ್ತನೇ ಒಂದರಷ್ಟು ತೂಗುತ್ತವೆ. ಕೃತಕ ಸ್ನಾಯುಗಳ ಸಹಾಯದಿಂದ ಇವು ಹಾರುತ್ತವೆ. ಈ ಸ್ನಾಯುಗಳು ವಿದ್ಯುತ್ತಿನಿಂದ ಕೆಲಸ ಮಾಡುತ್ತವೆ. ಇವುಗಳ ರೆಕ್ಕೆಗಳು ಸೆಕೆಂಡಿನ 120ರಷ್ಟು ಸಲ ಬಡಿದುಕೊಳ್ಳಬಲ್ಲವು. ಇವು ನೇರವಾಗಿ ಮೇಲಕ್ಕೆ, ಕೆಳಕ್ಕೆ, ಮುಂದಕ್ಕೆ ಹಾರಬಲ್ಲವು. ಈಗಾಗಲೇ ತಿಳಿಸಿದಂತೆ ಇವು ಸೌರವಿದ್ಯುತ್ ಬ್ಯಾಟರಿಯನ್ನು ಬಳಸುತ್ತವೆ.

ಜೇನು ಸಾಕಣೆಯಲ್ಲಿ ಇನ್ನೂ ಬೇರೆ ಬೇರೆ ವಿಧಾನಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಜೇನು ಕುಟುಂಬಗಳಿಗೆ ಒಂದು ದೊಡ್ಡ ಬಾಧೆ ಎಂದರೆ ಗೆದ್ದಲು ಮತ್ತು ಅದೇ ಜಾತಿಯ ಕೀಟಗಳು. ಇವು ಬಂದರೆ ಜೇನು ಕುಟುಂಬ ನಾಶವಾಗುತ್ತದೆ. ಇವು ಬಾರದಂತೆ ಮಾಡಲು ತುಂಬ ಕಷ್ಟ ಪಡಬೇಕು. ಜೇನುಪೆಟ್ಟಿಗೆಯನ್ನು ಒಂದು ಕಂಬದ ಮೇಲಿಟ್ಟು ಆ ಕಂಬಕ್ಕೆ ಕೆಳಗೆ ಸುತ್ತಕ್ಕೆ ನೀರು ತುಂಬಿಸುವ ವಿಧಾನವನ್ನು ಬಹುತೇಕ ಜೇನು ಸಾಕಣೆ ಮಾಡುವವರು ಬಳಸುತ್ತಾರೆ. ಈ ವಿಧಾನದಲ್ಲಿ ನೀರು ಖಾಲಿಯಾಗದ ಹಾಗೆ ನೋಡಿಕೊಳ್ಳುತ್ತಿರುವುದು ಅತೀ ಮುಖ್ಯವಾಗುತ್ತದೆ. ಜೇನು ಪೆಟ್ಟಿಗೆ ಸ್ವಲ್ಪ ಬಿಸಿಯಾದರೆ ಗೆದ್ದಲು ಬರುವುದಿಲ್ಲ ಎಂಬುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಜೇನು ಪೆಟ್ಟಿಗೆಯನ್ನು ಎಚ್ಚರಿಕೆಯಿಂದ ತಾಪಮಾನ ನಿಯಂತ್ರಕ ಬಳಸಿ ಬಿಸಿ ಮಾಡಿ ಗೆದ್ದಲು ಬರದಂತೆ ಮಾಡುತ್ತಾರೆ. ತಾಪಮಾನ ಅತಿಯಾಗದಂತೆ ನೋಡಿಕೊಳ್ಳುವುದು ಮುಖ್ಯ. ತಂತ್ರಜ್ಞಾನವು ಇಲ್ಲಿ ನೆರವಿಗೆ ಬರುತ್ತದೆ.

ಹೀಗೆ ಹಲವು ರೀತಿಯಲ್ಲಿ ತಂತ್ರಜ್ಞಾನವು ಜೇನುಸಾಕಣೆಯಲ್ಲಿ ಸಹಾಯಕ್ಕೆ ಬರುತ್ತಿದೆ.

–ಡಾ| ಯು.ಬಿ. ಪವನಜ

gadgetloka @ gmail . com

The post ರೋಬೋಟ್   ಜೇನುನೊಣಗಳು first appeared on Vishva Kannada.