Asus | Vishva Kannada

ಏಸುಸ್ ಎಕ್ಸ್‌ಪರ್ಟ್‌ಬುಕ್ ಬಿ5 ಫ್ಲಿಪ್
360 ಡಿಗ್ರಿ ಲ್ಯಾಪ್‌ಟಾಪ್

ಇತ್ತೀಚೆಗೆ ಬಹುತೇಕ ಜನರು ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ಲ್ಯಾಪ್‌ಟಾಪ್‌ಗಳಿಗೆ ಬೇಡಿಕೆ ಏರಿದೆ. ಲ್ಯಾಪ್‌ಟಾಪ್‌ಗಳಲ್ಲಿ ಹಲವು ನಮೂನೆಗಳಿವೆ. ಒಂದು ನಮೂನೆಯ ಲ್ಯಾಪ್‌ಟಾಪ್‌ಗಳಲ್ಲಿ ಸ್ಪರ್ಶಸಂವೇದಿ ಪರದೆ ಇರುತ್ತದೆ. ಇಂತಹವುಗಳಲ್ಲೂ ಕೆಲವು ನಮೂನೆಗಳಲ್ಲಿ ಈ ಪರದೆಯನ್ನು ಪೂರ್ತಿ ಹಿಂದಕ್ಕೆ ತಿರುಗಿಸಿ ಲ್ಯಾಪ್‌ಟಾಪ್ ಅನ್ನು ಟ್ಯಾಬ್ಲೆಟ್ ಆಗಿ ಬದಲಾಯಿಸಬಹುದು. ಅಂತಹ ಒಂದು ಲ್ಯಾಪ್‌ಟಾಪ್ ಏಸುಸ್‌ ಎಕ್ಸ್‌ಪರ್ಟ್‌ಬುಕ್ ಬಿ5 ಫ್ಲಿಪ್ (Asus ExpertBook B5 Flip). ಈ ಸಂಚಿಕೆಯಲ್ಲಿ ಅದರ ವಿಮರ್ಶೆ ನೋಡೋಣ.

ಗುಣವೈಶಿಷ್ಟ್ಯಗಳು

ಪ್ರೋಸೆಸರ್

ಇಂಟೆಲ್ i3/i5/i7 (2.4 – 3.0 GHz)

ಪ್ರಾಥಮಿಕ ಮೆಮೊರಿ

4/8/16 ಗಿಗಾಬೈಟ್

ಸಂಗ್ರಹ

256/512/1024 ಗಿಗಾಬೈಟ್ ಎಸ್‌ಎಸ್‌ಡಿ

ಪರದೆ

1920 x 1080 ಪಿಕ್ಸೆಲ್ ರೆಸೊಲೂಶನ್‌, 13.3 ಇಂಚು ಗಾತ್ರ, 360 ಡಿಗ್ರಿ ತಿರುಗಿಸಬಹುದು

ಸ್ಪರ್ಶಪರದೆ

ಇದೆ

ಪೆನ್

‌ಇದೆ

ಗ್ರಾಫಿಕ್ಸ್ ಪ್ರೋಸೆಸರ್

Intel Iris Xᵉ Graphics

ಗಾತ್ರ

30.90 x 21.06 x 1.69 ಸೆ.ಮೀ.

ತೂಕ

1.57 ಕಿ.ಗ್ರಾಂ. (ಅಡಾಪ್ಟರ್ ಸಹಿತ), 1.3 ಕಿ. ಗ್ರಾಂ

ಬ್ಯಾಟರಿ

66WHrs, 4-cell Li-ion

ಕ್ಯಾಮೆರ

720p

ಕಾರ್ಯಾಚರಣ ವ್ಯವಸ್ಥೆ

ವಿಂಡೋಸ್

ಡಿವಿಡಿ ಡ್ರೈವ್

‌ಇಲ್ಲ

ಇತರೆ

ಯುಎಸ್‌ಬಿ-ಸಿ ಮತ್ತು ಎ, ಮಿನಿ ಎಚ್‌ಡಿಎಂಐ, ಎಚ್‌ಡಿಎಂಐ, 3.5 ಮಿ.ಮೀ. ಹೆಡ್‌ಸೆಟ್ ಕಿಂಡಿಗಳು, ವೈಫೈ, ಬ್ಲೂಟೂತ್, ಟಚ್‌ಪ್ಯಾಡ್

ಬೆಲೆ

ಸುಮಾರು ₹139,000

ರಚನೆ ಮತ್ತು ವಿನ್ಯಾಸ

ಚಿಕ್ಕದಾಗಿದ್ದು, ತೆಳ್ಳಗಾಗಿದ್ದು, ಇದು ನೋಡಲು ಒಂದು ಮೇಲ್ದರ್ಜೆಯ ಲ್ಯಾಪ್‌ಟಾಪ್‌ನಂತೆ ಕಾಣಿಸುತ್ತದೆ. ಪರದೆಯ ಗಾತ್ರ 13.3.6 ಇಂಚು. ಇದರ ಪರದೆಯು ಸ್ಪರ್ಶಸಂವೇದಿ (touchscreen) ಆಗಿದೆ. ಇದನ್ನು ಸಂಪೂರ್ಣವಾಗಿ ಹಿಂದಕ್ಕೆ ತಿರುಗಿಸಿ ಮಡಚಬಹುದು (360 ಡಿಗ್ರಿ). ಆಗ ಇದು ಟ್ಯಾಬ್ಲೆಟ್‌ನಂತೆ ಕೆಲಸ ಮಾಡುತ್ತದೆ. ಅಂತಹ ಸಂದರ್ಭಕ್ಕೆಂದು ಪರದೆಯಲ್ಲೇ ಮೂಡಿಬರುವ ಕೀಬೋರ್ಡ್ ಇದೆ. ಟಚ್‌ಪ್ಯಾಡ್ ಕೂಡ ಇದೆ. ಈ ಟಚ್‌ಪ್ಯಾಡ್‌ನ ಗುಣಮಟ್ಟ ಉತ್ತಮವಾಗಿದೆ. ಈ ಟಚ್‌ಪ್ಯಾಡ್‌ನಲ್ಲಿ ಒಂದು ವೈಶಿಷ್ಟ್ಯವಿದೆ. ಅದರಲ್ಲಿ ಅಂಕಿಗಳ ಕೀಬೋರ್ಡ್ ಬೇಕಾದಾಗ ಮೂಡಿಬರಿಸುವ ಸೌಲಭ್ಯವಿದೆ. ಇದು ಕೇವಲ ಕ್ಯಾಲ್ಕುಲೇಟರ್ ಆಗಿ ಬಳಸುವ ಸಂದರ್ಭದಲ್ಲಿ ಉಪಯುಕ್ತ. ಇದರ ಜೊತೆ ಒಂದು ಪೆನ್ ನೀಡಿದ್ದಾರೆ. ಇದು ಟ್ಯಾಬ್ಲೆಟ್ ಆಗಿ ಬಳಸುವಾಗ ಉಪಯೋಗಕ್ಕೆ ಬರುತ್ತದೆ. ಎರಡು ಯುಎಸ್‌ಬಿ-ಸಿ ಕಿಂಡಿಗಳಿವೆ. ಇವುಗಳಲ್ಲಿ ಯಾವುದನ್ನು ಬೇಕಾದರೂ ವಿದ್ಯುತ್ ಸಂಪರ್ಕಕ್ಕಾಗಿ ಬಳಸಬಹುದು. ಇನ್ನೂ ಒಂದು ಮಾಮೂಲಿ ಯುಎಸ್‌ಬಿ 3.2 ಕಿಂಡಿಯಿದೆ. ನಿಮಗೆ ಹೊರಗಡೆಯಿಂದ ಮೌಸ್ ಜೋಡಿಸಬೇಕಾದರೆ ಈ ಕಿಂಡಿಯನ್ನು ಬಳಸಬೇಕು. ಇನ್ನೂ ಒಂದು ಯುಎಸ್‌ಬಿ ಕಿಂಡಿ ಕೊಟ್ಟಿದ್ದರೆ ಉತ್ತಮವಿತ್ತು. ಪ್ರಸೆಂಟೇಶನ್ ಮಾಡಬೇಕಾದರೆ ಇದರಲ್ಲಿ ಎಚ್‌ಡಿಎಂಐ ಕಿಂಡಿ ಇದೆ. ಮೈಕ್ರೊಎಸ್‌ಡಿ ಕಾರ್ಡ್ ರೀಡರ್ ನೀಡಿಲ್ಲ. ಸ್ಪೀಕರುಗಳ ಗುಣಮಟ್ಟ ಅಷ್ಟಕ್ಕಷ್ಟೆ. ಇಷ್ಟು ತೆಳ್ಳಗಿನ ಲ್ಯಾಪ್‌ಟಾಪ್‌ನಲ್ಲಿ ಮೇಲ್ದರ್ಜೆಯ ಸ್ಪೀಕರ್ ಅಳವಡಿಸಲು ಸಾಧ್ಯವಿಲ್ಲ. ವಿಮಾನದಲ್ಲಿ ಪ್ರಯಾಣಿಸುವಾಗ ಬಳಸಲು ಇದು ಹೇಳಿ ಮಾಡಿಸಿದ ಲ್ಯಾಪ್‌ಟಾಪ್ ಎನ್ನಬಹುದು.

https://www.instagram.com/p/CeSum9NB9iD/

ಕೆಲಸದ ವೇಗ

ಇದರದು ಮಧ್ಯಮ ವೇಗ ಎನ್ನಬಹುದು. ನೀವು i3/i5/i7 ಇವುಗಳಲ್ಲಿ ಯಾವ ಪ್ರೋಸೆಸರ್‌ನ ಮಾದರಿಯನ್ನು ಕೊಂಡುಕೊಂಡಿದ್ದೀರಿ ಎಂಬುದನ್ನು ಹೊಂದಿಕೊಂಡು ಈ ವೇಗ ಹೆಚ್ಚು ಕಡಿಮೆ ಆಗುತ್ತದೆ. ಅತಿ ಹೆಚ್ಚಿನ ಶಕ್ತಿಯನ್ನು ಹಾಗೂ ಅತ್ಯುತ್ತಮ ಗ್ರಾಫಿಕ್ಸ್ ಅನ್ನು ಬೇಡುವ ಆಟಗಳನ್ನು ಆಡಲು ಇದು ಅಷ್ಟೇನೂ ಸೂಕ್ತವಲ್ಲ. ಒಂದು ಮಟ್ಟಿಗಿನ ಶಕ್ತಿಯನ್ನು ಬೇಡುವ ವಿಡಿಯೋ ಎಡಿಟಿಂಗ್ ಮಾಡಬಹುದು. ಆದರೆ ದೊಡ್ಡ ಮಟ್ಟದ ವಿಡಿಯೋ ಎಡಿಟಿಂಗ್‌ಗೆ ಇದು ಸೂಕ್ತವಲ್ಲ. ಇದನ್ನು ಗೇಮಿಂಗ್ ಲ್ಯಾಪ್‌ಟಾಪ್ ಎನ್ನುವಂತಿಲ್ಲ. ಬದಲಿಗೆ ಬ್ಯುಸಿನೆಸ್ ಲ್ಯಾಪ್‌ಟಾಪ್ ಎನ್ನಬಹುದು.

ಕ್ಯಾಮೆರ

ಇದರ ಕ್ಯಾಮೆರ ಒಂದು ಮಟ್ಟಿಗೆ ಚೆನ್ನಾಗಿದೆ. 720p ಬದಲಿಗೆ 1080p ಕ್ಯಾಮೆರಾ ನೀಡಬಹುದಿತ್ತು. ಇದರ ಕ್ಯಾಮೆರಾಕ್ಕೆ ‌ಒಂದು ಚಿಕ್ಕ ಸ್ಲೈಡ್ ಮಾಡಬಹುದಾದ ಮುಚ್ಚಳವಿದೆ. ಇದು ಉತ್ತಮ ಸೌಲಭ್ಯ.

ಆಡಿಯೋ ವಿಡಿಯೋ

ಇದರ ಆಡಿಯೋ ವಿಡಿಯೋ ಹೇಳಿಕೊಳ್ಳುವಂತಹ ಗುಣಮಟ್ಟದ್ದಲ್ಲ. ಇದಕ್ಕೆ ಪ್ರಮುಖ ಕಾರಣ ಲ್ಯಾಪ್‌ಟಾಪ್‌ನ ಗಾತ್ರ. ತುಂಬ ತೆಳುವಿನ ಲ್ಯಾಪ್‌ಟಾಪ್ ಆದ ಕಾರಣ ದೊಡ್ಡ ಗಾತ್ರದ ಉತ್ತಮ ಗುಣಮಟ್ಟದ ಸ್ಪೀಕರ್ ಅಳವಡಿಸಲು ಸ್ಥಳವಿಲ್ಲ. ವಿಡಿಯೋ ವೀಕ್ಷಣೆಯ ಅನುಭವ ಚೆನ್ನಾಗಿದೆ. ಮೊದಲೇ ತಿಳಿಸಿದಂತೆ ಇದು ಬ್ಯುಸಿನೆಸ್ ಲ್ಯಾಪ್‌ಟಾಪ್. ಮನರಂಜನೆಗಾಗಿ ತಯಾರಿಸಿದ ಲ್ಯಾಪ್‌ಟಾಪ್ ಅಲ್ಲ.

ಇತರೆ

ಇದರ ಬ್ಯಾಟರಿಯ ಬಾಳಿಕೆ ಪರವಾಗಿಲ್ಲ. ಸುಮಾರು 3 ರಿಂದ 8 ಗಂಟೆ ಬಾಳಿಕೆ ಬರುತ್ತದೆ. ಇದು 256, 512 ಗಿಗಾಬೈಟ್ ಮತ್ತು 1 ಟೆರ್ರಾಬೈಟ್ ಸಂಗ್ರಹ ಶಕ್ತಿಯ ಮಾದರಿಗಳಲ್ಲಿ ಲಭ್ಯ. ಇದರಲ್ಲಿ ಸಿಮ್ ಕಾರ್ಡ್ ಹಾಕುವ ಸೌಲಭ್ಯವಿಲ್ಲ. ಈ ಸೌಲಭ್ಯ ಇದ್ದರೆ ಉತ್ತಮವಿತ್ತು.

ತೀರ್ಪು

ನೀಡುವ ಬೆಲೆಗೆ ಒಂದು ಮಟ್ಟಿಗೆ ತೃಪ್ತಿದಾಯಕವಾದ ಉತ್ಪನ್ನ ಎನ್ನಬಹುದು.

-ಡಾ| ಯು.ಬಿ. ಪವನಜ

gadgetloka @ gmail.com

The post ಏಸುಸ್ ಎಕ್ಸ್‌ಪರ್ಟ್‌ಬುಕ್ ಬಿ5 ಫ್ಲಿಪ್ first appeared on Vishva Kannada.

ಏಸುಸ್ ಸಿ223ಎನ್
ಆನ್‌ಲೈನ್ ತರಗತಿಗಳಿಗಾಗಿ ಒಂದು ಕ್ರೋಮ್‌ಬುಕ್

ಕೋವಿಡ್-19 ರಿಂದಾಗಿ ಹಲವು ಕ್ಷೇತ್ರಗಳಲ್ಲಿ ಗಣನೀಯವಾಗಿ ಬದಲಾವಣೆಯಾಗಿದೆ. ಅವುಗಳಲ್ಲಿ ಒಂದು ಪ್ರಮುಖವಾದ ಬದಲಾವಣೆ ಎಂದರೆ ಬಹುತೇಕ ಸಭೆ, ಗೋಷ್ಠಿ, ತರಗತಿಗಳು ಎಲ್ಲ ಆನ್‌ಲೈನ್ ಆಗಿರುವುದು. ಶಿಕ್ಷಣ ಕ್ಷೇತ್ರದಲ್ಲಂತೂ ಇದು ತುಂಬ ದೊಡ್ಡ ಬದಲಾವಣೆಯನ್ನೇ ತಂದಿದೆ. ಆನ್‌ಲೈನ್ ತರಗತಿಗಳಿಂದಾಗಿ ಕಡಿಮೆ ಬೆಲೆಗೆ ದೊರಕಬಹುದಾದ ಲ್ಯಾಪ್‌ಟಾಪ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಲ್ಯಾಪ್‌ಟಾಪ್‌ಗಳಿಗೆ ಹೆಚ್ಚಿನ ಶಕ್ತಿಯ ಅಗತ್ಯವಿಲ್ಲ. ಯಾಕೆಂದರೆ ಇದರ ಕೆಲಸವೆಲ್ಲ ಅಂತರಜಾಲದ ಮೂಲಕವೇ ಆಗುತ್ತದೆ, ಒಂದು ಬ್ರೌಸರ್ ಇದ್ದರೆ ಸಾಕು. ಈ ನಮೂನೆಯ ಕಡಿಮೆ ಬೆಲೆಯ ಲ್ಯಾಪ್‌ಟಾಪ್‌ಗಳಲ್ಲಿ ಪ್ರಮುಖವಾಗಿ ಎರಡು ನಮೂನೆ. ಮೊದಲನೆಯದು ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುವ ನೆಟ್‌ಬುಕ್‌ಗಳು. ಎರಡನೆಯದು ಗೂಗ್ಲ್‌ನವರ ಕ್ರೋಮ್ ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುವ ಕ್ರೋಮ್‌ಬುಕ್‌ಗಳು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಅಂತಹ  ಕ್ರೋಮ್‌ಬುಕ್ ಒಂದನ್ನು. ಅದು ಏಸುಸ್‌ ಸಿ223ಎನ್ (Asus C223N Chromebook).

ಗುಣವೈಶಿಷ್ಟ್ಯಗಳು

ಪ್ರೋಸೆಸರ್

ಇಂಟೆಲ್ ಎನ್3350 (Intel Celeron N3350 Processor 1.1 GHz, 2 cores)

ಪ್ರಾಥಮಿಕ ಮೆಮೊರಿ

4 ಗಿಗಾಬೈಟ್

ಸಂಗ್ರಹ

32 ಗಿಗಾಬೈಟ್ ಎಸ್‌ಎಸ್‌ಡಿ

ಪರದೆ

1366 x 768 ಪಿಕ್ಸೆಲ್ ರೆಸೊಲೂಶನ್‌, 11.6 ಇಂಚು ಗಾತ್ರ, ಎಲ್‌ಇಡಿ

ಸ್ಪರ್ಶಪರದೆ

ಇಲ್ಲ

ಗ್ರಾಫಿಕ್ಸ್ ಪ್ರೋಸೆಸರ್

Intel HD Graphics 500

ಗಾತ್ರ

28.60 x 19.90 x 1.73 ಸೆ.ಮೀ.

ತೂಕ

1.0 ಕಿ.ಗ್ರಾಂ.

ಬ್ಯಾಟರಿ

38WHrs, 2-cell Li-ion

ಕ್ಯಾಮೆರ

720p

ಕಾರ್ಯಾಚರಣ ವ್ಯವಸ್ಥೆ

ಕ್ರೋಮ್ ಓಎಸ್

ಡಿವಿಡಿ ಡ್ರೈವ್

‌ಇಲ್ಲ

ಇತರೆ

ಮೈಕ್ರೊಎಸ್‌ಡಿ ಕಾರ್ಡ್ ರೀಡರ್, ಯುಎಸ್‌ಬಿ ಕಿಂಡಿಗಳು, ವೈಫೈ, ಬ್ಲೂಟೂತ್, ಟಚ್‌ಪ್ಯಾಡ್

ಬೆಲೆ

ಸುಮಾರು ₹19,000

ರಚನೆ ಮತ್ತು ವಿನ್ಯಾಸ

ಇದು ನೋಡಲು ಮಾಮೂಲಿ ಲ್ಯಾಪ್‌ಟಾಪ್‌ನಂತೆಯೇ ಕಾಣಿಸುತ್ತದೆ. ಆದರೆ ಚಿಕ್ಕದಾಗಿ ಮತ್ತು ಹಗುರವಾಗಿದೆ. ಇದನ್ನು ತಯಾರಿಸಲು ಬಳಸಿದ ಪ್ಲಾಸ್ಟಿಕ್ ಮೇಲ್ದರ್ಜೆಯದ್ದಲ್ಲ. ಹಾಗೆಂದು ನೋಡಲು ಅತಿ ಕಡಿಮೆ ಬೆಲೆಯ ಉತ್ಪನ್ನದಂತೆ ಕಾಣಿಸುವುದಿಲ್ಲ. ಪರದೆಯ ಗಾತ್ರ 11.6 ಇಂಚು. ಅಂದರೆ ಇದು ಚಿಕ್ಕದಾದ ಲ್ಯಾಪ್‌ಟಾಪ್. ತೆಳುವಾಗಿ ಹಾಗೂ ಹಗುರವಾಗಿಯೂ ಇದೆ. ಟಚ್‌ಪ್ಯಾಡ್ ಕೂಡ ಇದೆ. ಈ ಟಚ್‌ಪ್ಯಾಡ್‌ನ ಗುಣಮಟ್ಟ ಉತ್ತಮವಾಗಿದೆ. ಎರಡು ಯುಎಸ್‌ಬಿ-ಸಿ ಕಿಂಡಿಗಳಿವೆ. ಇವುಗಳಲ್ಲಿ ಒಂದನ್ನು ವಿದ್ಯುತ್ ಸಂಪರ್ಕಕ್ಕಾಗಿ ಬಳಸಲಾಗುತ್ತದೆ. ಇನ್ನೂ ಒಂದು ಮಾಮೂಲಿ ಯುಎಸ್‌ಬಿ 3.1 ಕಿಂಡಿಯಿದೆ. ನಿಮಗೆ ಹೊರಗಡೆಯಿಂದ ಮೌಸ್ ಜೋಡಿಸಬೇಕಾದರೆ ಈ ಕಿಂಡಿಯನ್ನು ಬಳಸಬೇಕು. ಇನ್ನೂ ಒಂದು ಯುಎಸ್‌ಬಿ ಕಿಂಡಿ ಕೊಟ್ಟಿದ್ದರೆ ಉತ್ತಮವಿತ್ತು. ಪ್ರಸೆಂಟೇಶನ್ ಮಾಡಬೇಕಾದರೆ ಇದರಲ್ಲಿ ವಿಜಿಎ ಆಗಲೀ ಎಚ್‌ಡಿಎಂಐ ಆಗಲೀ ಕಿಂಡಿಗಳಿಲ್ಲ. ಯುಎಸ್‌ಬಿ-ಸಿ ಕಿಂಡಿಯ ಮೂಲಕವೇ ಮಾಡಬೇಕು. ಅಂದರೆ ನೀವು ಅದಕ್ಕೆ ಸೂಕ್ತ ಅಡಾಪ್ಟರ್ ಕೊಳ್ಳಬೇಕು. ಬಹುಶಃ ಇದನ್ನು ತರಗತಿಗಳನ್ನು ವೀಕ್ಷಿಸಲು ಮಾತ್ರ ಎಂದು ತಯಾರಿಸಿದಂತಿದೆ.

https://www.instagram.com/p/CSwcJO-HaQu/

ಕೆಲಸದ ವೇಗ

ಇದು ಕಡಿಮೆ ಶಕ್ತಿಯ ಪ್ರೋಸೆಸರ್ ಬಳಸುತ್ತದೆ. ಇದರ ಕೆಲಸದ ವೇಗ ಕಡಿಮೆ ಇದೆ. ಕ್ರೋಮ್ ಬ್ರೌಸರ್‌ನಲ್ಲಿ ಹಲವು ಟ್ಯಾಬ್‌ಗಳನ್ನು ತೆರೆದರೆ ಇದು ಕೆಲಸ ಮಾಡಲು ಒದ್ದಾಡುತ್ತದೆ. ಇದರಲ್ಲಿ ಗೂಗ್ಲ್ ಪ್ಲೇ ಸ್ಟೋರ್ ಸೌಲಭ್ಯವಿದೆ. ಆಂಡ್ರೋಯಿಡ್‌ನಲ್ಲಿ ಕೆಲಸ ಮಾಡುವ ಕಿರುತಂತ್ರಾಂಶಗಳನ್ನು (ಆಪ್‌ಗಳನ್ನು) ಇದರಲ್ಲಿ ಇನ್‌ಸ್ಟಾಲ್ ಮಾಡಬಹುದು. ಆದರೆ ಹೆಚ್ಚಿನ ಶಕ್ತಿಯನ್ನು ಹಾಗೂ ಉತ್ತಮ ಗ್ರಾಫಿಕ್ಸ್ ಅನ್ನು ಬೇಡುವ ಆಟಗಳನ್ನು ಆಡಲು ಇದು ಸೂಕ್ತವಲ್ಲ. ಹೆಸರಿಗೆ ಆಂಡ್ರೋಯಿಡ್ ಆಪ್‌ಗಳನ್ನು ಹಾಕಿಕೊಳ್ಳಬಹುದಷ್ಟೆ. ಅವುಗಳ ಬಳಕೆಯ ಅನುಭವ ಚೆನ್ನಾಗಿಲ್ಲ. ಬ್ರೌಸರ್‌ನಲ್ಲಿ ಹಲವು ಟ್ಯಾಬ್‌ಗಳನ್ನು ತೆರೆದು ಜೊತೆಗೆ ಹಲವು ಆಪ್‌ಗಳನ್ನೂ ತೆರೆದರೆ ಇದು ಸುಸ್ತಾಗಿ ಕೆಲಸ ಮಾಡದೆ ಸ್ಥಬ್ದವಾಗುತ್ತದೆ. ನಂತರ ಇದನ್ನು ಸಹಜ ಸ್ಥಿತಿಗೆ ತರಲು ಬಹಳ ಒದ್ದಾಡಬೇಕಾಗುತ್ತದೆ. ಮೊದಲೇ ತಿಳಿಸಿದಂತೆ ಇದು ಬ್ರೌಸರ್ ಮೂಲಕ ಆನ್‌ಲೈನ್ ತರಗತಿಗಳನ್ನು ವೀಕ್ಷಸಲು ಮಾತ್ರ ಹೇಳಿ ಮಾಡಿಸಿದಂತಿದೆ.

ಕ್ಯಾಮೆರ

ಇದರ ಕ್ಯಾಮೆರ ಹೇಳಿಕೊಳ್ಳುವಂತಹದ್ದೇನೂ ಅಲ್ಲ. ತರಗತಿಗಳನ್ನು ನಡೆಸಲು ಇದರ ಕ್ಯಾಮೆರ ಅಷ್ಟು ಉತ್ತಮವಾದುದಲ್ಲ. ನೀವು ಈ ಕ್ರೋಮ್‌ಬುಕ್ ಬಳಸಿ ಆನ್‌ಲೈನ್ ನಾಟ್ಯ ಅಥವಾ ಯೋಗ ತರಬೇತಿಯ ತರಗತಿ ನಡೆಸುತ್ತೇನೆ ಎಂದುಕೊಂಡರೆ ಇದು ನಿಮಗೆ ಹೇಳಿದ್ದಲ್ಲ.

ಆಡಿಯೋ ವಿಡಿಯೋ

ಇದರ ಆಡಿಯೋ ವಿಡಿಯೋ ಕೂಡ ಹೇಳಿಕೊಳ್ಳುವಂತಹ ಗುಣಮಟ್ಟದ್ದಲ್ಲ. ಇದರ ಸ್ಪೀಕರಿನ ವಾಲ್ಯೂಮ್ ಹತ್ತಿರದಿಂದ ಕೇಳಲು ಸಾಕು. ವಿಡಿಯೋ ವೀಕ್ಷಣೆಯ ಅನುಭವವೂ ಅಷ್ಟಕ್ಕಷ್ಟೆ. ಸಿನಿಮಾ ನೋಡಲು ಇದು ಹೇಳಿ ಮಾಡಿದ್ದಲ್ಲ. ಆನ್‌ಲೈನ್ ತರಗತಿಯನ್ನು ವೀಕ್ಷಿಸುವಾಗ ಇಯರ್‌ಫೋನ್ ಬಳಸಿದರೆ ಉತ್ತಮ.

ಇತರೆ

ಈ ಕ್ರೋಮ್‌ಬುಕ್‌ಬ್ಯಾಟರಿಯ ಬಾಳಿಕೆ ಚೆನ್ನಾಗಿದೆ. ಸುಮಾರು 8 ಗಂಟೆ ಬಾಳಿಕೆ ಬರುತ್ತದೆ. ಇದು 16 ಮತ್ತು 32 ಗಿಗಾಬೈಟ್ ಸಂಗ್ರಹ ಶಕ್ತಿಯ ಎರಡು ಮಾದರಿಗಳಲ್ಲಿ ಲಭ್ಯ. ಹೆಚ್ಚಿನ ಸಂಗ್ರಹ ಬೇಕಿದ್ದಲ್ಲಿ ಮೈಕ್ರೊಎಸ್‌ಡಿ ಕಾರ್ಡ್ ಹಾಕಿಕೊಳ್ಳಬಹುದು. ಇದರಲ್ಲಿ ಸಿಮ್ ಕಾರ್ಡ್ ಹಾಕುವ ಸೌಲಭ್ಯವಿಲ್ಲ. ಹಳ್ಳಿಗಳಲ್ಲಿ ವೈಫೈ ಸಂಪರ್ಕವಿಲ್ಲದಿದ್ದಲ್ಲಿ ಈ ಸೌಲಭ್ಯ ಇದ್ದರೆ ಉತ್ತಮವಿತ್ತು.

ತೀರ್ಪು

ಏಸುಸ್ ಒಂದು ಖ್ಯಾತ ಕಂಪೆನಿ. ನೀಡುವ ಬೆಲೆಗೆ ಹಲವು ಉತ್ತಮ ಉತ್ಪನ್ನಗಳನ್ನು ನೀಡಿದ ಖ್ಯಾತಿ ಇದಕ್ಕಿದೆ. ಆದರೆ ಈ ಕ್ರೋಮ್‌ಬುಕ್‌ನ ಬಗ್ಗೆ ಹಾಗೆ ಹೇಳುವಂತಿಲ್ಲ. ಇದರ ಬೆಲೆಯನ್ನು ಸ್ವಲ್ಪ ಕಡಿಮೆ ಮಾಡಬಹುದಿತ್ತು ಅಥವಾ ಗುಣಮಟ್ಟವನ್ನು ಉತ್ತಮಪಡಿಸಬಹುದಿತ್ತು. ಆನ್‌ಲೈನ್ ತರಗತಿಗಳನ್ನು, ವೆಬಿನಾರ್‌ಗಳನ್ನು ವೀಕ್ಷಿಸುವುದು ಮಾತ್ರವೇ ನಿಮ್ಮ ಅಗತ್ಯವಾಗಿದ್ದಲ್ಲಿ ಇದನ್ನು ಕೊಳ್ಳಬಹುದು.

-ಡಾ. ಯು.ಬಿ. ಪವನಜ

gadgetloka @ gmail . com

The post ಏಸುಸ್ ಸಿ223ಎನ್ first appeared on Vishva Kannada.

ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1
ದೊಡ್ಡ ಬ್ಯಾಟರಿ, ಚಿಕ್ಕ ಗಾತ್ರ ಹಾಗೂ ಕಡಿಮೆ ತೂಕ

ತೈವಾನ್ ದೇಶದ ಏಸುಸ್ ಕಂಪೆನಿ ಭಾರತದ ಗಣಕ, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒಂದು ಗಮನಾರ್ಹ ಹೆಸರು. ಈ ಕಂಪೆನಿಯ ಹಲವು ಉತ್ಪನ್ನಗಳನ್ನು ಇದೇ ಅಂಕಣದಲ್ಲಿ ವಿಮರ್ಶಿಸಲಾಗಿತ್ತು. ಏಸುಸ್ ಇತ್ತೀಚೆಗೆ ಕೆಲವು ಆಯ್ದ ಕ್ಷೇತ್ರಗಳಲ್ಲಿ ಈಗಾಗಲೇ ಸ್ಥಾಪಿತರಾದವರನ್ನು ಗುರಿಯಾಗಿಟ್ಟುಕೊಂಡು ಫೋನ್‌ಗಳನ್ನು ಮಾರುಕಟ್ಟೆಗೆ ಬಿಡಲು ಪ್ರಾರಂಭಿಸಿದೆ. ಮೇಲ್ದರ್ಜೆಯ ಫೋನ್‌ಗಳಲ್ಲಿ ವನ್‌ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಿ ಙೆನ್‌ಫೋನ್ ೫ ಝಡ್ ಅನ್ನು ತಯಾರಿಸಿದೆ. ಕಡಿಮೆ ಬೆಲೆಯ ಫೋನ್‌ಗಳಲ್ಲಿ ಶಿಯೋಮಿಗೆ ಪ್ರತಿಸ್ಪರ್ಧಿಯಾಗಲು ಹೊರಟಿದೆ. ಕಡಿಮೆ ಬೆಲೆಯ ಫೋನ್‌ಗಳಲ್ಲಿ ಬಹುಮಂದಿ ನೋಡುವುದು ಬ್ಯಾಟರಿ ಎಷ್ಟು ಸಮಯ ಬರುತ್ತದೆ ಎಂದು. ಅಂತಹವರಿಗಾಗಿಯೇ ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1 ಎಂಬ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈಗ ಸ್ವಲ್ಪ ಕಡಿಮೆ ಬೆಲೆಯ ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1 (Asus Zenfone Max M1) ಫೋನನ್ನು ತಂದಿದೆ. ಇದರ ವಿಮರ್ಶೆಯನ್ನು ನೋಡೋಣ.

ಗುಣವೈಶಿಷ್ಟ್ಯಗಳು

ಪ್ರೋಸೆಸರ್

8 x 1.4 ಗಿಗಾಹರ್ಟ್ಸ್ ಪ್ರೋಸೆಸರ್ (Snapdragon 430)

ಗ್ರಾಫಿಕ್ಸ್ ಪ್ರೋಸೆಸರ್

Adreno 505

ಮೆಮೊರಿ

3 + 32 ಗಿಗಾಬೈಟ್

ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ

ಇದೆ (ಪ್ರತ್ಯೇಕ ಜಾಗ, ಹೈಬ್ರಿಡ್ ಅಲ್ಲ)

ಪರದೆ

5.5 ಇಂಚು ಗಾತ್ರದ 1440 x 720 ಪಿಕ್ಸೆಲ್ ಐಪಿಎಸ್

ಕ್ಯಾಮರ

13 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್

8 ಮೆಗಾಪಿಕ್ಸೆಲ್ ಸ್ವಂತೀ

ಸಿಮ್

2 ನ್ಯಾನೊ

ಬ್ಯಾಟರಿ

4000 mAh

ಗಾತ್ರ

147.3 x 70.9 x 8.7 ಮಿ.ಮೀ.

ತೂಕ

150 ಗ್ರಾಂ

ಬೆರಳಚ್ಚು ಸ್ಕ್ಯಾನರ್

ಇದೆ

ಅವಕೆಂಪು ದೂರನಿಯಂತ್ರಕ (Infrared remote)

ಇಲ್ಲ

ಎಫ್.ಎಂ. ರೇಡಿಯೋ

ಇದೆ

ಎನ್‌ಎಫ್‌ಸಿ

ಇಲ್ಲ

4 ಜಿ ವಿಓಎಲ್‌ಟಿಇ (4G VoLTE)

ಇದೆ

ಇಯರ್‌ಫೋನ್

‌ಇಲ್ಲ

ಯುಎಸ್‌ಬಿ ಓಟಿಜಿ ಬೆಂಬಲ

ಇದೆ

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 8.0

ಬೆಲೆ

₹7,499

ರಚನೆ ಮತ್ತು ವಿನ್ಯಾಸ

ಏಸುಸ್‌ನವರ ಫೋನ್‌ಗಳು ತುಂಬ ದೊಡ್ಡದಾಗಿರುತ್ತಿದ್ದವು. ಅಂದರೆ ಅವುಗಳ ಪರದೆ ಮತ್ತು ದೇಹದ ಗಾತ್ರಗಳ ಅನುಪಾತ 70-75% ಗಳಷ್ಟು ಮಾತ್ರ ಇರುತ್ತಿದ್ದವು. ಅದು ಸುಮಾರು ಎರಡು ವರ್ಷಗಳ ಹಿಂದಿನ ಮಾತು. ಆದರೆ ಏಸುಸ್‌ನವರು ತುಂಬ ಕಲಿತಿದ್ದಾರೆ. ಇತ್ತೀಚೆಗೆ ಬರುತ್ತಿರುವ ಏಸುಸ್ ಫೊನ್‌ಗಳು ಉತ್ತಮವಾದ ಪರದೆ-ದೇಹ ಅನುಪಾತವನ್ನು ಒಳಗೊಂಡಿವೆ. ಈ ಫೋನ್‌ನ ದೇಹ ಪ್ಲಾಸ್ಟಿಕ್ಕಿನದು. ಹಿಂಭಾಗ ಬಹಮಟ್ಟಿಗೆ ಚಿನ್ನದ ಬಣ್ಣದ್ದು. ಇದರಲ್ಲಿರುವುದು ತುಂಬ ಶಕ್ತಿಯ ಬ್ಯಾಟರಿ. ಆದರೂ ಈ ಫೋನಿನ ತೂಕ ಕೇವಲ 150 ಗ್ರಾಂ. ತುಂಬ ದೊಡ್ಡ ಬ್ಯಾಟರಿ ಇದ್ದೂ ಕಡಿಮೆ ತೂಕದ ಫೋನ್ ಎಂಬುದು ಈ ಫೋನಿನ ಪ್ರಧಾನ ಹೆಗ್ಗಳಿಕೆ ಎನ್ನಬಹುದು.

ಇದು ಅಂಚುರಹಿತ (bezelless) ಫೋನ್. ಆದರೆ ಪರದೆಯ ಕಚ್ಚು (notch) ಇಲ್ಲ. ಬೆರಳಚ್ಚು ಸ್ಕ್ಯಾನರ್ ಹಿಂದುಗಡೆ ಇದೆ. ಪ್ರಾಥಮಿಕ ಕ್ಯಾಮರ ಹಿಂದುಗಡೆ ಬಲಗಡೆ ಮೂಲೆಯಲ್ಲಿ ಇದೆ. ಅದರ ಕೆಳಗೆ ಫ್ಲಾಶ್ ಇದೆ. ಹಿಂಭಾಗದಲ್ಲಿ ಮಧ್ಯಭಾಗದಲ್ಲಿ ಸ್ವಲ್ಪ ಮೇಲುಗಡೆ ಬೆರಳಚ್ಚು ಸ್ಕ್ಯಾನರ್ ಇದೆ. ಫೋನ್ ಹಿಡಿದಾಗ ತೋರುಬೆರಳು ಸಹಜವಾಗಿ ಈ ಸ್ಕ್ಯಾನರ್ ಮೇಲೆ ಹೋಗುತ್ತದೆ. ಹಿಂಬದಿಯ ಕವಚ ಸ್ವಲ್ಪ ದೊರಗು ಎನ್ನಬಹುದು. ನಯವಾಗಿಯಂತೂ ಇಲ್ಲ. ಯುಎಸ್‌ಬಿ ಕಿಂಡಿ ಕೆಳಗಡೆ ಇದೆ. ಇದು ಯುಎಸ್‌ಬಿ-ಸಿ ಅಲ್ಲ. 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮೇಲುಗಡೆ ಇದೆ. ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳು ಬಲಗಡೆ, ಸಿಮ್ ಮತ್ತು ಮೆಮೊರಿ ಹಾಕುವ ಟ್ರೇ ಎಡಗಡೆ ಇವೆ. ಕಪ್ಪು ಮತ್ತು ಚಿನ್ನ ಎರಡು ಬಣ್ಣಗಳಲ್ಲಿ ಲಭ್ಯ.

ಕೆಲಸದ ವೇಗ

ಏಸುಸ್‌ನವರ ಫೋನ್‌ಗಳ ಬಗ್ಗೆ ಇದ್ದ ಇನ್ನೊಂದು ಆರೋಪವೆಂದರೆ ಹಲವು ಅನವಶ್ಯಕ ಕಿರುತಂತ್ರಾಂಶಗಳನ್ನು (ಆಪ್‌) ಮೊದಲೇ ಸೇರಿಸಿ ನೀಡುತ್ತಿದ್ದುದು. ಆದರೆ ಇತ್ತೀಚೆಗಿನ ಫೋನ್‌ಗಳಲ್ಲಿ ಈ ತೊಂದರೆ ಇಲ್ಲ. ಈ ಫೋನ್‌ನಲ್ಲೂ ಅಷ್ಟೆ. ಝೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1 ಫೋನಿನಲ್ಲಿದ್ದುದು ಶುದ್ಧ ಆಂಡ್ರೋಯಿಡ್. ಆದರೆ ಇದರಲ್ಲಿರುವುದು ಶುದ್ಧ ಆಂಡ್ರೋಯಿಡ್ ಅಲ್ಲ. ಇದು ಇನ್ನೂ ಆಂಡ್ರೋಯಿಡ್ 8.0ಯಲ್ಲೇ ಇದೆ. ಆಂಡ್ರೋಯಿಡ್ 9.0 ಕ್ಕೆ ಯಾವಾಗ ನವೀಕರಣ ನೀಡುತ್ತಾರೆ ಎಂಬುದು ಗೊತ್ತಿಲ್ಲ.

ಇದರಲ್ಲಿರುವುದು ಕಡಿಮೆ ದರ್ಜೆಯ ಪ್ರೋಸೆಸರ್. ಇದರ ಅಂಟುಟು ಬೆಂಚ್‌ಮಾರ್ಕ್ 54010 ಇದೆ. ಅಂದರೆ ಇದು ಕಡಿಮೆ ವೇಗದ ಫೋನ್ ಎನ್ನಬಹುದು. ಕಡಿಮೆ ಶಕ್ತಿಯನ್ನು ಬೇಡುವ ಆಟಗಳನ್ನು ಒಂದು ಮಟ್ಟಿಗೆ ತೃಪ್ತಿದಾಯಕವಗಿ ಆಡಬಹುದು. ಆದರೆ ಅತಿ ಶಕ್ತಿಯನ್ನು ಬೇಡುವ ಮೂರು ಆಯಾಮದ ಮೇಲ್ದರ್ಜೆಯ ಆಟಗಳನ್ನು ಆಡಲು ಈ ಫೋನ್ ಹೇಳಿದ್ದಲ್ಲ. ಫೋನ್ ಪ್ರಾರಂಭಿಸಿದಾಗ ಸ್ವಲ್ಪ ನಿಧಾನವಾಗಿ ತೆರೆದುಕೊಳ್ಳುತ್ತದೆ. ಕೆಲವು ಕಿರುತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡುವಾಗ ಕೆಲವು ಸಲ ಸ್ವಲ್ಪ ನಿಧಾನವಾಗಿ ಕೆಲಸ ಮಾಡುತ್ತದೆ.

ಪರದೆ ಹಾಗೂ ಆಡಿಯೋ

ವಿಡಿಯೋ ವೀಕ್ಷಣೆಯ ಅನುಭವ ತೃಪ್ತಿದಾಯಕವಾಗಿದೆ. ಇದು ಹೈಡೆಫಿನಿಶನ್ ವಿಡಿಯೋ ಪ್ಲೇ ಮಾಡುತ್ತದೆ. ಆದರೆ 4k ವಿಡಿಯೋ ಪ್ಲೇ ಸರಿಯಾಗಿ ಆಗುವುದಿಲ್ಲ. ತಡೆತಡೆದು ಪ್ಲೇ ಮಾಡುತ್ತದೆ. ಈ ಫೋನಿನ ಆಡಿಯೋ ಒಂದು ಮಟ್ಟಿಗೆ ತೃಪ್ತಿದಾಯಕವಾಗಿದೆ. ಅತಿ ಕಡಿಮೆ ಕಂಪನಾಂಕದ (bass) ಮತ್ತು ಅತಿ ಹೆಚ್ಚು ಕಂಪನಾಂಕದ (treble) ಧ್ವನಿಯ ಪುನರುತ್ಪತ್ತಿ ಸ್ವಲ್ಪ ಕಡಿಮೆ ಗುಣಮಟ್ಟದಲ್ಲಿದೆ. ಮಾನವ ಧ್ವನಿಯ ಪುನರುತ್ಪತ್ತಿ ಚೆನ್ನಾಗಿದೆ. ಫೋನಿನ ಜೊತೆ ಇಯರ್‌ಫೋನ್ ನೀಡಿಲ್ಲ. ಇದರಲ್ಲಿರುವ ಎಫ್‌ಎಂ ರೇಡಿಯೋದ ಗ್ರಾಹಕ ಶಕ್ತಿ ಚೆನ್ನಾಗಿದೆ. ಮನೆಯೊಳಗೆ ಎಲ್ಲ ಕೇಂದ್ರಗಳು ಸರಿಯಾಗಿ ಕೇಳಿಬರುತ್ತವೆ. ಸ್ಪೀಕರಿನ ಧ್ವನಿಯೂ ಪರವಾಗಿಲ್ಲ.

ಕ್ಯಾಮರ

ಇದರಲ್ಲಿರುವುದು 13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮರ. ಕ್ಯಾಮರದ ಗುಣಮಟ್ಟ ಅಂತಹ ಹೇಳಿಕೊಳ್ಳುವಂತೇನೂ ಇಲ್ಲ. ಜೊತೆಗೆ ಕ್ಯಾಮರದ ಕಿರುತಂತ್ರಾಂಶ (ಆಪ್) ಕೂಡ ಅಷ್ಟಕ್ಕಷ್ಟೆ. ಮ್ಯಾನ್ಯುವಲ್ ಆಯ್ಕೆ ಇಲ್ಲ. ಓಪನ್ ಕ್ಯಾಮರ ಕಿರುತಂತ್ರಾಂಶ ಹಾಕಿಕೊಂಡರೂ ಕ್ಯಾಮರದ ಯಂತ್ರಾಂಶದ ಬೆಂಬಲವಿಲ್ಲದ ಕಾರಣ ಮ್ಯಾನ್ಯುವಲ್ ಆಯ್ಕೆ ಬರುವುದಿಲ್ಲ. ಚೆನ್ನಾಗಿ ಬೆಳಕಿದ್ದಾಗ, ಹತ್ತಿರದ ವಸ್ತುಗಳನ್ನು ಉದಾಹರಣೆಗೆ ಹೂವುಗಳ ಫೋಟೋ, ಚೆನ್ನಾಗಿ ತೆಗೆಯುತ್ತದೆ. ಪ್ರಕೃತಿ ದೃಶ್ಯಗಳ ಫೋಟೋ ಚೆನ್ನಾಗಿ ಮೂಡಿಬರುತ್ತದೆ. ಅತಿ ಕಡಿಮೆ ಬೆಳಕಿನಲ್ಲಿ ಫೋಟೋ ಚೆನ್ನಾಗಿ ಮೂಡಿಬರುವುದಿಲ್ಲ. ವಿಡಿಯೋ ಚಿತ್ರೀಕರಣ ಅಷ್ಟಕ್ಕಷ್ಟೆ. ಯಾಕೆಂದರೆ ಇದರಲ್ಲಿ ಇಮೇಜ್ ಸ್ಟೆಬಿಲೈಸೇಶನ್ ಇಲ್ಲ. ಈ ಫೋನಿನ ಬೆಲೆಗೆ ಹೋಲಿಸಿದರೆ ಕ್ಯಾಮರ ತೃಪ್ತಿದಾಯಕ ಎಂದೇ ಹೇಳಬಹುದು.

ಬ್ಯಾಟರಿ

ಈ ಫೋನಿನ ಪ್ರಮುಖ ಹೆಚ್ಚುಗಾರಿಕೆಯಿರುವುದು ಇದರ ಬ್ಯಾಟರಿಯಲ್ಲಿ. 4000 mAh ಎಂದರೆ ಶಕ್ತಿಶಾಲಿ ಎನ್ನಬಹುದು. ಅವರದೇ ಚಾರ್ಜರ್ ಮತ್ತು ಕೇಬಲ್ ಬಳಸಿದರೆ ಸುಮಾರು ಎರಡೂವರೆ ಗಂಟಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಈ ಫೋನಿನಿಂದ ಇನ್ನೊಂದು ಸಾಧನಕ್ಕೆ ಯುಎಸ್‌ಬಿ ಓಟಿಜಿ ಕೇಬಲ್ ಬಳಸಿ ಚಾರ್ಜ್ ಮಾಡುವ ಸವಲತ್ತನ್ನೂ ನೀಡಿದ್ದಾರೆ.

ಅಂತಿಮ ತೀರ್ಮಾನ

ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ತೃಪ್ತಿದಾಯಕ ಫೋನ್ ಎನ್ನಬಹುದು.

-ಡಾ| ಯು.ಬಿ. ಪವನಜ

gadgetloka @ gmail . com

The post ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1 first appeared on Vishva Kannada.

ಗ್ಯಾಜೆಟ್ ಲೋಕ ೩೫೫ (ನವಂಬರ್ ೨೦, ೨೦೧೮) ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1

The post ಗ್ಯಾಜೆಟ್ ಲೋಕ ೩೫೫ (ನವಂಬರ್ ೨೦, ೨೦೧೮)  ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1 first appeared on Vishva Kannada.