ಇಲೆಕ್ಟ್ರಾನಿಕ್ ಸಾಧನ | Vishva Kannada

ವಿದ್ಯುನ್ಮಾನ ಮೂಗು
ಮಾನವನ ಇಂದ್ರಿಯಗಳಲ್ಲಿ ಮೂಗು ಕೂಡ ಒಂದು. ಕಣ್ಣು ದೃಶ್ಯವನ್ನು ನೋಡುತ್ತದೆ. ಕಿವಿ ಧ್ವನಿಯನ್ನು ಕೇಳುತ್ತದೆ. ನಾಲಗೆ ರುಚಿಯನ್ನು ನೋಡುತ್ತದೆ. ಮೂಗು ವಾಸನೆಯನ್ನು ಗ್ರಹಿಸುತ್ತದೆ. ದೃಶ್ಯ ಮತ್ತು ಧ್ವನಿಗಳನ್ನು ತಂತ್ರಜ್ಞಾನ ಮೂಲಕ ಗ್ರಹಿಸಲು ಸಾಧ್ಯವಿದೆ. ದೃಶ್ಯವನ್ನು ಕ್ಯಾಮೆರ ಮೂಲಕ ಮತ್ತು ಧ್ವನಿಯನ್ನು ಮೈಕ್ರೋಫೋನ್ ಮೂಲಕ ಗ್ರಹಿಸಲಾಗುತ್ತದೆ. ಹೀಗೆ ಮುಂದುವರೆದು ವಾಸನೆಯನ್ನು ತಂತ್ರಜ್ಞಾನ ಮೂಲಕ ಗ್ರಹಿಸಲು ಸಾಧ್ಯವಿಲ್ಲವೇ ಎಂದು ಯಾವತ್ತಾದರೂ ಆಲೋಚಿಸಿದ್ದೀರಾ? ಹೌದು, ಅದೂ ಸಾಧ್ಯವಿದೆ. ಅದನ್ನು ವಿದ್ಯುನ್ಮಾನ ಮೂಗು (electronic nose)  ಎಂದು ಕರೆಯಲಾಗುತ್ತದೆ. ಅದುವೇ ನಮ್ಮ ಈ ಸಂಚಿಕೆಯ ವಿಷಯ.

ವಿದ್ಯುನ್ಮಾನ ಮೂಗು ಎಂದರೆ ವಾಸನೆಯನ್ನು ಗ್ರಹಿಸಲು ಬಳಸುವ ಒಂದು ಇಲೆಕ್ಟ್ರಾನಿಕ್ ಸಾಧನ. ಮನುಷ್ಯರು ಯಾವ ರೀತಿ ವಾಸನೆಯನ್ನು ಗ್ರಹಿಸುತ್ತಾರೋ ಅದೇ ರೀತಿ ಇಲೆಕ್ಟ್ರಾನಿಕ್ ಸಾಧನ ಮೂಲಕ ವಾಸನೆಯನ್ನು ಗ್ರಹಿಸುವ ತಂತ್ರಜ್ಞಾನ ಇದಾಗಿದೆ. ಮನುಷ್ಯರ ಮೂಗಿನಲ್ಲಿ ವಾಸನೆಗೆ ಸ್ಪಂದಿಸುವ ಲಕ್ಷಗಟ್ಟಲೆ ಸಂವೇದಕಗಳಿವೆ. ಸಹಸ್ರಾರು ನಮೂನೆಯ ವಾಸನೆಗಳನ್ನು ಅವು ಪತ್ತೆ ಹಚ್ಚಬಲ್ಲವು. ವಿದ್ಯುನ್ಮಾನ ಮೂಗಿನಲ್ಲಿ ಅಷ್ಟೆಲ್ಲ ಸಂವೇದಕಗಳಿಲ್ಲ. ಅವುಗಳು ಅಷ್ಟೆಲ್ಲ ನಮೂನೆಯ ವಾಸನೆಗಳನ್ನು ಪತ್ತೆಹಚ್ಚಲೂ ಬಾರವು. ಆದರೂ ಅವುಗಳ ಉಪಯೋಗಗಳಿವೆ.

ಮನುಷ್ಯರು ಗ್ರಹಿಸಬಲ್ಲ ವಾಸನೆಗಳನ್ನು ಎಂಟು ವಿಭಾಗಗಳಾಗಿಸಬಹುದು. ಅವುಗಳೆಂದರೆ – ಮಣ್ಣು, ಹೂವು, ಹಣ್ಣು, ಮಸಾಲೆ, ಮೀನು, ಚರಂಡಿ ಗಲೀಜು, ಔಷಧಿ ಮತ್ತು ರಾಸಾಯನಿಕ. ಇವು ಪ್ರಮುಖ ವಿಭಾಗಗಳು. ಇವುಗಳೊಳಗೆ ಹಲವು ಉಪ ವಿಭಾಗಗಳಿವೆ. ಉದಾಹರಣೆಗೆ ಹೂವು ಎಂಬುದನ್ನು ತೆಗೆದುಕೊಳ್ಳೋಣ. ಕಣ್ಣು ಮುಚ್ಚಿ ಯಾವುದಾದರೊಂದು ಹೂವನ್ನು ನಮ್ಮ ಮೂಗಿನ ಮುಂದೆ ಹಿಡಿದರೆ ಅದು ಹೂವು ಎಂದು ಮಾತ್ರವಲ್ಲ -ಮಲ್ಲಿಗೆ, ಸಂಪಿಗೆ, ಗುಲಾಬಿ, ಇತ್ಯಾದಿಯಾಗಿ ಯಾವ ಹೂವು ಎಂದೂ ನಾವು ಗುರುತಿಸಬಲ್ಲೆವು. ನಮ್ಮ ಮೂಗಿನಲ್ಲಿರುವ ಲಕ್ಷಗಟ್ಟಲೆ ಸಂವೇದಕಗಳಲ್ಲಿ ಬೇರೆ ಬೇರೆ ವಾಸನೆಯನ್ನು ಗ್ರಹಿಸಲು ಬೇರೆ ಬೇರೆ ಸಂವೇದಕಗಳಿವೆ.

ವಿದ್ಯುನ್ಮಾನ ಮೂಗಿನಲ್ಲೂ ಹಲವಾರು ಸಂವೇದಕಗಳಿವೆ. ಬೇರೆ ಬೇರೆ ವಾಸನೆಗೆ ಬೇರೆ ಬೇರೆ ಸಂವೇದಕಗಳು ಸ್ಪಂದಿಸುತ್ತವೆ. ಇವು ಬಹುತೇಕ ವಿದ್ಯುತ್ತನ್ನು ಪ್ರವಹಿಸಬಲ್ಲ ಪಾಲಿಮರುಗಳಾಗಿರುತ್ತವೆ. ಬಹುತೇಕ ಸ್ಪಂಜಿನ ಮಾದರಿಯಲ್ಲಿರುತ್ತವೆ. ವಾಸನೆಯ ಗಾಳಿ ಅದರ ಮೇಲೆ ಹಾದಾಗ ಅದು ಉಬ್ಬುತ್ತದೆ. ಇದರಿಂದಾಗಿ ಅದರಲ್ಲಿ ಪ್ರವಹಿಸುವ ವಿದ್ಯುತ್ ಸಂಚಾರದಲ್ಲಿ ಏರುಪೇರಾಗುತ್ತದೆ. ಈ ಏರುಪೇರು ಯಾವ ವಾಸನೆಗೆ ಎಷ್ಟು ಎಂದು ಮೊದಲು ಅಳತೆ ಮಾಡಿ ನಿಗದಿ ಮಾಡಿರುತ್ತಾರೆ. ನಂತರ ಈ ಕೋಷ್ಟಕ ಬಳಸಿ ಯಾವ ವಾಸನೆ ಎಷ್ಟಿದೆ ಎಂದು ಮಾಪನ ಮಾಡುತ್ತಾರೆ.

ವಿದ್ಯುನ್ಮಾನ ಮೂಗುಗಳಲ್ಲಿ ಮೂರು ಅಂಗಗಳಿರುತ್ತವೆ. ಮೊದಲನೆಯದು ಯಾವುದರ ವಾಸನೆಯನ್ನು ಗ್ರಹಿಸಬೇಕೋ ಆ ವಸ್ತುವನ್ನು ಊಡಿಸುವ ಅಂಗ. ಊಡಿಕೆ ಗಾಳಿಯ ಅಥವಾ ಆವಿಯ ರೂಪದಲ್ಲಿರುತ್ತದೆ. ಘನ ವಸ್ತುಗಳ ವಾಸನೆಯನ್ನು ವಿದ್ಯುನ್ಮಾನ ಮೂಗು ಗ್ರಹಿಸಲಾರದು. ವಾಸನೆಯನ್ನು ಗ್ರಹಿಸಬೇಕಾದರೆ ಆ ವಸ್ತು ಸಂವೇದಕವನ್ನು ತಲುಪಬೇಕು. ಇದಕ್ಕಾಗಿ ಆ ವಸ್ತು ಆವಿಯ ರೂಪದಲ್ಲಿರಬೇಕು. ಇದು ಮಾನವರ ಮೂಗಿಗೂ ಅನ್ವಯಿಸುತ್ತದೆ. ಎರಡನೆಯ ಅಂಗ ವಾಸನೆಯನ್ನು ಗ್ರಹಿಸುವ ಅಂಗ. ಅದು ಹೇಗಿರುತ್ತದೆ ಎಂದು ಈಗಾಗಲೇ ವಿವರಿಸಿದ್ದೇನೆ. ಮೂರನೆಯ ಅಂಗ ಯಾವ ವಾಸನೆ ಎಷ್ಟಿದೆ ಎಂದು ಲೆಕ್ಕ ಹಾಕುವ ಅಂಗ ಅರ್ಥಾತ್ ಕಂಪ್ಯೂಟರ್.

ಚಾಲಕರು ಹೆಂಡ ಕುಡಿದು ವಾಹನ ಚಲಾಯಿಸುತ್ತಿದ್ದಾರೋ ಎಂದು ರಸ್ತೆ ಬದಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಪೋಲೀಸರು ಪರೀಕ್ಷಿಸುತ್ತಾರಲ್ಲ? ಅದನ್ನು ವಿದ್ಯುನ್ಮಾನ ಮೂಗನ್ನು ಬಳಸಿ ಮಾಡುತ್ತಾರೆ. ಚಾಲಕರಿಗೆ ಒಂದು ಸಾಧನದ ಪೈಪಿಗೆ ಊದಲು ಹೇಳುತ್ತಾರೆ. ಹಾಗೆ ಊದಿದಾಗ ಬಾಯಿಯಿಂದ ಹೊರಬರುವ ಗಾಳಿ ಆ ಯಂತ್ರದೊಳಕ್ಕೆ ಹೋಗುತ್ತದೆ. ಆ ಯಂತ್ರವು ಮದ್ಯದ ವಾಸನೆಗೆ ಸ್ಪಂದಿಸುವ ಸಂವೇದಕವನ್ನು ಹೊಂದಿರುತ್ತದೆ. ಅಂದರೆ ಅದು ಬೇರೆ ವಾಸನೆಗಳನ್ನು ಗ್ರಹಿಸಲಾರದು. ಮದ್ಯದ ವಾಸನೆ ಆ ಗಾಳಿಯಲ್ಲಿ ಇದ್ದರೆ ಅಲ್ಲಿರುವ ಸಂವೇದಕವು ಸ್ಪಂದಿಸಿ ವಿದ್ಯುತ್ ಪ್ರವಾಹದಲ್ಲಿ ಏರಿಳಿತಗಳಾಗುತ್ತವೆ. ಈ ಏರಿಳಿತವನ್ನು ಅಳತೆಯ ಕೋಷ್ಟಕ ನೋಡಿ ತಾಳೆ ಹಾಕಿ ಎಷ್ಟು ಪ್ರಮಾಣದ ಮದ್ಯ ಊದಿದ ಗಾಳಿಯಲ್ಲಿದೆ ಎಂದು ಅದು ಲೆಕ್ಕ ಹಾಕಿ ತೋರಿಸುತ್ತದೆ. ಅದರ ಪ್ರಕಾರ ಪೋಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಆ ಸಾಧನವು ಮದ್ಯದ ವಾಸನೆಗೆ ಮಾತ್ರ ಸ್ಪಂದಿಸುತ್ತದೆ. ಬೇರೆ ವಾಸನೆಯನ್ನು ಅದು ಗ್ರಹಿಸುವುದಿಲ್ಲ. ಬೇರೆ ವಾಸನೆ ಎಷ್ಟಿದ್ದರೂ ಅದರ ಗಣನೆಗೆ ಬರುವುದಿಲ್ಲ. ಅಂದರೆ ಮದ್ಯದ ವಾಸನೆ ಬರಬಾರದು ಎಂದು ಮದ್ಯ ಸೇವಿಸಿದವರು ಮಿಂಟ್, ಏಲಕ್ಕಿ ಇತ್ಯಾದಿ ತಿಂದರೂ ಪ್ರಯೋಜನವಿಲ್ಲ.

ಮನುಷ್ಯರು ಲಕ್ಷಗಟ್ಟಲೆ ವಿಧದ ವಾಸನೆಗಳನ್ನು ಗುರುತಿಸಬಲ್ಲರು, ಅವುಗಳನ್ನು ಗ್ರಹಿಸಬಲ್ಲರು. ಆದರೆ ವಿದ್ಯುನ್ಮಾನ ಮೂಗು ಗ್ರಹಿಸಬಲ್ಲ ವಾಸನೆಗಳು ನೂರನ್ನು ಮೀರಲಾರವು. ಆದರೂ ಅವುಗಳ ಉಪಯೋಗಗಳಿವೆ. ಒಂದು ಉಪಯೋಗವನ್ನು ಈಗಾಗಲೇ ವಿವರಿಸಿದ್ದೇನೆ. ಫ್ಯಾಕ್ಟರಿಗಳಲ್ಲಿ ತಯಾರಾಗುವ ರಾಸಾಯನಿಕ ವಸ್ತುಗಳ ಗುಣಮಟ್ಟವನ್ನು ಅಳೆಯಲು, ಉದ್ಯಮದಲ್ಲಿ ಬಳೆಕಯಾಗುವ (ಮೂಲ)ವಸ್ತುಗಳ ಗುಣಮಟ್ಟವನ್ನು ಅಳೆಯಲು, ಬೇರೆ ಬೇರೆ ಬ್ಯಾಚ್‌ಗಳಲ್ಲಿ ತಯಾರಾಗುವ (ರಾಸಾಯನಿಕ) ವಸ್ತುಗಳು ಒಂದೇ ಗುಣಮಟ್ಟವನ್ನು ಹೊಂದಿವೆ ಎಂದು ಖಾತ್ರಿಪಡಿಸಿಕೊಳ್ಳಲು, ರಾಸಾಯನಿಕ ವಸ್ತುಗಳಲ್ಲಿ ಆಗಿರಬಹುದಾದ ಪ್ರದೂಷಣವನ್ನು ಪರಿಶೀಲಿಸಲು, ಮಾಂಸ ಉದ್ದಿಮೆಯಲ್ಲಿ ತಯಾರಾಗುವ ಮಾಂಸದ ಗುಣಮಟ್ಟವನ್ನು ಪರಿಶೀಲಿಸಲು, ಹೀಗೆ ಹಲವು ರಿತಿಯಲ್ಲಿ ಉದ್ದಿಮೆಗಳಲ್ಲಿ ವಿದ್ಯುನ್ಮಾನ ಮೂಗನ್ನು ಬಳಕೆ ಮಾಡಬಹುದು. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಬ್ಯಾಗುಗಳಲ್ಲಿ ಪ್ರತಿಬಂಧಿತ ರಾಸಾಯನಿಕ ವಸ್ತುಗಳು, ಉದಾಹರಣೆಗೆ ಮಾದಕ ಔಷಧಿಗಳು, ಇದೆಯೋ ಎಂದು ಪರಿಶೀಲಿಸಲು, ಕ್ಯಾನ್ಸರ್ ಅನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಲು, ಮಾನವರು ಪ್ರವೇಶಿಸಲು ಸಾಧ್ಯವಿಲ್ಲದ ರಾಸಾಯನಿಕ ವಸ್ತುಗಳು ಇರುವ ಪ್ರದೇಶದಲ್ಲಿ ಬಳಕೆ – ಹೀಗೆ ಹಲವು ರೀತಿಯಲ್ಲಿ ವಿದ್ಯುನ್ಮಾನ ಮೂಗಿನ ಬಳಕೆ ಆಗುತ್ತದೆ.

–ಡಾ| ಯು.ಬಿ. ಪವನಜ

gadgetloka @ gmail . com

The post ವಿದ್ಯುನ್ಮಾನ ಮೂಗು first appeared on Vishva Kannada.

ದುರಸ್ತಿಯ ಹಕ್ಕು
ನಿಮ್ಮಲ್ಲಿ ಐಫೋನ್ ಇದೆಯೆಂದಿಟ್ಟುಕೊಳ್ಳಿ. ಅದರ ಬ್ಯಾಟರಿಯ ಆಯುಸ್ಸು ಮುಗಿದಾಗ ಏನು ಮಾಡುತ್ತೀರಿ? ಐಫೋನ್ ಮಾತ್ರವಲ್ಲ ಈಗಿನ ಯಾವುದೇ ಫೋನಿನ ಬ್ಯಾಟರಿಯನ್ನು ನಾವೇ ಬದಲಿಸುವಂತಿಲ್ಲ ಎಂಬುದನ್ನು ಗಮನಿಸಿದ್ದೀರಾ? ಒಂದು ಕಾಲದಲ್ಲಿ ಫೋನ್ ಬಿಚ್ಚಿ ನಾವೇ ಬ್ಯಾಟರಿ ಬದಲಿಸಬಹುದಿತ್ತು. ಐಫೋನ್ ಹೊರತಾಗಿ ಬೇರೆ ಯಾವುದಾದರೂ ಫೋನ್ ಆದಲ್ಲಿ ಅದರ ಗ್ಯಾರಂಟಿ ಸಮಯ ಕಳೆದ ನಂತರ ಯಾವುದಾದರೂ ಅಂಗಡಿಗೆ ಹೋಗಿ ಅವರ ಮೂಲಕ ಬ್ಯಾಟರಿ ಬದಲಿಸಬಹುದು. ಆದರೆ ಐಫೋನ್‌ಗೆ ಹಾಗಲ್ಲ. ಅವರ ಸರ್ವಿಸ್ ಸೆಂಟರಿಗೇ ಹೋಗಿ ಅವರ ಮೂಲಕವೇ ಮಾಡಿಸಬೇಕು. ನೀವು ಬೇರೆಯವರಿಂದ ಬ್ಯಾಟರಿ ಬದಲಿಸಿದರೆ ಆ ಫೋನಿಗೆ ಮುಂದಕ್ಕೆ ಸಾಫ್ಟ್‌ವೇರ್ ಅಪ್‌ಡೇಟ್‌ಗಳು ಬರುವುದಿಲ್ಲ ಎಂದು ಕೆಲವರು ದೂರಿದ್ದಾರೆ. ಅಷ್ಟಕ್ಕೂ ಐಫೋನಿನ ಬ್ಯಾಟರಿಯನ್ನು ಯಾರಾದರೂ ಬದಲಿಸಲು ಪ್ರಯತ್ನಿಸಿದ್ದೀರಾ? ಅದು ಎಷ್ಟು ಕ್ಲಿಷ್ಟ ಎಂದು ಗಮನಿಸಿದ್ದೀರಾ? ಅದು ಹಲವು ಸರ್ಕ್ಯೂಟ್‌ಗಳ ಅಡಿಯಲ್ಲಿ ಮರೆಯಾಗಿರುತ್ತದೆ. ಮೊತ್ತ ಮೊದಲನೆಯದಾಗಿ ಐಫೋನ್ ಬಿಚ್ಚುವುದು ಸುಲಭದ ಕೆಲಸವಲ್ಲ. ಅವರದೇ ಆದ ವಿಚಿತ್ರ ವಿನ್ಯಾಸದ ಸ್ಕ್ರೂಗಳನ್ನು ಅವರು ಬಳಸುತ್ತಾರೆ. ಅವನ್ನು ಬಿಚ್ಚಲು ವಿಶೇಷ ಉಪಕರಣಗಳು ಬೇಕು. ಹೇಗಾದರೂ ಮಾಡಿ ಬಿಚ್ಚಿದರೂ ಅದರ ಬ್ಯಾಟರಿ ನೇರವಾಗಿ ಕೈಗೆ ಸಿಗುವುದಿಲ್ಲ. ಅಂತೂ ಇಂತೂ ಬ್ಯಾಟರಿ ಬದಲಿಸಿದರೂ ಅದು ಕೆಲಸ ಮಾಡುತ್ತದೆ ಎಂಬ ಗ್ಯಾರಂಟಿ ಇಲ್ಲ. ಐಫೋನ್ ಅನ್ನು ಅಧಿಕೃತವಾಗಿ ಆಪಲ್ ಕಂಪೆನಿಯಿಂದ ತರಬೇತಾದವರು ಮಾತ್ರ ಬಿಚ್ಚಿ ದುರಸ್ತಿ ಮಾಡಬಹುದು ಎಂಬುದು ಕಂಪೆನಿಯವರ ಹೇಳಿಕೆ. ಸಮಸ್ಯೆ ಏನೆಂದರೆ ಇಂತಹ ತಂತ್ರಾಂಶಾಧಾರಿತ ಯಂತ್ರಗಳನ್ನು ಕಂಪೆನಿಯವರು ಅಂತರಜಾಲದ ಮೂಲಕ ನಿಯಂತ್ರಿಸಬಹುದು. ನೀವು ಅನಧಿಕೃತವಾಗಿ ಅದನ್ನು ಬಿಚ್ಚಿದ್ದೀರಿ ಎಂದು ಅವರಿಗೆ ಗೊತ್ತಾದಾಗ ನಿಮ್ಮ ಫೋನನ್ನು ಅವರು ಇಟ್ಟಿಗೆಯನ್ನಾಗಿಸುತ್ತಾರೆ. ಅಂದರೆ ನಿಮ್ಮ ಫೋನ್ ಕೆಲಸ ಮಾಡುವುದಿಲ್ಲ.

ಈಗ ತುಂಬ ಕುಖ್ಯಾತವಾದ Error-53 ಕಥೆ ಕೇಳಿ. ಇದು ನಡೆದುದು 2016ರಲ್ಲಿ. ಕೆಲವು ಐಫೋನ್ ಬಳಕೆದಾರರು ತಮ್ಮ ಫೋನಿನ ಕೆಟ್ಟು ಹೋದ ಬೆರಳಚ್ಚು ಪರಿಶೀಲಕವನ್ನು (fingerprint scanner) ಐಫೋನ್‌ನವರ ಅಧಿಕೃತ ಸರ್ವಿಸ್ ಸೆಂಟರ್ ಬದಲಿಗೆ ಬೇರೆಯವರಿಂದ ದುರಸ್ತಿ ಮಾಡಿಸಿದರು. ಹಾಗೆ ಮಾಡಿಸಿಕೊಂಡವರೆಲ್ಲರ ಫೋನ್‌ಗಳು ಕೆಲಸ ಮಾಡುವುದು ನಿಲ್ಲಿಸಿ Error-53 ಎಂದು ತೋರಿಸತೊಡಗಿದವು. ಐಫೋನ್‌ನ ಗ್ರಾಹಕ ಸೇವೆಗೆ ಫೋನ್ ಮಾಡಿ ವಿಚಾರಿಸಿದರೆ ಅವರದು ಒಂದೇ ಉತ್ತರ – ನೀವು ಐಫೋನ್‌ನ ಅಧಿಕೃತ ಸರ್ವಿಸ್ ಸೆಂಟರಿನಲ್ಲಿ ದುರಸ್ತಿ ಮಾಡಿಸಿಲ್ಲ; ಅವರು ಕಳಪೆ ಭಾಗ ಅಳವಡಿಸಿದ್ದಾರೆ; ಆದುದರಿಂದ ನಾವು ಏನೂ ಮಾಡುವಂತಿಲ್ಲ. ವಿಷಯ ಏನೆಂದರೆ ಐಫೋನ್‌ನವರ ಅಧಿಕೃತ ಸರ್ವಿಸ್ ಸೆಂಟರಿನಲ್ಲಿ ದುರಸ್ತಿ ಮಾಡಿಸಿದರೆ ಅದು ಅತಿ ದುಬಾರಿ, ಬೇರೆಯವರಿಂದ ಮಾಡಿಸಿದರೆ ಅತಿ ಕಡಿಮೆಯಲ್ಲಿ ಆಗುತ್ತದೆ. ಆದರೆ ಅದರಿಂದ ಆಪಲ್ ಕಂಪೆನಿಗೆ ಹಣ ಬರುವುದಿಲ್ಲ. ಅದಕ್ಕಾಗಿ ಕಂಪೆನಿಯವರು ಅಂತಹ ಫೋನ್‌ಗಳನ್ನು ತಂತ್ರಾಂಶದ ನವೀಕರಣದ ಮೂಲಕ ಕೆಲಸ ಮಾಡದಂತೆ ಮಾಡಿದ್ದರು. ಈ ವಿಷಯ ಆಸ್ಟ್ರೇಲಿಯಲ್ಲಿ ನ್ಯಾಯಾಲಯಕ್ಕೆ ಹೋಯಿತು. ಕೆಲವು ಗ್ರಾಹಕ ಸಂಘಗಳು ಆಪಲ್ ಕಂಪೆನಿಯ ಮೇಲೆ ದಾವೆ ಹೂಡಿದರು. ಅಂತಿಮವಾಗಿ ಗ್ರಾಹಕರು ಗೆದ್ದರು. 9 ಮಿಲಿಯ ಡಾಲರ್ ದಂಡವನ್ನು ನ್ಯಾಯಾಲಯ ಆಪಲ್ ಕಂಪೆನಿಗೆ ವಿಧಿಸಿತು. ಎಲ್ಲರಿಗೂ ಬೇರೆ ಫೋನ್ ಕೊಡಿಸಿತು. ಇದು ಗ್ರಾಹಕರ ವಿಜಯ.

ಇಲ್ಲಿ ಒಂದು ವಿಷಯ ಗಮನಿಸಿರಬಹುದು. ಅದೆಂದರೆ ಒಮ್ಮೆ ಒಂದು ಸಾಧನವನ್ನು ನಾವು ಕೊಂಡ ನಂತರ ನಾವು ಅದರ ಯಜಮಾನರು. ಅದರ ಗ್ಯಾರಂಟಿ ಸಮಯ ಮುಗಿದ ನಂತರ ಅದನ್ನು ಎಲ್ಲಿ ಯಾರಿಂದ ದುರಸ್ತಿ ಮಾಡಿಸಬೇಕು ಎಂಬುದು ನಮ್ಮ ಅಧಿಕಾರವಾಗಿರಬೇಕು. ಅದನ್ನು ನಮ್ಮ ಮೇಲೆ ಹೇರುವ ಅಧಿಕಾರ ಆ ಸಾಧನವನ್ನು ತಯಾರಿಸಿದ ಕಂಪೆನಿಗೆ ಇರುವಂತಿಲ್ಲ. ಅಷ್ಟೇಕೆ, ನಾವು ತಾಂತ್ರಿಕವಾಗಿ ಪರಿಣತರಾಗಿದ್ದಲ್ಲಿ ಅದನ್ನು ನಾವೇ ಮನೆಯಲ್ಲೇ ದುರಸ್ತಿ ಮಾಡುವಂತಿರಬೇಕು. ಅದು ತಪ್ಪು ಎಂದು ಕಂಪೆನಿಯವರು ಹೇಳುವಂತಿಲ್ಲ. ನಾವೇ ದುರಸ್ತಿ ಮಾಡಿಕೊಂಡರೆ ಸಾಧನವನ್ನು ಕೆಲಸ ಮಾಡದಂತೆ ಅವರು ತಂತ್ರಾಂಶದ ಮೂಲಕ ನಿಯಂತ್ರಿಸುವಂತಿಲ್ಲ. ಈ ದುರಸ್ತಿಯ ವ್ಯಾಪ್ತಿಯಲ್ಲಿ ಸರಳವಾದ ಬ್ಯಾಟರಿ ಬದಲಾವಣೆಯೂ ಬರುತ್ತದೆ. ಈ ಹಕ್ಕನ್ನು ಸರಳವಾಗಿ ದುರಸ್ತಿಯ ಹಕ್ಕು ಎಂದು ಹೇಳಬಹುದು. ಇಂಗ್ಲಿಷಿನಲ್ಲಿ ಇದನ್ನು  right to repair ಎನ್ನುತ್ತಾರೆ. ಅಮೆರಿಕ ಮತ್ತು ಯುರೋಪಿನಲ್ಲಿ ಇದೊಂದು ದೊಡ್ದ ಚಳವಳಿಯಾಗಿ ರೂಪುಗೊಳ್ಳುತ್ತಿದೆ.

ಇಲೆಕ್ಟ್ರಾನಿಕ್ ಸಾಧನಗಳು ಬಹುಬೇಗನೆ ಅಪ್ರಸ್ತುತವಾಗುತ್ತವೆ. ಅದನ್ನು ಕೊಳ್ಳುವವರೂ ಈ ಸಾಧನವನ್ನು ನಾವು ಹೆಚ್ಚೆಂದರೆ 5 ವರ್ಷ ಮಾತ್ರ ಬಳಸಬಹುದು ಎಂಬ ಆಲೋಚನೆಯಲ್ಲೇ ಕೊಳ್ಳುತ್ತಾರೆ. ಆದರೆ ಅದರ ಗ್ಯಾರಂಟಿ 6 ರಿಂದ 12 ತಿಂಗಳುಗಳಲ್ಲಿ ಮುಗಿದುಹೋಗುತ್ತದೆ. ನಂತರ ಚಿಕ್ಕ ದುರಸ್ತಿ ಮಾಡಿಸಬೇಕಿದ್ದರೂ ನೀವು ಅದರ ಅಧಿಕೃತ ಸರ್ವಿಸ್ ಸೆಂಟರಿಗೆ ತೆಗೆದುಕೊಂಡು ಹೋದರೆ ದುಬಾರಿ ಬೆಲೆ ತೆರಬೇಕಾಗುತ್ತದೆ. ಐಫೋನ್, ಮ್ಯಾಕ್, ಐಪ್ಯಾಡ್ ಇತ್ಯಾದಿ ತಯಾರಿಸುವ ಆಪಲ್ ಕಂಪೆನಿಯಂತೂ ತನ್ನ ಉತ್ಪನ್ನಗಳಲ್ಲಿ ತನ್ನದೇ ವಿನ್ಯಾಸದ ಸ್ಕ್ರೂಗಳನ್ನು ಬಳಸುತ್ತದೆ. ಇತರೆ ಕೆಲವು ಕಂಪೆನಿಗಳೂ ಇದೇ ರೀತಿ ಮಾಡುತ್ತಿವೆ. ಇದೆಲ್ಲವೂ ಒಂದು ರೀತಿಯಲ್ಲಿ ಅನೈತಿಕವೇ. ಇವುಗಳ ವಿರುದ್ಧ ನಡೆಯುತ್ತಿರುವ ಅಭಿಯಾನವೇ ದುರಸ್ತಿಯ ಹಕ್ಕು ಅಭಿಯಾನ. ಅಮೆರಿಕದಲ್ಲಿ ದುರಸ್ತಿಯ ಹಕ್ಕು ಕಾನೂನಾಗಿ ಬರುತ್ತಿದೆ. ಅದರಲ್ಲಿ ಅಡಕವಾಗಿರುವ ಕೆಲವು ಪ್ರಮುಖ ಅಂಶಗಳು – ಕಂಪೆನಿಗಳು ತಮ್ಮ ಉತ್ಪನ್ನಗಳ ದುರಸ್ತಿಯನ್ನು ಮಾಡಲು ಬೇಕಾಗಿರುವ ತಾಂತ್ರಿಕ ಕೈಪಿಡಿಯನ್ನು ಅಂತರಜಾಲದ ಮೂಲಕ ಬಿಡುಗಡೆ ಮಾಡಬೇಕು; ಉತ್ಪನ್ನದ ವಿನ್ಯಾಸವು ಯಾರು ಬೇಕಾದರೂ ದುರಸ್ತಿ ಮಾಡುವಂತಿರಬೇಕು, ದುರಸ್ತಿಗೆ ಬೇಕಾದ ಭಾಗಗಳನ್ನು ಲಭ್ಯ ಮಾಡಬೇಕು, ನಾವೇ ಅಥವಾ ಬೇರೆಯವರು ದುರಸ್ತಿ ಮಾಡಿದರೆ ಆ ಉತ್ಪನ್ನವನ್ನು ತಂತ್ರಾಂಶದ ಮೂಲಕ ಕೆಲಸ ಮಾಡದಂತೆ ಮಾಡಬಾರದು, ಇತ್ಯಾದಿ. ಇಂತಹ ಒಂದು ಅಭಿಯಾನ ಭಾರತದಲ್ಲೂ ಆಗಬೇಕಾಗಿದೆ.

–ಡಾ| ಯು.ಬಿ. ಪವನಜ

gadgetloka @ gmail . com

The post ದುರಸ್ತಿಯ ಹಕ್ಕು first appeared on Vishva Kannada.