ಗೂಢನಾಣ್ಯ | Vishva Kannada https://vishvakannada.com Wed, 15 Jan 2025 11:58:45 +0000 en-US hourly 1 https://wordpress.org/?v=7.0.8 ಗೂಢನಾಣ್ಯ ವಂಚನೆ https://vishvakannada.com/%e0%b2%b2%e0%b3%87%e0%b2%96%e0%b2%a8/cryptocurrency-frauds/ https://vishvakannada.com/%e0%b2%b2%e0%b3%87%e0%b2%96%e0%b2%a8/cryptocurrency-frauds/#respond Wed, 15 Jan 2025 11:58:43 +0000 https://vishvakannada.com/?p=2513 ಕ್ರಿಪ್ಟೊಕರೆನ್ಸಿ ಕ್ಷೇತ್ರದಲ್ಲಿ ನಡೆಯುವ ಮೋಸಗಳು ಯಾವುದೇ ಹೊಸತು ಬಂದ ಕೂಡಲೇ ಕೆಲವರು ಅದಕ್ಕೆ ಹಾರುವುದು ಸಹಜ. ಪ್ರಪಂಚವೆಲ್ಲ ಮುಂದಕ್ಕೆ ಹೋಗುತ್ತದೆ, ನಾನು ಹಿಂದೆ ಉಳಿದುಬಿಡುತ್ತೇನೆ ಎಂಬ ಭಯವು ಜನರನ್ನು ಹಾಗೆ ಮಾಡಿಸುತ್ತದೆ. ಇದು ತಂತ್ರಜ್ಞಾನ…

The post ಗೂಢನಾಣ್ಯ ವಂಚನೆ first appeared on Vishva Kannada.

]]>
ಕ್ರಿಪ್ಟೊಕರೆನ್ಸಿ ಕ್ಷೇತ್ರದಲ್ಲಿ ನಡೆಯುವ ಮೋಸಗಳು

ಯಾವುದೇ ಹೊಸತು ಬಂದ ಕೂಡಲೇ ಕೆಲವರು ಅದಕ್ಕೆ ಹಾರುವುದು ಸಹಜ. ಪ್ರಪಂಚವೆಲ್ಲ ಮುಂದಕ್ಕೆ ಹೋಗುತ್ತದೆ, ನಾನು ಹಿಂದೆ ಉಳಿದುಬಿಡುತ್ತೇನೆ ಎಂಬ ಭಯವು ಜನರನ್ನು ಹಾಗೆ ಮಾಡಿಸುತ್ತದೆ. ಇದು ತಂತ್ರಜ್ಞಾನ ಇರಲಿ ಹೊಸ ಹಣಕಾಸಿನ ವ್ಯವಹಾರವಿರಲಿ ಎಲ್ಲೆಡೆ ನಡೆಯುತ್ತಿದೆ. ಹಣಕಾಸು ಮತ್ತು ತಂತ್ರಜ್ಞಾನ ಒಟ್ಟು ಸೇರಿದರೆ? ಅದಕ್ಕೆ ಉತ್ತಮ ಉದಾಹರಣೆ ಗೂಢನಾಣ್ಯ. ಇವುಗಳ ಬಗ್ಗೆ ಇದೇ ಅಂಕಣದಲ್ಲಿ ಬರೆಯಲಾಗಿತ್ತು. ಎಲ್ಲಿ ಮನುಷ್ಯರಿರುತ್ತಾರೋ ಅಲ್ಲೆಲ್ಲ ಒಳ್ಳೆಯದು ಮತ್ತು ಕೆಟ್ಟದು ಇರುತ್ತವೆ. ಎಲ್ಲಿ ತನಕ ಮೋಸ ಹೋಗುವವರಿರುತ್ತಾರೋ ಅಲ್ಲಿ ತನಕ ಮೋಸ ಮಾಡುವವರಿರುತ್ತಾರೆ. ಈ ಲೇಖನದಲ್ಲಿ ಗೂಢನಾಣ್ಯದ ಕ್ಷೇತ್ರದಲ್ಲಿ ನಡೆಯುತ್ತಿರುವ ವಂಚನೆಗಳ ಬಗ್ಗೆ ತಿಳಿದುಕೊಳ್ಳೋಣ.

ಗೂಢನಾಣ್ಯ ಅರ್ಥಾತ್ ಕ್ರಿಪ್ಟೋಕರೆನ್ಸಿ ಎಂದರೆ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿ ನಡೆಯುವ ಒಂದು ವಿಕೇಂದ್ರಿತ ವಿತ್ತ ವ್ಯವಸ್ಥೆ. ಇದು ಡಿಜಿಟಲ್ ಹಣ. ಇದಕ್ಕೆ ಮುದ್ರಿತ ನೋಟು, ಭೌತಿಕ ನಾಣ್ಯಗಳು ಇಲ್ಲ. ಈ ಹಣವನ್ನು ಇಟ್ಟುಕೊಳ್ಳಲು ಒಂದು ಡಿಜಿಟಲ್ ವ್ಯಾಲೆಟ್ (ಪರ್ಸ್ ಎನ್ನಬಹುದು) ಇರುತ್ತದೆ. ಡಿಜಿಟಲ್ ಹಣವನ್ನು ಒಂದು ವ್ಯಾಲೆಟ್‌ನಿಂದ ಇನ್ನೊಂದಕ್ಕೆ ಅಂತರಜಾಲದ ಮೂಲಕ ವರ್ಗಾಯಿಸಲಾಗುತ್ತದೆ. ಅದರ ಬೆಲೆಯನ್ನೂ ವರ್ಗಾಯಿಸಲಾಗುತ್ತದೆ. ಈ ಎಲ್ಲ ವ್ಯವಹಾರಗಳೂ ಅಂತರಜಾಲದ ಮೂಲಕವೇ ನಡೆಯುತ್ತದೆ. ತುಂಬ ಜನಪ್ರಿಯವಾದ ಗೂಢನಾಣ್ಯ ಎಂದರೆ ಬಿಟ್‌ಕಾಯಿನ್. ಒಮ್ಮೆ ಇದರ ಬೆಲೆ ಒಂದು ಬಿಟ್‌ಕಾಯಿನ್‌ಗೆ ಸುಮಾರು 52 ಲಕ್ಷ ರೂ. ತನಕ ಹೋಗಿತ್ತು. ಈಗಿನ ಬೆಲೆ ಸುಮಾರು 15 ಲಕ್ಷ ರೂ. ಅಂದರೆ ಬಿಟ್‌ಕಾಯಿನ್‌ಗೆ ಹಣ ಹಾಕಿದವರಿಗೆ ಭರ್ಜರಿ ನಷ್ಟ. ಇದನ್ನು ಮೋಸ, ವಂಚನೆ ಎನ್ನುವಂತಿಲ್ಲ. ಶೇರು ಮಾರುಕಟ್ಟೆ  ಕೂಡ ಇದೇ ರೀತಿ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಅದರಲ್ಲಿ ಹಣ ಹಾಕುವವರು ಈ ವಿಷಯ ಗೊತ್ತಿದ್ದೇ ಹಾಕಿರುತ್ತಾರೆ. ಆದರೆ ಗೂಢನಾಣ್ಯದ ಲೋಕದಲ್ಲಿ ಹಲವು ರೀತಿಯ ಮೋಸ ವಂಚನೆಗಳು ನಡೆಯುತ್ತಿವೆ . ಅವು ಯಾವುವು ಎಂದು ನೋಡೋಣ.

ಮೋಸದ ಕಿರುತಂತ್ರಾಂಶಗಳು (ಆಪ್‌)

ಗೂಢನಾಣ್ಯಗಳ ವ್ಯವಹಾರಕ್ಕೆ ಹಲವು ಜಾಲತಾಣಗಳು ಮತ್ತು ಆಪ್‌ಗಳಿವೆ. ಎಲ್ಲ ವಿಷಯಗಳಲ್ಲಿರುವಂತೆ ಇಲ್ಲೂ ಸಾಚಾ ಮತ್ತು ಮೋಸದ ಆಪ್‌ಗಳಿವೆ. ಈ ಮೋಸದ ನಕಲಿ ಆಪ್‌ಗಳೂ ಇತರೆ ಸಾಚಾ ಆಪ್‌ಗಳಂತೆಯೇ ಇರುತ್ತವೆ. ಅವುಗಳಲ್ಲೂ ಸಾಚಾ ಆಪ್‌ಗಳಂತೆ ಗೂಢನಾಣ್ಯಗಳನ್ನು ಇಟ್ಟುಕೊಳ್ಳಲು ವ್ಯಾಲೆಟ್ ಇರುತ್ತದೆ. ಈ ವ್ಯಾಲೆಟ್ ಅಂದರೆ ಡಿಜಿಟಲ್ ಪರ್ಸ್ ಎನ್ನಬಹುದು. ಗೂಢನಾಣ್ಯ ಎಂಬುದು ಒಂದು ಉದ್ದದ, ಬರಿಗಣ್ಣಿಗೆ ಅಸಂಬದ್ಧ ಎಂದು ಅನ್ನಿಸುವಂತಹ, ಪಠ್ಯಗಳ ಸರಪಣಿಯಾಗಿರುತ್ತದೆ. ಗೂಢನಾಣ್ಯದ ವ್ಯವಹಾರದಲ್ಲಿ ಬಳಸುವ ಪ್ರತಿ ವ್ಯಾಲೆಟ್‌ಗೂ ಒಂದು ಡಿಜಿಟಲ್ ವಿಳಾಸವಿರುತ್ತದೆ. ಆಪ್‌ಗಳಲ್ಲಿ ಬಳಕೆಯಾಗುವುದು ಆನ್‌ಲೈನ್ ವ್ಯಾಲೆಟ್. ಈ ವ್ಯಾಲೆಟ್‌ನಲ್ಲಿ ನೀವು ನಿಮ್ಮ ಗೂಢನಾಣ್ಯವನ್ನು ಸಂಗ್ರಹಿಸಿ ಇಡಬೇಕು. ಬೇಕಿದ್ದಾಗ ಮಾರಾಟ ಮಾಡಬಹುದು. ನಕಲಿ ಆಪ್‌ಗಳು ಈ ರೀತಿ ಹಣ ಇಟ್ಟುಕೊಂಡು ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತವೆ. ಅದರಲ್ಲಿ ಇಟ್ಟವರ ಹಣ ಮಂಗಮಾಯ.  

ಫಿಶಿಂಗ್ ವಂಚನೆ

ಅಂತರಜಾಲದ ಮೂಲಕ ಜನರನ್ನು ಸೆಳೆದು ಅವರಿಂದ ಗೌಪ್ಯ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕೆ ಫಿಶಿಂಗ್ ಎನ್ನುತ್ತಾರೆ. ಇದು ಸಾಮಾನ್ಯವಾಗಿ ಇಮೈಲ್ ಅಥವಾ ವಾಟ್ಸ್‌ಆಪ್ ಇತ್ಯಾದಿ ಸಂದೇಶದ ಮೂಲಕ ನಡೆಯುತ್ತದೆ. ಬಂದ ಸಂದೇಶದಲ್ಲಿ ಯಾವುದೋ ಕಾರಣ ನೀಡಿ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ ಎಂದಿರುತ್ತದೆ. ಉದಾಹರಣೆಗೆ ನಿಮ್ಮ ಗೂಢನಾಣ್ಯ ವ್ಯವಹಾರದ ವ್ಯಾಲೆಟ್‌ನ್ನು ಇನ್ನೊಮ್ಮೆ ಖಾತರಿಪಡಿಸಿಕೊಳ್ಲಲು ಇಲ್ಲಿ ಕ್ಲಿಕ್ ಮಾಡಿ ಎಂದಿರುತ್ತದೆ. ಅಲ್ಲಿ ಕ್ಲಿಕ್ ಮಾಡಿದಾಗ ಅದು ನಿಮ್ಮ ಲಾಗಿನ್, ಪಾಸ್‌ವರ್ಡ್ ಕೇಳುತ್ತದೆ. ಅಲ್ಲಿ ಅವನ್ನು ನೀಡಿದಿರೋ ಅಲ್ಲಿಗೆ ಮುಗಿಯಿತು. ನಿಮ್ಮ ಹಣವನ್ನು ಅವರು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಾರೆ. ಇದು ತುಂಬ ಸಾಮಾನ್ಯವಾದ ವಂಚನೆ. ಆದುದರಿಂದ ಅನುಮಾನಾಸ್ಪವಾದ ಆಪ್ ಅಥವಾ ಜಾಲತಾಣಗಳಲ್ಲಿ ನಿಮ್ಮ ಲಾಗಿನ್ ಪಾಸ್‌ವರ್ಡ್ ನೀಡಬೇಡಿ.

ಡಿಜಿಟಲ್ ಆಟ ಮತ್ತು ಸಂಗ್ರಹಗಳು

ಆನ್‌ಲೈನ್ ಆಟಗಳನ್ನು ಆಡುವವರಿಗೆ ಆಟದಲ್ಲಿಯ ಹಂತಗಳನ್ನು ದಾಟುವ ಅಂದರೆ ಹಂತಗಳನ್ನು ಗೆಲ್ಲುವ ಅತೀವ ಉತ್ಕಟತೆ ಇರುತ್ತದೆ. ಆಟದ ಪ್ರತಿ ಹಂತದಲ್ಲೂ ಏನೋ ಬಹುಮಾನ ದೊರೆಯುತ್ತದೆ. ಅವುಗಳನ್ನು ತಮ್ಮಂತೆಯೇ ಆಟದ ಹುಚ್ಚಿರುವವರಿಗೆ ತೋರಿಸಿ ಹೆಮ್ಮೆಪಟ್ಟುಕೊಳ್ಳುವ ಇರಾದೆ ಇರುತ್ತದೆ. ಅಂತಹವರನ್ನು ವಂಚಕರು ಆಮಿಶಗಳ ಮೂಲಕ ಸೆಳೆಯುತ್ತಾರೆ. ಯಾವುದೋ ಆಟದ ಯಾವುದೋ ಟ್ರೋಫಿಯನ್ನು ಆಮಿಶವಾಗಿ ತೋರಿಸುತ್ತಾರೆ. ಅದು ಬೇಕಿದ್ದರೆ ಇಂತಿಷ್ಟು ಬಿಟ್‌ಕಾಯಿನ್ ಕೊಡಬೇಕೆನ್ನುತ್ತಾರೆ. ಇದರ ಬಲೆಗೆ ಬಿದ್ದ ಕೆಲವರು ಗೂಢನಾಣ್ಯಗಳ ಮೂಲಕ ಹಣ ನೀಡಿ ಮೋಸಹೋಗುತ್ತಾರೆ.

ಹೊಸ ಹೊಸ ಗೂಢನಾಣ್ಯಗಳು

ಗೂಢನಾಣ್ಯಗಳು ಬ್ಲಾಕ್‌ಚೈನ್ ಎಂಬ ತಂತ್ರಜ್ಞಾನವನ್ನು ಬಳಸುತ್ತವೆ. ಇವೇ ಮಾದರಿಯಲ್ಲಿ ಇನ್ನೂ ಹಲವಾರಿವೆ. ಈ ತಂತ್ರಜ್ಞಾನ ಹೇಗಿದೆ ಎಂದರೆ ಯಾರು ಬೇಕಾದರೂ ತಮ್ಮದೇ ಆದ ಗೂಢನಾಣ್ಯ ಪ್ರಾರಂಭಿಸಬಹುದು. ಯಾವುದೇ ಕ್ಷೇತ್ರದಲ್ಲಿ ಮೊದಲು ನುಗ್ಗಿದವರಿಗೆ ಲಾಭ ಜಾಸ್ತಿ. ಇದೇ ತತ್ತ್ವವನ್ನು ಬಳಸಿ ಜನರನ್ನು ಸೆಳೆಯುತ್ತಾರೆ. ತಮ್ಮದೇ ಆದ ಹೊಚ್ಚ ಹೊಸ ಗೂಢನಾಣ್ಯ ಇದೆ. ಇದನ್ನು ಪ್ರಾರಂಭದಲ್ಲಿ ಅತಿ ಕಡಿಮೆ ಬೆಲೆಗೆ ನೀಡುತ್ತಿದ್ದೇವೆ, ನಂತರ ಬೆಲೆ ಜಾಸ್ತಿಯಾಗುತ್ತದೆ ಎಂದೆಲ್ಲ ನಂಬಿಸುತ್ತಾರೆ. ನಂಬಿ ಹಣ ಹಾಕಿದವರಲ್ಲಿ ಬಹುತೇಕ ಮಂದಿ ಹಣ ಕಳೆದುಕೊಂಡಿದ್ದಾರೆ. ಯಾಕೆಂದರೆ ಈ ಗೂಢನಾಣ್ಯಗಳಲ್ಲಿ ಬಹುತೇಕ ಮೋಸ. ಅವುಗಳು ಯಾವುದೇ ಬ್ಲಾಕ್‌ಚೈನ್ ಅಥವಾ ಅಂತಹುದೇ ತಂತ್ರಜ್ಞಾನವನ್ನು ಬಳಸುತ್ತಿಲ್ಲ. ಅವುಗಳಿಗೆ ಯಾವುದೇ ಅಧಿಕೃತ ಸ್ವೀಕೃತಿಯಿಲ್ಲ. ಅವುಗಳನ್ನು ಮಾರಲು ಆಗುವುದಿಲ್ಲ. ಅಂದರೆ ಹಾಕಿದ ಹಣ ಹೋಯಿತು. ಆದುದರಿಂದ ಹೆಸರೇ ಕೇಳದ ಗೂಢನಾಣ್ಯಗಳನ್ನು ಕೊಳ್ಳಲು ಹೋಗದಿರುವದೇ ಉತ್ತಮ.

ನೆಟ್‌ವರ್ಕ್ ಮಾರ್ಕೆಟಿಂಗ್

ನೆಟ್‌ವರ್ಕ್ ಮಾರ್ಕೆಟಿಂಗ್ ಕೇಳಿರಬಹುದು. ನೀವು ಮೊದಲು ಸ್ವಲ್ಪ ಹಣ ನೀಡಿ ಸದಸ್ಯರಾಗಬೇಕು. ನಂತರ ನಾಲ್ಕ, 8, 16 ಇತ್ಯಾದಿ ಸಂಖ್ಯೆಯಲ್ಲಿ ಸದಸ್ಯರನ್ನು ಮಾಡಬೇಕು. ಅವರು ನೀಡಿದ ಸದಸ್ಯತ್ವದಲ್ಲಿ ನಿಮಗೆ ಪಾಲು ಇರುತ್ತದೆ. ನಿಮಗೆ ಒಂದು ಕಿಟ್ ನಿಡಲಾಗುತ್ತದೆ. ಅದರಲ್ಲಿರುವ ವಸ್ತುಗಳನ್ನು ಮಾರಿದರೆ ಅದರ ಲಾಭ ನಿಮಗೆ. ಈಗ ಈ ಕಿಟ್‌ನಲ್ಲಿರುವ ವಸ್ತು ಭೌತಿಕ ವಸ್ತು ಆಗಿರದೆ ಬಿಟ್‌ಕಾಯಿನ್ ಮಾದರಿಯ ಯಾವುದೋ ಗೂಢನಾಣ್ಯ ಆಗಿದೆ ಎಂದಿಟ್ಟುಕೊಳ್ಳಿ. ಇದುವೇ ಗೂಢನಾಣ್ಯಗಳ ನೆಟ್‌ವರ್ಕ್ ಮಾರ್ಕೆಟಿಂಗ್. ಇಂದು ಒಂದು ರೀತಿಯ ಪಿರಮಿಡ್‌ನಂತೆ. ಅದರ ಕೆಳಭಾಗದಲ್ಲಿದ್ದವರು ಲಾಭ ಮಾಡುತ್ತಾರೆ. ಮೇಲುಭಾಗದಲ್ಲಿರುವವರು ಹಣ ಕಳೆದುಕೊಳ್ಳುತ್ತಾರೆ. ಇದರ ಕಡೆಗೆ ಗಮನ ಕೊಡದಿರುವುದೇ ಉತ್ತಮ.

ಇನ್ನೂ ರೀತಿಯ ಕೆಲವು ಮೋಸ ವಂಚೆನಗಳಿವೆ. ಒಂದು ಬಹುದೊಡ್ಡ ಹಗರಣ ಸುದ್ದಿಯಾಗಿತ್ತು. ಅವುಗಳ ಬಗೆಗೆ ವಿವರವಾಗಿ ಬರೆಯಲು ಪ್ರತ್ಯೇಕ ಲೇಖನವೇ ಬೇಕು.

–ಡಾ| ಯು.ಬಿ. ಪವನಜ

gadgetloka @ gmail . com

The post ಗೂಢನಾಣ್ಯ ವಂಚನೆ first appeared on Vishva Kannada.

]]>
https://vishvakannada.com/%e0%b2%b2%e0%b3%87%e0%b2%96%e0%b2%a8/cryptocurrency-frauds/feed/ 0
ಗೂಢನಾಣ್ಯಗಳ ನಿಗೂಢ ಜಗತ್ತು https://vishvakannada.com/article/cyptocurrency/ https://vishvakannada.com/article/cyptocurrency/#respond Thu, 19 Dec 2024 14:16:52 +0000 https://gadgetloka.net/?p=1041 ಕ್ರಿಪ್ಟೊಕರೆನ್ಸಿಗಳ ಕಿರು ಪರಿಚಯ “ಬಿಟ್ ಕಾಯಿನ್ ಹಗರಣದ ಆರೋಪಿ 5000 ಬಿಟ್ ಕಾಯಿನ್ ದೋಚಿದ್ದನೆಂದು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ  ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ  ಹೇಳಿದ್ದಾರೆಂದು ಪತ್ರಿಕೆಗಳು ವರದಿ ಮಾಡಿವೆ. ಕದ್ದ ಆ ಬಿಟ್ ಕಾಯಿನ್…

The post ಗೂಢನಾಣ್ಯಗಳ ನಿಗೂಢ ಜಗತ್ತು first appeared on Vishva Kannada.

]]>
ಕ್ರಿಪ್ಟೊಕರೆನ್ಸಿಗಳ ಕಿರು ಪರಿಚಯ

“ಬಿಟ್ ಕಾಯಿನ್ ಹಗರಣದ ಆರೋಪಿ 5000 ಬಿಟ್ ಕಾಯಿನ್ ದೋಚಿದ್ದನೆಂದು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ  ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ  ಹೇಳಿದ್ದಾರೆಂದು ಪತ್ರಿಕೆಗಳು ವರದಿ ಮಾಡಿವೆ.

ಕದ್ದ ಆ ಬಿಟ್ ಕಾಯಿನ್ ಎಲ್ಲಿದೆ?

ಅದನ್ನು ಜಪ್ತಿ ಮಾಡಲಾಗಿದೆಯೇ?

ಇಲ್ಲವೇ ಅವು ಇನ್ನೂ ಪತ್ತೆಯಾಗಿಲ್ಲವೇ?”

         -ಇವು ಕರ್ನಾಟಕದ ಖ್ಯಾತ ರಾಜಕಾರಣಿಯೊಬ್ಬರ ಹೇಳಿಕೆ. ಇದನ್ನು ಇಲ್ಲಿ ನೆನಪಿಸಿಕೊಳ್ಳಲು ಕಾರಣವಿದೆ. ಈ ಹೇಳಿಕೆಯನ್ನು ಓದಿದರೆ ಈ ಬಿಟ್‌ಕಾಯಿನ್ ಎಂಬುದು ಯಾವುದೋ ಒಂದು ಹೊಸ ನಮೂನೆಯ ನಾಣ್ಯ, ಅದನ್ನು ಯಾರೋ ಕದ್ದಿದ್ದಾರೆ, ಕದ್ದ ನಾಣ್ಯಗಳನ್ನು ಹುಡುಕಬೇಕಾಗಿದೆ ಎಂಬ ಅರ್ಥಗಳು ಹೊಳೆಯುತ್ತವೆ. ಆದರೆ ಈ ಬಿಟ್‌ಕಾಯಿನ್ ಎಂಬುದು ಕದ್ದು ಅಡಗಿಸಿಡಬಹುದಾದ ಭೌತಿಕ ನಾಣ್ಯಗಳಲ್ಲ. ಅವು ಡಿಜಿಟಲ್ ಜಗತ್ತಿನಲ್ಲಿ ವ್ಯವಹರಿಸುವ ಕಣ್ಣಿಗೆ ಕಾಣಿಸದ ಹಣ ಎನ್ನಬಹುದು. ಹಾಗೆಂದರೇನು ಎಂದು ತಿಳಿಯೋಣ.

ಕಾಯಿನ್ ಎಂದರೆ ನಾಣ್ಯ. ಅದು ಹಣಕಾಸಿನ ಒಂದು ಭಾಗ. ಇದನ್ನು ಇಂಗ್ಲಿಷಿನಲ್ಲಿ ಕರೆನ್ಸಿ ಎನ್ನುತ್ತಾರೆ. ಈ ಹಣಕಾಸು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಮೊದಲು ಗಮನಿಸೋಣ. ಹಣವನ್ನು ನೀಡಿ ನೀವು ವಸ್ತು ಅಥವಾ ಸೇವೆಗಳನ್ನು ಪಡೆದುಕೊಳ್ಳುತ್ತೀರಿ. ನಿಮ್ಮ ದುಡಿಮೆಗೆ ಪ್ರತಿಫಲವಾಗಿ ನೀವು ನಾಣ್ಯ ಅಥವಾ ನೋಟುಗಳನ್ನು ಪಡೆಯುತ್ತೀರಿ. ಈ ನಾಣ್ಯಗಳನ್ನು ಠಂಕಿಸುವುದು ಮತ್ತು ನೋಟುಗಳನ್ನು ಮುದ್ರಿಸುವವರು ಯಾರು? ಆಯಾ ದೇಶದ ಸರಕಾರ ಅಥವಾ ಸರಕಾರದ ಮುಖ್ಯ ಬ್ಯಾಂಕ್ ಇದನ್ನು ಮಾಡುತ್ತದೆ. ಭಾರತದ ಮಟ್ಟಿಗೆ ಇದು ರಿಸರ್ವ್ ಬ್ಯಾಂಕ್. ದೇಶದಲ್ಲಿ ಹಣದ ಮುಗ್ಗಟ್ಟು ಬಂದಾಗ ಅವರು ಎಷ್ಟು ಬೇಕಾದರೂ ನೋಟು ಮುದ್ರಿಸಬಹುದೇ? ಇಲ್ಲ. ಸಾಮಾನ್ಯವಾಗಿ ಇಲ್ಲಿ ದೇಶದಲ್ಲಿರುವ ಒಟ್ಟು ಐಶ್ವರ್ಯಕ್ಕೆ ಸಮಾನವಾದ ಮೊತ್ತದ ನೋಟುಗಳನ್ನು ಮಾತ್ರವೇ ಮುದ್ರಿಸಲಾಗುತ್ತದೆ. ಈ ನೋಟು ವ್ಯವಹಾರವನ್ನು ಯಾರು ನಿಯಂತ್ರಿಸುತ್ತಾರೆ? ಉತ್ತರವನ್ನು ಈಗಾಗಲೇ ನೀಡಿ ಆಗಿದೆ -ಅದು ರಿಸರ್ವ್ ಬ್ಯಾಂಕ್. ಅಂದರೆ ಇಡಿಯ ವ್ಯವಹಾರ ಒಂದು ಕೇಂದ್ರೀಕೃತ ವ್ಯವಸ್ಥೆಯ ನಿಯಂತ್ರಣದಲ್ಲಿದೆ.

ಈಗ ಬಹುತೇಕ ಹಣಕಾಸು ವ್ಯವಹಾರ ಕಾಗದದ ನೋಟುಗಳಿಂದ ಡಿಜಿಟಲ್‌ಗೆ ಬದಲಾಗಿವೆ. ನಮ್ಮ ಸರಕಾರವು ಸಾಧ್ಯವಿದ್ದಷ್ಟು ಡಿಜಿಟಲ್ ಹಣ ಪಾವತಿಗೆ ಉತ್ತೇಜನ ನೀಡುತ್ತಿದೆ. ನಮ್ಮಲ್ಲಿ ಸದ್ಯ ಬಳಕೆಯಲ್ಲಿರುವ ಡಿಜಿಟಲ್ ಹಣ ಎಂದರೆ ಯು.ಪಿ.ಐ., ಬ್ಯಾಂಕ್ ಖಾತೆ, ಇತ್ಯಾದಿ. ಇವೆಲ್ಲವುಗಳಲ್ಲೂ ಸಾಮಾನ್ಯ ಅಂಶವೆಂದರೆ ಯಾರಲ್ಲಿ ಎಷ್ಟು ಹಣ ಇದೆ ಎಂಬುದನ್ನು ಒಂದು ಡಿಜಿಟಲ್ ಲೆಡ್ಜರ್‌ನಲ್ಲಿ ಇಟ್ಟುಕೊಳ್ಳಲಾಗುತ್ತದೆ. ಈ ಲೆಡ್ಜರ್ ಬ್ಯಾಂಕಿನ ನಿಯಂತ್ರಣದಲ್ಲಿರುತ್ತದೆ. ಅಂದರೆ ಇದು ಕೇಂದ್ರೀಕೃತ ವ್ಯವಸ್ಥೆ. ಕೇಂದ್ರೀಕೃತ ಲೆಡ್ಜರ್ ವ್ಯವಸ್ಥೆಯಿಂದಾಗಿ ಹಣವನ್ನು ಎರಡು ಕಡೆ ಬಳಕೆ ಮಾಡದಂತೆ ತಡೆಯಲಾಗುತ್ತದೆ. 

ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಈ ವ್ಯವಹಾರ ನಡೆದರೆ ಹೇಗೆ? ಅಂದರೆ ಯಾವುದೇ ಒಂದು ಸಂಸ್ಥೆ ಅಥವಾ ವ್ಯಕ್ತಿ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅಂತಹ ವ್ಯವಸ್ಥೆಯೇ ಬ್ಲಾಕ್‌ಚೈನ್ ಮತ್ತು ಆ ವ್ಯವಸ್ಥೆಯನ್ನು ಬಳಸುವ ಹಣಕಾಸು ವ್ಯವಸ್ಥೆಯೇ ಬಿಟ್‌ಕಾಯಿನ್. ಇಲ್ಲಿಯ ಪ್ರಮುಖ ತತ್ತ್ವ ಎಂದರೆ ಮಾಹಿತಿಯ ವಿಕೇಂದ್ರೀಕರಣ.

ಈ ಬಿಟ್‌ಕಾಯಿನ್ ವ್ಯವಸ್ಥೆಯನ್ನು ಮೊದಲ ಬಾರಿಗೆ ಸೂಚಿಸಿದ್ದು ಸತೋಷಿ ನಾಕಮೊಟೊ. ಇದು ಒಂದು ವ್ಯಕ್ತಿಯೋ ಅಥವಾ ಕೆಲವು ವ್ಯಕ್ತಿಗಳ ಗುಂಪೋ ಎಂದು ಯಾರಿಗೂ ಇದು ತನಕ ತಿಳಿದುಬಂದಿಲ್ಲ. ಇದು ನಡೆದುದು 2008ರಲ್ಲಿ. ಅವರು ಒಂದು ಶ್ವೇತಪತ್ರ ಅಥವಾ ಸಂಶೋಧನಾ ಪ್ರಬಂಧ ಮಂಡಿಸಿ ಅದರಲ್ಲಿ ವಿಕೇಂದ್ರೀಕೃತ ಹಣಕಾಸು ವ್ಯವಸ್ಥೆಯನ್ನು ಪ್ರತಿಪಾದಿಸಿದರು. ಅದಕ್ಕೆ ಅವರು ಸೂಚಿಸಿದ ಹೆಸರು ಬಿಟ್‌ಕಾಯಿನ್ ಎಂದು. ಈ ವ್ಯವಸ್ಥೆಯ ಪ್ರಮುಖ ಗುಣವೈಶಿಷ್ಟ್ಯವೆಂದರೆ ಬಿಟ್‌ಕಾಯಿನ್ ಮಾಹಿತಿಯನ್ನು ಒಳಗೊಂಡ ಲೆಡ್ಜರ್ ಯಾವುದೋ ಒಂದು ಬ್ಯಾಂಕಿನ ಒಂದು ಗಣಕದಲ್ಲಿ ಇರುವುದಿಲ್ಲ. ಬದಲಿಗೆ ಜಗತ್ತಿನಾದ್ಯಂತ ಹಬ್ಬಿರುವ ಗಣಕಜಾಲದಲ್ಲಿರುವ ಹಲವು ಗಣಕಗಳಲ್ಲಿ ಪ್ರತಿಯಾಗಿರುತ್ತದೆ. ಎಲ್ಲ ಗಣಕದಲ್ಲೂ ಒಂದೇ ಮಾಹಿತಿ ಪ್ರತಿಯಾಗಿರುತ್ತದೆ. ಒಂದು ಗಣಕ ಜಾಲದಿಂದ ಕಳಚಿಕೊಂಡರೂ ಮಾಹಿತಿಗೆ ನಷ್ಟವಾಗುವುದಿಲ್ಲ. ಅದು ಇನ್ನೊಂದೆಡೆ ಸುರಕ್ಷಿತವಾಗಿರುತ್ತದೆ. ಈ ಲೆಡ್ಜರ್ ಜಾಲದ ಹೆಸರೇ ಬ್ಲಾಕ್‌ಚೈನ್. ಬಿಟ್‌ಕಾಯಿನ್ ಬಳಸಿ ಜಗತ್ತಿನ ಮೊತ್ತಮೊದಲ ವ್ಯಾಪಾರ 2010ರಲ್ಲಿ ಆಯಿತು.

ಬಿಟ್‌ಕಾಯಿನ್ ಸಂಪೂರ್ಣ ಡಿಜಿಟಲ್ ಹಣ. ಇದು ಯಾವುದೇ ಮುದ್ರಿತ ನೋಟು ಅಲ್ಲ. ಇದನ್ನು ಯಾವುದೇ ಒಂದು ದೇಶ ಅಥವಾ ಬ್ಯಾಂಕ್ ನಿಯಂತ್ರಿಸುತ್ತಿಲ್ಲ. ಇದರ ಮೂಲಕ ಮಾಡುವ ವ್ಯವಹಾರಗಳು ಸರಕಾರಗಳ ಸುಪರ್ದಿಗೆ ಬರುವುದಿಲ್ಲ. ಆದುದರಿಂದಲೇ ಹಲವು ಅವ್ಯವಹಾರಗಳಿಗೆ ಬಿಟ್‌ಕಾಯಿನ್ ಬಳಕೆಯಾಗುತ್ತಿದೆ. ಭಾರತ ಸರಕಾರವು ಬಿಟ್‌ಕಾಯಿನ್‌ಬಳಕೆಯನ್ನು 2018ರಲ್ಲಿ ನಿಷೇಧಿಸಿತ್ತು. 2019ರಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಈ ನಿಷೇಧವನ್ನು ತೆರವುಗೊಳಿಸಿ ಬಿಟ್‌ಕಾಯಿನ್ ಬಳಕೆ ಬಗ್ಗೆ ನೀತಿ ನಿಯಮಗಳನ್ನು ರೂಪಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತು. ಆದರೆ ಸರಕಾರವು ಇದು ತನಕ ಯಾವುದೇ ನಿಯಮಾವಳಿಗಳನ್ನು ರೂಪಿಸಿಲ್ಲ. ಈಗ ಒಂದು ಬಿಟ್‌ಕಾಯಿನ್ ಬೆಲೆ ಸುಮಾರು ರೂ.49 ಲಕ್ಷ ಇದೆ. ಬಿಟ್‌ಕಾಯಿನ್ ಬೆಲೆ ಷೇರು ಮಾರುಕಟ್ಟೆಯಲ್ಲಿ ಕಂಪೆನಿಗಳ ಷೇರು ಬೆಲೆಯಂತೆ ಮೇಲೆ ಕೆಳಗೆ ಹೋಗುತ್ತಿರುತ್ತದೆ. 

ಬಿಟ್‌ಕಾಯಿನ್ ಒಂದು ಗೂಢನಾಣ್ಯ ಎನ್ನಬಹುದು. ಇದನ್ನು ಇಂಗ್ಲಿಷಿನಲ್ಲಿ cryptocurrency ಎನ್ನುತ್ತಾರೆ. ಈ ಡಿಜಿಟಲ್ ಹಣವನ್ನು ಇಟ್ಟುಕೊಳ್ಳಲು ನಿಮ್ಮಲ್ಲಿ ಒಂದು ಡಿಜಿಟಲ್ ಪರ್ಸ್ ಅಥವಾ ವ್ಯಾಲೆಟ್ ಇರಬೇಕು. ಇದೊಂದು ಅಕ್ಷರ ಮತ್ತು ಸಂಖ್ಯೆಗಳ ಸಮೂಹ. ಉದಾ- 932xxMFyFLfuDCs84Bf1DTU3Ua6nUMfEn7. ಇದು ಗೂಢಲಿಪೀಕರಿಸಲ್ಪಟ್ಟ (encrypted) ವಿಳಾಸ. ಈ ವಿಳಾಸಕ್ಕೆ ಬಿಟ್‌ಕಾಯಿನ್ ಕಳುಹಿಸಿದರೆ ಅದರ ಯಜಮಾನರಿಗೆ ಅದು ತಲುಪುತ್ತದೆ. ಈ ನಮೂನೆಯ ಗೂಢನಾಣ್ಯ ಬಿಟ್‌ಕಾಯಿನ್ ಮಾತ್ರವಲ್ಲ. ಹಲವಾರು ಗೂಢನಾಣ್ಯಗಳು (cryptocurrency) ಈಗ ಚಾಲನೆಯಲ್ಲಿವೆ. ಬಿಟ್‌ಕಾಯಿನ್ ಇವುಗಳಲ್ಲಿ ಮೊದಲನೆಯದು ಮತ್ತು ಸದ್ಯಕ್ಕೆ ಅತಿ ಜನಪ್ರಿಯವಾಗಿರುವುದು. ಈ ವ್ಯವಸ್ಥೆ ಹೇಗಿದೆ ಎಂದರೆ ಬಿಟ್‌ಕಾಯಿನ್ ಎಲ್ಲಿಂದ ಎಲ್ಲಿಗೆ ಹೋಗಿದೆ ಎಂದು ಕಂಡುಹಿಡಿಯುವುದು ಸುಲಭವಲ್ಲ. ಇದರಿಂದಾಗಿಯೇ ಹಲವು ನಮೂನೆಯ ಅವ್ಯವಹಾರಗಳಿಗೂ ಇವು ಬಳಕೆಯಾಗುತ್ತಿವೆ.

–ಡಾ| ಯು.ಬಿ. ಪವನಜ

gadgetloka @ gmail . com

The post ಗೂಢನಾಣ್ಯಗಳ ನಿಗೂಢ ಜಗತ್ತು first appeared on Vishva Kannada.

]]>
https://vishvakannada.com/article/cyptocurrency/feed/ 0