ಚಾಟ್‌ಬೋಟ್ | Vishva Kannada https://vishvakannada.com Sat, 25 Apr 2026 19:49:55 +0000 en-US hourly 1 https://wordpress.org/?v=7.0.4 ರೋಬೋಟ್ ಲಾಯರ್ https://vishvakannada.com/%e0%b2%b2%e0%b3%87%e0%b2%96%e0%b2%a8/robot-lawyer/ https://vishvakannada.com/%e0%b2%b2%e0%b3%87%e0%b2%96%e0%b2%a8/robot-lawyer/#respond Fri, 17 Jan 2025 16:39:15 +0000 https://vishvakannada.com/?p=2546 ಇತ್ತೀಚೆಗೆ ಕೃತಕ ಬುದ್ಧಿಮತ್ತೆ ತುಂಬ ಸುದ್ದಿಯಲ್ಲಿದೆ. ಅಂತಹ ಒಂದು ಚಾಟ್ ಇಂಜಿನ್ ಚಾಟ್‌ಜಿಪಿಟಿ ಬಗ್ಗೆ ಎರಡು ವಾರಗಳ ಹಿಂದೆ ಬರೆದಿದ್ದೆ. ಗೂಗ್ಲ್‌, ಅಮೆಜಾನ್ ಅಲೆಕ್ಸಾ, ಆಪಲ್ ಸಿರಿ ಇವುಗಳಿಗೆ ಧ್ವನಿ ಮೂಲಕ ಆಜ್ಞೆ ನೀಡುವುದೂ…

The post ರೋಬೋಟ್ ಲಾಯರ್ first appeared on Vishva Kannada.

]]>
ಇತ್ತೀಚೆಗೆ ಕೃತಕ ಬುದ್ಧಿಮತ್ತೆ ತುಂಬ ಸುದ್ದಿಯಲ್ಲಿದೆ. ಅಂತಹ ಒಂದು ಚಾಟ್ ಇಂಜಿನ್ ಚಾಟ್‌ಜಿಪಿಟಿ ಬಗ್ಗೆ ಎರಡು ವಾರಗಳ ಹಿಂದೆ ಬರೆದಿದ್ದೆ. ಗೂಗ್ಲ್‌, ಅಮೆಜಾನ್ ಅಲೆಕ್ಸಾ, ಆಪಲ್ ಸಿರಿ ಇವುಗಳಿಗೆ ಧ್ವನಿ ಮೂಲಕ ಆಜ್ಞೆ ನೀಡುವುದೂ ಕೃತಕ ಬುದ್ಧಿಮತ್ತೆಯ ವ್ಯಾಪ್ತಿಯಲ್ಲಿ ಬರುತ್ತವೆ. ಸದ್ಯಕ್ಕೆ ಇವು ಯಾವುವೂ ಕನ್ನಡವನ್ನು ಕಲಿತಿಲ್ಲ. ಆದುದರಿಂದ ಕೃತಕ ಬುದ್ಧಿಮತ್ತೆಯ ಸವಲತ್ತುಗಳಿಂದಾಗಿ (ತಂತ್ರಾಂಶಗಳಿಂದ) ನಮ್ಮ ಕೆಲಸ ಹೋಗಬಹುದು ಎಂದು ಶಿಕ್ಷಕರು ಮತ್ತು ಲೇಖಕರುಗಳು ಚಿಂತೆ ಪಡಬೇಕಾಗಿಲ್ಲ. ಆದರೆ ಕೃತಕ ಬುದ್ಧಿಮತ್ತೆಯ ಸವಲತ್ತುಗಳು ಕನ್ನಡದಲ್ಲೂ ದೊರೆಯುವ ಕಾಲ ತುಂಬ ದೂರವಿಲ್ಲ. ಗೂಗ್ಲ್ ಅನುವಾದ ಮೊದಲು ಕನ್ನಡಕ್ಕೆ ಕೆಟ್ಟದಾಗಿತ್ತು. ಇತ್ತೀಚೆಗೆ ಅದು ತುಂಬ ಸುಧಾರಿಸಿದೆ. ಬಹುತೇಕ ಅನುವಾದದ ಕೆಲಸಗಳಿಗೆ ಅದು ನೀಡುವ ಅನುವಾದ ಒಂದು ಪ್ರಾರಂಭದ ಹೆಜ್ಜೆಯನ್ನಾಗಿ ಹಲವರು ಬಳಸುತ್ತಿದ್ದಾರೆ. ಗೂಗ್ಲ್ ಅನುವಾದ ನೀಡಿದ ಪಠ್ಯವನ್ನು ಸುಧಾರಿಸಿ ಅಂತಿಮ ರೂಪು ನೀಡುತ್ತಿದ್ದಾರೆ. ವಿಕಿಪೀಡಿಯಾದಲ್ಲೂ ಈ ಯಂತ್ರಾನುವಾದ ಲಭ್ಯವಿದೆ. ಅಂದರೆ ಇಂಗ್ಲಿಷ್ (ಅಥವಾ ಇತರೆ) ಭಾಷೆಯ ವಿಕಿಪೀಡಿಯ ಲೇಖನವನ್ನು ಕನ್ನಡಕ್ಕೆ (ಅಥವಾ ಇತರೆ ಭಾಷೆಗೆ) ವಿಕಿಪೀಡಿಯದಲ್ಲೇ ಅಡಕವಾಗಿರುವ ಯಂತ್ರಾನುವಾದದ ಮೂಲಕ ಅನುವಾದ ಮಾಡಬಹುದು. ಆದರೆ ಈ ಅನುವಾದ ಸುಮಾರು 85% ದಷ್ಟು ಮಾತ್ರ ಸರಿಯಿದೆ. ಅದನ್ನು ಮೂಲವಾಗಿಟ್ಟುಕೊಂಡು ಅದನ್ನು ಸುಧಾರಿಸಿ ಲೇಖನ ಅಂತಿಮಗೊಳಿಸಬಹುದು. ಬಹುತೇಕ ಜನರು ಹಾಗೆ ಮಾಡುತ್ತಿದ್ದಾರೆ ಕೂಡ. ಕೃತಕ ಬುದ್ಧಿಮತ್ತೆಯ ಸವಲತ್ತುಗಳು ಚಾಟ್‌ಜಿಪಿಟಿಯಿಂದ ಮುಂದುವರೆದು ಕಾನೂನು ಕ್ಷೇತ್ರಕ್ಕೂ ಕಾಲಿಟ್ಟರೆ? ಅಂತಹ ಒಂದು ಸುದ್ದಿ ಬಂದಿದೆ.

ನಾನು ಹೇಳಲು ಹೊರಟಿರುವುದು ಕೃತಕ ಬುದ್ಧಿಮತ್ತೆಯ ಮೂಲಕ ಕೆಲವು ಕಾನೂನುಗಳ ಅನುವಾದ ಅಲ್ಲ. ಇದು ರೋಬೋಟ್ ಲಾಯರ್ ಕಥೆ. ಹಾಗೆಂದು ಹೇಳಿ ಸಿನಿಮಾಗಳಲ್ಲಿ ತೋರಿಸುವಂತೆ ಯಂತ್ರಮಾನವನೊಂದು ನ್ಯಾಯಾಲಯದಲ್ಲಿ ವಾದ ಮಾಡುವ ದೃಶ್ಯವನ್ನು ಊಹಿಸಿಕೊಳ್ಳಬೇಕಾಗಿಲ್ಲ. ಬದಲಿಗೆ ಕಾನೂನು ಕಲಿತು ಸಂದರ್ಭಕ್ಕೆ ಸರಿಯಾಗಿ ಸೂಕ್ತ ಕಾನೂನಿನ ಉಲ್ಲೇಖ ಮಾಡಿ ನ್ಯಾಯಾಲಯದಲ್ಲಿ ಕಕ್ಷಿದಾರನ ಪರವಾಗಿ ವಾದ ಮಂಡಿಸುವ ಕೃತಕ ಬುದ್ಧಿಮತ್ತೆಯ ಇಂಜಿನ್ ತಂತ್ರಾಂಶ ಎನ್ನಬಹುದು.

ಕಾಲ್ಪನಿಕ ಚಿತ್ರ

ಕೃತಕ ಬುದ್ಧಿಮತ್ತೆ (artificial intelligence) ಎನ್ನುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚೆಗೆ ತುಂಬ ಸುದ್ದಿ ಮಾಡುತ್ತಿರುವ ವಿಷಯ. ಇದರಲ್ಲಿ ಯಂತ್ರಗಳು ತಾವೇ ವಿಷಯಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ಸ್ಪಂದಿಸಿ, ತಾವೇ ತೀರ್ಮಾನ ತೆಗೆದುಕೊಂಡು ಕೆಲಸ ಮಾಡುತ್ತವೆ. ಕೆಲವು ಪ್ರಮುಖ ಉದಾಹರಣೆಗೆಳು – ಯಂತ್ರಾನುವಾದ, ಪಠ್ಯದಿಂದ ಧ್ವನಿಗೆ ಹಾಗೂ ಧ್ವನಿಯಿಂದ ಪಠ್ಯಕ್ಕೆ ಪರಿವರ್ತನೆ, ಚಿತ್ರದಿಂದ ಪಠ್ಯಕ್ಕೆ, ಇತ್ಯಾದಿ. ಈ ಬಗ್ಗೆ ಹಿಂದೊಮ್ಮೆ ಹೀಗೆಂದು ಇದೇ ಅಂಕಣದಲ್ಲಿ ಬರೆಯಲಾಗಿತ್ತು.

ಹಲವು ಕ್ಷೇತ್ರಗಳಂತೆ ಕಾನೂನು ಮತ್ತು ನ್ಯಾಯಾಲಯಗಳಿಗೂ ಕೃತಕ ಬುದ್ಧಿಮತ್ತೆ ಪ್ರವೇಶ ಮಾಡುತ್ತಿದೆ. ಅಮೆರಿಕದಲ್ಲಿ ಕೃತಕಬುದ್ಧಿಮತ್ತೆಯ ನ್ಯಾಯವಾದಿ ತಯಾರಾಗಿದೆ. ಇದನ್ನು ವ್ಯಾಪಕವಾಗಿ ರೋಬೋಟ್ ಲಾಯರ್ ಎಂದು ಕರೆಯಲಾಗುತ್ತಿದೆ. ಅಮೆರಿಕದಲ್ಲಿ 2015ರಲ್ಲಿ ಜೋಶುವ ಬ್ರೌಡರ್ ಎಂಬವರು ಡುನಾಟ್‌ಪೇ ಎಂಬ ಕಾನೂನು ಸಲಹೆಗಾರ ತಂತ್ರಾಂಶವನ್ನು ಬಿಡುಗಡೆ ಮಾಡಿದರು. ಅದು ಕೂಡ ಚಾಟ್‌ಜಿಪಿಟಿಯಂತೆ ಒಂದು ಚಾಟ್‌ಬೋಟ್ ಆಗಿತ್ತು. ಜೋಶುವ ಅದನ್ನು ಪ್ರಪಂಚದ ಮೊದಲ ರೋಬೋಟ್ ಲಾಯರ್ ಎಂದು ಕರೆದರು. ಅದಕ್ಕೆ ಕಾನೂನು ಸಂಬಂಧಿ ಪ್ರಶ್ನೆ ಕೇಳಿದರೆ ಅದು ಉತ್ತರಿಸುತ್ತಿತ್ತು. ಪ್ರಾರಂಭದಲ್ಲಿ ಕೆಲವು ಸರಳವಾದ ಸಂದರ್ಭಗಳಲ್ಲಿ ಏನೆಲ್ಲ ಸಾಧ್ಯತೆಗಳಿವೆ ಎಂಬುದನ್ನು ಅದು ವಿವರಿಸುತ್ತಿತ್ತು. ಉದಾಹರಣೆಗೆ ಹಣ ನೀಡಬೇಕಾಗಿತ್ತು, ಅವಧಿಯೊಳಗಡೆ ನೀಡಿಲ್ಲ, ಈಗ ನೋಟೀಸು ಬಂದಿದೆ – ಈ ಸಂದರ್ಭದಲ್ಲಿ ಏನೆಲ್ಲ ಮಾಡಬಹುದು ಎಂಬುದನ್ನು ಅದು ಹೇಳುತ್ತದೆ. ಈ ಕಿರುತಂತ್ರಾಂಶ (ಆಪ್) ಗೂಗ್ಲ್ ಪ್ಲೇ ಸ್ಟೋರಿನಲ್ಲಿದೆ. ನಾನು ಅದನ್ನು ನನ್ನ ಮೊಬೈಲಿನಲ್ಲಿ ಹಾಕಿಕೊಂಡು ಬಳಸಿ ನೋಡಲು ಪ್ರಯತ್ನಿಸಿದೆ. ಆದರೆ ಅದು ಅಮೆರಿಕ, ಆಸ್ಟ್ರೇಲಿಯ ಮತ್ತು ಕೆಲವು ಯುರೋಪಿನ ದೇಶಗಳಿಗೆ ಸೀಮಿತವಾಗಿತ್ತು. ಭಾರತ ಅದರ ಪಟ್ಟಿಯಲ್ಲಿರಲಿಲ್ಲ. ಆದುದರಿಂದ ಅದು ನಿಜವಾಗಿಯೂ ಹೇಗೆ ಕೆಲಸ ಮಾಡುತ್ತಿದೆ ಎಂದು ಪರಿಶೀಲಿಸಲು ನನಗೆ ಆಗಲಿಲ್ಲ.

ಈ ಡುನಾಟ್‌ಪೇ ಚಾಟ್‌ಬೋಟ್ ಅಥವಾ ರೋಬೋಟ್ ಲಾಯರ್ ಅನ್ನು ನಿಜವಾದ ನ್ಯಾಯಾಲಯದಲ್ಲಿ ಕಾನೂನು ಹೋರಾಟವೊಂದರಲ್ಲಿ ಬಳಸಲು ಸಿದ್ಧತೆ ಆಗಿತ್ತು. ಅತಿ ವೇಗವಾಗಿ ವಾಹನ ಚಾಲನೆ ಮಾಡಿದ್ದೀಯ ಎಂದೊಬ್ಬರಿಗೆ ಸಾರಿಗೆ ಪೋಲೀಸರಿಂದ ನೋಟೀಸು ಬಂದಿತ್ತು. ಅವರು ನ್ಯಾಯಾಲಯದಲ್ಲಿ ಹಾಜರಾಗಿ ತಮ್ಮ ವಾದವನ್ನು ಮಂಡಿಸಬೇಕಿತ್ತು. ಇಲ್ಲಿ ವಾದ ಮಂಡಿಸಲು ರೋಬೋಟ್ ಲಾಯರ್ ಸಹಾಯ ಪಡೆಯುವುದೆಂದು ತೀರ್ಮಾನ ಆಗಿತ್ತು. ಆ ಕೇಸು ಕೋರ್ಟಿನಲ್ಲಿ ಫೆಬ್ರವರಿ 22ಕ್ಕೆ ನ್ಯಾಯಾಧೀಶರ ಮುಂದೆ ಬರುವುದಿತ್ತು. ಆದರೆ ಜೋಶುವ ಅವರು ಒಂದು ಟ್ವೀಟ್ ಮೂಲಕ ರೋಬೋಟ್ ಲಾಯರ್ ಅನ್ನು ಕೋರ್ಟಿಗೆ ಕಳುಹಿಸುವ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಲಾಯರುಗಳ ಸಂಘದ ಪ್ರತಿಭಟನೆ ಹಾಗೂ ಎಚ್ಚರಿಕೆ. ರೋಬಾಟ್ ಲಾಯರ್ ತಂದರೆ ಜೋಶುವ ಅವರಿಗೆ 6 ತಿಂಗಳುಗಳ ಜೈಲು ಸಾಧ್ಯತೆಯಿದೆ ಎಂಬ ಭಯದಿಂದ ಅವರು ಈ ತೀರ್ಮಾನ ತೆಗೆದುಕೊಂಡುದುದಾಗಿ ತಮ್ಮ ಟ್ವೀಟ್‌ನಲ್ಲಿ ತಿಳಿದಿದ್ದಾರೆ.  ಕೋರ್ಟಿನಲ್ಲಿ ವಾದ ಮಾಡುವ ವ್ಯಕ್ತಿ ಇಯರ್‌ಫೋನ್ ಧರಿಸಿ ಅದು ಮೊಬೈಲಿನಲ್ಲಿರುವ ಡುನಾಟ್‌ಪೇ ತಂತ್ರಾಂಶಕ್ಕೆ ಸಂಪರ್ಕ ಹೊಂದುತ್ತದೆ. ಆ ತಂತ್ರಾಂಶವು ವಾದವನ್ನು ಆಲಿಸಿ ತನ್ನ ಉತ್ತರವನ್ನು ಇಯರ್‌ಫೋನ್ ಮೂಲಕ ತಿಳಿಸುತ್ತದೆ. ಕಕ್ಷಿದಾರ ಕೋರ್ಟಿನಲ್ಲಿ ರೋಬೋಟ್ ಲಾಯರ್ ತಿಳಸಿದಂತೆ ವಾದ ಮಾಡುತ್ತಾರೆ. ಇದು ಅವರ ಯೋಜನೆ ಆಗಿತ್ತು. ಮೊಬೈಲ್  ಫೋನ್ ಮತ್ತು ಇಯರ್‌ಫೋನ್‌ಗಳನ್ನು ಕೋರ್ಟಿನಲ್ಲಿ ಬಳಕೆ ಮಾಡುವಂತಿಲ್ಲ. ಆದುದರಿಂದ ಇಯರ್‌ಫೋನ್ ಅನ್ನು ಕಿವಿ ಕೇಳದವರು ಬಳಸುವ ಸಾಧನ ಎಂಬಂತೆ ಬಿಂಬಿಸುವ ಯೋಜನೆ ಅವರದಾಗಿತ್ತು. ಆದರೆ ಸದ್ಯಕ್ಕೆ ರೋಬೋಟ್ ಲಾಯರ್ ಕೇವಲ ಸಲಹೆಗೆಳಿಗೆ ಮಾತ್ರ ಸೀಮಿತ. ಕೋರ್ಟಿನಲ್ಲಿ ನಿಜವಾದ ವಾದ ಸದ್ಯಕ್ಕಿಲ್ಲ.

ಡಾ| ಯು.ಬಿ. ಪವನಜ

gadgetloka @ gmail . com

The post ರೋಬೋಟ್ ಲಾಯರ್ first appeared on Vishva Kannada.

]]>
https://vishvakannada.com/%e0%b2%b2%e0%b3%87%e0%b2%96%e0%b2%a8/robot-lawyer/feed/ 0
ಬುದ್ಧಿವಂತ ಮಾತುಗಾರ https://vishvakannada.com/%e0%b2%b2%e0%b3%87%e0%b2%96%e0%b2%a8/chatgpt/ https://vishvakannada.com/%e0%b2%b2%e0%b3%87%e0%b2%96%e0%b2%a8/chatgpt/#respond Fri, 17 Jan 2025 16:28:13 +0000 https://vishvakannada.com/?p=2542 “ನನಗೊಂದು ಪೈಥೋನ್ ಪ್ರೋಗ್ರಾಂ ಬರೆದುಕೊಡು” “ನನಗೆ ಬೋರ್ ಆಗಿದೆ, ಏನು ಮಾಡಲಿ?” “ಇಡ್ಲಿ ಯಾಕೆ ಜಗತ್ತಿನ ಸರ್ವಶ್ರೇಷ್ಠ ತಿಂಡಿಯಾಗಿದೆ?” “ನನಗೊಂದು ಕವನ ಸೃಷ್ಠಿಸಿ ಕೊಡು” ಇವೆಲ್ಲ ಆದೇಶಗಳನ್ನು ನೀವು ನಿಮ್ಮ ಸಹಾಯಕನಿಗೆ ನೀಡುತ್ತಿಲ್ಲ. ಬದಲಿಗೆ…

The post ಬುದ್ಧಿವಂತ ಮಾತುಗಾರ first appeared on Vishva Kannada.

]]>
“ನನಗೊಂದು ಪೈಥೋನ್ ಪ್ರೋಗ್ರಾಂ ಬರೆದುಕೊಡು”

“ನನಗೆ ಬೋರ್ ಆಗಿದೆ, ಏನು ಮಾಡಲಿ?”

“ಇಡ್ಲಿ ಯಾಕೆ ಜಗತ್ತಿನ ಸರ್ವಶ್ರೇಷ್ಠ ತಿಂಡಿಯಾಗಿದೆ?”

“ನನಗೊಂದು ಕವನ ಸೃಷ್ಠಿಸಿ ಕೊಡು”

ಇವೆಲ್ಲ ಆದೇಶಗಳನ್ನು ನೀವು ನಿಮ್ಮ ಸಹಾಯಕನಿಗೆ ನೀಡುತ್ತಿಲ್ಲ. ಬದಲಿಗೆ ಕೃತಕ ಬುದ್ಧಿಮತ್ತೆಯ ಮೂಲಕ ಕೆಲಸ ಮಾಡುವ ಒಂದು ಅತ್ಯಾಧುನಿಕ ಚಾಟ್ ಇಂಜಿನ್‌ಗೆ ಹೇಳುತ್ತೀರಿ. ಅದು ಸಂದರ್ಭಕ್ಕೆ ಸರಿಯಾಗಿ ಬಹುಮಟ್ಟಿಗೆ ಸರಿಯೆನಿಸುವಂತಹ ಪ್ರತಿಕ್ರಿಯೆ ನೀಡುತ್ತದೆ. ಈ ಕೃತಕ ಬುದ್ಧಿಮತ್ತೆಯ ಚಾಟ್ ಇಂಜಿನ್ ಸದ್ಯಕ್ಕೆ ಅಂತರಜಾಲದಲ್ಲಿ ಬಹುದೊಡ್ಡ ಸುದ್ದಿಯಾಗಿದೆ. ಇದರ ಹೆಸರು ಚಾಟ್‌ಜಿಪಿಟಿ (ChatGPT). ಏನಿದು ಎಂದು ಈ ಸಂಚಿಕೆಯಲ್ಲಿ ತಿಳಿಯೋಣ.

ಚಾಟ್ ಜಿಪಿಟಿಯ ಲೋಗೊ

ಆನ್‌ಲೈನ್ ಮೂಲಕ ಯಾವುದಾದರೂ ಉತ್ಪನ್ನ ಕೊಳ್ಳುವ ಮೊದಲು ಆ ಜಾಲಮಳಿಗೆಯಲ್ಲಿ ನಮ್ಮೊಡನೆ ಮಾತುಕತೆ ನಡೆಸಿ ಎಂದು ಒಂದು ಮೂಲೆಯಲ್ಲಿ ಬರೆದುದನ್ನು ಗಮನಿಸಿ ಅಲ್ಲಿ ಕ್ಲಿಕ್ ಮಾಡಿ ಮಾತುಕತೆ ನಡೆಸಿದ ನೆನಪಿರಬಹುದು. ಬಹುತೇಕ ಸಂದರ್ಭಗಳಲ್ಲಿ ಇದು ಜೀವಂತ ವ್ಯಕ್ತಿಯಾಗಿರದೆ ಒಂದು ಸ್ವಯಂಚಾಲಿತ ತಂತ್ರಾಂಶ ಆಗಿರುತ್ತದೆ. ಇಂತಹ ತಂತ್ರಾಂಶಗಳಿಗೆ ಚಾಟ್‌ಬೋಟ್ (chatbot) ಎನ್ನುತ್ತಾರೆ. ಇಲ್ಲಿ ಬೋಟ್ ಎನ್ನುವುದು ರೋಬೋಟ್ ಎನ್ನುವುದರ ಕಿರುರೂಪ. ಇಲ್ಲಿ ರೋಬೋಟ್ ಎನ್ನುವುದು ನೀವು ಅಂದುಕೊಂಡ ಯಂತ್ರಮಾನವ ಅಲ್ಲ. ಬದಲಿಗೆ ಒಂದು ತಂತ್ರಾಂಶ. ಚಿಕ್ಕದಾಗಿ ಹೇಳುವುದಾದರೆ ಸಾಫ್ಟ್‌ವೇರ್ ರೋಬೋಟ್‌ಗೆ ಬೋಟ್ ಎನ್ನುತ್ತಾರೆ. ಚಾಟ್ (ಮಾತುಕತೆ) ಮಾಡಲು ಬಳಸುವ ಸಾಫ್ಟ್‌ವೇರ್ ರೋಬೋಟ್‌ಗೆ ಚಾಟ್‌ಬೋಟ್ ಎನ್ನುತ್ತಾರೆ. ಈ ಚಾಟ್‌ಬೋಟ್‌ಗಳು ಅಷ್ಟೇನು ಬುದ್ಧಿವಂತವಾಗಿಲ್ಲ. ಬಹುತೇಕ ಸಂದರ್ಭಗಳಲ್ಲಿ ಎಲ್ಲೆಲ್ಲೋ ಸುತ್ತಿಸಿ ಕೊನೆಗೂ ನಮಗೆ ಬೇಕಾದ ಮಾಹಿತಿ ದೊರೆಯುವುದಿಲ್ಲ. ಈ ಸಮಸ್ಯೆಗೆ ಒಂದು ಮಟ್ಟಿನ ಪರಿಹಾರವಾಗಿ ಈ ಚಾಟ್‌ಜಿಪಿಟಿ ಬಂದಿದೆ. ಏನದು ಎಂದು ತಿಳಿಯೋಣ.

ಚಾಟ್‌ಜಿಪಿಟಿ ಎಂಬುದು ಒಂದು ಕೃತಕ ಬುದ್ಧಿಮತ್ತೆ ಮೂಲಕ ಮಾತುಕತೆ ನಡೆಸುವ ಒಂದು ತಂತ್ರಾಂಶ, ಅಥವಾ ಕೃತಕಬುದ್ಧಿವಂತ ಚಾಟ್‌ಬೋಟ್. ಕೃತಕ ಬುದ್ಧಿಮತ್ತೆ (artificial intelligence) ಎನ್ನುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚೆಗೆ ತುಂಬ ಸುದ್ದಿ ಮಾಡುತ್ತಿರುವ ವಿಷಯ. ಇದರಲ್ಲಿ ಯಂತ್ರಗಳು ತಾವೇ ವಿಷಯಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ಸ್ಪಂದಿಸಿ, ತಾವೇ ತೀರ್ಮಾನ ತೆಗೆದುಕೊಂಡು ಕೆಲಸ ಮಾಡುತ್ತವೆ. ಕೆಲವು ಪ್ರಮುಖ ಉದಾಹರಣೆಗೆಳು – ಯಂತ್ರಾನುವಾದ, ಪಠ್ಯದಿಂದ ಧ್ವನಿಗೆ ಹಾಗೂ ಧ್ವನಿಯಿಂದ ಪಠ್ಯಕ್ಕೆ ಪರಿವರ್ತನೆ, ಚಿತ್ರದಿಂದ ಪಠ್ಯಕ್ಕೆ, ಇತ್ಯಾದಿ.

ಚಾಟ್‌ಜಿಪಿಟಿಯಲ್ಲಿ ಜಿಪಿಟಿ ಎಂದರೆ Generative Pre-trained Transformer. ಇದೊಂದು ಚಾಟ್‌ಬೋಟ್ ಅಂದರೆ ಕೃತಕ ಬುದ್ಧಿಮತ್ತೆ ಮೂಲಕ ಮಾತುಕತೆ ನಡೆಸುವ ಒಂದು ತಂತ್ರಾಂಶ. ಇತರೆ ಚಾಟ್‌ಬೋಟ್‌ಗಳಿಗಿಂತ ಇದು ತುಂಬ ವಿಭಿನ್ನ. ಅವುಗಳೆಲ್ಲ ಮಾಮೂಲಿ ಪ್ರಶ್ನೆ – ಉತ್ತರ ಮಾದರಿಯಲ್ಲಿ ಕೆಲಸ ಮಾಡುತ್ತವೆ. ಅವುಗಳ ದತ್ತಾಂಶಸಂಗ್ರಹದಲ್ಲಿರುವ ಪ್ರಶ್ನೆಗಳಿಗೆ ಮಾತ್ರ ಅವು ಅಲ್ಲಿರುವ ಉತ್ತರಗಳ ಸಂಗ್ರಹದಿಂದ ಆರಿಸಿ ಉತ್ತರಿಸಬಲ್ಲವು. ಆದರೆ ಚಾಟ್‌ಜಿಪಿಟಿ ಹಾಗಲ್ಲ. ಅದರಲ್ಲಿ ಈಗಾಗಲೇ ಲಕ್ಷಾಂತರ ಮಾಹಿತಿ ಇರುವುದೇನೋ ಸರಿಯೇ. ಅದು ಅಲ್ಲಿಂದ ಮುಂದುವರೆದು ಪ್ರಶ್ನೆಗಳಿಗೆ ತಾನೇ ವಿಶ್ಲೇಷಿಸಿ ಬಹುಮಟ್ಟಿಗೆ ಮನುಷ್ಯರು ಉತ್ತರಿಸುವ ಮಾದರಿಯಲ್ಲೇ ಉತ್ತರಿಸಬಲ್ಲುದು.  

ಚಾಟ್‌ಜಿಪಿಟಿ ಮುಕ್ತ ಕೃತಕಬುದ್ಧಿಮತ್ತೆಯ ಒಕ್ಕೂಟದ ಉತ್ಪನ್ನ ಎನ್ನಬಹುದು. ಇದನ್ನು OpenAI ಎನ್ನುತ್ತಾರೆ. ಇದು ಬಹುಮಟ್ಟಿಗೆ ಮುಕ್ತ ತಂತ್ರಾಂಶ ಮತ್ತು ಮುಕ್ತಜ್ಞಾನದ ಸಮೀಪವರ್ತಿ ಎನ್ನಬಹುದು. ಮುಕ್ತಜ್ಞಾನದ ವಿಕಿಪೀಡಿಯ ನಿಮಗೆಲ್ಲರಿಗೂ ತಿಳಿದೇ ಇರಬಹುದು. ಈ ಓಪನ್‌ಏಐಗೆ ಹಲವರು ಹಣ ಹಾಕಿದ್ದಾರೆ. ಇದನ್ನು ಪ್ರಾರಂಭಿಸಿದವರಲ್ಲಿ ಎಲೊನ್ ಮಸ್ಕ್ ಕೂಡ ಒಬ್ಬರು. ಜಗತ್ತಿನ ಅತಿ ಶ್ರೀಮಂತರಲ್ಲೊಬ್ಬರಾದ ಎಲೊನ್ ಮಸ್ಕ್ ಗೊತ್ತಿರಬಹುದು. ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾಗಳಿಂದ ಮತ್ತು ಇತ್ತೀಚೆಗೆ ಟ್ವಿಟ್ಟರ್ ಕೊಳ್ಳುವುದರ ಮೂಲಕ ಅವರ ಹೆಸರು ಪ್ರಖ್ಯಾತವಾಗಿದೆ. ಎಲೊನ್ ಮಸ್ಕ್ ಈಗ ಓಪನ್‌ಏಐಯ ನಿರ್ದೇಶಕ ಮಂಡಳಿಯಲ್ಲಿಲ್ಲ. ಆದರೆ ಅದಕ್ಕೆ ಹಣ ಹಾಕಿದ್ದಾರೆ. ಓಪನ್‌ಏಐಗೆ ಮೈಕ್ರೋಸಾಫ್ಟ್‌ನಂತಹ ದೈತ್ಯ ಕೂಡ ಹಣ ಹಾಕಿದೆ. ಇದು ಭವಿಷ್ಯದಲ್ಲಿ ದೊಡ್ಡ ಹೆಸರು ಮಾಡಲಿದೆ. ಚಾಟ್‌ಜಿಪಿಟಿ ಪ್ರಾರಂಭ ಎನ್ನಬಹುದು.

ಚಾಟ್‌ಜಿಪಿಟಿಯು ಮನುಷ್ಯರು ನಡೆಸುವ ಸಂಭಾಷಣೆಯನ್ನು ಅನುಕರಿಸಲು ತಯಾರಾದುದು. ಅದು ಬಹುಮಟ್ಟಿಗೆ ಇದರಲ್ಲಿ ಯಶಸ್ವಿಯೂ ಆಗಿದೆ. ಪತ್ರಕರ್ತರು ಇದನ್ನು ತಮಗೆ ತಿಳಿಯದ ಹಲವು ವಿಷಯಗಳನ್ನು ತಿಳಿಯಲು ಬಳಸುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಗೂಗ್ಲ್ ಅನುವಾದದಂತೆ. ಇದು ನೀಡುವ ಉತ್ತರಗಳು ಸಂಪೂರ್ಣ ಸತ್ಯವಾಗಿರಬೇಕಾಗಿಲ್ಲ. ಆದರೂ ಆ ಉತ್ತರಗಳನ್ನು ಪ್ರಾರಂಭದ ಹೆಜ್ಜೆಯಂತೆ ಬಳಸಬಹುದು. ಗೂಗ್ಲ್ ಅನುವಾದವೂ ಅಂತೆಯೇ. ಅದನ್ನು ಪ್ರಾರಂಭದ ಹಂತದಂತೆ ಬಳಸಬಹುದು. ಚಾಟ್‌ಜಿಪಿಟಿ ಬುದ್ಧಿವಂತ ಎಂದೆನಲ್ಲ. ಅದು ಮಾತುಕತೆ ನಡೆಸುತ್ತ ತನ್ನನ್ನು ತಾನೆ ಸುಧಾರಿಸಿಕೊಳ್ಳುತ್ತದೆ. ಈ ಒಂದು ಗುಣವೈಶಿಷ್ಟ್ಯವು ಚಾಟ್‌ಜಿಪಿಟಿಯನ್ನು ತುಂಬ ಉಪಯುಕ್ತ ಮಾಡಲಿದೆ. ಈಗಾಗಲೇ ಅದು ತುಂಬ ಕಲಿತಿದೆ. ಒಂದು ವಾರದ ಹಿಂದೆ ನಾನು ಅದಕ್ಕೆ ಕೇಳಿದ ಪ್ರಶ್ನೆಗಳಿಗೆ ಅದು ನೀಡಿದ ಉತ್ತರಗಳಿಗಿಂತ ಅದು ಈಗ ನೀಡುತ್ತಿರುವ ಉತ್ತರಗಳು ಹೆಚ್ಚು ಉಪಯುಕ್ತವಾಗಿವೆ.

ಚಾಟ್‌ಜಿಪಿಟಿಗೆ ನಾನು ಕೇಳಿದ ಕೆಲವು ಪ್ರಶ್ನೆಗಳು ಮತ್ತು ಅದು ನೀಡಿದ ಉತ್ತರಗಳು ಇಲ್ಲಿವೆ. ಅದು ಇನ್ನೂ ಕನ್ನಡ ಕಲಿತಿಲ್ಲ. ಇಂಗ್ಲಿಷಿನಲ್ಲಿ ನಡೆದ ಮಾತುಕತೆಗಳ ಸಾರಾಂಶವನ್ನು ಕನ್ನಡದಲ್ಲಿ ನೀಡುತ್ತಿದ್ದೇನೆ.

“ಇಡ್ಲಿ ಯಾಕೆ ಜಗತ್ತಿನ ಸರ್ವಶ್ರೇಷ್ಠ ತಿಂಡಿಯಾಗಿದೆ?”

“ಇಡ್ಲಿ ಒಂದು ದಕ್ಷಿಣಭಾರತೀಯ ಪಾರಂಪರಿಕ ತಿಂಡಿಯಾಗಿದೆ. ಇದು ತುಂಬ ಆರೋಗ್ಯದಾಯಕ ಮತ್ತು ಪೌಷ್ಠಿಕಾಂಶಗಳಿಂದ ಕೂಡಿದ್ದು ಎಂದು ಭಾವಿಸಲಾಗುತ್ತಿದೆ. ಯಾಕೆಂದರೆ ಅದರಲ್ಲಿ ಪ್ರೊಟೀನ್ ತುಂಬ ಇದೆ ಹಾಗೂ ಜಿಡ್ಡಿನ ಅಂಶಗಳಿಲ್ಲ. ಅದು ಸುಲಭವಾಗಿ ಜೀರ್ಣವಾಗುತ್ತದೆ. ಅದು ಸಂಪೂರ್ಣ ಸಸ್ಯಾಹಾರವಾಗಿದ್ದು ಯಾವುದೇ ಪ್ರಾಣಿಜನ್ಯ ಆಹಾರ ಅದರಲ್ಲಿಲ್ಲ.”

“ನ್ಯೂಟನ್‌ಗೆ ಯಾಕೆ ನೋಬೆಲ್ ಪುರಸ್ಕಾರ ದೊರೆಯಲಿಲ್ಲ?”

“ನೋಬೆಲ್ ಪುರಸ್ಕಾರವನ್ನು 1901ರಲ್ಲಿ ಸ್ಥಾಪಿಸಲಾಯಿತು. ನ್ಯೂಟನ್ 1727ರಲ್ಲೇ ಮರಣ ಹೊಂದಿದ್ದರು. ನ್ಯೂಟನ್ ಕಾಲದಲ್ಲಿ ನೋಬೆಲ್ ಪುರಸ್ಕಾರ ಇರಲಿಲ್ಲ.”

“5 ಶ್ರೇಷ್ಠ ದಕ್ಷಿಣಭಾರತೀಯ ಆಹಾರಗಳನ್ನು ಹೆಸರಿಸು”

 “ದೋಸೆ, ಇಡ್ಲಿ, ಒಡೆ, ಉಪ್ಪಿಟ್ಟು, ಸಾಂಬಾರು”. (lorazepam Canada)

ಕನ್ನಡದಲ್ಲೇ ಪ್ರಶ್ನೆ ಕೇಳಿದರೆ ಅದು ಅದನ್ನು ಗೂಗ್ಲ್ ಅನುವಾದ ಬಳಸಿ ಇಂಗ್ಲಿಷಿಗೆ ಅನುವಾದಿಸಿ ದೊರೆತ ಉತ್ತರವನ್ನು ಮತ್ತೆ ಕನ್ನಡಕ್ಕೆ ಅನುವಾದಿಸಿ ನೀಡುತ್ತದೆ. ಬಹುತೇಕ ಸಂದರ್ಭಗಳಲ್ಲಿ ಇದು ಅಸಂಬದ್ಧವಾಗಿರುತ್ತದೆ. ಅದು ಕನ್ನಡವನ್ನೂ ಕಲಿಯುವ ಕಾಲ ದೂರವಿಲ್ಲ.

ಡಾ| ಯು.ಬಿ. ಪವನಜ

gadgetloka @ gmail . com

ದಿ : 07-01-2023

The post ಬುದ್ಧಿವಂತ ಮಾತುಗಾರ first appeared on Vishva Kannada.

]]>
https://vishvakannada.com/%e0%b2%b2%e0%b3%87%e0%b2%96%e0%b2%a8/chatgpt/feed/ 0
ಕೃತಕ ಬುದ್ಧಿಮತ್ತೆಯ ಕಾಲ https://vishvakannada.com/article/ai/ https://vishvakannada.com/article/ai/#respond Wed, 11 Dec 2024 09:37:09 +0000 https://gadgetloka.net/?p=899 2022ರಲ್ಲಿ ಹಾಗೂ 2023ರಲ್ಲಿ ಅತ್ಯಂತ ಸುದ್ಧಿಯಲ್ಲಿರುವ ತಂತ್ರಜ್ಞಾನ ಕೃತಕ ಬುದ್ಧಿಮತ್ತೆ. ಕೃತಕ ಬುದ್ಧಿಮತ್ತೆ (artificial intelligence) ಎನ್ನುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚೆಗೆ ತುಂಬ ಸುದ್ದಿ ಮಾಡುತ್ತಿರುವ ವಿಷಯ. ಇದರಲ್ಲಿ ಯಂತ್ರಗಳು ಅಥವಾ ತಂತ್ರಾಂಶಗಳು…

The post ಕೃತಕ ಬುದ್ಧಿಮತ್ತೆಯ ಕಾಲ first appeared on Vishva Kannada.

]]>
2022ರಲ್ಲಿ ಹಾಗೂ 2023ರಲ್ಲಿ ಅತ್ಯಂತ ಸುದ್ಧಿಯಲ್ಲಿರುವ ತಂತ್ರಜ್ಞಾನ ಕೃತಕ ಬುದ್ಧಿಮತ್ತೆ. ಕೃತಕ ಬುದ್ಧಿಮತ್ತೆ (artificial intelligence) ಎನ್ನುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚೆಗೆ ತುಂಬ ಸುದ್ದಿ ಮಾಡುತ್ತಿರುವ ವಿಷಯ. ಇದರಲ್ಲಿ ಯಂತ್ರಗಳು ಅಥವಾ ತಂತ್ರಾಂಶಗಳು ತಾವೇ ವಿಷಯಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ಸ್ಪಂದಿಸಿ, ತಾವೇ ತೀರ್ಮಾನ ತೆಗೆದುಕೊಂಡು ಕೆಲಸ ಮಾಡುತ್ತವೆ. ಕೆಲವು ಪ್ರಮುಖ ಉದಾಹರಣೆಗೆಳು – ಯಂತ್ರಾನುವಾದ, ಪಠ್ಯದಿಂದ ಧ್ವನಿಗೆ ಹಾಗೂ ಧ್ವನಿಯಿಂದ ಪಠ್ಯಕ್ಕೆ ಪರಿವರ್ತನೆ, ಚಿತ್ರದಿಂದ ಪಠ್ಯಕ್ಕೆ, ಪಠ್ಯದ ಪ್ರಕಾರ ಕೃತಕವಾಗಿ ಚಿತ್ರಗಳ ರಚನೆ, ಚಿತ್ರಗಳನ್ನು ಅರ್ಥಮಾಡಿಕೊಳ್ಳುವುದು, ಇತ್ಯಾದಿ. ಈ ಸಂಚಿಕೆಯಲ್ಲಿ ಇತ್ತೀಚೆಗೆ ತುಂಬ ಸುದ್ಧಿ ಮಾಡಿದ/ಮಾಡುತ್ತಿರುವ ಕೃತಕ ಬುದ್ಧಿಮತ್ತೆಯ ಎರಡು ತಂತ್ರಾಂಶಗಳ ಬಗ್ಗೆ ನೋಡೋಣ.

ಚಾಟ್‌ಜಿಪಿಟಿ (ChatGPT)

ಚಾಟ್‌ಜಿಪಿಟಿ ಎಂಬುದು ಒಂದು ಕೃತಕ ಬುದ್ಧಿಮತ್ತೆ ಮೂಲಕ ಮಾತುಕತೆ ನಡೆಸುವ ಒಂದು ತಂತ್ರಾಂಶ, ಅಥವಾ ಕೃತಕಬುದ್ಧಿವಂತ ಚಾಟ್‌ಬೋಟ್. ಸಾಫ್ಟ್‌ವೇರ್ ರೋಬೋಟ್‌ಗೆ ಬೋಟ್ ಎನ್ನುತ್ತಾರೆ. ಚಾಟ್ (ಮಾತುಕತೆ) ಮಾಡಲು ಬಳಸುವ ಸಾಫ್ಟ್‌ವೇರ್ ರೋಬೋಟ್‌ಗೆ ಚಾಟ್‌ಬೋಟ್ ಎನ್ನುತ್ತಾರೆ. ಚಾಟ್‌ಜಿಪಿಟಿ ಒಂದು ಚಾಟ್‌ಬೋಟ್ ಅಂದರೆ ಕೃತಕ ಬುದ್ಧಿಮತ್ತೆ ಮೂಲಕ ಮಾತುಕತೆ ನಡೆಸುವ ಒಂದು ತಂತ್ರಾಂಶ.

ಇತರೆ ಚಾಟ್‌ಬೋಟ್‌ಗಳಿಗಿಂತ ಇದು ತುಂಬ ವಿಭಿನ್ನ. ಅವುಗಳೆಲ್ಲ ಮಾಮೂಲಿ ಪ್ರಶ್ನೆ – ಉತ್ತರ ಮಾದರಿಯಲ್ಲಿ ಕೆಲಸ ಮಾಡುತ್ತವೆ. ಅವುಗಳ ದತ್ತಾಂಶಸಂಗ್ರಹದಲ್ಲಿರುವ ಪ್ರಶ್ನೆಗಳಿಗೆ ಮಾತ್ರ ಅವು ಅಲ್ಲಿರುವ ಉತ್ತರಗಳ ಸಂಗ್ರಹದಿಂದ ಆರಿಸಿ ಉತ್ತರಿಸಬಲ್ಲವು. ಆದರೆ ಚಾಟ್‌ಜಿಪಿಟಿ ಹಾಗಲ್ಲ. ಅದರಲ್ಲಿ ಈಗಾಗಲೇ ಲಕ್ಷಾಂತರ ಮಾಹಿತಿ ಇರುವುದೇನೋ ಸರಿಯೇ. ಅದು ಅಲ್ಲಿಂದ ಮುಂದುವರೆದು ಪ್ರಶ್ನೆಗಳಿಗೆ ತಾನೇ ವಿಶ್ಲೇಷಿಸಿ ಬಹುಮಟ್ಟಿಗೆ ಮನುಷ್ಯರು ಉತ್ತರಿಸುವ ಮಾದರಿಯಲ್ಲೇ ಉತ್ತರಿಸಬಲ್ಲುದು. 

ಚಾಟ್‌ಜಿಪಿಟಿ ಮುಕ್ತ ಕೃತಕಬುದ್ಧಿಮತ್ತೆಯ ಒಕ್ಕೂಟದ ಉತ್ಪನ್ನ ಎನ್ನಬಹುದು. ಇದನ್ನು OpenAI ಎನ್ನುತ್ತಾರೆ. ಇದು ಬಹುಮಟ್ಟಿಗೆ ಮುಕ್ತ ತಂತ್ರಾಂಶ ಮತ್ತು ಮುಕ್ತಜ್ಞಾನದ ಸಮೀಪವರ್ತಿ ಎನ್ನಬಹುದು. ಮುಕ್ತಜ್ಞಾನದ ವಿಕಿಪೀಡಿಯ ನಿಮಗೆಲ್ಲರಿಗೂ ತಿಳಿದೇ ಇರಬಹುದು. ಈ ಓಪನ್‌ಏಐಗೆ ಹಲವರು ಹಣ ಹಾಕಿದ್ದಾರೆ. ಇದನ್ನು ಪ್ರಾರಂಭಿಸಿದವರಲ್ಲಿ ಎಲೊನ್ ಮಸ್ಕ್ ಕೂಡ ಒಬ್ಬರು. ಜಗತ್ತಿನ ಅತಿ ಶ್ರೀಮಂತರಲ್ಲೊಬ್ಬರಾದ ಎಲೊನ್ ಮಸ್ಕ್ ಗೊತ್ತಿರಬಹುದು. ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾಗಳಿಂದ ಮತ್ತು ಇತ್ತೀಚೆಗೆ ಟ್ವಿಟ್ಟರ್ ಕೊಳ್ಳುವುದರ ಮೂಲಕ ಅವರ ಹೆಸರು ಪ್ರಖ್ಯಾತವಾಗಿದೆ. ಎಲೊನ್ ಮಸ್ಕ್ ಈಗ ಓಪನ್‌ಏಐಯ ನಿರ್ದೇಶಕ ಮಂಡಳಿಯಲ್ಲಿಲ್ಲ. ಆದರೆ ಅದಕ್ಕೆ ಹಣ ಹಾಕಿದ್ದಾರೆ. ಓಪನ್‌ಏಐಗೆ ಮೈಕ್ರೋಸಾಫ್ಟ್‌ನಂತಹ ದೈತ್ಯ ಕೂಡ ಹಣ ಹಾಕಿದೆ. ಇದು ಭವಿಷ್ಯದಲ್ಲಿ ದೊಡ್ಡ ಹೆಸರು ಮಾಡಲಿದೆ. ಚಾಟ್‌ಜಿಪಿಟಿ ಪ್ರಾರಂಭ ಎನ್ನಬಹುದು.

ಚಾಟ್‌ಜಿಪಿಟಿಯು ಮನುಷ್ಯರು ನಡೆಸುವ ಸಂಭಾಷಣೆಯನ್ನು ಅನುಕರಿಸಲು ತಯಾರಾದುದು. ಅದು ಬಹುಮಟ್ಟಿಗೆ ಇದರಲ್ಲಿ ಯಶಸ್ವಿಯೂ ಆಗಿದೆ. ಪತ್ರಕರ್ತರು ಇದನ್ನು ತಮಗೆ ತಿಳಿಯದ ಹಲವು ವಿಷಯಗಳನ್ನು ತಿಳಿಯಲು ಬಳಸುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಗೂಗ್ಲ್ ಅನುವಾದದಂತೆ. ಇದು ನೀಡುವ ಉತ್ತರಗಳು ಸಂಪೂರ್ಣ ಸತ್ಯವಾಗಿರಬೇಕಾಗಿಲ್ಲ. ಆದರೂ ಆ ಉತ್ತರಗಳನ್ನು ಪ್ರಾರಂಭದ ಹೆಜ್ಜೆಯಂತೆ ಬಳಸಬಹುದು. ಗೂಗ್ಲ್ ಅನುವಾದವೂ ಅಂತೆಯೇ. ಅದನ್ನು ಪ್ರಾರಂಭದ ಹಂತದಂತೆ ಬಳಸಬಹುದು. ಚಾಟ್‌ಜಿಪಿಟಿ ಬುದ್ಧಿವಂತ ಎಂದೆನಲ್ಲ. ಅದು ಮಾತುಕತೆ ನಡೆಸುತ್ತ ತನ್ನನ್ನು ತಾನೆ ಸುಧಾರಿಸಿಕೊಳ್ಳುತ್ತದೆ. ಈ ಒಂದು ಗುಣವೈಶಿಷ್ಟ್ಯವು ಚಾಟ್‌ಜಿಪಿಟಿಯನ್ನು ತುಂಬ ಉಪಯುಕ್ತ ಮಾಡಲಿದೆ. ಈಗಾಗಲೇ ಅದು ತುಂಬ ಕಲಿತಿದೆ.

ರೋಬೋಟ್ ಲಾಯರ್

ಹಲವು ಕ್ಷೇತ್ರಗಳಂತೆ ಕಾನೂನು ಮತ್ತು ನ್ಯಾಯಾಲಯಗಳಿಗೂ ಕೃತಕ ಬುದ್ಧಿಮತ್ತೆ ಪ್ರವೇಶ ಮಾಡುತ್ತಿದೆ. ಅಮೆರಿಕದಲ್ಲಿ ಕೃತಕಬುದ್ಧಿಮತ್ತೆಯ ನ್ಯಾಯವಾದಿ ತಯಾರಾಗಿದೆ. ಇದನ್ನು ವ್ಯಾಪಕವಾಗಿ ರೋಬೋಟ್ ಲಾಯರ್ ಎಂದು ಕರೆಯಲಾಗುತ್ತಿದೆ. ಅಮೆರಿಕದಲ್ಲಿ 2015ರಲ್ಲಿ ಜೋಶುವ ಬ್ರೌಡರ್ ಎಂಬವರು ಡುನಾಟ್‌ಪೇ ಎಂಬ ಕಾನೂನು ಸಲಹೆಗಾರ ತಂತ್ರಾಂಶವನ್ನು ಬಿಡುಗಡೆ ಮಾಡಿದರು. ಅದು ಕೂಡ ಚಾಟ್‌ಜಿಪಿಟಿಯಂತೆ ಒಂದು ಚಾಟ್‌ಬೋಟ್ ಆಗಿತ್ತು. ಜೋಶುವ ಅದನ್ನು ಪ್ರಪಂಚದ ಮೊದಲ ರೋಬೋಟ್ ಲಾಯರ್ ಎಂದು ಕರೆದರು. ಅದಕ್ಕೆ ಕಾನೂನು ಸಂಬಂಧಿ ಪ್ರಶ್ನೆ ಕೇಳಿದರೆ ಅದು ಉತ್ತರಿಸುತ್ತಿತ್ತು. ಪ್ರಾರಂಭದಲ್ಲಿ ಕೆಲವು ಸರಳವಾದ ಸಂದರ್ಭಗಳಲ್ಲಿ ಏನೆಲ್ಲ ಸಾಧ್ಯತೆಗಳಿವೆ ಎಂಬುದನ್ನು ಅದು ವಿವರಿಸುತ್ತಿತ್ತು. ಉದಾಹರಣೆಗೆ ಹಣ ನೀಡಬೇಕಾಗಿತ್ತು, ಅವಧಿಯೊಳಗಡೆ ನೀಡಿಲ್ಲ, ಈಗ ನೋಟೀಸು ಬಂದಿದೆ – ಈ ಸಂದರ್ಭದಲ್ಲಿ ಏನೆಲ್ಲ ಮಾಡಬಹುದು ಎಂಬುದನ್ನು ಅದು ಹೇಳುತ್ತದೆ. ಈ ಕಿರುತಂತ್ರಾಂಶ (ಆಪ್) ಗೂಗ್ಲ್ ಪ್ಲೇ ಸ್ಟೋರಿನಲ್ಲಿದೆ. ನಾನು ಅದನ್ನು ನನ್ನ ಮೊಬೈಲಿನಲ್ಲಿ ಹಾಕಿಕೊಂಡು ಬಳಸಿ ನೋಡಲು ಪ್ರಯತ್ನಿಸಿದೆ. ಆದರೆ ಅದು ಅಮೆರಿಕ, ಆಸ್ಟ್ರೇಲಿಯ ಮತ್ತು ಕೆಲವು ಯುರೋಪಿನ ದೇಶಗಳಿಗೆ ಸೀಮಿತವಾಗಿತ್ತು. ಭಾರತ ಅದರ ಪಟ್ಟಿಯಲ್ಲಿರಲಿಲ್ಲ. ಆದುದರಿಂದ ಅದು ನಿಜವಾಗಿಯೂ ಹೇಗೆ ಕೆಲಸ ಮಾಡುತ್ತಿದೆ ಎಂದು ಪರಿಶೀಲಿಸಲು ನನಗೆ ಆಗಲಿಲ್ಲ.

ಈ ಡುನಾಟ್‌ಪೇ ಚಾಟ್‌ಬೋಟ್ ಅಥವಾ ರೋಬೋಟ್ ಲಾಯರ್ ಅನ್ನು ನಿಜವಾದ ನ್ಯಾಯಾಲಯದಲ್ಲಿ ಕಾನೂನು ಹೋರಾಟವೊಂದರಲ್ಲಿ ಬಳಸಲು ಸಿದ್ಧತೆ ಆಗಿತ್ತು. ಅತಿ ವೇಗವಾಗಿ ವಾಹನ ಚಾಲನೆ ಮಾಡಿದ್ದೀಯ ಎಂದೊಬ್ಬರಿಗೆ ಸಾರಿಗೆ ಪೋಲೀಸರಿಂದ ನೋಟೀಸು ಬಂದಿತ್ತು. ಅವರು ನ್ಯಾಯಾಲಯದಲ್ಲಿ ಹಾಜರಾಗಿ ತಮ್ಮ ವಾದವನ್ನು ಮಂಡಿಸಬೇಕಿತ್ತು. ಇಲ್ಲಿ ವಾದ ಮಂಡಿಸಲು ರೋಬೋಟ್ ಲಾಯರ್ ಸಹಾಯ ಪಡೆಯುವುದೆಂದು ತೀರ್ಮಾನ ಆಗಿತ್ತು. ಆ ಕೇಸು ಕೋರ್ಟಿನಲ್ಲಿ ಫೆಬ್ರವರಿ 22ಕ್ಕೆ ನ್ಯಾಯಾಧೀಶರ ಮುಂದೆ ಬರುವುದಿತ್ತು. ಆದರೆ ಜೋಶುವ ಅವರು ಒಂದು ಟ್ವೀಟ್ ಮೂಲಕ ರೋಬೋಟ್ ಲಾಯರ್ ಅನ್ನು ಕೋರ್ಟಿಗೆ ಕಳುಹಿಸುವ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಲಾಯರುಗಳ ಸಂಘದ ಪ್ರತಿಭಟನೆ ಹಾಗೂ ಎಚ್ಚರಿಕೆ. ರೋಬಾಟ್ ಲಾಯರ್ ತಂದರೆ ಜೋಶುವ ಅವರಿಗೆ 6 ತಿಂಗಳುಗಳ ಜೈಲು ಸಾಧ್ಯತೆಯಿದೆ ಎಂಬ ಭಯದಿಂದ ಅವರು ಈ ತೀರ್ಮಾನ ತೆಗೆದುಕೊಂಡುದುದಾಗಿ ತಮ್ಮ ಟ್ವೀಟ್‌ನಲ್ಲಿ ತಿಳಿದಿದ್ದಾರೆ.  ಕೋರ್ಟಿನಲ್ಲಿ ವಾದ ಮಾಡುವ ವ್ಯಕ್ತಿ ಇಯರ್‌ಫೋನ್ ಧರಿಸಿ ಅದು ಮೊಬೈಲಿನಲ್ಲಿರುವ ಡುನಾಟ್‌ಪೇ ತಂತ್ರಾಂಶಕ್ಕೆ ಸಂಪರ್ಕ ಹೊಂದುತ್ತದೆ. ಆ ತಂತ್ರಾಂಶವು ವಾದವನ್ನು ಆಲಿಸಿ ತನ್ನ ಉತ್ತರವನ್ನು ಇಯರ್‌ಫೋನ್ ಮೂಲಕ ತಿಳಿಸುತ್ತದೆ. ಕಕ್ಷಿದಾರ ಕೋರ್ಟಿನಲ್ಲಿ ರೋಬೋಟ್ ಲಾಯರ್ ತಿಳಸಿದಂತೆ ವಾದ ಮಾಡುತ್ತಾರೆ. ಇದು ಅವರ ಯೋಜನೆ ಆಗಿತ್ತು. ಮೊಬೈಲ್  ಫೋನ್ ಮತ್ತು ಇಯರ್‌ಫೋನ್‌ಗಳನ್ನು ಕೋರ್ಟಿನಲ್ಲಿ ಬಳಕೆ ಮಾಡುವಂತಿಲ್ಲ. ಆದುದರಿಂದ ಇಯರ್‌ಫೋನ್ ಅನ್ನು ಕಿವಿ ಕೇಳದವರು ಬಳಸುವ ಸಾಧನ ಎಂಬಂತೆ ಬಿಂಬಿಸುವ ಯೋಜನೆ ಅವರದಾಗಿತ್ತು. ಆದರೆ ಸದ್ಯಕ್ಕೆ ರೋಬೋಟ್ ಲಾಯರ್ ಕೇವಲ ಸಲಹೆಗೆಳಿಗೆ ಮಾತ್ರ ಸೀಮಿತ. ಕೋರ್ಟಿನಲ್ಲಿ ನಿಜವಾದ ವಾದ ಸದ್ಯಕ್ಕಿಲ್ಲ.

ಡಾಯು.ಬಿಪವನಜ

gadgetloka @ gmail . com

The post ಕೃತಕ ಬುದ್ಧಿಮತ್ತೆಯ ಕಾಲ first appeared on Vishva Kannada.

]]>
https://vishvakannada.com/article/ai/feed/ 0