Uncategorized | Vishva Kannada
ಆಪಲ್ ಐಫೋನ್ – ಪರ್ವತ ಪ್ರಸವ?
-ಡಾ. ಯು. ಬಿ. ಪವನಜ
ಕೆಲವು ಕಂಪೆನಿಗಳಿವೆ ಏನು ಮಾಡಿದರೂ ಸುದ್ದಿಯಾಗುತ್ತದೆ. ಈ ಪಟ್ಟಿಯಲ್ಲಿ ಆಪಲ್ ಕಂಪೆನಿಯ ಹೆಸರೂ ಸೇರಿದೆ. ಆಪಲ್ ಕಂಪೆನಿ ಒಂದು ಕಾಲದಲ್ಲಿ ವೈಯಕ್ತಿಕ ಗಣಕಗಳು (ಪರ್ಸನಲ್ ಕಂಪ್ಯೂಟರ್) ಮನೆಮಾತಾಗುವಂತೆ ಮಾಡಿದ ಕಂಪೆನಿ. ಐಬಿಎಂ ಮತ್ತು ಮೈಕ್ರೋಸಾಫ್ಟ್ನವರ ಹೊಡೆತದಿಂದಾಗಿ ತತ್ತರಿಸಿ, ಇನ್ನೇನು ಬಾಗಿಲು ಹಾಕಬೇಕೆಂದುಕೊಂಡಿದ್ದಾಗ ಐಪ್ಯಾಡ್ ಮೂಲಕ ಮತ್ತೆ ಚೇತರಿಸಿಕೊಂಡಿತು. ಎಂಪಿ-3 ಪ್ಲೇಯರ್ಗಳ ಲೋಕದಲ್ಲಿ ಐಪ್ಯಾಡ್ ತುಂಬ ಖ್ಯಾತಿಯನ್ನು ಹೊಂದಿದೆ. ಈ ಖ್ಯಾತಿಯನ್ನೇ ಬಂಡವಾಳವನ್ನಾಗಿಸಿಕೊಂಡು ಆಪಲ್ ಕಂಪೆನಿ ಇತ್ತೀಚೆಗೆ ಐಫೋನ್ ಎಂಬ ಹೆಸರಿನ ಮೊಬೈಲ್ ಫೋನ್ ತಯಾರಿಸಿ ಅಮೆರಿಕಾದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಆಪಲ್ ಐಪ್ಯಾಡ್ನ ಜನಪ್ರಿಯತೆ ಎಷ್ಟಿದೆಯೆಂದರೆ ಐಫೋನ್ ಬಿಡುಗಡೆಯ ದಿನ ಬೆಳಿಗ್ಗೆ 5 ಘಂಟೆಯಿಂದಲೇ ಜನ ಅಂಗಡಿಗಳ ಮುಂದೆ ಸಾಲು ನಿಂತಿದ್ದರು. ಮೊದಲ ವಾರದಲ್ಲೇ ಲಕ್ಷಕ್ಕಿಂತ ಅಧಿಕ ಐಫೋನ್ ಮಾರಾಟವಾಗಿತ್ತು. ಐಫೋನ್ನಲ್ಲಿ ಅಂತಹದ್ದೇನಿದೆ? ಅದನ್ನೇ ಈಗ ಸ್ವಲ್ಪ ಸ್ಥೂಲವಾಗಿ ಪರಿಶೀಲಿಸೋಣ.
ಚುಟುಕವಾಗಿ ಹೇಳುವುದಾದರೆ ಐಪ್ಯಾಡ್ ಮತ್ತು ಮೊಬೈಲ್ ಫೋನ್ಗಳಿಗೆ ಕಸಿ ಮಾಡಿದರೆ ಆಗ ಐಫೋನ್ ಆಗುತ್ತದೆ. ಐಫೋನ್ನಲ್ಲಿ ಆಪಲ್ನದ್ದೆ ಹಕ್ಕುಸ್ವಾಮ್ಯವಾಗಿರುವ ಐಟ್ಯೂನ್ ಮಾತ್ರವಲ್ಲದೆ ಎಂಪಿ-3 ವಿಧಾನದ ಹಾಡುಗಳನ್ನೂ ಆಲಿಸಬಹುದು. ಹಾಡುಗಳನ್ನು ಶೇಖರಿಸಲು 4 ಅಥವಾ 8 ಗಿಗಾಬೈಟ್ಗಳಷ್ಟು ಜಾಗವಿದೆ. ಅದರ ಪರದೆಯಂತೂ 480 x 320 ಪಿಕ್ಸೆಲ್ಗಳ ರೆಸೊಲೂಶನ್ ಹೊಂದಿದೆ. ಅಂದರೆ ಉತ್ತಮ ಗುಣಮಟ್ಟದಲ್ಲಿ ಚಲನಚಿತ್ರಗಳನ್ನು ಅಂಗೈಯಲ್ಲೇ ನೋಡಬಹುದು. 2 ಮೆಗಾಪಿಕ್ಸೆಲ್ ಕ್ಯಾಮರಾವೂ ಇದೆ.
ಐಫೋನ್ನ ಇನ್ನೊಂದು ಅದ್ಭುತ ಸಂಶೋಧನೆಯೆಂದರೆ ಇದರಲ್ಲಿ ಇತರೆ ಫೋನುಗಳಲ್ಲಿರುವಂತೆ ಯಾವುದೇ ಅಂಕಿ ಗುಂಡಿ (ಬಟನ್) ಇಲ್ಲ. ಫೋನು ಸಂಖ್ಯೆ ಒತ್ತುವುದು, ಹಾಡುಗಳ ಆಯ್ಕೆ, ಎಸ್ಎಂಎಸ್ ಕಳುಹಿಸಲು ಅಕ್ಷರಗಳನ್ನು ಒತ್ತುವುದು ಇವೆಲ್ಲವನ್ನೂ ಇದರ ಟಚ್ಸ್ಕ್ರೀನ್ ಮೂಲಕವೇ ಮಾಡಬೇಕು. ಟಚ್ಸ್ಕ್ರೀನನ್ನು ಅಳವಡಿಸುವುದರಲ್ಲೂ ಐಫೋನ್ ಪ್ರಥಮವಲ್ಲ. ಆದರೆ ಅದನ್ನು ಬಳಸುವ ಹೊಸ ವಿಧಾನದಲ್ಲಿ ಇದು ಪ್ರಥಮ. ಇದರ ಪರದೆಯಲ್ಲಿ ಬೆರಳನ್ನು ಒತ್ತಿ ಜಾರಿಸುವ ಮೂಲಕ ಪರದೆಯಲ್ಲಿ ಚಿತ್ರಿಕೆಗಳು (ಐಕಾನ್) ಜಾರಿ ಅವುಗಳ ಜಾಗದಲ್ಲಿ ಬೇರೆ ಚಿತ್ರಿಕೆಗಳು ಬರುತ್ತವೆ. ಅವನ್ನು ಒತ್ತುವ ಮೂಲಕ ಆ ಚಿತ್ರಿಕೆಗಳು ಏನನ್ನು ಸೂಚಿಸುತ್ತವೆಯೋ ಆ ಕೆಲಸ ಮಾಡಬಹುದು. ಫೋನು ಕರೆ ಮಾಡಲೂ ಇದೇ ವಿಧಾನವನ್ನು ಬಳಸಬೇಕು.
ಇಷ್ಟೆಲ್ಲ ಇದ್ದರೂ ಐಫೋನ್ ತನ್ನ ದುಬಾರಿ ಬೆಲೆಯನ್ನು (600 ಡಾಲರು) ಸಮರ್ಥಿಸಿಕೊಳ್ಳಲಾರದು. ಈಗಾಗಲೆ ಅದರ ಬ್ಯಾಟರಿ ಬಗ್ಗೆ ದೂರುಗಳು ಬಂದಿವೆ. ಹಲವು ಪ್ರಮುಖ ಸವಲತ್ತುಗಳು ಇದರಲ್ಲಿಲ್ಲ. ಅವುಗಳೆಂದರೆ – ಉತ್ತಮ ನಿಸ್ತಂತು (ವೈರ್ಲೆಸ್) ಸಂಪರ್ಕ ವ್ಯವಸ್ಥೆ, ಧ್ವನಿ ಮೂಲಕ ಕರೆ, ಬ್ಲೂಟೂತ್ ಮೂಲಕ ಫೈಲ್ ವರ್ಗಾವಣೆ, ಇತ್ಯಾದಿ. ಆಪಲ್ ಕಂಪೆನಿಗೆ ಅತಿ ವಿಧೇಯವಾಗಿರುವವರು ಮತ್ತು ಈಗಾಗಲೆ ಐಪ್ಯಾಡ್ನ ಅಭಿಮಾನಿಗಳಾಗಿರುವವರು ಮಾತ್ರ ಇದರ ದುಬಾರಿ ಬೆಲೆ ನೀಡಿ ಕೊಂಡುಕೊಂಡಿದ್ದಾರೆ. ಭಾರತದಲ್ಲಂತೂ ಇದು ಸದ್ಯಕ್ಕೆ ಲಭ್ಯವಿಲ್ಲ. ಇದರ ಬಹುಪಾಲು ಗುಣವಿಶೇಷಗಳನ್ನು ಉಳ್ಳಂತಹ ಎಚ್ಟಿಸಿ ಟಚ್ ಫೋನ್ ಈಗಾಗಲೇ ಭಾರತದಲ್ಲಿ ಲಭ್ಯವಿದೆ. ಅದರ ಬಗ್ಗೆ ಮುಂದಿನ ಸಂಚಿಕೆಯಲ್ಲಿ ನೋಡೋಣ.
The post ಆಪಲ್ ಐಫೋನ್ – ಪರ್ವತ ಪ್ರಸವ? first appeared on Vishva Kannada.
ಮೈಕ್ರೋಸಾಫ್ಟ್ ಝೂನ್
– ಡಾ. ಯು. ಬಿ. ಪವನಜ
ಮೈಕ್ರೋಸಾಫ್ಟ್ ಕಂಪೆನಿ ತಂತ್ರಾಂಶ (ಸಾಫ್ಟ್‌ವೇರ್) ತಯಾರಿಕೆಗೆ ಜಗತ್ಪ್ರಸಿದ್ಧ. ಅವರು ಕೆಲವು ಯಂತ್ರಾಂಶಗಳನ್ನೂ (ಹಾರ್ಡ್‌ವೇರ್) ತಯಾರಿಸುತ್ತಾರೆ ಎನ್ನುವ ವಿಷಯ ಅಷ್ಟು ಪ್ರಚಾರ ಪಡೆದಿಲ್ಲ.  ಮೈಕ್ರೋಸಾಫ್ಟ್ ಕಂಪೆನಿ ಮೌಸ್ ಮತ್ತು ಕೀಬೋರ್ಡ್‌ಗಳನ್ನು ಹಲವು ವರ್ಷಗಳಿಂದ ತಯಾರಿಸುತ್ತಿದೆ. ಅವುಗಳ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಯಾಗಿರುವುದು ಝೂನ್ (Zune). ಇದನ್ನು ಆಪಲ್ ಕಂಪೆನಿಯ ತುಂಬ ಖ್ಯಾತವಾಗಿರುವ ಐಪಾಡ್‌ಗೆ ಪ್ರತಿಸ್ಪರ್ಧಿಯಾಗಿ ತಯಾರಿಸಲಾಗಿದೆ. ಆಪಲ್ ಐಪಾಡ್ ಮತ್ತು ಮೈಕ್ರೋಸಾಫ್ಟ್ ಝೂನ್ ಎರಡೂ ಸಂಗೀತ ಮತ್ತು ಚಲನಚಿತ್ರಗಳನ್ನು ಸಂಗ್ರಹಿಸಿಟ್ಟು ಬೇಕಾದಾಗ ಪ್ಲೇ ಮಾಡುವ ಕಿಸೆಯಲ್ಲಿ ಹಿಡಿಸಬಹುದಾದ ಪುಟ್ಟ ಸಲಕರಣೆಗಳಾಗಿವೆ.
ಝೂನ್ ಮೂರು ಇಂಚು ಗಾತ್ರದ ಪರದೆ ಹೊಂದಿದೆ. ಅದರ ಪರದೆಯ ಉದ್ದ ಮತ್ತು ಅಗಲದ ಅನುಪಾತ 4:3 ಇದೆ. ಪರದೆ 320 x 240 ಪಿಕ್ಸೆಲ್‌ಗಳ ರೆಸೊಲೂಶನ್ ಹೊಂದಿದೆ. ಇದು ಬಣ್ಣದಲ್ಲಿದೆ. ಅಂದರೆ ಬಣ್ಣದ ಚಲನಚಿತ್ರ ಮತ್ತು ಸಾಮಾನ್ಯ ಚಿತ್ರಗಳನ್ನು ವೀಕ್ಷಿಸಬಹುದು. ಆಪಲ್ ಐಪಾಡ್‌ಗಿಂತ ಗಾತ್ರದಲ್ಲಿ ಇದು ಸ್ವಲ್ಪ ದೊಡ್ಡದಾಗಿದೆ.  ಬ್ಯಾಟರಿಯನ್ನು ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದ ಮೇಲೆ ಸುಮಾರು 14 ಘಂಟೆಗಳ ಕಾಲ ಸಂಗೀತ  ಕೇಳಬಹುದು. ಚಲನಚಿತ್ರವಾದರೆ ಸುಮಾರು 4 ಘಂಟೆಗಳ ಕಾಲ ನೋಡಬಹುದು. ಬ್ಯಾಟರಿ ಚಾರ್ಜ್ ಮಾಡಲು ಸುಮಾರು ಮೂರು ಘಂಟೆ ಸಮಯ ಹಿಡಿಯುತ್ತದೆ.
ಸಂಗೀತದ, ಚಿತ್ರಗಳ ಮತ್ತು ಚಲನಚಿತ್ರಗಳ ಹಲವು ಪ್ರಕಾರಗಳ ಫೈಲುಗಳನ್ನು ಇದು ಬೆಂಬಲಿಸುತ್ತದೆ. ಇವುಗಳಲ್ಲಿ ತುಂಬ ಜನಪ್ರಿಯವಾದ ಎಂಪಿ3 (MP3), ವಿಂಡೋಸ್ ಮೀಡಿಯಾ, AAC, ಇತ್ಯಾದಿ ಸೇರಿವೆ. ಚಿತ್ರಗಳಲ್ಲಿ ಜೆಪಿಎಜಿ (JPEG) ಯನ್ನು ಮಾತ್ರ ಇದು ಬೆಂಬಲಿಸುತ್ತದೆ. ಸಾಮಾನ್ಯವಾಗಿ ಎಲ್ಲರೂ ಚಿತ್ರಗಳಿಗೆ ಬಳಸುವುದು ಇದೇ ವಿಧಾನವನ್ನೆ. ಚಲನಚಿತ್ರಗಳಲ್ಲಿ ವಿಂಡೋಸ್ ಮೂವಿ (WMV), ಎಂಪಿ-4 (MPEG-4) ಮತ್ತು ಡಿವ್‌ಎಕ್ಸ್ (DIVX) ಪ್ರಕಾರಗಳನ್ನು ಇದು ಬೆಂಬಲಿಸುತ್ತದೆ.
ಆಪಲ್ ಐಪಾಡ್‌ನಲ್ಲಿ ಇಲ್ಲದ ಎರಡು ಬಹುಮುಖ್ಯವಾದ ಸವಲತ್ತುಗಳು ಝೂನ್‌ನಲ್ಲಿವೆ. ನಿಸ್ತಂತು ಅರ್ಥಾತ್ ವಯರ್‌ಲೆಸ್  (WiFi, 802.11 b/g) ಸೌಲಭ್ಯವನ್ನು ಬಳಸಿ ಇನ್ನೊಂದು ಝೂನ್ ಅಥವಾ ಕಂಪ್ಯೂಟರ್ ಜೊತೆ 30 ಅಡಿಗಳಷ್ಟು ದೂರದ ವರೆಗೆ ತಂತಿರಹಿತವಾಗಿ ಸಂಪರ್ಕ ಮಾಡಬಹುದು, ಫೈಲ್‌ಗಳ ವಿನಿಮಯ ಮಾಡಿಕೊಳ್ಳಬಹುದು. ಇನ್ನೊಂದು ಸೌಲಭ್ಯವೆಂದರೆ ತುಂಬ ಜನರು ಬಯಸುವ ಎಫ್‌ಎಂ ರೇಡಿಯೋ.
ಝೂನ್‌ನಲ್ಲಿ 30 ಗಿಗಾಬೈಟ್ ಗಾತ್ರದ ಹಾರ್ಡ್‌ಡಿಸ್ಕ್ ಇದೆ. ಎರಡೂವರೆ ಘಂಟೆಗಳ ಒಂದು ಚಲನಚಿತ್ರ ಸುಮಾರು ಒಂದೂವರೆ ಗಿಗಾಬೈಟ್‌ನಷ್ಟಿರುತ್ತದೆ. ಅಂದರೆ ಒಂದು ಝೂನ್‌ನಲ್ಲಿ ಕನಿಷ್ಠ ಇಪ್ಪತ್ತು ಚಲನಚಿತ್ರಗಳನ್ನು ಶೇಖರಿಸಿಡಬಹುದು. ಝೂನ್‌ನ ಪರದೆಯ ಗಾತ್ರಕ್ಕೆ ಚಲನಚಿತ್ರವನ್ನು ಸಂಕುಚಿತಗೊಳಿಸಿದರೆ ಒಂದು ಚಲನಚಿತ್ರಕ್ಕೆ ಕೇವಲ 250 ಮೆಗಾಬೈಟ್‌ನಷ್ಟು ಜಾಗ ಸಾಕು. ಅಂದರೆ ಇಂತಹ ಸುಮಾರು 120 ಚಲನಚಿತ್ರಗಳನ್ನು ಶೇಖರಿಸಿಡಬಹುದು. ಐದು ನಿಮಿಷಗಳ ಒಂದು ಹಾಡಿಗೆ ಸುಮಾರು 5 ಮೆಗಾಬೈಟ್‌ನಷ್ಟು ಜಾಗ ಸಾಕು. ಅಂದರೆ ಒಂದು ಝೂನ್‌ನಲ್ಲಿ ಸುಮಾರು 6000 ಹಾಡುಗಳನ್ನು ಶೇಖರಿಸಿಡಬಹುದು. ಬಹುಶಃ ಒಂದು ಎಫ್‌ಎಂ ರೇಡಿಯೋ ಕೇಂದ್ರಕ್ಕೆ ಒಂದು ವರ್ಷಕ್ಕೆ ಸಾಕಾಗುವಷ್ಟು ಹಾಡುಗಳನ್ನು ಒಂದು ಝೂನ್‌ನಲ್ಲಿ ಸಂಗ್ರಹಿಸಿಡಬಹುದು.
ಝೂನ್ ಮೂರು ಬಣ್ಣಗಳಲ್ಲಿ -ಕಪ್ಪು, ಕಂದು ಮತ್ತು ಬಿಳಿ -ದೊರೆಯುತ್ತದೆ.
ಝೂನ್ ಬಗ್ಗೆ ಹೆಚ್ಚಿನ ವಿವರಗಳಿಗೆ ಈ ತಾಣಗಳಿಗೆ ಭೇಟಿ ನೀಡಿ – www.zune.net, www.zunemax.com. ಝೂನ್ ಮತ್ತು ಆಪಲ್ ಐಪಾಡ್‌ಗಳ ಮಧ್ಯೆ ಹೋಲಿಸಿ ನೋಡಲು ಈ ತಾಣಕ್ಕೆ ಭೇಟಿ ನೀಡಿ – www.zunescene.com/comparison.
The post ಮೈಕ್ರೋಸಾಫ್ಟ್ ಝೂನ್ first appeared on Vishva Kannada.
ಅಭಿವೃದ್ಧಿಯ ರಥದ ಚಕ್ರದಡಿ ಸಿಕ್ಕಿಬಿದ್ದವರು – ೨
ಕೃಷಿನೀತಿ ತಜ್ಞ ದೇವಿಂದರ್ ಶರ್ಮಾ ಅವರು ಈಚೆಗೆ ಬೆಂಗಳೂರಿನಲ್ಲಿ ನೀಡಿದ ಉಪನ್ಯಾಸದ ಆಯ್ದ ಭಾಗಗಳು.
ನಿರೂಪಣೆ: ನಾಗೇಶ ಹೆಗಡೆ
ಏನಾಗಿದೆ ಕೃಷಿಕರಿಗೆ ಮಾರ್ಗದರ್ಶನ ನೀಡುವ ನಮ್ಮ ಸರಕಾರೀ ಧುರೀಣರಿಗೆ? ಅಥವಾ ಅವರಿಗೆ ಉಪದೇಶ ಮಾಡುವ ಆರ್ಥಿಕ ತಜ್ಞರಿಗೆ? ಅಥವಾ ಕೃಷಿಕರಿಗೆ ಮಾರ್ಗದರ್ಶನ ಮಾಡುವ ಕೃಷಿ ತಜ್ಞರಿಗೆ? ಏಕೆ ಅವರು ಅಮೆರಿಕ ಮತ್ತು ಯುರೋಪಿನ ಮಾದರಿಗಳನ್ನು ಒಪ್ಪಿಕೊಂಡು ಅವರದ್ದೇ ಆರ್ಥಿಕ ಸಲಹೆಗಳನ್ನು ಪಾಲಿಸುತ್ತ, ಅಲ್ಲಿನ ರೈತರ ಹೊಟ್ಟೆಯನ್ನು ತಂಪಾಗಿಸುವಂಥ ನೀತಿಯನ್ನೇ ನಮ್ಮ  ರೈತರ ಮೇಲೆ ಹೇರುತ್ತ ಬರುತ್ತಿದ್ದಾರೆ?
ನಮ್ಮ ದೇಶದ ಕೃಷಿರಂಗದ ದುಃಸ್ಥಿತಿಗೆ ಮುಖ್ಯ ಕಾರಣ ಏನು ಗೊತ್ತೆ? ಇಂದಿಗೂ ಅಮೆರಿಕ ಅಥವಾ ಬ್ರಿಟಿಷ್ ತಜ್ಞರು ಬರೆದ ಪಠ್ಯಪುಸ್ತಕಗಳನ್ನು ಓದಿಯೇ ನಮ್ಮ ಕೃಷಿ ವಿಜ್ಞಾನದ ವಿದ್ಯಾರ್ಥಿಗಳು ಪದವಿ ಪಡೆಯಬೇಕಾದ ಸ್ಥಿತಿ ಇದೆ. ಪಾಶ್ಚಾತ್ಯ ಕೃಷಿ ಪಂಡಿತರ ಸಲಹೆಗಳಿಂದಾಗಿಯೇ ನಮ್ಮಲ್ಲಿ ಏನೇನು ದುರವಸ್ಥೆಗಳಾಗಿವೆ ಎಂಬುದಕ್ಕೆ ಕೆಲವು ಕಾರಣಗಳನ್ನು ಕೊಡುತ್ತೇನೆ:
೧೯೬೬ರಲ್ಲಿ ನಮ್ಮಲ್ಲಿ ಹಸಿರು ಕ್ರಾಂತಿಯ ಬೀಜಗಳನ್ನು ಹೊರ ದೇಶಗಳಿಂದ ತರಿಸಿದೆವು. ‘ಅದರಿಂದ ಮತ್ತೇನೂ ದುಷ್ಪರಿಣಾಮ ಆಗಲಿಕ್ಕಿಲ್ಲ, ಎರೆಹುಳಗಳು ಸಾಯಬಹುದು ಅಷ್ಟೆ’ ಎಂಬ ಉಪದೇಶ ಈ ತಜ್ಞರಿಂದ ನಮಗೆ ಸಿಕ್ಕಿತು. ಸರಿ, ಗಿಡ್ಡ ತಳಿಯ ಭತ್ತದ ತಳಿಗಳು ಬಂದವು. ಹಿಂದೆಲ್ಲ ನಮ್ಮ ರೈತರು ಬೀಜಗಳನ್ನು ಹೊಲದಲ್ಲಿ ಎರಚುತ್ತಿದ್ದರು. ಹಾಗೆ ಮಾಡುವುದು ಸರಿಯಲ್ಲ, ಸಾಲಾಗಿ ನಾಟಿ ಮಾಡಿ ಎಂದು ಈ ತಜ್ಞರು ಹೇಳಿದರು. ಜತೆಗೆ ಹೇರಳ ರಸಗೊಬ್ಬರ, ನೀರು, ಕೀಟನಾಶಕ ಸುರಿಯಲು ಸಲಹೆ ಮಾಡಿದರು. ಅವೆಲ್ಲ ಸುರಿದರೆ ಫಸಲು ಚೆನ್ನಾಗಿ ಬರುತ್ತದೆ ನಿಜ. ಆದರೆ ಸಾಲಾಗಿ ಏಕೆ ನಾಟಿ ಮಾಡಬೇಕು? ಅದಕ್ಕೆಂದು ಹೆಚ್ಚಿನ ಕೃಷಿ ಕೂಲಿಕಾರರು ಬೇಕು. ದಾರ ಕಟ್ಟಿ ಕೆಸರಿನಲ್ಲಿ ನಾಟಿ ಮಾಡಲು ಅಪಾರ ಕೂಲಿ ವೆಚ್ಚವಾಗುತ್ತದೆ. ಸಾಲಾಗಿ ನೆಟ್ಟ ಮಾತ್ರಕ್ಕೇ ಇಳುವರಿ ಜಾಸ್ತಿ ಬರುವುದಿಲ್ಲ. ಆದರೂ ಯಾಕೆ ಈ ನಿಯಮ ಜಾರಿಯಲ್ಲಿದೆ?
ಫಿಲಿಪ್ಪೀನ್ಸ್‌ನ ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆಯ ನಿರ್ದೇಶಕಾಗಿದ್ದ ಗುರುದೇಬ್ ಘೋಷ್ ಅವರಿಗೆ ನಾನು ಹಿಂದೊಮ್ಮೆ ಈ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಿದ್ದೆ. ಕೊನೆಗೆ ಅವರು ಚುಟುಕಾಗಿ ಉತ್ತರಿಸಿದರು: ‘ಟ್ರಾಕ್ಟರ್ ತಯಾರಿಕಾ ಉದ್ಯಮಕ್ಕೆ ನೆರವಾಗಲಿ ಎಂದೇ ಈ ನಿಯಮ!’ ಎಂದರು. ನಿಜವೇ ಇರಬೇಕು. ಶಿಸ್ತಿನ ಸಾಲಿನಲ್ಲಿ ನಾಟಿ ಮಾಡಿದರೆ ಮಾತ್ರ ಸಾಲಿನ ಮಧ್ಯೆ ಟ್ರ್ಯಾಕ್ಟರ್ ಸಲೀಸಾಗಿ ಓಡಾಡುತ್ತದೆ. ನಿರೀಕ್ಷೆಯಂತೆ ಅನುಕೂಲಸ್ಥ ರೈತರು ಟ್ರಾಕ್ಟರ್ ಮೋಡಿಗೆ ಬಿದ್ದರು. ಅಷ್ಟೇನೂ ಅನುಕೂಲವಿಲ್ಲದ ರೈತರಿಗೂ ಅದು ಆಕರ್ಷಕ ಎನಿಸಿತು. ಬ್ಯಾಂಕ್‌ಗಳೂ ತಾವಾಗಿ ಟ್ರ್ಯಾಕ್ಟರ್ ಕೊಳ್ಳಲು ಸಾಲ ಕೊಡಲು ಮುಂದಾದರು. ತಾವು ಸಾಲ ಕೊಟ್ಟ ಟ್ರ್ಯಾಕ್ಟರಿಗೆ ಮಾಲೆ ಹಾಕಿ ಫೋಟೊ ತೆಗೆಸಿ ಪ್ರಚಾರ ಕೊಟ್ಟು ಬ್ಯಾಂಕ್‌ಗಳು ಉದ್ಧಾರವಾದರೇ ವಿನಾ ರೈತರ ಏಳಿಗೆಯಾಗಲಿಲ್ಲ. ಇಂದು ನಮ್ಮ ದೇಶದಲ್ಲಿ ಅಗತ್ಯಕ್ಕಿಂತ ಶೇಕಡಾ ೭೦ರಷ್ಟು ಟ್ರ್ಯಾಕ್ಟರ್‌ಗಳಿವೆ. ಆತ್ಮಹತ್ಯೆ ಮಾಡಿಕೊಳ್ಳುವವರಲ್ಲೂ ಟ್ರ್ಯಾಕ್ಟರ್ ಇಟ್ಟುಕೊಂಡವರ ಸಂಖ್ಯೆಯೇ ಜಾಸ್ತಿ ಇದೆ. ‘ಇನ್ನು ಮೇಲೆ ಟ್ರ್ಯಾಕ್ಟರ್‌ಗೆ ಸಾಲ ಕೊಡುವುದನ್ನು ನಿಲ್ಲಿಸಿ ಬಿಡಿ’ ಎಂದು ನಮ್ಮಂಥ ಕೆಲವರು ಬ್ಯಾಂಕ್‌ಗಳಿಗೆ ವಿನಂತಿ ಮಾಡಿಕೊಂಡೆವು. ಏನೂ ಪ್ರಯೋಜನವಾಗಲಿಲ್ಲ. ಸಾಲ ನಿಲ್ಲಿಸಲು ಬ್ಯಾಂಕ್‌ಗಳು ಖಡಾಖಂಡಿತ ನಿರಾಕರಿಸಿದವು.
ಕೀಟನಾಶಕಗಳದ್ದೂ ಇದೇ ಕತೆ. ಭತ್ತಕ್ಕೆ ಕೀಟನಾಶಕದ ಸಿಂಪಡನೆಯ ಅಗತ್ಯವೇ ಇಲ್ಲ. ಆದರೂ ರೈತರಿಗೆ ಅದೇನೋ ಮೋಡಿ ಮಾಡಲಾಗಿದೆ. ಬೆನ್ನಿಗೆ ಕಟ್ಟಿಕೊಳ್ಳುವ ಸಿಂಪಡನಾ ಯಂತ್ರಗಳು ಬಂದವು. ಉದ್ದ ಪಿಚಕಾರಿಯ ಮೂತಿ ಇರುವ ಸ್ಪ್ರೇಯರ್‌ಗಳು, ಅಗಲ ಸಿಂಪಡನೆಯ ಮೂತಿಯ ಸ್ಪ್ರೇಯರ್‌ಗಳು. ಹೇಗೇ ಸ್ಪ್ರೇ ಮಾಡಿದರೂ ಶೇಕಡಾ ೯೯.೯೯ರಷ್ಟು ಕೀಟನಾಶಕ ಎಲ್ಲ ಗಾಳಿಯಲ್ಲೇ ಸೇರಿ ಹೋಗುತ್ತದೆ. ಇಲ್ಲವೆ ನೀರಿಗೊ ಮಣ್ಣಿಗೊ ಸೇರ್ಪಡೆ ಆಗಿ ವಿಷವನ್ನು ಬೇಕಿಲ್ಲದ ಜಾಗಕ್ಕೆಲ್ಲ ಪಸರಿಸುತ್ತವೆ. ಹೇಗಿದ್ದರೂ ಸ್ಪ್ರೇ ಪಂಪ್ ಇದೆ ಎಂಬ ಒಂದೇ ಕಾರಣಕ್ಕೆ ಕೀಟನಾಶಕಗಳನ್ನು ಖರೀದಿಸಿ ತಂದು, ಅನಗತ್ಯವಾಗಿ ಭತ್ತಕ್ಕೆ ಸಿಂಪಡನೆ ಮಾಡಲಾಗುತ್ತದೆ. ಈ ಉದಾಹರಣೆಯಲ್ಲೂ ಸ್ಪ್ರೇ ಪಂಪ್‌ಗಳ ಮಾರಾಟದ ಜಾಲದಿಂದಾಗಿಯೇ ಕೀಟನಾಶಕದ ಬಳಕೆ ಅತಿಯಾಯಿತೇ ವಿನಾ ರೈತರ ಅಗತ್ಯದಿಂದಾಗಿ ಅಲ್ಲ. ಇಂಥ ಕೃಷಿ ಸಲಕರಣೆಗಳ ಮೇಲಿನ ಸಾಲದ ಹೊರೆಯಿಂದಾಗಿಯೇ ರೈತನ ಉತ್ಪಾದನೆಯ ವೆಚ್ಚ ಏರುತ್ತಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಭತ್ತದ/ಅಕ್ಕಿಯ ಬೆಲೆಯಲ್ಲಿ ಮಾತ್ರ ಏನೇನೂ ಏರಿಕೆಯಾಗಿಲ್ಲ.
ನಿಮಗಿದು ಗೊತ್ತೆ? ಕೃಷಿ ವಿಷಯ ಕುರಿತ ಏನೆಲ್ಲ ಬಗೆಯ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುವ ‘ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ’ (ಐಎಆರ್‌ಐ) ಇದುವರೆಗೆ ರೈತರ ಆತ್ಮಹತ್ಯೆಯ ವಿಷಯದಲ್ಲಿ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ. ಅವರಿಗೆ ರೈತರ ಕಷ್ಟನಷ್ಟಗಳ ಗೊಡವೆಯೇ ಬೇಕಿಲ್ಲ. ಅವರು ಟ್ರ್ಯಾಕ್ಟರ್ ಮಾರಾಟದ ವ್ಯವಸ್ಥೆ ಮಾಡುತ್ತಾರೆ. ಕೀಟನಾಶಕದ ಮಾರಾಟದ ಏರ್ಪಾಡು ಮಾಡುತ್ತಾರೆ. ಈಗ ಕುಲಾಂತರಿ ಫಸಲಿನ ಜಾಹೀರಾತು ಮಾಡುತ್ತಿದ್ದಾರೆ.
ನಾವೀಗ ಈ ತಜ್ಞರಿಗೆ ಹೇಳಬೇಕಾಗಿದೆ: ‘ಮಾನ್ಯರೆ, ಇಷ್ಟು ವರ್ಷಗಳ ಕಾಲ ಉದ್ದಿಮೆಗಳು ಬದುಕುಳಿಯಲು ನೀವು ರೈತರ ಹಿತವನ್ನು ಬಲಿಗೊಟ್ಟಿರಿ. ಒಂದೊಂದು ಬ್ಲಾಕ್‌ನಿಂದಲೂ ಸರಾಸರಿ ೭೦ ಲಕ್ಷ ರೂಪಾಯಿಗಳು ರೈತರ ಕಿಸೆಯಿಂದ ಉದ್ದಿಮೆಗಳಿಗೆ ಹರಿದು ಹೋಗುವಂತೆ ಮಾಡಿದಿರಿ. ಇನ್ನಾದರೂ ಅವನ್ನೆಲ್ಲ ನಿಲ್ಲಿಸಿ, ರೈತರು ಬದುಕುಳಿಯುವಂಥ ಏನಾದರೂ ಉಪಾಯ ಮಾಡಿ’ ಎನ್ನಬೇಕಾಗಿದೆ. ಮತ್ತೇನಿಲ್ಲ ‘ಈ ೭೦ ಲಕ್ಷ ರೂಪಾಯಿ ಆಯಾ ಬ್ಲಾಕ್‌ಗಳಲ್ಲಿ ರೈತರ ಬಳಿಯೇ ಉಳಿದರೂ ಸಾಕು ದೊಡ್ಡ ಉಪಕಾರವಾಗುತ್ತದೆ. ದಯವಿಟ್ಟು ಈ ಉದ್ಯಮಗಳು ಹಳ್ಳಿಗೆ ಬರದಂತೆ ನೋಡಿಕೊಳ್ಳಿ’ ಎನ್ನಬೇಕಾಗಿದೆ.
೧೯೮೮ರಲ್ಲಿ ಇಂಡೋನೇಶ್ಯ ಸರಕಾರ ಇಂಥದೇ ನಿರ್ಣಯವನ್ನು ಕೈಗೊಂಡಿತು. ಅಲ್ಲೂ ಕೀಟನಾಶಕದ ಹಾವಳಿ ಅತಿಯಾಗಿತ್ತು. ಭತ್ತಕ್ಕೆ ಕಂದು ಜಿಗಿ ಹುಳು ಬರುತ್ತದೆಂಬ ಭೀತಿ ಹುಟ್ಟಿಸಿ, ೫೭ ಬಗೆಯ ಕೀಟನಾಶಕಗಳನ್ನು ರೈತರು ಭತ್ತದ ಗದ್ದೆಗೆ ಎರಚುವಂತೆ ಮಾಡಲಾಗಿತ್ತು. ರೈತರು ರೋಸಿ ಹೋಗಿದ್ದರು. ಒಂದು ಕಠಿಣ ನಿರ್ಧಾರವನ್ನು ಕೈಗೊಂಡು ಅಲ್ಲಿನ ಸರಕಾರ ಎಲ್ಲ ಕೀಟನಾಶಕಗಳನ್ನೂ ನಿಷೇಧಿಸಿತು. ಅಪ್ಪಟ ನಿಷೇಧ! ಅಚ್ಚರಿಯ ಸಂಗತಿ ಏನು ಗೊತ್ತೆ? ಭತ್ತದ ಉತ್ಪಾದಕತೆ ಶೇಕಡಾ ೨೦ ರಷ್ಟು ಹೆಚ್ಚಾಯಿತು.
ಐಎಆರ್‌ಐಯ ಯಾವ ತಜ್ಞರೂ ನಮ್ಮ ರೈತರಿಗೆ ಇಂಥ ದೇಶಗಳ ಉದಾಹರಣೆಗಳನ್ನು ಕೊಡುವುದಿಲ್ಲ. ಬದಲಿಗೆ ಇಸ್ರೇಲ್ ದೇಶದ ಉದಾಹರಣೆ ಕೊಡುತ್ತಾರೆ. ಅಲ್ಲಿ ಮರುಭೂಮಿ ನಳನಳಿಸುತ್ತದಂತೆ. ಎಲ್ಲಾ ಕಡೆ ಹನಿ ನೀರಾವರಿಯ ವ್ಯವಸ್ಥೆ ಇದೆಯಂತೆ. ಇದು ಜಿನುಗು ನೀರಾವರಿಯ ಪೈಪು, ಕೊಳವೆ, ಪಂಪ್‌ಗಳನ್ನು ಮಾರಾಟ ಮಾಡುವವರ ಅನುಕೂಲಕ್ಕಾಗಿ ನೀಡುವ ಉದಾಹರಣೆಯೇ ಹೊರತೂ, ರೈತರ ಉದ್ಧಾರಕ್ಕಲ್ಲ. ಇಸ್ರೇಲಿನಲ್ಲಿ ರೈತ ಬದುಕಿದ್ದಾನೆ ಏಕೆಂದರೆ ಅಮೆರಿಕದವರು ಇಸ್ರೇಲಿ ರೈತರಿಗೆ ಹೇರಳ ಹಣ ನೀಡುತ್ತಾರೆ. ಅಷ್ಟೊಂದು ಹಣ ಸುರಿದರೆ ಮರುಭೂಮಿ ನಳನಳಿಸುತ್ತಿದೆ ನಂಬೋಣ. ಆದರೆ, ಅದೇ ಕ್ರಮಗಳನ್ನು ಇಲ್ಲೂ ಅನುಸರಿಸಲು ಹೋದರೆ, ಮೊದಲೇ ನಳನಳಿಸುತ್ತಿದ್ದ ಇಲ್ಲಿನ ನಂದನವನವನ್ನು ಮರುಭೂಮಿಯಾಗಿ ಮಾಡುತ್ತೇವಷ್ಟೆ.
ನಮ್ಮಲ್ಲಿಲ್ಲದ್ದನ್ನು ನಮ್ಮ ರೈತರ ಮೇಲೆ ಹೇರುವ, ನಮ್ಮದನ್ನು ಹೆರವರಿಗೆ ಹೇರುವ ಕೆಲಸವನ್ನು ನಮ್ಮ ತಜ್ಞರು ಸಲೀಸಾಗಿ ಮಾಡುತ್ತಾರೆ. ಆಫ್ರಿಕದ ಎರೆಹುಳುಗಳನ್ನು ಇಲ್ಲಿಗೆ ತರಿಸಿ, ನಮ್ಮ ರೈತರು ಲಾಭ ಮಾಡಿಕೊಂಡ ಬಗ್ಗೆ  ಪ್ರಚಾರ ಅದೆಷ್ಟು ಜೋರಾಗಿ ನಡೆಯಿತೆಂದರೆ, ಅಮೆರಿಕದ ಕೆಲ ರೈತರೂ ಮರುಳಾಗಿ ಇಲ್ಲಿಂದ ಎರೆಹುಳಗಳನ್ನು ಎರವಲು ಪಡೆದು ತಮ್ಮ ಭೂಮಿಯಲ್ಲಿ ಬಿಟ್ಟರು. ಅಮೆರಿಕದ ನೆಲದಲ್ಲಿ ಎರೆಹುಳು ಇಲ್ಲವೇ ಇಲ್ಲ. ಇಡೀ ದೇಶದ ಎಲ್ಲೂ ಇಲ್ಲ. ಎರಡು ವರ್ಷಗಳ ಹಿಂದೆ ಅವರು ಎರೆಹುಳುಗಳನ್ನು ಸಾಕಲು ಯತ್ನಿಸಿ ವಿಫಲರಾಗಿ ಈಗ ಆ ಯತ್ನವನ್ನೇ ಕೈಬಿಟ್ಟಿದ್ದಾರೆ. ನಾವು ಯುರೋಪ್ ದೇಶಗಳಿಂದ ದನಗಳನ್ನು ತರಿಸಿಕೊಂಡು ಇಡೀ ದೇಶದ ತುಂಬೆಲ್ಲಾ ಪರಕೀಯ ತಳಿಗಳನ್ನೇ ತುಂಬಿದ್ದೇವೆ. ಇಂದು ನಮ್ಮಲ್ಲಿ ವಿದೇಶೀ ಮೂಲದ ೩೫ ಲಕ್ಷ ದನಗಳಿವೆ. ನಮ್ಮ ಮೂಲ ತಳಿಗಳು ಎಲ್ಲಿಗೆ ಹೋದವೊ ಯಾರೂ ಲೆಕ್ಕ ಇಟ್ಟಿಲ್ಲ.
ನಾನು ಹೇಳುತ್ತೇನೆ ಕೇಳಿ. ನಮ್ಮ ದೇಶದ ಕಿಲಾರಿ ಮತ್ತು ಒಂಗೋಲ್‌ನಂಥ ದನಗಳ ತಳಿಗಳು ದೂರದ ಬ್ರಝಿಲ್ ದೇಶದಲ್ಲಿ ಪ್ರಫುಲ್ಲವಾಗಿ ಬೆಳೆಯುತ್ತಿವೆ. ಅಲ್ಲಿನವರು ಈ ತಳಿಗಳನ್ನು ಬೇರೆ ದೇಶಗಳಿಗೂ ರಫ್ತು ಮಾಡುತ್ತಿದ್ದಾರೆ. ಇಂದಿನ ಲೆಕ್ಕಾಚಾರದ ಪ್ರಕಾರ ಭಾರತೀಯ ಮೂಲದ ದನಗಳ ಅತಿ ದೊಡ್ಡ ರಫ್ತುದಾರ ಯಾರೆಂದರೆ ಬ್ರಝಿಲ್ ದೇಶ. ಈಗ ನಾವು ನಮ್ಮದೇ ಮೂಲದ ಅಪರೂಪದ ತಳಿ ಬೇಕೆಂದಿದ್ದರೆ ಬ್ರಝಿಲ್‌ನಿಂದ ಆಮದು ಮಾಡಿಕೊಳ್ಳಬೇಕು.
ಹಿಂದಿನ ಇಂಥ ಎಲ್ಲ ತಪ್ಪುಗಳನ್ನು ಸರಿಪಡಿಸಿ, ಮಾದರಿ ಕೃಷಿ ಎಂದರೇನೆಂದು ನಮ್ಮ ರೈತರಿಗೆ ತೋರಿಸಲೆಂದು ಈಗ ಹೊಸ ‘ಎಸ್‌ಇಝಡ್’ ಯೋಜನೆಯನ್ನು ತಜ್ಞರು ರೂಪಿಸಿದ್ದಾರೆ.
ವಿಶ್ವಬ್ಯಾಂಕಿನ ಅಂದಾಜಿನ ಪ್ರಕಾರ, ಕ್ರಿ.ಶ. ೨೦೧೫ರ ವೇಳೆಗೆ ನಮ್ಮ ದೇಶದಲ್ಲಿ ಸುಮಾರು ೪೦ ಕೋಟಿ ಪ್ರಜೆಗಳು ಕೃಷಿಯನ್ನು ಬಿಟ್ಟು ಬೇರೆ ಉದ್ಯೋಗ ಹುಡುಕಿಕೊಂಡು ನಗರಗಳಿಗೆ ವಲಸೆ ಬರಲಿದ್ದಾರೆ. ಇದು, ಯುಕೆ, ಫ್ರಾನ್ಸ್ ಮತ್ತು ಜರ್ಮನಿಯ ಒಟ್ಟೂ ಜನಸಂಖ್ಯೆಯ ಎರಡು ಪಟ್ಟು! ಇದು ನಂಬಬಹುದಾದ ಸಂಖ್ಯೆಯೇ ಇರಬೇಕು. ಏಕೆಂದರೆ ನ್ಯಾಶನಲ್ ಸ್ಯಾಂಪಲ್ ಸರ್ವೆಯವರು ನಡೆಸಿದ ಸಮೀಕ್ಷೆಯ ಪ್ರಕಾರ, ಶೇಕಡಾ ೪೦ರಷ್ಟು ರೈತರು ಈಗಾಗಲೇ ರೋಸಿ ಹೋಗಿದ್ದಾರೆ. ಕೃಷಿಯನ್ನು ಬಿಟ್ಟು ಬೇರೇನಾದರೂ ಉದ್ಯೋಗ ಹುಡುಕಿಕೊಳ್ಳೋಣ ಎಂದಿದ್ದಾರೆ. ನಮ್ಮವರೇ ನಡೆಸಿದ ಅಧ್ಯಯನಗಳ ಪ್ರಕಾರ ತಮಿಳುನಾಡಿನ ಶೇ. ೭೦ರಷ್ಟು ರೈತರು, ಪಂಜಾಬಿನ ೬೫%, ಉತ್ತರ ಪ್ರದೇಶದ ಸುಮಾರು ೫೫% ರೈತರು ಬೇಸಾಯದ ವಣೆ ತಾಳಲಾರದೆ ನಗರಗಳಿಗೆ ಬರಲಿದ್ದಾರೆ. ಆಗ ‘ಕೃಷಿ ನಿರಾಶ್ರಿತರು’ ಎಂಬ ಹಣೆಪಟ್ಟಿಯೊಂದಿಗೆ ನಮ್ಮ ದೇಶದಲ್ಲಿ ಹೊಸದೊಂದು ಆತಂಕ ಸೃಷ್ಟಿಯಾಗಲಿದೆ. ಅಣೆಕಟ್ಟಿನ ನಿರಾಶ್ರಿತರು, ಪರಿಸರ ನಿರಾಶ್ರಿತರು ಎಲ್ಲರನ್ನು ಮೀರಿಸಿ ‘ಕೃಷಿ ನಿರಾಶ್ರಿತರು’ ನಗರಗಳಿಗೆ ಬರಲಿದ್ದಾರೆ.
ಅಗ್ರಿ ಬಿಸಿನೆಸ್ ಕಂಪನಿಗಳ ಕೃಪೆ ಇದು. ಜಗತ್ತಿನಲ್ಲಿ ಎಲ್ಲೂ ಈ ಕಂಪನಿಗಳು ರೈತರ ಜತೆ ಕೈಜೋಡಿಸಿ ಕೆಲಸ ಮಾಡಿದ್ದೇ ಇಲ್ಲ. ಇಂಥ ಕಂಪನಿಗಳು ಎಲ್ಲೆಲ್ಲಿ ಕಾಲಿಟ್ಟಿವೆಯೊ ಅಲ್ಲೆಲ್ಲ ರೈತರು ಗುಳೆ ಎದ್ದಿದ್ದಾರೆ. ಅದು ಅಮೆರಿಕ ಇರಲಿ, ಯುರೋಪ್ ಇರಲಿ, ಸರಕಾರಗಳು ಅಷ್ಟು ದೊಡ್ಡ ಮೊತ್ತವನ್ನು ಸಬ್ಸಿಡಿಯಾಗಿ ನೀಡಿದರೂ ರೈತರಿಗೆ ಬದುಕಲು ಸಾಧ್ಯವಾಗದಂಥ ಪರಿಸ್ಥಿತಿಯನ್ನು ಈ ಕಂಪನಿಗಳು ತಂದೊಡ್ಡುತ್ತವೆ. ನಮ್ಮಲ್ಲೂ ಅಂಥ ಕಂಪನಿಗಳಿಗೆ ದೊಡ್ಡ ಮಣೆ ಹಾಕುವ ಸಿದ್ಧತೆಗಳು ನಡೆದಿವೆ. ಎಸ್‌ಇಝಡ್ ಹೆಸರಿನಲ್ಲಿ ‘ಗುತ್ತಿಗೆ ಕೃಷಿ’ ದೊಡ್ಡ ಪ್ರಮಾಣದಲ್ಲಿ ಬರಲಿದೆ. ಅವರಿಗಾಗಿ ನಮ್ಮೆಲ್ಲ ಸಂಪನ್ಮೂಲಗಳನ್ನು -ಅಂದರೆ ನೀರು, ಜೀವಿ ವೈವಿಧ್ಯ, ಅರಣ್ಯ, ಬೀಜನಿಧಿ, ಕೃಷಿ ಮಾರುಕಟ್ಟೆ ಮತ್ತು ಖನಿಜ ಸಂಪತ್ತನ್ನು- ಧಾರೆ ಎರೆಯುವ ಯೋಜನೆಗಳು ರೂಪುಗೊಂಡಿವೆ. ಇಂಥ ಗುತ್ತಿಗೆದಾರರು ಅತಿ ನೀರು, ಅತಿ ಗೊಬ್ಬರ, ಅತಿ ಪ್ರಮಾಣದ ಪೀಡೆನಾಶಕಗಳನ್ನು ಬಳಸಿ, ಸಾಮಾನ್ಯ ರೈತರು ಬಳಸುವುದಕ್ಕಿಂತ ೧೫-೨೦ ಪಟ್ಟು ಒಳಸುರಿಗಳನ್ನು ಸುರಿದು ಸ್ವಲ್ಪವೇ ಅವಧಿಯಲ್ಲಿ ದೊಡ್ಡ ಲಾಭ ಮಾಡಿಕೊಂಡು, ನೆಲವನ್ನ ಬಂಜರು ಮಾಡಿ ಬೇರೆಡೆ ಹೊರಡುತ್ತಾರೆ. ಹಿಂದಿನ ಶತಮಾನದಲ್ಲಿ ವನವಾಸಿಗಳು ಅನುಸರಿಸುತ್ತಿದ್ದ ‘ವಲಸೆ ಕೃಷಿ’ (ಝೂಮ್ ಪದ್ಧತಿ)ಯ ವಿಕಾರ ರೂಪ ಇದು.
ರೈತರನ್ನು ನಗರಗಳಿಗೆ ಅಟ್ಟಿ, ಕೃಷಿ ಭೂಮಿಯನ್ನು ಬಂಜರು ಮಾಡಿ ಯಾರನ್ನು ಉದ್ಧಾರ ಮಾಡುವ ಯೋಜನೆಗಳು ಇವು?
ದೇಶದ ಸುಮಾರು ಆರು ಕೋಟಿ ಸರಕಾರಿ ನೌಕರರ ಏಳ್ಗೆಗೆಂದು ಆರನೇ ವೇತನ ಆಯೋಗ ಒಂದು ಲಕ್ಷ ಕೋಟಿ ರೂಪಾಯಿಗಳ ಹೊಸ ಪ್ಯಾಕೇಜನ್ನು ಘೋಷಿಸಿದೆ ಅದರ ಅರ್ಧದಷ್ಟು, ಅಂದರೆ ೫೦ ಸಾವಿರ ಕೋಟಿ ರೂಪಾಯಿಗಳು ಅರವತ್ತು ಕೋಟಿ ರೈತರ ಕಲ್ಯಾಣಕ್ಕೆ ಸಾಕೇ ಸಾಕು. ಅಷ್ಟನ್ನು ಸರಕಾರ ಕೃಷಿರಂಗದ ಮೇಲೆ ವೆಚ್ಚ ಮಾಡಲಾರದೆ?
ಈ ಲೇಖನದ ಮೊದಲ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ
The post ಅಭಿವೃದ್ಧಿಯ ರಥದ ಚಕ್ರದಡಿ ಸಿಕ್ಕಿಬಿದ್ದವರು – ೨ first appeared on Vishva Kannada.
ಭೈರಪ್ಪನವರ `ಆವರಣ' ಬ್ಯಾನ್ ಆಗುತ್ತಂತೆ?
– [http://mitramaadhyama.co.in|ಬೇಳೂರು ಸುದರ್ಶನ]
ಕಾವೇರಿ ವಿಷಯ ತಣ್ಣಗಾದ ಮೇಲೆ `ಆವರಣ’ ದ ಶಾಖ ಹಬ್ಬುವ ಲಕ್ಷಣಗಳು ಗೋಚರಿಸುತ್ತಿವೆ.
ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
ಐದು ವರ್ಷಗಳ ಹಿಂದಿನ ಮಾತು. ನಾನು ಆಗ ದಿನಪತ್ರಿಕೆಯೊಂದರ ಮ್ಯಾಗಜಿನ್‌ಗಾಗಿ ಎಸ್.ಎಲ್. ಭೈರಪ್ಪನವರ ಸಂದರ್ಶನ ಮಾಡಲು ಇಬ್ಬರು ಸಹೋದ್ಯೋಗಿಗಳೊಂದಿಗೆ ಮೈಸೂರಿಗೆ  ಹೋಗಿದ್ದೆ. ಭೈರಪ್ಪನವರ ಮನೆಯಲ್ಲೇ ಇಡೀ ದಿನ ವಾಸ. ಬೆಳಗ್ಗೆಯಿಂದ ಸಂಜೆವರೆಗೆ ಅವರ ಆತಿಥ್ಯದ ನಡುವೆಯೇ ಸಂದರ್ಶನ. ಇನ್ನಷ್ಟೇ ಬಿಡುಗಡೆಯಾಗಲಿರುವ `ಮಂದ್ರ’ದ ನೆರಳಿನಲ್ಲಿ ಈ ಸಂದರ್ಶನಕ್ಕೆ ವಿಶೇಷ ಮಹತ್ವ ಬಂದಿತ್ತು.
ಸಂದರ್ಶನದ ಪ್ರಶ್ನೆಗಳನ್ನು ಮೊದಲೇ ಕಳಿಸಿದ್ದರಿಂದ ಅವರೂ ಉತ್ತರಗಳನ್ನು ಸಿದ್ಧ ಮಾಡಿ ಉಕ್ತಲೇಖನ ನೀಡಿದ್ದು ವಿಚಿತ್ರ ಅನ್ನಿಸಿದ್ದು ನಿಜ. ಆದರೆ ಪ್ರಶ್ನೆ ಕೇಳಿದ ಕೂಡಲೇ ಬಾಯಿಗೆ ಬಂದ ಹಾಗೆ ಗಳಹುವ, ಮರುದಿನ ಪತ್ರಕರ್ತರೇ ತಮ್ಮನ್ನು ತಪ್ಪಾಗಿ ಉಲ್ಲೇಖಿಸಿದ್ದಾರೆ ಎಂದು ಗೂಬೆ ಕೂರಿಸುವ ವರ್ತನೆಗಳ ಹಿನ್ನೆಲೆಯಲ್ಲಿ ಭೈರಪ್ಪ ಮಾಡಿದ್ದು ಸರಿ ಅನ್ನಿಸಿತ್ತು.
ಔಪಚಾರಿಕ ಸಂದರ್ಶನದ ಕೊನೆಗೆ ಅನೌಪಚಾರಿಕವಾಗಿ ಮಾತು ಹರಿಯಿತು. ಸುದೀರ್ಘ ಉತ್ತರಗಳನ್ನು ಕೊಟ್ಟು  ಕೊಂಚ ಬಳಲಿದಂತೆ ಕಂಡ ಭೈರಪ್ಪನವರು ಎಂಥ ಪ್ರಶ್ನೆಗೂಉತ್ತರ ನೀಡಿಯಾರೇ ಎಂಬ ಅನುಮಾನ, ಕುತೂಹಲ ನಮಗಿತ್ತು. ನನ್ನ ಸಹೋದ್ಯೋಗಿ  ಪತ್ರಕರ್ತೆ ಕೇಳಿಯೇ ಬಿಟ್ಟಳು: ರಾಮಜನ್ಮ ಭೂಮಿಯ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಈ ಪ್ರಶ್ನೆಯೂ ಅನಿರೀಕ್ಷಿತ; ನಾನೂ ಅನೌಪಚಾರಿಕವಾಗೇ ಉತ್ತರ ನೀಡುತ್ತೇನೆ, ಪ್ರಕಟನೆಗೆ ಅಲ್ಲ ಎಂದು ಭೈರಪ್ಪನವರು ಸುಮಾರು ಮುಕ್ಕಾಲು ತಾಸು ತಾವು ಅಧ್ಯಯನ ಮಾಡಿದ ಸಂಗತಿಗಳನ್ನು ನಮಗೆ ವಿವರಿಸಿದರು. ಮುಸ್ಲಿಮ್ ದಾಳಿಯ ಸಂಗತಿಗಳನ್ನು, ಇಸ್ಲಾಮೀ ಚಿಂತನೆಯ ಕೆಲವು ಸಂಗತಿಗಳನ್ನು ಅವರು ನೇರವಾಗಿ  ಗ್ರಂಥಗಳನ್ನು ಉಲ್ಲೇಖಿಸಿಯೇ ವಿವರಿಸಿದರು. ಇದೆಲ್ಲವನ್ನೂ ನೀವು ಬರೆಯಬಾರದು ಎಂದೇನಿಲ್ಲ.  ಆದರೆ ಹೀಗೆ ಬರೆಯುವುದರಿಂದ ಸಾಹಿತ್ಯದ ಕುರಿತಾದ ಸಂದರ್ಶನದ ಕೇಂದ್ರಗಮನ ಹೊರಟುಹೋಗುತ್ತದೆ. ಅಲ್ಲದೆ ಇದ್ನೆಲ್ಲ ಸಂಕ್ಷಿಪ್ತವಾಗಿ ಬರೆಯುವುದೂ ಆಗದ ಕೆಲಸ. ಮುಂದೆ ನೋಡೋಣ ಎಂದು ಭೈರಪ್ಪನವರು ಹೇಳಿದರು. ನಾವು ಅವರ ಮಾತನ್ನು ಒಪ್ಪಿದೆವು. ಅವರು ಭಾರತದ ಇತಿಹಾಸದ ಬಗ್ಗೆ ಮಾಡಿದ ಈ ವಿಶೇಷ ಖಾಸಗಿ ಉಪನ್ಯಾಸ ಪ್ರಕಟವಾಗಲಿಲ್ಲ.
ಆದರೆ ಈಗ  ಎಸ್.ಎಲ್.ಭೈರಪ್ಪ ಬಂಡೆದ್ದಿದ್ದಾರೆ. ದಶಕಗಳ ಕಾಲ ಅವರು ಕಟ್ಟಿಕೊಂಡು ಬಂದಿದ್ದ ಸಹನೆ ಈಗ ಕಟ್ಟೆ ಒಡೆದಿದೆ. ಅವರೇ ತಮ್ಮ ಸುತ್ತ ಕಟ್ಟಿಕೊಂಡಿದ್ದ ಆವರಣದ ಗೋಡೆಗಳು ಕುಸಿದು ಬಿದ್ದಿವೆ.
`ಆವರಣ’ ಕಾದಂಬರಿಯ ಮೂಲಕ ಭೈರಪ್ಪನವರು ಕಲಾತ್ಮಕತೆಯನ್ನಾದರೂ ಬಲಿಕೊಟ್ಟು ಇತಿಹಾಸದ  ಬಗ್ಗೆ ತಾನು ಕಂಡ ಸತ್ಯವನ್ನು ಹೇಳಿಬಿಡಬೇಕು ಎಂದು ಹಟ ತೊಟ್ಟು ಹೆಜ್ಜೆ ಇಟ್ಟಿದ್ದಾರೆ. ಅಧ್ಯಯನದ ಸಂಗತಿಗಳನ್ನು ಕಾದಂಬರಿಯ ರೂಪದಲ್ಲಿ ನೀಡುವಾಗ ಇರುವ ತೊಡಕುಗಳನ್ನು ಅವರು ಎದುರಿಸಿದ್ದಾರೆ. `ಸಾರ್ಥ’ದಲ್ಲಿ ಕೇವಲ ಐತಿಹಾಸಿಕ ಕಥೆ ಹರಿದಿದ್ದರೆ ಇಲ್ಲಿ ಸಮಕಾಲೀನ ಪಾತ್ರಗಳ ಮೂಲಕ ಇಂದಿನ ಕಥೆ, ಹಿಂದಿನ ಕಥೆ – ಎಲ್ಲವೂ ಅನಾವರಣಗೊಳ್ಳುತ್ತವೆ.
ಕಾದಂಬರಿಯ ಒಂದು ಪಾತ್ರದಲ್ಲಿ ದೇಶದ ಟಿಪಿಕಲ್ ಬುದ್ಧಿಜೀವಿ ಸಾಹಿತಿಯೊಬ್ಬರನ್ನು ಬೇಕಾಬಿಟ್ಟಿ ಅಣಕಿಸಿದ್ದಾರೆ. ಬಹುಶಃ ತಮ್ಮ ಆತ್ಮಕಥೆ `ಭಿತ್ತಿ’ಯಲ್ಲಿಹೇಳಲಾಗದ ಮತ್ತು ಆನಂತರ ನಡೆದ ಸಂಗತಿಗಳನ್ನು ಅವರು ಕಾದಂಬರಿಯಲ್ಲಿ ಹೆಣೆದಿದ್ದಾರೆ ಎಂದೇ ಅನಿಸುತ್ತದೆ. ಔರಂಗಜೇಬನ ಚರಿತ್ರೆಯನ್ನು ಯಾವ ಎಗ್ಗೂ ಇಲ್ಲದೆ, ಪದಬಳಕೆಯ ಸಂಯಮವನ್ನೂ ಅಲ್ಲಲ್ಲಿ ಮೀರಿ ಬಿಡಿಸಿಟ್ಟಿದ್ದಾರೆ. ಸಂಘಪರಿವಾರವು ಸದಾ ಹೇಳಿಕೊಂಡು ಬಂದಿರುವ ಸಂಗತಿಗಳನ್ನು ಅವರು ಕಥೆಯಲ್ಲಿ ವ್ಯಾಪಕವಾಗಿ ಚೆದುರಿಸಿ ದಾಖಲಿಸಿದ್ದಾರೆ.
`ಈಗ ನನ್ನನ್ನು ಏನು ಬೇಕಾದರೂ ಮಾಡಿಕೊಳ್ಳಿ’ ಎಂದು ಭೈರಪ್ಪನವರು ಸವಾಲು ಎಸೆದು ನಿಂತಹಾಗೆ ಕಾಣಿಸುತ್ತದೆ. ಕಮ್ಯುನಿಸ್ಟ್ ಸಿದ್ಧಾಂತಿಗಳು, ಸೆಕ್ಯುಲರಿಸ್ಟ್ ಎಂಬ ಹಣೆಪಟ್ಟಿ ಹಚ್ಚಿಕೊಂಡ ಬುದ್ಧಿಜೀವಿಗಳು, ಯಾರೋ ಬರೆದ ಇತಿಹಾಸವನ್ನೇ ಮತ್ತೆ ಗಿಣಿಪಾಠದ ಹಾಗೆ ಪಠ್ಯಗಳಲ್ಲಿ ಸೇರಿಸುವ ಸರ್ಕಾರ – ಎಲ್ಲವನ್ನೂ ಒಮ್ಮೆಗೇ ತರಾಟೆಗೆ ತೆಗೆದುಕೊಂಡಿದ್ದಾರೆ. ಅದಕ್ಕೇ ಹೇಳಿದ್ದು…
`ಅವರೇನು? ಎರಡು ದಿನ ಅಧ್ಯಯನ ಮಾಡಿಬಿಟ್ಟರೆ ಸಾಕಾ?’ ಎಂದು ಗಿರೀಶ್ ಕಾರ್ನಾಡ್ ಗೇಲಿ ಮಾಡಿದ್ದರು, ತೀರಾ ಇತ್ತೀಚೆಗೆ. ಟಿಪ್ಪು ಸುಲ್ತಾನ್ ವಿಷಯದ ಗದ್ದಲ ಎದ್ದಾಗ ಭೈರಪ್ಪನವರು ಒಂದು ಪುಟದ ಪ್ರತಿಕ್ರಿಯೆಯನ್ನು ಬರೆದು ತಮ್ಮ ಅಧ್ಯಯನಶೀಲತೆಯನ್ನು ಕಾರ್ನಾಡ್ ಮುಖಕ್ಕೆ ರಾಚಿದ್ದರು. ಆಗಲೇ ಭೈರಪ್ಪ ಯಾಕೋ ಬದಲಾಗಿದ್ದಾರೆ ಅನ್ನಿಸಿತ್ತು. ಈಗ ‘ಆವರಣ’ದೊಂದಿಗೆ ಭೈರಪ್ಪನವರ ಪಾತ್ರಪ್ರವೇಶ ಬಹುತೇಕ ಸಂಪೂರ್ಣವಾಗಿದೆ. ಸದ್ದಿಲ್ಲದೆ ಬರೆಯುತ್ತ ಸಾರ್ವಜನಿಕ ಬದುಕಿನಲ್ಲಿ ಇಂಥ ಸಂಗತಿಗಳ ಬಗ್ಗೆ ಹೆಚ್ಚಿಗೇನೂ ಹೇಳದೇ ಇದ್ದ ಭೈರಪ್ಪ ಈಗ ಯಾಕೆ ಆಕ್ರೋಶಭರಿತರಾಗಿದ್ದಾರೆ? ಅವರ ಬರವಣಿಗೆಯ ಶೈಲಿಯಲ್ಲಿ ಯಾಕೆ ಕ್ರೌರ್ಯವೂ ಸೇರಿಕೊಂಡಿದೆ? `ಆವರಣ’ದ ಕೆಲವು ಸನ್ನಿವೇಶಗಳು ಭಯ ಹುಟ್ಟಿಸುವುದರ ಜೊತೆಗೆ ನಾಲ್ಕು ದಿನ ನಿದ್ದೆಯನ್ನೂ ಕೆಡಿಸುತ್ತದೆ.
`ಈ ಬಗ್ಗೆ ನಾನು ಖುದ್ದಾಗಿ ದಿಲ್ಲಿಯಲ್ಲಿ ಮೂಲಗ್ರಂಥಗಳನ್ನು ಹುಡುಕಿ ಸಾವಿರಾರು ರೂಪಾಯಿ ಖರ್ಚು ಮಾಡಿ ತಂದು ಓದುತ್ತಿದ್ದೇನೆ. ಆದ್ದರಿಂದ ಇಲ್ಲಿ ನಾನು ಹೇಳಿದ್ದೆಲ್ಲವೂ ಈಗ್ರಂಥಗಳ ಉಲ್ಲೇಖಗಳೇ ಹೊರತು ಬೇರೇನಲ್ಲ’ ಎಂದು ಭೈರಪ್ಪ ಅಂದು ನಮಗೆ ಹೇಳಿದ್ದರು. ಅವರು ಹೇಳಿದ ಆ  ಭಯಾನಕ ವಿವರಣೆಗಳೂ `ಆವರಣ’ದಲ್ಲಿ ದಾಖಲಾಗಿವೆ.
ಸರ್ಕಾರ `ಆವರಣ’ವನ್ನು ಬ್ಯಾನ್ ಮಾಡುತ್ತದೆ ಎಂಬ ಹಿನ್ನೆಲೆಯಲ್ಲಿ ಪುಸ್ತಕದ ಸಾವಿರಾರು ಪ್ರತಿಗಳು ನೇಪಥ್ಯದಲ್ಲೇ ಮಾರಾಟವಾಗಿವೆ.  ಬಿಡುಗಡೆಯೇ ಆಗದ ಈ ಪುಸ್ತಕ ಈಗ ಮರುಮುದ್ರಣ ಕಾಣುತ್ತಿದೆ.
ಮುಂದೇನು? ಕಾವೇರಿ ವಿಷಯ ತಣ್ಣಗಾದ ಮೇಲೆ `ಆವರಣ’ ದ ಶಾಖ ಹಬ್ಬುವ ಲಕ್ಷಣಗಳು ಗೋಚರಿಸುತ್ತಿವೆ.
The post ಭೈರಪ್ಪನವರ `ಆವರಣ' ಬ್ಯಾನ್ ಆಗುತ್ತಂತೆ? first appeared on Vishva Kannada.
ವರ್ಣಭೇದ' ನೀತಿನಿರೂಪಕನ `ಪ್ರತಿಷ್ಠಿತ' ಸ್ಕಾಲರ್ ‌ಶಿಪ್
– [http://mitramaadhyama.co.in|ಬೇಳೂರು ಸುದರ್ಶನ]
ಅವನಿಗೆ ಬ್ರಿಟಿಶರೆಂದರೆ ಪಂಚಪ್ರಾಣ. ಆಂಗ್ಲೋ ಸ್ಯಾಕ್ಸನ್ ಜನಾಂಗವೇ ವಿಶ್ವದಲ್ಲೆಲ್ಲ ಶ್ರೇಷ್ಠ ಎಂದು ಆತ ಭಾವಿಸಿದ್ದ. ಹಿಟ್ಲರನಿಗಿಂತ ಮೊದಲೇ ಆತ  ಜರ್ಮನರನ್ನೂ ಶ್ರೇಷ್ಠ ಜನಾಂಗವೆಂದು ಹೊಗಳಿದ್ದ.  ಇಡೀ ವಿಶ್ವವೇ ಬ್ರಿಟಿಶರ ಅಡಿಯಾಳಾಗಬೇಕೆಂದು ಬಯಸಿ ಒಂದು ರಹಸ್ಯ ಸಮಾಜವನ್ನೇ ಸೃಷ್ಟಿಸಬೇಕು ಎಂದು ನಿರ್ಧರಿಸಿ ಅದಕ್ಕೆಂದೇ ತನ್ನ ಉಯಿಲಿನಲ್ಲಿ ಭಾರೀ ಪ್ರಮಾಣದ ಹಣವನ್ನು ತೆಗೆದಿರಿಸಿದ್ದ.
ಆದರೆ ಆತ ಸತ್ತಮೇಲೆ ಅವನ ಆಸೆಗಳನ್ನು ಪೂರೈಸಲೆಂದೇ,  ಅದೇ ಹಣದಿಂದ  ಒಂದು ಸ್ಕಾಲರ್‌ಶಿಪ್ ಸ್ಥಾಪಿಸಲಾಯಿತು. ಅದೇ ರೋಡ್ಸ್  ಸ್ಕಾಲರ್‌ಶಿಪ್. ನಮ್ಮ  ಜ್ಞಾನಪೀಠ ಪುರಸ್ಕೃತ ಲೇಖಕ ಗಿರೀಶ್ ಕಾರ್ನಾಡರು ಈ `ಪ್ರತಿಷ್ಠಿತ’ ಸ್ಕಾಲರ್‌ಶಿಪ್ ಪಡೆದವರಲ್ಲಿ ಒಬ್ಬರು. ಮಾಜಿ ಅಥವಾ ಹಾಲಿ ಬ್ರಿಟಿಶ್ ವಸಾಹತುಗಳು, ಅಮೆರಿಕಾ, ಜರ್ಮನಿಯ  ವಿದ್ಯಾರ್ಥಿಗಳು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದುವುದಕ್ಕೆಂದೇ ಈ ಸ್ಕಾಲರ್‌ಶಿಪ್ ಸ್ಥಾಪನೆಯಾಗಿದೆ.
೧೮೫೩ರಲ್ಲಿ ಹುಟ್ಟಿ ೧೯೦೨ರಲ್ಲಿ  ವಿಶ್ವದ ಅತಿ ಶ್ರೀಮಂತ ವ್ಯಕ್ತಿಯಾಗಿ ಸತ್ತ ಸಸಿಲ್ ಜಾನ್ ರೋಡ್ಸ್ ಇಂದು ಪ್ರತಿಷ್ಠಿತ ಸ್ಕಾಲರ್‌ಶಿಪ್‌ನ ಮೂಲಕ ಬದುಕಿದ್ದಾನೆ.  ತನ್ನದೇ ಹೆಸರಿನಲ್ಲಿ ಒಂದು ದೇಶವನ್ನೇ ನಿರ್ಮಿಸಿದ ರೋಡ್ಸ್ ಇಂದು ವಿಶ್ವವಿಖ್ಯಾತವಾಗಿರುವ ಡಿ ಬೀರ್ಸ್ ವಜ್ರಾಭರಣ ಸಂಸ್ಥೆಯ ಸ್ಥಾಪಕ. ಈ ಸಂಸ್ಥೆಯೇ ಈಗಲೂ ವಿಶ್ವದ ಶೇ. ೬೦ರಷ್ಟು ವಜ್ರ ಮಾರುಕಟ್ಟೆಯನ್ನು ವ್ಯಾಪಿಸಿದೆ.
ರೋಡ್ಸ್  ಒಬ್ಬ ವಸಾಹತುಶಾಹಿ. ತನ್ನದೇ ವಸಾಹತು ಮಾಡಿಕೊಂಡು ಸೇನೆಯನ್ನೂ ಕಟ್ಟಿಕೊಂಡು ಯುದ್ಧಗಳನ್ನೂ ಮಾಡಿದ. ಅವನ ದೇಶಕ್ಕೆ ಮೊದಲು ರೊಡೀಶಿಯಾ ಎಂಬ ಹೆಸರಿತ್ತು. ಆಮೇಲೆ ಅದು ಝಾಂಬಿಯಾ ಆಗಿ ಈಗ… ಝಿಂಬಾಬ್ವೆ ಆಗಿದೆ.
ಅವನ ವಸಾಹತುಶಾಹಿ ಧೋರಣೆಗಳು ಎಷ್ಟು ಪ್ರಬಲವಾಗಿದ್ದವು ಎಂದರೆ ವರ್ಣಬೇಧ ನೀತಿ ಎಂದು ಕೇಳಿದ್ದೀರಲ್ಲ… ಅದನ್ನು ರೂಪಿಸಿದವನೇ ರೋಡ್ಸ್. ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಶರು ರೂಪಿಸಿಕೊಂಡ ಸಾಮ್ರಾಜ್ಯಶಾಹಿ ವ್ಯವಸ್ಥೆಯಲ್ಲಿ ರೋಡ್ಸ್ ನದೇ ಚಿಂತನೆಗಳು ತುಂಬಿಕೊಂಡಿವೆ. ಕೇಪ್ ಕಾಲೋನಿಯ ಮುಖ್ಯಮಂತ್ರಿಯಾಗಿದ್ದ ರೋಡ್ಸ್ ಒಮ್ಮೆ ಟ್ರಾನ್ಸ್‌ವಾಲ್ ಸರ್ಕಾರದ ವಿರುದ್ಧ ಯುದ್ಧ ಮಾಡಿ ಕೈ ಸುಟ್ಟುಕೊಂಡಿದ್ದೂ ಇದೆ. ಇದು ನಡೆದಿದ್ದು ೧೮೯೫ರಲ್ಲಿ.
ಆಫ್ರಿಕನ್ನರನ್ನು ಅತ್ಯಂತ ಕೀಳು ಪದಗಳಲ್ಲಿ ಜರೆಯುವುದು, ಅವರನ್ನು ಹಿಗ್ಗಾಮುಗ್ಗಾ ಅವಮಾನಿಸುವುದು ಇವೆಲ್ಲವೂ ರೋಡ್ಸ್‌ನ ಸಹಜ ವರ್ತನೆಗಳಾಗಿದ್ದವು.   ಎಂದೂ ಆತ ತನ್ನ ವಸಾಹತು ಕನಸುಗಳನ್ನು ಬಿಟ್ಟುಕೊಡಲಿಲ್ಲ. ಮತಬೆಲೆ ಬುಡಕಟ್ಟಿನ ಜನರು ಆತನ ಸಂಸ್ಥೆಯ ವಿರುದ್ಧ ದಂಗೆ ಎದ್ದಾಗ  ಅವರಿಗೆ ಸ್ವಾತಂತ್ರ್ಯ ಕೊಡುವ ಬದಲು ಮಾತುಕತೆ ನಡೆಸಿದ ರೋಡ್ಸ್ ಒಬ್ಬ ಜಾಣ ವ್ಯವಹಾರಸ್ಥನಾಗಿದ್ದ.
ರೋಡ್ಸ್ ಸ್ಕಾಲರ್‌ಶಿಪ್ ನಿಜಕ್ಕೂ ಪ್ರತಿಷ್ಠೆಯದೇ. ಅದನ್ನು ಪಡೆದವರೆಲ್ಲ ದೊಡ್ಡ ದೊಡ್ಡ ವ್ಯಕ್ತಿಗಳೇ. ಆದರೆ ಈ ಸ್ಕಾಲರ್‌ಶಿಪ್ ಹಿಂದೆ ಇರುವ ಆಫ್ರಿಕಾದ ಶೋಷಣೆ, ವರ್ಣಭೇದ ನೀತಿಯ ಕಲ್ಪನೆ, ವಸಾಹತುಶಾಹಿ ಇತಿಹಾಸ – ಯಾವುದಾದರೂ ನೆನಪಾಗಬೇಕಲ್ಲ?
ಅರೆ, ನೊಬೆಲ್ ಪ್ರಶಸ್ತಿಯ ಕಥೆ ಇನ್ನೇನು ಸ್ವಾಮಿ,  ಡೈನಮೈಟ್‌ಗಳನ್ನು  ಸಂಶೋಸಿ ಮಾರಿ ಬಂದ ಹಣವೇ ಅಲ್ಲವೆ ಎಂದು ನೀವು ಕೇಳಬಹುದು. ಅದೂ ನಿಜ. ಆತ ಸಾಯುವ ಮುನ್ನವೇ ಫ್ರೆಂಚ್ ಪತ್ರಿಕೆಯೊಂದು `ಸಾವಿನ ಸರದಾರ ಸತ್ತ’ ಎಂದು ಬರೆಯಿತಲ್ಲದೆ `ಹಿಂದೆಂದಿಗಿಂತ ಹೆಚ್ಚು ಬೇಗ ಹೆಚ್ಚು ಜನರನ್ನು ಕೊಲ್ಲುವ ಮಾರ್ಗ ಹುಡುಕಿದ ಡಾ|| ಆಲ್ರೆಡ್ ನೊಬೆಲ್ ನಿನ್ನೆ ಸತ್ತ’ ಎಂದು ಬಣ್ಣಿಸಿತು. ಈ ಸುಳ್ಳುಸುದ್ದಿಯೇ ನೊಬೆಲ್‌ಗೆ ತಾನು ಸತ್ತ ಮೇಲೂ ಎಲ್ಲರೂ ತನ್ನನ್ನು ನೆನಪಿಸಿಕೊಳ್ಳಬೇಕು ಅನಿಸಿತಂತೆ. ಅದಕ್ಕೇ ಆತ ತನ್ನೆಲ್ಲ ಹಣವನ್ನೂ ನೊಬೆಲ್ ಪ್ರಶಸ್ತಿಗಾಗಿ ಮೀಸಲಿಟ್ಟ ಕಥೆ ಈಗ ೧೦೫ ವರ್ಷ ಹಳೆಯದು.
ನಮ್ಮ ದೇಶದಲ್ಲೂ ಅನೇಕ ಉದ್ಯಮಿಗಳು, ವರ್ತಕರು ಪ್ರಶಸ್ತಿಗಳನ್ನು, ದತ್ತಿನಿಗಳನ್ನು ಸ್ಥಾಪಿಸಿದ್ದಾರೆ. ಅವುಗಳನ್ನು ಪಡೆದು ವಿದ್ಯಾವಂತರಾಗುವುದು ಒಳ್ಳೆಯದೋ,  ಅಥವಾ ಅವರ ಇತಿಹಾಸವನ್ನೆಲ್ಲ ಕೆದಕುವುದೋ ಎಂಬ ಪ್ರಶ್ನೆ ಬರಬಹುದು. ಈ ಪ್ರಶ್ನೆ ಈವರೆಗೆ ಯಾಕೆ ಬರಲಿಲ್ಲ ? ನಮಗೆ ತಿಳಿವಳಿಕೆ ಬಂದಮೇಲಾದರೂ ಈ ಪ್ರಶ್ನೆ ಕೇಳಿಕೊಳ್ಳಬೇಕಲ್ಲವೆ? ಏನಾದರೂ ಮಾಡಿ ಬಂದ ಹಣದಿಂದ ಸ್ಕಾಲರ್‌ಶಿಪ್ ಸ್ಥಾಪಿಸುವುದಾದರೆ ನಾಳೆ ದಾವೂದ್  ಇಬ್ರಾಹಿಂ ವಿಶ್ವಶಾಂತಿಪ್ರಶಸ್ತಿಯನ್ನೂ ನಾವು ಕಾಣಬಹುದು.
ಶಸ್ತ್ರ ಝಳಪಿಸುತ್ತಿದ್ದ ಭಯೋತ್ಪಾದಕರಿಂದ ಹಲವು ಜನರ ಜೀವ ಉಳಿಸಿ ಕೊನೆಯಿಸಿರೆಳೆದ ನೀರ್ಜಾ ಭಾನೋಟ್ ನೆನಪಾಗುತ್ತಿದ್ದಾಳೆ. ೧೯೮೬ರ ಆ ದಿನ ಸಫಾರಿನಿ ಮತ್ತು ಆತನ ಸಹ ಭಯೋತ್ಪಾದಕರು ಪ್ಯಾನ್ ಆಮ್ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಮುಗಿಸಿಬಿಡಲು ಗ್ರೆನೇಡ್ ಎಸೆದು ಗುಂಡಿನ ದಾಳಿ ಶರು ಮಾಡಿದ್ದರು. ಆದರೆ ನೀರ್ಜಾ ಭಾನೋಟ್ ವಿಮಾನದ ಒಂದು ಬಾಗಿಲನ್ನು ತೆರೆದು ಪ್ರಯಾಣಿಕರನ್ನು ಹೊರಗೆ ತಳ್ಳಿದಳು. ಗುಂಡಿನದಾಳಿಗೆ ತಾನೇ ಅಡ್ಡ ನಿಂತಳು.  ೧೭ ತಾಸುಗಳ ಅವಳ ಸಹನೆ, ಶೌರ್ಯ, ನಸುನಗು – ಎಲ್ಲವೂ ೭೬ ಅಮೆರಿಕನ್‌ ಪ್ರಯಾಣಿಕರ ನೆನಪಿನಿಂದ ಮಾಸಿಲ್ಲ. ಅವಳ ಅಪ್ಪ  ಹರೀಶ್ ಭಾನೋಟ್ ಈಗ  ನೀರ್ಜಾ ಭಾನೋಟ್ ಪ್ಯಾನ್ ಆಮ್ ಶೌರ್ಯ ಪ್ರಶಸ್ತಿ  ಕೊಡುತ್ತಿದ್ದಾರೆ. ೨೨ರ ವಯಸ್ಸಿನಲ್ಲಿ, ಜನ್ಮದಿನಕ್ಕೆ ಇನ್ನೆರಡೇ ದಿನವಿದ್ದ  ಗಳಿಗೆಯಲ್ಲಿ ಕರ್ತವ್ಯಪ್ರಜ್ಞೆ ಮೆರೆದ ಪ್ರೀತಿಯ ಮಗಳ ನೆನಪಿಗೆ. ದೌರ್ಜನ್ಯದ ವಿರುದ್ಧ ಎದ್ದುನಿಲ್ಲುವ ವ್ಯಕ್ತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ೨೦೦೧ರಲ್ಲಿ ಈ ಪ್ರಶಸ್ತಿಯನ್ನು ತಮಿಳುನಾಡಿನ ಯಶೋದಾ ಪಡೆದಿದ್ದರು.
(ಕೃಪೆ: ಹೊಸದಿಗಂತ)
The post ವರ್ಣಭೇದ' ನೀತಿನಿರೂಪಕನ `ಪ್ರತಿಷ್ಠಿತ'  ಸ್ಕಾಲರ್ ‌ಶಿಪ್ first appeared on Vishva Kannada.
From font to data
Journey of Kannada on computers
-Dr U B Pavanaja
A journey of thousand miles starts with a single step –so says a proverb. Usage of Kannada on computers, like all other Indian languages, started with printing and publishing, popularly known as Desktop Top Publishing (DTP). The biggest challenge on those days was to display and print the characters of our languages.
It was our own Kannadiga, K P Rao, who for the first time started designing fonts for Indian languages, including Kannada. He also created an inputting mechanism for feeding Indic characters into computers. Indian languages are highly scientific in nature. K P Rao utilized this fact and devised the first phonetic keyboard driver for Indian languages. Later on he released a free software for Kannada called Sediyapu.
Then came so many DTP packages for Indian languages. All these were nothing but collection of fonts and keyboard drivers. Every vendor used his own proprietary encoding scheme leading to a sort of chaos. Files created using a particular vendor’s font was not readable using another vendor’s font. There was lack of standardization.
Govt of Karnataka (GoK) took the initiative in standardizing Kannada on computers. It constituted a committee. As per the recommendations of the committee it notified the standard font for Kannada and a keyboard layout (2001). This layout is nothing but slightly modified layout of K P Rao. GoK also released a free software by name Nudi adhering to the standards.
Kannada is not far behind in entering the information super highway (Internet). Vishva Kannada (www.vishvakannada.com) is the first ever web-site as well as online magazine in Kannada. Those days people who put up Indic web-sites were giving fonts for download whish has to be installed in the PCs to browse the web-sites. Then came the dynamic font technology wherein the font stays on the server and there is no need to download and install the font. Vishva Kannada is the first Indian language web-site to use dynamic fonts (1998).
In the area of education and using IT, Kannada has made a mark. GoK’s Mahiti Sindhu program and Azim Premji Foundation’s computer aided educations are good examples here. Teaching the programming logic in Kannada and thereby developing programming skills is another important aspect which can be implemented by using Kannada version of LOGO program which is available at vishvakannada.com/KannadaLogo. This is first ever Indian language version of world famous programming language for children –LOGO. Kannada Logo has been blessed with Manthan Award.
It was very cumbersome and next to impossible to create applications in Kannada like salary bill generation using the font and keyboard driver technology. The operating systems do not understand these fonts. This problem is now vanished with the advent of global standard called Unicode. Unicode removes the need for a font standard. Since the operating systems can now understand the data as Kannada, it is possible to sort as per Kannada sorting order and create database applications. These are made possible by the availability of Kannada Unicode enabled OS (Windows XP), Office suite, database and development tool (VS.NET) by Microsoft. The famous Bhumi software of GoK, Ration card application created by Comat Technologies for GoK are some pioneering examples of Kannada applications.
A screenshot from the ration card application developed by Comat Technologies
All the technological constraints in implementing Kannada on computers and developing applications for Kannada have been removed. Only remaining hurdle is the mindset of the people which is impeding the use of Kannada on IT.
(Courtesy: Times of India, Bangalore,  Nov 4, 2006)
The post From font to data first appeared on Vishva Kannada.
ತುಂಗಾದಲ್ಲಿ ನುಕ್ತ ಚಿಹ್ನೆ
ತುಂಗಾ ಪಾಂಟ್‌ನಲ್ಲಿ ನುಕ್ತ ಚಿಹ್ನೆ ಇಲ್ಲವೇ?
The post ತುಂಗಾದಲ್ಲಿ ನುಕ್ತ ಚಿಹ್ನೆ first appeared on Vishva Kannada.
ಮರೆಯೋದಂದ್ರ ಹ್ಯಾಂಗ… ಮಾವೋ ತ್ಸೆ ತುಂಗ !… ಹೀಂಗ….
– ಬೇಳೂರು ಸುದರ್ಶನ
ಚಂದ್ರಶೇಖರ ಕಂಬಾರರು  ಬರೆದುಹಾಡಿದ ಸಾಲುಗಳನ್ನು ಹೀಗೆಲ್ಲ ತಿರುಚಬಹುದೆ ಎಂದು ಕೇಳಬಹುದೇನೋ. ಆದರೆ ಚೀನಾದಲ್ಲೇ  ಈ ಹಾಡನ್ನು ಹೇಳುತ್ತಿದ್ದಾರಂತೆ….
ಹಾಗಂತ ಜೋಸೆಫ್ ಕಾಹ್ನ್ ಬರೆದಿದ್ದಾನೆ, `ನೂಯಾರ್ಕ್  ಟೈಮ್ಸ್’ ದಿನಪತ್ರಿಕೆಯಲ್ಲಿ.  ಈ ವರ್ಷ  ಪ್ರೌಢಶಾಲೆಗೆ ಹೋಗುವ ಮಕ್ಕಳಿಗೆ ಇಂಥದ್ದೊಂದು ಅಚ್ಚರಿ ಕಾದಿರುತ್ತೆ ಎಂದು ಜೋಸೆಫ್ ಉದ್ದುದ್ದ ಬರೆದಿದ್ದಾನೆ.
ಈ ಹೊಸ ಪಠ್ಯಗಳಲ್ಲಿ ಯುದ್ಧಗಳ ಕಥೆಯಿಲ್ಲ,  ಮನೆತನಗಳ ಪ್ರವರವಿಲ್ಲ; ಕಮ್ಯುನಿಸ್ಟ್ ಹೋರಾಟಗಳ ರಗಳೆಯೂಇಲ್ಲವಂತೆ. ಅರ್ಥಶಾಸ್ತ್ರ, ತಂತ್ರeನ, ಸಾಮಾಜಿಕ ಕಟ್ಟುಪಾಡುಗಳು, ಜಾಗತೀಕರಣ – ಹೀಗೆ ಹೊಸ ವಿಷಯಗಳನ್ನು ಸೇರಿಸಲಾಗಿದೆಯಂತೆ. ಸಮಾಜವಾದವು ಒಂದೇ ಪುಟ್ಟ ಅಧ್ಯಾಯವಾಗಿ ಕಮರಿಹೋಗಿದೆಯಂತೆ. ೧೯೭೯ಕ್ಕಿಂತ ಮುಂಚಿನ ಕಮ್ಯುನಿಸ್ಟ್ ಆಂದೋಳನವು ಒಂದೇ ವಾಕ್ಯದಲ್ಲಿ ಮುಗಿದುಹೋಗಿದೆಯಂತೆ.
ಆಮೇಲೆ, ವಿಷಯ ಏನಪ್ಪಾ ಅಂದರೆ, ಚೀನಾ ದೇಶದ ಮಹಾನ್ ಸರ್ವಾಕಾರಿ ಮಾವೋ ಝೆಡಾಂಗ್ (ಚೀನೀ ಉಚ್ಚರಣೆಯಲ್ಲಿ ಮಾವೋತ್ಸೆ ತುಂಗ ಎಂಬುದು ಝೆಡಾಂಗ್ ಆಗುತ್ತದೆಯಂತೆ) ಹೆಸರು ಒಂದೇ ಒಂದು ಸಲ,  ಅದೂ ನಡತೆ ಕುರಿತ ವಿಷಯಕ್ಕೆ ಬಂದಾಗ ಉಲ್ಲೇಖವಾಗಿದೆಯಂತೆ.
ತನ್ನ ಅಕೃತ ಸಿದ್ಧಾಂತವನ್ನೆಲ್ಲಬದಿಗೊತ್ತಿದ ಚೀನಾ ಸರ್ಕಾರ ಇನ್ನೇನು ತಾನೆ ಮಾಡೀತು ಎಂದು  ಜೋಸೆಫ್ ಹೇಳುತ್ತಾನೆ. ಚೀನಾದ ಜನ ಭೂತಕಾಲವನ್ನು ಬಿಟ್ಟುಭವಿಷ್ಯತ್ತಿನ ಕಡೆಗೆ ಮೊಗ ಮಾಡಿ ಬದುಕುವುದನ್ನು ಕಲಿಯಬೇಕೆಂಬ ಇರಾದೆಯೇ ಈ ಬದಲಾವಣೆಗಳಿಗೆ ಕಾರಣವಂತೆ.
ಉದಾಹರಣೆಗೆ, ಈ ಪಠ್ಯಗಳಲ್ಲಿ  ಈಗ ಜೆ.ಪಿ. ಮೋರ್ಗನ್ ಇದ್ದಾನೆ;ಬಿಲ್‌ಗೇಟ್ಸ್ ಇದ್ದಾನೆ; ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ ಇದೆ; ಸ್ಪೇಸ್ ಶಟಲ್ ಇದೆ; ಜಪಾನಿನ ಬುಲೆಟ್ ಟ್ರೈನ್ ಇದೆ.  ಕೊರಳಿಗೆ ಕಟ್ಟುವ ಟೈ ಬಗ್ಗೆ ಪಾಠವಿದೆ. ಫ್ರೆಂಚ್, ಬೋಲ್‌ಶೆವಿಕ್ ಕ್ರಾಂತಿಗಳು ಮೂಲೆಗುಂಪಾಗಿವೆ. ನಾನ್‌ಝಿಂಗ್ ಅತ್ಯಾಚಾರ (ಜಪಾನೀಯರಿಂದ), ವಸಾಹತುಶಾಹಿ ಶೋಷಣೆ, ಮಾವೋ, ಅವನ ಸುದೀರ್ಘ ಯಾತ್ರೆ – ಎಲ್ಲವೂ ಅಂಗೈಯಗಲದ ಸುದ್ದಿಗಳಾಗಿ ಮಾಧ್ಯಮಿಕ ಶಾಲೆಗಳಲ್ಲಿ ಮಾತ್ರ ಇದೆಯಂತೆ.
ಹೌದು. ಚೀನಾ ಬದಲಾಗುತ್ತಿದೆ. ನೀವು ಚೀನಾ ಆಕ್ರಮಿತ ಟಿಬೆಟನ್ನು ನೋಡಿದರೆ, ಅದೂ ಬದಲಾಗುತ್ತಿದೆ.  ಟಿಬೆಟಿನ ರಾಜಧಾನಿ, ಟಿಬೆಟನ್ ಧರ್ಮಗುರು ದಲಾಯಿ ಲಾಮಾರವರ  ಕೇಂದ್ರವಾಗಿದ್ದ ಲ್ಹಾಸಾ ಈಗ ಒಂದು ಜಾಗತಿಕ ಕಾಸ್ಮೋ – ಟೂರಿಸಮ್ ಕೇಂದ್ರವಾಗಿದೆ. ಲ್ಹಾಸಾಗೆ ಹೊಸ ರೈಲು ಬಂದಮೇಲಂತೂ  ಇಲ್ಲಿಗೆ ಇನ್ನೂ ೪೦೦೦ ಹೆಚ್ಚು ಜನರು ಪ್ರವಾಸ ಮಾಡುತ್ತಿದ್ದಾರೆ. ಟಿಬೆಟನ್ನು ಚೀನಾದಲ್ಲಿ ಕರಗಿಸಲು ೨೫ ಸಾವಿರ ಕಿಲೋಮೀಟರುಗಳಷ್ಟು ರಸ್ತೆಗಳನ್ನು ನಿರ್ಮಿಸಲಾಗಿದೆ. ಈಗ ಲ್ಹಾಸಾದಲ್ಲಿ ಪಬ್‌ಗಳು, ಫ್ಯಾಶನ್ ಶಾಪಿಂಗ್ ಮಾಲ್‌ಗಳು ಬಂದಿವೆ. ಇಂಟರ್‌ನೆಟ್ ಈಗ ಲ್ಹಾಸಾದ ರಸ್ತೆಗಳಲ್ಲಿ ಹಾದುಹೋಗಿದೆ. ಟಿಬೆಟನ್ನರೆಲ್ಲ ಸಾಮಾನ್ಯವಾಗಿ ಕೆಳಹಂತದ ಕೆಲಸಗಾರರಾಗಿ ದುಡಿಯುತ್ತಿದ್ದಾರೆ. ಚೀನಾದಿಂದ ಬಂದವರೇ ಬಹುತೇಕ ಎಲ್ಲ ಅಂಗಡಿಗಳನ್ನು ನಡೆಸುತ್ತಿದ್ದಾರೆ.  ನಮ್ಮ ಚಹರೆಯೇ ಮಾಯವಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಟಿಬೆಟನ್ ಪಾಶ್ಚಾತ್ಯ ಪತ್ರಕರ್ತನೆದುರು ಕಣ್ಣೀರಿಡುತ್ತಾನೆ.
ಒಂದು ವಿಷಯದಲ್ಲಿ ಮಾತ್ರ ಚೀನಾ ಬದಲಾಗಿಲ್ಲ. ಅಲ್ಲಿ ಇನ್ನೂ ಬಲವಂತದ ಕಾರ್ಮಿಕ ಶಿಬಿರಗಳು ಇವೆ. ಲಾಗೋಯ್ ಎಂದು ಕರೆಯುವ ಈ ಶಿಬಿರಗಳಲ್ಲಿ ೬೦ ಲಕ್ಷ  ಚೀನೀಯರಿದ್ದಾರೆ.  ಲಾಗೋಯ್‌ಗಳಲ್ಲಿ ಇರುವವರು ೧೮ ತಾಸು ದುಡಿದ ಮೇಲೆ ಎಲ್ಲರೂ ಸಾಲಾಗಿ ಕೂತು ಕೊಟ್ಟಿದ್ದನ್ನು  ಮುಕ್ಕುತ್ತಾರೆ. ಸಾಲು ಹಾಸಿಗೆಗಳ ಇಕ್ಕಟ್ಟಾದ ಕೋಣೆಗಳಲ್ಲಿ ಒರಗುತ್ತಾರೆ ; ದಿನಗಳ ಲೆಕ್ಕವಿಲ್ಲದೆ, ವರ್ಷಗಳ ಖುಷಿಯಿಲ್ಲದೆ. ಈ ಬಲಹೀನ ಮನುಷ್ಯರನ್ನು ಕಟ್ಟೆಚ್ಚರದಿಂದ ಕಾಯಲಾಗುತ್ತದೆ. ಲಾಗೋಯ್‌ಗಳ ಸುತ್ತಮುತ್ತ ತಂತಿಬೇಲಿ ಇದೆ. ಅವುಗಳಿಗೆ ವಿದ್ಯುತ್ ಹಾಯಿಸಲಾಗಿದೆ. ಜೀವಂತ ಹೆಣಗಳಿಗೆ ಭಾರೀ ಭದ್ರತೆ!
ಅದಕ್ಕೇ  ವಿಶ್ವದ ಎಲ್ಲ  ರೋಗಿಗಳು ಈಗ ಚೀನಾಕ್ಕೇ ಮುತ್ತಿಗೆ ಹಾಕಿದ್ದಾರೆ.
೧೪ ವರ್ಷಗಳಿಂದ ಚೀನಾ ದೇಶವು ೬೦ ಸಾವಿರ ಮೂತ್ರಪಿಂಡಗಳನ್ನು , ೬ ಸಾವಿರ ಪಿತ್ತಜನಕಾಂಗಳನ್ನು, ೨೫೦ ಹೃದಯಗಳನ್ನು ಅವು ಬೇಕಾಗಿದ್ದ ರೋಗಿಗಳಲ್ಲಿ ಸ್ಥಾಪಿಸಿದೆ. ಚೀನಾ ದೇಶದಲ್ಲಿ ಒದು ಮೂತ್ರಪಿಂಡಕ್ಕೆ ೩೫೦೦ ಪೌಂಡ್ ಅಂದರೆ ಸುಮಾರು ಎರಡೂವರೆ ಲಕ್ಷ ರೂಪಾಯಿ ಖರ್ಚಾಗುತ್ತದೆ. ಪಿತ್ತ ಜನಕಾಂಗಕ್ಕೆ ೧೨ ಲಕ್ಷ ರೂ. ; ವಿದೇಶಿಯರಿಗೆ  ೧೬ ಲಕ್ಷ ರೂಪಾಯಿ.   ಮೆದುಳನ್ನೇ ಖರ್ಚು ಮಾಡದೆ ಯಂತ್ರಗಳ ಹಾಗೆ  ದುಡಿಯುವ ಕಾರ್ಮಿಕರೇ ಈ ಅಂಗಾಂಗಗಳನ್ನು ನೀಡುವ ದಾನಿಗಳು! ಯಾಕೆಂದರೆ  ವರ್ಷಕ್ಕೆ ೬೦೦೦ ಜನರನ್ನು ನೇಣಿಗೆ ಹಾಕುವ `ನ್ಯಾಯ’ದಾನವೂ ಚೀನಾದಲ್ಲಿದೆ.  ಚೀನಾದ ಎಲ್ಲಾ ರಾಜ್ಯಗಳಲ್ಲೂ ಲಾಗೋಯ್‌ಗಳಿವೆ. ಇವುಗಳ ಒಟ್ಟು ಸಂಖ್ಯೆ ೧೦೦೦ ಇರಬಹುದು ಎಂದು ಲಾಗೋಯ್ ಸಂಶೋಧನಾ ಪ್ರತಿಷ್ಠಾನ ಲೆಕ್ಕ ಹಾಕಿದೆ.
ಎಲ್ಲ ಬದಲಾವಣೆಗಳಿಗೆ ಸಾಕ್ಷಿಯಾಗಿ ಚೀನಾದ ಮಹಾಗೋಡೆ ನಿಂತಿದೆ.
ಪಠ್ಯಪುಸ್ತಕಗಳಲ್ಲಿ ಮಾವೋ ಮರೆಯಾಗಬಹುದು; ವಿಶ್ವದ ಬಹುದೊಡ್ಡ ಆರ್ಥಿಕ ಹುಲಿಯಾಗಿ  ಚೀನಾ ಮೂಡುತ್ತಿರಬಹುದು;  ಆದರೆ ಲಾಗೋಯ್‌ಗಳ ಬಗ್ಗೆ ಒಂದು ಪಾಠವೂ ಎಂದೆಂದೂ ಚೀನಾದ ಮಕ್ಕಳಿಗೆ ಇರುವುದಿಲ್ಲ.
ನಾವು?  ಲಾಗೋಯ್ ಯಾತನಾಶಿಬಿರಗಳನ್ನು  ನೋಡಿಯೂ ಪಾಠ ಕಲಿಯುವುದಿಲ್ಲ.
(ಕೃಪೆ: ಹೊಸದಿಗಂತ)
The post ಮರೆಯೋದಂದ್ರ ಹ್ಯಾಂಗ… ಮಾವೋ ತ್ಸೆ ತುಂಗ !… ಹೀಂಗ…. first appeared on Vishva Kannada.
ವೈ ಫೈ ಯುಗಕ್ಕೆ ಕಾಲಿಟ್ಟ ಟಿಬೆಟ್ – ಚೀನಾ ಸಂಘರ್ಷ
– ಬೇಳೂರು ಸುದರ್ಶನ
ಅಲ್ಲಿ  ಯಾವಾಗಲೂ ವಿದ್ಯುತ್ ಕಡಿತ. ದೂರವಾಣಿ ಸಂಪರ್ಕಕ್ಕೂ ತತ್ವಾರ. ಮೊಬೈಲ್ ಇದ್ದರೂ ನೆಟ್ವರ್ಕ್ ಇರೋದೇ ಇಲ್ಲ.  ಆದರೂ ಇಲ್ಲಿ  ಇಂಟರ್ನೆಟ್ ಕೆಲಸ ಮಾಡುತ್ತಿದೆ!
ಟಿಬೆಟ್ನ  ದಶಭ್ರಷ್ಟ ಸರ್ಕಾರದ ಜೊತೆಗೆ  ನೂರಾರು ಟಿಬೆಟನ್ ಕುಟುಂಬಗಳೂ  ಇರುವ ಧರ್ಮಶಾಲೆಯಲ್ಲಿ ಈ ಮಾಹಿತಿ ತಂತ್ರeನದ ಪವಾಡ ನಡೆದಿದೆ. ಟಿಬೆಟ್ನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಭೂಗತ ಸುರಕ್ಷತಾ ಪಡೆಯ ಕಾರ್ಯಕರ್ತರು ಈ ವಿಶಿಷ್ಟ ವೈ ಫೈ (ವೈರ್ಲೆಸ್ ಫಿಡೆಲಿಟಿ) ಇಂಟರ್ನೆಟ್ ಜಾಲವನ್ನು ಸ್ಥಳೀಯ ಪರಿಕರಗಳನ್ನೇ ಬಳಸಿ ರೂಪಿಸಿದ್ದಾರೆ.
ಎಸೆದ ಎಲೆಕ್ಟ್ರಾನಿಕ್ ಪರಿಕರಗಳು, ಸೌರಶಕ್ತಿ, ಮುಕ್ತ ತಂತ್ರಾಂಶಗಳು (ಎರಡು ವಾರಗಳ ಹಿಂದೆ  `ಹೊಸದಿಗಂತದಲ್ಲಿ ಪ್ರಕಟವಾದ ಸುದ್ದಿ ಓದಿದ್ದೀರಾ?) ಮತ್ತು ಸ್ಥಳೀಯ ತಿಳಿವಳಿಕೆಯನ್ನೇ ಬಳಸಿ ಈ ವೈರ್ಲೆಸ್ ಜಾಲ ಇಡೀ ಧರ್ಮಶಾಲೆಯನ್ನು ಸುತ್ತಿಕೊಂಡಿದೆ. ಟಿಬೆಟನ್ ಸರ್ಕಾರದ ಪ್ರಧಾನಮಂತ್ರಿ ಶಾಮ್ದೊಂಗ್ ರಿಂಪೊಶೆಯವರೇ ಈ ತಂತ್ರಜ್ಞಾನ ಕ್ರಾಂತಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ.
ಚೀನಾವು ಸಂಪೂರ್ಣವಾಗಿ ಕಬಳಿಸಿದ  ಟಿಬೆಟನ್ನು ಮತ್ತೆ ಮುಕ್ತಗೊಳಿಸಬೇಕೆಂಬ ಅದಮ್ಯ ಆಸೆಯಿಂದ ವಿಶ್ವದೆಲ್ಲೆಡೆ   ಟಿಬೆಟನ್ನರು ಕಾರ್ಯನಿರತರಾಗಿದ್ದಾರೆ. ಕಾರ್ಯಪಡೆಯ ನಾಯಕ ಯಾಹೆಲ್ ಬೆನ್ ಡೇವಿಡ್ ಸಾಮಾನ್ಯನಲ್ಲ. ಇಸ್ರೇಲಿನ ಮಿಲಿಟರಿಯಿಂದ ಗುಡ್ಡ-ಬೆಟ್ಟ ಕಾರ್ಯಾಚರಣೆಯ ತರಬೇತಿ ಪಡೆದಿರುವ  ಹುರುಪಿನ ವ್ಯಕ್ತಿ.
ಈತ ವೈರ್ಲೆಸ್  ಜಾಲವನ್ನು ಸರಿಯಾಗಿಡಲು ಗೋಪುರಗಳನ್ನು ಹತ್ತುತ್ತಾನೆ; ದೂರದೂರದ ಆಂಟೆನ್ನಾಗಳನ್ನು ಸರಿಪಡಿಸಲು ಕಣಿವೆಯಿಂದ ಕಣಿವೆಗೆ ಜಿಗಿಯುತ್ತಾನೆ. ಯಾಕೆಂದರೆ ಇಲ್ಲಿ ಗೊರಿಲ್ಲಾ ಗಾತ್ರದ ಮಂಗಗಳೂ ಅವರ ಜೊತೆಗೇ ಜಿಗಿಯುತ್ತವೆ; ಆಂಟೆನ್ನಾಗಳನ್ನು ಹಿಡಿದೇ ಜೋಕಾಲಿಯಾಡುತ್ತವೆ. ಆದ್ದರಿಂದ ಮಂಕೀ ಪ್ರೂಫ್ ಆಂಟೆನ್ನಾಗಳನ್ನು ತಯಾರಿಸುವುದೇ ದೊಡ್ಡ ಕೆಲಸ. ಈಗಾಗಲೇ ಆಕಾಶದಿಂದ ಗ್ರಹಿಸಿದ ತರಂಗಗಳನ್ನು ಕೆಳಗಡೆಯ ಕಚೇರಿಗಳಿಗೆ  ರವಾನಿಸುವ ವೈರ್ಲೆಸ್ ಜಾಲದ  ತಂತಿಗಳನ್ನು  ಈ ಮಂಗಗಳು ಕಿತ್ತು ಹಾಕಿದ್ದೂ ಇದೆ.
ಡೇವಿಡ್ಗೆ ಜೊತೆಗಾರನಾಗಿ ನಿರ್ವಹಣೆ ನೋಡಿಕೊಳ್ಳುತ್ತಿರುವ ಫುನ್ಸ್ತೂಕ್ದೋರ್ಜೀ ಹುಟ್ಟಿದ್ದೇ ದೇಶಭ್ರಷ್ಟನಾಗಿ. ಅದಮೇಲೆ ದೇಶಭಕ್ತಿಯನ್ನು ಕೇಳಬೇಕೆ? ಟಿಬೆಟನ್ ಹ್ಯಾಕರ್ಗಳು, ಸ್ಥಳೀಯ ಟಿಬೆಟನ್ ನಾಯಕರು ಮತ್ತು ದಲಾಯಿ ಲಾಮಾರವರ ಕಚೇರಿ ನಡುವೆ ಸದಾ  ಸಮನ್ವಯ ಸಾಧಿಸುವುದು ಈತನ ಮುಖ್ಯ ಹೊಣೆ.
ಇಂಟರ್ನೆಟ್ ಎಂದರೆ ದಿಢೀರ್ ದೂರವಾಣಿಯೇ ತಾನೆ? ಸ್ಕೈಪ್ ತಂತ್ರಾಂಶವನ್ನು ಬಳಲ್ಲರೂ ಜಗತ್ತಿನ ಮೂಲೆಮೂಲೆಯಲ್ಲಿ ಇರುವವರೊಂದಿಗೆ ಮಾತಾಡುತ್ತಾರೆ. ಇಲ್ಲಿ ಟಿಬೆಟನ್ ಕೀಲಿಮಣೆಯೂ ಇಲ್ಲ. ಟಿಬೆಟನ್ ಭಾಷೆಯಲ್ಲಿ  ಎಸ್ ಎಂ ಎಸ್ (ಸಮೊಸ: ಸರಳಮೊಬೈಲ್ ಸಂದೇಶ) ಕಳಿಸುವುದೂ ಕಷ್ಟ.
ಇಲ್ಲಿರುವ ವೈ ಫೈ ಜಾಲಕ್ಕೆ ಬಿ ಎಸ್ ಎನ್ ಎಲ್ನ ವೈರ್ಲೆಸ್ ಸಂಪರ್ಕ  ಸೇವೆ ಸಿಕ್ಕಿದೆ. ಇಲ್ಲಿನ ಬಳಕೆದಾರರು  ಅಮೆರಿಕಾದಲ್ಲಿ ಇರುವ ಹಾಗೆ ಲ್ಯಾಪ್ಟಾಪ ಹೊತ್ತು ಓಡಾಡುವವರಲ್ಲ; ಅಲ್ಲದೆ ಇಲ್ಲಿ ಸಿಗುವ ಇಂಟರ್ನೆಟ್ ಮಾಹಿತಿ ಹರಿವಿನ ಗಾತ್ರವೂ ಕಡಮೆ. ಆದ್ದರಿಂದ ವಿಶ್ವವ್ಯಾಪಿ ಮಾಹಿತಿಯನ್ನು ಹಂಚಿ ಉಣ್ಣುವ ಪ್ರಯಾಸದ  ಕೆಲಸ ಇಲ್ಲಿ ಯಶಸ್ವಿಯಾಗಿ ನಡೆದಿದೆ. ಎಲ್ಲರೂ ಈ ಸೇವೆಯನ್ನು ಪಡೆದಿದ್ದಕ್ಕೆ ಕನಿಷ್ಠ ಶುಲ್ಕವನ್ನೂ ನೀಡುತ್ತಾರೆ.
ಇಲ್ಲೂ ಮನುಷ್ಯರೇ ಇರುವುದರಿಂದ ಕೊಂಚ ಕಾಲ ಪಡ್ಡಹುಡುಗರು  ಕೊಂಚ ಕಾಲ ಪೋಲಿ ವೆಬ್ಸೈಟ್ಗಳತ್ತ ಕಣ್ಣು ಹಾಯಿಸಿದ್ದರು. ಇದರಿಂದಾಗಿ ಇಂಟರ್ನೆಟ್ ಬಳಕೆ ಸಿಕ್ಕಾಪಟ್ಟೆ ಹೆಚ್ಚಾಗಿತ್ತು. ಆದರೆ ಈಗ ಇದಕ್ಕೆ ಕಡಿವಾಣ ಹಾಕಲಾಗಿದೆ. ತತ್ಕ್ಷಣ ಇಂಟರ್ನೆಟ್ ಬಳಕೆ ಸಾಮಾನ್ಯ ಪ್ರಮಾಣಕ್ಕೆ ಕುಸಿದಿದೆ!
ಇಲ್ಲೂ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ  ಸಿಗುತ್ತಿದೆ. ಪಶ್ಚಿಮ ದಶದಿಂದ ಬಂದ ಸ್ವಯಂಸೇವಕರು ಈ ಸೇವೆ ನೀಡುತ್ತಾರ. ಜಾವಾಸ್ಕ್ರಿಪ್ಟ್, ಪಿ ಎಚ್ ಪಿ, ವೆಬ್ ಸೈಟ್ ನಿರ್ಮಾಣ – ಇವು ಇಲ್ಲಿ ಜನಪ್ರಿಯವಾಗಿರುವ  ವಿಷಯಗಳು.
ಇಂಟರ್ನೆಟ್ ಏನೋ ಬಂತು. ಇದರ ಮೂಲಕ ಥಾಂಗ್ಕಾಗಳನ್ನು, ಯಾಕ್ ಗಿಣ್ಣನ್ನು ಮಾರಬಹುದೆ? ಕಾಲ್ಸೆಂಟರ್ ಸೇವೆಯನ್ನೂ ಆರಂಭಿಸಬಹುದೆ?  – ಧರ್ಮಶಾಲೆಯ ಟಿಬೆಟನ್ನರಲ್ಲಿ ಹಲವು ಕನಸುಗಳು ಚಿಗುರಿವೆ.
`ಬದುಕೇ ಒಂದು ಜಾಲ ಎಂದು ಟಿಬೆಟನ್ ತತ್ವಶಾಸ್ತ್ರ  ಹೇಳುತ್ತೆ. ಯಾವುದೂ ಸ್ವತಂತ್ರವಲ್ಲ; ಎಲ್ಲರೂ, ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿವೆ.  ಇತರರೊಂದಿಗ  ಸಂಪರ್ಕ ಬೆಳೆಸಲು ಸಂಪರ್ಕ ಜಾಲ ತುಂಬಾ ಮುಖ್ಯ ನೋಡಿ. ಈಗಂತೂ ಬೇಕಾದಷ್ಟು ಸೌಲಭ್ಯಗಳಿವೆ’ ಎಂದು ಸಮಾಧಾನದಿಂದ ಹೇಳುತ್ತಾರೆ ೬೭ರ ಹರೆಯದ ಪ್ರಧಾನಿ  ರಿಂಪೊಶೆ.  ಟಿಬೆಟಿನ ಹಳೆಯ ದಾಖಲೆಗಳನ್ನು  ಸುಭದ್ರವಾಗಿ ತೆಗೆದಿಡುವುದಕ್ಕೂ  ಮಾಹಿತಿ ತಂತ್ರeನ ಬಳಸಬೇಕು ಎಂಬುದು ಅವರ ಕನಸು. ಸುಮಾರು ೩೦೦ ಸಂಪುಟಗಳ ಟಿಬೆಟನ್ ಧರ್ಮಶಾಸ್ತ್ರ ಮಾಹಿತಿಯನ್ನು ಅವರು ಒಂದೇ ಸಿಡಿ (ಕಾಂಪಾಕ್ಟ್ ಡಿಸ್ಕ್)ಯಲ್ಲಿ ಒಯ್ಯುತ್ತಿದ್ದೇನೆ ಎನ್ನುತ್ತಾರೆ.
ಈಗಾಗಲೇ ಇಲ್ಲಿ ಹಳೆಯ ಗ್ರಂಥಗಳನ್ನು ಸ್ಕ್ಯಾನ್ ಮಾಡಿ (ಛಾಯಾದಾಖಲೆ) ಸಂಗ್ರಹಿಸುತ್ತಿದ್ದಾರೆ. ಇವುಗಳಲ್ಲಿ ಚೀನಾದಿಂದ ಕದ್ದು  ತಂದ ಸರ್ಕಾರಿ ದಾಖಲೆಗಳೂ ಸೇರಿವೆ. ಇನ್ನೇನು, ಅವು ಸಾರ್ವಜನಿಕರಿಗೂ ಸಿಗಲಿವೆ. ಟಿಬೆಟನ್ನು  ಚೀನಾವು ತಿಂದು ತೇಗಿದ ಸದ್ದನ್ನಷ್ಟೇ ನಾವು ಕೇಳಿದ್ದೆವು. ಆದರೆ ಹೇಗೆ ಟಿಬೆಟ್ ಜೀರ್ಣವಾಗುತ್ತಿದೆ ಎಂಬ ಕಟು ಸತ್ಯ ನಮ್ಮೆದುರು ಬಿಚ್ಚಿಕೊಳ್ಳಲಿದೆ.
ಟಿಬೆಟನ್ ವೈಫೈ ಜಾಲದ ಈ ಸುದ್ದಿಯು [http://www.wired.com|ವೈರ್ಡ್  ಡಾಟ್ಕಾಮ್] ನಲ್ಲಿ ಪ್ರಕಟವಾಗುತ್ತಿದ್ದಂತೆಯೇ ಚೀನೀ ಸರ್ಕಾರದ ಕಣ್ಣು ಕೆಂಗಣ್ಣಾಗಿ, ಅಲ್ಲಿಂದ [http://tibtec.org|ಟಿಬೆಟನ್ ವೆಬ್ಸೈಟ್]  ನ್ನು  ಹಾಳುಗೆಡಹುವ  ಕೆಲಸವೂ ಶುರುವಾಗಿದೆ.
ಚೀನಾ – ಟಿಬೆಟ್ ಸಂಘರ್ಷ ಇದೀಗ ವೈರ್ಲೈಸ್ ಯುಗಕ್ಕೆ ಕಾಲಿಟ್ಟಿದೆ. ವಿಶ್ವದ ಅತಿದೊಡ್ಡ ಕಾರ್ಮಿಕ ಶಿಬಿರಗಳನ್ನು ನಡೆಸುತ್ತಲೇ ಮಾಹಿತಿ ತಂತ್ರeನದಲ್ಲಿ ಸಾಧನೆಗಳ್ನೂ ತೋರುತ್ತಿರುವ ಚೀನಾಗೆ  ವಿಶ್ವದ ಅತಿ ಪ್ರಾಚೀನ ಧರ್ಮಾಧಾರಿತ ದೇಶ ಟಿಬೆಟ್ ತಂತ್ರಜ್ಞಾನದಿಂದಲೇ ಸವಾಲು ಒಡ್ಡಿದೆ.
(ಕೃಪೆ: ಹೊಸದಿಗಂತ)
The post ವೈ ಫೈ ಯುಗಕ್ಕೆ ಕಾಲಿಟ್ಟ  ಟಿಬೆಟ್ – ಚೀನಾ ಸಂಘರ್ಷ first appeared on Vishva Kannada.
kannada adyathe ya durupuyogaga
hi everybody… it will be probable to discuss unwanted happenings related to kannada.., and also some r doing wrong on behalf of kannada… somebody as to take an action..or has to comment on such cases…
The post kannada adyathe ya   durupuyogaga first appeared on Vishva Kannada.