eಳೆ – ೨೨ (ಡಿಸೆಂಬರ್ ೨೯, ೨೦೦೨)

eಳೆ – ೨೨ (ಡಿಸೆಂಬರ್ ೨೯, ೨೦೦೨)
ಅಂತರಜಾಲಾಡಿ

ಆರೋಗ್ಯವೇ ಭಾಗ್ಯ. ಇದರಲ್ಲಿ ಅನುಮಾನವಿಲ್ಲ. ಅಂತರಜಾಲದಲ್ಲಿ ಆರೋಗ್ಯದ ಬಗ್ಗೆ ಹುಡುಕಾಡಿದರೆ ಬೇಕಾದಷ್ಟು ತಾಣಗಳು ಸಿಗುತ್ತವೆ. ಉದಾಹರಣೆಗೆ www.healthweb.org. ಇದು ಆರೋಗ್ಯದ ಬಗೆಗಿನ ಒಂದು ಪೋರ್ಟಲ್. ಲೇಖನಗಳು ಮತ್ತು ಇತರ ತಾಣಗಳಿಗೆ ಸೂಚಿಗಳು ಇಲ್ಲಿವೆ. ಇದೇ ರೀತಿಯ ಮತ್ತೊಂದು ತಾಣ: www.webmd.com.

ಡೌನ್‌ಲೋಡ್

ಸಂಪೂರ್ಣ ಉಚಿತ ಪದಸಂಸ್ಕಾರಕ (word-processor) ಬೇಕೆ? www.abisource.com ತಾಣಕ್ಕೆ ಭೇಟಿ ನೀಡಿ AbiWord ತಂತ್ರಾಂಶವನ್ನು ಡೌನ್‌ಲೋಡ್ ಮಾಡಿ. ಇದರ ಸುಧಾರಣೆಗೆ ನೀವೂ ಕೈಜೋಡಿಸಬಹುದು. ಯಾವ ರೀತಿಯಲ್ಲಿ ಎಂಬುದನ್ನು ತಾಣದಲ್ಲಿ ವಿವರಿಸಲಾಗಿದೆ.

ಶಾರ್ಟ್‌ಕಟ್

ವಿಂಡೋಸ್ ಎಕ್ಸ್‌ಪಿ ಮತ್ತು ಆಫೀಸ್ ಎಕ್ಸ್‌ಪಿಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಸಿರುವುದು ನಿಮಗೆಲ್ಲರಿಗೂ ಈಗಾಗಲೇ ತಿಳಿದಿರಬಹುದು. ಇವುಗಳಲ್ಲಿರುವ ವರ್ಡ್ ಮತ್ತು ಎಕ್ಸೆಲ್‌ಗಳಲ್ಲಿ ಕನ್ನಡದ ಅಂಕೆಗಳನ್ನು ಉಪಯೋಗಿಸಬೇಕೆ? ಉದಾಹರಣೆಗೆ ೧ ಎಂಬ ಅಂಕೆ ಬೇಕಿದ್ದಲ್ಲಿ Ctrl, Alt ಮತ್ತು ೧ ಕೀಲಿಗಳನ್ನು ಒಟ್ಟಿಗೆ ಒತ್ತಿ.

e – ಸುದ್ದಿ

ಚಿತ್ರವೊಂದನ್ನು ಡಿಜಿಟಲ್ ಮಾದರಿಯಲ್ಲಿ ಒಂದು ಅಣುವಿನಲ್ಲಿ ಶೇಖರಿಸಿಡುವುದರಲ್ಲಿ ಅಮೇರಿಕಾದ ಓಕ್ಲಹಾಮ ವಿಶ್ವವಿದ್ಯಾಲಯದ ವಿeನಿಗಳು ಯಶಸ್ವಿಯಾಗಿದ್ದಾರೆ. ದ್ರವಸ್ಫಟಿಕದ ಅಣುವಿನ ೧೯ ಜಲಜನಕದ ಪರಮಾಣುಗಳು ಚಿತ್ರವೊಂದರ ೧೦೨೪ ಬಿಟ್ ಮಾಹಿತಿಯನ್ನು ಶೇಖರಿಸಿಡಬಲ್ಲುದು ಎಂದು ಪತ್ತೆಹಚ್ಚಿದ್ದಾರೆ. ಚಿತ್ರವೊಂದನ್ನು ಹಲವಾರು ಅಡ್ಡ ಮತ್ತು ನೀಟ ಕೊಯ್ತಗಳನ್ನಾಗಿಸಿದಾಗ ಸಿಗುವ ಪ್ರತಿಯೊಂದು ಚುಕ್ಕಿಯನ್ನು ಪಿಕ್ಸೆಲ್ ಎಂಬ ಹೆಸರಿನಿಂದ ಕರೆಯುತ್ತಾರೆ. ೩೨ x ೩೨ ಪಿಕ್ಸೆಲ್ ಗಾತ್ರದ ಚಿತ್ರವನ್ನು ಒಂದು ಅಣುವಿನಲ್ಲಿ ಶೇಖರಿಸಬಹುದು. ಈ ಹೊಸ ತಂತ್ರeನಕ್ಕೆ “ಮೊಲೆಕ್ಯೂಲರ್ ಫೋಟೋಗ್ರಾಫಿ” ಎಂದು ಹೆಸರಿಡಲಾಗಿದೆ. ಭವಿಷ್ಯದಲ್ಲಿ ಗುಪ್ತಚರರು ಬಳಸುವ ಕ್ಯಾಮರಾಗಳು ಅತಿ ಚಿಕ್ಕವಾಗಿ ಅಂಗಿಯ ಗುಂಡಿಯೊಳಗಡೆ ಕುಳಿತಿರುವ ಸಾಧ್ಯತೆಗಳಿವೆ.

e-ಪದ

ಸಿ.ಪಿ.ಯು. (C.P.U.=Cental Processing Unit): ಕೇಂದ್ರ ಸಂಸ್ಕಾರಕ. ಇದು ಗಣಕದ ಮಿದುಳು ಇದ್ದಂತೆ. ಎಲ್ಲಾ ಸಂಸ್ಕರಣೆಗಳೂ ನಡೆಯುವ ಗಣಕದ ಮುಖ್ಯಭಾಗ. ಆದೇಶಗಳನ್ನು ಅರ್ಥೈಸುವ, ಸೂಚನೆಗಳನ್ನು ಕಾರ್ಯರೂಪಕ್ಕೆ ತರಲು ಅವಶ್ಯಕವಾಗಿರುವ ವಿದ್ಯುನ್ಮಂಡಲಗಳನ್ನು ಹೊಂದಿರುವ ಘಟಕ. ಉದಾ.: ಇಂಟೆಲ್ ಪೆಂಟಿಯಮ್-IV, ಎಎಂಡಿ ಆತ್ಲಾನ್.

ಕಂಪ್ಯೂತರ್ಲೆ

ಗಣಕವಾಡುಗಳು: ಕನ್ನಡದ ಖ್ಯಾತ ಕವಿಗಳ ಹಾಡುಗಳನ್ನು ತಿರುಚಿದಾಗ-

“ಕೀಲಿಮಣೆಯ ಕುಟ್ಟಿಯೇ ಕಲಿತೆನೆಂಬೊಂದಗ್ಗಳಿಕೆ” (ಕುಮಾರವ್ಯಾಸ).
“ವಿದ್ಯುದೋಲೆ ಬಂದಿದೆ ನಮ್ಮ ಪದುಮನಾಭನದು” (ಶ್ರೀ ಪುರಂದರದಾಸರು).
“ಹೊಸತು ಗಣಕದಲಿ ನಿನ್ನ ಹಳೆಯ ನುಡಿಯ ಕುಟ್ಟು” (ಮಂಜೇಶ್ವರ ಗೋವಿಂದ ಪೈ).
“ಕುಟ್ಟುವೆವು ನಾವು ಹೊಸ ಕೀಲಿಮಣೆಯೊಂದನು” (ಗೋಪಾಲಕೃಷ್ಣ ಅಡಿಗ).
“ವೈರಸ್ಸೋ, ವರ್ಮೋ, ಬಗ್ಗೋ ತಡೆಯೇನು ಎಲ್ಲವೂ ಬರಲೆಂದು ಸ್ವಾಗತಿಸಿದೆ” (ಕಯ್ಯಾರ ಕಿಂಞಣ್ಣ ರೈ).
“ಬ್ರೌಸರಿನ ಗುಂಡಿಯೊತ್ತಿ ಒಳಗೆ ಬಾ ವೀಕ್ಷಕನೆ ಶಿಲೆಯಲ್ಲವೀ ಜಾಲವು ಮಾಹಿತಿಯ ಭಂಡಾರವು” (ಕುವೆಂಪು).
“ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಆನ್‌ಲೈನ್ ಆಗಿರು” (ಕುವೆಂಪು).

ಡಾ. ಯು. ಬಿ. ಪವನಜ

Leave a Reply