Android | Vishva Kannada

5ಜಿ – ಅತಿ ವೇಗದ ಮೊಬೈಲ್ ಅಂತರಜಾಲ
ಅತ್ಯಂತ ಕ್ಲಿಷ್ಟವಾದ ಶಸ್ತ್ರಚಿಕಿತ್ಸೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಎಲ್ಲ ಅತ್ಯಾಧುನಿಕ ಸೌಲಭ್ಯಗಳು, ಪರಿಣತ ವೈದ್ಯರು ಎಲ್ಲ ಇದ್ದಾರೆ. ಶಸ್ತ್ರಚಿಕಿತ್ಸೆಯನ್ನು ಅಮೆರಿಕದಿಂದ ನುರಿತ ವೈದ್ಯರು ವಿಡಿಯೋ ಕಾನ್ಫೆರೆನ್ಸ್ ಮೂಲಕ ವೀಕ್ಷಿಸಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಅಲ್ಲಿಯ ವೈದ್ಯರ ಸಲಹೆಯಂತೆ ಒಂದು ಸೂಕ್ಷ್ಮ ಅಂಗವನ್ನು ಕತ್ತರಿಸಿ ಮುಂದಿನ ಹೆಜ್ಜೆಯ ಬಗ್ಗೆ ಅಮೆರಿಕದಿಂದ ಮಾರ್ಗದರ್ಶನಕ್ಕಾಗಿ ಕಾಯುತ್ತಿದ್ದಾರೆ. ಆಗ ಅಂತರಜಾಲ ಸಂಪರ್ಕ ನಿಧಾನವಾಗಿ ತಡೆತಡೆದು ಬರತೊಡಗುತ್ತದೆ. ಇಂತಹ ಸಂದರ್ಭಗಳು ಮುಂದೆ 5ಜಿ ಬಂದಾಗ ಆಗಲಾರದು.

ಅಕ್ಟೋಬರ್ 1 ರಂದು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಭಾರತದಲ್ಲಿ 5ಜಿ ಮೊಬೈಲ್ ಅಂತರಜಾಲ ಸಂಪರ್ಕ ತಂತ್ರಜ್ಞಾನವನ್ನು ಉದ್ಘಾಟಿಸಿದರು. ಈ ತಂತ್ರಜ್ಞಾನವು ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಲಿದೆ ಎಂದು ನರೇಂದ್ರ ಮೋದಿಯವರು ಹೇಳಿದರು. ಏನಿದು 5ಜಿ ಅಂದರೆ? ಈ ಸಂಚಿಕೆಯಲ್ಲಿ ಅದರ ಬಗ್ಗೆ ಸ್ಥೂಲವಾಗಿ ತಿಳಿದುಕೊಳ್ಳೋಣ.

5ಜಿ (G=generation) ಅಂದರೆ ಐದನೇ ತಲೆಮಾರಿನ ತಂತ್ರಜ್ಞಾನ ಎಂದು ಅರ್ಥ. ಐದನೇ ತಲೆಮಾರು ಬರುವ ಮೊದಲು 1ನೆ, 2ನೆ, 3ನೇ ಮತ್ತು 4ನೇ ತಲೆಮಾರುಗಳು ಇದ್ದಿರಬೇಕಲ್ಲವೇ? ಹೌದು. ಅವುಗಳು ಕ್ರಮವಾಗಿ, 1G, 2G, 3G ಮತ್ತು 4G ತಂತ್ರಜ್ಞಾನಗಳು. ಇವು ಮೊಬೈಲ್ ಫೋನ್ ಕ್ಷೇತ್ರದಲ್ಲಿ ತಂತ್ರಜ್ಞಾನವು ಹಾದು ಬಂದ ಮಜಲುಗಳು ಎನ್ನಬಹುದು. ಅದನ್ನು ಕೋಷ್ಟಕ ರೂಪದಲ್ಲಿ ನೀಡಲಾಗಿದೆ-

ತಂತ್ರಜ್ಞಾನದ ಮಜಲು

ವರ್ಷ

ತಂತ್ರಜ್ಞಾನದ ವೈಶಿಷ್ಟ್ಯ

1G

1980

ಅನಲಾಗ್ ಧ್ವನಿ

2G

1990

ಡಿಜಿಟಲ್ ಧ್ವನಿ

3G

2000

ಮೊಬೈಲ್ ಡಾಟಾ

4G

2010

ಮೊಬೈಲ್ ಬ್ರಾಡ್‌ಬ್ಯಾಂಡ್

5G

2016

ಅತಿ ವೇಗದ ಅಂತರಜಾಲ ಸಂಪರ್ಕ

ಇವು ತಂತ್ರಜ್ಞಾನವು ಜಾಗತಿಕವಾಗಿ ಬಂದ ವರ್ಷ. ಭಾರತಕ್ಕೆ ಬಂದ ವರ್ಷಗಳಲ್ಲ.

5ಜಿ ಯಲ್ಲಿ 11 ಬ್ಯಾಂಡ್‌ಗಳಿವೆ. ಭಾರತದಲ್ಲಿ ಎಲ್ಲ ಮೊಬೈಲ್ ಸೇವೆ ನೀಡುವವರು ಎಲ್ಲ ಬ್ಯಾಂಡ್‌ಗಳಲ್ಲಿ 5ಜಿ ನೀಡುತ್ತಾರೆಂದಿಲ್ಲ. ಈಗಿನ ಮಾಹಿತಿಯಂತೆ ಜಿಯೋ 8, ಏರ್‌ಟೆಲ್ 5 ಮತ್ತು ವೊಡಾಫೋನ್ 5 ಬ್ಯಾಂಡ್‌ಗಳಲ್ಲಿ 5ಜಿ ಸೇವೆಗಳನ್ನು ನೀಡುತ್ತಾರೆ-

ಜಿಯೋ – 700 MHz, 800 MHz, 900 MHz, 1800 MHz, 2100 MHz, 2500 MHz, 3300 MHz ಮತ್ತು 26 GHz

ಏರ್‌ಟೆಲ್ – 900 MHz, 1800 MHz, 2100 MHz, 3300 MHz ಮತ್ತು 26 GHz

ವಿಐ – 1800 MHz, 2100 MHz, 2500 MHz, 3300 MHz and 26 GHz

ಸದ್ಯಕ್ಕೆ ಭಾರತದ ಕೆಲವೇ ಪ್ರಮುಖ ನಗರಗಳಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಗಿದೆ. ಆಯಾ ನಗರದಲ್ಲೂ ಕೆಲವು ಆಯ್ದ ಸ್ಥಳಗಳಲ್ಲಿ ಮಾತ್ರ ಈ ಸೇವೆ ಲಭ್ಯವಿದೆ.

5ಜಿ ಸಂಪರ್ಕವು ಅತಿ ವೇಗದ ಅಂತರಜಾಲ ಸಂಪರ್ಕವನ್ನು ಸಾಧ್ಯವಾಗಿಸುತ್ತದೆ. 4ಜಿ ಸಂಪರ್ಕಕ್ಕೆ ಹೋಲಿಸಿದರೆ ಅದು 10 ರಿಂದ 100 ಪಟ್ಟು ಹೆಚ್ಚಿನ ವೇಗವನ್ನು ಸಾಧಿಸಬಲ್ಲುದು. 4ಜಿ ಸಂಪರ್ಕದಲ್ಲಿ ಒಂದು ದೊಡ್ಡ ಗಾತ್ರದ ಫೈಲು ಡೌನ್‌ಲೋಡ್ ಆಗಲು ಸುಮಾರು 10 ಸೆಕೆಂಡು ಬೇಕಿದ್ದಲ್ಲಿ ಅದೇ ಫೈಲು 5 ಜಿ ಸಂಪರ್ಕದಲ್ಲಿ ಕೇವಲ 1 ಸೆಕೆಂಡಿನಲ್ಲಿ ಡೌನ್‌ಲೋಡ್ ಆಗಬಲ್ಲುದು. ಇದರಿಂದಾಗಿ ಹಲವು ಪ್ರಯೋಜನಗಳಾಗಲಿವೆ. ಮೊದಲನೆಯದಾಗಿ ಅಂತರಜಾಲದ ಮೂಲಕ ವಿಡಿಯೋ ನೋಡುವವರಿಗೆ ಉತ್ತಮ ಗುಣಮಟ್ಟದ ವಿಡಿಯೋ ವೀಕ್ಷಣೆಯನ್ನು ಸರಾಗವಾಗಿ ಮಾಡಬಹುದು. ಒಂದು ಸಿನಿಮಾವನ್ನು ಅಂತರಜಾಲದಲ್ಲಿ ಆಪ್‌ಗಳ ಮೂಲಕ ನೋಡುವವರಿಗೆ ಈ ಅನುಭವವಾಗಿರಬಹುದು.  ಹೈಡೆಫಿನಿಶನ್ ಎಂದು ಆಯ್ಕೆ ಮಾಡಿಕೊಂಡರೆ ಹಲವು ಸಲ ಸಿನಿಮಾವನ್ನು ಸರಾಗವಾಗಿ ನೋಡಲು ಆಗುವುದೇ ಇಲ್ಲ. ಅಗಾಗ ಅದು ನಿಲ್ಲುತ್ತದೆ. ಇದಕ್ಕೆ ಬಫರಿಂಗ್ ಎನ್ನುತ್ತಾರೆ. ಸಾಮಾನ್ಯವಾಗಿ ನಾವು ಅಂತಹ ಸಂದರ್ಭಗಳಲ್ಲಿ ಕಡಿಮೆ ಗುಣಮಟ್ಟಕ್ಕೆ ಆಯ್ಕೆಯನ್ನು ಬದಲಾಯಿಸಿಕೊಳ್ಳುತ್ತೇವೆ. 5ಜಿ ಬಂದಾಗ ಈ ಸಮಸ್ಯೆ ಇರುವುದಿಲ್ಲ. ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೋಗಳನ್ನು ಕೂಡ ಯಾವುದೇ ತಡೆಯಿಲ್ಲದೆ (ಬಫರಿಂಗ್ ಇಲ್ಲದೆ) ಅಂತರಜಾಲದಿಂದ ವೀಕ್ಷಿಸಬಹುದು.

ಅಂತರಜಾಲ ಸಂಪರ್ಕದಲ್ಲಿ ವೇಗ ಮಾತ್ರವಲ್ಲ. ಲಾಟೆನ್ಸ್ ಎಂಬ ಇನ್ನೊಂದು ಗುಣವೈಶಿಷ್ಟ್ಯವಿದೆ. ಒಂದು ಜಾಲತಾಣ ವೀಕ್ಷಣೆ, ಫೈಲು ಡೌನ್‌ಲೋಡ್, ಸ್ಟ್ರೀಮಿಂಗ್ ವಿಡಿಯೋದ ಪ್ರಾರಂಭವು ಕೂಡಲೇ ಆಗದೆ, ಒಂದು ಚಿಕ್ಕ ಸಮಯ ಕಳೆದ ನಂತರ ಪ್ರಾರಂಭವಾಗುವುದನ್ನು ಗಮನಿಸಿರಬಹುದು. ಇದನ್ನೇ ಲಾಟೆನ್ಸ್ ಎನ್ನುತ್ತಾರೆ. 4ಜಿ ಸಂಪರ್ಕದಲ್ಲಿ ಇದು ಸಾಮಾನ್ಯವಾಗಿ 20 ಮಿಲ್ಲಿ ಸೆಕೆಂಡಿನಿಂದ 100 ಮಿ.ಸೆ. ಕೂಡ ಇರಬಹುದು. ವಿಡಿಯೋ ಕಾಫೆರೆನ್ಸ್‌ಗಳಲ್ಲಿ ಈ ಲಾಟೆನ್ಸ್ ಕಡಿಮೆ ಇದ್ದಷ್ಟೂ ಉತ್ತಮ. ಇಲ್ಲವಾದಲ್ಲಿ ಮಾತನಾಡುತ್ತಿದ್ದಾಗ ವಿಡಿಯೋ ಅಲ್ಲಲ್ಲಿ ಸ್ವಲ್ಪ ಕಾಲ ನಿಲ್ಲುತ್ತದೆ. ಈ ನಿಲ್ಲುವ ಸಮಯ ಒಂದು ಸೆಕೆಂಡಿಗಿಂತಲೂ ಕಡಿಮೆ ಇರಬಹುದು. ಆದರೂ ಕೆಲವು ಸಂದರ್ಭಗಳಲ್ಲಿ ಸೆಕೆಂಡು ಮಾತ್ರವಲ್ಲ ಮಿಲ್ಲಿ ಸೆಕೆಂಡು ಕೂಡ ಮುಖ್ಯವಾಗುತ್ತದೆ. 3ಜಿಯಲ್ಲಿ ಇನ್ನೂ ಜಾಸ್ತಿ ಇರುತ್ತದೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ರೋಗಿಗೆ ಶಸ್ತ್ರ ಚಿಕಿತ್ಸೆ ನಡೆಯುತ್ತಿದೆ. ಅಮೆರಿಕದಿಂದ ಕೆಲವು ಪರಿಣತ ವೈದ್ಯರು ವಿಡಿಯೋ ಮೂಲಕ ಶಸ್ತ್ರಚಿಕಿತ್ಸೆಯನ್ನು ವೀಕ್ಷಿಸುತ್ತಾ ಅಲ್ಲಿಂದ ಮಾರ್ಗದರ್ಶನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಡಿಯೋ ಮಿಲ್ಲಿಸೆಕೆಂಡಿನಷ್ಟು ಕಾಲವೂ ನಿಲ್ಲಬಾರದು. ಇದು ಒಂದು ಉದಾಹರಣೆ ಮಾತ್ರ. ಇಂತಹ ಹಲವು ಉದಾಹರಣೆಗಳಿವೆ.

5ಜಿ ತಂತ್ರಜ್ಞಾನವು ಭಾರತಕ್ಕೆ ಹಲವು ರೀತಿಯಲ್ಲಿ ವರದಾನವಾಗಲಿದೆ. ಕೆಲವು ಪ್ರಮುಖ ಸಂದರ್ಭಗಳನ್ನು ನೋಡೋಣ. ವಸ್ತುಗಳ ಅಂತರಜಾಲ (IoT = Internet of Things) ಕ್ಷೇತ್ರದಲ್ಲಿ ಗಣನೀಯ ಸುಧಾರಣೆ ಆಗಲಿದೆ. ಕೃಷಿ ಕ್ಷೇತ್ರದಲ್ಲಿ ಅತಿ ವೇಗದ ಅಂತರಜಾಲ ಮತ್ತು ಕಡಿಮೆ ಲಾಟೆನ್ಸ್‌ನಿಂದಾಗಿ ಲಾಭವಾಗಲಿದೆ. ಆರೋಗ್ಯ ಕ್ಷೇತ್ರದ ಒಂದು ಉದಾಹರಣೆಯನ್ನು ಈಗಾಗಲೇ ನೀಡಲಾಗಿದೆ. ಶಿಕ್ಷಣದ ವಿಷಯಕ್ಕೆ ಬಂದರೆ ಉತ್ತಮ ಗುಣಮಟ್ಟದ ವಿಡಿಯೋ ವೀಕ್ಷಣೆಯ ಸೌಲಭ್ಯದಿಂದಾಗಿ ಆನ್‌ಲೈನ್ ತರಗತಿಗಳಿಗೆ ತುಂಬ ಪ್ರಯೋಜನವಾಗಲಿದೆ. ಸಾರಿಗೆ ನಿಯಂತ್ರಣವನ್ನು ನಿಜಸಮಯದಲ್ಲಿ ಉತ್ತಮವಾಗಿ ಮಾಡಬಹುದು.  Accutane Uk

ಎಲ್ಲರಿಗೂ ಈ 5ಜಿ ಸೌಲಭ್ಯ ದೊರಕಲಿದೆಯೇ ಎಂದು ಕೇಳಿದರೆ ಸದ್ಯಕ್ಕೆ ಇಲ್ಲ ಎಂಬುದೇ ಉತ್ತರ. ಎಲ್ಲರಿಗೂ ಲಭ್ಯವಾಗಲು ಬಹುಶಃ ಒಂದರಿಂದ ಎರಡು ವರ್ಷಗಳೇ ಬೇಕಾಗಬಹುದು. ಈಗಾಗಲೇ ಸ್ಮಾರ್ಟ್‌ಫೋನ್ ಇರುವವರು 5ಜಿ ಪಡೆಯಲು ಏನು ಮಾಡಬೇಕು? ನಿಮ್ಮ ಫೋನಿನಲ್ಲಿ 5ಜಿ ಸೌಲಭ್ಯ ಇದೆಯಾದಲ್ಲಿ ಅದನ್ನು ಚಾಲನೆ ಮಾಡಿಕೊಂಡರೆ ಸಾಕು. ನಿಮ್ಮ ಸ್ಥಳದಲ್ಲಿ 5ಜಿ ಸೇವೆ ಬಂದಾಗ ತಾನಾಗಿಯೇ ನಿಮಗೆ ಲಭ್ಯವಾಗುವುದು. ನಿಮ್ಮದು ಹಳೆಯ 5ಜಿ ಸೌಲಭ್ಯವಿಲ್ಲದ ಫೋನಾದರೆ ಹೊಸ ಫೋನ್ ಕೊಳ್ಳುವುದೇ ಪರಿಹಾರ. ಅಂತಹ ಫೋನ್‌ಗಳಿಗೆ ಸಾಫ್ಟ್‌ವೇರ್ ನವೀಕರಣ ಮೂಲಕ 5ಜಿ ಪಡೆಯಲು ಸಾಧ್ಯವಿಲ್ಲ.

–ಡಾ| ಯು.ಬಿ. ಪವನಜ

gadgetloka @ gmail . com

ದಿ : 01-10-2022

The post 5ಜಿ – ಅತಿ ವೇಗದ ಮೊಬೈಲ್ ಅಂತರಜಾಲ first appeared on Vishva Kannada.

ರಷ್ಯಾದ ಗೂಬೆ ಬರುತ್ತಿದೆ ಎಚ್ಚರಿಕೆ
ಪೋಕರಿ ತಂತ್ರಾಂಶದ ಹೊಸ ರೂಪ

ನೀವು ನಿಮ್ಮ ಆಂಡ್ರೋಯಿಡ್ ಮೊಬೈಲ್ ಫೋನ್ ಬಳಸಿ ಬ್ಯಾಂಕ್ ವ್ಯವಹಾರ ಮಾಡುವವರಾ? ಹಾಗಿದ್ದರೆ ನೀವು ಎಚ್ಚರವಾಗಿರಬೇಕು. ಸೋವಾ (SOVA) ಹೆಸರಿನ ಪೋಕರಿ ತಂತ್ರಾಂಶವೊಂದು (malware) ಭಾರತದಲ್ಲಿ ಆಂಡ್ರೋಯಿಡ್ ಫೋನ್ ಬಳಸುವವರನ್ನು ಗುರಿಯಾಗಿರಿಸಿ ಧಾಳಿ ಮಾಡಲು ಬರುತ್ತಿದೆ. ಸೋವಾ ಎಂದರೆ ರಷ್ಯನ್ ಭಾಷೆಯಲ್ಲಿ ಗೂಬೆ ಎಂದರ್ಥ. ಆದರೆ ಈ ಪೋಕರಿ ತಂತ್ರಾಂಶ ರಷ್ಯಾದಿಂದ ಬರುತ್ತಿಲ್ಲ. ಅಥವಾ ಅದು ಅಲ್ಲಿಂದ ಬರುತ್ತಿದೆ ಎಂದು ಸಿದ್ಧವಾಗಿಲ್ಲ. ಬಹುತೇಕ ಕೆಟ್ಟ ತಂತ್ರಾಂಶಗಳಂತೆ ಇದೂ ಚೈನಾ ದೇಶದಲ್ಲಿ ಹುಟ್ಟಿದ್ದಿರಲೂಬಹುದು. ಏನು ಈ ಪೋಕರಿ ತಂತ್ರಾಂಶ? ಅದು ಏನು ಮಾಡುತ್ತದೆ? ಈ ಸಂಚಿಕೆಯಲ್ಲಿ ಅದರ ಬಗ್ಗೆ ತಿಳಿದುಕೊಳ್ಳೋಣ.

ಸೋವಾ ಒಂದು ಟ್ರೋಜನ್ ತಂತ್ರಾಂಶ. ಏನು ಹಾಗಂದರೆ? ಈ ಹೆಸರಿನ ಮೂಲ ಗ್ರೀಕರು ಟ್ರೋಯ್ ನಗರವನ್ನು ಗೆದ್ದ ಟ್ರೋಜನ್ ಕುದುರೆಯಲ್ಲಿದೆ. ಟ್ರೋಯ್ ನಗರವನ್ನು ಎಷ್ಟೇ ಯುದ್ಧ ಮಾಡಿದರೂ ಗ್ರೀಕರಿಗೆ ಗೆಲ್ಲಲು ಆಗಲಿಲ್ಲ. ಕೊನೆಗೆ ಸೋತು ಹಿಂತೆಗೆವವರಂತೆ ನಟಿಸಿ ಒಂದು ದೊಡ್ಡ ಮರದ ಕುದುರೆಯನ್ನು ಗೆಲುವಿನ ಸಂಕೇತವಾಗಿ ನಗರದೊಳಕ್ಕೆ ಕಳುಹಿದರು. ಆ ಕುದರೆಯೊಳಗೆ ಕೆಲವು ಆಯ್ದ ಯೋಧರಿದ್ದರು. ಅವರು ರಾತ್ರಿ ಹೊತ್ತಿನಲ್ಲಿ ನಗರದ ಕೋಟೆ ಬಾಗಿಲನ್ನು ತೆರೆದು ಇತರೆ ಸೈನಿಕರನ್ನು ಒಳ ಸೇರಿಸಿ ಅಂತಿಮವಾಗಿ ಗ್ರೀಕರು ಯುದ್ಧವನ್ನು ಗೆದ್ದರು.

ಟ್ರೋಜನ್ ತಂತ್ರಾಂಶವು ಬಹುಮಟ್ಟಿಗೆ ಇದೇ ರೀತಿ ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ಇಮೈಲ್ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಇದನ್ನು ಆಹ್ವಾನಿಸುತ್ತಾರೆ ಅಥವಾ ಅದು ಆಹ್ವಾನಗೊಳ್ಳುತ್ತದೆ. ಉದಾಹರಣೆಗೆ ಇಮೈಲ್‌ಗೆ ಒಂದು ಲಗತ್ತು ಇರುತ್ತದೆ. ಅದನ್ನು ತೆರೆದರೆ ಈ ಪೋಕರಿ ತಂತ್ರಾಂಶವು ನಿಮ್ಮ ಗಣಕದೊಳಗೆ ಪ್ರವೇಶಿಸುತ್ತದೆ. ಇನ್ನೊಂದು ನಮೂನೆಯಲ್ಲಿ ನೀವು ಸಾಮಾಜಿಕ ಮಾಧ್ಯಮದಲ್ಲಿ (ಉದಾ – ಫೇಸ್‌ಬುಕ್) ಯಾವುದೋ ಒಂದು ಕೊಂಡಿಯನ್ನು ಒತ್ತುತ್ತೀರಿ. ಆಗ ಒಂದು ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಏನೇನೋ ಮಾಹಿತಿ ನೀಡಿ ನಂತರ ಯಾವುದೋ ಗುಂಡಿ ಒತ್ತಿದಾಗ ಆ ಪೋಕರಿ ತಂತ್ರಾಂಶವು ನಿಮ್ಮ ಗಣಕ ಅಥವಾ ಮೊಬೈಲನ್ನು ಪ್ರವೇಶಿಸುತ್ತದೆ. ಹಾಗೆ ಬಂದ ಕೂಡಲೆ ಅದು ನಿಮ್ಮ ಗಣಕ ಅಥವಾ ಮೊಬೈಲನ್ನು ಇತರೆ ವೈರಸ್‌ಗಳಂತೆ ಕೆಡಿಸುವುದಿಲ್ಲ. ಬದಲಿಗೆ  ಅದು ತನ್ನ ಒಡೆಯನಿಂದ ಅಪ್ಪಣೆಗಾಗಿ ಕಾಯುತ್ತಿರುತ್ತದೆ. ಸಾಮಾನ್ಯವಾಗಿ ಬಹುತೇಕ ಟ್ರೋಜನ್‌ಗಳು ಪಾಸ್‌ವರ್ಡ್ ಕದಿಯುವವಾಗಿರುತ್ತವೆ.

ಈಗ ಬರುತ್ತಿರುವ ಸೋವಾ ಕೂಡ ಒಂದು ಟ್ರೋಜನ್. ಅದು ಆಂಡ್ರೋಯಿಡ್ ಫೋನ್‌ಗಳಿಗೆ ಪ್ರವೇಶೀಸುತ್ತದೆ. ಪ್ರಮುಖವಾಗಿ ಬ್ಯಾಂಕಿಂಗ್ ಮಾಡುವವರನ್ನು ಅದು ತನ್ನ ಗುರಿಯನ್ನಾಗಿಸಿದೆ. ಮೊಬೈಲ್ ಮೂಲಕ ಬ್ಯಾಂಕಿಂಗ್ ಮಾಡುವಾಗ ಲಾಗಿನ್ ಹೆಸರು, ಪಾಸ್‌ವರ್ಡ್ ನೀಡಬೇಕು. ಈ ಟ್ರೋಜನ್ ತಂತ್ರಾಂಶವು ಅದನ್ನು ಕದ್ದು ತನ್ನನ್ನು ತಯಾರಿಸಿದವರಿಗೆ ಅಂತರಜಾಲದ ಮೂಲಕ ರವಾನಿಸುತ್ತದೆ. ನಂತರ ಒಂದು ದಿನ ಬ್ಯಾಂಕಿನಿಂದ ಹಣ ಕಳವಾಗಿರುತ್ತದೆ. ಮಾರ್ಚ್ 2022 ಮೊದಲು ಬಂದ ಸೋವಾ ಟ್ರೋಜನ್ ತಂತ್ರಾಂಶವು ಅಮೆರಿಕ, ರಷ್ಯಾ, ಸ್ಪೈನ್ ಮತ್ತು ಇತರೆ ಯುರೋಪಿನ ದೇಶಗಳನ್ನು ಗುರಿಯಾಗಿಸಿತ್ತು. ಜುಲೈ ತಿಂಗಳಲ್ಲಿ ಅದರ ಹೊಸ ಆವೃತ್ತಿ ಬಂತು. ಸಪ್ಟೆಂಬರ್ ತಿಂಗಳಲ್ಲಿ ಅದು ಭಾರತವನ್ನು ಗುರಿಯನ್ನಾಗಿಸಿದೆ ಎಂದು ಸಂಶೋಧಕರಿಗೆ ತಿಳಿದುಬಂತು. ಭಾರತ ಸರಕಾರವು ಆಂಡ್ರೋಯಿಡ್ ಮೊಬೈಲ್ ಫೋನ್ ಮೂಲಕ ಬ್ಯಾಂಕಿಂಗ್ ಮಾಡುವ ಎಲ್ಲರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದೆ.

ಈ ಸೋವಾ ಟ್ರೋಜನ್ ಪೋಕರಿ ತಂತ್ರಾಂಶವು ತುಂಬ ಅಪಾಯಕಾರಿ. ಒಮ್ಮೆ ಬಂದರೆ ಅದನ್ನು ಅಳಿಸಲು ಆಗುವುದಿಲ್ಲ. ಫೋನಿನಲ್ಲಿರುವ ಎಲ್ಲ ಮಾಹಿತಿಗಳನ್ನು ಗೂಢಲಿಪೀಕರಿಸುವ ತಾಕತ್ತು ಅದಕ್ಕಿದೆ. ಒಮ್ಮೆ ಹಾಗೆ ಮಾಡಿದರೆ ಅದನ್ನು ವಾಪಸು ಪಡೆಯಬೇಕಿದ್ದರೆ ತಂತ್ರಾಂಶವನ್ನು ತಯಾರಿಸಿದವರಿಂದ ಮಾತ್ರ ಸಾಧ್ಯ. ಅಂತಹ ಸಂದರ್ಭದಲ್ಲಿ ಅವರು ಸಾಮಾನ್ಯವಾಗಿ ಇಂತಿಷ್ಟು ಹಣ ನೀಡು ಎಂದು ಬ್ಲ್ಯಾಕ್‌ಮೈಲ್ ಮಾಡುತ್ತಾರೆ. ಅಗತ್ಯ ಮತ್ತು ಸೂಕ್ಷ್ಮ ಮಾಹಿತಿಗಳನ್ನು ಈ ರೀತಿ ಕಳಕೊಳ್ಳುವ ಸಾಧ್ಯತೆಯಿದ್ದಾಗ ಅವರು ಹೇಳಿದಷ್ಟು ಹಣ ನೀಡಿದವರಿದ್ದಾರೆ. ಇಂತಹ ಕಳ್ಳರು ನೇರವಾಗಿ ಹಣ ಕೇಳುವುದಿಲ್ಲ. ಬದಲಿಗೆ ಗೂಢನಾಣ್ಯ (ಉದಾ – ಬಿಟ್‌ಕಾಯಿನ್) ಮೂಲಕ ಹಣ ಕೇಳುತ್ತಾರೆ.

ಈ ಪೋಕರಿ ತಂತ್ರಾಂಶವು ಹೆಚ್ಚಾಗಿ ಬಳಕೆಯಲ್ಲಿರುವ ಕ್ರೋಮ್ ಅಥವಾ ಅದೇ ರೀತಿಯ ತಂತ್ರಾಂಶಗಳ ಹಾಗೂ ಜನಪ್ರಿಯ ಬ್ಯಾಂಕಿಂಗ್ ತಂತ್ರಾಂಶಗಳ ರೂಪ ಮತ್ತು ಲಾಂಛನವನ್ನು ಬಳಸುತ್ತವೆ. ನನ್ನನ್ನು ಇನ್‌ಸ್ಟಾಲ್ ಮಾಡು ಎಂದು ಹೇಳುತ್ತದೆ. ಬಳಕೆದಾರರು ಇದು ನಿರುಪದ್ರವಿ, ನಂಬಿಕಸ್ತ, ಕ್ರೋಮ್ ಅಥವಾ ಬ್ಯಾಂಕಿಂಗ್ ತಂತ್ರಾಂಶ ಎಂದು ನಂಬಿ ಅದನ್ನು ಇನ್‌ಸ್ಟಾಲ್ ಮಾಡುತ್ತಾರೆ. ನಂತರ ಪೋಕರಿ ತಂತ್ರಾಂಶವು ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಳ್ಳುತ್ತದೆ.

ಈ ಪೋಕರಿ ತಂತ್ರಾಂಶವು ಒಮ್ಮೆ ಪ್ರವೇಶಿಸಿದರೆ ತಂತ್ರಾಂಶಗಳ ಇನ್‌ಸ್ಟಾಲ್ ಮತ್ತು ಅನ್‌ಇನ್‌ಸ್ಟಾಲ್‌ಗಳನ್ನು ಮಾಡುವ ತಂತ್ರಾಂಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಈ ತಂತ್ರಾಂಶವು ಇದೆ ಎಂದು ಗೊತ್ತಾಗಿ ಅದನ್ನು ಅಳಿಸಲು ಅಂದರೆ ಅನ್‌ಇನ್‌ಸ್ಟಾಲ್ ಮಾಡಲು ಹೋದರೆ ಅದು ಬಿಡುವುದಿಲ್ಲ. ಈ ತಂತ್ರಾಂಶವನ್ನು ಅಳಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ತೋರಿಸುತ್ತದೆ.

ಇದರಿಂದ ಬಚಾವಾಗುವುದು ಹೇಗೆ? ಅಧಿಕೃತ ಗೂಗ್ಲ್ ಪ್ಲೇ ಸ್ಟೋರ್ ಹೊರತುಪಡಿಸಿ ಬೇರೆ ಎಲ್ಲಿಂದಲೂ ಯಾವುದೇ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಬಾರದು. ಕೆಲವೊಮ್ಮೆ ತಂತ್ರಾಂಶವು ಇಮೈಲ್ ಅಥವಾ ವಾಟ್ಸ್‌ಆಪ್ ಮೂಲಕ ಬಂದಿರುತ್ತದೆ. ಆಗ ಅದನ್ನು ಇನ್‌ಸ್ಟಾಲ್ ಮಾಡಲು ನಂಬಿಕೆಗೆ ಅನರ್ಹವಾದ ಆಕರಗಳಿಂದ ಬಂದ ತಂತ್ರಾಂಶವನ್ನೂ ಇನ್‌ಸ್ಟಾಲ್ ಮಾಡು ಎಂಬ ಅಯ್ಕೆಯನ್ನು ಮಾಡಬೇಕಾಗುತ್ತದೆ. ಹೀಗೆ ಮಾಡಿದರೆ ಅದು ಇನ್‌ಸ್ಟಾಲ್ ಅಗುತ್ತದೆ. ಆದುದರಿಂದ ಪ್ಲೇ ಸ್ಟೋರಿನಿಂದ ಮಾತ್ರವೇ ಇನ್‌ಸ್ಟಾಲ್ ಮಾಡಬೇಕು. ಫೋನ್ ಕಂಪೆನಿಯವರು ಸಮಯ ಸಮಯಕ್ಕೆ ನೀಡುವ ನವೀಕರಣವನ್ನು ತಪ್ಪದೇ ಮಾಡುತ್ತಿರಬೇಕು.

–ಡಾ| ಯು.ಬಿ. ಪವನಜ

gadgetloka @ gmail . com

ದಿ : 17-09-2022

The post ರಷ್ಯಾದ ಗೂಬೆ ಬರುತ್ತಿದೆ ಎಚ್ಚರಿಕೆ first appeared on Vishva Kannada.

ವಿವೊ ವಿ19 ಕ್ಯಾಮೆರ
ಸ್ವಂತೀಪ್ರಿಯರಿಗೆ ಇನ್ನೊಂದು ಕ್ಯಾಮೆರ ಫೋನ್

ವಿವೊದವರ ವಿ ಶ್ರೇಣಿಯ ಫೋನ್‌ಗಳು ಫೋನ್ ಎನ್ನುವುದಕ್ಕಿಂತಲೂ ಕ್ಯಾಮೆರಗಳು ಎನ್ನುವುದೇ ಹೆಚ್ಚು ಸೂಕ್ತ. ಇವುಗಳಿಗೆ ಫೋನಿನ ಜೊತೆ ಕ್ಯಾಮೆರ ಎನ್ನುವುದಕ್ಕಿಂತ ಅಥವಾ ಕ್ಯಾಮೆರ ಜೊತೆ ಫೋನ್ ಎನ್ನಬಹುದು. ಗ್ಯಾಜೆಟ್‌ಲೋಕದಲ್ಲಿ ಹಲವು ವಿವೊ ಫೋನ್‌ಗಳ ವಿಮರ್ಶೆ ಮಾಡಲಾಗಿತ್ತು. ಈ ಸಂಚಿಕೆಯಲ್ಲಿ ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ವಿವೊ ವಿ19 ಫೋನಿನ ಕ್ಯಾಮೆರ ಕಡೆ ಗಮನ ಹರಿಸೋಣ.

ಗುಣವೈಶಿಷ್ಟ್ಯಗಳು

ಪ್ರಾಥಮಿಕ : 48MP+8MP+2MP+2MP (MP = ಮೆಗಾಪಿಕ್ಸೆಲ್),  f/1.79 + f/2.2 (wide-angle) + f/2.4 (bokeh) + f/2.4 (macro), ಫ್ಲಾಶ್

ಸ್ವಂತೀ (selfie) : 32MP+8MP, f/2.08 + f/2.28

ಹಲವು ಆಯ್ಕೆಗಳು: ಸಾಮಾನ್ಯ ಫೋಟೋ, ವಿಡಿಯೋ, ನಿಧಾನ ವಿಡಿಯೋ, ಸೂಪರ್ ಮ್ಯಾಕ್ರೊ, ರಾತ್ರಿ, ಅಲುಗಾಡದ ವಿಡಿಯೋ, ವ್ಯಕ್ತಿ ಚಿತ್ರ, ಇತ್ಯಾದಿ.

ಈಗಾಗಲೇ ತಿಳಿಸಿದಂತೆ ಈ ಫೋನ್ ಮುಖ್ಯವಾಗಿ ಕ್ಯಾಮೆರ ಫೋನ್. ಇದನ್ನು ಉತ್ತಮ ವೇಗದ ಅಥವಾ ಕೆಲಸದ ಫೋನ್ ಎಂದು ಕೊಳ್ಳುವ ಸಾಧ್ಯತೆಗಳು ಕಡಿಮೆ. ಉತ್ತಮ ಕ್ಯಾಮೆರ ಫೋನ್ ಬೇಕು ಎನ್ನುವವರು ಅದರಲ್ಲೂ ಉತ್ತಮ ಸ್ವಂತೀ ಕ್ಯಾಮೆರ ಫೋನ್ ಬೇಕೆನ್ನುವವರು ಇದನ್ನು ಕೊಳ್ಳುವ ಆಲೋಚನೆ ಮಾಡಬಹುದು.

ಸ್ವಂತೀಗೆ ಎರಡು ಕ್ಯಾಮೆರ ಇರುವ ಕೆಲವೇ ಫೋನ್‌ಗಳಲ್ಲಿ ಇದೂ ಒಂದು. ಆದರೆ ಸ್ವಂತೀಗೆಂದೇ ಪ್ರತ್ಯೇಕ ಫ್ಲಾಶ್ ಇಲ್ಲ. ಇದರಲ್ಲಿ ಸ್ವಂತೀಗೆ ಹಲವಾರು ಆಯ್ಕೆಗಳಿವೆ. ಕೆಲವನ್ನು ಪಟ್ಟಿ ಮಾಡುವುದಾದರೆ – ಮುಖವನ್ನು ಸುಂದರ ಮಾಡುವುದು, ಮುಖ, ಕಿವಿ, ಮೂಗನ್ನು ಉದ್ದ ಅಥವಾ ಅಗಲ ಮಾಡುವುದು, ಚರ್ಮದ ಬಣ್ಣ ಬದಲಾವಣೆ, ಒಬ್ಬ ಅಥವ ಇಬ್ಬರಿದ್ದೀರಿ ಎಂಬ ಆಯ್ಕೆ, ಮನೆ ಅಥವಾ ನಗರ ಎಂಬ ಆಯ್ಕೆ. ನೀವು ಎಚ್ಚರವಾಗಿಲ್ಲದಿದ್ದಲ್ಲಿ ನಿಮ್ಮನ್ನು ಕೇಳದೆಯೇ ನಿಮ್ಮನ್ನು ಸುಂದರ ಅಥವಾ ಅತಿ ಸುಂದರವಾಗಿ ಮಾಡಿಬಿಡುತ್ತದೆ. ಇದು ಈ ಫೋನ್ ಒಂದರ ಗುಣವಲ್ಲ. ಎಲ್ಲ ವಿವೋ ವಿ ಶ್ರೇಣಿಯ ಫೋನ್‌ಗಳಲ್ಲೂ ಇದೇ ಗುಣವಿದೆ. ಸ್ವಂತೀಪ್ರಿಯರಿಗೆ ಇದು ಉತ್ತಮ ಎಂದು ಅನ್ನಿಸಬಹುದು. ಆದರೆ ನನ್ನಂತಹ ಸ್ವಂತೀಪ್ರಿಯರಲ್ಲದವರಿಗೆ ಇದು ಕಿರಿಕಿರಿಯೆಂದೂ ಅನ್ನಿಸಬಹುದು. ಒಂದು ಉತ್ತಮ ಸುದ್ದಿಯೆಂದರೆ ಈ ಅತಿಯಾಗಿ ಸುಂದರಗೊಳಿಸುವಿಕೆಯನ್ನು ನಿಷ್ಕ್ರಿಯಗೊಳಿಸಬಹುದು. ಅದು ಎಲ್ಲಿ, ಹೇಗೆ ಮಾಡುವುದು ಎಂದು ತಿಳಿದಿರಬೇಕು, ಅಷ್ಟೆ. ನೀವು ಅದನ್ನು ನಿಷ್ಕ್ರಿಯಗೊಳಿಸದಿದ್ದರೆ ಎಲ್ಲ ಸ್ವಂತೀಗಳಲ್ಲೂ ಅದು ನಿಮ್ಮನ್ನು ಅತಿ ಸುಂದರಗೊಳಿಸುತ್ತದೆ. ಸ್ವಂತೀಗೆ ಕೂಡ ಇದರಲ್ಲಿ ಎರಡು ಕ್ಯಾಮೆರಗಳಿವೆ. ಒಂದು ಹತ್ತಿರದಲ್ಲಿರುವ ಒಬ್ಬ ವ್ಯಕ್ತಿಯ ಫೊಟೋ ತೆಗೆಯಲು, ಇನ್ನೊಂದು ತುಂಬ ಜನರನ್ನು ಒಳಗೊಳ್ಳಬೇಕಾದಾಗ (ultra-wide) ತೆಗೆಯಲು. ಇವುಗಳ ರೆಸೊಲೂಶನ್‌ನಲ್ಲಿ ವ್ಯತ್ಯಾಸವಿದೆ.

ವಿವೊದವರು ಇದರ ಕ್ಯಾಮೆರಗಳನ್ನು ಉತ್ತಮ ಪಡಿಸಲು ತುಂಬ ಶ್ರಮವಹಿಸಿದ್ದಾರೆ. ನಾಲ್ಕು ಪ್ರಾಥಮಿಕ ಕ್ಯಾಮೆರಗಳಿವೆ. 48 ಮೆಗಾಪಿಕ್ಸೆಲ್‌ನ (f/1.79)  ಮುಖ್ಯ ಕ್ಯಾಮೆರ – ಬಹುತೇಕ ಫೋಟೋಗಳಿಗೆ ಇದನ್ನು ಬಳಸಲಾಗುತ್ತದೆ. ತುಂಬ ಅಗಲದ ದೃಶ್ಯವನ್ನು ಒಳಗೊಳ್ಳಬೇಕಾದರೆ ಅಂದರೆ ತುಂಬ ಅಗಲವಾದ ಪ್ರಕೃತಿದೃಶ್ಯವನ್ನು ಒಳಗೊಳ್ಳಬೇಕಾದರೆ (ಇದನ್ನು ಇಂಗ್ಲಿಷ್‌ನಲ್ಲಿ ultra-wide ಎನ್ನುತ್ತಾರೆ) ಅದಕ್ಕೆಂದೇ 8 ಮೆಗಾಪಿಕ್ಸೆಲ್‌ನ (f/2.2)  ಕ್ಯಾಮೆರವಿದೆ. ವ್ಯಕ್ತಿಚಿತ್ರಕ್ಕೆ ಅಂದರೆ bokehಗೆ 2 ಮೆಗಾಪಿಕ್ಸೆಲ್‌ನ (f/2.4) ಕ್ಯಾಮೆರವಿದೆ. ಇದು ನನ್ನ ಪ್ರಕಾರ ತುಂಬ ಕಡಿಮೆಯಾಯಿತು. ಇದನ್ನು ಬಳಸಿದಾಗ ವ್ಯಕ್ತಿಯನ್ನು ಮಾತ್ರವೇ ನಿಖರವಾಗಿ ಫೋಟೋ ತೆಗೆದು ಹಿನ್ನೆಲೆಯನ್ನು ಮಸುಕುಗೊಳಿಸುತ್ತದೆ. ಈ ಆಯ್ಕೆಯನ್ನು ಹೂವುಗಳ ಫೋಟೋ ತೆಗೆಯಲೂ ಬಳಸಬಹುದು. ಹಾಗೆ ತೆಗೆದಾಗ ಕಡಿಮೆ ರೆಸೊಲೂಶನ್‌ನ ಕ್ಯಾಮೆರ ಬಳಕೆಯಾಗುತ್ತದೆ ಎಂಬುದನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳಬೇಕು. ಅತಿ ಹತ್ತಿರದ ಚಿಕ್ಕ ಚಿಕ್ಕ ವಸ್ತುಗಳನ್ನು, ಉದಾಹರಣೆಗೆ ನೊಣ, ಸೊಳ್ಳೆ, ಚಿಕ್ಕ ಹೂವು, ಫೋಟೋ ತೆಗೆಯಲು ಇರಲ್ಲಿ 2 ಮೆಗಾಪಿಕ್ಸೆಲ್‌ನ (f/2.4) ಇನ್ನೊಂದು ಕ್ಯಾಮೆರವಿದೆ. ಇದರಲ್ಲಿ ಅತಿ ಚಿಕ್ಕ ವಸ್ತುಗಳ ಫೋಟೋವನ್ನು ಅತಿ ಹತ್ತಿರದಿಂದ ಫೋಟೋ ತೆಗೆಯುವ ಅನುಭವ ಉತ್ತಮವಾಗಿದೆ. ಈ ಎಲ್ಲ ಕ್ಯಾಮೆರಗಳ ಫಲಿತಾಂಶಗಳು ಚೆನ್ನಾಗಿವೆ. ಕಡಿಮೆ ಬೆಳಕಿನಲ್ಲಿ ಫೋಟೋ ತೆಗೆಯಲು ರಾತ್ರಿ ಎಂಬ ವಿಶೇಷ ಆಯ್ಕೆಯಿದೆ. ಈ ವಿಧಾನದಲ್ಲಿ ಫೋಟೋ ತೆಗೆಯುವಾಗ ಕೈ ಅಲುಗಾಡದಂತೆ ಎಚ್ಚರವಹಿಸಬೇಕು. ಸುಮಾರು 3-4 ಸೆಕೆಂಡುಗಳ ಕಾಲ ಇದು ಹಲವು ಫೋಟೋಗಳನ್ನು ತೆಗೆದು ಅವುಗಳನ್ನು ಒಟ್ಟುಗೂಡಿಸಿಕೊಡುತ್ತದೆ. ಈ ಎಲ್ಲ ಆಯ್ಕೆಗಳಲ್ಲೂ ಬಳಸಿ ನೋಡಿದೆ. ಎಲ್ಲವೂ ಉತ್ತಮ ಫಲಿತಾಂಶ ನೀಡಿದವು.

[ngg src=”galleries” ids=”6″ display=”basic_thumbnail” thumbnail_crop=”0″]

ಯಾವುದೇ ಫೋನ್ ಕ್ಯಾಮೆರದಲ್ಲಿ ಉತ್ತಮ ಛಾಯಾಗ್ರಾಹಕರು ನೋಡುವುದು ಸಂಪೂರ್ಣ ಮ್ಯಾನ್ಯುವಲ್ ಮೋಡ್ ಇದೆಯೇ ಎಂದು. ಕೆಲವು ಫೋನ್ ಕ್ಯಾಮೆರಗಳು ಈ ಆಯ್ಕೆಯನ್ನು ಪೂರ್ತಿಯಾಗಿ ನೀಡುವುದಿಲ್ಲ. ಪೂರ್ತಿ ಮ್ಯಾನ್ಯುವಲ್ ಮೋಡ್‌ನಲ್ಲಿ ಐಎಸ್‌ಒ, ಎಕ್ಸ್ಪೋಷರ್ ಮತ್ತು ಫೋಕಸ್‌ಗಳನ್ನು ನಮಗೇ ಬದಲಾಯಿಸುವ ಆಯ್ಕೆಗಳಿರುತ್ತವೆ. ಶುಭಸುದ್ದಿಯೆಂದರೆ ವಿವೊ ವಿ19ರಲ್ಲಿ ಸಂಪೂರ್ಣ ಮ್ಯಾನ್ಯುವಲ್ ಮೋಡ್ ಇದೆ. ಒಂದು ಹೂವಿನ ಮೇಲೆ ಕುಳಿತುಕೊಳ್ಳುವ ಜೇನ್ನೊಣದ ಫೋಟೋ, ಜೇಡರ ಬಲೆಯ ಫೋಟೋ, ಆಟೋಫೋಕಸ್‌ನಲ್ಲಿ ಫೋಕಸ್ ಆಗದ ವಸ್ತುಗಳ ಫೋಟೋಗಳನ್ನು ತೆಗೆಯಲು ಮ್ಯಾನ್ಯುವಲ್ ಮೋಡ್ ಬೇಕಾಗುತ್ತದೆ. ನೀವು ಉತ್ತಮ ಛಾಯಾಗ್ರಾಹಕರಾಗಿದ್ದರೆ ನಿಮಗೆ ವಿವೊ ವಿ19ರ ಮ್ಯಾನ್ಯುವಲ್ ಮೋಡ್ ನಿಜಕ್ಕೂ ನಿಮಗೆ ಖುಷಿ ನೀಡಬಹುದು.

ವಿವೊ ವಿ19ರ ವಿಡಿಯೋದಲ್ಲೂ ಹಲವು ಆಯ್ಕೆಗಳಿವೆ. 720p, 1080p ಮತ್ತು 4k ರೆಸೊಲೂಶನ್‌ಗಳಲ್ಲಿ ವಿಡಿಯೋ ಶೂಟ್ ಮಾಡಬಹುದು. ವಿಡಿಯೋ ಮಾಡುವಾಗ ಕೈ ಅಲುಗಾಡಿದರೆ ವಿಡಿಯೋ ಅಲುಗಾಡದಂತೆ (optical image stabilisation) ಇದರಲ್ಲಿ ಆಯ್ಕೆಯಿದೆ. ಆದರೆ ಈ ಆಯ್ಕೆ 720p ರೆಸೊಲೂಶನ್‌ನಲ್ಲಿ ಮಾತ್ರ ಲಭ್ಯವಿದೆ. ಈ ವಿಧಾನದಲ್ಲಿ ಶೂಟ್ ಮಾಡಿದ ವಿಡಿಯೋ ತೃಪ್ತಿ ನೀಡಿತು. ಕನಿಷ್ಠ 1080p ರೆಸೊಲೂಶನ್‌ಗಾದರೂ ಇದನ್ನು ವಿಸ್ತರಿಸಬಹುದಿತ್ತು. 4k ರೆಸೊಲೂಶನ್‌ನಲ್ಲಿ ಶೂಟ್ ಮಾಡಿದ ವಿಡಿಯೋ ಪೂರ್ತಿ ತೃಪ್ತಿ ನೀಡಲಿಲ್ಲ. ಅತಿ ನಿಧಾನವಾಗಿ ವಿಡಿಯೋ ಮಾಡುವ slow motion ವಿಧಾನವೂ ಇದೆ. ಇದು 240fps ನಲ್ಲಿ ಶೂಟ್ ಮಾಡುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಇದರ ಕ್ಯಾಮೆರ ಉತ್ತಮವಿದೆ ಎನ್ನಬಹುದು. ಉತ್ತಮ ಕ್ಯಾಮೆರ ಇರುವ ಫೋನ್ ನಿಮ್ಮ ಪ್ರಥಮ ಆದ್ಯತೆಯಾಗಿದ್ದರೆ ನೀವು ಇದನ್ನು ಕೊಳ್ಳಲು ಆಲೋಚಿಸಬಹುದು. ವಿವೋದವರು ಸಾಮಾನ್ಯವಾಗಿ ಹೊಸ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿ ಒಂದೆರಡು ತಿಂಗಳುಗಳಲ್ಲಿ ಅದರ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತಾರೆ. ತಾಳ್ಮೆಯಿದ್ದರೆ ನೀವು ಅದಕ್ಕೆ ಕಾಯಬಹದು.

ಅಮೆಝಾನ್‌ನಲ್ಲಿ ಈ ಫೋನನ್ನು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ – 8+128 GB ಮಾದರಿ, 8+256 GB ಮಾದರಿ.

–ಡಾ. ಯು.ಬಿ. ಪವನಜ

gadgetloka @ gmail . com

The post ವಿವೊ ವಿ19 ಕ್ಯಾಮೆರ first appeared on Vishva Kannada.

ವಿವೊ ವಿ 17
ಉತ್ತಮ ಕ್ಯಾಮೆರ ಫೋನ್

ವಿವೊ ಕಂಪೆನಿ 20 ರಿಂದ 30 ಸಾವಿರ ಬೆಲೆಯ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ವಿವೊ 17 ಪ್ರೊ ಫೋನಿನ ವಿಮರ್ಶೆಯನ್ನು ಇದೇ ಅಂಕಣದಲ್ಲಿ ನೀಡಲಾಗಿತ್ತು. ಅದರಲ್ಲಿ ಹೊರಚಿಮ್ಮುವ ಎರಡು ಕ್ಯಾಮೆರಗಳ ಸ್ವಂತೀ ಕ್ಯಾಮೆರವನ್ನು ಪ್ರಥಮ ಬಾರಿಗೆ ನೀಡಲಾಗಿತ್ತು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ವಿವೊ ವಿ 17 (Vivo V17) ಫೋನನ್ನು. ಇದು ವಿ 17 ಪ್ರೊ ಸ್ವಲ್ಪ ದುಬಾರಿಯಾಯಿತು ಎನ್ನುವವರಿಗಾಗಿ ಅದಕ್ಕಿಂತ ಸ್ವಲ್ಪ ಕಡಿಮೆ ಬೆಲೆಯ ಫೋನ್.

ಗುಣವೈಶಿಷ್ಟ್ಯಗಳು

ಪ್ರೋಸೆಸರ್

8 x 2 ಗಿಗಾಹರ್ಟ್ಸ್ ಪ್ರೋಸೆಸರ್ (Qualcomm Snapdragon 675)

ಗ್ರಾಫಿಕ್ಸ್ ಪ್ರೋಸೆಸರ್

Adreno-612

ಮೆಮೊರಿ

8 + 128 ಗಿಗಾಬೈಟ್

ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ

ಇದೆ

ಪರದೆ

6.43 ಇಂಚು ಗಾತ್ರ, 2400
x 1080 ಪಿಕ್ಸೆಲ್ ರೆಸೊಲೂಶನ್

ಕ್ಯಾಮರ

48 + 8
+ 2 + 2 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್
32  ಮೆಗಾಪಿಕ್ಸೆಲ್ ಸ್ವಂತೀ

ಸಿಮ್

2 ನ್ಯಾನೊ

ಬ್ಯಾಟರಿ

4500 mAh

ಗಾತ್ರ

159 x 74.2 x
8.5 ಮಿ.ಮೀ.

ತೂಕ

176 ಗ್ರಾಂ

ಬೆರಳಚ್ಚು ಸ್ಕ್ಯಾನರ್

ಇದೆ (ಪರದೆಯಲ್ಲೇ)

ಅವಕೆಂಪು ದೂರನಿಯಂತ್ರಕ (Infrared remote)

ಇಲ್ಲ

ಎಫ್.ಎಂ. ರೇಡಿಯೋ

ಇಲ್ಲ

ಎನ್‌ಎಫ್‌ಸಿ

ಇಲ್ಲ

ಇಯರ್‌ಫೋನ್

‌ಇದೆ

ಯುಎಸ್‌ಬಿ ಓಟಿಜಿ ಬೆಂಬಲ

ಇದೆ

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 9 + ಫನ್‌ಟಚ್ ಓಎಸ್ 9.2

ಬೆಲೆ

₹ 22,990 (ನಿಗದಿತ)

ರಚನೆ ಮತ್ತು ವಿನ್ಯಾಸ

ಈ ಫೋನ್ ವಿವೊ ೧೭ ಪ್ರೊಗಿಂತ ಸ್ವಲ್ಪವೇ ಭಿನ್ನ ಎನ್ನಬಹುದು. ಅದರ ಬಗ್ಗೆ ಬರೆದ ಬಹುತೇಕ ಅಂಶಗಳು ಇದಕ್ಕೂ ಹೊಂದಿಕೆಯಾಗುತ್ತವೆ. ರಚನೆ ಮತ್ತು ವಿನ್ಯಾಸ ಅತ್ಯುತ್ತಮವಾಗಿದೆ. ಎರಡು ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ಥಳ ಥಳ ಹೊಳೆಯುತ್ತವೆ. ಹಿಂಭಾಗ ಸ್ವಲ್ಪ ಉಬ್ಬಿದ್ದು, ಬದಿಗಳು ವಕ್ರವಾಗಿದ್ದು, ಒಂದು ಮಟ್ಟಿಗೆ ತಲೆದಿಂಬಿನಾಕಾರದಲ್ಲಿದೆ. ತುಂಬ ನಯವಾಗಿರುವ ಕಾರಣ ಕೈಯಿಂದ ಜಾರಿ ಬೀಳುವ ಭಯವುದೆ. ಆದನ್ನು ತಪ್ಪಿಸಲು ಒಂದು ಉತ್ತಮ ಪ್ಲಾಸ್ಟಿಕ್ ಕವಚವನ್ನೂ ನೀಡಿದ್ದಾರೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ ಯುಎಸ್‌ಬಿ-ಸಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಇವೆ. ಮೇಲ್ಭಾಗದಲ್ಲಿ ಬಲಮೂಲೆಯಲ್ಲಿ ಸ್ವಂತೀ ಕ್ಯಾಮೆರ ಇದೆ. ಎಡಭಾಗದಲ್ಲಿ ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಎರಡು ನ್ಯಾನೊಸಿಮ್ ಮತ್ತು ಒಂದು ಮೆಮೊರಿ ಕಾರ್ಡ್ ಬಳಸಬಹುದು. ಇದು ಅಂಚುರಹಿತ (bezelless) ಫೋನ್. ಹಿಂಭಾಗದಲ್ಲಿ, ಸ್ವಲ್ಪ ಎಡ ಮೇಲ್ಬಾಗದಲ್ಲಿ ನಾಲ್ಕು ಕ್ಯಾಮರ ಮತ್ತು ಫ್ಲಾಶ್ ಇವೆ. ಈ ಕ್ಯಾಮೆರ ಮತ್ತು ಫ್ಲಾಶ್ ಇರುವ ಸ್ಥಳ ಸ್ವಲ್ಪ ಉಬ್ಬಿದೆ. ಪ್ಲಾಸ್ಟಿಕ್ ಕವಚ ಹಾಕಿಕೊಳ್ಳದಿದ್ದರೆ ಕ್ಯಾಮೆರಕ್ಕೆ ಏಟಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಹೇಳುವುದಾದರೆ ಕೈಯಲ್ಲಿ ಹಿಡಿದಾಗ ಒಂದು ಮೇಲ್ದರ್ಜೆಯ ಅತ್ಯುತ್ತಮ ಫೋನ್ ಹಿಡಿದುಕೊಂಡ ಭಾಸವಾಗುತ್ತದೆ.

https://www.instagram.com/p/B6DVatZn2Nd/

ಇತ್ತೀಚೆಗೆ ಬರುತ್ತಿರುವ ಮೇಲ್ದರ್ಜೆಯ ವಿವೊ ಫೋನ್‌ಗಳಲ್ಲಿರುವಂತೆ
ಇದರಲ್ಲೂ ಪರದೆಯಲ್ಲೇ ಬೆರಳಚ್ಚು ಸ್ಕ್ಯಾನರ್ ಇದೆ. ಅದು ಮುಂಭಾಗದಲ್ಲಿ ಕೆಳಭಾಗದಲ್ಲಿದೆ. ಇದರ ಸಂವೇದನೆ
ಚೆನ್ನಾಗಿದೆ. ಪರದೆಯಲ್ಲಿರುವ ಸ್ಕ್ಯಾನರ್ ಎಂಬ ವ್ಯತ್ಯಾಸ ಅಷ್ಟಾಗಿ ಗೋಚರಿಸುವುದಿಲ್ಲ.
ಮುಖವನ್ನು ಗುರುತುಹಿಡಿಯುವ ಸೌಲಭ್ಯವಿದೆ. ಅದೂ ತಕ್ಕ ಮಟ್ಟಿಗೆ ಚೆನ್ನಾಗಿಯೇ ಕೆಲಸ ಮಾಡುತ್ತಿದೆ.

ಕೆಲಸದ ವೇಗ

ಕೆಲಸದ ವೇಗ ತೃಪ್ತಿದಾಯಕವಾಗಿದೆ. ಇದರ ಅಂಟುಟು
ಬೆಂಚ್‌ಮಾರ್ಕ್ 2,26,687 ಇದೆ. ಅಂದರೆ ಇದು ವೇಗದ ಫೋನ್. ಎಲ್ಲ ನಮೂನೆಯ ಆಟಗಳನ್ನು ಮತ್ತು ಮೂರು
ಆಯಾಮಗಳ ಆಟ ಆಡುವ ಅನುಭವ ತೃಪ್ತಿದಾಯಕವಾಗಿದೆ. ಕೆಲವರು ಇದರಲ್ಲಿ ಪಬ್‌ಜಿ ಆಡುವಾಗ ಇತರೆ ಕೆಲಸಗಳನ್ನು
ಮಾಡಿದರೆ ಸ್ವಲ್ಪ ನಿಧಾನವಾಗಿ ಕೆಲಸ ಮಾಡುತ್ತದೆ ಎಂದು ವರದಿ ಮಾಡಿದ್ದಾರೆ. ನಾನು ಪಬ್‌ಜಿ ಆಡಿ ನೋಡಿಲ್ಲ.

ಆಡಿಯೋ ವಿಡಿಯೋ

ವಿವೊ ವಿ 17 ಪ್ರೊ ಮತ್ತು ಇದರ ಆಡಿಯೋದಲ್ಲಿ ಯಾವುದೇ
ಬದಲಾವಣೆಯಿಲ್ಲ. ಆಡಿಯೋ ಇಂಜಿನ್ ಚೆನ್ನಾಗಿದೆ. ಫೋನ್
ಜೊತೆ ನೀಡಿರುವ ಇಯರ್‌ಫೋನ್‌ನ ಧ್ವನಿಯ ಗುಣಮಟ್ಟ ಅಷ್ಟೇನೂ ತೃಪ್ತಿದಾಯಕವಾಗಿಲ್ಲ. ನಿಮ್ಮಲ್ಲಿ
ಉತ್ತಮ ಗುಣಮಟ್ಟದ ಹೆಡ್‌ಫೋನ್ ಅಥವಾ ಇಯರ್‌ಬಡ್ ಇದ್ದರೆ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ
ಪಡೆಯಬಹುದು. ಸಾಮಾನ್ಯ ಮತ್ತು ಹೈಡೆಫಿನಿಶನ್ ವಿಡಿಯೋಗಳು ಚೆನ್ನಾಗಿ ಪ್ಲೇ ಆಗುತ್ತವೆ. 4k ವೀಡಿಯೋ ಕೂಡ ಸರಿಯಾಗಿ ಪ್ಲೇ ಆಗುತ್ತದೆ. ಅಮೋಲೆಡ್ ಪರದೆ ಆಗಿರುವುದರಿಂದ
ವಿಡಿಯೋ ವೀಕ್ಷಣೆ ಮತ್ತು ಆಟಗಳನ್ನು ಆಡುವ ಅನುಭವ ಉತ್ತಮವಾಗಿದೆ. ಮನರಂಜನೆ ನಿಮ್ಮ ಒಂದು ಉದ್ದೇಶವಾಗಿದ್ದಲ್ಲಿ
ಈ ಫೋನ್ ನೀವು ಕೊಳ್ಳಬಹುದು.

ಕ್ಯಾಮೆರ

ವಿವೊದವರು 20 ರಿಂದ 30 ಸಾವಿರ ಬೆಲೆಯ ಫೋನ್‌ಗಳ ಮಾರುಕಟ್ಟೆಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಅವರ ಪ್ರಮುಖ ಗುರಿ ಉತ್ತಮ ಕ್ಯಾಮೆರ ಫೋನ್ ನೀಡುವುದು. ಅದನ್ನು ಅವರು ಸತತವಾಗಿ ಮಾಡುತ್ತಾ ಬಂದಿದ್ದಾರೆ.  ಇದರಲ್ಲಿ 4 ಪ್ರಾಥಮಿಕ ಕ್ಯಾಮೆರಗಳಿವೆ! ಜೊತೆಗೆ ಕೃತಕ ಬುದ್ಧಿಮತ್ತೆ ಕೂಡ ಇದೆ. ಸ್ವಂತೀಗೆ  32 ಮೆಗಾಪಿಕ್ಸೆಲ್‌ಗಳ ಕ್ಯಾಮೆರ ಇದೆ. ಕ್ಯಾಮೆರದ ಕಿರುತಂತ್ರಾಂಶದಲ್ಲಿ ಹಲವು ಆಯ್ಕೆಗಳಿವೆ. ಅತಿ ಹತ್ತಿರದ ವಸ್ತುಗಳ ಫೋಟೋ ತೆಗೆಯಲು ಸೂಪರ್‌ಮ್ಯಾಕ್ರೊ ಎಂಬ ಆಯ್ಕೆಯಿದೆ. ಅಲ್ಟ್ರಾ ವೈಡ್ ಆಂಗಲ್ ಎಂಬ ಆಯ್ಕೆಯೂ ಇದೆ. ಜೊತೆಗೆ ಮ್ಯಾನ್ಯುವಲ್ ಮೋಡ್ ಕೂಡ ಇದೆ. ತುಂಬ ಬೆಳಕಿದ್ದಾಗ ಅತ್ಯುತ್ತಮ ಫೋಟೋ ತೆಗೆಯುತ್ತದೆ. ಕಡಿಮೆ ಬೆಳಕಿನಲ್ಲೂ ತಕ್ಕ ಮಟ್ಟಿಗೆ ಉತ್ತಮ ಫೋಟೋ ತೆಗೆಯುತ್ತದೆ. ವಿವೊದವರು ಈ ಫೋನನ್ನು ಅತಿ ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೋ ತೆಗೆಯುವ ಫೋನ್ ಎಂದೇ ಮಾರಾಟ ಮಾಡುತ್ತಿದ್ದಾರೆ. ನಾನು ಕೆಲವು ರಾತ್ರಿ ಛಾಯಾಗ್ರಹಣ ಮಾಡಿ ನೋಡಿದೆ. ಈ ಮಾತಿನಲ್ಲಿ ತಕ್ಕ ಮಟ್ಟಿಗೆ ಸತ್ಯಾಂಶವಿದೆ ಎನ್ನಬಹುದು. ಒಟ್ಟಿನಲ್ಲಿ ಕ್ಯಾಮೆರ ಮತ್ತು ಫೋಟೋಗ್ರಫಿ ನಿಮ್ಮ ಪ್ರಥಮ ಆದ್ಯತೆಯಾದರೆ ಈ ಫೋನ್ ಅನ್ನು ನೀವು ಖಂಡಿತ ಕೊಳ್ಳಬಹುದು.

[ngg src=”galleries” ids=”4″ display=”basic_imagebrowser”]

ಬ್ಯಾಟರಿ

ಇದರಲ್ಲಿರುವುದು 4500mAh ಶಕ್ತಿಯ ಬ್ಯಾಟರಿ. ಬ್ಯಾಟರಿ ಬಾಳಿಕೆ ಚೆನ್ನಾಗಿದೆ.
ವೇಗವಾಗಿ ಚಾರ್ಜ್ ಆಗುವ ಸೌಕರ್ಯವಿದೆ. ಸುಮಾರು 100  ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಕನ್ನಡದ ತೋರುವಿಕೆ, ಯೂಸರ್ ಇಂಟರ್‌ಫೇಸ್ ಎಲ್ಲ ಇವೆ.

ತೀರ್ಪು

ಫೋನ್ ಚೆನ್ನಾಗಿದೆ. ಉತ್ತಮ ಛಾಯಾಗ್ರಹಣ ಅದರಲ್ಲೂ ಕಡಿಮೆ ಬೆಳಕಿನಲ್ಲಿ ಛಾಯಾಗ್ರಹಣ ನಿಮ್ಮ ಪ್ರಥಮ ಆದ್ಯತೆಯಾದರೆ ನೀವು ಇದನ್ನು ಖಂಡಿತ ಕೊಳ್ಳಬಹುದು. ಬೆಲೆ ಮಾತ್ರ ಸುಮಾರು 2-3 ಸಾವಿರ ಕಡಿಮೆ ಆಗಿದ್ದಿದ್ದರೆ ಇದಕ್ಕೆ ಖಂಡಿತ ಸರಿಹೊಂದುತ್ತಿತ್ತು.

ಅಮೆಝಾನ್‌ನಲ್ಲಿ ಈ ಫೋನನ್ನು ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

–ಡಾ| ಯು.ಬಿ. ಪವನಜ

gadgetloka @ gmail . com

The post ವಿವೊ ವಿ 17 first appeared on Vishva Kannada.

ವಿವೊ ವಿ 17ಪ್ರೊ
ಮಧ್ಯಮ ಬೆಲೆಯ ಉತ್ತಮ ಫೋನ್

ವಿವೊ ಕಂಪೆನಿ ಕೆಲವು ಆವಿಷ್ಕಾರಗಳಿಗೆ ಪ್ರಸಿದ್ಧವಾಗಿದೆ.
ವಿವೊ 11 ಪ್ರೊ ಫೋನಿನಲ್ಲಿ ಪರದೆಯಲ್ಲೇ ಬೆರಳಚ್ಚು ಸ್ಕ್ಯಾನರ್ ಅನ್ನು ಬಳಸಲಾಗಿತ್ತು. ವಿವೊ 15 ಪ್ರೊ
ಫೋನಿನಲ್ಲಿ ಮೇಲಕ್ಕೆ ಹೊರ ಬರುವ (ಪಾಪ್‌ಅಪ್) ಕ್ಯಾಮರವನ್ನು ಬಳಸಲಾಗಿತ್ತು. ವಿವೊ ಕಂಪೆನಿ 20 ರಿಂದ
30 ಸಾವಿರ ಬೆಲೆಯ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ವಿವೊ 11 ಪ್ರೊ ಫೋನಿನ ವಿಮರ್ಶೆಯನ್ನು
ಇದೇ ಅಂಕಣದಲ್ಲಿ ನೀಡಲಾಗಿತ್ತು.  ಈ ಸಲ ನಾವು ವಿಮರ್ಶೆ
ಮಾಡುತ್ತಿರುವುದು ವಿವೊ ವಿ 17 ಪ್ರೊ (Vivo V17 Pro) ಫೋನನ್ನು.

ಗುಣವೈಶಿಷ್ಟ್ಯಗಳು

ಪ್ರೋಸೆಸರ್

8 x 2.02 ಗಿಗಾಹರ್ಟ್ಸ್ ಪ್ರೋಸೆಸರ್ (Qualcomm Snapdragon 675)

ಗ್ರಾಫಿಕ್ಸ್ ಪ್ರೋಸೆಸರ್

Adreno-612

ಮೆಮೊರಿ

8 + 128 ಗಿಗಾಬೈಟ್

ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ

ಇಲ್ಲ

ಪರದೆ

6.44 ಇಂಚು ಗಾತ್ರ, 2400
x 1080 ಪಿಕ್ಸೆಲ್ ರೆಸೊಲೂಶನ್

ಕ್ಯಾಮರ

48 + 8
+ 12 + 2 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್
32 + 8 ಮೆಗಾಪಿಕ್ಸೆಲ್ ಪಾಪ್‌ಅಪ್ ಸ್ವಂತೀ + ಫ್ಲಾಶ್

ಸಿಮ್

2 ನ್ಯಾನೊ

ಬ್ಯಾಟರಿ

4100 mAh

ಗಾತ್ರ

159.00 × 74.70
× 9.80 ಮಿ.ಮೀ.

ತೂಕ

201.8 ಗ್ರಾಂ

ಬೆರಳಚ್ಚು ಸ್ಕ್ಯಾನರ್

ಇದೆ (ಪರದೆಯಲ್ಲೇ)

ಅವಕೆಂಪು ದೂರನಿಯಂತ್ರಕ (Infrared remote)

ಇಲ್ಲ

ಎಫ್.ಎಂ. ರೇಡಿಯೋ

ಇಲ್ಲ

ಎನ್‌ಎಫ್‌ಸಿ

ಇಲ್ಲ

ಇಯರ್‌ಫೋನ್

‌ಇದೆ

ಯುಎಸ್‌ಬಿ ಓಟಿಜಿ ಬೆಂಬಲ

ಇದೆ

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 9 + ಫನ್‌ಟಚ್ ಓಎಸ್ 9.1

ಬೆಲೆ

₹ 29,990 (ನಿಗದಿತ)

ರಚನೆ ಮತ್ತು ವಿನ್ಯಾಸ

ಎಲ್ಲ ವಿವೊ ಫೋನ್‌ಗಳಂತೆ
ಈ ಫೋನಿನ ರಚನೆ ಮತ್ತು ವಿನ್ಯಾಸ ಅತ್ಯುತ್ತಮವಾಗಿದೆ. ಎರಡು ಬಣ್ಣಗಳಲ್ಲಿ ಲಭ್ಯವಿದೆ. ಹಿಂಭಾಗದ ಕವಚ ಮತ್ತು ಲೋಹದ ಫ್ರೇಂ ಥಳ ಥಳ ಹೊಳೆಯುತ್ತವೆ. ಹಿಂಭಾಗ ಸ್ವಲ್ಪ ಉಬ್ಬಿದ್ದು,
ಬದಿಗಳು ವಕ್ರವಾಗಿದ್ದು, ಒಂದು ಮಟ್ಟಿಗೆ ತಲೆದಿಂಬಿನಾಕಾರದಲ್ಲಿದೆ. ಹಿಂಭಾಗದ ಕವಚಕ್ಕೆ ಗಾಜಿನ ಲೇಪನವಿದೆ.
ಅದೇಕೋ ಗೊತ್ತಿಲ್ಲ. ಅದರ ಸೌಂದರ್ಯವನ್ನು ಕಂಪೆನಿಯವರೇ ಒಂದು ಪ್ಲಾಸ್ಟಿಕ್ ಹೊದಿಕೆ ಹಾಕಿ ಕೊಟ್ಟು
ಕೆಡಿಸಿದ್ದಾರೆ. ವಿಮರ್ಶೆಗೆ ಬಮದ ಫೋನ್ ಆದ ಕಾರಣ ಈ ಹೊದಿಕೆ ತೆಗೆಯಲು ನಾನು ಪ್ರಯತ್ನಿಸಲಿಲ್ಲ. ಇಷ್ಟೇ
ಅಲ್ಲದೆ ಒಂದು ಉತ್ತಮ ಪ್ಲಾಸ್ಟಿಕ್ ಕವಚವನ್ನೂ ನೀಡಿದ್ದಾರೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್
ಬಟನ್‌ಗಳಿವೆ. ಕೆಳಭಾಗದಲ್ಲಿ ಯುಎಸ್‌ಬಿ-ಸಿ ಕಿಂಡಿಯಿದೆ. ಮೇಲ್ಬಾಗದಲ್ಲಿ ಪಾಪ್‌ಅಪ್ ಕ್ಯಾಮರ ಮತ್ತು
3.5 ಮಿ.ಮೀ. ಇಯರ್‌ಫೋನ್ ಕಿಂಡಿ ಇವೆ. ಎಡಭಾಗದಲ್ಲಿ ಸಿಮ್ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಎರಡು
ನ್ಯಾನೊಸಿಮ್ ಬಳಸಬಹುದು. ಎಡಭಾಗದಲ್ಲಿ ಒಂದು ವಿಶೇಷ ಬಟನ್ ಇದೆ. ಇದನ್ನು ಒತ್ತಿದರೆ ಗೂಗ್ಲ್ ಅಸಿಸ್ಟೆಂಟ್
ಪ್ರಾರಂಭವಾಗುತ್ತದೆ. ಕ್ಯಾಮರ ಬಳಸುತ್ತಿದ್ದಾಗ ಇದನ್ನು ಎರಡು ಸಲ ಒತ್ತಿದರೆ ಕ್ಯಾಮರ ನೋಡುತ್ತಿರುವ
ವಸ್ತುವನ್ನು ಗುರುತಿಸುವ ಸೌಲಭ್ಯ ಚಾಲನೆಯಾಗುತ್ತದೆ. ಇದು ಅಂಚುರಹಿತ (bezelless) ಫೋನ್. ಹಿಂಭಾಗದ ಮಧ್ಯದಲ್ಲಿ,
ಸ್ವಲ್ಪ ಮೇಲ್ಬಾಗದಲ್ಲಿ ನಾಲ್ಕು ಕ್ಯಾಮರ ಮತ್ತು ಫ್ಲಾಶ್ ಇವೆ. ಒಟ್ಟಿನಲ್ಲಿ ಹೇಳುವುದಾದರೆ ಕೈಯಲ್ಲಿ
ಹಿಡಿದಾಗ ಒಂದು ಮೇಲ್ದರ್ಜೆಯ ಅತ್ಯುತ್ತಮ ಫೋನ್ ಹಿಡಿದುಕೊಂಡ ಭಾಸವಾಗುತ್ತದೆ.

[ngg src=”galleries” ids=”1″ display=”basic_imagebrowser”]

ವಿವೊದವರ ಆವಿಷ್ಕಾರ ಪರದೆಯಲ್ಲೇ ಬೆರಳಚ್ಚು ಸ್ಕ್ಯಾನರ್. ಅದು ಈ ಫೋನಿನಲ್ಲೂ ಇದೆ. ಅದು ಮುಂಭಾಗದಲ್ಲಿ ಕೆಳಭಾಗದಲ್ಲಿದೆ. ವಿವೊ ನೆಕ್ಸ್ ಫೋನಿನಲ್ಲಿ ಇದರ ಸಂವೇದನೆ ಸ್ವಲ್ಪ ನಿಧಾನವಿತ್ತು. ಈ ಫೋನಿನಲ್ಲಿ ಅದು ತುಂಬ ಸುಧಾರಿಸಿದೆ. ಪರದೆಯಲ್ಲಿರುವ ಸ್ಕ್ಯಾನರ್ ಎಂಬ ವ್ಯತ್ಯಾಸ ಅಷ್ಟಾಗಿ ಗೋಚರಿಸುವುದಿಲ್ಲ. ಮುಖವನ್ನು ಗುರುತುಹಿಡಿಯುವ ಸೌಲಭ್ಯವಿಲ್ಲ. ಯಾಕೆಂದರೆ ಹಾಗೆ ಮಾಡಬೇಕಾದರೆ ಪ್ರತಿ ಸಲವೂ ಫೋನ್ ಹೊರಕ್ಕೆ ಬರಬೇಕಾಗುತ್ತದೆ ಮತ್ತು ಈ ಕೆಲಸ ನಿಧಾನವಾಗುತ್ತದೆ.

https://www.instagram.com/p/B2vtceMn589/

ಕೆಲಸದ ವೇಗ

ಕೆಲಸದ ವೇಗ ತೃಪ್ತಿದಾಯಕವಾಗಿದೆ. ಇದರ ಅಂಟುಟು
ಬೆಂಚ್‌ಮಾರ್ಕ್ 1,76,937 ಇದೆ. ಅಂದರೆ ಇದು ಮಧ್ಯಮ ಶ್ರೇಣಿಯಲ್ಲಿ ಮೇಲ್ಮಟ್ಟದ ವೇಗದ ಫೋನ್. ಎಲ್ಲ
ನಮೂನೆಯ ಆಟಗಳನ್ನು ಮತ್ತು ಮೂರು ಆಯಾಮಗಳ ಆಟ ಆಡುವ ಅನುಭವ ತೃಪ್ತಿದಾಯಕವಾಗಿದೆ.

ಆಡಿಯೋ ವಿಡಿಯೋ

ಇದರ ಆಡಿಯೋ ಇಂಜಿನ್ ಕೂಡ ಚೆನ್ನಾಗಿದೆ. ಇಯರ್‌ಫೋನ್
ನೀಡಿದ್ದಾರೆ. ಆದರೆ ಇದರ ಧ್ವನಿಯ ಗುಣಮಟ್ಟ ಅಷ್ಟೇನೂ ತೃಪ್ತಿದಾಯಕವಗಿಲ್ಲ. ನಿಮ್ಮಲ್ಲಿ ಉತ್ತಮ ಗುಣಮಟ್ಟದ
ಹೆಡ್‌ಫೋನ್ ಅಥವಾ ಇಯರ್‌ಬಡ್ ಇದ್ದರೆ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ ಪಡೆಯಬಹುದು.
ಸಾಮಾನ್ಯ ಮತ್ತು ಹೈಡೆಫಿನಿಶನ್ ವಿಡಿಯೋಗಳು ಚೆನ್ನಾಗಿ ಪ್ಲೇ ಆಗುತ್ತವೆ. 4k ವೀಡಿಯೋ ಕೂಡ ಸರಿಯಾಗಿ ಪ್ಲೇ ಆಗುತ್ತದೆ. ಅಮೋಲೆಡ್ ಪರದೆ ಆಗಿರುವುದರಿಂದ
ವಿಡಿಯೋ ವೀಕ್ಷಣೆ ಮತ್ತು ಆಟಗಳನ್ನು ಆಡುವ ಅನುಭವ ಉತ್ತಮವಾಗಿದೆ.

ಕ್ಯಾಮರ

ಇದನ್ನು ಫೊನ್ ಜೊತೆ ಕ್ಯಾಮರ ಎನ್ನುವುದಕ್ಕಿಂತಲೂ ಕ್ಯಾಮರ ಜೊತೆ ಫೋನ್
ಎನ್ನುವುದೇ ಹೆಚ್ಚು ಸೂಕ್ತ. ಯಾಕೆಂದರೆ ಇದರ ಹೆಗ್ಗಳಿಕೆ ಇರುವುದೇ ಇದರ ಕ್ಯಾಮರಗಳಲ್ಲಿ. 4 ಪ್ರಾಥಮಿಕ
ಕ್ಯಾಮರಗಳಿವೆ! ಜೊತೆಗೆ ಕೃತಕ ಬುದ್ಧಿಮತ್ತೆ ಕೂಡ ಇದೆ. ಸ್ವಂತೀಗೆ  32 ಮತ್ತು 8 ಮೆಗಾಪಿಕ್ಸೆಲ್‌ಗಳ ಪಾಪ್‌ಅಪ್ ಕ್ಯಾಮರ ಜೊತೆಗೆ
ಫ್ಲಾಶ್ ಇದೆ ಅಂದರೆ ಎಲ್ಲ ಸಮಯದಲ್ಲೂ ಸ್ವಂತೀ ಕ್ಯಾಮರ ಕಾಣಿಸುವುದಿಲ್ಲ. ಕ್ಯಾಮರದಲ್ಲಿ ಸ್ವಂತೀ ಎಂದು
ಆಯ್ಕೆ ಮಾಡಿದೊಡನೆ ಕ್ಯಾಮರ ಮೇಲಕ್ಕೆ ಹೊರಕ್ಕೆ ಬರುತ್ತದೆ. ಸ್ವಂತೀಗೆ ಎರಡು ಪಾಪ್ಅಪ್ ಕ್ಯಾಮರಗಳಿರುವ
ಪ್ರಪಂಚದ ಮೊತ್ತಮೊದಲ ಫೊನ್ ಇದು. ಇದೇ ಅದರ ಅತಿ ದೊಡ್ಡ ಹೆಗ್ಗಳಿಕೆ. ಸ್ವಂತೀ ತೆಗೆಯುವುವಾಗ ತುಂಬ
ಜನರಿದ್ದಲ್ಲಿ ಎಲ್ಲರನ್ನೂ ಫೋಟೋದಲ್ಲಿ ಒಳಗೊಳ್ಳಬೇಕಾದರೆ ಇದರಲ್ಲಿ ಪ್ರತ್ಯೇಕ ಆಯ್ಕೆ ಇದೆ. ಇದಕ್ಕೆ
ಛಾಯಾಗ್ರಹಣದ ಪರಿಭಾಷೆಯಲ್ಲಿ ವೈಡ್ ಆಂಗಲ್ ಎನ್ನುತ್ತಾರೆ. ಸ್ವಂತೀಗೆ ಎರಡು ಕ್ಯಾಮರ ನೀಡಿರುವುದರಿಂದ
ಇದು ಸಾಧ್ಯವಾಗಿದೆ. ಕ್ಯಾಮರದ ಕಿರುತಂತ್ರಾಂಶದಲ್ಲಿ ಹಲವು ಆಯ್ಕೆಗಳಿವೆ. ಅತಿ ಹತ್ತಿರದ ವಸ್ತುಗಳ
ಫೋಟೋ ತೆಗೆಯಲು ಸೂಪರ್‌ಮ್ಯಾಕ್ರೊ ಎಂಬ ಆಯ್ಕೆಯಿದೆ. ಅಲ್ಟ್ರಾ ವೈಡ್ ಆಂಗಲ್ ಎಂಬ ಆಯ್ಕೆಯೂ ಇದೆ. ಜೊತೆಗೆ ಮ್ಯಾನ್ಯುವಲ್
ಮೋಡ್ ಕೂಡ ಇದೆ. ತುಂಬ ಬೆಳಕಿದ್ದಾಗ ಅತ್ಯುತ್ತಮ ಫೋಟೋ ತೆಗೆಯುತ್ತದೆ. ಕಡಿಮೆ ಬೆಳಕಿನಲ್ಲಿ ಕೆಲವು
ಸಂದರ್ಭಗಳಲ್ಲಿ ಮಾತ್ರ ಉತ್ತಮ ಫೋಟೋ ಮೂಡಿಬರುತ್ತದೆ. ವಿವೋ ಫೋನ್‌ಗಳ ಕ್ಯಾಮರದ ಕಿರುತಂತ್ರಾಂಶದ ತೊಂದರೆಯೆಂದರೆ
ಮುಖವನ್ನು ಅತಿಯಾಗಿ ಸುಂದರಗೊಳಿಸುವುದು. ಹಾಗೆ ಮಾಡಬೇಡವೆಂದು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಡಿಫಾಲ್ಟ್
ಆಗಿ ಸುಂದರಗೊಳಿಸುತ್ತದೆ. ನನಗೆ ಇದು ಸುತರಾಂ ಇಷ್ಟವಿಲ್ಲ. ನಾನು ಈ ಬಗ್ಗೆ ಪ್ರತಿ ವಿವೊ ಫೋನಿನ ವಿಮರ್ಶೆಯಲ್ಲೂ
ಬರೆದಿದ್ದೇನೆ. ಬಹುಶಃ ಇನ್ನು ಮುಂದೆಯೂ ಹೀಗೆಯೇ ಬರೆಯುತ್ತಿರಬೇಕಾಗುತ್ತೇನೋ?! ಒಟ್ಟಿನಲ್ಲಿ ಕ್ಯಾಮರ
ಮತ್ತು ಫೋಟೋಗ್ರಫಿ ನಿಮ್ಮ ಪ್ರಥಮ ಆದ್ಯತೆಯಾದರೆ ಈ ಫೋನ್ ಅನ್ನು ನೀವು ಖಂಡಿತ ಕೊಳ್ಳಬಹುದು.

[ngg src=”galleries” ids=”2″ display=”basic_imagebrowser”]

ಬ್ಯಾಟರಿ

ಇದರಲ್ಲಿರುವುದು 4100mAh ಶಕ್ತಿಯ ಬ್ಯಾಟರಿ. ಬ್ಯಾಟರಿ ಬಾಳಿಕೆ ಚೆನ್ನಾಗಿದೆ.
ವೇಗವಾಗಿ ಚಾರ್ಜ್ ಆಗುವ ಸೌಕರ್ಯವಿದೆ. ಸುಮಾರು 100  ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಕನ್ನಡದ ತೋರುವಿಕೆ, ಯೂಸರ್ ಇಂಟರ್‌ಫೇಸ್ ಎಲ್ಲ ಇವೆ.

ತೀರ್ಪು

ಫೋನ್ ಚೆನ್ನಾಗಿದೆ. ಉತ್ತಮ ಛಾಯಾಗ್ರಹಣ ಅದರಲ್ಲೂ ಸ್ವಂತೀ ನಿಮ್ಮ ಪ್ರಥಮ
ಆದ್ಯತೆಯಾದರೆ ನೀವು ಇದನ್ನು ಖಂಡಿತ ಕೊಳ್ಳಬಹುದು. ಬೆಲೆ ಮಾತ್ರ ಸುಮಾರು 3-4 ಸಾವಿರ ಕಡಿಮೆ ಆಗಿದ್ದಿದ್ದರೆ
ಇದಕ್ಕೆ ಖಂಡಿತ ಸರಿಹೊಂದುತ್ತಿತ್ತು.

–ಡಾ| ಯು.ಬಿ. ಪವನಜ

gadgetloka @ gmail . com

The post ವಿವೊ ವಿ 17ಪ್ರೊ first appeared on Vishva Kannada.

ರಿಯಲ್‌ಮಿ 3 ಪ್ರೊ
ಮಧ್ಯಮ ಬೆಲೆಗೆ ಅತ್ಯುತ್ತಮ ಫೋನ್

ಆರಂಭದಲ್ಲಿ ಒಪ್ಪೊ ಕಂಪೆನಿಯ ಸಬ್‌ಬ್ರ್ಯಾಂಡ್ ಆಗಿ ಫೋನ್‌ಗಳನ್ನು ತಯಾರಿಸಿದ ರಿಯಲ್‌ಮಿ ನಂತರ ತಾನೇ ಸ್ವತಂತ್ರ ಕಂಪೆನಿಯಾಯಿತು. ಈ ಕಂಪೆನಿ ಒಪ್ಪೊ ಜೊತೆ ನೇರವಾಗಿ ಸ್ಪರ್ಧಿಸುತ್ತಿಲ್ಲ. ಇದು ₹ 20 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಒಪ್ಪೊ ಇದಕ್ಕಿಂತ ಹೆಚ್ಚಿನ ಬೆಲೆಯಲ್ಲೂ ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಆದರೆ ಅವೆರಡೂ ಬಹುತೇಕ ಒಂದೇ ಕಡೆ ಫೋನ್‌ಗಳನ್ನು ತಯಾರಿಸುತ್ತಿವೆ. ರಿಯಲ್‌ಮಿ ಕಂಪೆನಿಯ ಕೆಲವು ಫೋನ್‌ಗಳ ವಿಮರ್ಶೆಯನ್ನು ಗ್ಯಾಜೆಟ್‌ಲೋಕದಲ್ಲಿ ಮಾಡಲಾಗಿತ್ತು. ಈ ಸಲ ರಿಯಲ್‌ಮಿ 3 ಪ್ರೊ (Realme 3 Pro) ಫೋನಿನ ವಿಮರ್ಶೆ.

ಗುಣವೈಶಿಷ್ಟ್ಯಗಳು

ಪ್ರೋಸೆಸರ್

8 x 2.2 ಗಿಗಾಹರ್ಟ್ಸ್ ಪ್ರೋಸೆಸರ್ (Snapdragon 710)

ಗ್ರಾಫಿಕ್ಸ್ ಪ್ರೋಸೆಸರ್

Adreno
616

ಮೆಮೊರಿ

4 +64 ಗಿಗಾಬೈಟ್
6 + 64 ಗಿಗಾಬೈಟ್
6 + 128 ಗಿಗಾಬೈಟ್ (ಈ ವಿಮರ್ಶೆ)

ಮೈಕ್ರೊಎಸ್‌ಡಿ ಮೆಮೊರಿ
ಸೌಲಭ್ಯ

ಇದೆ (ಪ್ರತ್ಯೇಕ,
ಹೈಬ್ರಿಡ್ ಅಲ್ಲ)

ಪರದೆ

6.3 ಇಂಚು ಗಾತ್ರದ 1080 x 2340 ಪಿಕ್ಸೆಲ್, 408 PPI

ಕ್ಯಾಮರ

16 + 5  ಮೆಗಾಪಿಕ್ಸೆಲ್ ಎರಡು ಪ್ರಾಥಮಿಕ + ಫ್ಲಾಶ್
25 ಮೆಗಾಪಿಕ್ಸೆಲ್ ಸ್ವಂತೀ

ಸಿಮ್

2 ನ್ಯಾನೊ

ಬ್ಯಾಟರಿ

4045 mAh

ಗಾತ್ರ

156.8 x 74.2 x 8.3 ಮಿ.ಮೀ.

ತೂಕ

172 ಗ್ರಾಂ

ಬೆರಳಚ್ಚು ಸ್ಕ್ಯಾನರ್

ಇದೆ

ಅವಕೆಂಪು ದೂರನಿಯಂತ್ರಕ
(Infrared remote)

ಇಲ್ಲ

ಎಫ್.ಎಂ. ರೇಡಿಯೋ

ಇದೆ

ಎನ್‌ಎಫ್‌ಸಿ

ಇಲ್ಲ

4 ಜಿ ವಿಓಎಲ್‌ಟಿಇ (4G VoLTE)

ಇದೆ

ಇಯರ್‌ಫೋನ್

‌ಇಲ್ಲ

ಯುಎಸ್‌ಬಿ ಓಟಿಜಿ ಬೆಂಬಲ

ಇದೆ

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 9 + ಕಲರ್
ಓಎಸ್ 6

ಬೆಲೆ

₹ 15,999 (6+64), 16,999 (6+128), 3 ಬಣ್ಣಗಳಲ್ಲಿ ಲಭ್ಯ

ರಚನೆ ಮತ್ತು ವಿನ್ಯಾಸ

ಈ ಫೋನ್  ಮೂರು ಬಣ್ಣ ಮತ್ತು ಮೆಮೊರಿ ಮಾದರಿಗಳಲ್ಲಿ ಲಭ್ಯ. 4+64, 6+64 ಮತ್ತು 6+128 ಗಿಗಾಬೈಟ್ ಮಾದರಿಗಳಲ್ಲಿ ಹಾಗೂ ಕಾರ್ಬನ್ ಗ್ರೇ, ನೈಟ್ರೊ ಬ್ಲೂ, ಲೈಟ್ನಿಂಗ್ ಪರ್ಪ್ಲ್  ಎಂಬ ಮೂರು ಬಣ್ಣಗಳಲ್ಲಿ ಲಭ್ಯ. ನನಗೆ ವಿಮರ್ಶೆಗೆ ಬಂದುದು 6+128 ಗಿಗಾಬೈಟ್ ಮಾದರಿಯದು. ಇತರೆ ರಿಯಲ್‌ಮಿ ಫೋನ್‌ಗಳಂತೆ ಇದರ ರಚನೆ ಮತ್ತು ವಿನ್ಯಾಸ ಕೂಡ ಅತ್ಯುತ್ತಮವಾಗಿದೆ. ನನಗೆ ವಿಮರ್ಶೆಗೆ ಬಂದುದು ಕಾರ್ಬನ್ ಗ್ರೇ ಬಣ್ಣದ್ದು. ಬಲ ಭಾಗದಲ್ಲಿ ಆನ್/ಆಫ್ ಸ್ವಿಚ್ ಇದೆ. ಎಡಭಾಗದಲ್ಲಿ ವಾಲ್ಯೂಮ್ ಸ್ವಿಚ್ ಮತ್ತು ಸಿಮ್ ಹಾಗೂ ಮೆಮೊರಿ ಕಾರ್ಡ್ ಹಾಕುವ ಟ್ರೇ ಇವೆ. ಇದರಲ್ಲಿ ಎರಡು ನ್ಯಾನೋ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಯುಎಸ್‌ಬಿ ಕಿಂಡಿ ಮತ್ತು 3.5 ಮಿ. ಮೀ. ಇಯರ್‌ಫೋನ್ ಕಿಂಡಿಗಳಿವೆ.  ಹಿಂದುಗಡೆ ಬಲಮೂಲೆಯಲ್ಲಿ ಕ್ಯಾಮರ ಮತ್ತು ಕೆಳಗಡೆ ಫ್ಲಾಶ್ ಇವೆ. ಹಿಂಭಾಗದ ಮಧ್ಯಭಾಗದಲ್ಲಿ ಸ್ವಲ್ಪ ಮೇಲುಗಡೆ ಬೆರಳಚ್ಚು ಸ್ಕ್ಯಾನರ್ ಇದೆ. ಹಿಂಭಾಗದ ಕವಚದ ವಿನ್ಯಾಸ ನೋಡಲು ಸುಂದರವಾಗಿದೆ. ಬದಿಗಳಲ್ಲಿ ವಕ್ರವಾಗಿದ್ದು ಹಿಂಭಾಗ ಬಹುತೇಕ ತಲೆದಿಂಬಿನಂತಿದೆ. ಹಿಂಭಾಗದ ಕವಚ ತುಂಬ ನಯವಾಗಿದೆ. ಕೈಯಿಂದ ಜಾರಿ ಬೀಳಬಾರದು ಎಂದಿದ್ದರೆ ಅಧಿಕ ಕವಚ ಹಾಕಿಕೊಳ್ಳಬೇಕು. ಒಂದು ಪ್ಲಾಸ್ಟಿಕ್ ಕವಚವನ್ನು ಅವರೇ ನೀಡಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಈ ಫೋನಿನ ರಚನೆ ಮತ್ತು ವಿನ್ಯಾಸ ಇತರೆ ರಿಯಲ್‌ಮಿ ಫೋನ್‌ಗಳಂತೆ ಉತ್ತಮವಾಗಿದೆ ಎನ್ನಬಹುದು.

https://www.instagram.com/p/ByO8_ekn4tF/

ರಿಯಲ್‌ಮಿ 3 ಪ್ರೊ ಫೋನಿನ ಫೋಟೋಗಳು

ಕೆಲಸದ ವೇಗ

ರಿಯಲ್‌ಮಿಯವರು ಮೂರು ಶ್ರೇಣಿಗಳಲ್ಲಿ
ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಅವುಗಳಲ್ಲಿ ಪ್ರೊ ಎಂದರೆ ಮೇಲ್ದರ್ಜೆಯದು. ಹೆಸರೇ
ತಿಳಿಸುವಂತೆ ಇವುಗಳು ಮುಖ್ಯವಾಗಿ ಕೆಲಸದ ವೇಗಕ್ಕೆ ಪ್ರಾಮುಖ್ಯವನ್ನು ನೀಡಿರುವ ಫೋನ್‌ಗಳು. ರಿಯಲ್‌ಮಿ
3 ಪ್ರೊದಲ್ಲಿ ಬಳಸಿರುವುದು ಸ್ನ್ಯಾಪ್‌ಡ್ರಾಗನ್ 710 ಪ್ರೋಸೆಸರ್. ಇದನ್ನು ಸಾಮಾನ್ಯವಾಗಿ ಮಧ್ಯಮ
ದರ್ಜೆಯ ಫೋನ್‌ಗಳಲ್ಲಿ ಬಳಸುತ್ತಾರೆ. ಈ ಫೋನಿನ ಅಂಟುಟು ಬೆಂಚ್‌ಮಾರ್ಕ್ 1,53,931 ಇದೆ. ಅಂದರೆ ಇದು
ವೇಗದ ಫೋನ್ ಎನ್ನಬಹುದು. ಬಳಸುವಾಗ ಇದು ವೇದ್ಯವಾಗುತ್ತದೆ. ಮೂರು ಆಯಾಮದ ಆಟಗಳನ್ನು ಕೂಡ
ತೃಪ್ತಿದಾಯಕವಾಗಿ ಆಡಬಹುದು. ಹಲವು ತಂತ್ರಾಂಶಗಳನ್ನು ಏಕಕಾಲಕ್ಕೆ ತೆರೆದರೂ ಇದು  ತಡೆತಡೆದು ಕೆಲಸ ಮಾಡುವುದಿಲ್ಲ. PUBG ಆಟವನ್ನು ಆಡುವ ಅನುಭವ ತೃಪ್ತಿದಾಯಕವಾಗಿದೆ. ಫೋನಿನ ವೇಗ ನಿಮಗೆ
ಮುಖ್ಯವಾದಲ್ಲಿ ಹಾಗೂ 18 ಸಾವಿರದ ಒಳಗೆ  ನಿಮಗೆ
ವೇಗದ ಫೋನ್ ಬೇಕಿದ್ದಲ್ಲಿ ನೀವು ಇದನ್ನು ಖಂಡಿತ ಕೊಳ್ಳಬಹದು.

ರಿಯಲ್‌ಮಿ 2 ಪ್ರೊ ಫೋನಿನಂತೆಯೇ ಇದರ ಪರದೆಯ
ಗುಣವೈಶಿಷ್ಟ್ಯ ಮತ್ತು ವಿನ್ಯಾಸ ಇದೆ ಹಾಗೂ ಅದು ಚೆನ್ನಾಗಿದೆ. ಇದರ ರೆಸೊಲೂಶನ್‌ನಲ್ಲಿ
ಬದಲಾವಣೆಯಾಗಿಲ್ಲ. ಅದು 1080 x 2340 ಪಿಕ್ಸೆಲ್ ಇದೆ. ಅಂದರೆ
ಹೈಡೆಫಿನಿಶನ್‌ಗಿಂತ ಸ್ವಲ್ಪ ಹೆಚ್ಚು. ಪರದೆ ಅಮೋಲೆಡ್ ಅಲ್ಲ. ಆದರೂ ವಿಡಿಯೋ ವೀಕ್ಷಣೆಯ ಅನುಭವ ಚೆನ್ನಾಗಿದೆ.
ಹೈಡೆಫಿನಿಶನ್ ಮತ್ತು ಅಲ್ಟ್ರಾಹೈಡೆಫಿನಿಶನ್ (4k) ವಿಡಿಯೋ ವೀಕ್ಷಣೆ
ಮಾಡಬಹುದು. ಇವರು ನೀರಹನಿ (ಡ್ಯೂಡ್ರಾಪ್) ವಿನ್ಯಾಸವನ್ನು ಬಳಸಿದ್ದಾರೆ. ಅಂದರೆ ಅಂಚುರಹಿತ
(bezelless) ಪರದೆಯಲ್ಲಿ ಪರದೆಯ ಕಚ್ಚು (notch) ಕೂಡ ಇದೆ ಮಾತ್ರವಲ್ಲ
ಈ ಕಚ್ಚು ಅತಿ ಚಿಕ್ಕದಾಗಿದ್ದು ನೀರಿನ ಹನಿಯಂತೆ ಇದೆ. ಈ ಎಲ್ಲವನ್ನು ನಾನು ರಿಯಲ್‌ಮೆ 2 ಪ್ರೊ
ಬಗ್ಗೆ ಬರೆದಿದ್ದೆ. ಈ ಫೋನಿನಲ್ಲೂ ಅದು ಹಾಗೆಯೇ ಇದೆ.  ಈ ಫೋನಿನ ಆಡಿಯೋ ಇಂಜಿನ್ ನಿಜಕ್ಕೂ ಚೆನ್ನಾಗಿದೆ. ಫೋನಿನ ಜೊತೆ ಇಯರ್‌ಫೋನ್
ನೀಡಿಲ್ಲ. ನಿಮ್ಮಲ್ಲಿ ಉತ್ತಮ ಇಯರ್‌ಫೋನ್ ಇದ್ದರೆ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ
ಪಡೆಯಬಹುದು. ಎಫ್‌ಎಂ ರೇಡಿಯೋ ಇದೆ. ಅದರ ಗ್ರಾಹಕ ಶಕ್ತಿ ತುಂಬ ಶಕ್ತಿಶಾಲಿಯಾಗಿಲ್ಲ. ಆದರೆ
ಆಡಿಯೋ ಗುಣಮಟ್ಟ ಚೆನ್ನಾಗಿದೆ.

ಕ್ಯಾಮರ

ಈ ರಿಯಲ್‌ಮಿ 3 ಪ್ರೊ ಫೋನಿನಲ್ಲಿರುವುದು  16 ಮೆಗಾಪಿಕ್ಸೆಲ್‌ f/1.7 ಮತ್ತು 5 ಮೆಗಾಪಿಕ್ಸೆಲ್‌ f/2.4 ನ ಪ್ರಾಥಮಿಕ ಕ್ಯಾಮರಗಳು. ನೀಡುವ ಹಣಕ್ಕೆ ಹೋಲಿಸಿದರೆ ಕ್ಯಾಮರದ ಗುಣಮಟ್ಟ ನಿಜಕ್ಕೂ ಚೆನ್ನಾಗಿದೆ ಎನ್ನಬಹುದು. ಕ್ಯಾಮರದ ಕಿರುತಂತ್ರಾಂಶದಲ್ಲಿ ಮ್ಯಾನ್ಯುವಲ್ ಆಯ್ಕೆ ಕೂಡ ಇದೆ. ಬಹುತೇಕ ಸಂದರ್ಭಗಳಲ್ಲಿ ಉತ್ತಮ ಫೋಟೋ ತೆಗೆಯುತ್ತದೆ. ಕಡಿಮೆ ಬೆಳಕಿನಲ್ಲೂ ಒಂದು ಮಟ್ಟಿಗೆ ತೃಪ್ತಿದಾಯಕವಾಗಿ ಫೋಟೋ ತೆಗೆಯುತ್ತದೆ. ನನಗಂತೂ ಇದರ ಮ್ಯಾನ್ಯುವಲ್ ಮೋಡ್ ತುಂಬ ಇಷ್ಟವಾಯಿತು. ನಿಮ್ಮಲ್ಲಿ ಒಬ್ಬ ಪರಿಣತ ಫೋಟೋಗ್ರಾಫರ್ ಇದ್ದಲ್ಲಿ ಈ ಫೋನ್ ತೆಗೆದುಕೊಂಡು ನೀವು ಒಂದು ಮಟ್ಟಿಗೆ ಉತ್ತಮ ಫೋಟೋ ತೆಗೆಯಬಹುದು. ಬಣ್ಣಗಳೂ ಸರಿಯಾಗಿಯೇ ಮೂಡಿ ಬರುತ್ತವೆ. ಪ್ರಾಥಮಿಕ ಕ್ಯಾಮರದಲ್ಲಿ ಸೋನಿ ಸಂವೇದಕ ಇದೆ (Sony IMX 519 sensor). ಆದುದರಿಂದಲೇ ಇದರ ಕ್ಯಾಮರ ಉತ್ತಮ ಮಟ್ಟದ್ದಾಗಿದೆ. ಆದರೆ ನಾನು ಗಮನಿಸಿದ ಒಂದು ಸಣ್ಣ ಬಾಧಕವೆಂದರೆ ಫೋಕಸ್ ಮಾಡುವಾಗ ಕೆಲವೊಮ್ಮೆ ಇದು ಸ್ವಲ್ಪ ಜಾಸ್ತಿ ಸಮಯ ತೆಗೆದುಕೊಳ್ಳುತ್ತದೆ. ಇದರಿಂದಾಗಿ ಚಲನೆಯಲ್ಲಿರುವ ವಸ್ತುಗಳ ಫೋಟೋ ತೆಗೆಯಲು ಸ್ವಲ್ಪ ಕಷ್ಟವಾಗುತ್ತದೆ. ಸ್ವಂತೀಗೆಂದೇ 25 ಮೆಗಾಪಿಕ್ಸೆಲ್ ಕ್ಯಾಮರ ಇದೆ. ಅತಿ ನಿಧಾನವಾದ ವಿಡಿಯೋ ಚಿತ್ರೀಕರಣ ಮಾಡಬಹುದು. ಇದಕ್ಕೆಂದೇ ಸೂಪರ್ ಸ್ಲೋ ಮೋಶನ್ ಎಂಬ ಸವಲತ್ತು ನೀಡಿದ್ದಾರೆ. ಇದನ್ನು ಬಳಸಿ ಸೆಕೆಂಡಿಗೆ 960 ಪ್ರೇಂ (fps) ತನಕ ವಿಡಿಯೋ ಚಿತ್ರೀಕರಣ ಮಾಡಬಹುದು. ನೀಡುವ ಹಣಕ್ಕೆ ಉತ್ತಮ ಕ್ಯಾಮರ ಫೋನ್‌ ಬೇಕು ಎನ್ನುವವರಿಗೆ ಇದು ಆಗಬಹುದು.

Realme 3 Pro phone camera photo samples

ರಿಯಲ್‌ಮಿ 3 ಪ್ರೊ ಫೋನಿನಲ್ಲಿ ತೆಗೆದ ಫೋಟೋಗಳು

ಬ್ಯಾಟರಿ

ಬ್ಯಾಟರಿಯ ಶಕ್ತಿ 4045 mAh ಎಂದರೆ ಸಾಕಷ್ಟಾಯಿತು.
ಒಂದು ಒಂದೂವರೆ ದಿನಕ್ಕೆ ಧಾರಾಳ ಸಾಕು. ಇವರು VOOC ಚಾರ್ಜರ್ ನೀಡಿದ್ದಾರೆ. ಇದು ವೇಗವಾಗಿ ಚಾರ್ಜ್ ಮಾಡುತ್ತದೆ. ಸುಮಾರು
80 ನಿಮಿಷಗಳಲ್ಲಿ 0 ಯಿಂದ 100% ಚಾರ್ಜ್ ಮಾಡುತ್ತದೆ. ಅದರಲ್ಲೂ ಮೊದಲ 80% ಅನ್ನು ಸುಮಾರು 35
ನಿಮಿಷಗಳಲ್ಲಿ ಮಾಡುತ್ತದೆ. ಈ VOOC ಚಾರ್ಜರ್ ವೈಶಿಷ್ಟ್ಯವೆಂದರೆ ಇದು ಅತಿ ವೇಗವಾಗಿ ಚಾರ್ಜ್ ಮಾಡುವಾಗ
ಫೋನ್ ಬಿಸಿಯಾಗುವುದಿಲ್ಲ. ಈ VOOC ತಂತ್ರಜ್ಞಾನ ಒಪ್ಪೊದವರ ಆವಿಷ್ಕಾರ. ಇದೇ ತಂತ್ರಜ್ಞಾನವನ್ನು ವನ್‌ಪ್ಲಸ್
ಫೋನ್‌ಗಳಲ್ಲಿ ಡ್ಯಾಶ್ ಚಾರ್ಜಿಂಗ್ ಎಂಬ ಹೆಸರಿನಲ್ಲಿ ಬಳಸುತ್ತಿದ್ದಾರೆ. ವನ್‌ಪ್ಲಸ್, ಒಪ್ಪೊ,
ರಿಯಲ್‌ಮಿ ಮತ್ತು ವಿವೊ – ಈ ಎಲ್ಲ ಕಂಪೆನಿಗಳ ತಾಯಿ ಕಂಪೆನಿ ಒಂದೇ – ಬಿಬಿಕೆ ಇಲೆಕ್ಟ್ರಾನಿಕ್ಸ್.

ತೀರ್ಪು

ಈ ಫೋನಿನ ಹೆಚ್ಚುಗಾರಿಕೆಯಿರುವುದು ಕಡಿಮೆ ಬೆಲೆಗೆ 6+128
ಗಿಗಾಬೈಟ್ ಮೆಮೊರಿ, ಉತ್ತಮ ವೇಗ, ತೃಪ್ತಿ ನೀಡುವ ಕ್ಯಾಮರ ಮತ್ತು ಉತ್ತಮ ವಿನ್ಯಾಸ. ಒಟ್ಟಿನಲ್ಲಿ
ಹೇಳುವುದಾದರೆ ನಿಜಕ್ಕೂ ನೀಡುವ ಹಣಕ್ಕೆ ಅತ್ಯುತ್ತಮ ಖರೀದಿ ಎನ್ನಬಹುದು. ಇದೇ ಮಾತುಗಳನ್ನು
ರಿಯಲ್‌ಮಿ 2 ಪ್ರೊ ಬಗ್ಗೆ ಬರೆದಿದ್ದೆ. ಈಗ ಅದನ್ನೇ ರಿಯಲ್‌ಮಿ 3 ಪ್ರೊ ಬಗ್ಗೆಯೂ
ಹೇಳುತ್ತಿದ್ದೇನೆ.

–ಡಾ| ಯು.ಬಿ. ಪವನಜ

gadgetloka @ gmail . com

The post ರಿಯಲ್‌ಮಿ 3 ಪ್ರೊ first appeared on Vishva Kannada.

ಮೊಬಿಸ್ಟಾರ್ ಎಕ್ಸ್‌ 1 ನೋಚ್
ಕಡಿಮೆ ಬೆಲೆಗೆ ಸುಂದರ
ವಿನ್ಯಾಸದ ಫೋನ್

ವಿಯೆಟ್ನಾಂ ಮೂಲದ ಮೊಬಿಸ್ಟಾರ್ ಕಂಪೆನಿ ಭಾರತದಲ್ಲೂ ಫೋನ್‌ಗಳನ್ನು ಮಾರುತ್ತಿದೆ. ಈ ಕಂಪೆನಿಯ ಉತ್ಪನ್ನಗಳು ಕಡಿಮೆ ಬೆಲೆಯವು. ಬಹುತೇಕ ಕಂಪೆನಿಗಳಂತೆ ಮೊಬಿಸ್ಟಾರ್ ಕೂಡ ₹10-15 ಸಾವಿರದ ಒಳಗಿನ ಮಾರುಕಟ್ಟೆಯನ್ನೇ ಗಮನದಲ್ಲಿಟ್ಟುಕೊಂಡಿದೆ. ಯಾಕೆಂದರೆ ಈ ಬೆಲೆಯ ಫೋನ್‌ಗಳೇ ಅತ್ಯಧಿಕ ಮಾರಾಟವಾಗುತ್ತಿರುವವು. ಅವರ ಎಕ್ಸ್‌ 1 ನೋಚ್ (Mobiistar X1 Notch) ಸ್ಮಾರ್ಟ್‌ಫೋನ್ ಬಗ್ಗೆ ನಮ್ಮ ವಿಮರ್ಶಾ ನೋಟ ಇಲ್ಲಿದೆ.

ಗುಣವೈಶಿಷ್ಟ್ಯಗಳು

ಪ್ರೋಸೆಸರ್

4 x 2 ಗಿಗಾಹರ್ಟ್ಸ್ ಪ್ರೋಸೆಸರ್ (Mediatek 6761)

ಗ್ರಾಫಿಕ್ಸ್ ಪ್ರೋಸೆಸರ್

PowerVR GE8300

ಮೆಮೊರಿ

2 + 16
ಗಿಗಾಬೈಟ್
3 + 32 ಗಿಗಾಬೈಟ್

ಮೈಕ್ರೊಎಸ್‌ಡಿ ಮೆಮೊರಿ
ಸೌಲಭ್ಯ

ಇದೆ (ಪ್ರತ್ಯೇಕ)

ಪರದೆ

5.7 ಇಂಚು ಗಾತ್ರದ 720 x 1402 ಪಿಕ್ಸೆಲ್ ಐಪಿಎಸ್

ಕ್ಯಾಮರ

13 ಮೆಗಾಪಿಕ್ಸೆಲ್ ಪ್ರಾಥಮಿಕ
+ ಫ್ಲಾಶ್
13 ಮೆಗಾಪಿಕ್ಸೆಲ್ ಸ್ವಂತೀ

ಸಿಮ್

2 ನ್ಯಾನೊ

ಬ್ಯಾಟರಿ

3020 mAh

ಗಾತ್ರ

145 x 70 x 8 ಮಿ.ಮೀ.

ತೂಕ

161 ಗ್ರಾಂ

ಬೆರಳಚ್ಚು ಸ್ಕ್ಯಾನರ್

ಇದೆ

ಅವಕೆಂಪು ದೂರನಿಯಂತ್ರಕ
(Infrared remote)

ಇಲ್ಲ

ಎಫ್.ಎಂ. ರೇಡಿಯೋ

ಇದೆ

ಎನ್‌ಎಫ್‌ಸಿ

ಇಲ್ಲ

ಇಯರ್‌ಫೋನ್

‌ಇದೆ

ಯುಎಸ್‌ಬಿ ಓಟಿಜಿ
ಬೆಂಬಲ

ಇದೆ

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 8.1

ಬೆಲೆ

₹8,024 (3+32) (ಅಮೆಝಾನ್)

ಇದು ಕಡಿಮೆ ಬೆಲೆಯ ಫೋನ್. ಯಾವುದೇ ವಸ್ತುವಿನ ವಿಮರ್ಶೆ ಬರೆಯುವಾಗ ಅದು ನಾವು ನೀಡುವ ಹಣಕ್ಕೆ ತಕ್ಕ ಉತ್ಪನ್ನವೇ ಎಂಬುದನ್ನು ಗಮನಿಸಬೇಕು. ಈ ಫೋನಿನ ರಚನೆ ಮತ್ತು ವಿನ್ಯಾಸ ನಿಜಕ್ಕೂ ಚೆನ್ನಾಗಿದೆ. ಕಡಿಮೆ ಬೆಲೆಯ ಫೋನ್ ಎಂದು ಅನ್ನಿಸುವುದಿಲ್ಲ. ಬಲಗಡೆ ಆನ್/ಆಫ್ ಬಟನ್ ಮತ್ತು ವಾಲ್ಯೂಮ್ ಬಟನ್ ಇವೆ. ಎಡಗಡೆ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕುವ ಟ್ರೇ ಇದೆ. ಮೇಲ್ಗಡೆ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮತ್ತು ಕೆಳಗಡೆ ಮೈಕ್ರೊಯುಎಸ್‌ಬಿ ಕಿಂಡಿ ಇವೆ. ಹಿಂದುಗಡೆ ಬಲ ಮೂಲೆಯಲ್ಲಿ ಪ್ರಾಥಮಿಕ ಕ್ಯಾಮರ ಮತ್ತು ಕೆಳಗಡೆ ಫ್ಲಾಶ್ ಇದೆ. ಹಿಂದುಗಡೆ ಸ್ವಲ್ಪ ಮೇಲ್ಗಡೆ ಮಧ್ಯದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಹಿಂಭಾಗದ ಕವಚ ಹೊಳಪಾಗಿದೆ ಹಾಗೂ ಅತಿ ನಯವಾಗಿದೆ. ಆದುದರಿಂದ ಕೈಯಿಂದ ಬೀಳುವ ಭಯವಿದೆ. ಆದುದರಿಂದ ಕಂಪೆನಿಯವರೇ ಒಂದು ಅಧಿಕ ಪ್ಲಾಸ್ಟಿಕ್ ಕವಚ ನೀಡಿದ್ದಾರೆ.  ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ ಮಾತ್ರವಲ್ಲ ಕಡಿಮೆ ಬೆಲೆಯ ಫೋನ್ ಎಂದು ಅನ್ನಿಸುವುದೇ ಇಲ್ಲ. ಕಡಿಮೆ ಬೆಲೆಗೆ ಸುಂದರ ಫೋನ್ ಬೇಕು ಎನ್ನುವವರು ಈ ಫೋನ್ ಕೊಳ್ಳಬಹುದು.

https://www.instagram.com/p/BsvQQo7AH3S/

ಮೊಬಿಸ್ಟಾರ್ ಎಕ್ಸ್‌ 1 ನೋಚ್

ಇದರ ಕೆಲಸದ ವೇಗ ಪರವಾಗಿಲ್ಲ. ಇದರ ಅಂಟುಟು ಬೆಂಚ್‌ಮಾರ್ಕ್ 65,780 ಇದೆ. ಅಂದರೆ ಇದು ಅತಿ ವೇಗದ ಫೋನ್ ಅಲ್ಲ. ಹಾಗೆಂದು ಅತಿ
ಕಡಿಮೆ ವೇಗದ್ದೂ ಅಲ್ಲ. ಸಾಮಾನ್ಯ ಆಟಗಳನ್ನು ಆಡುವ ಅನುಭವ ಪರವಾಗಿಲ್ಲ. ಅತಿ ಶಕ್ತಿಯನ್ನು ಬೇಡುವ
ಆಟಗಳನ್ನು ಆಡಲು ಇದು ತಕ್ಕುದಲ್ಲ. ಪರದೆಯಲ್ಲಿ ಐಕಾನ್‌ಗಳನ್ನು ಸರಿಸುವ ಪರವಾಗಿಲ್ಲ. ಕಿರುತಂತ್ರಾಂಶಗಳು
ತೆರೆದುಕೊಳ್ಳಲು ತುಂಬ ಸಮಯ ತೆಗೆದುಕೊಳ್ಳುತ್ತದೆ ಎಂದು ಅನ್ನಿಸುವುದಿಲ್ಲ. ಸ್ವಲ್ಪ ನಿಧಾನ ಎಂಬುದೇನೋ
ಹೌದು. ಆದರೂ ಸಾಮಾನ್ಯ ಬಳಕೆಗೆ ಇದರ ವೇಗ ಸಾಕು. ಆದರೆ ಈ ಫೋನ್ ತುಂಬ ಹೊತ್ತು ವಿಡಿಯೋ ವೀಕ್ಷಣೆ ಮಾಡಿದರೆ
ಅಥವಾ ಆಟ ಆಡಿದರೆ ತುಂಬ ಬಿಸಿಯಾಗುತ್ತದೆ. ಚಾರ್ಜ್ ಮಾಡುವಾಗಲೂ ಬಿಸಿಯಾಗುತ್ತದೆ.

ಪರದೆಯ ರೆಸೊಲೂಶನ್ ಉತ್ತಮವಾಗಿದೆ.
ವಿಡಿಯೋ ವೀಕ್ಷಣೆಯ ಅನುಭವ ತೃಪ್ರಿದಾಯಕವಗಿದೆ. ಹೈಡೆಫಿನಿಶನ್ ವಿಡಿಯೋ ಮಾತ್ರವಲ್ಲ 4k ವಿಡಿಯೋ ಕೂಡ ಪ್ಲೇ ಆಗುತ್ತದೆ.
ಆಡಿಯೋ ಇಂಜಿನ್ ಒಂದು ಮಟ್ಟಿಗೆ ತೃಪ್ತಿದಾಯಕವಾಗಿದೆ. ಇಯರ್‌ಫೋನ್ ನೀಡಿದ್ದಾರೆ. ಆದರೆ ಅದರ ಗುಣಮಟ್ಟ
ಅತ್ಯುತ್ತಮವಾಗಿಲ್ಲ. ಹಾಗೆಂದು ಹೇಳಿ ಅತಿ ಕಳಪೆಯಾಗೇನೂ ಇಲ್ಲ. ನಿಮ್ಮಲ್ಲಿರುವ ಉತ್ತಮ ಇಯರ್‌ಫೋನ್
ಜೋಡಿಸಿದರೆ ತೃಪ್ತಿದಾಯಕವಾದ ಸಂಗೀತ ಆಲಿಸಬಹುದು. ಇದರಲ್ಲಿರುವ ಎಫ್‌ಎಂ ರೇಡಿಯೋದ ಗ್ರಾಹಕ ಶಕ್ತಿ
ಚೆನ್ನಾಗಿದೆ. ಮನೆಯ ಒಳಗೆ ಕೂಡ ಬಹುತೇಕ ಕೇಂದ್ರಗಳು ಚೆನ್ನಾಗಿ ಕೇಳುತ್ತವೆ.

ಇದರಲ್ಲಿ 13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು ಸ್ವಂತೀ ಕ್ಯಾಮರಗಳಿವೆ. ತುಂಬ ಬೆಳಕಿದ್ದಲ್ಲಿ ಒಂದು ಮಟ್ಟಿಗೆ ಚೆನ್ನಾಗಿ ಫೋಟೋ ತೆಗೆಯುತ್ತದೆ. ಆದರೆ ಕಡಿಮೆ ಬೆಳಕಿನಲ್ಲಿ ಫೋಟೋ ಅಷ್ಟೇನೂ ಚೆನ್ನಾಗಿ ಮೂಡಿ ಬರುವುದಿಲ್ಲ. ಈ ಫೋನಿನ ಕ್ಯಾಮರ ಹಲವು ಸಲ ಸರಿಯಾಗಿ ಫೋಕಸ್ ಮಾಡಲು ಒದ್ದಾಡುತ್ತದೆ. ಕ್ಯಾಮರದ ಕಿರುತಂತ್ರಾಂಶದಲ್ಲಿ ಮ್ಯಾನ್ಯುವಲ್ ಮೋಡ್ ಕೂಡ ಇದೆ. ಆದರೆ ಅದು ಪರಿಪೂರ್ಣವಾಗಿಲ್ಲ. ಅದರಲ್ಲಿ ಮ್ಯಾನ್ಯುವಲ್ ಫೋಕಸ್ ಇಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಒಂದು ನಿಜಕ್ಕೂ ಉತ್ತಮ ಕ್ಯಾಮರ ಬೇಕು ಎನ್ನುವುದು ನಿಮ್ಮ ಪ್ರಥಮ ಆದ್ಯತೆಯಾದರೆ ಈ ಫೋನ್ ನಿಮಗೆ ಹೇಳಿದ್ದಲ್ಲ.

Mobiistar X1 Notch Photo Samples

ಮೊಬಿಸ್ಟಾರ್ ಎಕ್ಸ್‌ 1 ನೋಚ್ ಬಳಸಿ ತೆಗೆದ ಫೋಟೋಗಳು

ಇದರಲ್ಲಿ 3020 mAh ಶಕ್ತಿಯ ಬ್ಯಾಟರಿ ಇರುವುದು. ವೇಗದ ಚಾರ್ಜಿಂಗ್
ವ್ಯವಸ್ಥೆಯಿಲ್ಲ. ಬ್ಯಾಟರಿ ಸುಮಾರು ಒಂದು ದಿನ ಬಾಳಿಕೆ ಬರುತ್ತದೆ. ಚಾರ್ಜ್ ಮಾಡುವಾಗ ಫೋನ್ ಸ್ವಲ್ಪ
ಬಿಸಿಯಾಗುತ್ತದೆ.

ಕನ್ನಡದ ತೋರುವಿಕೆ ಸರಿಯಾಗಿದೆ. ಕನ್ನಡದ ಯೂಸರ್ ಇಂಟರ್‌ಫೇಸ್
ಕೂಡ ಇದೆ.

ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ಒಂದು ಮಟ್ಟಿಗೆ
ತಕ್ಕುದಾದ ಫೋನ್ ಎಂದು ಹೇಳಬಹುದು.

-ಡಾ| ಯು.ಬಿ. ಪವನಜ

gadgetloka @ gmail . com

The post ಮೊಬಿಸ್ಟಾರ್ ಎಕ್ಸ್‌ 1 ನೋಚ್ first appeared on Vishva Kannada.

ಹೋನರ್ 10 ಲೈಟ್
ಒಂದು ಸುಂದರ ಫೋನ್

ಮೊದಲಿಗೆ ಹುವಾವೆಯವರ ಸಬ್-ಬ್ರ್ಯಾಂಡ್ ಆಗಿದ್ದ ಹೋನರ್ ಮಾರುಕಟ್ಟೆಯಲ್ಲಿ ಹೆಸರು ಮಾಡಿದ ನಂತರ ತನ್ನದೇ ಹೆಸರಿನ ಕಂಪೆನಿಯಾಗಿದೆ. ನೀಡುವ ಬೆಲೆಗೆ ಉತ್ತಮ ಎನ್ನಬಹುದಾದ ಫೋನ್‌ಗಳನ್ನು ನೀಡುತ್ತ ಬಂದಿರುವ ಒಂದು ಕಂಪೆನಿ ಹೋನರ್ ಎನ್ನಬಹುದು. ಹೋನರ್ ಕಂಪೆನಿ ಹಲವು ಶ್ರೇಣಿಗಳಲ್ಲಿ ಫೋನ್‌ಗಳನ್ನು ಮಾರುಕಟ್ಟೆಗೆ ನಿಯಮಿತವಾಗಿ ಬಿಡುಗಡೆ ಮಾಡುತ್ತಾ ಬಂದಿದೆ. ಲೈಟ್ ಶ್ರೇಣಿಯ ಫೋನ್‌ಗಳು ಕಡಿಮೆ ಬೆಲೆಯವು. ನಾವು ಈ ಸಲ ವಿಮರ್ಶಿಸುತ್ತಿರುವುದು ಹೋನರ್ 10 ಲೈಟ್ (Honor 10 Lite).

ಪ್ರೋಸೆಸರ್

8 x 2.2 ಗಿಗಾಹರ್ಟ್ಸ್ ಪ್ರೋಸೆಸರ್ (Kirin 710)

ಗ್ರಾಫಿಕ್ಸ್ ಪ್ರೋಸೆಸರ್

Mali-G51

ಮೆಮೊರಿ

4 + 64 ಗಿಗಾಬೈಟ್

ಮೈಕ್ರೊಎಸ್‌ಡಿ ಮೆಮೊರಿ
ಸೌಲಭ್ಯ

ಇದೆ

ಪರದೆ

6.21 ಇಂಚು ಗಾತ್ರದ
1080 x 2340 ಪಿಕ್ಸೆಲ್

ಕ್ಯಾಮರ

13 + 2  ಮೆಗಾಪಿಕ್ಸೆಲ್ ಎರಡು ಪ್ರಾಥಮಿಕ + ಫ್ಲಾಶ್
24 ಮೆಗಾಪಿಕ್ಸೆಲ್   ಸ್ವಂತೀ

ಸಿಮ್

2 ನ್ಯಾನೊ ಅಥವಾ
1 ನ್ಯಾನೊ ಮತ್ತು ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್

ಬ್ಯಾಟರಿ

3400 mAh

ಗಾತ್ರ

155 x 74 x 8 ಮಿ.ಮೀ.

ತೂಕ

162 ಗ್ರಾಂ

ಬೆರಳಚ್ಚು ಸ್ಕ್ಯಾನರ್

ಇದೆ

ಅವಕೆಂಪು ದೂರನಿಯಂತ್ರಕ
(Infrared remote)

ಇಲ್ಲ

ಎಫ್.ಎಂ. ರೇಡಿಯೋ

ಇದೆ

ಎನ್‌ಎಫ್‌ಸಿ

ಇಲ್ಲ

4 ಜಿ ವಿಓಎಲ್‌ಟಿಇ
(4G VoLTE)

ಇದೆ

ಇಯರ್‌ಫೋನ್

‌ಇಲ್ಲ

ಯುಎಸ್‌ಬಿ ಓಟಿಜಿ
ಬೆಂಬಲ

ಇದೆ

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 9 + EMUI 9.0.1

ಬೆಲೆ

₹13,999
(ಫ್ಲಿಪ್‌ಕಾರ್ಟ್)

https://www.instagram.com/p/BsSUlF8gcnC/

ಹೋನರ್ ಫೋನ್‌ಗಳ ವೈಶಿಷ್ಟ್ಯವೆಂದರೆ ಅವುಗಳ ರಚನೆ ಮತ್ತು ವಿನ್ಯಾಸ. ಕೈಯಲ್ಲಿ ಹಿಡಿದಾಗ ಒಂದು ಸುಂದರ ಫೋನ್ ಹಿಡಿದ ಭಾವನೆ ಬರುವುದು ಖಂಡಿತ. ಇತ್ತೀಚೆಗಿನ ಬಹುತೇಕ ಫೋನ್‌ಗಳಂತೆ ಇದು ಕೂಡ ಅಂಚುರಹಿತ (bezelless) ಫೋನ್ ಅಂದರೆ 19:5.9 ಅನುಪಾತದ ಪರದೆ. 6.21 ಇಂಚಿನ ಪರದೆಯನ್ನು ಬಹುತೇಕ ಬಳಸಿಕೊಳ್ಳಲಾಗಿದೆ. ಪರದೆಯ ಮೇಲ್ಭಾಗದ ಮಧ್ಯದಲ್ಲಿ ಮುಂದುಗಡೆಯ ಕ್ಯಾಮರ ಒಂದು ಚಿಕ್ಕ ನೀರ ಬಿಂದುವಿನಂತಹ ಆಕಾರದಲ್ಲಿ ಅಡಗಿದೆ. ಈ ಒಂದು ಚಿಕ್ಕ ಬಿಂದು ಬಿಟ್ಟರೆ ಇಡಿಯ ಪರದೆಯನ್ನು ಬಳಸಿಕೊಳ್ಳಲಾಗಿದೆ. ಆದುದರಿಂದ ಬೆರಳಚ್ಚು ಸ್ಕ್ಯಾನರ್ ಹಿಂದುಗಡೆಗೆ ಹೋಗಿದೆ. 2.5ಡಿ ಗಾಜು ಇದೆ. ಹಿಂದುಗಡೆಯ ಕವಚ ಅತಿ ನಯವಾಗಿದೆ. ಅತಿ ನಯವಾಗಿರುವ ಕಾರಣ ಕೈಯಿಂದ ಜಾರಿ ಬೀಳದಂತೆ ಎಚ್ಚರಿಕೆ ವಹಿಸಬೇಕು. ಕೈಯಿಂದ ಜಾರಿ ಬೀಳದಂತೆ ಹೆಚ್ಚಿಗೆ ಕವಚ ಹಾಕಿಕೊಳ್ಳಬೇಕು. ಒಂದು ಪ್ಲಾಸ್ಟಿಕ್ ಕವಚವನ್ನು ಅವರೇ ನೀಡಿದ್ದಾರೆ.

ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮತ್ತು ಯುಎಸ್‌ಬಿ ಕಿಂಡಿಗಳಿವೆ. ಇದು ಯುಎಸ್‌ಬಿ-ಸಿ ಅಲ್ಲ. ಮೇಲ್ಭಾಗದಲ್ಲಿ ಚಿಕ್ಕ ಪಿನ್ ತೂರಿಸಿದಾಗ ಹೊರಬರುವ ಟ್ರೇ ಇದೆ. ಇದನ್ನು ಒಂದು ನ್ಯಾನೋ ಸಿಮ್ ಮತ್ತು ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಅಥವಾ ಎರಡು ನ್ಯಾನೋ ಸಿಮ್ ಹಾಕಲು ಬಳಸಲಾಗುತ್ತದೆ. ಯುಎಸ್‌ಬಿ ಓಟಿಜಿ ಸವಲತ್ತು ಇದೆ. ಹಿಂದುಗಡೆ ಬಲಮೂಲೆಯಲ್ಲಿ ಎರಡು ಕ್ಯಾಮರಗಳು ಒಂದರೆ ಕೆಳಗೆ ಇನ್ನೊಂದು ಇವೆ. ಅದರ ಕೆಳಗಡೆ ಫ್ಲಾಶ್ ಇದೆ. ಹಿಂಭಾಗದ ಮಧ್ಯಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಇದನ್ನು ಕೈಯಲ್ಲಿ ಹಿಡಿದಾಗ ಒಂದು ಉತ್ತಮ ಮೇಲ್ದರ್ಜೆಯ ಫೋನನ್ನು ಹಿಡಿದ ಭಾವನೆ ಬರುತ್ತದೆ.

ಇದರಲ್ಲಿ ಎರಡು ಪ್ರಾಥಮಿಕ ಕ್ಯಾಮರ ಹಾಗೂ ಒಂದು ಸ್ವಂತೀ ಕ್ಯಾಮರಗಳಿವೆ. ಇದರ ಕ್ಯಾಮರ ಕಿರುತಂತ್ರಾಂಶದಲ್ಲಿ ವಿಶೇಷ ಬದಲಾವಣೆಗಳಾಗಿಲ್ಲ. ಇತರೆ ಹೋನರ್ ಫೋನ್‌ಗಳಲ್ಲಿರುವಂತೆಯೇ ಇದೆ. ಕ್ಯಾಮರದ ಕಿರುತಂತ್ರಾಶದಲ್ಲಿ ಮ್ಯಾನ್ಯುವಲ್ ಮೋಡ್ ಆಯ್ಕೆ ಕೂಡ ಇದೆ. ಹೋನರ್ 9ಐ ಮತ್ತು 8 ಪ್ರೋ ಫೋನ್‌ಗಳ ಕ್ಯಾಮರಗಳಿಗೆ ಹೋಲಿಸಿದರೆ ಇದು ಸ್ವಲ್ಪ ಕೆಳಮಟ್ಟದ್ದು ಎನ್ನಬಹುದು. ಕೆಲವು ಸಂದರ್ಭಗಳಲ್ಲಿ ಫೋಟೋಗಳು ಚೆನ್ನಾಗಿ ಮೂಡಿಬರುತ್ತವೆ. ಎಲ್ಲ ಹೋನರ್ ಫೋನ್‌ಗಳ ಕ್ಯಾಮರಗಳ ಮೇಲೆ ನನ್ನ ಅಸಮಾಧಾನವೇನೆಂದರೆ ಪ್ರಾಥಮಿಕ ಬಣ್ಣಗಳನ್ನು ಸ್ವಲ್ಪ ಜಾಸ್ತಿಯೇ ಗಾಢವಾಗಿ ಮೂಡಿಸುವುದು. ಈ ಫೋನ್ ಕ್ಯಾಮರವೂ ಅದಕ್ಕೆ ಹೊರತಾಗಿಲ್ಲ. ಕಡಿಮೆ ಬೆಳಕಿನ ಫೊಟೋಗ್ರಾಪಿ ಅಷ್ಟು ತೃಪ್ತಿದಾಯಕವಾಗಿಲ್ಲ. ಈಫೋನ್ 24 ಮೆಗಾಪಿಕ್ಸೆಲ್ ಸ್ವಂತೀ ಕ್ಯಾಮರದ ಫೋನ್ ಎಂಬ ಹೆಗ್ಗಳಿಕೆಯೊಂದಿಗೆ ಮಾರುಕಟ್ಟೆಗೆ ಬಂದದ್ದು. ಸ್ವಂತೀ ಕ್ಯಾಮರದಲ್ಲಿ ಆಯ್ಕೆಯನ್ನು ಸರಿಯಾಗಿ ಮಾಡಿದಿದ್ದರೆ ಮುಖವನ್ನು ಜಾಸ್ತಿಯೇ ಸುಂದರ ಮಾಡುತ್ತದೆ. ಈ ರೀತಿ ಸೌಂದರ್ಯವನ್ನು ಹೆಚ್ಚಿಸಬಾರದಿದ್ದಲ್ಲಿ ಆ ಆಯ್ಕೆಯನ್ನು ಹುಡುಕಿ ಅದನ್ನು ಸೊನ್ನೆ ಮಾಡಬೇಕು. ಪೂರ್ವನಿಯೋಜಿತವಾಗಿ ಅದು 5ರಲ್ಲಿರುತ್ತದೆ. ನನಗೆ ಕ್ಯಾಮರದ ವಿಷಯದಲ್ಲಿ ಫೋನ್ ಸಂಪೂರ್ಣ ತೃಪ್ತಿ ನೀಡಿಲ್ಲ.

Honor 10 Lite Photo samples

ಇದರಲ್ಲಿರುವುದು 6.21
ಇಂಚು ಗಾತ್ರದ 1080 x 2340  ಪಿಕ್ಸೆಲ್ ರೆಸೊಲೂಶನ್‌ನ
ಪರದೆ. ಇದರ ಗುಣಮಟ್ಟ ಚೆನ್ನಾಗಿದೆ. ಫೋನಿನ ಕೆಲಸದ ವೇಗ ಪರವಾಗಿಲ್ಲ.
ಅಂಟುಟು ಬೆಂಚ್‌ಮಾರ್ಕ್‌ 130414 ಇದೆ. ಅಂದರೆ ವೇಗದ ಫೋನ್ ಎಂದು ತೀರ್ಮಾನಿಸಬಹುದು. ವಿಡಿಯೋ ವೀಕ್ಷಣೆ,
ಸಾಮಾನ್ಯ ಆಟ ಆಡುವುದು ಎಲ್ಲ ತೃಪ್ತಿದಾಯಕವಾಗಿವೆ. ಅಧಿಕ ಶಕ್ತಿಯನ್ನು ಬೇಡುವ ಮೂರು ಆಯಾಮದ ಆಟಗಳನ್ನು
ಆಡುವ ಅನುಭವ ಪರವಾವಾಗಿಲ್ಲ. ಹೈಡೆಫಿನಿಶನ್ ಸಹಿತ ಬಹುತೇಕ ಎಲ್ಲ ವಿಡಿಯೋಗಳ ವೀಕ್ಷಣೆ ಚೆನ್ನಾಗಿದೆ.
4k ವಿಡಿಯೋ ಕೂಡ ಪ್ಲೇ ಆಗುತ್ತದೆ. ಇದರ ಆಡಿಯೋ ಇಂಜಿನ್
ಒಂದು ಮಟ್ಟಿಗೆ ತೃಪ್ತಿದಾಯಕವಾಗಿದೆ. ಇಯರ್‌ಫೋನ್ ನೀಡಿಲ್ಲ. ಈ ಫೋನ್ ಬಿಸಿಯಾಗುವುದಿಲ್ಲ. ಬ್ಯಾಟರಿ
ಬಾಳಿಕೆ ಚೆನ್ನಾಗಿದೆ.

24 ಮೆಗಾಪಿಕ್ಸೆಲ್ ಸ್ವಂತೀ ಕ್ಯಾಮರ ಎಂಬ ಹೆಗ್ಗಳಿಕೆ
ಪ್ರಚಾರ ಮಾಡಿದಷ್ಟೇನೂ ಇಲ್ಲ. ಪೂರ್ತಿ ಪರದೆಯ ಬಳಕೆ ಉತ್ತಮ. ಬೆಲೆ ಸ್ವಲ್ಪ ಕಡಿಮೆ ಮಾಡಬಹುದಿತ್ತು
ಎಂದು ನನ್ನ ಅನಿಸಿಕೆ.

-ಡಾ| ಯು.ಬಿ. ಪವನಜ

gadgetloka @ gmail.com

The post ಹೋನರ್ 10 ಲೈಟ್ first appeared on Vishva Kannada.

ರಿಯಲ್‌ಮಿ ಸಿ1
ಕಡಿಮೆ ಬೆಲೆಗೆ ಉತ್ತಮ ಫೋನ್

ಒಪ್ಪೊ ಕಂಪೆನಿಯ ಸಬ್-ಬ್ರ್ಯಾಂಡ್ ಆಗಿ ಬಂದ ರಿಯಲ್‌ಮಿ ಈಗ ಸ್ವಂತ ಕಂಪೆನಿಯಾಗಿದೆ. ರಿಯಲ್‌ಮಿಯವರು ಅತಿ ಕಡಿಮೆ ಹಣಕ್ಕೆ ಉತ್ತಮ ಗುಣವೈಶಿಷ್ಟ್ಯಗಳ ಫೋನ್ ತಯಾರಿಸಿ ಶಿಯೋಮಿಯವರ ಜೊತೆ ನೇರ ಸ್ಪರ್ಧೆಗೆ ಇಳಿದಿದ್ದಾರೆ. ರಿಯಲ್‌ಮಿ1 ಮತ್ತು ರಿಯಲ್‌ಮಿ 2 ಪ್ರೊ ಎಂಬ ಎರಡು ಫೋನ್‌ಗಳ ವಿಮರ್ಶೆಯನ್ನು ಗ್ಯಾಜೆಟ್‌ಲೋಕ ಅಂಕಣದಲ್ಲಿ ಈ ಹಿಂದೆ ನೀಡಲಾಗಿತ್ತು. ನೀಡುವ ಹಣಕ್ಕೆ ನಿಜಕ್ಕೂ ಉತ್ತಮ ಉತ್ಪನ್ನಗಳು ಎಂದು ಅವುಗಳ ಬಗ್ಗೆ ಬರೆಯಲಾಗಿತ್ತು. ಈ ಸಲ ವಿಮರ್ಶೆ ಮಾಡುತ್ತಿರುವುದು ರಿಯಲ್‌ಮಿ ಸಿ1 (RealMe 1) ಎಂಬ ಕಡಿಮೆ ಬೆಲೆಯ ಫೋನನ್ನು.

ಗುಣವೈಶಿಷ್ಟ್ಯಗಳು

ಪ್ರೋಸೆಸರ್

8 x 1.8 ಗಿಗಾಹರ್ಟ್ಸ್ ಪ್ರೋಸೆಸರ್ (Snapdragon 450)

ಗ್ರಾಫಿಕ್ಸ್ ಪ್ರೋಸೆಸರ್

Adreno 506

ಮೆಮೊರಿ

2 + 16 ಗಿಗಾಬೈಟ್

ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ

ಇದೆ (ಪ್ರತ್ಯೇಕ ಜಾಗ, ಹೈಬ್ರಿಡ್ ಅಲ್ಲ)

ಪರದೆ

6.2 ಇಂಚು ಗಾತ್ರದ 1520 x 720 ಪಿಕ್ಸೆಲ್ ಐಪಿಎಸ್

ಕ್ಯಾಮರ

13 + 2 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್

5 ಮೆಗಾಪಿಕ್ಸೆಲ್ ಸ್ವಂತೀ

ಸಿಮ್

2 ನ್ಯಾನೊ

ಬ್ಯಾಟರಿ

4230 mAh

ಗಾತ್ರ

156.2 x 75.6 x 8.2 ಮಿ.ಮೀ.

ತೂಕ

168 ಗ್ರಾಂ

ಬೆರಳಚ್ಚು ಸ್ಕ್ಯಾನರ್

ಇಲ್ಲ

ಅವಕೆಂಪು ದೂರನಿಯಂತ್ರಕ (Infrared remote)

ಇಲ್ಲ

ಎಫ್.ಎಂ. ರೇಡಿಯೋ

ಇದೆ

ಎನ್‌ಎಫ್‌ಸಿ

ಇಲ್ಲ

4 ಜಿ ವಿಓಎಲ್‌ಟಿಇ (4G VoLTE)

ಇದೆ

ಇಯರ್‌ಫೋನ್

‌ಇಲ್ಲ

ಯುಎಸ್‌ಬಿ ಓಟಿಜಿ ಬೆಂಬಲ

ಇದೆ

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 8.1 + ಕಲರ್ ಓಎಸ್ 5.1

ಬೆಲೆ

₹8,990 (₹7,999 ಫ್ಲಿಪ್‌ಕಾರ್ಟ್)

ರಚನೆ ಮತ್ತು ವಿನ್ಯಾಸ

ಈ ಫೋನಿನ ರಚನೆ ಮತ್ತು ವಿನ್ಯಾಸವೂ ಇತರೆ ರಿಯಲ್‌ಮಿ ಫೋನ್‌ಗಳಂತೆ ಅತ್ಯುತ್ತಮವಾಗಿದೆ. ಕಡಿಮೆ ಬೆಲೆಗೆ ಇಷ್ಟು ಉತ್ತಮ ರಚನೆ ಮತ್ತು ವಿನ್ಯಾಸದ ಫೋನ್ ಸದ್ಯಕ್ಕೆ ಬೇರೆ ಯಾವುದೂ ಮಾರುಕಟ್ಟೆಯಲ್ಲಿ ಇಲ್ಲ ಎಂದೇ ಹೇಳಬಹುದು. ರಿಯಲ್‌ಮಿ ಪ್ರತ್ಯೇಕ ಕಂಪೆನಿಯಾದರೂ ಇನ್ನೂ ಒಪ್ಪೋದ ಫ್ಯಾಕ್ಟರಿಯಲ್ಲೇ ಅವರ ಫೋನ್‌ಗಳ ತಯಾರಾಗುತ್ತಿವೆ. ಈ ಫೋನಿನ ಜೊತೆ ಅವರು ನೀಡುತ್ತಿರುವ ಚಾರ್ಜರ್‌ನಲ್ಲಿ ಒಪ್ಪೊ ಎಂದೇ ಬರೆದಿದೆ. ಮೊದಲ ನೋಟಕ್ಕೇ ನೀವು ಇದಕ್ಕೆ ಮಾರುಹೋಗುತ್ತೀರಿ ಎಂಬುದರಲ್ಲಿ ಅನುಮಾನವೇ ಇಲ್ಲ. ಬಲ ಭಾಗದಲ್ಲಿ ಆನ್/ಆಫ್ ಸ್ವಿಚ್ ಇದೆ. ಎಡ ಭಾಗದಲ್ಲಿ ವಾಲ್ಯೂಮ್ ಬಟನ್ ಮತ್ತು ಸಿಮ್ ಹಾಗೂ ಮೆಮೊರಿ ಕಾರ್ಡ್ ಹಾಕುವ ಟ್ರೇ ಇವೆ. ಇದರಲ್ಲಿ ಎರಡು ನ್ಯಾನೋ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಯುಎಸ್‌ಬಿ ಕಿಂಡಿ ಮತ್ತು 3.5 ಮಿ. ಮೀ. ಇಯರ್‌ಫೋನ್ ಕಿಂಡಿಗಳಿವೆ.  ಹಿಂದುಗಡೆ ಬಲಮೂಲೆಯಲ್ಲಿ ಕ್ಯಾಮರಗಳು ಮತ್ತು ಪಕ್ಕದಲ್ಲಿ ಫ್ಲಾಶ್ ಇವೆ. ಇದರ ಒಂದು ಪ್ರಮುಖ ಕೊರತೆಯೆಂದರೆ ಇದರಲ್ಲಿ ಬೆರಳಚ್ಚು ಸ್ಕ್ಯಾನರ್ ಇಲ್ಲ ಎಂಬುದು. ಹಿಂಭಾಗದ ಕವಚದ ವಿನ್ಯಾಸ ಸುಂದರವಾಗಿದೆ. ಕವಚ ತುಂಬ ನಯವಾಗಿದೆ. ಕೈಯಿಂದ ಜಾರಿ ಬೀಳಬಾರದು ಎಂದಿದ್ದರೆ ಅಧಿಕ ಕವಚ ಹಾಕಿಕೊಳ್ಳಬೇಕು. ಒಂದು ಪ್ಲಾಸ್ಟಿಕ್ ಕವಚವನ್ನು ಅವರೇ ನೀಡಿದ್ದಾರೆ. ಮುಂಭಾಗದ ಪರದೆಯ ಮೇಲೂ ಅವರೇ ಒಂದು ಸ್ಕ್ರೀನ್ ಪ್ರೊಟೆಕ್ಟರ್ ಅಂಟಿಸಿದ್ದಾರೆ. ಎರಡು ಬಣ್ಣಗಳಲ್ಲಿ ಲಭ್ಯ. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸದಲ್ಲಿ ಇದು ಅತ್ಯುತ್ತಮ ಎಂದು ನಿರ್ದಾಕ್ಷಿಣ್ಯವಾಗಿ ಹೇಳಬಹುದು.

ಕೆಲಸದ ವೇಗ

ರಿಯಲ್‌ಮಿ ಸಿ1 ಫೋನಿನಲ್ಲಿ ಬಳಸಿರುವುದು ಸ್ನಾಪ್‌ಡ್ರಾಗನ್ 450 ಪ್ರೋಸೆಸರ್. ಅಂದರೆ ಇದು ಕಡಿಮೆ ಶಕ್ತಿಯ ಪ್ರೋಸೆಸರ್. ಕಡಿಮೆ ಬೆಲೆಯ ಫೋನ್ ಅಂದ ಮೇಲೆ ಕಡಿಮೆ ಬೆಲೆಯ ಪ್ರೋಸೆಸರ್ ಇರುವುದರಲ್ಲಿ ಆಶ್ಚರ್ಯವಿಲ್ಲ. ಅದು ಸಹಜ ತಾನೆ? ಹಾಗೆಂದು ಹೇಳಿ ಇದರ ಕೆಲಸದ ವೇಗ ತುಂಬ ಕಡಿಮೆಯೇನಿಲ್ಲ. ಇದರ ಅಂಟುಟು ಬೆಂಚ್‌ಮಾರ್ಕ್ 73,888 ಇದೆ. ಅಂದರೆ ಇದು ಮಧ್ಯಮ ಕಡಿಮೆ ವೇಗದ್ದು ಎನ್ನಬಹುದು. ಬಳಸುವಾಗ ಇದು ವೇದ್ಯವಾಗುತ್ತದೆ. ಕಡಿಮೆ ಶಕ್ತಿಯನ್ನು ಬೇಡುವ ಆಟಗಳನ್ನು ಆಡಬಹುದು. ಆದರೆ ಅಧಿಕ ಶಕ್ತಿಯನ್ನು ಬೇಡುವ ಮೂರು ಆಯಾಮದ ಆಟಗಳನ್ನು ಇದರಲ್ಲಿ ತೃಪ್ತಿದಾಯಕವಾಗಿ ಆಡವುದು ಸ್ವಲ್ಪ ಕಷ್ಟ. ಅತಿ ವೇಗದ ಫೋನ್ ಬೇಕು ಎನ್ನುವವರಿಗೆ ಇದು ಹೇಳಿದ್ದಲ್ಲ. ಆದರೂ ಇದರಲ್ಲಿರುವುದು ಕೇವಲ 2 ಗಿಗಾಬೈಟ್ ಮೆಮೊರಿ ಎಂಬುದನ್ನು ಗಮನಿಸಿದರೆ ಇದು ನಿಜಕ್ಕೂ ನೀಡುವ ಹಣಕ್ಕೆ ಉತ್ತಮ ಫೋನ್ ಎಂದೇ ಹೇಳಬಹುದು.

ಈ ಫೋನಿನಲ್ಲಿ ಬೆರಳಚ್ಚು ಸ್ಕ್ಯಾನರ್ ಇಲ್ಲ. ಆದರೆ ಮುಖವನ್ನು ಗುರುತಿಸುವ ಹಾಗೂ ಅದನ್ನೇ ಪ್ರವೇಶಕ್ಕೆ ಅಂಗೀಕಾರವಾಗಿ (face recognition & unlock) ಮಾಡಿಟ್ಟುಕೊಳ್ಳುವ ಸವಲತ್ತಿದೆ. ಈ ಸವಲತ್ತು ಮಾತ್ರ ಅಷ್ಟೇನೂ ತೃಪ್ತಿದಾಯಕವಾಗಿ ಕೆಲಸ ಮಾಡುತ್ತಿಲ್ಲ.

ಪರದೆ ಹಾಗೂ ಆಡಿಯೋ

ಈ ಫೋನಿನ ಪರದೆಯಲ್ಲಿ ಹೇಳಿಕೊಳ್ಳುವಂಥದ್ದೇನೂ ಇಲ್ಲ. ರೆಸೊಲೂಶನ್ ತುಂಬ ಏನಿಲ್ಲ. ಹೈಡೆಫಿನಿಶನ್ ವಿಡಿಯೋ ಪ್ಲೇ ಆಗುತ್ತದೆ. ವಿಡಿಯೋ ವೀಕ್ಷಣೆಯ ಅನುಭವ ತೃಪ್ತಿದಾಯಕವಾಗಿದೆ. ಆದರೆ 4k ವಿಡಿಯೋ ಪ್ಲೇ ಆಗುವುದಿಲ್ಲ. ಈ ಫೋನಿನ ಆಡಿಯೋ ಇಂಜಿನ್ ಚೆನ್ನಾಗಿದೆ. ಫೋನಿನ ಬೆಲೆಗೆ ಹೋಲಿಸಿದರೆ ಆಡಿಯೋ ಚೆನ್ನಾಗಿದೆ ಎಂದೇ ಹೇಳಬಹುದು. ಫೋನಿನ ಜೊತೆ ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಇಯರ್‌ಫೋನ್ ಇದ್ದರೆ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ ಪಡೆಯಬಹುದು. ಇದರಲ್ಲಿರುವ ಎಫ್‌ಎಂ ರೇಡಿಯೋದ ಗ್ರಾಹಕ ಶಕ್ತಿ ಚೆನ್ನಾಗಿದೆ. ಉತ್ತಮ ರೇಡಿಯೋ ಬೇಕು ಎನ್ನುವವರು ಈ ಫೋನನ್ನು ಖಂಡಿತ ಕೊಳ್ಳಬಹುದು.

ಕ್ಯಾಮರ

ಈ ಫೋನಿನಲ್ಲಿ ಹೆಸರಿಗೆ ಎರಡು ಪ್ರಾಥಮಿಕ ಕ್ಯಾಮರಗಳಿವೆ. ಅವುಗಳ ರೆಸೊಲೂಶನ್ 13 ಮತ್ತು 2 ಮೆಗಾಪಿಕ್ಸೆಲ್. ಕ್ಯಾಮರದ ಫಲಿತಾಂಶ ಅಂತಹ ಹೇಳಿಕೊಳ್ಳವ ಹಾಗೇನೂ ಇಲ್ಲ. ಸಂಪೂರ್ಣ ಕಳಪೆಯೂ ಅಲ್ಲ. ಉತ್ತಮ ಬೆಳಕಿನ ಸಂದರ್ಭಗಳಲ್ಲಿ ಉತ್ತಮ ಫೋಟೋ ಮೂಡಿಬರುತ್ತದೆ. ಹತ್ತಿರದ ವಸ್ತುಗಳ ಫೋಟೋ ಚೆನ್ನಾಗಿ ಬರುತ್ತದೆ. ಪ್ರಕೃತಿ ದೃಶ್ಯಗಳ ಮತ್ತು ಎಚ್‌ಡಿಆರ್ ಫೋಟೋಗಳು ಅಷ್ಟಕ್ಕಷ್ಟೆ. ಅತಿ ಕಡಿಮೆ ಬೆಳಕಿನಲ್ಲಂತೂ ಫೋಟೋ ನಿರಾಶಾದಾಯಕವಾಗಿದೆ. ವಿಡಿಯೋ ಚಿತ್ರೀಕರಣವೂ ಅಷ್ಟಕ್ಕಷ್ಟೆ. ನೀವು ಉತ್ತಮ ಛಾಯಾಗ್ರಾಹಕರಾಗಿದ್ದಲ್ಲಿ ಹಾಗೂ ಉತ್ತಮ ಕ್ಯಾಮರ ಫೋನ್ ಬೇಕು ಎಂಬುದು ನಿಮ್ಮ ಇರಾದೆಯಾಗಿದ್ದಲ್ಲಿ ಈ ಫೋನ್ ನಿಮಗಲ್ಲ. ಹಾಗೆಂದು ಹೇಳಿ ತುಂಬ ಕಳಪೆ ಕ್ಯಾಮರದ ಫೋನೇನೂ ಇದಲ್ಲ. ನೀಡುವ ಹಣಕ್ಕೆ ಹೋಲಿಸಿದರೆ ಕ್ಯಾಮರಕ್ಕೆ ಅಲ್ಲಿಂದಲ್ಲಿಗೆ ಪಾಸ್ ಮಾರ್ಕು ನೀಡಬಹುದು.

</tr

ಬ್ಯಾಟರಿ

ತುಂಬ ಶಕ್ತಿಯ ಬ್ಯಾಟರಿ ಇರುವುದು ಈ ಫೋನಿನ ಒಂದು ಪ್ರಮುಖ ಹೆಗ್ಗಳಿಕೆ ಎನ್ನಬಹುದು. 4230 mAh ಎಂಬುದು ಒಂದೂವರೆ – ಎರಡು ದಿನಗಳಿಗೆ ಧಾರಾಳ ಸಾಕು. ಆದರೆ ರಿಯಲ್‌ಮಿಯವರು ವೇಗವಾಗಿ ಚಾರ್ಜ್ ಮಾಡುವ ಸವಲತ್ತನ್ನು ನೀಡಿಲ್ಲ.

ತೀರ್ಮಾನ

ಯಾವುದೇ ಉತ್ಪನ್ನ ಚೆನ್ನಾಗಿದೆಯೋ ಇಲ್ಲವೋ ಎನ್ನುವುದಕ್ಕಿಂತಲೂ ನಾವು ನೀಡುವ ಹಣಕ್ಕೆ ಅದು ತಕ್ಕುದಾಗಿದೆಯೇ ಎಂಬುದೇ ಪ್ರಾಮುಖ್ಯವಾಗಿದೆ. ಈ ಫೋನ್ ನೀಡುವ ಹಣಕ್ಕೆ ತಕ್ಕುದಾಗಿದೆ ಎಂದು ಹೇಳಬಹುದು.

–ಡಾ| ಯು.ಬಿ. ಪವನಜ

gadgetloka @ gmail . com

The post ರಿಯಲ್‌ಮಿ ಸಿ1 first appeared on Vishva Kannada.

ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1
ದೊಡ್ಡ ಬ್ಯಾಟರಿ, ಚಿಕ್ಕ ಗಾತ್ರ ಹಾಗೂ ಕಡಿಮೆ ತೂಕ

ತೈವಾನ್ ದೇಶದ ಏಸುಸ್ ಕಂಪೆನಿ ಭಾರತದ ಗಣಕ, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒಂದು ಗಮನಾರ್ಹ ಹೆಸರು. ಈ ಕಂಪೆನಿಯ ಹಲವು ಉತ್ಪನ್ನಗಳನ್ನು ಇದೇ ಅಂಕಣದಲ್ಲಿ ವಿಮರ್ಶಿಸಲಾಗಿತ್ತು. ಏಸುಸ್ ಇತ್ತೀಚೆಗೆ ಕೆಲವು ಆಯ್ದ ಕ್ಷೇತ್ರಗಳಲ್ಲಿ ಈಗಾಗಲೇ ಸ್ಥಾಪಿತರಾದವರನ್ನು ಗುರಿಯಾಗಿಟ್ಟುಕೊಂಡು ಫೋನ್‌ಗಳನ್ನು ಮಾರುಕಟ್ಟೆಗೆ ಬಿಡಲು ಪ್ರಾರಂಭಿಸಿದೆ. ಮೇಲ್ದರ್ಜೆಯ ಫೋನ್‌ಗಳಲ್ಲಿ ವನ್‌ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಿ ಙೆನ್‌ಫೋನ್ ೫ ಝಡ್ ಅನ್ನು ತಯಾರಿಸಿದೆ. ಕಡಿಮೆ ಬೆಲೆಯ ಫೋನ್‌ಗಳಲ್ಲಿ ಶಿಯೋಮಿಗೆ ಪ್ರತಿಸ್ಪರ್ಧಿಯಾಗಲು ಹೊರಟಿದೆ. ಕಡಿಮೆ ಬೆಲೆಯ ಫೋನ್‌ಗಳಲ್ಲಿ ಬಹುಮಂದಿ ನೋಡುವುದು ಬ್ಯಾಟರಿ ಎಷ್ಟು ಸಮಯ ಬರುತ್ತದೆ ಎಂದು. ಅಂತಹವರಿಗಾಗಿಯೇ ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1 ಎಂಬ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈಗ ಸ್ವಲ್ಪ ಕಡಿಮೆ ಬೆಲೆಯ ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1 (Asus Zenfone Max M1) ಫೋನನ್ನು ತಂದಿದೆ. ಇದರ ವಿಮರ್ಶೆಯನ್ನು ನೋಡೋಣ.

ಗುಣವೈಶಿಷ್ಟ್ಯಗಳು

ಪ್ರೋಸೆಸರ್

8 x 1.4 ಗಿಗಾಹರ್ಟ್ಸ್ ಪ್ರೋಸೆಸರ್ (Snapdragon 430)

ಗ್ರಾಫಿಕ್ಸ್ ಪ್ರೋಸೆಸರ್

Adreno 505

ಮೆಮೊರಿ

3 + 32 ಗಿಗಾಬೈಟ್

ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ

ಇದೆ (ಪ್ರತ್ಯೇಕ ಜಾಗ, ಹೈಬ್ರಿಡ್ ಅಲ್ಲ)

ಪರದೆ

5.5 ಇಂಚು ಗಾತ್ರದ 1440 x 720 ಪಿಕ್ಸೆಲ್ ಐಪಿಎಸ್

ಕ್ಯಾಮರ

13 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್

8 ಮೆಗಾಪಿಕ್ಸೆಲ್ ಸ್ವಂತೀ

ಸಿಮ್

2 ನ್ಯಾನೊ

ಬ್ಯಾಟರಿ

4000 mAh

ಗಾತ್ರ

147.3 x 70.9 x 8.7 ಮಿ.ಮೀ.

ತೂಕ

150 ಗ್ರಾಂ

ಬೆರಳಚ್ಚು ಸ್ಕ್ಯಾನರ್

ಇದೆ

ಅವಕೆಂಪು ದೂರನಿಯಂತ್ರಕ (Infrared remote)

ಇಲ್ಲ

ಎಫ್.ಎಂ. ರೇಡಿಯೋ

ಇದೆ

ಎನ್‌ಎಫ್‌ಸಿ

ಇಲ್ಲ

4 ಜಿ ವಿಓಎಲ್‌ಟಿಇ (4G VoLTE)

ಇದೆ

ಇಯರ್‌ಫೋನ್

‌ಇಲ್ಲ

ಯುಎಸ್‌ಬಿ ಓಟಿಜಿ ಬೆಂಬಲ

ಇದೆ

ಕಾರ್ಯಾಚರಣ ವ್ಯವಸ್ಥೆ

ಆಂಡ್ರೋಯಿಡ್ 8.0

ಬೆಲೆ

₹7,499

ರಚನೆ ಮತ್ತು ವಿನ್ಯಾಸ

ಏಸುಸ್‌ನವರ ಫೋನ್‌ಗಳು ತುಂಬ ದೊಡ್ಡದಾಗಿರುತ್ತಿದ್ದವು. ಅಂದರೆ ಅವುಗಳ ಪರದೆ ಮತ್ತು ದೇಹದ ಗಾತ್ರಗಳ ಅನುಪಾತ 70-75% ಗಳಷ್ಟು ಮಾತ್ರ ಇರುತ್ತಿದ್ದವು. ಅದು ಸುಮಾರು ಎರಡು ವರ್ಷಗಳ ಹಿಂದಿನ ಮಾತು. ಆದರೆ ಏಸುಸ್‌ನವರು ತುಂಬ ಕಲಿತಿದ್ದಾರೆ. ಇತ್ತೀಚೆಗೆ ಬರುತ್ತಿರುವ ಏಸುಸ್ ಫೊನ್‌ಗಳು ಉತ್ತಮವಾದ ಪರದೆ-ದೇಹ ಅನುಪಾತವನ್ನು ಒಳಗೊಂಡಿವೆ. ಈ ಫೋನ್‌ನ ದೇಹ ಪ್ಲಾಸ್ಟಿಕ್ಕಿನದು. ಹಿಂಭಾಗ ಬಹಮಟ್ಟಿಗೆ ಚಿನ್ನದ ಬಣ್ಣದ್ದು. ಇದರಲ್ಲಿರುವುದು ತುಂಬ ಶಕ್ತಿಯ ಬ್ಯಾಟರಿ. ಆದರೂ ಈ ಫೋನಿನ ತೂಕ ಕೇವಲ 150 ಗ್ರಾಂ. ತುಂಬ ದೊಡ್ಡ ಬ್ಯಾಟರಿ ಇದ್ದೂ ಕಡಿಮೆ ತೂಕದ ಫೋನ್ ಎಂಬುದು ಈ ಫೋನಿನ ಪ್ರಧಾನ ಹೆಗ್ಗಳಿಕೆ ಎನ್ನಬಹುದು.

ಇದು ಅಂಚುರಹಿತ (bezelless) ಫೋನ್. ಆದರೆ ಪರದೆಯ ಕಚ್ಚು (notch) ಇಲ್ಲ. ಬೆರಳಚ್ಚು ಸ್ಕ್ಯಾನರ್ ಹಿಂದುಗಡೆ ಇದೆ. ಪ್ರಾಥಮಿಕ ಕ್ಯಾಮರ ಹಿಂದುಗಡೆ ಬಲಗಡೆ ಮೂಲೆಯಲ್ಲಿ ಇದೆ. ಅದರ ಕೆಳಗೆ ಫ್ಲಾಶ್ ಇದೆ. ಹಿಂಭಾಗದಲ್ಲಿ ಮಧ್ಯಭಾಗದಲ್ಲಿ ಸ್ವಲ್ಪ ಮೇಲುಗಡೆ ಬೆರಳಚ್ಚು ಸ್ಕ್ಯಾನರ್ ಇದೆ. ಫೋನ್ ಹಿಡಿದಾಗ ತೋರುಬೆರಳು ಸಹಜವಾಗಿ ಈ ಸ್ಕ್ಯಾನರ್ ಮೇಲೆ ಹೋಗುತ್ತದೆ. ಹಿಂಬದಿಯ ಕವಚ ಸ್ವಲ್ಪ ದೊರಗು ಎನ್ನಬಹುದು. ನಯವಾಗಿಯಂತೂ ಇಲ್ಲ. ಯುಎಸ್‌ಬಿ ಕಿಂಡಿ ಕೆಳಗಡೆ ಇದೆ. ಇದು ಯುಎಸ್‌ಬಿ-ಸಿ ಅಲ್ಲ. 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮೇಲುಗಡೆ ಇದೆ. ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳು ಬಲಗಡೆ, ಸಿಮ್ ಮತ್ತು ಮೆಮೊರಿ ಹಾಕುವ ಟ್ರೇ ಎಡಗಡೆ ಇವೆ. ಕಪ್ಪು ಮತ್ತು ಚಿನ್ನ ಎರಡು ಬಣ್ಣಗಳಲ್ಲಿ ಲಭ್ಯ.

ಕೆಲಸದ ವೇಗ

ಏಸುಸ್‌ನವರ ಫೋನ್‌ಗಳ ಬಗ್ಗೆ ಇದ್ದ ಇನ್ನೊಂದು ಆರೋಪವೆಂದರೆ ಹಲವು ಅನವಶ್ಯಕ ಕಿರುತಂತ್ರಾಂಶಗಳನ್ನು (ಆಪ್‌) ಮೊದಲೇ ಸೇರಿಸಿ ನೀಡುತ್ತಿದ್ದುದು. ಆದರೆ ಇತ್ತೀಚೆಗಿನ ಫೋನ್‌ಗಳಲ್ಲಿ ಈ ತೊಂದರೆ ಇಲ್ಲ. ಈ ಫೋನ್‌ನಲ್ಲೂ ಅಷ್ಟೆ. ಝೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1 ಫೋನಿನಲ್ಲಿದ್ದುದು ಶುದ್ಧ ಆಂಡ್ರೋಯಿಡ್. ಆದರೆ ಇದರಲ್ಲಿರುವುದು ಶುದ್ಧ ಆಂಡ್ರೋಯಿಡ್ ಅಲ್ಲ. ಇದು ಇನ್ನೂ ಆಂಡ್ರೋಯಿಡ್ 8.0ಯಲ್ಲೇ ಇದೆ. ಆಂಡ್ರೋಯಿಡ್ 9.0 ಕ್ಕೆ ಯಾವಾಗ ನವೀಕರಣ ನೀಡುತ್ತಾರೆ ಎಂಬುದು ಗೊತ್ತಿಲ್ಲ.

ಇದರಲ್ಲಿರುವುದು ಕಡಿಮೆ ದರ್ಜೆಯ ಪ್ರೋಸೆಸರ್. ಇದರ ಅಂಟುಟು ಬೆಂಚ್‌ಮಾರ್ಕ್ 54010 ಇದೆ. ಅಂದರೆ ಇದು ಕಡಿಮೆ ವೇಗದ ಫೋನ್ ಎನ್ನಬಹುದು. ಕಡಿಮೆ ಶಕ್ತಿಯನ್ನು ಬೇಡುವ ಆಟಗಳನ್ನು ಒಂದು ಮಟ್ಟಿಗೆ ತೃಪ್ತಿದಾಯಕವಗಿ ಆಡಬಹುದು. ಆದರೆ ಅತಿ ಶಕ್ತಿಯನ್ನು ಬೇಡುವ ಮೂರು ಆಯಾಮದ ಮೇಲ್ದರ್ಜೆಯ ಆಟಗಳನ್ನು ಆಡಲು ಈ ಫೋನ್ ಹೇಳಿದ್ದಲ್ಲ. ಫೋನ್ ಪ್ರಾರಂಭಿಸಿದಾಗ ಸ್ವಲ್ಪ ನಿಧಾನವಾಗಿ ತೆರೆದುಕೊಳ್ಳುತ್ತದೆ. ಕೆಲವು ಕಿರುತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡುವಾಗ ಕೆಲವು ಸಲ ಸ್ವಲ್ಪ ನಿಧಾನವಾಗಿ ಕೆಲಸ ಮಾಡುತ್ತದೆ.

ಪರದೆ ಹಾಗೂ ಆಡಿಯೋ

ವಿಡಿಯೋ ವೀಕ್ಷಣೆಯ ಅನುಭವ ತೃಪ್ತಿದಾಯಕವಾಗಿದೆ. ಇದು ಹೈಡೆಫಿನಿಶನ್ ವಿಡಿಯೋ ಪ್ಲೇ ಮಾಡುತ್ತದೆ. ಆದರೆ 4k ವಿಡಿಯೋ ಪ್ಲೇ ಸರಿಯಾಗಿ ಆಗುವುದಿಲ್ಲ. ತಡೆತಡೆದು ಪ್ಲೇ ಮಾಡುತ್ತದೆ. ಈ ಫೋನಿನ ಆಡಿಯೋ ಒಂದು ಮಟ್ಟಿಗೆ ತೃಪ್ತಿದಾಯಕವಾಗಿದೆ. ಅತಿ ಕಡಿಮೆ ಕಂಪನಾಂಕದ (bass) ಮತ್ತು ಅತಿ ಹೆಚ್ಚು ಕಂಪನಾಂಕದ (treble) ಧ್ವನಿಯ ಪುನರುತ್ಪತ್ತಿ ಸ್ವಲ್ಪ ಕಡಿಮೆ ಗುಣಮಟ್ಟದಲ್ಲಿದೆ. ಮಾನವ ಧ್ವನಿಯ ಪುನರುತ್ಪತ್ತಿ ಚೆನ್ನಾಗಿದೆ. ಫೋನಿನ ಜೊತೆ ಇಯರ್‌ಫೋನ್ ನೀಡಿಲ್ಲ. ಇದರಲ್ಲಿರುವ ಎಫ್‌ಎಂ ರೇಡಿಯೋದ ಗ್ರಾಹಕ ಶಕ್ತಿ ಚೆನ್ನಾಗಿದೆ. ಮನೆಯೊಳಗೆ ಎಲ್ಲ ಕೇಂದ್ರಗಳು ಸರಿಯಾಗಿ ಕೇಳಿಬರುತ್ತವೆ. ಸ್ಪೀಕರಿನ ಧ್ವನಿಯೂ ಪರವಾಗಿಲ್ಲ.

ಕ್ಯಾಮರ

ಇದರಲ್ಲಿರುವುದು 13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮರ. ಕ್ಯಾಮರದ ಗುಣಮಟ್ಟ ಅಂತಹ ಹೇಳಿಕೊಳ್ಳುವಂತೇನೂ ಇಲ್ಲ. ಜೊತೆಗೆ ಕ್ಯಾಮರದ ಕಿರುತಂತ್ರಾಂಶ (ಆಪ್) ಕೂಡ ಅಷ್ಟಕ್ಕಷ್ಟೆ. ಮ್ಯಾನ್ಯುವಲ್ ಆಯ್ಕೆ ಇಲ್ಲ. ಓಪನ್ ಕ್ಯಾಮರ ಕಿರುತಂತ್ರಾಂಶ ಹಾಕಿಕೊಂಡರೂ ಕ್ಯಾಮರದ ಯಂತ್ರಾಂಶದ ಬೆಂಬಲವಿಲ್ಲದ ಕಾರಣ ಮ್ಯಾನ್ಯುವಲ್ ಆಯ್ಕೆ ಬರುವುದಿಲ್ಲ. ಚೆನ್ನಾಗಿ ಬೆಳಕಿದ್ದಾಗ, ಹತ್ತಿರದ ವಸ್ತುಗಳನ್ನು ಉದಾಹರಣೆಗೆ ಹೂವುಗಳ ಫೋಟೋ, ಚೆನ್ನಾಗಿ ತೆಗೆಯುತ್ತದೆ. ಪ್ರಕೃತಿ ದೃಶ್ಯಗಳ ಫೋಟೋ ಚೆನ್ನಾಗಿ ಮೂಡಿಬರುತ್ತದೆ. ಅತಿ ಕಡಿಮೆ ಬೆಳಕಿನಲ್ಲಿ ಫೋಟೋ ಚೆನ್ನಾಗಿ ಮೂಡಿಬರುವುದಿಲ್ಲ. ವಿಡಿಯೋ ಚಿತ್ರೀಕರಣ ಅಷ್ಟಕ್ಕಷ್ಟೆ. ಯಾಕೆಂದರೆ ಇದರಲ್ಲಿ ಇಮೇಜ್ ಸ್ಟೆಬಿಲೈಸೇಶನ್ ಇಲ್ಲ. ಈ ಫೋನಿನ ಬೆಲೆಗೆ ಹೋಲಿಸಿದರೆ ಕ್ಯಾಮರ ತೃಪ್ತಿದಾಯಕ ಎಂದೇ ಹೇಳಬಹುದು.

ಬ್ಯಾಟರಿ

ಈ ಫೋನಿನ ಪ್ರಮುಖ ಹೆಚ್ಚುಗಾರಿಕೆಯಿರುವುದು ಇದರ ಬ್ಯಾಟರಿಯಲ್ಲಿ. 4000 mAh ಎಂದರೆ ಶಕ್ತಿಶಾಲಿ ಎನ್ನಬಹುದು. ಅವರದೇ ಚಾರ್ಜರ್ ಮತ್ತು ಕೇಬಲ್ ಬಳಸಿದರೆ ಸುಮಾರು ಎರಡೂವರೆ ಗಂಟಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಈ ಫೋನಿನಿಂದ ಇನ್ನೊಂದು ಸಾಧನಕ್ಕೆ ಯುಎಸ್‌ಬಿ ಓಟಿಜಿ ಕೇಬಲ್ ಬಳಸಿ ಚಾರ್ಜ್ ಮಾಡುವ ಸವಲತ್ತನ್ನೂ ನೀಡಿದ್ದಾರೆ.

ಅಂತಿಮ ತೀರ್ಮಾನ

ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ತೃಪ್ತಿದಾಯಕ ಫೋನ್ ಎನ್ನಬಹುದು.

-ಡಾ| ಯು.ಬಿ. ಪವನಜ

gadgetloka @ gmail . com

The post ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1 first appeared on Vishva Kannada.