law | Vishva Kannada

ರೋಬೋಟ್ ಲಾಯರ್
ಇತ್ತೀಚೆಗೆ ಕೃತಕ ಬುದ್ಧಿಮತ್ತೆ ತುಂಬ ಸುದ್ದಿಯಲ್ಲಿದೆ. ಅಂತಹ ಒಂದು ಚಾಟ್ ಇಂಜಿನ್ ಚಾಟ್‌ಜಿಪಿಟಿ ಬಗ್ಗೆ ಎರಡು ವಾರಗಳ ಹಿಂದೆ ಬರೆದಿದ್ದೆ. ಗೂಗ್ಲ್‌, ಅಮೆಜಾನ್ ಅಲೆಕ್ಸಾ, ಆಪಲ್ ಸಿರಿ ಇವುಗಳಿಗೆ ಧ್ವನಿ ಮೂಲಕ ಆಜ್ಞೆ ನೀಡುವುದೂ ಕೃತಕ ಬುದ್ಧಿಮತ್ತೆಯ ವ್ಯಾಪ್ತಿಯಲ್ಲಿ ಬರುತ್ತವೆ. ಸದ್ಯಕ್ಕೆ ಇವು ಯಾವುವೂ ಕನ್ನಡವನ್ನು ಕಲಿತಿಲ್ಲ. ಆದುದರಿಂದ ಕೃತಕ ಬುದ್ಧಿಮತ್ತೆಯ ಸವಲತ್ತುಗಳಿಂದಾಗಿ (ತಂತ್ರಾಂಶಗಳಿಂದ) ನಮ್ಮ ಕೆಲಸ ಹೋಗಬಹುದು ಎಂದು ಶಿಕ್ಷಕರು ಮತ್ತು ಲೇಖಕರುಗಳು ಚಿಂತೆ ಪಡಬೇಕಾಗಿಲ್ಲ. ಆದರೆ ಕೃತಕ ಬುದ್ಧಿಮತ್ತೆಯ ಸವಲತ್ತುಗಳು ಕನ್ನಡದಲ್ಲೂ ದೊರೆಯುವ ಕಾಲ ತುಂಬ ದೂರವಿಲ್ಲ. ಗೂಗ್ಲ್ ಅನುವಾದ ಮೊದಲು ಕನ್ನಡಕ್ಕೆ ಕೆಟ್ಟದಾಗಿತ್ತು. ಇತ್ತೀಚೆಗೆ ಅದು ತುಂಬ ಸುಧಾರಿಸಿದೆ. ಬಹುತೇಕ ಅನುವಾದದ ಕೆಲಸಗಳಿಗೆ ಅದು ನೀಡುವ ಅನುವಾದ ಒಂದು ಪ್ರಾರಂಭದ ಹೆಜ್ಜೆಯನ್ನಾಗಿ ಹಲವರು ಬಳಸುತ್ತಿದ್ದಾರೆ. ಗೂಗ್ಲ್ ಅನುವಾದ ನೀಡಿದ ಪಠ್ಯವನ್ನು ಸುಧಾರಿಸಿ ಅಂತಿಮ ರೂಪು ನೀಡುತ್ತಿದ್ದಾರೆ. ವಿಕಿಪೀಡಿಯಾದಲ್ಲೂ ಈ ಯಂತ್ರಾನುವಾದ ಲಭ್ಯವಿದೆ. ಅಂದರೆ ಇಂಗ್ಲಿಷ್ (ಅಥವಾ ಇತರೆ) ಭಾಷೆಯ ವಿಕಿಪೀಡಿಯ ಲೇಖನವನ್ನು ಕನ್ನಡಕ್ಕೆ (ಅಥವಾ ಇತರೆ ಭಾಷೆಗೆ) ವಿಕಿಪೀಡಿಯದಲ್ಲೇ ಅಡಕವಾಗಿರುವ ಯಂತ್ರಾನುವಾದದ ಮೂಲಕ ಅನುವಾದ ಮಾಡಬಹುದು. ಆದರೆ ಈ ಅನುವಾದ ಸುಮಾರು 85% ದಷ್ಟು ಮಾತ್ರ ಸರಿಯಿದೆ. ಅದನ್ನು ಮೂಲವಾಗಿಟ್ಟುಕೊಂಡು ಅದನ್ನು ಸುಧಾರಿಸಿ ಲೇಖನ ಅಂತಿಮಗೊಳಿಸಬಹುದು. ಬಹುತೇಕ ಜನರು ಹಾಗೆ ಮಾಡುತ್ತಿದ್ದಾರೆ ಕೂಡ. ಕೃತಕ ಬುದ್ಧಿಮತ್ತೆಯ ಸವಲತ್ತುಗಳು ಚಾಟ್‌ಜಿಪಿಟಿಯಿಂದ ಮುಂದುವರೆದು ಕಾನೂನು ಕ್ಷೇತ್ರಕ್ಕೂ ಕಾಲಿಟ್ಟರೆ? ಅಂತಹ ಒಂದು ಸುದ್ದಿ ಬಂದಿದೆ.

ನಾನು ಹೇಳಲು ಹೊರಟಿರುವುದು ಕೃತಕ ಬುದ್ಧಿಮತ್ತೆಯ ಮೂಲಕ ಕೆಲವು ಕಾನೂನುಗಳ ಅನುವಾದ ಅಲ್ಲ. ಇದು ರೋಬೋಟ್ ಲಾಯರ್ ಕಥೆ. ಹಾಗೆಂದು ಹೇಳಿ ಸಿನಿಮಾಗಳಲ್ಲಿ ತೋರಿಸುವಂತೆ ಯಂತ್ರಮಾನವನೊಂದು ನ್ಯಾಯಾಲಯದಲ್ಲಿ ವಾದ ಮಾಡುವ ದೃಶ್ಯವನ್ನು ಊಹಿಸಿಕೊಳ್ಳಬೇಕಾಗಿಲ್ಲ. ಬದಲಿಗೆ ಕಾನೂನು ಕಲಿತು ಸಂದರ್ಭಕ್ಕೆ ಸರಿಯಾಗಿ ಸೂಕ್ತ ಕಾನೂನಿನ ಉಲ್ಲೇಖ ಮಾಡಿ ನ್ಯಾಯಾಲಯದಲ್ಲಿ ಕಕ್ಷಿದಾರನ ಪರವಾಗಿ ವಾದ ಮಂಡಿಸುವ ಕೃತಕ ಬುದ್ಧಿಮತ್ತೆಯ ಇಂಜಿನ್ ತಂತ್ರಾಂಶ ಎನ್ನಬಹುದು.

ಕಾಲ್ಪನಿಕ ಚಿತ್ರ

ಕೃತಕ ಬುದ್ಧಿಮತ್ತೆ (artificial intelligence) ಎನ್ನುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚೆಗೆ ತುಂಬ ಸುದ್ದಿ ಮಾಡುತ್ತಿರುವ ವಿಷಯ. ಇದರಲ್ಲಿ ಯಂತ್ರಗಳು ತಾವೇ ವಿಷಯಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ಸ್ಪಂದಿಸಿ, ತಾವೇ ತೀರ್ಮಾನ ತೆಗೆದುಕೊಂಡು ಕೆಲಸ ಮಾಡುತ್ತವೆ. ಕೆಲವು ಪ್ರಮುಖ ಉದಾಹರಣೆಗೆಳು – ಯಂತ್ರಾನುವಾದ, ಪಠ್ಯದಿಂದ ಧ್ವನಿಗೆ ಹಾಗೂ ಧ್ವನಿಯಿಂದ ಪಠ್ಯಕ್ಕೆ ಪರಿವರ್ತನೆ, ಚಿತ್ರದಿಂದ ಪಠ್ಯಕ್ಕೆ, ಇತ್ಯಾದಿ. ಈ ಬಗ್ಗೆ ಹಿಂದೊಮ್ಮೆ ಹೀಗೆಂದು ಇದೇ ಅಂಕಣದಲ್ಲಿ ಬರೆಯಲಾಗಿತ್ತು.

ಹಲವು ಕ್ಷೇತ್ರಗಳಂತೆ ಕಾನೂನು ಮತ್ತು ನ್ಯಾಯಾಲಯಗಳಿಗೂ ಕೃತಕ ಬುದ್ಧಿಮತ್ತೆ ಪ್ರವೇಶ ಮಾಡುತ್ತಿದೆ. ಅಮೆರಿಕದಲ್ಲಿ ಕೃತಕಬುದ್ಧಿಮತ್ತೆಯ ನ್ಯಾಯವಾದಿ ತಯಾರಾಗಿದೆ. ಇದನ್ನು ವ್ಯಾಪಕವಾಗಿ ರೋಬೋಟ್ ಲಾಯರ್ ಎಂದು ಕರೆಯಲಾಗುತ್ತಿದೆ. ಅಮೆರಿಕದಲ್ಲಿ 2015ರಲ್ಲಿ ಜೋಶುವ ಬ್ರೌಡರ್ ಎಂಬವರು ಡುನಾಟ್‌ಪೇ ಎಂಬ ಕಾನೂನು ಸಲಹೆಗಾರ ತಂತ್ರಾಂಶವನ್ನು ಬಿಡುಗಡೆ ಮಾಡಿದರು. ಅದು ಕೂಡ ಚಾಟ್‌ಜಿಪಿಟಿಯಂತೆ ಒಂದು ಚಾಟ್‌ಬೋಟ್ ಆಗಿತ್ತು. ಜೋಶುವ ಅದನ್ನು ಪ್ರಪಂಚದ ಮೊದಲ ರೋಬೋಟ್ ಲಾಯರ್ ಎಂದು ಕರೆದರು. ಅದಕ್ಕೆ ಕಾನೂನು ಸಂಬಂಧಿ ಪ್ರಶ್ನೆ ಕೇಳಿದರೆ ಅದು ಉತ್ತರಿಸುತ್ತಿತ್ತು. ಪ್ರಾರಂಭದಲ್ಲಿ ಕೆಲವು ಸರಳವಾದ ಸಂದರ್ಭಗಳಲ್ಲಿ ಏನೆಲ್ಲ ಸಾಧ್ಯತೆಗಳಿವೆ ಎಂಬುದನ್ನು ಅದು ವಿವರಿಸುತ್ತಿತ್ತು. ಉದಾಹರಣೆಗೆ ಹಣ ನೀಡಬೇಕಾಗಿತ್ತು, ಅವಧಿಯೊಳಗಡೆ ನೀಡಿಲ್ಲ, ಈಗ ನೋಟೀಸು ಬಂದಿದೆ – ಈ ಸಂದರ್ಭದಲ್ಲಿ ಏನೆಲ್ಲ ಮಾಡಬಹುದು ಎಂಬುದನ್ನು ಅದು ಹೇಳುತ್ತದೆ. ಈ ಕಿರುತಂತ್ರಾಂಶ (ಆಪ್) ಗೂಗ್ಲ್ ಪ್ಲೇ ಸ್ಟೋರಿನಲ್ಲಿದೆ. ನಾನು ಅದನ್ನು ನನ್ನ ಮೊಬೈಲಿನಲ್ಲಿ ಹಾಕಿಕೊಂಡು ಬಳಸಿ ನೋಡಲು ಪ್ರಯತ್ನಿಸಿದೆ. ಆದರೆ ಅದು ಅಮೆರಿಕ, ಆಸ್ಟ್ರೇಲಿಯ ಮತ್ತು ಕೆಲವು ಯುರೋಪಿನ ದೇಶಗಳಿಗೆ ಸೀಮಿತವಾಗಿತ್ತು. ಭಾರತ ಅದರ ಪಟ್ಟಿಯಲ್ಲಿರಲಿಲ್ಲ. ಆದುದರಿಂದ ಅದು ನಿಜವಾಗಿಯೂ ಹೇಗೆ ಕೆಲಸ ಮಾಡುತ್ತಿದೆ ಎಂದು ಪರಿಶೀಲಿಸಲು ನನಗೆ ಆಗಲಿಲ್ಲ.

ಈ ಡುನಾಟ್‌ಪೇ ಚಾಟ್‌ಬೋಟ್ ಅಥವಾ ರೋಬೋಟ್ ಲಾಯರ್ ಅನ್ನು ನಿಜವಾದ ನ್ಯಾಯಾಲಯದಲ್ಲಿ ಕಾನೂನು ಹೋರಾಟವೊಂದರಲ್ಲಿ ಬಳಸಲು ಸಿದ್ಧತೆ ಆಗಿತ್ತು. ಅತಿ ವೇಗವಾಗಿ ವಾಹನ ಚಾಲನೆ ಮಾಡಿದ್ದೀಯ ಎಂದೊಬ್ಬರಿಗೆ ಸಾರಿಗೆ ಪೋಲೀಸರಿಂದ ನೋಟೀಸು ಬಂದಿತ್ತು. ಅವರು ನ್ಯಾಯಾಲಯದಲ್ಲಿ ಹಾಜರಾಗಿ ತಮ್ಮ ವಾದವನ್ನು ಮಂಡಿಸಬೇಕಿತ್ತು. ಇಲ್ಲಿ ವಾದ ಮಂಡಿಸಲು ರೋಬೋಟ್ ಲಾಯರ್ ಸಹಾಯ ಪಡೆಯುವುದೆಂದು ತೀರ್ಮಾನ ಆಗಿತ್ತು. ಆ ಕೇಸು ಕೋರ್ಟಿನಲ್ಲಿ ಫೆಬ್ರವರಿ 22ಕ್ಕೆ ನ್ಯಾಯಾಧೀಶರ ಮುಂದೆ ಬರುವುದಿತ್ತು. ಆದರೆ ಜೋಶುವ ಅವರು ಒಂದು ಟ್ವೀಟ್ ಮೂಲಕ ರೋಬೋಟ್ ಲಾಯರ್ ಅನ್ನು ಕೋರ್ಟಿಗೆ ಕಳುಹಿಸುವ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಲಾಯರುಗಳ ಸಂಘದ ಪ್ರತಿಭಟನೆ ಹಾಗೂ ಎಚ್ಚರಿಕೆ. ರೋಬಾಟ್ ಲಾಯರ್ ತಂದರೆ ಜೋಶುವ ಅವರಿಗೆ 6 ತಿಂಗಳುಗಳ ಜೈಲು ಸಾಧ್ಯತೆಯಿದೆ ಎಂಬ ಭಯದಿಂದ ಅವರು ಈ ತೀರ್ಮಾನ ತೆಗೆದುಕೊಂಡುದುದಾಗಿ ತಮ್ಮ ಟ್ವೀಟ್‌ನಲ್ಲಿ ತಿಳಿದಿದ್ದಾರೆ.  ಕೋರ್ಟಿನಲ್ಲಿ ವಾದ ಮಾಡುವ ವ್ಯಕ್ತಿ ಇಯರ್‌ಫೋನ್ ಧರಿಸಿ ಅದು ಮೊಬೈಲಿನಲ್ಲಿರುವ ಡುನಾಟ್‌ಪೇ ತಂತ್ರಾಂಶಕ್ಕೆ ಸಂಪರ್ಕ ಹೊಂದುತ್ತದೆ. ಆ ತಂತ್ರಾಂಶವು ವಾದವನ್ನು ಆಲಿಸಿ ತನ್ನ ಉತ್ತರವನ್ನು ಇಯರ್‌ಫೋನ್ ಮೂಲಕ ತಿಳಿಸುತ್ತದೆ. ಕಕ್ಷಿದಾರ ಕೋರ್ಟಿನಲ್ಲಿ ರೋಬೋಟ್ ಲಾಯರ್ ತಿಳಸಿದಂತೆ ವಾದ ಮಾಡುತ್ತಾರೆ. ಇದು ಅವರ ಯೋಜನೆ ಆಗಿತ್ತು. ಮೊಬೈಲ್  ಫೋನ್ ಮತ್ತು ಇಯರ್‌ಫೋನ್‌ಗಳನ್ನು ಕೋರ್ಟಿನಲ್ಲಿ ಬಳಕೆ ಮಾಡುವಂತಿಲ್ಲ. ಆದುದರಿಂದ ಇಯರ್‌ಫೋನ್ ಅನ್ನು ಕಿವಿ ಕೇಳದವರು ಬಳಸುವ ಸಾಧನ ಎಂಬಂತೆ ಬಿಂಬಿಸುವ ಯೋಜನೆ ಅವರದಾಗಿತ್ತು. ಆದರೆ ಸದ್ಯಕ್ಕೆ ರೋಬೋಟ್ ಲಾಯರ್ ಕೇವಲ ಸಲಹೆಗೆಳಿಗೆ ಮಾತ್ರ ಸೀಮಿತ. ಕೋರ್ಟಿನಲ್ಲಿ ನಿಜವಾದ ವಾದ ಸದ್ಯಕ್ಕಿಲ್ಲ.

–ಡಾ| ಯು.ಬಿ. ಪವನಜ

gadgetloka @ gmail . com

The post ರೋಬೋಟ್ ಲಾಯರ್ first appeared on Vishva Kannada.

ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯಿದೆ
ಜಾಲಾಪರಾಧಗಳಿಗೆ ಕಡಿವಾಣ

ಹಿಂದಿನ ಸಂಚಿಕೆಗಳಲ್ಲಿ ಯಾವೆಲ್ಲ ರೀತಿಯಲ್ಲಿ ಜಾಲಾಪರಾಧಗಳು ನಡೆಯುತ್ತವೆ ಎಂದು ಓದಿದಿರಿ. ಯಾವೆಲ್ಲ ರೀತಿಯಲ್ಲಿ ತೊಂದರೆಗೊಳಗಾಗುತ್ತೀರಿ ಎಂದೂ ಓದಿದಿರಿ. ಜಾಲಾಪರಾಧಗಳಲ್ಲಿ ಬಹುದೊಡ್ಡ ಭಾಗ ಹಣಕಾಸಿಗೆ ಸಂಬಂದಪಟ್ಟದ್ದು. “ನಿಮ್ಮ ಬ್ಯಾಂಕಿನಿಂದ ಫೋನ್ ಮಾಡುತ್ತಿದ್ದೇನೆ. ನಿಮ್ಮ ಅಕೌಂಟ್ ಅನ್ನು ನಮ್ಮ ಕಂಪ್ಯೂಟರಿನಲ್ಲಿ ಅಪ್‌ಡೇಟ್ ಮಾಡುತ್ತಿದ್ದೇವೆ. ನಿಮ್ಮ ಫೋನಿಗೆ ಒಂದು ಓಟಿಪಿ ಬಂದಿರುತ್ತದೆ. ಅದನ್ನು ನನಗೆ ಓದಿ ಹೇಳಿ.”  ಎಂದು ಫೋನ್ ಬಂದಿರುತ್ತದೆ. ಅದನ್ನು ನಂಬಿ ಓಟಿಪಿ ಹೇಳಿದರೆ ಬ್ಯಾಂಕಿನ ಖಾತೆಯಿಂದ ಹಣ ಹೋಗಿರುತ್ತದೆ. ಇನ್ನೊಂದು ಸಾಮಾನ್ಯ ದರೋಡೆಯ ವಿಧಾನವೆಂದರೆ ವಿಡಿಯೋ ಕರೆ ಬರುವುದು. ಅದು ಯಾವುದೋ ಒಂದು ಹೆಣ್ಣಿನಿಂದ ಬಂದಿರುತ್ತದೆ. ವಿಡಿಯೋ ಕರೆ ಮಾಡಿ ಏನೇನೋ ಮಾತನಾಡಿರುತ್ತಾರೆ. ನಂತರ ಆ ವಿಡಿಯೋದಲ್ಲಿ ನಿಮ್ಮ ಮುಖಕ್ಕೆ ಇನ್ಯಾವುದೋ ನಗ್ನ ದೇಹವನ್ನು ಜೋಡಿಸಿ ಎಡಿಟ್ ಮಾಡಿ ನಂತರ ಬ್ಲಾಕ್‌ಮೈಲ್ ಮಾಡುವುದು. ಈ ಎರಡು ನಮೂನೆಗಳಲ್ಲದೆ ಇನ್ನೂ ಹಲವು ರೀತಿಯಲ್ಲಿ ಜಾಲಾಪರಾಧಗಳು ನಡೆಯುತ್ತವೆ. ಇವುಗಳಿಗೆ ಕಡಿವಾಣ ಹಾಕಲು ಅಥವಾ ಅಂತಹ ಸಂದರ್ಭಗಳಲ್ಲಿ ಪೋಲೀಸರು ಕ್ರಮ ಕೈಗೊಳ್ಳಲೆಂದೇ ಪ್ರತ್ಯೇಕ ಕಾನೂನುಗಳಿಲ್ಲವೇ ಎಂದು ಕೇಳುತ್ತಿದ್ದೀರಾ? ಹೌದು. ಜಾಲಾಪರಾಧಗಳಿಗೆ ಕಡಿವಾಣ ಹಾಕಲೆಂದೇ ಪ್ರತ್ಯೇಕ ಕಾನೂನು ಇದೆ. ಇದಕ್ಕೆ ಭಾರತೀಯ ಮಾಹಿತಿ ತಂತ್ರಜ್ಞಾನ ಕಾನೂನು ಎನ್ನುತ್ತಾರೆ. 2000ನೆಯ ಇಸವಿಯಲ್ಲಿ ಇದನ್ನು ಕಾನೂನಾಗಿ ಮಾಡಲಾಯಿತು. ಆದುದರಿಂದ ಇದಕ್ಕೆ Information Technology Act 2000 ಎಂಬ ಹೆಸರಿದೆ. ಈ ಸಂಚಿಕೆಯಲ್ಲಿ ಈ ಕಾನೂನಿಗೆ ಬಗ್ಗೆ ತಿಳಿಯೋಣ.

ಈ ಕಾನೂನು ಗಣಕ, ಗಣಕ ಜಾಲ, ಅಂತರಜಾಲ, ಮೊಬೈಲ್ ಫೋನ್, ಇತ್ಯಾದಿ ಮಾಹಿತಿ ತಂತ್ರಜ್ಞಾನದ ಅಂಗಗಳನ್ನು ಬಳಸಿ ಮಾಡಿದ ಅಪರಾದಗಳಿಗೆ ಅನ್ವಯವಾಗುತ್ತದೆ. ಇದು ಇಡಿಯ ಭಾರತ ದೇಶಕ್ಕೆ ಅನ್ವಯವಾಗುತ್ತದೆ. ಯಾವುದೋ ಒಂದು ಅಥವಾ ಕೆಲವು ರಾಜ್ಯಗಳಿಗೆ ಸೀಮಿತವಾದುದಲ್ಲ. ಭಾರತದಲ್ಲಿ ನಡೆದ ಮಾತ್ರವಲ್ಲ ಭಾರತದಿಂದ ಹೊರಗೆ ನಡೆದ ಅಪರಾಧಗಳೂ ಇದರ ಪರಿಧಿಯಲ್ಲಿ ಬರುತ್ತವೆ.

ಈ ಕಾನೂನು ಕೇವಲ ಅಪರಾಧಗಳಿಗೆ ಸಂಬಂಧಿಸಿದ್ದಲ್ಲ. ಡಿಜಿಟಲ್ ಯುಗದಲ್ಲಿ ನಡೆಯುವ ಹಲವಾರು ಡಿಜಿಟಲ್ ವ್ಯವಹಾರಗಳಿಗೆ ಇದು ಅಧಿಕೃತತೆಯ ಮುದ್ರೆಯನ್ನು ಒತ್ತುತ್ತದೆ. ಇದರಲ್ಲಿ ಪ್ರಮುಖವಾದುದು ಡಿಜಿಟಲ್ ಸಹಿ. ನೀವು ತೆರಿಗೆ ಕಟ್ಟುವವರಾದರೆ ನಿಮಗೆ ಭಾರತ ಸರಕಾರದ ಆದಾಯ ತೆರಿಗೆ ಇಲಾಖೆಯಿಂದ ಬರುವ ಇಮೈಲ್ ಜೊತೆ ಇರುವ ಪತ್ರವನ್ನು ಡಿಜಿಟಲ್ ಸಹಿ ಮಾಡಿ ಕಳುಹಿಸಿರಲಾಗುತ್ತದೆ. ಇದನ್ನು ಸೂಕ್ತ ತಂತ್ರಾಂಶದ ಮೂಲಕ ತೆರೆಯಬಹುದು. ಅದೇ ರೀತಿ ನೀವು ಯಾರಿಗಾದರೂ ಹಣಕಾಸಿನ ಮಾಹಿತಿ, ಕಂಪೆನಿಯ ಆಯವ್ಯಯದ ಕೋಷ್ಟಕ, ಬಹುಮುಖ್ಯ ಇಮೈಲ್, ಇತ್ಯಾದಿಗಳನ್ನು ಕಳುಹಿಸುವಾಗ ನೀವು ಅದಕ್ಕೆ ನಿಮ್ಮ ಡಿಜಿಟಲ್ ಸಹಿ ಹಾಕಬಹುದು. ಇದಕ್ಕಾಗಿ ನೀವು ಡಿಜಿಟಲ್ ಸಹಿ ಕೊಳ್ಳಬೇಕು. ಅದು ನಿಮ್ಮ ವೈಯಕ್ತಿಕವಾಗಿರುತ್ತದೆ. ಹೀಗೆ ಡಿಜಿಟಲ್ ಸಹಿ ಮಾಡಿ ಕಳುಹಿಸಿದ ಪತ್ರ, ಇಮೈಲ್, ಫೈಲ್‌ಗಳು ಅಧಿಕೃತ ಎಂದೆನಿಸುತ್ತವೆ. ಮಾಮೂಲಿ ಇಮೈಲ್ ಕೂಡ ಅಧಿಕೃತ ಎಂದು ಈ ಕಾನೂನು ತಿಳಿಸುತ್ತದೆ. ಉದಾಹರಣೆಗೆ ನೀವು ಬ್ಯಾಂಕಿಗೆ, ಜೀವ ವಿಮಾ ಸಂಸ್ಥೆಗೆ, ಸರಕಾರಕ್ಕೆ, ನಿಮ್ಮ ಕಂಪೆನಿಗೆ, ಎಲ್ಲ ಇಮೈಲ್ ಮೂಲಕ ಮಾಹಿತಿ ಕಳುಹಿಸಿದರೆ ಸಾಕು. ಪತ್ರದ ಮೂಲಕವೇ ಕಳುಹಿಸಬೇಕಾಗಿಲ್ಲ. ರಿಜಿಸ್ಟರ್ಡ್ ಪತ್ರದ ಮೂಲಕ ನೀವು ಕಳುಹಿಸಿಲ್ಲ ಎಂದು ಅವರು ಹೇಳಿ ನುಣುಚಿಕೊಳ್ಳುವಂತಿಲ್ಲ.

ಹಲವು ನಮೂನೆಯ ಜಾಲಾಪರಾಧಕ್ಕೆ ತುತ್ತಾದವರು ಈ ಕಾನೂನಿನ ಮೊರೆ ಹೋಗಬಹುದು. ಸರಕಾರವು ಇಂತಹ ದೂರುಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳಲೆಂದೇ ಪ್ರತ್ಯೇಕ ಪೋಲೀಸ್ ವಿಭಾಗವನ್ನು ತೆರೆದಿದ್ದಾರೆ. ಇದಕ್ಕೆ ಸೈಬರ್ ಪೋಲೀಸ್ ಎನ್ನುತ್ತಾರೆ. ನೀವು ಜಾಲಾಪರಾಧಕ್ಕೆ ತುತ್ತಾದವರಾಗಿದ್ದರೆ ದೂರನ್ನು ಸೈಬರ್ ಪೋಲೀಸರಿಗೆ ನೀಡಬಹುದು. ಅದಕ್ಕಾಗಿ ನೀವು ಪೋಲೀಸ್ ಠಾಣೆಗೆ ಹೋಗಬೇಕಾಗಿಲ್ಲ. cybercrime.gov.in ಜಾಲತಾಣಕ್ಕೆ ಭೇಟಿ ನೀಡಿ ನಿಮ್ಮ ದೂರನ್ನು ದಾಖಲಿಸಬಹುದು.

ಈ ಕಾನೂನಿನ ಪ್ರಕಾರ ಅಪರಾಧಗಳು:-

ಗಣಕದಲ್ಲಿ ಸಂಗ್ರಹಿಸಿಡುವ ತಂತ್ರಾಂಶಗಳ ಮೂಲ ಆಕರಗಳನ್ನು (ಫೈಲ್‌ಗಳು) ಕೆಡಿಸುವುದು, ಕದಿಯುವುದು, ಅನಧಿಕೃತವಾಗಿ ಹಂಚುವುದು. ಇದು ಸಾಮಾನ್ಯವಾಗಿ ತಂತ್ರಾಂಶ ಪರಿಣತರು ಮಾಡುವ ಅಪರಾಧಗಳು.

ಹ್ಯಾಕಿಂಗ್. ಗಣಕ ಅಥವಾ ಗಣಕ ಜಾಲಕ್ಕೆ ಅನಧಿಕೃತವಾಗಿ ಪ್ರವೇಶಿಸಿ ತಂತ್ರಾಂಶಗಳನ್ನು, ಮಾಹಿತಿಗಳನ್ನು ಕೆಡಿಸುವುದನ್ನು ಹ್ಯಾಕಿಂಗ್ ಎನ್ನುತ್ತಾರೆ. ಬಹುಮುಖ್ಯವಾಗಿ ಜಾಲತಾಣಗಳನ್ನು ಕೆಡಿಸುವುದಕ್ಕೆ ಹ್ಯಾಕಿಂಗ್ ಅನ್ನು ಬಳಸುತ್ತಾರೆ.

ಕದ್ದ ಗಣಕ ಅಥವಾ ಯಾವುದೇ ಮಾಹಿತಿ ತಂತ್ರಜ್ಞಾನದ ಸಾಧನವನ್ನು ಸ್ವೀಕರಿಸುವುದು ಅಥವಾ ಬಳಸುವುದು.

ಇನ್ನೊಬ್ಬರ ಪಾಸ್‌ವರ್ಡ್ ಅಥವಾ ಡಿಜಿಟಲ್ ಸಹಿಯನ್ನು ಬಳಸುವುದು.

ಗಣಕ ಅಥವಾ ಮಾಹಿತಿ ತಂತ್ರಜ್ಞಾನದ ಸಾಧನ ಸಲಕರಣೆಗಳನ್ನು ಬಳಸಿ ಮೋಸ ಮಾಡುವುದು.

ಇತರರ ಅನುಮತಿಯಿಲ್ಲದೆ ಅವರ ಖಾಸಗಿ ಚಿತ್ರಗಳನ್ನು ಪ್ರಕಟಿಸುವುದು ಮತ್ತು ಹಂಚುವುದು.

ಸೈಬರ್ ಭಯೋತ್ಪಾದನೆ. ಗಣಕ ಜಾಲಕ್ಕೆ ನುಗ್ಗಿ ದೇಶಕ್ಕೆ, ದೇಶದ ಭದ್ರತೆಗೆ, ದೇಶದ ಏಕತೆಗೆ, ತೊಂದರೆ ನೀಡುವಂತಹ ಕೆಲಸ ಮಾಡುವುದು.

ವಿದ್ಯುನ್ಮಾನ ರೀತಿಯಲ್ಲಿ ಅಶ್ಲೀಲ ಮಾಹಿತಿಯನ್ನು ಪ್ರಕಟಿಸುವುದು ಅಥವಾ ಹಂಚುವುದು. ಲೈಂಗಿಕ ಕ್ರಿಯೆಗಳನ್ನು ತೋರಿಸುವ ಚಿತ್ರ ಅಥವಾ ವಿಡಿಯೋಗಳನ್ನು ಪ್ರಕಟಿಸುವುದು ಅಥವಾ ಹಂಚುವುದು. ಮಕ್ಕಳನ್ನು ಬಳಸಿ ತಯಾರಿಸಿದ ಲೈಂಗಿಕ ಕ್ರಿಯೆಗಳ ವಿಡಿಯೋಗಳೂ ಇದರಡಿಯಲ್ಲಿ ಬರುತ್ತವೆ. ಎಲ್ಲ ಪೋರ್ನ್ ಜಾಲತಾಣಗಳು ಇದರಡಿಯಲ್ಲಿ ಬರುತ್ತವೆ. ನಿಮಗೆ ಯಾರಾದರೂ ಇಮೈಲ್ ಅಥವಾ ವಾಟ್ಸ್‌ಆಪ್ ಮೂಲಕ ಅಶ್ಲೀಲ ಚಿತ್ರ ಅಥವಾ ವಿಡಿಯೋ ಕಳುಹಿಸಿದರೆ ನೀವು ಅವರ ಮೇಲೆ ಈ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ದೂರು ನೀಡಬಹುದು.

ಈ ಕಾನೂನಿನ 66A ವಿಭಾಗವು ವಿವಾದಾಸ್ಪದವಾಗಿತ್ತು. ಅದರ ಪ್ರಕಾರ ಸುಲಭದಲ್ಲಿ ಜನರನ್ನು ಬಂಧಿಸಬಹುದಾಗಿತ್ತು. ಮಾರ್ಚ್ 2015ರಲ್ಲಿ ಸರ್ವೋಚ್ಚ ನ್ಯಾಯಾಲಯವು ಕಾನೂನಿನ ಈ ವಿಭಾಗವು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿ ಅದನ್ನು ವಜಾ ಮಾಡಿತು.

–ಡಾ| ಯು.ಬಿ. ಪವನಜ

gadgetloka @ gmail . com

The post ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯಿದೆ first appeared on Vishva Kannada.