ಗ್ಯಾಜೆಟ್ ಲೋಕ – ೦೧೩ (ಮಾರ್ಚ್ ೨೯, ೨೦೧೨)

Thursday, April 5th, 2012
ಗ್ಯಾಜೆಟ್ ಲೋಕ - ೦೧೩ (ಮಾರ್ಚ್ ೨೯, ೨೦೧೨)

ನಿಸ್ತಂತು ಕಿವಿಗಿಂಪು   ಸಂಗೀತ ಹೊರಡಿಸುವ ಯಾವುದೇ ವಿದ್ಯುನ್ಮಾನ ಉಪಕರಣದ ಕೊನೆಯ ಕೊಂಡಿ ಅಥವಾ ಸಾಧನ ಸ್ಪೀಕರ್ ಅಥವಾ ಇಯರ್‌ಫೋನ್ (ಹೆಡ್‌ಸೆಟ್). ಅದು ಉತ್ತಮವಾಗಿದ್ದಷ್ಟೂ ಧ್ವನಿ ಉತ್ತಮವಾಗಿರುತ್ತದೆ. ಈ ಸಾಧನವನ್ನು ತಂತಿ ಅಥವಾ ನಿಸ್ತಂತು (ವಯರ್‌ಲೆಸ್) ವಿಧಾನದಲ್ಲಿ ಜೋಡಿಸಬಹುದು. ಈ ಸಲ ಅಂತಹ ಎರಡು ನಿಸ್ತಂತು ಸಾಧನಗಳ ಪರಿಚಯ ಮಾಡಿಕೊಳ್ಳೋಣ.   ಆಡಿಯೋ ಕ್ಷೇತ್ರದಲ್ಲಿ ಕ್ರಿಯೇಟಿವ್ ಕಂಪೆನಿ ದೊಡ್ಡ ಹೆಸರು. ಅವರ ಉತ್ಪನ್ನಗಳು ಸಾಮಾನ್ಯವಾಗಿ ಚೆನ್ನಾಗಿರುತ್ತವೆ. ಗಣಕಗಳ ಜೊತೆ ಬಳಸುವ ಕ್ರಿಯೇಟಿವ್ ಸ್ಪೀಕರ್‌ಗಳನ್ನು ನಿಮ್ಮಲ್ಲಿ ಬಹುಮಂದಿ ನೋಡಿಯೇ […]