‘ಇನ್ಫೊಸಿಸ್’ ಸಂಸ್ಥೆಯ ರುವಾರಿ, ನಾರಾಯಣ ಮೂರ್ತಿಗಳಿಗೆ ನ
ಕನ್ನಡ ನಾಡಿನ ಹೆಮ್ಮೆಯ ಸಂಸ್ಥೆಯ ಸಂಸ್ಥಾಪಕ ಶ್ರಿ ಎನ್.ಆರ್. ನಾರಾಯಣ ಮೂರ್ತಿಯವರು ನಾಳೆ ತಮ್ಮ ೬೦ ನೆಯ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ಅವರ ೫೯,೦೦೦ ಹಿಂಬಾಲಕರು ಅವರ ಶ್ರೇಯಸ್ಸಿಗೆ ನಾಳೆ ಪ್ರಪಂಚದಾದ್ಯಂತ ಶುಭಾಶಯಗಳನ್ನು ಕೋರಿ ತಮ್ಮ ನೆಚ್ಚಿನ ನಾಯಕನನ್ನು ಹರಸುತ್ತಾರೆ ! ಆ ದಿನವೆ ಅವರ ಜೊತೆಗೆ ೨೫ ವರ್ಷಕ್ಕು ಮೇಲ್ಪಟ್ತು ದುಡಿದ ಸಹೋದ್ಯೊಗಿ, ನಂದನ್ ನಿಲೆಕೆಣಿಯವರು ಮುಂದೆ ಇನ್ಫೊಸಿಸ್ ನ ಆಡಳಿತದ ಕಾರ್ಯಭಾರವನ್ನು ವಹಿಸಿಕೊಂಡು ಮುಂದೆ ನಡೆಸಿಕೊಂಡು ಹೋಗುತ್ತಾರೆ. ನಾರಾಯಣ ಮೂರ್ತಿಯವರು ಕಂಪೆನಿಯ ಕಾರ್ಯ ಚಟುವಟಿಕೆಯನ್ನು ಮೇಲಿನ ಸ್ಥರದಲ್ಲಿ ಗಮನಿಸುತ್ತಿದ್ದು ತಮ್ಮ ಅಮೂಲ್ಯ ಸಲಹೆಗಳನ್ನು ಸಮಯ ಸಮಯದಲ್ಲಿ ಕೊಟ್ಟು ಸಹಕರಿಸುತ್ತಾರೆ ! ಇವರೆಲ್ಲರಿಗೂ ಪ್ರೇರಣೆಯನ್ನು ನೀಡಿ ಸಹಕರಿಸಿ, ಸಂಸ್ಥೆ ಯನ್ನು ಬೆಳೆಸಲು ಸಹಾಯಮಾಡಿದ ಅತ್ಯಂತ ಸಮರ್ಥ ಕಂಪ್ಯೂಟರ್ ಇಂಜಿನಿಯರ್ ಆದಾಗ್ಯೂ ತೆರೆಯಮರೆಯಲ್ಲಿಯೇ ಇದ್ದು ತಮ್ಮ ಮಹಾನ್ ಯೊಗದಾನಮಾಡಿದ ಸುಧಾ ಮೂರ್ತಿಯವರಿಗೆ ಯಶಸ್ಸಿನ ಬಹುಪಾಲು ಹೊಗಬೇಕು. ‘ಇನ್ಫೊಸಿಸ್’ ನಾರಾಯಣ ಮೂರ್ತಿ ಹಾಗು ಸುಧಾಮೂರ್ತಿಯವರ ನೆಚ್ಚಿನ ಕೂಸಾಗಿದ್ದು ,ಈಗ ಪ್ರೌಢತೆಯನ್ನು ಪಡೆದಿದೆ. ಪ್ರಪಂಚದ ಪ್ರತಿಷ್ಟಿತ ಸಾಫ್ಟ್ ವೇರ ಕಂಪೆನಿಗಳಲ್ಲಿ ಒಂದಾಗಿ ಬೆಳೆದಿದೆ.
ಅದು ಹಮ್ಮಿಕೊಂಡಿರುವ ಜನಹಿತ ಕಾರ್ಯಕ್ರಮಗಳನ್ನು ಸುಧಾರವರು ತಮ್ಮ ‘ಇನ್ಫೊಸಿಸ್ ಫೌಂಡೇಶನ್ ‘ಮುಖಾಂತರ ಮಾಡುತ್ತಿದ್ದಾರೆ. ಈ ಹಣ ಕೊಟಿಗಟ್ಟಲೆ ರೂಪಾಯಿಗಳದು !
ಕನ್ನಡಿಗರ ಪರವಾಗಿ ಮತ್ತು ‘ವಿಶ್ವ ಕನ್ನಡದ’ ಓದುಗರ ಪರವಾಗಿ ಶ್ರೀ ನಾರಾಯಣಮೂರ್ತಿಗಳಿಗೆ ಅವರ ಹುಟ್ಟಿದ ಹಬ್ಬಕ್ಕೆ , ನಮ್ಮ ಶುಭಹಾರೈಕೆಗಳು. ಮೂರ್ತಿ ದಂಪತಿಗಳು ಹೀಗೆಯ ತಮ್ಮ ಕ್ಷೇತ್ರದಲ್ಲಿ ಯಶಸ್ಸು ಗಳಿಸಲಿ. ಪರಮಾತ್ಮನು ಅವರಿಬ್ಬರಿಗೂ ಆಯುರಾರೋಗ್ಯ ಐಶ್ವೈರ್ಯಗಳನ್ನು ಹೀಗೆಯೇ ಕರುಣಿಸಲಿ ! ‘ಇನ್ಫೊಸಿಸ್ ‘ ಗಳಿಸಿದ ಸಂಪತ್ತಿನ ಪಾಲು ನಮ್ಮ ‘ಬಡ ಕರ್ನಾಟಕದ’ ಜನತೆಗೂ ಎಂದಿನಂತೆ ದಕ್ಕಲಿ !