ವಿಕಿಪೀಡಿಯ ಲೇಖನ ಬರಹ

Monday, July 2nd, 2018

-ಡಾ. ವಿಶ್ವನಾಥ ಬದಿಕಾನ ವಿಕಿಪೀಡಿಯ ಎಂದರೇನು?  ಆಧುನಿಕ ಬದುಕಿನ ಜ್ಞಾನ-ವಿಜ್ಞಾನ ಕ್ಷೇತ್ರದಲ್ಲಿನ ಅದ್ಭುತ ಆವಿಷ್ಕಾರಗಳಲ್ಲೊಂದಾದ ಮಾಹಿತಿ ತಂತ್ರಜ್ಞಾನದ ಒಂದು ವಿನೂತನ ಪರಿಕಲ್ಪನೆ ‘ವಿಕಿಪೀಡಿಯ’.  ವಿಕಿಪೀಡಿಯ (Wikipedia)ವು ವೆಬ್ ಆಧಾರಿತ ಅಂತರಜಾಲದ (Internet) ಮೂಲಕ ಬರೆಯುವ ಉಚಿತ, ಸಹಕಾರಿ, ಬಹುಭಾಷಾ ಸ್ವತಂತ್ರ ವಿಶ್ವಕೋಶ.  ಇದೊಂದು ವಿಶ್ವಕೋಶ ಜಾಲತಾಣ (Encyclopaedia Website) ವಾಗಿದ್ದು www.wikipedia.org ಅಂತರಜಾಲದ ಮೂಲಕ ಮಾಹಿತಿ ಸೇರಿಸಬಹುದು ಅಥವಾ ಹುಡುಕಬಹುದು.  ವಿಕಿಪೀಡಿಯವು ಅಂತರಜಾಲದ ಒಂದು ಸ್ವತಂತ್ರ ವಿಶ್ವಕೋಶವಾಗಿದ್ದು, ಪ್ರಪಂಚದ ಲಕ್ಷಾಂತರ ಮಂದಿ ಸ್ವಯಂಸೇವಕರ ಸಮುದಾಯವೊಂದು ಒಟ್ಟಿಗೆ ಸೇರಿ […]

ತುಳು ವಿಕಿಪೀಡಿಯ ಈಗ ಸಿದ್ಧ

Thursday, December 8th, 2016
ತುಳು ವಿಕಿಪೀಡಿಯ ಈಗ ಸಿದ್ಧ

– ಡಾ. ಯು. ಬಿ. ಪವನಜ ತುಳು ಭಾಷೆಗೆ ತನ್ನದೇ ಆದ ಸುದೀರ್ಘ ಇತಿಹಾಸವಿದೆ. ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆ ಬಹುಮಟ್ಟಿಗೆ ಬಾಯಿಮಾತಿನ ಭಾಷೆಯಾಗಿಯೇ ಉಳಿದು ಬೆಳೆದು ಬಂದಿದೆ. ತುಳು ಭಾಷೆಯಲ್ಲಿ ಶ್ರೀಮಂತ ಸಾಹಿತ್ಯ ಮತ್ತು ಸಂಸ್ಕೃತಿ ಅಡಕವಾಗಿದೆ. ತುಳು ಭಾಷೆಯಲ್ಲಿ ಹಳೆಯ ಪಾಡ್ದನ ಮತ್ತು ಇತರೆ ಸಾಹಿತ್ಯಗಳಲ್ಲದೆ ಆಧುನಿಕ ಕಥೆ, ಕವನ, ಕಾದಂಬರಿ, ನಾಟಕ ಇತ್ಯಾದಿ ಕಥನ ಸಾಹಿತ್ಯವೂ ಬೇಕಾದಷ್ಟು ಸೃಷ್ಠಿಯಾಗಿದೆ. ತುಳು ಭಾಷೆಯಲ್ಲಿ ನಾಟಕ ಪ್ರದರ್ಶನ ಮತ್ತು ಚಲನಚಿತ್ರಗಳೂ ಆಗುತ್ತಿವೆ. ತುಳುನಾಡು ಮತ್ತು […]

ಕನ್ನಡದ ಮುಕ್ತ ಜ್ಞಾನಕೋಶಕ್ಕೆ ಹತ್ತು ತುಂಬಿತು

Friday, November 15th, 2013

ಡಾ| ಯು.ಬಿ. ಪವನಜ   ಯುಗಯುಗಾದಿ ಕಳೆದರೂ ನವಂಬರ್ ಮರಳಿ ಬರುತಿದೆ (ಬೇಂದ್ರೆಯವರು ಕ್ಷಮಿಸುತ್ತಾರೆ). ಕನ್ನಡದ ಸ್ಥಿತಿಗತಿಗಳ ಬಗ್ಗೆ ಮತ್ತೊಮ್ಮೆ ಲೇಖನಗಳ ಮಹಾಪೂರದ ಸಮಯ. ಪ್ರತಿ ನವಂಬರ್ ತಿಂಗಳಿಗೆ ಇದನ್ನು ಮತ್ತೆ ಮತ್ತೆ ಓದುವುದು ಎಲ್ಲರಿಗೂ ರೂಢಿಯಾಗಿದೆ. ಅಂತೆಯೇ ಮತ್ತೆ ಮತ್ತೆ ಬರೆಯುವುದು ನಮಗೆ ರೂಢಿಯಾಗಿಬಿಟ್ಟಿದೆ. ಇರಲಿ. ಈಗ ಈ ವಿಷಯದ ಕಡೆಗೆ ಸ್ವಲ್ಪ ಕಣ್ಣು ಹಾಯಿಸೋಣ.   “ಪೆಟ್ರೋಲ್ ಉಳಿಸಬೇಕಾದರೆ ಪೆಟ್ರೋಲ್ ಬಳಸಬಾರದು, ಕನ್ನಡ ಉಳಿಸಬೇಕಾದರೆ?” ಎಂಬ ಮಾತು ಪ್ರತಿ ನವಂಬರ್ ಒಂದರಂದು ಅತ್ತಿಂದಿತ್ತ ಹರಿದಾಡುವ […]

ಕನ್ನಡ ವಿಕಿಪೀಡಿಯ ದಶಮಾನೋತ್ಸವ ಕಾರ್ಯಕ್ರಮ

Thursday, November 14th, 2013

ಕನ್ನಡ ವಿಕಿಪೀಡಿಯ ಸಮುದಾಯವು ಕನ್ನಡ ವಿಕಿಪೀಡಿಯಕ್ಕೆ ಹತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ದಶಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮ ವಿವರ ೯:೩೦-೧೦:೦೦ ನೋಂದಣಿ ೧೦:೦೦ ರಿಂದ ೧೧:೦೦ ಸಭಾ ಕಾರ್ಯಕ್ರಮ ಸ್ವಾಗತ ಗೀತೆ – ಲಕ್ಷ್ಮಿ ಚೈತನ್ಯ ಸ್ವಾಗತ ಮತ್ತು ನಿರ್ವಹಣೆ – ಡಾ. ಎ. ಸತ್ಯನಾರಾಯಣ ಪ್ರಸ್ತಾವನೆ – ಡಾ. ಯು. ಬಿ. ಪವನಜ ಮುಖ್ಯ ಅತಿಥಿಗಳ ಮಾತು ಡಾ. ಯು. ಆರ್. ಅನಂತಮೂರ್ತಿ ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ ರವಿ ಹೆಗಡೆ, ಸಮೂಹ ಸಂಪಾದಕ, ಉದಯವಾಣಿ ಹತ್ತು […]