ಸಂಶೋಧನೆ | Vishva Kannada

ಗರ್ಭಕ್ಕೂ ಗ್ಯಾಜೆಟ್
ಮಹಾಭಾರತದಲ್ಲಿ ಒಂದು ಆಖ್ಯಾನ ಇದೆ. ಕೃಷ್ಣ ತನ್ನ ತಂಗಿ ಸುಭದ್ರೆಗೆ ಚಕ್ರವ್ಯೂಹವನ್ನು ಭೇದಿಸುವ ಉಪಾಯವನ್ನು ಹೇಳುತ್ತಿರುತ್ತಾನೆ. ಆಗ ಆಕೆ ಗರ್ಭಿಣಯಾಗಿರುತ್ತಾಳೆ. ಆಕೆಯ ಗರ್ಭದಲ್ಲಿ ಅಭಿಮನ್ಯು ಇರುತ್ತಾನೆ. ಆತ ಅದನ್ನು ಗರ್ಭದಲ್ಲಿದ್ದಾಗಲೇ ಕೇಳಿಸಿಕೊಳ್ಳುತ್ತಾನೆ. ಸುಭದ್ರೆ ನಿದ್ರೆಗೆ ಜಾರಿದಳು ಎಂದು ಕೃಷ್ಣ ಹೇಳುವುದನ್ನು ನಿಲ್ಲಿಸುತ್ತಾನೆ. ಆದುದರಿಂದ ಅಭಿಮನ್ಯುವಿಗೆ ಚಕ್ರವ್ಯೂಹವನ್ನು ಭೇದಿಸಿ ಒಳಕ್ಕೆ ಹೋಗುವುದು ಮಾತ್ರ ಗೊತ್ತಿರುತ್ತದೆ. ವಾಪಾಸು ಹಿಂದಕ್ಕೆ ಬರುವುದು ತಿಳಿದಿರುವುದಿಲ್ಲ. ಮುಂದಕ್ಕೆ ಕುರುಕ್ಷೇತ್ರ ಯುದ್ಧದಲ್ಲಿ ಆತ ಚಕ್ರವ್ಯೂಹದೊಳಕ್ಕೆ ನುಗ್ಗಿ ಸಾಯುತ್ತಾನೆ. ಇದು ಬಹುತೇಕ ಭಾರತೀಯರಿಗೆ ತಿಳಿದಿರುವ ಕಥೆ.

ಈ ಕಥೆಯನ್ನು ನೆನಪಿಸಿಕೊಳ್ಳಲು ಕಾರಣವಿದೆ. ವಿಜ್ಞಾನಿಗಳು ಗರ್ಭದಲ್ಲಿರುವ ಮಗುವಿನ ಆಲಿಸುವ ಶಕ್ತಿ ಮತ್ತು ಅದರಿಂದಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ. ತಾಯಿಯ ಹೊಟ್ಟೆಯಲ್ಲಿದ್ದಾಗ 18 ವಾರಗಳ ನಂತರ ಮಗುವಿಗೆ ಧ್ವನಿಗಳನ್ನು ಆಲಿಸುವ ಶಕ್ತಿ ಹುಟ್ಟುತ್ತದೆ. ಮಗು ಎಷ್ಟೆಲ್ಲ ಧ್ವನಿಗಳನ್ನು ಕೇಳಿಸಿಕೊಳ್ಳಬಹುದು, ಹಲವು ವಿಧದ ಧ್ವನಿಗಳಿಗೆ ಮಗುವಿನ ಸ್ಪಂದನೆ ಹೇಗಿರುತ್ತದೆ, ಇದರಿಂದ ಮಗುವಿನ ಮೇಲೆ ಏನೆಲ್ಲ ಪರಿಣಾಮಗಳಾಗುತ್ತವೆ ಎಂದೆಲ್ಲ ಅವರು ಸಂಶೋಧನೆ ಮಾಡಿದ್ದಾರೆ.  ಗರ್ಭಧಾರಣೆಯ ಕೊನೆಯ ಮೂರು ತಿಂಗಳುಗಳಲ್ಲಿ ಅವರು ಕೆಲವು ಮಹಿಳೆಯರ ಗರ್ಭದಲ್ಲಿರುವ ಮಕ್ಕಳ ಮೇಲೆ ಸಂಶೋಧನೆ ಮಾಡಿದರು. ಆ ಮಕ್ಕಳಿಗೆ ಹಲವು ನಮೂನೆಯ ಧ್ವನಿಗಳನ್ನು ಕೇಳಿಸಿದರು. ಅಂದರೆ ಹೊರಗಡೆಯಿಂದ ಸ್ಪೀಕರ್ ಮೂಲಕ ಕೇಳಿಸಿದ್ದು. ಯಾವುದೇ ವಿಶೇಷ ಸಾಧನ ಮೂಲಕ ನೇರವಾಗಿ ಕೇಳಿಸಿದ್ದಲ್ಲ. ಗರ್ಭದಲ್ಲಿರುವ ಮಗು ಹಲವು ಬಗೆಯ ಧ್ವನಿಗಳನ್ನು ಆಲಿಸುತ್ತಿರುತ್ತದೆ. ಅವುಗಳಲ್ಲಿ ಮುಖ್ಯವಾದುದು ತಾಯಿಯ ಚಲನೆ, ಅದರಿಂದಾಗಿ ಆಗುವ ಧ್ವನಿಗಳು, ತಾಯಿಯ ಹೊಟ್ಟೆಯ ಒಳಗಿನ ಕೆಲವು ಧ್ವನಿಗಳು, ತಾಯಿ ಮಾತನಾಡುವ, ಹಾಡುವ ಧ್ವನಿ ಮತ್ತು ಹೊರಗಿನ ಧ್ವನಿ. ಮಗು ತಾಯಿಯ ಧ್ವನಿಗೆ ಮೊದಲು ಹೊಂದಿಕೊಳ್ಳುತ್ತದೆ. ನಂತರ ಹೊರಗಿನ ಧ್ವನಿಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ವಿಜ್ಞಾನಿಗಳು 12 ಗರ್ಭಿಣಿ ಮಹಿಳೆಯರನ್ನು ಪ್ರಯೋಗಕ್ಕೆ ಆರಿಸಿಕೊಂಡರು. ಅವರ ಗರ್ಭದಲ್ಲಿರುವ ಮಗುವಿಗೆ ಹೊರಗಿನಿಂದ ಸ್ಪೀಕರ್ ಮೂಲಕ ತಾಯಿಯ ಧ್ವನಿ, ಹಲವು ಬಗೆಯ ಧ್ವನಿ ಮತ್ತು ಹಲವು ಬಗೆಯ ಸಂಗೀತಗಳನ್ನು ಮಗು ಜನಿಸುವ ತನಕ ಕೇಳಿಸಿದರು. ಮಗುವಿನ ಜನನದ ನಂತರ ಸುಮಾರು 4 ತಿಂಗಳುಗಳ ವರೆಗೆ ಅದೇ ಧ್ವನಿಗಳನ್ನು ಮತ್ತೆ ಕೇಳಿಸಿ ಮಗುವಿನ ಸ್ಪಂದನೆಯನ್ನು ಪರಿಶೀಲಿಸಿದರು. ಸಂಶೋಧನೆ ಹೆಚ್ಚು ವೈಜ್ಞಾನಿಕವಾಗಿರಲು ಗರ್ಭದಲ್ಲಿದ್ದಾಗ ಯಾವುದೇ ಧ್ವನಿಯನ್ನು ಕೇಳಿಸದಿದ್ದ 12 ಮಕ್ಕಳನ್ನೂ ತೆಗೆದುಕೊಂಡು ಅದೇ ಧ್ವನಿಗಳಿಗೆ ಆ ಮಕ್ಕಳ ಸ್ಪಂದನೆಯನ್ನು ಪರಿಶೀಲಿಸಿದರು. ಅವರಿಗೆ ಕಂಡುಬಂದುದೇನೆಂದರೆ ಗರ್ಭದಲ್ಲಿದ್ದಾಗ ಆ ಧ್ವನಿಯನ್ನು ಕೇಳಿದ್ದ ಮಕ್ಕಳು ಜನನದ ನಂತರ ಅದೇ ಧ್ವನಿಗೆ ಬೇಗನೆ ಸ್ಪಂದಿಸಿದರು. ಅಂದರೆ ಅವರು ಆ ಧ್ವನಿಗಳನ್ನು ಗುರುತು ಹಿಡಿದರು. ಗರ್ಭದಲ್ಲಿದ್ದಾಗ ಮಗುವಿಗೆ ಉತ್ತಮ ಸಂಗೀತ ಕೇಳಿಸುವುದು, ಉತ್ತಮ ನೀತಿ ಇರುವ ಕಥೆ, ಹಾಡುಗಳನ್ನು ಹೇಳುವುದು, ಶ್ಲೋಕಗಳನ್ನು ಹೇಳುವುದು ಇವೆಲ್ಲವನ್ನು ಮಾಡುವುದು ಉತ್ತಮ ಎಂದು ಶತಮಾನಗಳಿಂದ ನಮ್ಮ ಹಿರಿಯರು ಹೇಳುತ್ತಿದ್ದುದು ನೆನಪಿದೆ ತಾನೆ? ಈಗ ವಿಜ್ಞಾನಿಗಳೂ ಅದನ್ನೇ ಪ್ರಯೋಗದ ಮೂಲಕ ತೋರಿಸಿ ಹೇಳುತ್ತಿದ್ದಾರೆ.

ಎಲ್ಲ ನಮೂನೆಯ ಸಂಶೋಧನೆಗಳೂ ಅಂತಿಮವಾಗಿ ಮಾನವನ ಉಪಯೋಗಕ್ಕೆ ಬರಬೇಕು ಎಂಬುದು ವಿಜ್ಞಾನದ ಆಶಯ. ಈ ಸಂಶೋಧನೆಯೂ ಹಾಗೆಯೇ. ಈಗಾಗಲೆ ಕೆಲವು ಕಂಪೆನಿಗಳು ಗರ್ಭದಲ್ಲಿರುವ ಮಗುವಿಗೆ ಉತ್ತಮ ಧ್ವನಿ ಮತ್ತು ಸಂಗೀತಗಳನ್ನು ಕೇಳಿಸಲು ವಿಶೇಷ ಸಾಧನಗಳನ್ನು ತಯಾರಿಸಿದ್ದಾರೆ. ಅವು ಮಾರುಕಟ್ಟೆಯಲ್ಲಿ ಲಭ್ಯ. ಅವುಗಳಲ್ಲಿ ಪ್ರಮುಖವಾಗಿ ಎರಡು ನಮೂನೆಗಳಿವೆ. ಅವುಗಳ ಬಗ್ಗೆ ಸ್ಥೂಲವಾಗಿ ತಿಳಿಯೋಣ.

ಮೊದಲನೆಯ ನಮೂನೆಯವುಗಳನ್ನು ಬೆಲ್ಲಿಬಡ್ ಎನ್ನುತ್ತಾರೆ. ಇವು ಗರ್ಭಿಣಿ ಮಹಿಳೆಯ ಹೊಟ್ಟೆಗೆ ಅಂಟಿಸುವ ಸ್ಪೀಕರ್ ಮಾದರಿಯಲ್ಲಿರುತ್ತವೆ. ಇವು ಒಂದು ಪ್ಲೇಯರ್‌ಗೆ ಸಂಪರ್ಕ ಹೊಂದಿರುತ್ತವೆ. ಆ ಪ್ಲೇಯರ್‌ನಲ್ಲಿ ಸಂಗೀತ ಅಥವಾ ಯಾವುದೇ ಧ್ವನಿ ಸಂಗ್ರಹಿಸಿ ಅದನ್ನು ಪ್ಲೇ ಮಾಡಬಹುದು. ಈ ಬೆಲ್ಲಿಬಡ್‌ನಲ್ಲಿ ಸ್ಪೀಕರ್‌ಗಳಲ್ಲಿ ಇರುವಂತೆಯೇ ಕಂಪಿಸುವ ಪರದೆ ಇರುತ್ತದೆ. ಆದರೆ ಅದು ಇಲ್ಲಿ ಗರ್ಭಿಣಿ ಮಹಿಳೆಯ ಹೊಟ್ಟೆಗೆ ಅಂಟಿಕೊಂಡಿರುತ್ತದೆ. ಆ ಬಡ್‌ನಿಂದ ಹೊರಡುವ ಧ್ವನಿ ನಮಗೆ ಕೇಳಿಸುವುದಿಲ್ಲ. ಆದರೆ ಅದು ಅಮ್ಮನ ದೇಹದ ಮೂಲಕ ಗರ್ಭದಲ್ಲಿರುವ ಮಗುವಿಗೆ ಕೇಳಿಸುತ್ತದೆ. ಮಗುವಿನ ಜೊತೆ ಮುಂದಕ್ಕೆ ಸಂವಹನಕ್ಕೆ ಸಹಾಯಕಾರಿಯಾಗಲು ಬಹುತೇಕ ಮಹಿಳೆಯರು ಈ ಸಾಧನದಲ್ಲಿ ತಮ್ಮದೇ ಧ್ವನಿಯನ್ನು ರೆಕಾರ್ಡ್ ಮಾಡಿ ಪ್ಲೇ ಮಾಡುತ್ತಾರೆ. ಅಥವಾ ನೇರವಾಗಿ ಮಾತನಾಡುತ್ತಾರೆ. ಇದೊಂದು ರೀತಿಯಲ್ಲಿ ಮುಗುವಿನ ಜೊತೆ ಟೆಲಿಪೋನ್ ಮೂಲಕ ಮಾತನಾಡಿದಂತೆ. ಆದರೆ ಇಲ್ಲಿ ಮಗು ಮಾತನಾಡುವುದಿಲ್ಲ. ಬೆಲ್ಲಿಬಡ್ ಅನ್ನು ಸುಲಭವಾಗಿ ಹೊಟ್ಟೆಯಿಂದ ಕೀಳಬಹುದು. ಮತ್ತೆ ಮತ್ತೆ ಬಳಸಬಹುದು. ಇದು ಹಾಗೂ ಇದೇ ನಮೂನೆಯ ಹಲವು ಸಾಧನಗಳು ಅಮೆಝಾನ್‌ನಲ್ಲಿ ಲಭ್ಯವಿವೆ.

ಎರಡನೆಯ ನಮೂನೆಯ ಸಾಧನದಲ್ಲಿ ಚಿಕ್ಕ ಇಯರ್‌ಬಡ್ ಮಾದರಿಯ ಸ್ಪೀಕರ್ ಅನ್ನು ನೇರವಾಗಿ ಗರ್ಭಿಣಿ ಮಹಿಳೆಯ ಯೋನಿಯೊಳಗೆ ತಳ್ಳಲಾಗುತ್ತದೆ. ಉಳಿದಂತೆ ಬೆಲ್ಲಿಬಡ್‌ಗೂ ಇದಕ್ಕೂ ವ್ಯತ್ಯಾಸ ಇಲ್ಲ. ಇದರಲ್ಲಿ ಇನ್ನೊಂದು ಮಾಮೂಲಿ ಹೆಡ್‌ಫೋನ್ ಕಿಂಡಿಯೂ ಇದೆ. ಅದಕ್ಕೆ ಹೆಡ್‌ಫೋನ್ ಹಾಕಿಕೊಂಡು ಮಹಿಳೆ ಮಗುವಿನ ಜೊತೆ ತಾನೂ ಆಲಿಸಬಹುದು. ಮಗು ಏನನ್ನು ಆಲಿಸುತ್ತಿದೆ ಎಂದು ತಿಳಿಯಲು ಈ ಸೌಲಭ್ಯ ಸಹಾಯಕಾರಿ. ಯೋನಿಯ ಒಳಗೆ ತಳ್ಳುವ ಸಾಧನವಾದುದರಿಂದ ಇದನ್ನು ವಿಶೇಷ ವಸ್ತುವಿಂದ ತಯಾರಿಸಲಾಗಿದೆ. ಅದು ದೇಹಕ್ಕೆ ಯಾವುದೇ ತೊಂದರೆ ಉಂಟು ಮಾಡುವುದಿಲ್ಲ.  ಹಾಗೆಯೇ ದೇಹದ ಒಳಗಿನ ದ್ರವಗಳು ಈ ಬಡ್‌ಗೆ ಯಾವುದೇ ಹಾನಿ ಮಾಡುವುದಿಲ್ಲ. ಈ ಬಡ್‌ಗಳನ್ನು ಹೊರಗೆ ತೆಗೆದ ನಂತರ ನೀರಿನಲ್ಲಿ ತೊಳೆಯಬೇಕು. ಹಾಗೆ ತೊಳೆದು ಸಂಗ್ರಹಿಸಿಡಬಹುದು ಅಥವಾ ಬೇರೆಯವರಿಗೆ ಬಳಕೆಗೆ ನೀಡಬಹುದು.

ಈ ಎರಡೂ ನಮೂನೆಯ ಸಾಧನಗಳಿಂದ ನಿಜವಾಗಿಯೂ ಪ್ರಯೋಜನವಾಗುತ್ತದೆಯೇ ಎಂದು ಯಾವುದಾದರೂ ವಿಜ್ಞಾನಿ ಪ್ರಯೋಗ ಮಾಡಿ ನೋಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಈ ಲೇಖನದ ಪ್ರಾರಂಭದಲ್ಲಿ ತಿಳಿಸಿದ ಸಂಶೋಧನೆಯ ಫಲಿತಾಂಶವನ್ನು ಮಾನದಂಡವಾಗಿ ಇಟ್ಟುಕೊಳ್ಳುವುದಾದರೆ ಈ ಸಾಧನಗಳು ಪ್ರಯೋಜನಕಾರಿಯಾಗಬಲ್ಲವು ಎಂದು ಹೇಳಬಹುದು.

–ಡಾ| ಯು.ಬಿ. ಪವನಜ

gadgetloka @ gmail . com

The post ಗರ್ಭಕ್ಕೂ ಗ್ಯಾಜೆಟ್ first appeared on Vishva Kannada.

ಅರಿವಿನ ಕೌಶಲ್ಯ ಮತ್ತು ವಿಕಿಪೀಡಿಯ ಸಂಪಾದನೆ
“ನನ್ನ ಮಗನಿಗೆ 85% ಅಂಕಗಳಿದ್ದವು. ಅವನ ಸಹಪಾಠಿಗೆ ಕೇವಲ 65% ಅಂಕಗಳಿದ್ದವು. ಆದರೆ ಸಾಫ್ಟ್‌ವೇರ್ ಕಂಪೆನಿಯಲ್ಲಿ ಅವನಿಗೆ ಕೆಲಸ ಸಿಕ್ಕಿತು. ನನ್ನ ಮಗನಿಗೆ ಸಿಗಲಿಲ್ಲ” -ಈ ರೀತಿಯ ಮಾತುಗಳನ್ನು ಆಗಾಗ ಕೇಳುತ್ತೇವೆ. ಇಲ್ಲಿ ಏನಾಗಿರುತ್ತದೆ ಎಂದರೆ 85% ಅಂಕ ತೆಗೆದವನು ಪರೀಕ್ಷೆಗೋಸ್ಕರ ಓದಿರುತ್ತಾನೆ. ನಮ್ಮ ಪರೀಕ್ಷೆ ಪದ್ಧತಿಗಳೂ ಅಷ್ಟೆ. ಆಲೋಚನಾಶಕ್ತಿಯನ್ನು ಪರೀಕ್ಷಿಸುವುದಿಲ್ಲ. ಪಾಠಗಳನ್ನು ಎಷ್ಟು ಬಾಯಿಪಾಠ ಮಾಡಿದ್ದಾನೆ ಎಂದಷ್ಟೆ ಪರೀಕ್ಷಿಸುತ್ತವೆ. ಆದರೆ ಕಂಪೆನಿಗಳಿಗೆ ನಡೆದಾಡುವ ವಿಶ್ವಕೋಶಗಳು ಬೇಡ. ಅವರಿಗೆ ತರ್ಕಬದ್ಧವಾಗಿ ಆಲೋಚಿಸಿ ಸಮಸ್ಯೆಗಳನ್ನು ಪರಿಹರಿಸುವವರು ಬೇಕು. ಇದಕ್ಕೆ ಅರಿವಿನ ಕೌಶಲ್ಯ ಎನ್ನುತ್ತಾರೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರೂ ಉತ್ತಮ ಅರಿವಿನ ಕೌಶಲ್ಯವಿದ್ದ ಎರಡನೆಯವನು ಕಂಪೆನಿಗೆ ಆಯ್ಕೆಯಾಗಿರುತ್ತಾನೆ. ನಮ್ಮ ಶಿಕ್ಷಣ ಪದ್ಧತಿಯು ಅರಿವಿನ ಕೌಶಲ್ಯವನ್ನು ಹೆಚ್ಚಿಸುವುದಿಲ್ಲ. ಬದಲಿಗೆ ನಡೆದಾಡುವ ವಿಶ್ವಕೋಶಗಳನ್ನು ತಯಾರಿಸುತ್ತಿದೆ.

ಅರಿವಿನ ಕೌಶಲ್ಯ ಎಂದರೆ ಜ್ಞಾನವನ್ನು ಸಂಪಾದಿಸಲು, ಮಾಹಿತಿ ಹಾಗೂ ತರ್ಕಶಕ್ತಿಯ ಬಳಕೆಯ ಕುಶಲತೆ. ಜನರು ಹೇಗೆ ಕಲಿಯುತ್ತಾರೆ, ನೆನಪಿಟ್ಟುಕೊಳ್ಳುತ್ತಾರೆ ಹಾಗೂ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾರೆ ಎಂಬುದು ಇದನ್ನು ಅವಲಂಬಿಸಿದೆ. ಅರಿವಿನ ಕೌಶಲ್ಯವು ಗ್ರಹಿಕೆ, ಗಮನ, ಸ್ಮರಣೆ, ಕಲಿಕೆ, ನಿರ್ಧಾರ ತೆಗೆದುಕೊಳ್ಳುವುದು ಮತ್ತು ಭಾಷಾ ಸಾಮರ್ಥ್ಯಗಳನ್ನು ಒಳಗೊಳ್ಳುತ್ತದೆ. ಅರಿವಿನ ಕೌಶಲ್ಯ ಕಡಿಮೆ ಇರುವ ಹಲವು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದರೂ ಕೆಲಸದ ಸಂದರ್ಶನದಲ್ಲಿ ಸೋಲುತ್ತಾರೆ. ಅರಿವಿನ ಕೌಶಲ್ಯದ ವೃದ್ಧಿ ವಿದ್ಯಾರ್ಥಿಗಳಿಗೆ ಸಹಾಯಕಾರಿ. ಅರಿವಿನ ಕೌಶಲ್ಯವನ್ನು ಕೆಲವು ಪರೀಕ್ಷೆಗಳ ಮೂಲಕ ಅಳೆಯಲಾಗುತ್ತದೆ. ಇವುಗಳೆಂದರೆ ತಾರ್ಕಿಕತೆ, ಗ್ರಹಿಕೆ, ಸ್ಮರಣೆ, ಮೌಖಿಕ ಹಾಗೂ ಗಣಿತದ ಸಾಮರ್ಥ್ಯ ಮತ್ತು ಸಮಸ್ಯೆ ಪರಿಹಾರಗಳ ಪರೀಕ್ಷೆ. ಹೆಚ್ಚಿನ ಕಂಪನಿಗಳು ಉದ್ಯೋಗಿಗಳನ್ನು ನೇಮಕಾತಿ ಮಾಡುವ ಮೊದಲು ಅರಿವಿನ ಕೌಶಲ್ಯದ ಪರೀಕ್ಷೆಗಳನ್ನು ನಡೆಸುತ್ತವೆ.

ಅರಿವಿನ ಕೌಶಲ್ಯ ವೃದ್ಧಿಸಲು ಹಲವು ಉಪಾಯಗಳಿವೆ. ಅವುಗಳೆಂದರೆ -ನಾವು ಚಿಕ್ಕವರಾಗಿದ್ದಾಗ ಕೇಳುತ್ತಿದ್ದ ಹುಲಿ, ದನ, ಹುಲ್ಲು, ದೋಣಿ ದಾಟಿಸುವ ಸಮಸ್ಯೆಯಂತಹ ಸಮಸ್ಯೆಗಳ ಪರಿಹಾರ; ಮಹಾಭಾರತದ ಓದು; ಚದುರಂಗದ ಆಟ ಆಡುವುದು, ಇತ್ಯಾದಿ. ಇವುಗಳಲ್ಲದೆ ಇನ್ನೂ ಒಂದು ವಿಧಾನವಿದೆ. ಅದು ವಿಕಿಪೀಡಿಯಕ್ಕೆ ಲೇಖನ ಸೇರಿಸುವುದು. ವಿಕಿಪೀಡಿಯಕ್ಕೆ ಲೇಖನ ಸೇರಿಸುವುದರಿಂದ ಅರಿವಿನ ಕೌಶಲ್ಯ ಹೆಚ್ಚಾಗುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ಸಾಧಿಸಿ ತೋರಿಸಲಾಗಿದೆ. ಈ ಲೇಖನದಲ್ಲಿ ಅದರ ಬಗ್ಗೆ ವಿವರಣೆ ನೀಡಲಾಗುತ್ತಿದೆ.

ಕನ್ನಡ ವಿಕಿಪೀಡಿಯ (kn.wikipedia.org) – ಅಂತರಜಾಲದಲ್ಲಿರುವ ಒಂದು ಸ್ವತಂತ್ರ ಹಾಗೂ ಮುಕ್ತ ವಿಶ್ವಕೋಶವಾಗಿದ್ದು, ಸ್ವಯಂಸೇವಕರ ಸಮುದಾಯವೊಂದು ಒಟ್ಟಿಗೆ ಸೇರಿ ಸಹಕಾರ ಮನೋಭಾವದಿಂದ ಸಂಪಾದಿಸಿದ್ದಾಗಿದೆ. ಅಂತರಜಾಲ ಸಂಪರ್ಕವಿರುವ ಯಾರು ಬೇಕಾದರೂ ವಿಶ್ವದ ಯಾವುದೇ ಮೂಲೆಯಿಂದ ಯಾವುದೇ ವಿಷಯದ ಲೇಖನಗಳ ಸಂಪಾದನೆಗೆ ತೊಡಗಿಸಿಕೊಳ್ಳಲು ಇಲ್ಲಿ ಅವಕಾಶವಿದೆ. ವಿಕಿಪೀಡಿಯ ಎಲ್ಲರಿಗೂ ಚಿರಪರಿಚಿತ ಹಾಗೂ ಅತಿ ಹೆಚ್ಚು ಓದುಗರನ್ನು ಪಡೆದಿರುವ ವಿಶ್ವದ 5ನೇ ಪ್ರಮುಖ ಜಾಲತಾಣ.  ಕನ್ನಡ ಭಾಷೆ ಉಳಿದು ಬೆಳೆಯಬೇಕಾದರೆ ಕನ್ನಡದಲ್ಲಿ ಜನರಿಗೆ ಅಗತ್ಯವಾದ ಮಾಹಿತಿ ಲಭ್ಯವಿರಬೇಕು. ಕನ್ನಡ ಭಾಷೆಯಲ್ಲಿ ಪ್ರಪಂಚ ಜ್ಞಾನವನ್ನು ಸುಲಭವಾಗಿ ತರಲು ಸಹಾಯ ಮಾಡುವುದು ಸ್ವತಂತ್ರ ವಿಶ್ವಕೋಶ ಕನ್ನಡ ವಿಕಿಪೀಡಿಯ. ಕನ್ನಡ ವಿಕಿಪೀಡಿಯ ಸಂಪಾದನೆ ಮಾಡುವುದರಿಂದ ವಿಸ್ಯಾರ್ಥಿಗಳಿಗೆ ಈ ಎಲ್ಲ ಲಾಭಗಳಿವೆ- ಭಾಷೆಯ ಸುಧಾರಣೆ, ಸಂವಹನ ಕಲೆಯ ಸುಧಾರಣೆ, ಸಂಶೋಧನಾ ಕೌಶಲ್ಯ, ಸಹಯೋಗದಲ್ಲಿ ಕೆಲಸ ಮಾಡುವುದು, ಬರೆದ ಲೇಖನವನ್ನು ವಿಶ್ವದ ಜೊತೆ ಹಂಚಿಕೊಳ್ಳುವುದು, ಸಮಾಜಕ್ಕೆ ಕೊಡುಗೆ, ವೈಯಕ್ತಿಕ ಮಾಹಿತಿಯಲ್ಲಿ (resume)  ಬರೆದುಕೊಳ್ಳುವುದು. ಇನ್ನೊಂದು ಪ್ರಮುಖ ಲಾಭವೆಂದರೆ ಅರಿವಿನ ಕೌಶಲ್ಯದ ವೃದ್ಧಿ.

ಉಡುಪಿಯಲ್ಲಿ ಮಹಿಳೆಯರಿಗಾಗಿರುವ ಡಾ. ಜಿ. ಶಂಕರ್ ಸರಕಾರಿ ಕಾಲೇಜಿನಲ್ಲಿ ಒಂದು ಸಂಶೋಧನಾತ್ಮಕ ಅಧ್ಯಯನ ಮಾಡಲಾಗಿತ್ತು. 24 ಆಯ್ದ ವಿದ್ಯಾರ್ಥಿನಿಯರಿಗೆ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ ಒಂದನ್ನು ವಿನ್ಯಾಸ ಮಾಡಲಾಗಿತ್ತು. ಅದರಲ್ಲಿ ವಿದ್ಯಾರ್ಥಿನಿಯರು ಕನ್ನಡ ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸಿದ್ದರು. ಕೋರ್ಸಿನ ಪ್ರಾರಂಭದಲ್ಲಿ ಅವರ ಅರಿವಿನ ಕೌಶಲ್ಯದ ಪರೀಕ್ಷೆ  ನಡೆಸಲಾಯಿತು. ಒಂದು ವರ್ಷದ ನಂತರ ಅದೇ ಪರೀಕ್ಷೆಯನ್ನು (ಬೇರೆ ಪ್ರಶ್ನೆಗಳ ಮೂಲಕ) ಇನ್ನೊಮ್ಮೆ ನೀಡಲಾಯಿತು. ಒಂದು ವರ್ಷದಲ್ಲಿ ವಿಕಿಪೀಡಿಯ ಸಂಪಾದನೆ ಮಾಡುವುದರಿಂದ ವಿದ್ಯಾರ್ಥಿನಿಯರಲ್ಲಿ ಅರಿವಿನ ಕೌಶಲ್ಯದಲ್ಲಿ ವೃದ್ಧಿಯಾಗಿತ್ತು. ಇದು ನಮ್ಮ ದೇಶದಲ್ಲಿ ಈ ಮಾದರಿಯಲ್ಲಿ ಮಾಡಿದ ಮೊದಲ ಮತ್ತು ಇದು ತನಕದ ಏಕೈಕ ಸಂಶೋಧನಾತ್ಮಕ ಅಧ್ಯಯನವಾಗಿದೆ. ಈ ಅಧ್ಯಯನವನ್ನು ಡಾ. ಯು. ಬಿ. ಪವನಜ ಅವರ ನೇತೃತ್ವದಲ್ಲಿ ನಡೆಸಲಾಗಿತ್ತು. ಈ ಕೋರ್ಸಿನಲ್ಲಿ ವಿದ್ಯಾರ್ಥಿನಿಯರು ಕನ್ನಡ ವಿಕಿಪೀಡಿಯ ಮಾತ್ರವಲ್ಲದೆ ಕನ್ನಡ ವಿಕ್ಷನರಿ, ವಿಕಿಸೋರ್ಸ್ ಮತ್ತು ವಿಕಿಕೋಟ್‌ಗಳ ಸಂಪಾದನೆ ಮಾಡಿದ್ದರು.  ಜೊತೆಗೆ ಹಲವು ಫೋಟೋಗಳನ್ನು ಸೇರಿಸಿದ್ದರು ಕೂಡ. ಈ ಕೋರ್ಸಿನ ಮೂಲಕ ವಿದ್ಯಾರ್ಥಿನಿಯರ ಕೊಡುಗೆಯ ಅಂಕಿಅಂಶಗಳು ಕೋಷ್ಟಕದಲ್ಲಿವೆ.

ಭಾಗವಹಿಸಿದ ವಿದ್ಯಾರ್ಥಿನಿಯರ ಸಂಖ್ಯೆ

24

ಸೃಷ್ಟಿ ಮಾಡಿದ ಲೇಖನಗಳ ಸಂಖ್ಯೆ

1003

ಸಂಪಾದನೆ ಮಾಡಿದ ಲೇಖನಗಳು

1490

ಒಟ್ಟು ಸೇರಿಸಿದ ಮಾಹಿತಿ

2.8 ಕೋಟಿ ಬೈಟ್

ಲೇಖನಗಳ ಪುಟ ವೀಕ್ಷಣೆ

91 ಲಕ್ಷ

ಸೇರಿಸಿದ ಫೋಟೋಗಳು

298

ಎಲ್ಲ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ವಿಕಿಪೀಡಿಯದ ಸಂಪಾದನೆಯನ್ನು ಮಾಡಿಸುವ ಮೂಲಕ ಅರಿವಿನ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸಬಹುದು. ಇದು ಮುಂದಕ್ಕೆ ಅವರ ಭವಿಷ್ಯಕ್ಕೆ ಸಹಾಯಕಾರಿಯಾಗುತ್ತದೆ. ಅವರಿಗೆ ಉದ್ಯೋಗದ ಬೇಟೆಯ ಸಂದರ್ಶನದಲ್ಲಿ ತೇರ್ಗಡೆಯಾಗಲು ಸಹಾಯಕಾರಿಯಾಗುತ್ತದೆ.

The post ಅರಿವಿನ ಕೌಶಲ್ಯ ಮತ್ತು ವಿಕಿಪೀಡಿಯ ಸಂಪಾದನೆ first appeared on Vishva Kannada.