ಮಾಹಿತಿ ತಂತ್ರಜ್ಞಾನಾಧಾರಿತ ಕೃಷಿ ಸಂಹವನ

Friday, May 8th, 2020

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದವರು ಪ್ರಕಟಿಸಿದ ಕೃಷಿ ವಿಜ್ಞಾನಗಳ ಸ್ನಾತಕ ಪದವಿ ಎರಡನೆ ಸೆಮಿಸ್ಟರ್‌ ಕನ್ನಡ ಪಠ್ಯ ಪುಸ್ತಕದಲ್ಲಿ (೨೦೧೭) ಪ್ರಕಟವಾದ ಒಂದು ಅಧ್ಯಾಯ ಪೀಠಿಕೆ ಸಾಹಿತ್ಯವನ್ನು ಕಥನ ಸಾಹಿತ್ಯ ಮತ್ತು ಮಾಹಿತಿ ಸಾಹಿತ್ಯ ಎಂದು ವಿಭಜಿಸಬಹದು. ಕಥೆ, ಕಾದಂಬರಿ, ಕವನ, ಇತ್ಯಾದಿಗಳು ಕಥನ ಸಾಹಿತ್ಯ ಎಂದೆನಿಸಿಕೊಳ್ಳುತ್ತವೆ. ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಕೃಷಿ, ಕಾನೂನು, ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡುವ ಸಾಹಿತ್ಯವನ್ನು ಮಾಹಿತಿ ಸಾಹಿತ್ಯ ಎನ್ನಬಹುದು. ಮಾಹಿತಿ ಸಾಹಿತ್ಯದಲ್ಲಿ ವಿಜ್ಞಾನ ಮತ್ತು ಅದರ ಉಪಶಾಖೆಗಳಾದ […]

ಡಿಜಿಟಲ್ ಕನ್ನಡ -ಏನೇನಾಗಬೇಕಾಗಿದೆ?

Sunday, November 15th, 2015
ಡಿಜಿಟಲ್ ಕನ್ನಡ -ಏನೇನಾಗಬೇಕಾಗಿದೆ?

– ಡಾ. ಯು. ಬಿ. ಪವನಜ   ನವಂಬರ್ ಬಂದೊಡನೆ ಎಲ್ಲರಿಗೂ ನೆನಪಾಗುವುದು ಕನ್ನಡ. ದುರಾದೃಷ್ಟಕ್ಕೆ ಅದು ಅಷ್ಟಕ್ಕೇ ಸೀಮಿತವಾಗಿದೆ. ಮತ್ತೊಮ್ಮೆ ನವಂಬರ್ ಬಂದಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎಲ್ಲಿದೆ ಎಂದು ಮತ್ತೆ ಬರೆಯುವ ಅಗತ್ಯವಿಲ್ಲ. ಏನೇನು ಆಗಬೇಕಾಗಿದೆ? ಏನೆಲ್ಲ ಮಾಡುತ್ತೇವೆ ಎಂದವರೆಲ್ಲ ಏನು ಮಾಡಿದ್ದಾರೆ ಎಂದು ನೋಡೋಣ.   ಕನ್ನಡದ ಬಹುತೇಕ ಕೆಲಸಗಳು ಸರಕಾದ ಮೂಲಕವೇ ಆಗಬೇಕಾಗಿವೆ. ಸರಕಾರವು ಮಾಹಿತಿ ತಂತ್ರಜ್ಞಾನ ಸಲಹಾ ಸಮಿತಿಯನ್ನು ನೇಮಿಸಿ ಅದರ ಸಲಹೆಯಂತೆ ಕೆಲವು ಕೆಲಸಗಳನ್ನು ಮಾಡಿದೆ. ಅದರ ಸಲಹೆಗಳಲ್ಲಿ […]

ನಮ್ಮ ಭಾಷೆಗೆ e-ಭಾಷ್ಯ

Tuesday, July 19th, 2011

– ಡಾ. ಯು. ಬಿ. ಪವನಜ ಒಂದು ಭಾಷೆಯನ್ನು ವೈಜ್ಞಾನಿಕವಾಗಿ ಪದವಿಂಗಡಣೆ ಮಾಡಿ ಅದಕ್ಕೆ ವ್ಯಾಕರಣಸ್ವರೂಪದ ನಿಗದಿಮಾಡುವ ಕ್ರಿಯೆ ಪ್ರಪಂಚದಲ್ಲೇ ಮೊದಲ ಬಾರಿ ಪ್ರಾರಂಭವಾದುದು ಭಾರತದಲ್ಲಿ. ಇದನ್ನು ಗಣಕ ಮತ್ತ ತಂತ್ರಾಂಶ ಬಳಸಿ ಮಾಡುವ ಕೆಲಸದಲ್ಲಿ ನಾವು ಎಲ್ಲಿದ್ದೇವೆ? ನಮ್ಮ ಭಾಷೆ ಎಲ್ಲಿದೆ? ಸ್ವಲ್ಪ ಪರಿಶೀಲಿಸೋಣ. “ರಾಮನು ರಾವಣನನ್ನು ಕೊಂದನು” “ರಮೇಶನು ಒಂದು ಹೊಸ ಕಾರನ್ನು ಕೊಂಡುಕೊಂಡನು” “ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ ಜರುಗಲಿದೆ” ಹೀಗೆ ಹಲವಾರು ವಾಕ್ಯಗಳನ್ನು ನಾವು ಪ್ರತಿನಿತ್ಯ ಓದುತ್ತಿರುತ್ತೇವೆ ಅಥವಾ ಕೇಳುತ್ತಿರುತ್ತೇವೆ. ಇದು ಮಾಹಿತಿಯುಗ. […]

ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ -ಅಂದು, ಇಂದು, ಮುಂದು

Friday, April 29th, 2011

ಡಾ| ಯು. ಬಿ. ಪವನಜ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎಂಬುದು ಆರಂಭದ ದಿನಗಳಲ್ಲಿ ಗಣಕಗಳಲ್ಲಿ ಕನ್ನಡದ ಬಳಕೆಯಿಂದ ಪ್ರಾರಂಭವಾಯಿತು. ಇದು  ಸುಮಾರು ಮೂರು ದಶಕಗಳ ಹಿಂದಿನ ಕಥೆ. ಪದಸಂಸ್ಕರಣವು (word-processing) ಇದರಲ್ಲಿಯ ಮೊದಲನೆಯದು. ಪತ್ರ, ಲೇಖನ, ದಾಖಲೆಗಳನ್ನು ಬರೆಯಲು, ತಿದ್ದಲು ಇವುಗಳ ಬಳಕೆ ಆಗುತ್ತಿದೆ. ಪದಸಂಸ್ಕರಣದ ಮುಂದುವರೆದ ಸೌಕರ್ಯವೇ ಡಿ.ಟಿ.ಪಿ. (desktop publishing). ಅಂದರೆ ಪಠ್ಯದ ಜೊತೆ ಚಿತ್ರಗಳನ್ನು ಸೇರಿಸಿ ಪುಟವಿನ್ಯಾಸ ಮಾಡುವುದು. ಈಗ ಎಲ್ಲ ಪುಸ್ತಕಗಳು ಮತ್ತು ಪತ್ರಿಕೆಗಳು ಇದೇ ವಿಧಾನದಿಂದ ತಯಾರಾಗುತ್ತಿವೆ. ಕೆ.ಪಿ. ರಾವ್ […]