ಬಿಟ್‌ಕಾಯಿನ್ | Vishva Kannada

ಬ್ಲಾಕ್‌ಚೈನ್‌
ಗೂಢನಾಣ್ಯ ವ್ಯವಹಾರದ ಬೆನ್ನೆಲುಬು ಜಾಲ

ಬಿಟ್‌ಕಾಯಿನ್ ಅಂದರೆ ಒಂದು ರೀತಿಯ ಗೂಢನಾಣ್ಯ. ಹಲವು ನಮೂನೆಯ ಗೂಢನಾಣ್ಯಗಳಿವೆ. ಅದರಲ್ಲಿ ಮೊದಲನೆಯದು ಬಿಟ್‌ಕಾಯಿನ್. ಈ ಬಿಟ್‌ಕಾಯಿನ್ ವ್ಯವಹಾರವನ್ನು ವಿಕೇಂದ್ರಿತ ಹಣಕಾಸು ವ್ಯವಸ್ಥೆ ಎಂದೂ ಕರೆಯಬಹುದು. ಈ ವಿಕೇಂದ್ರಿತ ವ್ಯವಸ್ಥೆ ಕೆಲಸ ಮಾಡುವುದು ಬ್ಲಾಕ್‌ಚೈನ್ ಎಂಬ ಜಾಲವನ್ನು ಬಳಸಿಕೊಂಡು. ಏನಿದು ಬ್ಲಾಕ್‌ಚೈನ್? ಈ ಬಗ್ಗೆ ಈ ಸಂಚಿಕೆಯಲ್ಲಿ ಇನ್ನಷ್ಟು ತಿಳಿಯೋಣ.

ಯಾವುದೇ ಹಣಕಾಸು ವ್ಯವಹಾರದಲ್ಲಿ ಪ್ರಮುಖವಾಗಿರುವುದು ಲೆಡ್ಜರ್ ಅಂದರೆ ಖಾತಾಪುಸ್ತಕ. ಡಿಜಿಟಲ್ ವ್ಯವಹಾರದಲ್ಲಿ ಈ ಲೆಡ್ಜರ್ ಕೂಡ ಡಿಜಿಟಲ್ ರೂಪದಲ್ಲಿರುತ್ತದೆ. ಬಿಟ್‌ಕಾಯಿನ್ ಮಾಹಿತಿಯನ್ನು ಒಳಗೊಂಡ ಲೆಡ್ಜರ್ ಯಾವುದೋ ಒಂದು ಬ್ಯಾಂಕಿನ ಒಂದು ಗಣಕದಲ್ಲಿ ಇರುವುದಿಲ್ಲ. ಬದಲಿಗೆ ಜಗತ್ತಿನಾದ್ಯಂತ ಹಬ್ಬಿರುವ ಗಣಕಜಾಲದಲ್ಲಿರುವ ಹಲವು ಗಣಕಗಳಲ್ಲಿ ಪ್ರತಿಯಾಗಿರುತ್ತದೆ. ಎಲ್ಲ ಗಣಕದಲ್ಲೂ ಒಂದೇ ಮಾಹಿತಿ ಪ್ರತಿಯಾಗಿರುತ್ತದೆ. ಒಂದು ಗಣಕವು ಈ ಜಾಲದಿಂದ ಕಳಚಿಕೊಂಡರೂ ಮಾಹಿತಿಗೆ ನಷ್ಟವಾಗುವುದಿಲ್ಲ. ಅದು ಇನ್ನೊಂದೆಡೆ ಸುರಕ್ಷಿತವಾಗಿರುತ್ತದೆ. ಈ ಲೆಡ್ಜರ್ ಜಾಲದ ಹೆಸರೇ ಬ್ಲಾಕ್‌ಚೈನ್. ಬಿಟ್‌ಕಾಯಿನ್ ಬಳಸಿ ಜಗತ್ತಿನ ಮೊತ್ತಮೊದಲ ವ್ಯಾಪಾರ 2010ರಲ್ಲಿ ಆಯಿತು.

ಇದಕ್ಕೆ ಬ್ಲಾಕ್‌ಚೈನ್ ಎಂಬ ಹೆಸರು ಯಾಕೆ ಬಂತು? ಈಗಾಗಲೇ ತಿಳಿಸಿದಂತೆ ಇದೊಂದು ವಿಕೇಂದ್ರಿತ ಲೆಡ್ಜರ್ ಜಾಲ. ಈ ಜಾಲದಲ್ಲಿ ಹಲವಾರು ಘಟಕಗಳು, ಅಂದರೆ ಇಂಗ್ಲಿಷಿನಲ್ಲಿ ಹೇಳುವುದಾದರೆ ಬ್ಲಾಕ್‌ಗಳು (block) ಇರುತ್ತವೆ. ಈ ಬ್ಲಾಕ್‌ಗಳು ಒಂದಕ್ಕೊಂದು ಬೆಸೆದಿರುತ್ತವೆ. ಈ ಬ್ಲಾಕ್‌ಗಳಲ್ಲಿ ಗೂಢನಾಣ್ಯ ವ್ಯವಹಾರದ ಡಿಜಿಟಲ್ ಲೆಡ್ಜರ್ ಇರುತ್ತದೆ. ಈ ಬ್ಲಾಕ್‌ಗಳ ಸರಪಣಿಯಲ್ಲಿ ಒಂದು ಬ್ಲಾಕ್ ಇನ್ನೊಂದಕ್ಕೆ ಹ್ಯಾಶ್ ವ್ಯವಸ್ಥೆಯ ಮೂಲಕ ಬೆಸೆಯುತ್ತದೆ. ಏನಿದು ಹ್ಯಾಶ್? ಇದನ್ನು ವ್ಯವಹಾರದ ಗೂಢಲಿಪೀಕೃತ ಸಹಿ ಎನ್ನಬಹುದೇನೋ? ಈ ಗೂಢಲಿಪೀಕೃತ ವ್ಯವಹಾರದ ಸಂದೇಶ ಏನು ಬೇಕಾದರೂ ಆಗಿರಬಹುದು. ಉದಾಹರಣೆಗೆ ಸಂದೇಶವು ಈ ರೀತಿ ಇದೆ ಎಂದಿಟ್ಟುಕೊಳ್ಳೋಣ –“”ಪವನಜ ಅವರು ತುಷಾರದಲ್ಲಿ ಟೆಕ್ಕಿರಣ ಎಂಬ ಅಂಕಣ ಬರೆಯುತ್ತಾರೆ”. ಇದನ್ನು ಹ್ಯಾಶ್ ಮಾಡಿದಾಗ ಅದು ಈ ರೀತಿ ಆಗುತ್ತದೆ – 692ea3260a8c197543835aca88bf3435a65e89656686c6b23e799db1daba2adc. ಇದು ಕೇವಲ ಉದಾಹರಣೆ ಮಾತ್ರ. ನಿಜ ವ್ಯವಹಾರದಲ್ಲಿ ಅದು ಪವನಜ ಅವರು ಸಂತೋಷ ಅವರಿಗೆ 0.001 ಬಿಟ್‌ಕಾಯಿನ್ ವರ್ಗಾಯಿಸಿದ್ದಾರೆ ಎಂದಿರಬಹುದು. ವರ್ಗಾಯಿಸುತ್ತಿರುವ ಬಿಟ್‌ಕಾಯಿನ್‌ನ ಗುರುತು ಕೂಡ ಸಂದೇಶದಲ್ಲಿ ಸೇರಿರುತ್ತದೆ. ಬ್ಲಾಕ್-1 ಹ್ಯಾಶ್ ಮೂಲಕ ಬ್ಲಾಕ್‌ಕ್ಕೆ,  ಬ್ಲಾಕ್-2 ಬ್ಲಾಕ್-3 ಕ್ಕೆ ಇನ್ನೊಂದು ಹ್ಯಾಶ್ ಮೂಲಕ,  ಹೀಗೆ ಈ ಸರಪಣಿ ಇರುತ್ತದೆ. ಈ ಸರಪಣಿಯಲ್ಲಿ ಯಾವುದೇ ಬ್ಲಾಕ್‌ಅನ್ನು ಬದಲಿಸಲು ಸಾಧ್ಯವಿಲ್ಲ. ಯಾಕೆಂದರೆ ಎಲ್ಲ ಸಂದೇಶಗಳೂ ಎಲ್ಲ ಬ್ಲಾಕ್‌ಗಳಲ್ಲಿ ಪ್ರತಿ ಆಗಿರುತ್ತವೆ. ಒಂದು ಬ್ಲಾಕ್ ಅನ್ನು ಬದಲಿಸಬೇಕಾದರೆ ಇಡಿಯ ಬ್ಲಾಕ್‌ಚೈನ್‌ನ ಕನಿಷ್ಠ 51% ನಷ್ಟು ಬ್ಲಾಕ್‌ಗಳನ್ನು ಬದಲಿಸಬೇಕಾಗುತ್ತದೆ. ಈ ರೀತಿ ಬ್ಲಾಕ್‌ಚೈನ್ ವ್ಯವಸ್ಥೆಯಿಂದಾಗಿ ಇಡಿಯ ಗೂಢನಾಣ್ಯ ವ್ಯವಹಾರವು ಒಂದು ವಿಕೇಂದ್ರಿತ ಮಾದರಿಯಲ್ಲಿ ಎಲ್ಲೂ ಮೋಸ ಆಗದ ಹಾಗೆ ನಡೆಯುತ್ತದೆ.

ಒಂದು ಸಂದೇಶವನ್ನು ಹ್ಯಾಶ್ ಮಾಡಿದಾಗ ದೊರೆಯುವ ಪಠ್ಯವು ಹೀಗೆಯೇ ಇರಬೇಕು ಎಂದೇನಿಲ್ಲ. ಬೇರೆ ಬೇರೆಯವರು ಅದನ್ನು ಬೇರೆ ಬೇರೆ ರೀತಿಯಲ್ಲಿ ಹ್ಯಾಶ್ ಮಾಡಬಹುದು. ಹಾಗೆ ದೊರೆತುದನ್ನು ವಾಪಾಸು ಮೂಲ ಸಂದೇಶಕ್ಕೆ ಪರಿವರ್ತಿಸಲು ಆಗುವುದಿಲ್ಲ. ಪ್ರತಿಯೊಂದು ಬ್ಲಾಕ್ ಹೀಗೆಯೇ ಇರಬಹುದು ಎಂದು ಊಹಿಸುವ ಪ್ರಕ್ರಿಯೆ ಮಾಡಬಹುದು. ಇದನ್ನು ಪ್ರೋಗ್ರಾಮ್ ಮೂಲಕ ಮಾಡಲಾಗುತ್ತದೆ. ನಿಮ್ಮ ಊಹೆ ಸರಿಯಾಗಿದ್ದರೆ ಅದನ್ನು ಬ್ಲಾಕ್‌ಸರಪಣಿಗೆ ಜೋಡಿಸಲಾಗುತ್ತದೆ. ಹೀಗೆ ಮಾಡುವುದುನ್ನು ಬ್ಲಾಕ್‌ಚೈನ್ ಮೈನಿಂಗ್ ಎನ್ನುತ್ತಾರೆ. ಹೀಗೆ ಮಾಡಿದವರು ತಮ್ಮ ಅಮೂಲ್ಯ ಗಣಕ ಸಮಯ, ಅಂತರಜಾಲ ಸಂಪರ್ಕ, ವಿದ್ಯುತ್, ಇವುಗಳನ್ನೆಲ್ಲ ಖರ್ಚು ಮಾಡಿರುತ್ತಾರೆ. ಅವರಿಗೆ ಇದಕ್ಕಾಗಿ ಸ್ವಲ್ಪ ಹಣ ನೀಡಬೇಡವೇ? ಹೌದು. ಈ ರೀತಿ ಮಾಡುವುದು ಮತ್ತು ಅದರ ಮೂಲಕ ಹಣ ಸಂಪಾದಿಸುವುದನ್ನು ಬಿಟ್‌ಕಾಯಿನ್ ಮೈನಿಂಗ್ (ಗೂಢನಾಣ್ಯ ಗಣಿಗಾರಿಕೆ) ಎನ್ನುತ್ತಾರೆ. ಇದಕ್ಕಾಗಿ ಹಲವು ತಂತ್ರಾಂಶಗಳು ಲಭ್ಯವಿವೆ. ನಿಮ್ಮ ಗಣಕದಲ್ಲಿ ಈ ತಂತ್ರಾಂಶವನ್ನು ದಿನವಿಡೀ ನಡೆಸಿದರೆ ನಿಮಗೆ ಅತಿ ಚಿಕ್ಕ ಮೊತ್ತ ದೊರೆಯಬಹುದು. ಹತ್ತು ವರ್ಷಗಳ ಹಿಂದೆ ಮೈನಿಂಗ್ ಮೂಲಕ ಈಗಿನ ಕಾಲಕ್ಕೆ ಹೋಲಿಸಿದರೆ ಸ್ವಲ್ಪ ವೇಗವಾಗಿ  ಹಣ ಸಂಪಾದಿಸಬಹುದಿತ್ತು. ಈಗ ಈ ಜಾಲ ಎಷ್ಟು ದೊಡ್ಡದಾಗಿ ಬೆಳೆದಿದೆ ಎಂದರೆ ಇದರ ಮೂಲಕ ತಿಂಗಳುಗಟ್ಟಲೆ ಮೈನಿಂಗ್ ಮಾಡಿದರೂ ಅತಿ ಚಿಕ್ಕ ಮೊತ್ತ ದೊರೆಯುತ್ತದೆ. ಉದಾಹರಣೆಗೆ ನಾನು 45 ದಿನಗಳಲ್ಲಿ ಮೈನಿಂಗ್ ಮೂಲಕ ಸುಮಾರು ರೂ.450 ಸಂಪಾದಿಸಿದ್ದೇನೆ, ಬೇರೆ ಕೆಲಸ ಮಾಡುತ್ತಿದ್ದಾಗ ಅದರ ಪಾಡಿಗೆ ಆ ತಂತ್ರಾಂಶ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುತ್ತದೆ. ಮೈನಿಂಗ್ ಮಾಡಲೆಂದೇ ತುಂಬ ಶಕ್ತಿಶಾಲಿಯಾದ ಯಂತ್ರಾಂಶಗಳು ಮಾರುಕಟ್ಟೆಗೆ ಬಂದಿವೆ. ಅವುಗಳನ್ನು ಅಂತರಜಾಲಕ್ಕೆ ಜೋಡಿಸಿಬಿಟ್ಟರೆ ಅದು ತನ್ನ ಪಾಡಿಗೆ ತಾನು ಮೈನಿಂಗ್ ಮಾಡಿ ಹಣ ಸಂಪಾದನೆ ಮಾಡುತ್ತಿರುತ್ತದೆ.

ಬ್ಲಾಕ್‌ಚೈನ್ ತಂತ್ರಜ್ಞಾನ ಅಥವಾ ವ್ಯವಸ್ಥೆಯನ್ನು ಕೇವಲ ಗೂಢನಾಣ್ಯ ವ್ಯವಹಾರಕ್ಕೆ ಬಳಸಬೇಕಾಗಿಲ್ಲ. ಯಾವುದೇ ವಿಕೇಂದ್ರಿತ ನಂಬಿಕಾರ್ಹ ವ್ಯವಹಾರಕ್ಕೆ ಬಳಸಬಹುದು. ಒಂದು ಉದಾಹರಣೆ ನೋಡೋಣ. ನೀವು ಕಾರು ಕೊಳ್ಳುವಾಗ ಅದು ಎಷ್ಟು ಕಿ.ಮೀ. ಓಡಿದೆ ಎಂದು ನೋಡಿ ಅದರ ಬೆಲೆ ನಿರ್ಧರಿಸುತ್ತೀರಿ. ಅದು ಎಷ್ಟು ಕಿ.ಮೀ. ಓಡಿದೆ ಎಂಬುದನ್ನು ಕಾರಿನಲ್ಲಿರುವ ಓಡೋಮೀಟರ್ ಎನ್ನುವ ಸಾಧನ ದಾಖಲೀಕರಿಸಿರುತ್ತದೆ. ಇದರಲ್ಲಿಯ  ಮೊತ್ತವನ್ನು ಬದಲಾವಣೆ ಮಾಡಿದ್ದಿದ್ದರೆ? ಸ್ಕೂಟರುಗಳಲ್ಲಿ ಕೆಲವರು ಮುಂದಿನ ಚಕ್ರಕ್ಕೆ ಜೋಡಿಸಲ್ಪಟ್ಟಿರುವ ವೇಗ ಸೂಚಕದ ಕೇಬಲ್ ಅನ್ನು ತೆಗೆದು ಸ್ಕೂಟರು ಓಡಿಸುತ್ತಾರೆ. ಹೀಗೆ ಮಾಡುವುದರಿಂದ ಸ್ಕೂಟರು ಎಷ್ಟು ಕಿ.ಮೀ. ಓಡಿದೆ ಎಂದು ದಾಖಲಾಗುವುದಿಲ್ಲ. ಇದರಿಂದಾಗಿ ಸ್ಕೂಟರ್ ಮಾರುವಾಗ ಹೆಚ್ಚಿನ ಬೆಲೆ ಕೇಳಲು ಸಾಧ್ಯವಾಗುತ್ತದೆ. ಕಾರಗಳಲ್ಲಿ ಓಡೋಮೀಟರ್ ಡಿಜಿಟಲ್ ಆಗಿರುತ್ತದೆ. ಆದರೂ ಅದನ್ನು ಗಣಕಕ್ಕೆ ಸಂಪರ್ಕಿಸಿ ಅದರಲ್ಲಿಯ ಮೊತ್ತವನ್ನು ಬದಲಿಸಲು ಸಾಧ್ಯವಿದೆ. ಕಾರಿನ ಓಡೋಮೀಟರ್ ಬ್ಲಾಕ್‌ಚೈನ್ ಜಾಲಕ್ಕೆ ಜೋಡಿಸಲ್ಪಟ್ಟಿದ್ದರೆ? ಆಗ ಅದರ ಮೊತ್ತವನ್ನು ಬದಲಿಸಲು ಸಾಧ್ಯವಾಗುವುದಿಲ್ಲ.  ಇದು ಒಂದು ಉದಾಹರಣೆ ಮಾತ್ರ. ಇನ್ನೂ ಹಲವು ವ್ಯವಹಾರಗಳಲ್ಲಿ ಬ್ಲಾಕ್‌ಚೈನ್ ವ್ಯವಸ್ಥೆಯನ್ನು ಬಳಸಬಹುದು. ಹಲವು ಪ್ರಯೋಗಗಳು ಈಗಾಗಲೇ ನಡೆಯುತ್ತಿವೆ. ಕೆಲವು ವರ್ಷಗಳಲ್ಲಿ ಅವೆಲ್ಲ ಸಾಧ್ಯವಾಗಲಿವೆ.

-ಡಾ| ಯು.ಬಿ. ಪವನಜ

gadgetloka @ gmail . com

The post ಬ್ಲಾಕ್‌ಚೈನ್‌ first appeared on Vishva Kannada.

ಬಿಟ್‌ಕಾಯಿನ್‌
ಈ ಗೂಢನಾಣ್ಯ ಹೇಗೆ ಕೆಲಸ ಮಾಡುತ್ತದೆ?

ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ತುಂಬ ಸುದ್ದಿಯಲ್ಲಿರುವ ಒಂದು ಪದ ಬಿಟ್‌ಕಾಯಿನ್. ಒಂದು ಕಾಲದಲ್ಲಿ ಕಂಪೆನಿಗಳ ಷೇರುಗಳು ಅದರ ಮಾರುಕಟ್ಟೆ ಬಗ್ಗೆ ತುಂಬ ಚರ್ಚೆಗಳು ನಡೆಯುತ್ತಿದ್ದವು. ಈಗ ಆ ಸ್ಥಾನವನ್ನು ಬಿಟ್‌ಕಾಯಿನ್ ಮತ್ತು ಬ್ಲಾಕ್‌ಚೈನ್‌ಗಳು ಆಕ್ರಮಿಸಿವೆ. ಏನಿದು ಬಿಟ್‌ಕಾಯಿನ್? ಈ ಲೇಖನದಲ್ಲಿ ಅದರ ಬಗ್ಗೆ ಒಂದು ಕಿರುಪರಿಚಯವನ್ನು ಮಾಡಲು ಪ್ರಯತ್ನಿಸಲಾಗಿದೆ.

ಮೊದಲಿಗೆ ಸ್ವಲ್ಪ ಪೀಠಿಕೆ. ಈಗಿನ ಹಣಕಾಸು ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ? ಹಾಗೆ ಯಾಕೆ ಕೇಳುತ್ತೀರಿ, ಇದು ಎಲ್ಲರಿಗೂ ತಿಳಿದ ವಿಷಯ ತಾನೆ ಎನ್ನುತ್ತೀರಾ? ನಿಮ್ಮ ಕೈಯಲ್ಲಿ ಹಣ ಅಂದರೆ ನೋಟುಗಳು ಮತ್ತು ನಾಣ್ಯಗಳಿವೆ. ನೀವು ಅದನ್ನು ನೀಡಿ ವಸ್ತುಗಳನ್ನು ಕೊಳ್ಳುತ್ತೀರಿ. ಕೆಲಸ ಮಾಡಿ ಆ ನೋಟುಗಳನ್ನು ನೀವು ಸಂಪಾದಿಸುತ್ತೀರಿ. ಈ ನೋಟುಗಳನ್ನು ಯಾರು ಮುದ್ರಿಸುತ್ತಾರೆ? ಇದನ್ನು ಆಯಾ ದೇಶದ ಸರಕಾರ ಅಥವಾ ಸರಕಾರದ ಮುಖ್ಯ ಬ್ಯಾಂಕ್ ಮುದ್ರಿಸುತ್ತದೆ. ನಮ್ಮ ದೇಶದಲ್ಲಿ ಇದು ರಿಸರ್ವ್ ಬ್ಯಾಂಕ್. ದೇಶದಲ್ಲಿ ಹಣದ ಮುಗ್ಗಟ್ಟು ಬಂದಾಗ ಅವರು ಎಷ್ಟು ಬೇಕಾದರೂ ನೋಟು ಮುದ್ರಿಸಬಹುದೇ? ಇಲ್ಲ. ಸಾಮಾನ್ಯವಾಗಿ ಇಲ್ಲಿ ದೇಶದಲ್ಲಿರುವ ಒಟ್ಟು ಐಶ್ವರ್ಯಕ್ಕೆ ಸಮಾನವಾದ ಮೊತ್ತದ ನೋಟುಗಳನ್ನು ಮಾತ್ರವೇ ಮುದ್ರಿಸಲಾಗುತ್ತದೆ. ಈ ನೋಟು ವ್ಯವಹಾರವನ್ನು ಯಾರು ನಿಯಂತ್ರಿಸುತ್ತಾರೆ? ಉತ್ತರವನ್ನು ಈಗಾಗಲೇ ನೀಡಿ ಆಗಿದೆ -ಅದು ರಿಸರ್ವ್ ಬ್ಯಾಂಕ್. ಅಂದರೆ ಇಡಿಯ ವ್ಯವಹಾರ ಒಂದು ಕೇಂದ್ರೀಕೃತ ವ್ಯವಸ್ಥೆಯ ನಿಯಂತ್ರಣದಲ್ಲಿದೆ.

ಹಣಕಾಸು ವ್ಯವಹಾರ ಕಾಗದದ ನೋಟುಗಳಿಂದ ಡಿಜಿಟಲ್‌ಗೆ ಬದಲಾಗುವುದು ಎಷ್ಟು ಹೊತ್ತಿನ ಕೆಲಸ? ಅದು ಈಗಾಗಲೇ ಆಗಿದೆ. ಭಾರತ ಸರಕಾರವೂ ಸಾಧ್ಯವಿದ್ದಷ್ಟು ಡಿಜಿಟಲ್ ಹಣ ಪಾವತಿಗೆ ಉತ್ತೇಜನ ನೀಡುತ್ತಿದೆ. ನಮ್ಮಲ್ಲಿ ಸದ್ಯ ಬಳಕೆಯಲ್ಲಿರುವ ಡಿಜಿಟಲ್ ಹಣ ಎಂದರೆ ಯು.ಪಿ.ಐ., ಬ್ಯಾಂಕ್ ಖಾತೆ, ಇತ್ಯಾದಿ. ಇವೆಲ್ಲವುಗಳಲ್ಲೂ ಸಾಮಾನ್ಯ ಅಂಶವೆಂದರೆ ಯಾರಲ್ಲಿ ಎಷ್ಟು ಹಣ ಇದೆ ಎಂಬುದನ್ನು ಒಂದು ಡಿಜಿಟಲ್ ಲೆಡ್ಜರ್‌ನಲ್ಲಿ ಇಟ್ಟುಕೊಳ್ಳಲಾಗುತ್ತದೆ. ಈ ಲೆಡ್ಜರ್ ಬ್ಯಾಂಕಿನ ನಿಯಂತ್ರಣದಲ್ಲಿರುತ್ತದೆ. ಅಂದರೆ ಇದು ಕೇಂದ್ರೀಕೃತ ವ್ಯವಸ್ಥೆ. ಇದು ಈ ರೀತಿ ಯಾಕಿದೆ ಎಂದರೆ ಡಿಜಿಟಲ್ ಮಾಹಿತಿಯನ್ನು ಸುಲಭದಲ್ಲಿ ಪ್ರತಿ ಮಾಡಬಹುದು ಹಾಗೂ ಆ ಪ್ರತಿಯನ್ನು ಹಲವು ಕಡೆ ಖರ್ಚು ಮಾಡಬಹುದಲ್ಲವೇ? ಈ ಸಮಸ್ಯೆಗೆ double spend problem ಎನ್ನುತ್ತಾರೆ.  ಹಾಗಾಗದಂತೆ ತಡೆಯುವುದೇ ಈ ಕೇಂದ್ರೀಕೃತ ಲೆಡ್ಜರ್ ವ್ಯವಸ್ಥೆ.

ಇಡಿಯ ಹಣಕಾಸು ವ್ಯವಹಾರ ಒಂದು ಕೇಂದ್ರೀಕೃತ ವ್ಯವಸ್ಥೆಯಡಿಯಲ್ಲಿ ನಡೆಯದೆ ಅದು ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ನಡೆದರೆ ಹೇಗೆ? ಅಂದರೆ ಯಾವುದೇ ಒಂದು ಸಂಸ್ಥೆ ಅಥವಾ ವ್ಯಕ್ತಿ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅಂತಹ ವ್ಯವಸ್ಥೆಯೇ ಬ್ಲಾಕ್‌ಚೈನ್ ಮತ್ತು ಆ ವ್ಯವಸ್ಥೆಯನ್ನು ಬಳಸುವ ಹಣಕಾಸು ವ್ಯವಸ್ಥೆಯೇ ಬಿಟ್‌ಕಾಯಿನ್. ಇದನ್ನು ವಿವರಿಸಲು ಇನ್ನೊಂದು ಉದಾಹರಣೆ ನೋಡೋಣ. 60ರ ದಶಕದಲ್ಲಿ ಅಮೇರಿಕ ಮತ್ತು ರಷ್ಯಾ ಸಂಯುಕ್ತ ಸಂಸ್ಥಾನಗಳ ನಡುವೆ ಶೀತಲ ಸಮರ ನಡೆಯುತ್ತಿತ್ತು. ಅಮೇರಿಕ ದೇಶ ತನ್ನ ಎಲ್ಲ ಪರಮಾಣು ಸಂಶೋಧನೆಗಳ ಬಗೆಗಿನ ಮಾಹಿತಿ, ಪರೀಕ್ಷೆಗಳ ಫಲಿತಾಂಶಗಳನ್ನೆಲ್ಲ ಗಣಕಗಳಲ್ಲಿ ಸಂಗ್ರಹಿಸಿಟ್ಟಿತ್ತು. ಈ ಗಣಕದ ಮೇಲೇನಾದರೂ ರಷ್ಯಾ ಬಾಂಬ್ ಹಾಕಿ ನಾಶ ಮಾಡಿದರೆ ಎಲ್ಲ ಮಾಹಿತಿ ನಾಶವಾಗುತ್ತದೆ ತಾನೆ? ಒಂದು ಗುಟ್ಟು ಒಬ್ಬ ವ್ಯಕ್ತಿಯಲ್ಲಿದ್ದರೆ ಅವನನ್ನು ನಾಶಮಾಡಿದರೆ ಆ ಮಾಹಿತಿಯೂ ನಾಶವಾಗುತ್ತದೆ. ಆದರೆ ಆತ ಆ ಗುಟ್ಟನ್ನು ಹಲವರ ಜೊತೆ ಹಂಚಿಕೊಂಡಿದ್ದರೆ ಆತನನ್ನು ನಾಶ ಮಾಡಿದರೂ ಮಾಹಿತಿ ಇನ್ನೆಲ್ಲೋ ದೊರೆಯುತ್ತದೆ. ಅಮೇರಿಕಾವೂ ಇದನ್ನೇ ಮಾಡಿತು. ತನ್ನ ಪ್ರಮುಖ ಗಣಕಗಳನ್ನು ಒಂದು ಜಾಲದ ಮೂಲಕ ಜೋಡಿಸಿತು. ಮಾಹಿತಿಯನ್ನು ಎಲ್ಲ ಗಣಕಗಳಲ್ಲೂ ಪ್ರತಿ ಮಾಡಿಟ್ಟುಕೊಂಡಿತು. ಈ ಜಾಲವೇ ಮುಂದೆ ಬೆಳೆದು ಅಂತರಜಾಲವಾಯಿತು. ಇಲ್ಲಿ ಪ್ರಮುಖ ತತ್ತ್ವ ಎಂದರೆ ಮಾಹಿತಿಯ ವಿಕೇಂದ್ರೀಕರಣ. ಬಹುಮಟ್ಟಿಗೆ ಇದೇ ನಮೂನೆಯ ತತ್ತ್ವವನ್ನು ಬ್ಲಾಕ್‌ಚೈನ್ ಮತ್ತು ಬಿಟ್‌ಕಾಯಿನ್ ಬಳಸುತ್ತವೆ.

ಬಿಟ್‌ಕಾಯಿನ್ ವ್ಯವಸ್ಥೆಯನ್ನು ಮೊದಲ ಬಾರಿಗೆ ಸೂಚಿಸಿದ್ದು ಸತೋಷಿ ನಾಕಮೊಟೊ. ಇದು ಒಂದು ವ್ಯಕ್ತಿಯೋ ಅಥವಾ ಕೆಲವು ವ್ಯಕ್ತಿಗಳ ಗುಂಪೋ ಎಂದು ಯಾರಿಗೂ ಇದು ತನಕ ತಿಳಿದುಬಂದಿಲ್ಲ. ಇದು ನಡೆದುದು 2008ರಲ್ಲಿ. ಅವರು ಒಂದು ಶ್ವೇತಪತ್ರ ಅಥವಾ ಸಂಶೋಧನಾ ಪ್ರಬಂಧ ಮಂಡಿಸಿ ಅದರಲ್ಲಿ ವಿಕೇಂದ್ರೀಕೃತ ಹಣಕಾಸು ವ್ಯವಸ್ಥೆಯನ್ನು ಪ್ರತಿಪಾದಿಸಿದರು. ಅದಕ್ಕೆ ಅವರು ಸೂಚಿಸಿದ ಹೆಸರು ಬಿಟ್‌ಕಾಯಿನ್ ಎಂದು. ಈ ವ್ಯವಸ್ಥೆ ಡಿಜಿಟಲ್ ಹಣ ವ್ಯವಹಾರದಲ್ಲಾಗುವ double spend problem ಗೆ ಪರಿಹಾರವನ್ನು ಸೂಚಿಸಿತ್ತು. ಈ ವ್ಯವಸ್ಥೆಯ ಪ್ರಮುಖ ಗುಣವೈಶಿಷ್ಟ್ಯವೆಂದರೆ ಬಿಟ್‌ಕಾಯಿನ್ ಮಾಹಿತಿಯನ್ನು ಒಳಗೊಂಡ ಲೆಡ್ಜರ್ ಯಾವುದೋ ಒಂದು ಬ್ಯಾಂಕಿನ ಒಂದು ಗಣಕದಲ್ಲಿ ಇರುವುದಿಲ್ಲ. ಬದಲಿಗೆ ಜಗತ್ತಿನಾದ್ಯಂತ ಹಬ್ಬಿರುವ ಗಣಕಜಾಲದಲ್ಲಿರುವ ಹಲವು ಗಣಕಗಳಲ್ಲಿ ಪ್ರತಿಯಾಗಿರುತ್ತದೆ. ಎಲ್ಲ ಗಣಕದಲ್ಲೂ ಒಂದೇ ಮಾಹಿತಿ ಪ್ರತಿಯಾಗಿರುತ್ತದೆ. ಒಂದು ಗಣಕ ಜಾಲದಿಂದ ಕಳಚಿಕೊಂಡರೂ ಮಾಹಿತಿಗೆ ನಷ್ಟವಾಗುವುದಿಲ್ಲ. ಅದು ಇನ್ನೊಂದೆಡೆ ಸುರಕ್ಷಿತವಾಗಿರುತ್ತದೆ. ಈ ಲೆಡ್ಜರ್ ಜಾಲದ ಹೆಸರೇ ಬ್ಲಾಕ್‌ಚೈನ್. ಬಿಟ್‌ಕಾಯಿನ್ ಬಳಸಿ ಜಗತ್ತಿನ ಮೊತ್ತಮೊದಲ ವ್ಯಾಪಾರ 2010ರಲ್ಲಿ ಆಯಿತು.

ಬಿಟ್‌ಕಾಯಿನ್ ಸಂಪೂರ್ಣ ಡಿಜಿಟಲ್ ಹಣ. ಇದು ಯಾವುದೇ ಮುದ್ರಿತ ನೋಟು ಅಲ್ಲ. ಇದನ್ನು ಯಾವುದೇ ಒಂದು ದೇಶ ಅಥವಾ ಬ್ಯಾಂಕ್ ನಿಯಂತ್ರಿಸುತ್ತಿಲ್ಲ. ಇದರ ಮೂಲಕ ಮಾಡುವ ವ್ಯವಹಾರಗಳು ಸರಕಾರಗಳ ಸುಪರ್ದಿಗೆ ಬರುವುದಿಲ್ಲ. ಆದುದರಿಂದಲೇ ಹಲವು ಅವ್ಯವಹಾರಗಳಿಗೆ ಬಿಟ್‌ಕಾಯಿನ್ ಬಳಕೆಯಾಗುತ್ತಿದೆ. ಭಾರತ ಸರಕಾರವು ಬಿಟ್‌ಕಾಯಿನ್‌ಬಳಕೆಯನ್ನು 2018ರಲ್ಲಿ ನಿಷೇಧಿಸಿತ್ತು. 2019ರಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಈ ನಿಷೇಧವನ್ನು ತೆರವುಗೊಳಿಸಿ ಬಿಟ್‌ಕಾಯಿನ್ ಬಳಕೆ ಬಗ್ಗೆ ನೀತಿ ನಿಯಮಗಳನ್ನು ರೂಪಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತು. ಆದರೆ ಸರಕಾರವು ಇದು ತನಕ ಯಾವುದೇ ನಿಯಮಾವಳಿಗಳನ್ನು ರೂಪಿಸಿಲ್ಲ. ಸದ್ಯಕ್ಕೆ ಬಿಟ್‌ಕಾಯಿನ್ ಮೂಲಕ ವ್ಯವಹಾರ ಮಾಡಬಹುದು ಮತ್ತು ಅವನ್ನು ನಮ್ಮ ಬ್ಯಾಂಕ್ ಖಾತೆಗೆ ಜೋಡಿಸಬಹುದು. ಬಿಟ್‌ಕಾಯಿನ್ ಬೆಲೆ ಸದ್ಯಕ್ಕೆ ಗಗನದಲ್ಲಿದೆ. ಈಗ ಒಂದು ಬಿಟ್‌ಕಾಯಿನ್ ಬೆಲೆ ಸುಮಾರು ರೂ.41 ಲಕ್ಷ ಇದೆ (ಮಾರ್ಚ್ 11, 2021 ರಂದು). ಬಿಟ್‌ಕಾಯಿನ್ ಬೆಲೆ ಷೇರು ಮಾರುಕಟ್ಟೆಯಲ್ಲಿ ಕಂಪೆನಿಗಳ ಷೇರು ಬೆಲೆಯಂತೆ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಬಿಟ್‌ಕಾಯಿನ್‌ಗಳನ್ನು ಕೊಳ್ಳುವುದು ಮತ್ತು ಮಾರುವುದರ ಮೂಲಕ ಹಣ ಸಂಪಾದಿಸಿದವರು ಇದ್ದಾರೆ. ಹಣ ಕಳಕೊಂಡವರೂ ಇದ್ದಾರೆ.

ಬಿಟ್‌ಕಾಯಿನ್ ಒಂದು ಗೂಢನಾಣ್ಯ ಎನ್ನಬಹುದು. ಇದನ್ನು ಇಂಗ್ಲಿಷಿನಲ್ಲಿ cryptocurrency ಎನ್ನುತ್ತಾರೆ. ಈ ಡಿಜಿಟಲ್ ಹಣವನ್ನು ಇಟ್ಟುಕೊಳ್ಳಲು ನಿಮ್ಮಲ್ಲಿ ಒಂದು ಡಿಜಿಟಲ್ ಪರ್ಸ್ ಅಥವಾ ವ್ಯಾಲೆಟ್ ಇರಬೇಕು. ಇದೊಂದು ಅಕ್ಷರ ಮತ್ತು ಸಂಖ್ಯೆಗಳ ಸಮೂಹ. ಉದಾ- 459xxMFyFLfuMRs24Bf9TDU6Ua6nMUfEn9. ಇದು ಗೂಢಲಿಪೀಕರಿಸಲ್ಪಟ್ಟ (encrypted) ವಿಳಾಸ. ಈ ವಿಳಾಸಕ್ಕೆ ಬಿಟ್‌ಕಾಯಿನ್ ಕಳುಹಿಸಿದರೆ ಅದರ ಯಜಮಾನರಿಗೆ ಅದು ತಲುಪುತ್ತದೆ. ಈ ನಮೂನೆಯ ಗೂಢನಾಣ್ಯ ಬಿಟ್‌ಕಾಯಿನ್ ಮಾತ್ರವಲ್ಲ. ಹಲವಾರು ಗೂಢನಾಣ್ಯಗಳು (cryptocurrency) ಈಗ ಚಾಲನೆಯಲ್ಲಿವೆ. ಬಿಟ್‌ಕಾಯಿನ್ ಇವುಗಳಲ್ಲಿ ಮೊದಲನೆಯದು ಮತ್ತು ಸದ್ಯಕ್ಕೆ ಅತಿ ಜನಪ್ರಿಯವಾಗಿರುವುದು. ಬಿಟ್‌ಕಾಯಿನ್‌ಗಳನ್ನು ನೀವು ಹಣ ಕೊಟ್ಟು ಕೊಳ್ಳಬಹುದು ಅಥವಾ ಬಿಟ್‌ಕಾಯಿನ್ ಗಣಿಗಾರಿಕೆ ಮೂಲಕ ಸಂಪಾದಿಸಬಹದು. ಬ್ಲಾಕ್‌ಚೈನ್, ಬಿಟ್‌ಕಾಯಿನ್ ಗಣಿಗಾರಿಕೆ (Bitcoin mining) ಮತ್ತು ಗೂಢನಾಣ್ಯಗಳ ಮಾರಾಟ/ಕೊಳ್ಳುವಿಕೆ ವ್ಯವಹಾರಗಳ ಬಗ್ಗೆ ವಿವರವಾಗಿ ತಿಳಿಯಬೇಕಾದರೆ ಅವುಗಳ ಬಗ್ಗೆ ಪ್ರತ್ಯೇಕ ಲೇಖನಗಳನ್ನೇ ಬರೆಯಬೇಕಾಗುತ್ತದೆ.

–ಡಾ| ಯು.ಬಿ. ಪವನಜ

gadgetloka @ gmail . com

The post ಬಿಟ್‌ಕಾಯಿನ್‌ first appeared on Vishva Kannada.