Tech related | Vishva Kannada
ನನ್ನ ಗಣಕಾವಲೋಕನ – ೬
ಗಣಕಾಜ್ಞಾನಿಗಳೊಡನೆ ಗುದ್ದಾಟ
ಗಣಕ ಜ್ಞಾನಿಗಳ ಒಡನಾಟದಿಂದ ನಮಗೆ ಲಾಭವಿದೆ. ನಾವು ಅಂತಹವರದ್ದೇ ಒಂದು ತಂಡವನ್ನು ಬಿಏಆರ್‌ಸಿಯಲ್ಲಿ ಕಟ್ಟಿಕೊಂಡಿದ್ದೆವು. ಆಗ ಫ್ಲಾಪಿಗಳ ಕಾಲ. ಒಬ್ಬರಿಗೊಬ್ಬರು ಹೊಸ ತಂತ್ರಾಂಶ (ಸಾಫ್ಟ್‌ವೇರ್) ಹಂಚಿಕೊಳ್ಳುವುದು, ಹೊಸ ಆಟಗಳನ್ನು ಆಡುವಾಗ ಯಾವ ಹಂತದಲ್ಲಿ ಹೇಗೆ ಆಡಿ ಗೆಲ್ಲಬೇಕು, ಗಣಿತ ಅಥವಾ ರಸಾಯನ ವಿಜ್ಞಾನದ ಸಮೀಕರಣಗಳನ್ನು ಹೇಗೆ ಮೂಡಿಸುವುದು ಇತ್ಯಾದಿ ವಿಷಯಗಳ ಬಗ್ಗೆ ಗಹನವಾದ ಚರ್ಚೆಗಳು, ಜ್ಞಾನ ಹಂಚುವಿಕೆ ಎಲ್ಲ ಆಗುತ್ತಿದ್ದವು. ಒಂದು ಹೊಸ ವಿಷಯ ಗೊತ್ತಾದೊಡನೆ ಅದನ್ನು ಇನ್ನೊಬ್ಬರೊಡನೆ ಹಂಚಿಕೊಂಡಾಗ ಆಗುವ ಒಂದು ಅದ್ಭುತ ತೃಪ್ತಿ ಅನುಭವವಿದೆಯಲ್ಲಿ ಅದೆಲ್ಲ ಈಗಿನ ಕೆಲವರಿಗೆ ಅರ್ಥವಾಗಲಿಕಿಲ್ಲ. ಅದರಲ್ಲೂ ಪ್ರತಿಯೊಂದು ತನ್ನ ಕಾಪಿರೈಟ್ ಎಂದು ಹೇಳಿಕೊಂಡು ತಿರುಗಾಡುವವರಿಗಂತು ಕಂಡಿತ ಅರ್ಥವಾಗಲಾರದು.
ಆಗಷ್ಟೇ ವೈಯಕ್ತಿಕ ಗಣಕಗಳು ಅಂದರೆ ಪಿ.ಸಿ.ಗಳು ಬಿಏಆರ್‌ಸಿಗೆ ಕಾಲಿಡತೊಡಗಿದ್ದವು. ಈ ಒಂದು ವಿಷಯದಲ್ಲಿ ನಾನು ಎಲ್ಲರಿಗಿಂತ ಮುಂದೆ ಇದ್ದೆ. ಅದರಿಂದಾಗಿ ತೊಂದರೆಗಳೂ ಆಗತೊಡಗಿದವು. ಯಾರಿಗೇ ಪಿ.ಸಿ.ಯಲ್ಲಿ ಏನೇ ಸಮಸ್ಯೆಯಾದರೂ ನನಗೇ ಕರೆ ಬರುತ್ತಿತ್ತು. ಅಲ್ಲಿ ಹೋಗಿ ನೋಡಿದಾಗ ಅದು ಸಮಸ್ಯೆಯಾಗಿರಲಿಲ್ಲ. ಬದಲಿಗೆ ಅವರಿಗೆ ಹೇಗೆ ಮಾಡಬೇಕು ಎಂದು ಅರ್ಥವಾಗಿರಲಿಲ್ಲ ಅಷ್ಟೆ. ಬಿಏಆರ್‌ಸಿಯ ವಿಜ್ಞಾನಿಯಾಗಿದ್ದರೂ ಅವರು ಗಣಕಾಜ್ಞಾನಿಗಳಾಗಿದ್ದರು. ಅಂತಹವರೊಡನೆ ಗುದ್ದಾಟದ ಕೆಲವು ಅನುಭವಗಳು ನಿಜಕ್ಕೂ ಸ್ವಾರಸ್ಯಕರವಾಗಿದ್ದವು.
ಬಿಏಆರ್‌ಸಿಯಲ್ಲಿ ರಸಾಯನ ವಿಜ್ಞಾಕ್ಕೆ ಸಂಬಂಧಪಟ್ಟ ಕೆಲವು ವಿಭಾಗಗಳಿದ್ದವು. ಈ ಎಲ್ಲ ವಿಭಾಗಗಳಿಗೂ ಒಬ್ಬ ಮುಖ್ಯಸ್ಥ ಮತ್ತು ಈ ಎಲ್ಲ ವಿಭಾಗಗಳಿಗೆ ಒಬ್ಬ ನಿರ್ದೇಶಕ ಇದ್ದರು. ಈ ನಿರ್ದೇಶಕರ ಕೊಠಡಿಯಲ್ಲೊಂಡು ಪಿ.ಸಿ. ವಿರಾಜಮಾನವಾಗಿತ್ತು. ಅದರಲ್ಲಿ ಅವಶ್ಯ ತಂತ್ರಾಂಶಗಳನ್ನು ಹಾಕಿಕೊಡುವುದು ಮತ್ತು ಅವನ್ನು ಹೇಗೆ ಬಳಸುವುದು ಎಂದು ಹೇಳಿಕೊಡುವುದು ನನ್ನ ಕೆಲಸವಾಗಿತ್ತು. ಒಮ್ಮೆ ಅವರ ಗಣಕ ಕೆಲಸ ಮಾಡುವುದು ನಿಲ್ಲಿಸಿತು. ವಿಪ್ರೊ ಕಂಪೆನಿಯ ಜೊತೆ ಬಿಏಆರ್‌ಸಿಯ ವಾರ್ಷಿಕ ನಿರ್ವಹಣೆಯ ಒಪ್ಪಂದವಿತ್ತು. ವಿಪ್ರೊಗೆ ಫೋನಾಯಿಸಿದೆ. ಮರುದಿನ ಅವರ ತಂತ್ರಜ್ಞ ಬಂದ. ಪಿ.ಸಿ.ಯನ್ನು ತೆರೆದು ನೋಡಿದಾಗ ಒಳಗಡೆಯ ಕೆಲವು ವಯರ್‌ಗಳನ್ನು, ಪಿ.ಸಿ.ಬಿ.ಯ ಕೆಲವು ಭಾಗವನ್ನು ಇಲಿ ತಿಂದಿತ್ತು!. ಬಹುಶಃ ಪಿ.ಸಿ. ಬಂದಾಗ ಅದಕ್ಕೆ ಪೂಜೆ ಮಾಡಿರಲಿಲ್ಲ. ಅದಕ್ಕೆ ವಿಘ್ನೇಶನಿಗೆ ಅಸಮಧಾನವಾಗಿ ತನ್ನ ವಾಹನವನ್ನು ಸ್ವಲ್ಪ ನೋಡಿಕೊಳ್ಳಯ್ಯ ಎಂದು ಕಳುಹಿಸಿರಬೇಕು. ವಿಪ್ರೊದವರು ಹೊಸ ಪಿ.ಸಿ.ಬಿ. ಹಾಕಿ ಪಿ.ಸಿ. ಕೆಲಸ ಮಾಡುವಂತೆ ಮಾಡಿ, ನನಗೆ ತೋರಿಸಿ, ನನ್ನ ಸಹಿ ತೆಗೆದುಕೊಂಡು ಹೋದರು. ಮರುದಿನ ಬೆಳಗ್ಗೆ ನಮ್ಮ ನಿರ್ದೇಶಕರಿಂದ ಫೋನ್. “ನನ್ನ ಪಿ.ಸಿ. ಕೆಲಸ ಮಾಡುತ್ತಿಲ್ಲ, ಕೂಡಲೇ ಬಾ” ಎಂದು. ಸರಿ. ನಾನು ಅಲ್ಲಿಗೆ ಹೋಗಿ ನೋಡಿದೆ. ಪಿ.ಸಿಯಲ್ಲಿ ಹಸಿರು ಎಲ್‌ಇಡಿ ಬೆಳಗುತ್ತಿತ್ತು. ಆದರೆ ಮೋನಿಟರ್‌ನಲ್ಲಿ ಬೆಳಕು ಇರಲಿಲ್ಲ. ಆಗ ಇದ್ದುದು ಹಳೆಯ ಕಲರ್ ಟಿವಿಯ ಮಾದರಿಯ ದೊಡ್ಡ ಮೋನಿಟರ್‌ಗಳು. ಅದರ ಹಿಂದುಗಡೆ ಒಂದು ಆನ್/ಆಫ್ ಬಟನ್ ಇತ್ತು. ನಾನು ಮೋನಿಟರ್‌ನ ಹಿಂದೆ ಕೈ ಹಾಕಿ ಆ ಬಟನ್ ಆನ್ ಮಾಡಿದೆ. ಪಿ.ಸಿ.ಯ ಮೋನಿಟರ್‌ನಲ್ಲಿ ಅಕ್ಷರಗಳು ಮೂಡಿಬಂದವು. ನಿರ್ದೇಶಕರಿಗೆ ಆಶ್ಚರ್ಯ! ನಾನು ಹೇಗೆ ಅಷ್ಟು ಸುಲಭದಲ್ಲಿ ಅದನ್ನು ಸರಿ ಮಾಡಿದೆ ಎಂದು. ಹಿಂದುಗಡೆ ಒಂದು ಬಟನ್ ಇರುವುದು ತೋರಿಸಿಕೊಟ್ಟೆ. ಅವರಿಗೆ ಸ್ವಲ್ಪ ಇರುಸುಮರುಸು ಆಯಿತು. ನನ್ನ ಮುಂದೆ ಸ್ವಲ್ಪ ಪೆದ್ದನಾದೆಯಲ್ಲ ಎಂದು.
ಒಂದೆರಡು ವರ್ಷಗಳು ಕಳೆದ ನಂತರ ವಿಂಡೋಸ್ ಬಂತು. ಅದರ ಜೊತೆ ಇಲಿ ಅಂದರೆ ಮೌಸ್ ಬಂತು. ಆಗಿನ ಮೌಸ್‌ಗಳಿಗೆ ಒಂದು ದೊಡ್ಡ ಗೋಳವಿರುತ್ತಿತ್ತು. ಆಗಾಗ ಈ ಗೋಳಕ್ಕೆ ಕಸ, ಕೂದಲು ಎಲ್ಲ ಸಿಕ್ಕಿಹಾಕಿಕೊಂಡು ಆ ಗೋಳ ತಿರುಗದೆ ಅದು ಅರೆಬರೆ ಕೆಲಸ ಮಾಡುತ್ತಿತ್ತು. ಹಲವು ಮಂದಿ ನನಗೆ ಫೋನ್ ಮಾಡಿ ನನ್ನ ಮೌಸ್ ಕೆಲಸ ಮಾಡುತ್ತಿಲ್ಲ, ಸ್ವಲ್ಪ ಬಂದು ನೋಡು ಎಂದು ಹೇಳುವುದು ಸಾಮಾನ್ಯವಾಗಿತ್ತು. ಹೋಗಿ ನೋಡಿದರೆ ಮೌಸ್ ಪೂರ್ತಿ ಮುಂಬಯಿಯ ಕೊಳೆ ತುಂಬಿರುತ್ತಿತ್ತು. ಅವರಿಗೆ ಅದನ್ನು ಸ್ವಚ್ಛ ಮಾಡುವುದು ಹೇಗೆ ಎಂದು ತೋರಿಸಿಕೊಟ್ಟೆ. ಈ ಮೌಸ್ ಪಿ.ಸಿ.ಗೆ ತನ್ನ ಬಾಲದ ಮೂಲಕ ಅಂದರೆ ವಯರ್ ಮೂಲಕ ಜೋಡಣೆಯಾಗಿರುತ್ತಿತ್ತು. ಆಗಿನ್ನೂ ನಿಸ್ತಂತು ಇಲಿಗಳು ಬಂದಿರಲಿಲ್ಲ. ಬಹುಶಃ ಯಜಮಾನನನ್ನು ಬಿಟ್ಟು ಎಲ್ಲೆಂದರಲ್ಲಿಗೆ ತಿರುಗಾಡಬಾರದು ಎಂದು ಅದರ ಬಾಲದ ಮೂಲಕ ಕಟ್ಟಿಹಾಕುತ್ತಿದ್ದಿರಬೇಕು. ಒಮ್ಮೆ ಪಿನಾಕಿ ಹೆಸರಿನವರೊಬ್ಬರು ಕರೆ ಮಾಡಿದರು. ನನ್ನ ಪಿ.ಸಿ.ಯಲ್ಲಿ ವಿಂಡೋಸ್ ಇದೆ. ಆದರೆ ಅದನ್ನು ಹೇಗೆ ಉಪಯೋಗಿಸುವುದು ಎಂದು ತೋರಿಸಿಕೊಡು ಎಂದು ವಿನಂತಿ ಮಾಡಿಕೊಂಡರು. ಸರಿ. ಎಂದಿನಂತೆ ನನ್ನ ಕೆಲಸ ಬಿಟ್ಟು ಅವರಲ್ಲಿಗೆ ಹೋದೆ. ನೋಡಿದರೆ ಅವರ ಪಿ.ಸಿ.ಯಲ್ಲಿ ಮೂಷಿಕವೇ ಇಲ್ಲ. ಮೂಷಿಕವಿಲ್ಲದೆ ಕಿಟಿಕಿಯೊಳಗೆ ನುಸುಳುವುದೆಂತು? ಅದನ್ನೇ ಅವರಿಗೆ ಹೇಳಿದೆ. ಅವರಿಗೆ ಪೂರ್ತಿ ಅರ್ಥವಾಗಲಿಲ್ಲ. ಸ್ವಲ್ಪ ತಮಾಷೆಯಾಗಿ ಹೇಳಿದೆ – “ನೀವು ಪಿನಾಕಿ ಅಂದರೆ ಶಿವ. ನಿಮ್ಮ ಮಗ ಇಲಿ ತೆಗೆದುಕೊಂಡು ಹೋಗಿದ್ದಾನೆ. ಆದುದರಿಂದ ವಿಂಡೋಸ್ ಕೆಲಸ ಮಾಡುವುದಿಲ್ಲ”.
ಮೊದ ಮೊದಲು ಬಂದ ಪಿ.ಸಿ.ಗಳು ಅಗಲವಾದ ಪೆಟ್ಟಿಗೆಯಂತಿದ್ದವು. ಕೆಲವು ವರ್ಷಗಳ ನಂತರ ಈಗ ಎಲ್ಲ ಕಡೆ ಕಾಣಸಿಗುವಂತಹ ಟವರ್ ಬಂತು. ಅಂದರೆ ಅಡ್ಡ ಮಲಗಿದ್ದ ಪಿ.ಸಿ.ಯು ಎದ್ದು ನಿಂತಿತು. ಅಗಲವಾದ ಪೆಟ್ಟಿಗೆಯ ಮೇಲಿದ್ದ ದೊಡ್ಡ ಟಿವಿಯ ಮಾದರಿಯ ಮೋನಿಟರ್ ಟವರ್‌ನ ಪಕ್ಕಕ್ಕೆ ಬಂತು. ಈ ಟವರ್ ಮಾದರಿಯ ಪಿ.ಸಿ.ಯಲ್ಲಿ ಕೆಳಗೆ ಹಾರ್ಡ್‌ಡಿಸ್ಕ್ ಅದರ ಮೇಲೆ ಫ್ಲಾಪಿ ಡ್ರೈವ್ ಇರುತ್ತಿತ್ತು. ಬಿಏಆರ್‌ಸಿಯ ನಿರ್ದೇಶಕರ ಕಛೇರಿಗೂ ಇಂತಹ ಒಂದು ಪಿ.ಸಿ. ಬಂತು. ಅದು ಬಂದೊಡನೆ ಎಂದಿನಂತೆ ನನಗೆ ಬುಲಾವ್ ಬಂತು. ಹೋಗಿ ಅವರಿಗೆ ಅದನ್ನು ಉಪಯೋಗಿಸುವುದು ಹೇಗೆ ಎಂದು ತೋರಿಸಿಕೊಟ್ಟು ಬಂದೆ.  ಆಗಿನ್ನೂ ಐದೂಕಾಲು ಇಂಚಿನ ಫ್ಲಾಪಿಗಳ ಕಾಲ. ಒಂದು ದಿನ ನನಗೆ ಅವರ ಕಛೇರಿಯಿಂದ ಕರೆ ಬಂತು. “ನಾವು ಹಾಕಿದ ಫ್ಲಾಪಿ ತೆಗೆಯಲು ಬರುತ್ತಿಲ್ಲ, ಸ್ವಲ್ಪ ಬಂದು ನೋಡು” ಎಂದು. ನಾನು ಅವರಿಗೆ ಫೋನಿನಲ್ಲೇ ವಿವರಿಸಲು ಪ್ರಯತ್ನಿಸಿದೆ. “ಫ್ಲಾಪಿ ಡ್ರೈವ್‌ಗೆ ಒಂದು ಚಿಲಕ ತರಹ ಇರುತ್ತದೆ ಅದನ್ನು ಸ್ವಲ್ಪ ವೇಗವಾಗಿ ತಿರುಗಿಸಿ. ಆಗ ಫ್ಲಾಪಿ ಅರ್ಧ ಇಂಚಿನಷ್ಟು ಹೊರ ಬರುತ್ತದೆ” ಎಂದೆಲ್ಲ ಹೇಳಿದೆ. ಅವರು ಮಾತ್ರ “ಅದೆಲ್ಲ ನಮಗೆ ಅರ್ಥವಾಗುತ್ತಿಲ್ಲ, ನೀವೇ ಬನ್ನಿ” ಎಂದು ಒತ್ತಾಯ ಮಾಡಿದರು. ಸರಿ ನೋಡೋಣ ಎಂದು ಹೊರಟೆ. ಎಂತದಿಕ್ಕೂ ಇರಲಿ ಎಂದು ಸ್ಕ್ರೂಡ್ರೈವರ್ ಕೂಡ ತೆಗೆದುಕೊಂಡು ಹೋದೆ. ಹೋಗಿ ನೋಡಿದರೆ ಆ ಪಿ.ಸಿ.ಯ ಕ್ಯಾಬಿನೆಟ್‌ನಲ್ಲಿ ಸ್ವಲ್ಪ ತಯಾರಿಕೆಯ ದೋಷವಿತ್ತು. ಹಾರ್ಡ್‌ಡಿಸ್ಕ್ ಮತ್ತು ಫ್ಲಾಪಿ ಡ್ರೈವ್‌ಗಳ ಮಧ್ಯೆ ಸ್ವಲ್ಪ ಸ್ಥಳವಿತ್ತು. ಅವರು ಫ್ಲಾಪಿಯನ್ನು ಅದರಲ್ಲಿ ತುರುಕಿಸಿದ್ದರು. ಫ್ಲಾಪಿ ಸೀದಾ ಪಿ.ಸಿಯ ಒಳಗೆ ಹೋಗಿ ನಾಪತ್ತೆಯಾಗಿತ್ತು! ನಾನು ಕ್ಯಾಬಿನೆಟ್ ಬಿಚ್ಚಿ ಅದನ್ನು ತೆಗೆದುಕೊಟ್ಟೆ.
ಒಬ್ಬರಿಗೆ ವಿಂಡೋಸ್ ಫ್ಲಾಪಿಗಳನ್ನು ಕೊಟ್ಟಿದ್ದೆ. ಅದನ್ನು ಇನ್‌ಸ್ಟಾಲ್ ಮಾಡುವುದು ಹೇಗೆ ಎಂದು ಬರೆದುಕೊಟ್ಟಿದ್ದೆ. ಮೊದಲ ಫ್ಲಾಪಿ ಹಾಕಿ ಸುರು ಮಾಡಿದರು. ಸ್ವಲ್ಪ ಹೊತ್ತಿನಲ್ಲೇ ನನಗೆ ಕರೆ ಬಂತು. “ನಾನು ಮೊದಲ ಫ್ಲಾಪಿ ಹಾಕಿ ಪ್ರಾರಂಭಿಸಿದೆ. ಈಗ ಇದು Insert second disk to continue ಎನ್ನುತ್ತಿದೆ”. ನಾನು ಕೇಳಿದೆ “ಅದರಲ್ಲೇನು ಸಮಸ್ಯೆ?” “ಮೊದಲನೆಯ ಡಿಸ್ಕ್ ಅಲ್ಲೇ ಇರುವಾಗ ಎರಡನೆಯ ಡಿಸ್ಕ್ ಹಾಕುವುದು ಹೇಗೆ? ಅದಕ್ಕೆ ಜಾಗವೆಲ್ಲಿದೆ?” “ಮೊದಲನೆಯ ಡಿಸ್ಕ್ ತೆಗೆದು ನಂತರ ಎರಡನೆಯದನ್ನು ಹಾಕಬೇಕು” ಎಂದಾಗ “ಹಾಗೆಂದು instruction ಯಾಕೆ ಇಲ್ಲ?” ಎಂದು ಕೇಳಬೇಕೇ?!
ಇನ್ನೊಬ್ಬರು ಒಂದು ದಿನ ಕರೆ ಮಾಡಿದರು. ನನ್ನ ಪಿ.ಸಿ. ಕೆಲಸ ಮಾಡುತ್ತಿಲ್ಲ. ಸ್ವಲ್ಪ ಬಂದು ನೋಡಿ ಸಹಾಯ ಮಾಡು ಎಂದರು. ಸರಿ. ಹೋಗಿ ನೊಡಿದೆ. ಅದು ಎಂ.ಎಸ್. ಡಾಸ್ ಪಿ.ಸಿಯಾಗಿತ್ತು. ಅದರಲ್ಲಿ ಎರಡು ಮುಖ್ಯ ಫೈಲ್‌ಗಳಿರುತ್ತಿದ್ದವು. ಅವು MSDOS.SYS ಮತ್ತು CONFIG.SYS. ಅವರು ಈ ಎರಡು ಫೈಲ್‌ಗಳನ್ನು ಅಳಿಸಿಹಾಕಿದ್ದರು.
ವಾಲೇಕರ್ ಎಂಬೊಬ್ಬ ವಿಜ್ಞಾನಿ ನಮ್ಮ ವಿಭಾಗದಲ್ಲಿದ್ದರು. ಅವರೊಡನೆ ಒಮ್ಮೆ ಕ್ಯಾಂಟೀನ್‌ನಲ್ಲಿ ಕುಳಿತುಕೊಂಡು ಚಹಾ ಕುಡಿಯುತ್ತಿದ್ದಾಗ ನನ್ನ ಪಿ.ಸಿ.ಗೆ ವೈರಸ್ ಬಂದು ತೊಂದರೆಯಾಗಿದೆ ಎಂದೆ. ಅವರಿಗೆ ಆಶ್ಚರ್ಯ, ಪಿ.ಸಿಗೆ ವೈರಸ್ ಹೇಗೆ ಬರಲು ಸಾಧ್ಯ, ಅದು ಮನುಷ್ಯರಿಗೆ ಬರುವುದಲ್ಲವೇ ಎಂದು. ಮುಂದೊಮ್ಮೆ ಅವರಿಗೂ ಪಿ.ಸಿ. ಬಂತು. ಬಂದೊಡನೆ ನನಗೆ ಕೇಳಿದರು -“ನಾನು ಆಂಟಿಬಯೋಟಿಕ್ ತೆಗೆದುಕೊಳ್ಳುತ್ತಿದ್ದೇನೆ. ಆದುದರಿಂದ ನನ್ನ ಪಿ.ಸಿ.ಗೆ ವೈರಸ್ ಬರಲಿಕ್ಕಿಲ್ಲ ಅಲ್ಲವೇ?”
ಕೆಲವು ವರ್ಷಗಳ ನಂತರ ಸಿ.ಡಿ.ಗಳು ಬಂದವು. ನಮ್ಮ ವಿಭಾಗದಲ್ಲಿದ್ದ ಓರ್ವ ಮಹಿಳಾ ವಿಜ್ಞಾನಿ ಏನು ಮಾಡಿದ್ದರು ಗೊತ್ತಾ? ಸಿ.ಡಿಯನ್ನು ಉಲ್ಟಾ ಹಾಕಿ ಅದು ಕೆಲಸ ಮಾಡುತ್ತಿಲ್ಲ, ಸ್ವಲ್ಪ ಬಂದು ನೋಡು, ಎಂದು ನನ್ನನ್ನು ಕರೆದಿದ್ರು. ಅವರಿಗೆ ನೀವು ಸಿ.ಡಿ.ಯನ್ನು ಉಲ್ಟಾ ಹಾಕಿದ್ದೀರಿ ಎಂದು ತೋರಿಸಿಕೊಟ್ಟಿದ್ದಕ್ಕೆ ನಾನು ಅವರಿಗೆ ಅವಮಾನ ಮಾಡಿದ್ದೇನೆ ಎಂದು ಬೇರೆಯವರಲ್ಲಿ ಹೇಳಿದ್ದರು.
(ಗಣಕಾವಲೋಕನದ ಇತರೆ ಸಂಚಿಕೆಗಳನ್ನು ಓದಲು ಕೆಳಗೆ ಕಾಣುವ ಗಣಕಾವಲೋಕನ ಎಂಬ ಟ್ಯಾಗ್‌ ಮೇಲೆ ಕ್ಲಿಕ್ ಮಾಡಿ).
The post ನನ್ನ ಗಣಕಾವಲೋಕನ – ೬ first appeared on Vishva Kannada.
ನನ್ನ ಗಣಕಾವಲೋಕನ – ೫
ಮನೆಗೆ ಬಂತು ಪಿ.ಸಿ.
ಬಹುಶಃ 1989 ರ ಸಮಯ. ಬಿಎಆರ್‌ಸಿಯು ವಿಜ್ಞಾನಿಗಳಿಗೆ ತಮ್ಮ ಮನೆಯಲ್ಲಿ ಬಳಸಲು ಖಾಸಾ ಗಣಕ ಅರ್ಥಾತ್ ಪರ್ಸನಲ್ ಕಂಪ್ಯೂಟರ್ ಅಥವಾ ಸರಳವಾಗಿ ಪಿಸಿ ಕೊಳ್ಳಲು ಬಡ್ಡಿಯಿಲ್ಲದ ಸಾಲ ಕೊಡಲು ಪ್ರಾರಂಭಿಸಿತು. ಆಗ ನಾನು ಒಂದು ಪಿಸಿ ಕೊಂಡುಕೊಂಡೆ. ಅದು ಪಿಸಿ-ಎಕ್ಸ್‌ಟಿ ಆಗಿತ್ತು. ಅದರಲ್ಲಿದ್ದುದು 20 ಎಂ.ಬಿ.ಯ ಹಾರ್ಡ್‌ಡಿಸ್ಕ್ ಮತ್ತು 640 ಕೆ.ಬಿ.ಯ ಫ್ಲಾಪಿ ಡ್ರೈವ್. ಆಗಿನ್ನೂ ಬಣ್ಣದ ಪರದೆ ಅಂದರೆ ಕಲರ್ ಮೋನಿಟರ್‌ಗಳು ಕೈಗೆಟುಕುವ ಬೆಲೆಗೆ ಮಾರುಕಟ್ಟೆಗೆ ಬಂದಿರಲಿಲ್ಲ. ನಂತರ ಒಂದು ಡಾಟ್ ಮಾಟ್ರಿಕ್ಸ್ ಪ್ರಿಂಟರ್ ಕೂಡ ಕೊಂಡುಕೊಂಡೆ. ಇದ್ದಬಿದ್ದ ತಂತ್ರಾಂಶಗಳನ್ನೆಲ್ಲ ಅಲ್ಲಿಂದಿಲ್ಲಿಂದ ಪ್ರತಿ ಮಾಡಿ ತರುವುದು, ಅವುಗಳನ್ನು ಕಲಿಯುವುದು, ಇವೇ ತುಂಬ ಸಮಯ ತಿಂದವು. ಅದರಲ್ಲೇನೋ ಒಂದು ರೀತಿಯ ಥ್ರಿಲ್ ಇರುತ್ತಿತ್ತು. ಆಗ ಬಳಕೆಯಲ್ಲಿದ್ದ ತಂತ್ರಾಂಶಗಳು – ಡಿಬೇಸ್-3, ಲೋಟಸ್ 1-2-3, ವರ್ಡ್‌ಸ್ಟಾರ್, ಇತ್ಯಾದಿ. ಪುಟವಿನ್ಯಾಸ ಅಂದರೆ ಡಿಟಿಪಿ ಮಾಡಲು ಬಳಸುತ್ತಿದ್ದುದು ಜೆಮ್ ವೆಂಚುರಾ. ಗ್ರಾಫಿಕ್ಸ್‌ಗೆ ಬಳಸುತ್ತಿದ್ದುದು ಕೋರೆಲ್‌ಡ್ರಾ 3. ಇಂಜಿಯರಿಂಗ್ ಡ್ರಾಯಿಂಗ್‌ಗಳಿಗೆ ಆಟೋಕ್ಯಾಡ್ 2.0. ಆಟಗಳು ಆಗಷ್ಟೆ ಬರಲು ಪ್ರಾರಂಭಿಸಿದ್ದವು. ಆಗಿನ ತುಂಬ ಜನಪ್ರಿಯ ಆಟಗಳೆಂದರೆ ಟೆಟ್ರಿಸ್, ಪ್ಯಾಕ್‌ಮ್ಯಾನ್, ಪ್ರಿನ್ಸ್ ಆಫ್ ಪರ್ಷಿಯ ಇತ್ಯಾದಿ.
ಗಣಕದಲ್ಲಿ ಕನ್ನಡ
ಒಂದು ದಿನ ಪತ್ರಿಕೆಯಲ್ಲಿ ಒಂದು ಜಾಹೀರಾತು ನೋಡಿದೆ. ಅದು ಆಕೃತಿ ಎಂಬ ಡಿಟಿಪಿ ತಂತ್ರಾಂಶದ್ದು. ಅದು ಭಾರತದ 11 ಭಾಷೆಗಳಲ್ಲಿ ಲಭ್ಯ ಎಂದಿತ್ತು. ಅದರ ವಿಳಾಸ ಹುಡುಕಿಕೊಂಡು ಗೊರೆಗಾಂವ್‌ಗೆ ಹೋದೆ. ಅದರ ಬೆಲೆ ಆಗ ರೂ.11,000 ಇತ್ತು. ನಮ್ಮ ಕನ್ನಡ ಸಂಘದ ವತಿಯಿಂದ ಅದನ್ನು ಕೊಂಡುಕೊಳ್ಳುವ ತೀರ್ಮಾನ ಮಾಡಿದೆವು. ಮುಂದುವರೆಸುವ ಮೊದಲು ಬಿಏಆರ್‌ಸಿ ಕನ್ನಡ ಸಂಘ ಮತ್ತು ನಮ್ಮ ಕೆಲಸಗಳ ಬಗ್ಗೆ ಸ್ವಲ್ಪ ಹೇಳಬೇಕು.
ಭಾಭಾ ಪರಮಾಣು ಸಂಶೋಧನಾ ಕೇಂದ್ರದ (ಬಿಏಆರ್‌ಸಿ) ಕನ್ನಡ ವಿಜ್ಞಾನಿಗಳ ಸಂಘವೊಂದಿತ್ತು. ನಾವು ಕನ್ನಡ ಭಾಷೆಯಲ್ಲಿ ವಿಜ್ಞಾನ ವಿಚಾರ ಸಂಕಿರಣಗಳನ್ನು ಆಯೋಜಿಸುತ್ತಿದ್ದವು. ಬೆಳಗು ಎಂಬ ವಿಜ್ಞಾನ ಪತ್ರಿಕೆಯನ್ನೂ ಪ್ರಕಟಿಸುತ್ತಿದ್ದೆವು. ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧಗಳ ಪುಸ್ತಕಗಳನ್ನೂ ಹೊರತರುತ್ತಿದ್ದೆವು. ಇವುಗಳನ್ನು ಮುಂಬಯಿಯಲ್ಲಿದ್ದ ಕನ್ನಡ ಮುದ್ರಣಾಲಯಗಳಲ್ಲಿ ಮುದ್ರಿಸುತ್ತಿದ್ದವು. ಮುಂಬಯಿಯಲ್ಲಿ ಹಲವು ಕನ್ನಡ ಸಂಘಗಳು, ಶಾಲೆಗಳು, ಪತ್ರಿಕೆಗಳು, ಮ್ಯಾಗಝಿನ್‌ಗಳು ಎಲ್ಲ ಇದ್ದವು. ಎಲ್ಲವೂ ಮುಂಬಯಿಯಲ್ಲೇ ಮುದ್ರಣವಾಗುತ್ತಿದ್ದವು. ನನಗೆ ನೆನಪಿದ್ದಂತೆ 3-4 ಕನ್ನಡ ಮುದ್ರಕರಿದ್ದರು. ಅಲ್ಲಿಯ ಮುದ್ರಕರಿಗೆ ದೊಡ್ಡ ಸಮಸ್ಯೆಯಾಗುತ್ತಿದ್ದುದು ನಮ್ಮ ಪತ್ರಿಕೆ ಹಾಗೂ ಪುಸ್ತಕಗಳ ಮುದ್ರಣ. ನಾವು ವಿಜ್ಞಾನದ ಚಿತ್ರಗಳು, ಕೋಷ್ಟಕಗಳು, ಸಮೀಕರಣಗಳನ್ನೆಲ್ಲ ಬಳಸುತ್ತಿದ್ದೆವು. ಇವುಗಳನ್ನು ಆಗಿನ ಕಾಲದ ಅಚ್ಚಿನ ಮೊಳೆಗಳ ಮುದ್ರಕಗಳಲ್ಲಿ (ಲೆಟರ್ ಪ್ರೆಸ್) ಮುದ್ರಿಸಲು ಅವರಿಗೆ ಬಹಳ ಕಷ್ಟವಾಗುತ್ತಿತ್ತು. ಪ್ರತಿಯೊಂದಕ್ಕೂ ಪ್ರತ್ಯೇಕ ಬ್ಲಾಕ್ ಮಾಡಿಸಿ ಮುದ್ರಿಸಬೇಕಿತ್ತು. ಹಲವು ತಪ್ಪುಗಳು ಆಗುತ್ತಿದ್ದವು. ಈ ಕಷ್ಟವನ್ನು ನೋಡಿ ನೋಡಿ ಬೇಸತ್ತಿದ್ದ ನಮ್ಮ ಕನ್ನಡ ಸಂಘದ ವಿಜ್ಞಾನಿಗಳಿಗೆ ಕನ್ನಡದ ಡಿಟಿಪಿ ತಂತ್ರಾಂಶ ಕೊಂಡು ಬಳಸೋಣ ಎಂಬ ನನ್ನ ಸಲಹೆ ಆಪ್ಯಾಯಮಾನವಾಗಿತ್ತು.
ನನ್ನ ಪಿಸಿಯಲ್ಲಿ ಆಕೃತಿ ಕನ್ನಡ ಡಿಟಿಪಿ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಲಾಯಿತು. ನಾನು ಮತ್ತು ನನ್ನ ಹೆಂಡತಿ ಕನ್ನಡ ಬೆರಳಚ್ಚು (ಟೈಪಿಂಗ್) ಕಲಿತೆವು. ಆಗ ಬಳಕೆಯಲ್ಲಿದ್ದುದು ಇನ್‌ಸ್‌ಕ್ರಿಪ್ಟ್ ಕೀಲಿಮಣೆ ವಿನ್ಯಾಸ. ಡಾಸ್‌ನಲ್ಲಿ ಟೈಪ್ ಮಾಡಿ ನಂತರ ಅದನ್ನು ವೆಂಚುರಾದಲ್ಲಿ ಪುಟವಿನ್ಯಾಸ (ಡಿಟಿಪಿ) ಮಾಡುತ್ತಿದ್ದೆ. ಕೊನೆಗೆ ಪ್ರಿಂಟ್‌ ಟು ಫೈಲ್ ಎಂದು ಮಾಡಿ ಆ ಫೈಲ್‌ಗಳನ್ನು ಫ್ಲಾಪಿಯಲ್ಲಿ ಹಾಕಿ ಮುದ್ರಕರಲ್ಲಿಗೆ ಹೋಗಿ ಅಲ್ಲಿ ಟ್ರೇಸಿಂಗ್ ಶೀಟ್‌ನಲ್ಲಿ ಪ್ರಿಂಟ್ ಮಾಡಿಸಿ ಕೊನೆಗೆ ಆಫ್‌ಸೆಟ್ ವಿಧಾನದಲ್ಲಿ ಮುದ್ರಣ ಮಾಡಿಸುತ್ತಿದ್ದೆವು. ಆಗ ನಾನು ಕೋರೆಲ್‌ಡ್ರಾ ಎಲ್ಲ ಕಲಿತೆ. ಯಾಕೆಂದರೆ ನಮಗೆ ವಿಜ್ಞಾನದ ಲೇಖನಗಳಿಗೆ ಅಗತ್ಯವಾದ ಚಿತ್ರಗಳನ್ನು ಮಾಡಬೇಕಿತ್ತು.  ಮುಂಬಯಿಯಲ್ಲಿ ಕನ್ನಡ ಡಿಟಿಪಿ ಪ್ರಾರಂಭಿಸಿದವನು ನಾನು ಎನ್ನಬಹುದು.
ಮುಂಬಯಿಯಲ್ಲಿ ನಾವು ಯಾವ ಮುದ್ರಕರಿಂದ ಪುಸ್ತಕ ಮಾಡಿಸುತ್ತದ್ದೆವೋ (ಅವರೆಲ್ಲ ಕನ್ನಡಿಗರು) ಅವರಿಗೆ ಈ ಕನ್ನಡ ಡಿಟಿಪಿ ತುಂಬ ಉಪಯುಕ್ತ ಎಂದು ಅರಿವಾಯಿತು. ಕನ್ನಡದ ಪುಸ್ತಕಗಳನ್ನು ಡಿಟಿಪಿ ಮಾಡಿ ಕೊಡಲು ನನ್ನನ್ನು ಕೇಳಿಕೊಂಡರು. ಸಾಯಂಕಾಲ ಮತ್ತು ವಾರಾಂತ್ಯ ಈ ಕೆಲಸ ಮಾಡುತ್ತಿದ್ದೆ. ಕೊನೆಗೆ ಈ ರಗಳೆ ಯಾಕೆ ಎಂದು ಮುದ್ರಕರು ಕಳಿಸಿಕೊಟ್ಟ ಒಂದಿಬ್ಬರಿಗೆ ಕನ್ನಡ ಡಿಟಿಪಿ ಹೇಳಿಕೊಟ್ಟೆ. ಆ ನಂತರ ನಮ್ಮ ಮನೆಯಲ್ಲಿ ನಮ್ಮ ಕನ್ನಡ ಸಂಘದ ಕೆಲಸಕ್ಕೆ ಮಾತ್ರ ಕನ್ನಡ ಡಿಟಿಪಿ ಮಾಡುತ್ತಿದ್ದೆವು. ಕನ್ನಡ ಡಿಟಿಪಿಯಲ್ಲಿ ಪುಟವಿನ್ಯಾಸ ನಾನು ಮಾಡುತ್ತಿದ್ದೆ, ಟೈಪಿಂಗ್ ನನ್ನ ಹೆಂಡತಿ ಮಾಡುತ್ತಿದ್ದಳು.
(ಗಣಕಾವಲೋಕನದ ಇತರೆ ಸಂಚಿಕೆಗಳನ್ನು ಓದಲು ಕೆಳಗೆ ಕಾಣುವ ಗಣಕಾವಲೋಕನ ಎಂಬ ಟ್ಯಾಗ್‌ ಮೇಲೆ ಕ್ಲಿಕ್ ಮಾಡಿ).
The post ನನ್ನ ಗಣಕಾವಲೋಕನ – ೫ first appeared on Vishva Kannada.
ಕನ್ನಡ ಹೋರಾಟಗಾರರಿಗೆ
ಕನ್ನಡ ಭಾಷೆಯನ್ನು ರಕ್ಷಿಸಲು ಹೋರಾಡಲು ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆಯೋ ಅದಕ್ಕಿಂತಲೂ ಹೆಚ್ಚು ವೇದಿಕೆ, ಪಡೆಗಳಿವೆ. ಹಲವು ಮಂದಿಗೆ ಇದು ಪೂರ್ಣಪ್ರಮಾಣದ ಉದ್ಯೋಗವಾಗಿದೆ. ಹಾಗಿದ್ದರೂ ಕನ್ನಡದ ಸ್ಥಿತಿ ಉತ್ತಮವಾಗಿಲ್ಲ. ಈ ಹೋರಾಟಗಾರರು ಸಾಮಾನ್ಯವಾಗಿ ಪ್ರತಿಭಟನೆಗಳನ್ನು ಏರ್ಪಡಿಸುವಲ್ಲಿ ಸಿದ್ಧಹಸ್ತರು. ಪ್ರತಿಭಟನೆಗಳು ಅತೀ ಅಗತ್ಯ ಎಂದು ವಾದಿಸುವವರು. ಪ್ರತಿಭಟನೆ ಹೋರಾಟಗಳಿಂದ ಕನ್ನಡ ಭಾಷೆಯ ಉಳಿದು ಬೆಳೆಯುತ್ತದೆಯೇ? ಅದು ನಿಜವಾಗಿದ್ದರೆ ಇಷ್ಟು ಹೊತ್ತಿಗೆ ಈ ಎಲ್ಲ ವೇದಿಕೆ, ಪಡೆಗಳು ಬಾಗಿಲು ಹಾಕಬೇಕಾಗಿತ್ತು. ಯಾಕೆಂದರೆ ಕನ್ನಡ ಬೆಳೆದು ಅವುಗಳ ಅಗತ್ಯವಿಲ್ಲದಾಗುತ್ತಿತ್ತು. ಹಾಗೇನೂ ಆದಂತಿಲ್ಲ. ಅಥವಾ ಹೋರಾಟ ಇನ್ನೂ ಫಲ ನೀಡಿಲ್ಲ, ಫಲ ನೀಡುವ ಹಾದಿಯಲ್ಲಿದ್ದೇವೆಯಷ್ಟೆ ಎಂದು ಹೇಳುತ್ತೀರಾ? ಸರಿ ಸ್ವಾಮಿ, ಒಪ್ಪೋಣ. ನೀವೆಲ್ಲ ದೊಡ್ಡ ದೊಡ್ಡ ಹೋರಾಟಗಳನ್ನು ಮಾಡಿದವರು, ಮಾಡುತ್ತಿರುವವರು. ಹೋರಾಟ ಮಾಡಲು ಇಲ್ಲಿ ಒಂದೆರಡು ವಿಷಯಗಳಿವೆ. ಸ್ವಲ್ಪ ಗಮನ ಹರಿಸುತ್ತೀರಾ?
ಮಾಹಿತಿ ತಂತ್ರಜ್ಞಾನ ಮತ್ತು ಅಂತರಜಾದಲ್ಲಿ ಕೆಲವು ಕಡೆ ಕನ್ನಡವನ್ನು ಕಡೆಗಣಿಸಲಾಗಿದೆ. ಇದನ್ನು ಸರಿಪಡಿಸಲು ನಾವು ಕೆಲವು ತಂತ್ರಜ್ಞರು ಹಲವು ಸಲ ಇ-ಪ್ರಯತ್ನ ಮಾಡಿದ್ದೇವೆ (ಇ-ಮೈಲ್, ಟ್ವಿಟ್ಟರ್, ಬ್ಲಾಗ್, ಇತ್ಯಾದಿ). ಅವು ಫಲ ನೀಡಲಿಲ್ಲ. ಆದುದರಿಂದ ಕನ್ನಡ ಹೋರಾಟಗಾರರು ಇಲ್ಲಿ ಹೋರಾಟ ಮಾಡಬಹುದು. ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡುತ್ತಿದ್ದೇನೆ.
ಗೂಗ್ಲ್ ನ್ಯೂಸ್
ಹಲವು ಸುದ್ದಿ ಪೋರ್ಟಲ್ ಮತ್ತು ಸುದ್ದಿ ಪತ್ರಿಕೆಗಳ ಜಾಲತಾಣಗಳಿಂದ ಸುದ್ದಿಗಳ ಮುಖ್ಯಾಂಶವನ್ನು ಕಾಲಕಾಲಕ್ಕೆ ನವೀಕರಿಸಿ ನೀಡುವ ಜಾಲತಾಣ ಗೂಗ್ಲ್ ನ್ಯೂಸ್ (news.google.com). ಇದರಲ್ಲಿ ಕೆಲವು ಭಾರತೀಯ ಭಾಷೆಗಳಿವೆ. ಆದರೆ ಕನ್ನಡವಿಲ್ಲ. ಹಲವು ವರ್ಷಗಳಿಂದ ಗೂಗ್ಲ್ ಜೊತೆ ನಾನು ಈ ಬಗ್ಗೆ ಹಲವು ಸಲ ಮಾತನಾಡಿದ್ದೇನೆ. ಮಾಹಿತಿ ತಂತ್ರಜ್ಞಾನದಲ್ಲಿ ಮತ್ತು ಅಂತರಜಾಲದಲ್ಲಿ ಭಾರತೀಯ ಭಾಷೆಗಳ ಸ್ಥಿತಿಗತಿ ಬಗೆಗಿನ ಹಲವು ವಿಚಾರಸಂಕಿರಣಗಳಲ್ಲಿ ನಾನು ಭಾಗವಹಿಸಿದ್ದೆ. ಅಲ್ಲೆಲ್ಲ ಗೂಗ್ಲ್ ಪ್ರತಿನಿಧಿಗಳು ಸಿಕ್ಕದರೆ ಈ ಬಗ್ಗೆ ಅವರನ್ನು ವಿಚಾರಿಸಿದ್ದೇನೆ. ಕೆಲವು ವರ್ಷಗಳ ಹಿಂದೆ ಕನ್ನಡದ ಪತ್ರಿಕೆಗಳ ಜಾಲತಾಣಗಳು ಮತ್ತು ಕನ್ನಡದ ಸುದ್ದಿ ಪೋರ್ಟಲ್‌ಗಳ ಸಂಖ್ಯೆ ತುಂಬ ಕಡಿಮೆ ಇತ್ತು. ನನ್ನ ಪ್ರಶ್ನೆಗೆ ಗೂಗ್ಲ್‌ನವರ ಸಿದ್ಧ ಉತ್ತರವೇನಿರುತ್ತಿತ್ತೆಂದರೆ “ಕನ್ನಡ ಭಾಷೆಯ ಸುದ್ದಿ ಜಾಲತಾಣಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ” ಎಂದು. ಆದರೆ ಈಗಿನ ಪರಿಸ್ಥಿತಿ ಹಾಗಿಲ್ಲ. ಆದರೂ ಗೂಗ್ಲ್‌ನವರು ಕನ್ನಡದ ಸುದ್ದಿಗಳನ್ನು ನೀಡುತ್ತಿಲ್ಲ. ಗೂಗ್ಲ್‌ನವರ ಜೊತೆ ಈ ಬಗ್ಗೆ ಹೋರಾಡಬೇಕಾಗಿದೆ.
ಗೂಗ್ಲ್ ಆಡ್‌ಸೆನ್ಸ್
ನೀವು ಜಾಲತಾಣಗಳನ್ನು ತೆರೆದಾಗ ಬದಿಯಲ್ಲಿ ಅಥವಾ ಮಧ್ಯದಲ್ಲಿ ಅಲ್ಲಲ್ಲಿ ಜಾಹೀರಾತುಗಳು ಬರುವುದನ್ನು ಗಮನಿಸಿರಬಹುದು. ಇವುಗಳಲ್ಲಿ ಕೆಲವು ಗೂಗ್ಲ್ ಮೂಲಕ ಬಂದಿರುತ್ತವೆ. ಈ ಜಾಹೀರಾತನ್ನು ಕ್ಲಿಕ್ ಮಾಡಿದರೆ ಆ ಜಾಲತಾಣವನ್ನು ನಿರ್ಮಿಸಿದವನಿಗೆ ಗೂಗ್ಲ್ ಹಣ ನೀಡುತ್ತದೆ. ಗೂಗ್ಲ್‌ಗೆ ಜಾಹೀರಾತುದಾರರು ಹಣ ನೀಡುತ್ತಾರೆ. ಗೂಗ್ಲ್‌ನವರು ಒಂದು ಕ್ಲಿಕ್‌ಗೆ ಇಂತಿಷ್ಟು ಎಂದು ಹಣ ನೀಡುತ್ತಾರೆ. ನೀವು ಗಮನಿಸರಬಹದು. ಈ ಜಾಹೀರಾತು ಸಾಮಾನ್ಯವಾಗಿ ನೀವು ಓದುತ್ತಿರುವ ವಿಷಯದ ಅಥವಾ ಓದುತ್ತಿರುವ ಲೇಖನದಲ್ಲಿ ಬರುವ ಪದಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಗೂಗ್ಲ್‌ನವರು ಏನು ಮಾಡುತ್ತಾರೆ ಅಂದರೆ ಲೇಖನದಲ್ಲಿರುವ ಪದಗಳಿಗೆ ಸಂಬಂಧಿಸಿದ ವಿಷಯದ ಜಾಹೀರಾತನ್ನು ಜಾಲತಾಣಕ್ಕೆ ತಳ್ಳುತ್ತಾರೆ. ಇದಕ್ಕಾಗಿ ಅವರು ಹಲವು ಪದಗಳ ಪಟ್ಟಿಯನ್ನು ಇಟ್ಟುಕೊಂಡಿರುತ್ತಾರೆ. ಜಾಹೀರಾತುದಾರರು ಈ ಪದಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಗೂಗ್ಲ್ ಜಾಹೀರಾತು ನಿಮ್ಮ ಜಾಲತಾಣದಲ್ಲಿ ಬರಬೇಕು ಮತ್ತು ಆ ಮೂಲಕ ನಿಮಗೆ ಸ್ವಲ್ಪ ಹಣ ಸಂಪಾದನೆ ಆಗಬೇಕಾದರೆ ನೀವು ಗೂಗ್ಲ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಇದಕ್ಕೆ ಗೂಗ್ಲ್ ಆಡ್‌ಸೆನ್ಸ್‌ ಎನ್ನುತ್ತಾರೆ. ಈ ಗೂಗ್ಲ್ ಆಡ್‌ಸೆನ್ಸ್‌ನಲ್ಲಿ ಕನ್ನಡವಿಲ್ಲ. ಅಂದರೆ ನಿಮ್ಮ ಜಾಲತಾಣದ ಭಾಷೆ ಕನ್ನಡವಾಗಿದ್ದಲ್ಲಿ ನಿಮ್ಮ ಜಾಲತಾಣದಲ್ಲಿ ಗೂಗ್ಲ್ ಮೂಲಕ ಜಾಹೀರಾತು ಮೂಡಿಬರುವುದಿಲ್ಲ ಮತ್ತು ಆ ಮೂಲಕ ನಿಮಗೆ ಹಣ ಸಂಪಾದನೆ ಆಗುವುದಿಲ್ಲ. ಅರ್ಥಾತ್ ಕನ್ನಡದಲ್ಲಿ ಬ್ಲಾಗ್ ಬರೆಯುವ ಮೂಲಕ ಅಥವಾ ಕನ್ನಡ ಜಾಲತಾಣ ನಡೆಸುವ ಮೂಲಕ ನಿಮಗೆ ಗೂಗ್ಲ್ ಜಾಹೀರಾತು ಮೂಲಕ ಹಣ ಸಂಪಾದನೆ ಸಾಧ್ಯವಿಲ್ಲ. ಗೂಗ್ಲ್‌ನವರ ಜೊತೆ ಈ ಬಗ್ಗೆ ಹೋರಾಡಬೇಕಾಗಿದೆ.
ಅಮೆಝಾನ್ ಕಿಂಡಲ್
ಈಗ ಇ-ಪುಸ್ತಕಗಳ (e-book) ಕಾಲ ಬಂದಿದೆ. ಇ-ಪುಸ್ತಕಗಳನ್ನು ಓದಲು ಇ-ಬುಕ್ ರೀಡರ್ ಎಂಬ ಸಾಧನ ದೊರೆಯುತ್ತದೆ. ಇವುಗಳಲ್ಲಿ ಪ್ರಮುಖವಾದುದು ಅಮೆಝಾನ್ ಕಿಂಡಲ್. ಇ-ಪುಸ್ತಕದಲ್ಲಿ ಹಲವು ಸವಲತ್ತುಗಳಿವೆ. ಅಕ್ಷರಗಳನ್ನು ಚಿಕ್ಕದು ದೊಡ್ಡದು ಮಾಡುವುದು, ಪುಟ ಮಗುಚಿದ ಅನುಭವ, ಓದುತ್ತಿರುವ ವಿಷಯದ ಬಗ್ಗೆ ಅಲ್ಲಲ್ಲೇ ಟಿಪ್ಪಣಿ ಬರೆಯುವುದು, ಪಠ್ಯದಿಂದ ಧ್ವನಿಗೆ, ಹೀಗೆ ಹಲವು ಉಪಯುಕ್ತ ಸವಲತ್ತುಗಳಿವೆ. ಆರಂಭದಲ್ಲಿ ಅಮೆಝಾನ್ ಕಿಂಡಲ್‌ನಲ್ಲಿ ಕನ್ನಡ ಫಾಂಟ್ ಇರುತ್ತಿರಲಿಲ್ಲ. ಅಂದರೆ ಕನ್ನಡದ ಇ-ಪುಸ್ತಕ ಓದಬೇಕಿದ್ದರೆ ಅದನ್ನು ಪಿಡಿಎಫ್ ಆಗಿ ಪರಿವರ್ತಿಸಿ ಬಳಸಬೇಕಾಗಿತ್ತು. ಪಿಡಿಎಫ್ ಪುಸ್ತಕದಲ್ಲಿ ಇ-ಬುಕ್ ರೀಡರ್‌ನ ಹಲವು ಸವಲತ್ತುಗಳು ದೊರೆಯುವುದಿಲ್ಲ. ಈಗ ಆ ಸಮಸ್ಯೆಯಿಲ್ಲ. ಹೊಸ ಕಿಂಡಲ್‌ನಲ್ಲಿ ಕನ್ನಡದ ಇ-ಪುಸ್ತಕವನ್ನು ಓದಬಹುದು. ನೀವು ಸ್ವತಃ ಲೇಖಕರಾಗಿದ್ದರೆ ಅಮೆಜಾನ್‌ ಕಿಂಡಲ್‌ಗೆ ನೀವೇ ಪುಸ್ತಕ ಬರೆಯಬಹುದು. ಇದಕ್ಕಾಗಿ ನೀವು ಅಮೆಝಾನ್ ಕಿಂಡಲ್‌ನಲ್ಲಿ ಲೇಖನ ಎಂದು ನೋಂದಣಿ ಮಾಡಿಕೊಂಡು ಕಿಂಡಲ್ ಕ್ರಿಯೇಟರ್ ಎಂಬ ತಂತ್ರಾಂಶವನ್ನು ಡೌನ್‌ಲೋಡ್‌ ಮಾಡಿಕೊಂಡು ಬಳಸಬೇಕು. ಆದರೆ ಇದರಲ್ಲಿ ಕನ್ನಡ ಭಾಷೆಯ ಆಯ್ಕೆ ಇಲ್ಲ. ಅಮೆಝಾನ್‌ನ ಕಿಂಡಲ್‌ ಪುಸ್ತಕಗಳ ವಿಭಾಗಕ್ಕೆ ಹೋಗಿ ಭಾರತೀಯ ಭಾಷೆಗಳ ವಿಭಾಗಕ್ಕೆ ಹೋದರೆ ಅಲ್ಲಿ ಕನ್ನಡ ಎಂಬ ಆಯ್ಕೆ ಇಲ್ಲ. ಈ ಬಗ್ಗೆ ಅಮೆಝಾನ್ ಜೊತೆ ಹಲವು ಸಲ ಇ-ಮಾತುಕತೆ ಆಗಿದೆ. ಏನೂ ಪ್ರಯೋಜನವಾಗಿಲ್ಲ. ಕನ್ನಡ ಸಾಹಿತಿಗಳು ಕನ್ನಡದಲ್ಲಿ ಪುಸ್ತಕ ಬರೆದು ಅವನ್ನು ಕಿಂಡಲ್ ಆವೃತ್ತಿಯನ್ನಾಗಿಸಿ ಅದನ್ನು ಅಮೆಝಾನ್‌ನಲ್ಲಿ ಮಾರಾಟ ಮಾಡಿ ಹಣ ಸಂಪಾದಿಸುವಂತಿಲ್ಲ. ಅಮೆಝಾನ್ ಜೊತೆ ಈ ಬಗ್ಗೆ ಹೋರಾಡಬೇಕಾಗಿದೆ.
ಕನ್ನಡ ಹೋರಾಟಗಾರರು ಗಮನಿಸುತ್ತಿದ್ದೀರಾ?
The post ಕನ್ನಡ ಹೋರಾಟಗಾರರಿಗೆ first appeared on Vishva Kannada.
ಟಿವಿಎಸ್ ಫ್ಯಾಕ್ಟರಿ ಮತ್ತು ಜ್ಯುಪಿಟರ್ ಸ್ಕೂಟರ್ ನೋಟ
‌ಟಿವಿಎಸ್ ಫ್ಯಾಕ್ಟರಿ ಮತ್ತು ಜ್ಯುಪಿಟರ್ ಸ್ಕೂಟರ್ ನೋಟ
ಒಂದಾನೊಂದು ಕಾಲದಲ್ಲಿ ಬಜಾಜ್ ಚೇತಕ್ ಸ್ಕೂಟರ್ ಅನ್ನು ೨೦ ವರ್ಷ ಓಡಿಸಿ ನಂತರವೂ ಲಾಭಕ್ಕೆ ಮಾರುತ್ತಿದ್ದರೆಂದರೆ ಈಗಿನ ಕಾಲದವರಿಗೆ ನಂಬಲು ಕಷ್ಟವಾಗಬಹುದು. ನಾನು ಆ ಕಾಲದವನು. ನನ್ನ ಬಜಾಜ್ ಸೂಪರ್ ಸ್ಕೂಟರಿನ ಟೂಲ್ ಬಾಕ್ಸ್‌ನಲ್ಲಿ ಕ್ಲಚ್ ಮತ್ತು ಬ್ರೇಕ್ ಕೇಬಲ್‌ಗಳು ಯಾವಾಗಲೂ ಇರುತ್ತಿದ್ದವು. ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿ ಸ್ಪಾರ್ಕ್ ಪ್ಲಗ್ ಸ್ವಚ್ಛ ಮಾಡುವುದು, ಕೇಬಲ್ ಬದಲಿಸುವುದು ಸಾಮಾನ್ಯ ದೃಶ್ಯಗಳಾಗಿರುತ್ತಿದ್ದವು. ನಾನಂತೂ ಪಾಯಿಂಟ್ ಸೆಟ್ ಕೂಡ ಸರಿಪಡಿಸುತ್ತಿದ್ದೆ. ಅದು ಅಂದಿನ ಕಾಲ! ಈಗ ಕಾಲ ಬದಲಾಗಿದೆ. ಒಂದು ಸ್ಕೂಟರನ್ನು ೫ ವರ್ಷ, ಅಬ್ಬಬ್ಬಾ ಅಂದರೆ ೧೦ ವರ್ಷಕ್ಕಿಂತ ಹೆಚ್ಚು ಯಾರೂ ಓಡಿಸುವುದಿಲ್ಲ. ಹಲವು ನಮೂನೆಯ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿವೆ. ಒಂದು ಕಾಲದಲ್ಲಿ ಸ್ಕೂಟರ್ ಅಂದರೆ ಬಜಾಜ್ ಅನ್ನುತ್ತಿದ್ದರೆ ಇಂದು ಬಜಾಜ್ ಕಂಪೆನಿ ಸ್ಕೂಟರನ್ನೇ ತಯಾರಿಸುತ್ತಿಲ್ಲ.
ನಾನು ಬೆಂಗಳೂರಿಗೆ ಬಂದ ಹೊಸದರಲ್ಲಿ ಬಜಾಜ್ ಸೂಪರನ್ನು ಮೂಲೆಗುಂಪು ಮಾಡಿ ಕೈನೆಟಿಕ್ ತೆಗೆದುಕೊಂಡೆ. ಅದನ್ನು ೫ ವರ್ಷ ಓಡಿಸಿ ನಂತರ ಅದರದೇ ಇನ್ನೊಂದು ಮಾದರಿ ತೆಗೆದುಕೊಂಡೆ. ಅದಾದ ನಂತರ ಮಗಳಿಗೆ ಸ್ಕೂಟರ್ ತೆಗೆದುಕೊಳ್ಳಲು ಹೊರಟಾಗ ಮಾರುಕಟ್ಟೆಯಲ್ಲಿರುವ ಹಲವು ಸ್ಕೂಟರುಗಳ ಪರಿಶೀಲನೆ ನಡೆಸಿದೆವು. ಮುಖ್ಯವಾಗಿ ಅವಳಿಗೆ ಕಡಿಮೆ ಎತ್ತರದ ಸ್ಕೂಟರ್ ಬೇಕಿತ್ತು. ಆಗ ನಾವು ಅಂತಿಮವಾಗಿ ತೀರ್ಮಾನಿಸಿದ್ದು ಹೀರೋ ಪ್ಲೆಶರ್ ಯಾಕೆಂದರೆ ಅದು ಎಲ್ಲಕಿಂತ ಕಡಿಮೆ ಎತ್ತರದ್ದಾಗಿತ್ತು. ಈ ಒಂದು ವಿಷಯ ಮುಖ್ಯವಲ್ಲವಾಗಿದ್ದರೆ ನಾವು ಕೊಳ್ಳಲು ಯೋಚಿಸಿದ್ದು ಟಿವಿಎಸ್ ಜ್ಯುಪಿಟರ್. ಅದು ಆಗ ತಾನೆ ಮಾರುಕಟ್ಟೆಗೆ ಬಂದಿತ್ತು. ಅದರ ಗುಣಲಕ್ಷಣಗಳು ನಮಗೆ ಹಿಡಿಸಿದ್ದವು.
ಈ ಪೀಠಿಕೆಯ ನಂತರ ಟಿವಿಎಸ್ ಬಗ್ಗೆ ಬರೆಯುತ್ತೇನೆ. ಬೆಂಗಳೂರಿನಿಂದ ಸುಮಾರು ೫೦ ಕಿ.ಮೀ. ದೂರದಲ್ಲಿ ಹೊಸೂರು ಪಕ್ಕ, ಕೆಲಮಂಗಲಕ್ಕೆ ಹೋಗುವ ದಾರಿಯಲ್ಲಿ ಕರ್ನಾಟಕದ ಗಡಿ ದಾಟಿದ ತಕ್ಷಣ, ತಮಿಳುನಾಡಿನಲ್ಲಿ ಟಿವಿಎಸ್ ಫ್ಯಾಕ್ಟರಿ ಇದೆ. ನಾವು ಈ ದಾರಿಯಲ್ಲಿ ಸುಮಾರು ವರ್ಷಗಳಿಂದ ಹೋಗುತ್ತಿದ್ದೇವೆ. ಯಾಕೆಂದರೆ ಕೆಲಮಂಗಲದಿಂದ ೭ ಕಿ.ಮೀ. ದೂರದಲ್ಲಿ ಅಣುಸೋಣಿ ಎಂಬಲ್ಲಿ ಸ್ವಾಮಿ ವಿರಾಜೇಶ್ವರ ಅವರ ಹಂಸಾಶ್ರಮವಿದೆ. ಅದರ ಬಗ್ಗೆ ಪ್ರತ್ಯೇಕ ಬರೆಯಬೇಕು. ಹಾಗೆ ಹೋಗುವಾಗೆಲ್ಲ ಟಿವಿಎಸ್ ಫ್ಯಾಕ್ಟರಿ ಮುಂದೆಯೇ ಹೋಗುವುದು. ಇಂಡಿಬ್ಲಾಗರ್‌ನವರು ಟಿವಿಎಸ್ ಫ್ಯಾಕ್ಟರಿಗೆ ಭೇಟಿ ಇದೆ ಬರುತ್ತೀರಾ ಎಂದಾಗ ನನಗೆ ಗೊತ್ತಿರುವ ಸ್ಥಳವೇ ಎಂದು ಅನ್ನಿಸಿತು. ಕೂಡಲೇ ಹ್ಞೂಂ ಅಂದೆ. ಜುಲೈ ೧೦, ೨೦೧೮ರಂದು ಎಂಟು ಜನ ಬ್ಲಾಗರುಗಳ ಭೇಟಿಯಲ್ಲಿ ನಾನೂ ಸೇರಿದ್ದೆ.
ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡು ಬರುವ, ಇಂಡಿಬ್ಲಾಗರ್‌ನವರು ಏರ್ಪಡಿಸಿದ್ದ,  ವ್ಯಾನ್‌ನಲ್ಲಿ ನಾನು ಹೋಗದೆ ನಾನೇ ಅಲ್ಲಿಗೆ ಕಾರು ಚಲಾಯಿಸಿಕೊಂಡು ಹೋದೆ. ಹೇಳಿದ ಸಮಯಕ್ಕೆ ಸರಿಯಾಗಿ ನಾನು ಅಲ್ಲಿದ್ದೆ. ಆದರೆ ಬೆಂಗಳೂರಿನ ಕುಪ್ರಸಿದ್ಧ ಟ್ರಾಫಿಕ್‌ನಿಂದಾಗಿ ವ್ಯಾನ್ ಒಂದೂಕಾಲು ಗಂಟೆ ತಡವಾಗಿ ಬಂತು. ಅಷ್ಟು ಹೊತ್ತಿಗೆ ನಾನು ಫೋನಿನಲ್ಲಿ ಒಂದು ಸಿನಿಮಾ ನೋಡಿ ಮುಗಿಸಿದ್ದೆ?.
ಟಿವಿಎಸ್ ಫ್ಯಾಕ್ಟರಿ ೪೦೫ ಎಕರೆಗಳಷ್ಟು ವಿಸ್ತಾರವಾಗಿದೆ. ಇಲ್ಲಿ ಅವರು ತಮ್ಮ ಎಲ್ಲ ದ್ವಿಚಕ್ರ ವಾಹನಗಳನ್ನು ತಯಾರಿಸುತ್ತಾರೆ. ಟಿವಿಎಸ್‌ನವರು ಮಾರುತ್ತಿರುವ ಸ್ಕೂಟರುಗಳಲ್ಲಿ ಅತಿ ಜನಪ್ರಿಯವಾದುದು ಮತ್ತು ಅಧಿಕ ಮಾರಾಟವಾಗುತ್ತಿರುವುದು ಜ್ಯುಪಿಟರ್. ಆ ಸ್ಕೂಟರೂ ಇಲ್ಲೇ ತಯಾರಾಗುವುದು. ಮೊದಲಿಗೆ ನಮ್ಮನ್ನೆಲ್ಲ ಒಳಗೆ ಕೆರದುಕೊಂಡು ಹೋಗಿ ಒಂದು ಸೆಮಿನಾರ್ ಹಾಲಿನಲ್ಲಿ ಕುಳ್ಳಿರಿಸಿ ಕಂಪೆನಿ ಮತ್ತು ಸ್ಕೂಟರ್ ಬಗ್ಗೆ ಸ್ಲೈಡ್ ಶೋ ಸಮೇತ ವಿವರಿಸಿದರು.
ಜ್ಯುಪಿಟರ್ ಸ್ಕೂಟರ್ ೨೦೧೩ ಅಕ್ಟೋಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬಂತು. ಕಂಪೆನಿಯವರು ಹೇಳಿಕೊಳ್ಳುವಂತೆ ಇದು ೩೦ ರಿಂದ ೪೫ ವರ್ಷ ಪ್ರಾಯದ ಮಧ್ಯಮವರ್ಗದ ಭಾರತೀಯ ಸಂಸಾರಸ್ತ ಗಂಡಸರನ್ನು ದೃಷ್ಟಿಯಲ್ಲಿಟ್ಟುಕೊಂಡು ವಿನ್ಯಾಸ ಮಾಡಿದ್ದು. ನಾನು ಗಮನಿಸಿದಂತೆ ಮಹಿಳೆಯರೂ ಇದನ್ನು ಓಡಿಸುತ್ತಾರೆ. ಅಷ್ಟೇಕೆ? ನನ್ನ ಮಗಳಿಗೇ ನಾನು ಇದನ್ನು ಕೊಳ್ಳಲು ಯೋಚಿಸಿದ್ದೆ. ಎತ್ತರ ಸ್ವಲ್ಪ ಕಡಿಮೆ ಇದ್ದರೆ ಕೊಂಡುಕೊಂಡೂ ಬಿಡುತ್ತಿದ್ದೆ. ಜ್ಯುಪಿಟರ್ ಈಗ ದೇಶದ ಸ್ಕೂಟರ್ ಮಾರುಕಟ್ಟೆಯಲ್ಲಿ ಎರಡನೆಯ ಸ್ಥಾನದಲ್ಲಿದೆ. ಸಪ್ಟೆಂಬರ್ ೨೦೧೭ಕ್ಕೆ ಅದು ೨೦ ಲಕ್ಷ ಮಾರಾಟದ ಗುರಿಯನ್ನು ತಲುಪಿತು. ೧೧೦ ಸಿಸಿಯ ೪-ಸ್ಟ್ರೋಕ್, ೭.೮೮ ಅಶ್ವಶಕ್ತಿ (5.88kW), 7500 RPM, ಇವು ಈ ಸ್ಕೂಟರಿನ ಇಂಜಿನ್‌ನ ಕೆಲವು ಪ್ರಮುಖ ಗುಣವೈಶಿಷ್ಟ್ಯಗಳು. ಕಂಪೆನಿಯವರು ಹೇಳಿಕೊಂಡಂತೆ ಇದು ೧೧.೨ ಸೆಕೆಂಡುಗಳಲ್ಲಿ ೦ ಯಿಂದ ಗಂಟೆಗೆ ೬೦ ಕಿ.ಮೀ. ವೇಗವನ್ನು ಪಡೆಯಬಲ್ಲುದು. ಭಾರತೀಯರು ಬಹಳ ಮುಖ್ಯವಾಗಿ ಕೇಳುವ ಪ್ರಶ್ನೆ ಲೀಟರಿಗೆ ಎಷ್ಟು ಕೊಡುತ್ತದೆ? ಇದು ಪ್ರತಿ ಲೀಟರಿಗೆ ೬೨ ಕಿ.ಮೀ. ನೀಡುತ್ತದೆ ಎಂದು ಕಂಪೆನಿಯವರು ಹೇಳಿಕೊಂಡಿದ್ದಾರೆ. ಈ ಸಂಖ್ಯೆ ಎಂದಿನಂತೆ under ideal test conditions.  ಸ್ಕೂಟರಿನಲ್ಲಿ ಕಾಲಿಡಲು ಇರುವ ಜಾಗ ವಿಶಾಲವಾಗಿದೆ. ಅಂತೆಯೇ ಸೀಟಿನ ಕೆಳಗಿರುವ ಸ್ಟೋರೇಜ್ ಸ್ಪೇಸ್ ಕೂಡ ದೊಡ್ಡದಾಗಿದೆ. ಅದರ ಒಳಗೆ ಒಂದು ಯುಎಸ್‌ಬಿ ಚಾರ್ಜಿಂಗ್ ಕಿಂಡಿ ಕೂಡ ಇದೆ. ಇದು ೧ ಆಂಪಿಯರ್ ಶಕ್ತಿಯದ್ದು. ಆಧುನಿಕ ಫೋನ್‌ಗಳಿಗೆ ೨ ಆಂಪಿಯರ್ ಇದ್ದರೆ ಒಳ್ಳೆಯದು. ಕಡಿಮೆ ಬೆಲೆಯ ಫೋನ್‌ಗಳಿಗೆ ೧ ಆಂಪಿಯರ್ ಸಾಕು. ೨ ಆಂಪಿಯರ್ ಬೇಕಾದ ಫೋನನ್ನು ೧ ಆಂಪಿಯರ್‌ನಲ್ಲಿ ಚಾರ್ಜ್ ಮಾಡಬಾರದೆಂದೇನಿಲ್ಲ. ಸ್ವಲ್ಪ ನಿಧಾನವಾಗಿ ಚಾರ್ಜ್ ಆಗುತ್ತದೆ, ಅಷ್ಟೆ. ಈ ಸ್ಕೂಟರಿನ ಪೆಟ್ರೋಲ್ ಟ್ಯಾಂಕ್‌ನ ಮುಚ್ಚಳ ಸೀಟಿನ ಕೆಳಗಿಲ್ಲ. ಪೆಟ್ರೋಲ್ ಹಾಕಿಸಲು ಸ್ಕೂಟರಿನಿಂದ ಕೆಳಗೆ ಇಳಿಯಬೇಕಾಗಿಲ್ಲ.
ಜ್ಯುಪಿಟರ್ ಸ್ಕೂಟರಿಗೆ ೨೦೧೪ರಲ್ಲಿ ವರ್ಷದ ಸ್ಕೂಟರ್ ಎಂಬ ಪ್ರಶಸ್ತಿ ದೊರೆತಿದೆ. ಈ ಸ್ಕೂಟರ್ ೮ ಬಣ್ಣಗಳಲ್ಲಿ ಲಭ್ಯ. ಜೆ.ಡಿ. ಪವರ್ ನೀಡುವ ಅತಿ ಆಕರ್ಷಕ ಸ್ಕೂಟರ್ ಎಂಬ ೨೦೧೮ರ ಪ್ರಶಸ್ತಿ ಇದಕ್ಕೆ ದೊರೆತಿದೆ. ಈ ಪ್ರಶಸ್ತಿಗೆ ಇದು ಅರ್ಹ ಕೂಡ. ನಿಜಕ್ಕೂ ನೋಡಲು ಆಕರ್ಷಕವಾಗಿದೆ. ಕ್ಲಾಸಿಕ್ ಎಂಬ ಹೆಸರಿನ ವಿಶೇಷ ಆವೃತ್ತಿಯೂ ಇದೆ.
ಟಿವಿಎಸ್ ಫ್ಯಾಕ್ಟರಿಯನ್ನು ನಮಗೆ ತೋರಿಸಲಾಯಿತು. ರೋಬೋಟ್‌ಗಳು ಇಂಜಿನನ್ನು ತಯಾರಿಸುವುದನ್ನು ನೋಡಿದೆವು. ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿದ್ದಾಗ ರೋಬಾಟ್‌ಗಳು ಆಗಷ್ಟೆ ಭಾರತಕ್ಕೆ, ಬಿಎಆರ್‌ಸಿಗೆ ಬಂದಿದ್ದವು. ನಮಗೆಲ್ಲ ಅವು ಕುತೂಹಲದ ವಸ್ತುವಾಗಿತ್ತು. ಇಲ್ಲಿ ಹಲವು ಕೆಲಸಗಳನ್ನು ರೋಬೋಟ್‌ಗಳೇ ಮಾಡುತ್ತವೆ. ಪಕ್ಕದಲ್ಲಿ ಅಸೆಂಬ್ಲಿ ಲೈನ್ ಇದೆ. ಅಲ್ಲಿ ಕನ್ವೆಯರ್ ಬೆಲ್ಟ್‌ನಲ್ಲಿ ಸ್ಕೂಟರ್‌ನ ಚೇಸಿಸ್‌ಗೆ ಇಂಜಿನ್ ಜೋಡಿಸಿ ಬೆಲ್ಟ್‌ನಲ್ಲಿ ಬರುತ್ತದೆ. ಅಲ್ಲಿ ಸಾಲಾಗಿ ಒಬ್ಬೊಬ್ಬರು ಒಂದೊಂದು ಅಂಗವನ್ನು ಜೋಡಿಸುತ್ತಾರೆ. ಪ್ರತಿಯೊಬ್ಬರಿಗೂ ತಾವು ಜೋಡಿಸಬೇಕಾದ ಭಾಗವನ್ನು ಜೋಡಿಸಲು ದೊರೆಯುವ ಸಮಯ ಕೇವಲ ಏಳು ಸೆಕೆಂಡು. ಕೊನೆಯಲ್ಲಿ ಒಬ್ಬರು ಇಂಜಿನ್ ಆನ್ ಮಾಡಿ ನೋಡುತ್ತಾರೆ. ಅಲ್ಲಿಂದ ಮುಂದೆ ಅದು ಟೆಸ್ಟ್ ಡ್ರೈವ್‌ಗೆ ಹೋಗುತ್ತದೆ. ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರಲ್ಲಿ ೯೦% ಮಹಿಳೆಯರು. ದುರದೃಷ್ಟಕ್ಕೆ ಅಲ್ಲಿ ಫೋಟೋಗ್ರಫಿಗೆ ಅವಕಾಶವಿಲ್ಲ.
ಊಟದ ನಂತರ ಟೆಸ್ಟ್ ಡ್ರೈವ್‌ ಟ್ರ್ಯಾಕ್‌ಗೆ ನಮ್ಮನ್ನೆಲ್ಲ ಕರೆದುಕೊಂಡು ಹೋದರು. ಅಲ್ಲಿ ಸ್ಕೂಟರುಗಳು ಸಾಲಾಗಿ ನಿಂತುಕೊಂಡು ನಮಗೆ ಕಾಯುತ್ತಿದ್ದವು. ಪಕ್ಕದಲ್ಲೇ ಒಂದು ಅಂಬುಲೆನ್ಸ್ ಸಹಾ ನಿಂತಿತ್ತು! ಸ್ಕೂಟರ್ ಚಲಾಯಿಸುವ ಮೊದಲು ಸುರಕ್ಷತೆಗಾಗಿ ದಪ್ಪನೆಯ ಜಾಕೆಟ್, ಮೊಣಗಂಟಿಗೆ ಪಟ್ಟಿ, ಕೈಗೆ ಗ್ಲೌಸ್, ತಲೆಗೆ ಹೆಲ್ಮೆಟ್ ಎಲ್ಲ ಧರಿಸಬೇಕಿತ್ತು. ನೋಡಿದರೆ ಗಗನಯಾತ್ರಿಯಂತೆ ಕಂಡುಬರುತ್ತಿತ್ತು. ಆಗ ತೆಗೆದ ಫೋಟೋ ನೋಡಿ. ಈ ವ್ಯಕ್ತಿಗಳಲ್ಲಿ ನಾನು ಯಾರು ಎಂದು ಗುರುತಿಸಿ ನೋಡೋಣ! ಈ ಟೆಸ್ಟ್ ಟ್ರ್ಯಾಕ್ ೧.೭ ಕಿ.ಮೀ ಉದ್ದ ಇದೆ. ಅದಕ್ಕೆ ಎರಡು ಸುತ್ತು ಬಂದೆವು. ಜ್ಯುಪಿಟರ್ ಓಡಿಸುವ ಅನುಭವ ಉತ್ತಮವಾಗಿತ್ತು. ತುಂಬ ನಯವಾಗಿ ಓಡಿಸಬಹುದು. ನಾನು ಮೊದಲೇ ಹೇಳಿದಂತೆ ಈ ಸ್ಕೂಟರನ್ನು ಕೊಳ್ಳುವ ಬಗ್ಗೆ ಒಮ್ಮೆ ಯೋಚಿಸಿದ್ದೆವು. ನೀಡುವ ಹಣಕ್ಕೆ ತಕ್ಕ ಸ್ಕೂಟರ್ ಎಂದು ಖಂಡಿತವಾಗಿ ಹೇಳಬಹುದು.
ಈ ಕಾರ್ಯಕ್ರಮ ಆಯೋಜಿಸಿದ್ದ ಇಂಡಿಬ್ಲಾಗರ್‌ಗೆ ಧನ್ಯವಾದಗಳು.
The post ಟಿವಿಎಸ್ ಫ್ಯಾಕ್ಟರಿ ಮತ್ತು ಜ್ಯುಪಿಟರ್ ಸ್ಕೂಟರ್ ನೋಟ first appeared on Vishva Kannada.
ಕನ್ನಡ ವಿಕಿ ಸಮುದಾಯಕ್ಕೆ ವಂದನೆಗಳು (ವಿದಾಯವಲ್ಲ)
ನಾನು ಈ ಪತ್ರವನ್ನು ಒಂದೂವರೆ ತಿಂಗಳ ಹಿಂದೆಯೇ ಬರೆಯಬೇಕಿತ್ತು. ಕೆಲವು ವಿಷಯಗಳಲ್ಲಿ ಸ್ಪಷ್ಟತೆಯ ಗೋಚರಕ್ಕಾಗಿ ಕಾದಿದ್ದೆ. ನಾನು ಈಗ ಸಿಐಎಸ್‌ನ ಉದ್ಯೋಗಿಯಾಗಿಲ್ಲ. ಈ ಬಗೆಗಿನ ಘೋಷಣೆ ಸಿಐಎಸ್‌ನ ಮಾಸಿಕ ಸುದ್ದಿಪತ್ರದಲ್ಲಿ ಬಂದಿದೆ. ನಾನು ಮಾರ್ಚ್ ೨೦೧೩ರಲ್ಲಿ ಸಿಐಎಸ್‌ನ ಎ೨ಕೆ ತಂಡಕ್ಕೆ ವಿಕಿಪೀಡಿಯದ ಕೆಲಸಗಳಿಗೆ ಸೇರಿದ್ದರೂ, ನಾನು ೨೦೦೪ರಿಂದಲೇ ವಿಕಿಪೀಡಿಯ ಸಂಪಾದಕನಾಗಿದ್ದೆ. ಕನ್ನಡ ವಿಕಿಪೀಡಿಯಕ್ಕೆ ಪ್ರಾರಂಭದಲ್ಲೇ ಸೇರಿದ್ದೇನೆ ಹಾಗೂ ನಾನು ೫ನೆಯ ಸಂಪಾದಕ. ಅಕ್ಟೋಬರ್ ೨೦೧೩ರ ತನಕ ನಾನು ನನ್ನ ತುಂಬ ಆಸಕ್ತಿಯ ವಿಷಯವಾದ ಕನ್ನಡ, ತಂತ್ರಜ್ಞಾನ, ಜನರತ್ತ ತಂತ್ರಜ್ಞಾನವನ್ನು ಒಯ್ಯುವುದು, ಜನರಿಗೆ ಜನರ ಭಾಷೆಯಲ್ಲೇ ಪ್ರಪಂಚ ಜ್ಞಾನವನ್ನು ಹಂಚುವುದು, ಇತ್ಯಾದಿ ಕ್ಷೇತ್ರಗಳಲ್ಲಿ ಸಂಬಳ ಪಡೆಯುವ ಉದ್ಯೋಗಿಯಾಗಿ ಕೆಲಸ ಮಾಡಿದೆ. ಯಾವಾಗ ಒಬ್ಬನ ಆಸಕ್ತಿ ಅಥವಾ ಪ್ರವೃತ್ತಿಯೇ ಆತನ ಉದ್ಯೋಗವಾಗುತ್ತದೆಯೋ ಆಗ ಆತ ತನ್ನ ಸಂಪೂರ್ಣ ಕಾರ್ಯಕ್ಷಮತೆಯನ್ನು ತೋರಿಸುತ್ತಾನೆ ಎಂಬ ಮಾತಿದೆ. ನಾನೂ ಈ ಮಾತಿಗೆ ಬಹುಪಾಲು ಸಮೀಪವಾಗಿ ಉತ್ತಮ ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ನನಗಿದೆ. ನಾನು ಏನೇನು ಮಾಡಿದ್ದೇನೆ ಎಂಬುದರ ಬಗ್ಗೆ ಒಂದು ಪಕ್ಷಿನೋಟ (ತುತ್ತೂರಿ!).
ಕನ್ನಡ ವಿಕಿಪೀಡಿಯದ ಬೆಳವಣಿಗೆ: ಮಾರ್ಚ್ ೨೦೧೩ರಲ್ಲಿ ಕನ್ನಡ ವಿಕಿಪೀಡಿಯದಲ್ಲಿ ಸುಮಾರು ೧೩,೦೦೦ ಲೇಖನಗಳು ಹಾಗೂ ೩೪೫ ಜನ ಸಂಪಾದಕರಿದ್ದರು. ಈಗ ಸುಮಾರು ೨೧,೫೦೦ ಲೇಖನಗಳು ಹಾಗೂ ಸುಮಾರು ೯೦೦ ಜನ ಸಂಪಾದಕರಿದ್ದಾರೆ. ಒಟ್ಟು ಲೇಖನಗಳ ಸಂಖ್ಯೆ ೨೫,೦೦೦ವನ್ನು ದಾಟುತ್ತಿತ್ತು. ಗುಣಮಟ್ಟ ಏನೇನೂ ಇಲ್ಲದ, ವಿಕಿಪೀಡಿಯಕ್ಕೆ ಸ್ವಲ್ಪವೂ ಸರಿಹೊಂದದ ಸುಮಾರು ೩೦೦೦ಗಳಷ್ಟು ಲೇಖನಗಳನ್ನು ಅಳಿಸಲಾಗಿದೆ. ಇವೆಲ್ಲವನ್ನು ಕನ್ನಡ ವಿಕಿಪಿಡಿಯ ಸಮುದಾಯವು ಮಾಡಿದೆ. ಈ ಕಾರ್ಯದಲ್ಲಿ ನಾನು ಏನಿದ್ದರೂ ಉತ್ತೇಜಕನಾಗಿ ಕೆಲಸ ಮಾಡಿದ್ದು ಮಾತ್ರ. ಇತ್ತೀಚೆಗೆ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳ ಸಂಖ್ಯಾಬಾಹುಳ್ಯಕ್ಕಿಂತ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದು ಉತ್ತಮ ಬೆಳವಣಿಗೆ. ಕರ್ನಾಟಕದ ಹಲವು ಸ್ಥಳಗಳಲ್ಲಿ ೮೦ಕ್ಕಿಂತಲೂ ಹೆಚ್ಚು ಕಾರ್ಯಾಗಾರಗಳನ್ನು ನಡೆಸಿ ಜನರನ್ನು ವಿಕಿಪೀಡಿಯ ಸಂಪಾದನೆಯ ತರಬೇತಿ ನೀಡಿದ್ದೇನೆ. ಈ ಕಾರ್ಯಾಗಾರಗಳಲ್ಲಿ ತರಬೇತಾದ ಹಲವು ಮಂದಿ ಕನ್ನಡ ವಿಕಿಪೀಡಿಯ ಸಂಪಾದಕರಾಗಿ ಕೊಡುಗೆ ನೀಡುತ್ತಿದ್ದಾರೆ. ಕನ್ನಡ ವಿಕಿಪೀಡಿಯದಲ್ಲಿ ಹಲವು ಯೋಜನೆಗಳನ್ನು ಹುಟ್ಟುಹಾಕಲಾಗಿದೆ ಹಾಗೂ ಅವುಗಳು ಚಾಲ್ತಿಯಲ್ಲಿವೆ. ಉದಾಹರಣೆಗೆ ವಿಜ್ಞಾನ ಪಠ್ಯ ಲೇಖನಗಳು, ಭಾರತೀಯ ಗೋತಳಿಗಳು, ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು,  ಇತ್ಯಾದಿ. ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆಯ ನೆಪದಲ್ಲಿ ಕೆಲವು ವಿಷಯಾಧಾರಿತ ಸಂಪಾದನೋತ್ಸವಗಳನ್ನು ನಡೆಸಿ ಉತ್ತಮ ಲೇಖನಗಳು ಕನ್ನಡ ವಿಕಿಪೀಡಿಯಕ್ಕೆ ಬರುವಂತೆ ಮಾಡಲಾಯಿತು. ಅವುಗಳಲ್ಲಿ ಒಂದೆರಡನ್ನು ಹೆಸರಿಸುವುದಾದರೆ –ಕರಾವಳಿ ಕರ್ನಾಟಕದ ಲೇಖಕಿಯರು, ಔಷಧೀಯ ಸಸ್ಯಗಳು. ಈ ಎಲ್ಲ ಕೆಲಸಗಳಲ್ಲೂ ನಾನು ವಿಷಯಗಳ ಆಯ್ಕೆಯಿಂದ ಪ್ರಾರಂಭಿಸಿ ಯೋಜನೆಯನ್ನು ಸುಸೂತ್ರವಾಗಿ ನಡೆಸುವಲ್ಲಿಯ ತನಕ ಸಕ್ರಿಯವಾಗಿ ಪಾಲುಗೊಂಡಿದ್ದೇನೆ. ವಿಕಿಪೀಡಿಯ ಜೊತೆ ವಿಕಿಸೋರ್ಸ್‌ನ ಬೆಳವಣಿಗೆಯಲ್ಲೂ ಕೊಡುಗೆ ನೀಡಿದ್ದೇನೆ. ಕನ್ನಡ ವಿಕಿಪಿಡಿಯಕ್ಕೆ ಒಂದು ಹೊಸ ಸಕ್ರಿಯ ಸಂಪಾದಕ ಸಮುದಾಯವೇ ಸೃಷ್ಟಿಯಾಗಿದೆ. ಕೆಲವು ಗಮನಾರ್ಹ ಹೆಸರುಗಳು – ವಿಕಾಸ ಹೆಗಡೆ, ವಿದ್ಯಾಧರ ಚಿಪ್ಲಿ, ಶ್ರೀಕಾಂತ ಮಿಶ್ರಿಕೋಟಿ, ಡಾ.ವಿಶ್ವನಾಥ ಬದಿಕಾನ, ಡಾ. ಸೌಭಾಗ್ಯವತಿ, ಪ್ರಶಸ್ತಿ, ವಿಶ್ವನಾಥ, ಡಾ. ಕಿಶೋರ ಕುಮಾರ ರೈ, ಡಾ. ಸಿ.ಪಿ. ರವಿಕುಮಾರ್, …. ಇನ್ನೂ ಹಲವು ಹೆಸರುಗಳಿವೆ. ಅವರ ಹೆಸರು ಇಲ್ಲ ಬರೆದಿಲ್ಲ ಅಂದರೆ ಅವರ ಕೊಡುಗೆ ಕಡಿಮೆಯಿದೆ ಎಂದೇನೂ ಅರ್ಥವಲ್ಲ. ಪಟ್ಟಿ ದೊಡ್ಡದಿರುವುದರಿಂದ ಎಲ್ಲ ಹೆಸರುಗಳ ತಕ್ಷಣ ನೆನಪಾಗುತ್ತಿಲ, ಅಷ್ಟೆ. ಕನ್ನಡ ವಿಕಿಪೀಡಿಯಕ್ಕೆ ಶ್ರೇಷ್ಠ ಕೊಡುಗೆ ನೀಡಿದ ಹರಿಪ್ರಸಾದ ನಾಡಿಗ, ಓಂಶಿವಪ್ರಕಾಶ, ಹರೀಶ ಎಂ.ಜಿ, ತೇಜಸ್ ಜೈನ್, ಬಿ.ಎಸ್. ಚಂದ್ರಶೇಖರ, ಲಕ್ಷ್ಮಿವೆಂಕಟೇಶ, (ವಿಕಾಸ ಹೆಗಡೆ), ಇವರೆಲ್ಲ ನಾನು ಸಿಐಎಸ್‌ಗೆ ಸೇರುವ ಮೊದಲೇ ಕೆಲಸ ಮಾಡುತ್ತಿದ್ದವರು/ಮಾಡಿದವರು.
ತಾಂತ್ರಿಕವಾಗಿ: ವಿಕಿಮೀಡಿಯ ಫೌಂಡೇಶನ್ ಮತ್ತು ಕನ್ನಡ ವಿಕಿಪೀಡಿಯ ಸಮುದಾಯ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಿದ್ದೇನೆ. ಹಲವು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೊಡುಗೆ ನೀಡಿದ್ದೇನೆ. ಯುಎಲ್‌ಎಸ್, ವಿಶುವಲ್ ಎಡಿಟರ್ ಮತ್ತು ಇನ್ನೂ ಅನೇಕ ಚಿಕ್ಕಪುಟ್ಟ ತಂತ್ರಾಂಶ ಸವಲತ್ತುಗಳಲ್ಲಿ ಕನ್ನಡದ ಅಳವಡಿಕೆ ಸರಿಯಾಗಿರುವಂತೆ ಆಗಾಗ ಹಿಂಮಾಹಿತಿ ನೀಡಿದ್ದೇನೆ.
ಮೈಸೂರು ವಿ.ವಿ. ಹಾಗೂ ಇತರೆ ಸಂಸ್ಥೆಗಳ ಜೊತೆ ಸಹಭಾಗಿತ್ವ: ಮೈಸೂರು ವಿಶ್ವವಿದ್ಯಾಲಯವು ತಾನು ಪ್ರಕಟಿಸಿದ ವಿಶ್ವಕೋಶದ ಎಲ್ಲ ೧೪ ಸಂಪುಟಗಳನ್ನು ಮುಕ್ತ ಪರವಾನಗಿಯಲ್ಲಿ (ಕ್ರಿಯೇಟಿವ್ ಕಾಮನ್ಸ್) ಬಿಡುಗಡೆ ಮಾಡಿದೆ. ಇದಕ್ಕಾಗಿ ಮೈಸೂರು ವಿ.ವಿ.ಯ ಉಪಕುಲಪತಿ ಡಾ. ಕೆ.ಎಸ್. ರಂಗಪ್ಪ ಅವರನ್ನು ನಾವು ಅಭಿನಂದಿಸಿ ಧನ್ಯವಾದ ಅರ್ಪಿಸೋಣ. ಅವರನ್ನು ಈ ವಿಷಯಕ್ಕೆ ಒಪ್ಪಿಸಲು ನಾನು ಮೈಸೂರಿಗೆ ಕನಿಷ್ಠ ೮ ಸಲ ಪ್ರಯಾಣ ಬೆಳೆಸಿದ್ದೇನೆ. ನಂತರವೂ ಹಲವು ಸಲ ಪ್ರಯಾಣ ಬೆಳೆಸಿ ವಿಶ್ವಕೋಶದ ಲಭ್ಯವಿರುವ ಸಂಪುಟಗಳ ಪಿಡಿಎಫ್‌ ಫೈಲುಗಳನ್ನು ತಂದು  ಅವುಗಳನ್ನು ಕನ್ನಡ ವಿಕಿ ಸಮುದಾಯದ ಜೊತೆ ಹಂಚಿಕೊಂಡು ಅವರು ಅದರಿಂದ ಲೇಖನಗಳನ್ನು ಕನ್ನಡ ವಿಕಿಸೋರ್ಸ್‌ಗೆ ಮತ್ತು ಅಲ್ಲಿಂದ ಕನ್ನಡ ವಿಕಿಪೀಡಿಯಕ್ಕೆ ಸೇರಿಸುತ್ತಿದ್ದಾರೆ. ಈ ತನಕ ಸುಮಾರು ೭೪೦೦ ಲೇಖನಗಳು ಕನ್ನಡ ವಿಕಿಸೋರ್ಸ್‌ಗೆ ಸೇರ್ಪಡೆಯಾಗಿವೆ. ಬಹುತೇಕ ಲೇಖನಗಳನ್ನು ಶ್ರೀಕಾಂತ ಮಿಶ್ರಿಕೋಟಿ ಒಬ್ಬರೇ ಸೇರಿಸಿದ್ದಾರೆ ಮತ್ತು ಈಗಲೂ ಸೇರಿಸುತ್ತಿದ್ದಾರೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತಾನು ಪ್ರಕಟಿಸಿದ ೧೨೨ ಪುಸ್ತಕಗಳನ್ನು ಮುಕ್ತ  ಪರವಾನಗಿಯಲ್ಲಿ ಮರು ಬಿಡುಗಡೆ ಮಾಡಿದೆ. ಇವುಗಳಲ್ಲಿ ಹಲವು ಪುಸ್ತಕಗಳನ್ನು ಕನ್ನಡ ವಿಕಿಸೋರ್ಸ್‌ಗೆ ಸೇರಿಸಲಾಗಿದೆ. ತೇಜಸ್ವಿನಿ ನಿರಂಜನ ಅವರು ತಮ್ಮ ತಂದೆ ದಿ. ನಿರಂಜನ ಅವರ ೫೫ ಪುಸ್ತಕಗಳನ್ನು ಮುಕ್ತ ಪರವಾನಗಿಯಲ್ಲಿ ಮರು ಬಿಡುಗಡೆ ಮಾಡಿದ್ದಾರೆ. ಅವುಗಳಲ್ಲಿ ಹಲವು ಪುಸ್ತಕಗಳನ್ನು ಕನ್ನಡ ವಿಕಿಸೋರ್ಸ್‌ಗೆ ಸೇರಿಸಲಾಗಿದೆ.
ವಿಕಿಪೀಡಿಯ ಶಿಕ್ಷಣ ಯೋಜನೆಗಳು: ಸಿಐಎಸ್ ಎ೨ಕೆ ವತಿಯಿಂದ ವಿಕಿಪೀಡಿಯ ಶಿಕ್ಷಣ ಯೋಜನೆ ಮೊದಲಿಗೆ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪ್ರಾರಂಭವಾಯಿತು. ಅಲ್ಲಿಯ ಯೋಜನೆಯ ಪ್ರಾರಂಭದಿಂದಲೂ ನಾನು ಇದ್ದೆ. ಪ್ರಾರಂಭದಲ್ಲಿ ನಮಗೆ ಇದು ಹೇಗೆ ನಡೆಯಬಹುದು ಎಂಬ ಬಗ್ಗೆ ಸರಿಯಾದ ಅಂದಾಜಿಲ್ಲದೆ ತುಂಬ ಕಷ್ಟ ಪಡಬೇಕಾಯಿತು. ವರ್ಷದಿಂದ ವರ್ಷಕ್ಕೆ ಅನುಭವದ ಆಧಾರದಲ್ಲಿ ಅದನ್ನು ಸುಧಾರಿಸುತ್ತ ಬಂದು ಈಗ ಅದು ಒಂದು ರೀತಿಯಲ್ಲಿ ಪರಿಪಕ್ವತೆಯನ್ನು ಪಡೆದಿದೆ ಎನ್ನಬಹುದು. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು, ಉಜಿರೆಯ ಎಸ್‌ಡಿಎಂ ಕಾಲೇಜು ಮತ್ತು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳಲ್ಲೂ ವಿಕಿಪೀಡಿಯ ಶಿಕ್ಷಣ ಯೋಜನೆಗಳನ್ನು ನಡೆಸಲಾಗುತ್ತಿದೆ. ಕೆಲವು ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಲೇಖನಗಳನ್ನು ಸೇರಿಸಿದ್ದಾರೆ. ಈ ಶಿಕ್ಷಣ ಯೋಜನೆಗಳನ್ನು ನಡೆಸಿದ ಅನುಭವದ ಬಗ್ಗೆ ಒಂದು ಪ್ರತ್ಯೇಕ ಬ್ಲಾಗ್ ಬರೆಯಬೇಕಾಗಿದೆ. ಯಾಕೆಂದರೆ ವಿಷಯ ವ್ಯಾಪ್ತಿ ಅಷ್ಟಿದೆ. ಈ ವಿಕಿಪೀಡಿಯ ಶಿಕ್ಷಣ ಯೋಜನೆಯಿಂದಾಗಿ ನಮಗೆ ಡಾ. ವಿಶ್ವನಾಥ ಬದಿಕಾನ ದೊರಕಿದ್ದಾರೆ! ಕ್ರೈಸ್ಟ್ ವಿಶ್ವವಿದ್ಯಾಲಯದ ಸಹಯೋಗದಿಂದ ಕನ್ನಡ ವಿಕಿಪೀಡಿಯ ಟ್ಯುಟೋರಿಯಲ್ ವಿಡಿಯೋಗಳನ್ನು ತಯಾರಿಸಲಾಗಿದೆ. ಹಲವು ವಿದ್ಯಾರ್ಥಿಗಳು ಉತ್ತಮ ಕೊಡುಗೆ ನೀಡಿದ್ದಾರೆ. ೩ ವರ್ಷಗಳಲ್ಲಿ ಒಟ್ಟು ಸುಮಾರು ೨೦೦೦ ವಿದ್ಯಾರ್ಥಿಗಳು ವಿಕಿಪೀಡಿಯದ ತೆಕ್ಕೆಗೆ ಬಂದಿದ್ದಾರೆ. ಅವರಲ್ಲಿ ಕೆಲವರು ತಮ್ಮ ಅಸೈನ್‌ಮೆಂಟ್‌ಗಾಗಿ ಮಾತ್ರವಲ್ಲ, ನಂತರವೂ, ರಜೆಯಲ್ಲೂ, ಇಂಟರ್ನ್ ಆಗಿ ಉತ್ತಮ ಕೆಲಸ ಮಾಡಿದ್ದಾರೆ. ಕೆಲವು ಹೆಸರುಗಳು ನನ್ನ ನೆನಪಿನಲ್ಲಿ ಉಳಿದಿವೆ – ತ್ತ್ರಿವೇಣಿ, ಕೋಮಲ್, ಗೌತಮ್, ಸ್ಮಿತಾ, ಪ್ರೀತಮ್, ನಯನ, ಸ್ಪಂದನ, ಗೋಪಾಲಕೃಷ್ಣ, ಲಾಸ್ಯ, ಸೌಂದರ್ಯ, ಅನೂಷ, ಇತ್ಯಾದಿ. ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನದು ವಿಶಿಷ್ಟ ಮಾದರಿ. ಅಲ್ಲಿ ವಿಕಿಪೀಡಿಯ ಶಿಕ್ಷಣ ಯೋಜನೆ ಇಲ್ಲ. ಆದರೂ ವಿದ್ಯಾರ್ಥಿಗಳು ತಾವೇ ಮುಂದೆ ಬಂದು ವಿಕಿಪೀಡಿಯಕ್ಕೆ ವಿಷಯಾಧಾರಿತ ಸಂಪಾದನೋತ್ಸವಗಳನ್ನು ನಡೆಸಿ ಲೇನಗಳನ್ನು ಸೇರಿಸಿದ್ದಾರೆ. ಅಲ್ಲಿ ಪತ್ತೆಯಾದವರು ಧನಲಕ್ಷ್ಮಿ ಮತ್ತು ದಿವ್ಯ.
ತುಳು ವಿಕಿಪೀಡಿಯ: ತುಳುವರು ಯಾವತ್ತೂ ತಾವು ಕನ್ನಡದ ಒಂದು ಅವಿಭಾಜ್ಯ ಅಂಗ ಎಂದೇ ನಡೆದುಕೊಂಡಿದ್ದಾರೆ. ತುಳು ವಿಕಿಪೀಡಿಯವು ೨೦೧೬ ಆಗಸ್ಟ್ ತಿಂಗಳಲ್ಲಿ ಇನ್ಕ್ಯುಬೇಟರ್‌ನಿಂದ ಹೊರಬಂದು ಜೀವಂತವಾಯಿತು. ತುಳು ವಿಕಿಪೀಡಿಯವನ್ನು ಜೀವಂತ ಮಾಡಲು ನಾನು ತುಂಬ ಶ್ರಮ ಪಟ್ಟಿದ್ದೇನೆ. ಈ ವಿಷಯದಲ್ಲಿ ನನಗೆ ತುಂಬ ತೃಪ್ತಿ ಇದೆ.
ವಿಕಿಪೀಡಿಯ ಒಂದಲ್ಲ, ಹಲವು ರೀತಿಯಲ್ಲಿ ನಾನು ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸುಮಾರು ೨೫ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಲೇ ಇದ್ದೇನೆ. ಮುಂದೆಯೂ ಮಾಡುತ್ತಿರುತ್ತೇನೆ. ನನ್ನನ್ನು pavanaja AT vishvakannada DOT com ಮೂಲಕ ಸಂಪರ್ಕಿಸಬಹುದು. Facebook, Twitter, Linkedin, Instagram, Quora ಎಲ್ಲ ಕಡೆ ನಾನು pavanaja ಎಂಬ ಹೆಸರಿನಲ್ಲೇ ಇದ್ದೇನೆ. ನನ್ನದೇ ಜಾಲತಾಣಗಳಾದ vishvakannada.com, pavanaja.com, techfocus.in ಗಳಲ್ಲೂ ಹಲವು ವಿಧದ ಕೃಷಿ ನಡೆಸುತ್ತಿದ್ದೇನೆ. ಅಲ್ಲೆಲ್ಲ ಸಿಗೋಣ.
ಇತಿ ನಿಮ್ಮವ,
ಪವನಜ
The post ಕನ್ನಡ ವಿಕಿ ಸಮುದಾಯಕ್ಕೆ ವಂದನೆಗಳು (ವಿದಾಯವಲ್ಲ) first appeared on Vishva Kannada.
ಕನ್ನಡ ವಿಕಿಪೀಡಿಯದಲ್ಲಿ ಹುಡುಕು ಮತ್ತು ಬದಲಿಸು
ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಗಳನ್ನು ಓದುವಾಗ ಕೆಲವು ಪದಗಳನ್ನು ತಪ್ಪು ರೂಪದಲ್ಲಿ ಬಳಸಲಾಗಿದೆ ಎಂದು ಅನಿಸಿರಬಹುದಲ್ಲವೇ? ಉದಾಹರಣೆಗೆ ವಿಶೇಷ ಎಂಬ ಪದದ ಬದಲಿಗೆ ವಿಷೇಶ ಎಂದು ಬಳಸಿರುವುದು. ಹಲವು ಪದಗಳನ್ನು ತಪ್ಪಾಗಿ ಬಳಸುವುದನ್ನು ನಾವು ಪ್ರತಿದಿನವೂ ಎಲ್ಲ ಸ್ಥಳಗಳಲ್ಲೂ ಕಾಣುತ್ತಿರುತ್ತೇವೆ. ವಿಕಿಪೀಡಿಯವೂ ಇದಕ್ಕೆ ಹೊರತಲ್ಲ. ಇಂತಹ ಪದಗಳನ್ನು ಹುಡುಕಿ ಬದಲಿಸುವುದು ಸ್ವಲ್ಪ ಕಷ್ಟದ ಕೆಲಸ. ಯಾವ ಯಾವ ಲೇಖನದಲ್ಲಿ ಇಂತಹ ತಪ್ಪು ರೂಪಗಳಿವೆ ಎಂದು ಮೊದಲು ಪ್ತತೆ ಹಚ್ಚಿ, ಆಯಾ ಲೇಖನವನ್ನು ತೆರೆದು ಒಂದೊಂದಾಗಿ ಪದಗಳನ್ನು ಹುಡುಕಿ ಬದಲಿಸುವುದು ನಿಜಕ್ಕೂ ಸಣ್ಣ ಕೆಲಸವೇನಲ್ಲ. ಇಂತಹ ಮತ್ತು ಇನ್ನೂ ಹಲವು ಕೆಲಸಗಳನ್ನು ಸುಲಭವಾಗಿಸಲು ಅಟೋವಿಕಿಬ್ರೌಸರ್ ಎಂಬ ತಂತ್ರಾಂಶ ಲಭ್ಯವಿದೆ. ಇದರ ಬಗ್ಗೆ ಹೆಚ್ಚಿನ ವಿವರ ಈ ಪುಟದಲ್ಲಿದೆ – https://en.wikipedia.org/wiki/Wikipedia:AutoWikiBrowser. ಇದು ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯಲ್ಲಿ ಮಾತ್ರ ಕೆಲಸ ಮಾಡುತ್ತದೆ. ಲಿನಕ್ಸ್ ಬಳಸುವವರು ವೈನ್ ಮೂಲಕ ಬಳಸಬಹುದು. ಈ ತಂತ್ರಾಂಶವನ್ನು ಇಲ್ಲಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು – http://sourceforge.net/projects/autowikibrowser/. ಈ ತಂತ್ರಾಂಶವನ್ನು ಇನ್ನೂ ಹಲವು ಕೆಲಸಗಳನ್ನು ಮಾಡಲು ಬಳಸಬಹುದು. ಈ ತಂತ್ರಾಂಶವನ್ನು ಬಳಸಿ ಕನ್ನಡ ವಿಕಿಪೀಡಿಯದಲ್ಲಿ ತಪ್ಪಾಗಿ ಬಳಕೆಯಾದ ಪದವೊಂದನ್ನು ಬದಲಾಯಿಸುವುದು ಹೇಗೆ ಎಂದು ಈ ಬ್ಲಾಗಿನಲ್ಲಿ ನಾವು ನೋಡೋಣ.
ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಿಕೊಂಡು ಅದನ್ನು ಪ್ರಾರಂಭಿಸಿ. ಮೆನುವಿನಲ್ಲಿ ಕಾಣಿಸುವ Options ಮೆನುವಿನಲ್ಲಿ Preferences ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ಈಗ ಕಾಣಿಸುವ ಡಯಲಾಗ್ ಬಾಕ್ಸ್‌ನಲ್ಲಿ site ಟ್ಯಾಬ್‌ನಲ್ಲಿ Project ಎಂಬಲ್ಲಿ wikipedia ಎಂದು ಮತ್ತು Language ಎಂಬಲ್ಲಿ kn ಎಂದು ಆಯ್ಕೆ ಮಾಡಿಕೊಂಡು Ok ಎಂದು ಬರೆದ ಬಟನ್ ಮೇಲೆ ಕ್ಲಿಕ್ ಮಾಡಿ. ಮೆನುವಿನಲ್ಲಿ Login/Profiles ಎಂಬುದನ್ನು ಆಯ್ಕೆ ಮಾಡಿ. ಮೊದಲ ಬಾರಿಗೆ ಬಳಸುವವರು ಇಲ್ಲಿ ಕನ್ನಡ ವಿಕಿಪೀಡಿಯದಲ್ಲಿನ ನಿಮ್ಮ ಬಳೆಕದಾರ ಹೆಸರು ಮತ್ತು ಪ್ರವೇಶಪದ(ಪಾಸ್‌ವರ್ಡ್)ಗಳನ್ನು ಇಲ್ಲಿ ದಾಖಲಿಸಿ ಇಟ್ಟುಕೊಂಡರೆ ಅದನ್ನೇ ಮತ್ತೆ ಮತ್ತೆ ಬಳಸಬಹುದು. ಮೊದಲ ಬಾರಿಗೆ ಬಳಸುವವರು Add ಎಂದು ಬರೆದ ಬಟನ್ ಮೇಲೆ ಕ್ಲಿಕ್ ಮಾಡಿ ತಮ್ಮ ಬಳೆಕದಾರ ಹೆಸರು ಮತ್ತು ಪ್ರವೇಶಪದ ದಾಖಲಿಸಿಟ್ಟುಕೊಳ್ಳಬಹುದು. ನಂತರ Login ಎಂದು ಬರೆದ ಬಟನ್ ಮೇಲೆ ಕ್ಲಿಕ್ ಮಾಡಿದರೆ ಕನ್ನಡ ವಿಕಿಪೀಡಿಯಕ್ಕೆ ನೀವು ಲಾಗಿನ್ ಆಗಿರುತ್ತೀರಿ. ಇದನ್ನು ಅದು ಬಲಮೂಲೆಯಲ್ಲಿ ಕೆಳಗಡೆ ತೋರಿಸುತ್ತದೆ.
ಈಗ Make list ಎಂದು ಬರೆದುದರ ಕೆಳಗೆ ಕಾಣಿಸುವ Source: ಎಂಬಲ್ಲಿ Wiki search (text) ಎಂದು ಆಯ್ಕೆ ಮಾಡಿಕೊಳ್ಳಿ. ನಂತರ ಅದರ ಕೆಳಗಡೆ ಕಾಣಿಸುವ Wiki search: ಎಂಬ ಶೀರ್ಷಿಕೆ ಇರುವ ಟೆಕ್ಸ್ಟ್ ಬಾಕ್ಸ್‌ನಲ್ಲಿ ನೀವು ಹುಡುಕಬೇಕಾದ (ಹಾಗೂ ಬದಲಿಸಬೇಕಾದ) ಪದವನ್ನು ಟೈಪಿಸಿ. ಹೀಗೆ ಟೈಪ್ ಮಾಡಲು ನಿಮ್ಮ ಗಣಕದಲ್ಲಿ ಕನ್ನಡ ಯುನಿಕೋಡ್‌ನಲ್ಲಿ ಟೈಪ್ ಮಾಡಲು ಅನುಕೂಲ ಮಡಿಕೊಡುವ ಸವಲತ್ತು ಅಗತ್ಯ. ವಿಂಡೋಸ್ ಗಣಕಗಳಲ್ಲಿ ಈ ಸೌಲಭ್ಯ ಇದೆ. ಅದನ್ನು ಚಾಲನೆಗೊಳಿಸಬೇಕು ಅಷ್ಟೆ. ಬರಹ ಡೈರೆಕ್ಟ್ ಅಥವಾ ಪದ ತಂತ್ರಾಂಶದಲ್ಲಿ ದೊರೆಯುವ ಕೀಲಿಮಣೆ ಸವಲತ್ತನ್ನೂ ಬಳಸಬಹುದು. ನಂತರ Make list ಎಂದು ಬರೆದ ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ಅಲ್ಲೇ ಕೆಳಗೆ ಎಡ ಮೂಲೆಯಲ್ಲಿರುವ ಟೆಕ್ಸ್ಟ್‌ಬಾಕ್ಸ್‌ನಲ್ಲಿ ಅದು ನೀವು ದಾಖಲಿಸಿದ ಪದ ಇರುವ ಎಲ್ಲ ಲೇಖನಗಳ ಶೀರ್ಷಿಕೆಗಳನ್ನು ಪಟ್ಟಿ ಮಾಡುತ್ತದೆ. ಅದು ನೀಡಿದ ಪಟ್ಟಿ ಸರಿಯಿದೆಯೇ ಎಂದು ನೀವು ಬೇಕಿದ್ದರೆ ಪರಿಶೀಲನೆ ಮಾಡಿಕೊಳ್ಳಬಹುದು.
AutoWikiBrowserನ ಕೆಳ ಅರ್ಧಭಾಗದ ಮಧ್ಯದಲ್ಲಿ ಕಂಡುಬರುವ ಹಲವು ಟ್ಯಾಬ್‌ಗಳಲ್ಲಿ ಮೊದಲನೆಯದು Options ಎಂಬುದು. ಈ ಟ್ಯಾಬ್‌ ಅನ್ನು ಆಯ್ಕೆ ಮಾಡಿಕೊಂಡಾಗ (ಅಂದರೆ Options ಎಂದು ಬರೆದ ಬಟನ್ ಮೇಲೆ ಕ್ಲಿಕ್ ಮಾಡಿದಾಗ)  ಕೆಳಗಡೆ Find and replace ಎಂಬ ಅಯ್ಕೆ ಕಾಣಿಸುತ್ತದೆ. ಅದನ್ನು ಆಯ್ಕೆ ಮಾಡಿಕೊಳ್ಳಿ. ನಂತರ Normal settings ಎಂದು ಬರೆದ ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ಮೂಡಿಬರುವ ಡಯಲಾಗ್ ಬಾಕ್ಸ್‌ನಲ್ಲಿ Find ಎಂದು ಬರೆದುದರ ಕೆಳಗಿರುವ ಟೆಕ್ಸ್ಟ್‌ಬಾಕ್ಸ್‌ನಲ್ಲಿ ತಪ್ಪಾಗಿರುವ ಪದವನ್ನು ದಾಖಲಿಸಿ. ಉದಾಹರಣೆಗೆ ಬಾರತ. Replace with  ಎಂದು ಬರೆದುದರ ಕೆಳಗಿರುವ ಟೆಕ್ಸ್ಟ್‌ಬಾಕ್ಸ್‌ನಲ್ಲಿ ಸರಿಯಾದ ಪದವನ್ನು ದಾಖಲಿಸಿ. ಈ ಉದಾಹರಣೆಯಲ್ಲಿ ಭಾರತ. ನಂತರ Ok ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ಮತ್ತೆ AutoWikiBrowserನ ಕೆಳ ಅರ್ಧಭಾಗದ ಮಧ್ಯದಲ್ಲಿ ಕಂಡುಬರುವ ಹಲವು ಟ್ಯಾಬ್‌ಗಳಲ್ಲಿ Start ಎಂದು ಬರೆದ ಟ್ಯಾಬ್ (ಬಟನ್) ಮೇಲೆ ಕ್ಲಿಕ್ ಮಾಡಿ. ಈಗ ಕೆಳಗಡೆ ಮೂಡಿ ಬಂದ Start ಎಂದು ಬರೆದ ಬಟನ್ ಮೇಲೆ ಕ್ಲಿಕ್ ಮಾಡಿ. ಮೇಲ್ಭಾಗದಲ್ಲಿ ಈಗ ಪರದೆ ಎರಡು ಭಾಗವಾಗಿ ಎಡ ಭಾಗದಲ್ಲಿ ಹಳೆಯ ಆವೃತ್ತಿ ಮತ್ತು ಬಲಭಾಗದಲ್ಲಿ ಹೊಸ ಆವೃತ್ತಿ ಮೂಡಿಬರುತ್ತವೆ. ಮೇಲೆ ಕೆಳಗೆ ಸ್ಕ್ರಾಲ್ ಮಾಡಿ ಎಲ್ಲ ಸರಿಯಾಗಿದೆ ಎಂದು ತೃಪ್ತಿಯಾದರೆ ಕೆಳ ಅರ್ಧಭಾಗದ ಮಧ್ಯದಲ್ಲಿ ಕಂಡುಬರುವ Save ಎಂದು ಬರೆದ ಬಟನ್ ಮೇಲೆ ಕ್ಲಿಕ್ ಮಾಡಿದರೆ ಎಲ್ಲ ಬದಲಾವಣೆಗಳು ಉಳಿಸಲ್ಪಡುತ್ತವೆ. ಈಗ ಒಂದು ಲೇಖನದಲ್ಲಿ ಬದಲಾವಣೆ ಆಗಿರುತ್ತದೆ. ಇದೇ ಮಾದರಿಯಲ್ಲಿ ಎಲ್ಲ ಲೇಖನಗಳನ್ನೂ ಬದಲಾಯಿಸಿ ಬದಲಾವಣೆಗಳನ್ನು ಉಳಿಸಬಹುದು.
The post ಕನ್ನಡ ವಿಕಿಪೀಡಿಯದಲ್ಲಿ ಹುಡುಕು ಮತ್ತು ಬದಲಿಸು first appeared on Vishva Kannada.
ಕಂಗ್ಲಿಶ್ ಶೂರರಿಗೆ
ಸುಮಾರು ೩೦ ವರ್ಷಗಳ ಕಾಲ ಹಿಂದೆ ಹೋಗೋಣ. ಆಗಿನ ಕಾಲದಲ್ಲಿ ಗಣಕಗಳಲ್ಲಿ ಕನ್ನಡವಿರಲಿಲ್ಲ. ಆಗ ನಾವೆಲ್ಲ ಕನ್ನಡವನ್ನು ಇಂಗ್ಲಿಶ್ ಲಿಪಿಯಲ್ಲಿ ಬರೆಯುತ್ತಿದ್ದೆವು. ಬೇರೆ ಗತಿಯಿರಲಿಲ್ಲ. ಉದಾಹರಣೆಗೆ “naanu naale nimma manege bruttene”. ಈ ವಿಧಾನವನ್ನು ಕಂಗ್ಲಿಶ್ ಎನ್ನುತ್ತೇವೆ. ಈಗೀಗ ಅಂತರಜಾಲದಲ್ಲಿ, ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ಇವುಗಳ ಹಾವಳಿ ತುಂಬ ಜಾಸ್ತಿಯಾಗಿದೆ.
ಈಗ ಕಾಲ ಬದಲಾಗಿದೆ. ಗಣಕ ಮಾತ್ರವಲ್ಲ, ಬಹುತೇಕ ಎಲ್ಲ ಸ್ಮಾರ್ಟ್‌ಫೋನ್ ಮತ್ತು ಗ್ಯಾಜೆಟ್‌ಗಳಲ್ಲೂ ಕನ್ನಡವನ್ನು ಬಳಸಬಹುದಾಗಿದೆ. ಗಣಕದಲ್ಲಿ ಬಳಸುವ ಎಲ್ಲ ಕಾರ್ಯಾಚರಣ ವ್ಯವಸ್ಥೆಗಳಲ್ಲಿ (operating systems) ಕನ್ನಡವನ್ನು ಊಡಿಸಲು ಕೀಲಿಮಣೆ ತಂತ್ರಾಂಶ ಲಭ್ಯವಿದೆ.
ಗಣಕಗಳಲ್ಲಿ (ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್) ಕನ್ನಡವನ್ನು ಬಳಸಲು ಹಲವು ವಿಧಾನಗಳಿವೆ. ಪೂರ್ತಿ ಪಟ್ಟಿಯನ್ನು ವಿಕಾಸ್ ಹೆಗಡೆ ನೀಡಿದ್ದಾರೆ. ಗೂಗಲ್ ಕ್ರೋಮ್ ಬಳಸುವವರಾದರೆ ಜಾಲತಾಣಗಳಲ್ಲಿ ಕನ್ನಡದಲ್ಲಿ ಬರೆಯಲು ಒಂದು ಸರಳ ವಿಧಾನ ಇದೆ. ಅದನ್ನು ಓಂಶಿವಪ್ರಕಾಶ ವಿವರಿಸಿದ್ದಾರೆ.
ಸ್ಮಾರ್ಟ್‌ಫೋನ್‌ಗಳ (ಜೊತೆಗೆ ಟ್ಯಾಬ್ಲೆಟ್ ಮತ್ತು ಐಪ್ಯಾಡ್) ವಿಷಯಕ್ಕೆ ಬಂದಾಗ ಇತ್ತೀಚಿನ ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುವ ಎಲ್ಲವುಗಳಲ್ಲಿ ಕನ್ನಡದ ತೋರುವಿಕೆ (ರೆಂಡರಿಂಗ್) ಇದೆ. ಸೂಕ್ತ ಕೀಲಿಮಣೆ ತಂತ್ರಾಂಶವನ್ನು ಹಾಕಿಕೊಳ್ಳಬೇಕಷ್ಟೆ. ಆಂಡ್ರೋಯಿಡ್‌ ಬಳಸುವವರು Anysoft keyboard ಮತ್ತು Kannada for Anysoftkeyboard ಹಾಕಿಕೊಳ್ಳಬಹುದು. ಐಫೋನ್ ಮತ್ತು ಐಪ್ಯಾಡ್ ಬಳಸುವವರು iKannada ಬಳಸಬಹುದು. ವಿಂಡೋಸ್ ಫೋನ್‌ಗೆ Type Kannada ಎಂಬ ಆಪ್ ಲಭ್ಯವಿದೆ. ಇವೆಲ್ಲ ಏನನ್ನು ತೋರಿಸುತ್ತವೆ ಎಂದರೆ ಸವಲತ್ತುಗಳು ಲಭ್ಯವಿವೆ. ನೀವು ಅವುಗಳನ್ನು ಹುಡುಕಿ ಹಾಕಿಕೊಳ್ಳಬೇಕಷ್ಟೆ. ಕನ್ನಡಕ್ಕಾಗಿ ಇಷ್ಟು ಸ್ವಲ್ಪ ಕಷ್ಟಪಡಬಹುದು.
(ಮೇ ೨೯, ೨೦೧೪ರಂದು ಸೇರಿಸಿದ್ದು) ವಿಕಾಸ ಹೆಗಡೆಯವರು ಮೊಬೈಲ್ ಫೋನ್‌ಗಳಲ್ಲಿ ಕನ್ನಡ ಟೈಪಿಸುವುದು ಹೇಗೆ ಎಂಬ ಬಗ್ಗೆ ವಿವರವಾದ ಲೇಖನ ಬರೆದಿದ್ದಾರೆ. ಅದು ಇಲ್ಲಿದೆ.
ಇಷ್ಟೆಲ್ಲ ಇದ್ದರೂ ಕಂಗ್ಲಿಶ್  ಬಳಸುವವರಲ್ಲಿ ಮೂರು ವಿಧ –
ತಮ್ಮ ಗ್ಯಾಜೆಟ್ (ಗಣಕ, ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್) ನಲ್ಲಿ ಕನ್ನಡ ಸಾಧ್ಯವಿದೆ ಎಂಬ ಅರಿವಿಲ್ಲದವರು. ಅಂತಹವರಿಗೆ ಸಹಾಯ ಮಾಡಲು ನಾನು ಸಿದ್ಧ.
ತಮ್ಮ ಗ್ಯಾಜೆಟ್‌ನಲ್ಲಿ ಕನ್ನಡ ಸಾಧ್ಯವಿದೆ ಎಂದು ತಿಳಿದಿದೆ. ಆದರೆ ಅದನ್ನು ಚಾಲನೆ ಮಾಡಲು ಮತ್ತು ಕಲಿಯಲು ಇಚ್ಛಾಶಕ್ತಿ ಇಲ್ಲದವರು ಅಥವಾ ಸೋಮಾರಿತನದವರು.
ಎಲ್ಲವೂ ಗೊತ್ತಿದೆ. ಆದರೆ ನಾನು ಇರುವುದೇ ಹೀಗೆ. ನಾನು ಕಂಗ್ಲಿಶ್ ಅನ್ನೇ ಬಳಸುತ್ತೇನೆ. ಬೇಕಾದರೆ ಓದಿ. ಕಂಗ್ಲಿಶ್ ಕಷ್ಟವಾದರೆ ಓದಬೇಡಿ.  ಎನ್ನುವವರು.
೨ ಮತ್ತು ೩ ವಿಧದವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ತನ್ನಿಚ್ಛೆಗೂ ಬೋಳುತಲೆಗೂ ಮದ್ದಿಲ್ಲ.
ಕಂಗ್ಲಿಶ್ ಯಾಕೆ ಬೇಡ?
ಕಂಗ್ಲಿಶ್ ಯಾಕೆ ಬೇಡ ಎನ್ನುವುದಕ್ಕೆ ಎರಡು ಕಾರಣಗಳನ್ನು ನೀಡಬಹುದು. ಮೊದಲನೆಯದಾಗಿ ಕಂಗ್ಲಿಶ್‌ನಲ್ಲಿ ಬರೆದುದನ್ನು ಓದಲು ತುಂಬ ಶ್ರಮ ಪಡಬೇಕು. ಎರಡನೆಯದು ಮುಖ್ಯ ಕಾರಣ. ಅದೇನೆಂದರೆ ಕಂಗ್ಲಿಶ್‌ನಲ್ಲಿ ಬರೆದರೆ ಅಪಾರ್ಥಕ್ಕೆಡೆಮಾಡಿಕೊಡುತ್ತದೆ ಎಂಬುದು. ಇದನ್ನು ನಾನು ಹಲವು ಸಲ ಬರೆದಿದ್ದೇನೆ. ಕೆಲವು ಉದಾಹರಣೆಗಳು – “kotyadhipati”. ಇದು ಕೋತ್ಯಾಧಿಪತಿಯೂ ಇರಬಹುದು,  ಕೋಟ್ಯಾಧಿಪತಿಯೂ ಇರಬಹುದು. “ನಡೆ ಮುಂದೆ” ಎನ್ನುವುದನ್ನು ಕಂಗ್ಲಿಶ್‌ನಲ್ಲಿ “nade munde” ಎಂದು ಬರೆದರೆ? ಇಂಗ್ಲಿಶ್‌ನಲ್ಲಿ “ಶ್ರೀಕಾಂತ” ಮತ್ತು “ಶ್ರೀಕಂಠ” ಎರಡನ್ನೂ ಒಂದೇ ರೀತಿ ಬರೆಯಲಾಗುತ್ತದೆ.  “railinalli rama baruttiddare” ಎಂದು ಇಮೈಲ್ ಮೂಲಕ ಸಂದೇಶ ಕಳುಹಿಸಿದರೆ ಆತ ರೈಲು ನಿಲ್ದಾಣಕ್ಕೆ ಹೋಗಿ ರಾಮ ಎನ್ನುವ ಗಂಡಸನ್ನು ಹುಡುಕಬೇಕೆ ಅಥವಾ ರಮಾ ಎನ್ನುವ ಹೆಂಗಸನ್ನು ಹುಡುಕಬೇಕೆ? “ಇಲ್ಲಿ ಹೇಳಬೇಡ” ಎನ್ನುವುದಕ್ಕೆ “illi helabeda” ಎಂದು ಬರೆದರೆ? ಇಂತಹ ಉದಾಹರಣೆಗಳನ್ನು ಎಷ್ಟು ಬೇಕಾದರೂ ಕೊಡಬಹುದು.
ಫೇಸ್‌ಬುಕ್‌ನಲ್ಲಿ ಹಲವು ಜನ ದೊಡ್ಡ ದೊಡ್ಡ ಪ್ಯಾರಾಗಳನ್ನೇ ಕಂಗ್ಲಿಶ್‌ನಲ್ಲಿ ಬರೆಯುತ್ತಾರೆ. ನಾನು ಅವುಗಳನ್ನು ಓದುವ ಶ್ರಮ ತೆಗೆದುಕೊಳ್ಳುವುದಿಲ್ಲ. ನನ್ನಂತೆ ಹಲವು ಜನರಿದ್ದಾರೆ.
ಕನ್ನಡ ಯಾಕೆ ಬೇಕು?
ಅಂತರಜಾಲದಲ್ಲಿ ಕನ್ನಡದ ಬಳಕೆ ಅತೀ ಅಗತ್ಯ. ಮೊನ್ನೆಯಷ್ಟೆ ಗೂಗ್ಲ್‌ನವರು ಏರ್ಪಡಿಸಿದ್ದ ಭಾರತೀಯ ಭಾಷೆಗಳಲ್ಲಿ ಆಪ್ ತಯಾರಿಯ ಕಾರ್ಯಾಗಾರಕ್ಕೆ ಹೋಗಿದ್ದೆ. ಅಲ್ಲಿ ಭಾಗವಹಿಸಿದ್ದ ಕನ್ನಡಿಗರ ಒಂದು ಪ್ರಮುಖ ದೂರು ಎಂದರೆ ಅಂತರಜಾಲದಲ್ಲಿ ಗೂಗ್ಲ್ ಬಳಸುವ ಜಾಹಿರಾತಿನ ಸವಲತ್ತಿನಲ್ಲಿ (Google AdSense, Admob) ಕನ್ನಡವಿಲ್ಲ ಎಂಬುದು. ನೀವು ಜಾಲತಾಣ ನಡೆಸುವವರಾದರೆ ನಾನು ಏನು ಹೇಳುತ್ತಿದ್ದೇನೆ ಎಂಬುದು ನಿಮಗೆ ಅರ್ಥವಾಗುತ್ತದೆ. ನಿಮ್ಮ ಜಾಲತಾಣದಲ್ಲಿ ಗೂಗ್ಲ್ ಜಾಹಿರಾತು  (Adsense) ಹಾಕಿಕೊಳ್ಳಬಹುದು. ಈ ಗೂಗ್ಲ್ ಜಾಹಿರಾತು ಕೆಲಸ ಮಾಡುವ ವಿಧಾನ ಹೀಗಿದೆ -ನಿಮ್ಮ ಜಾಲತಾಣದ ಪುಟದಲ್ಲಿ ಬಳಕೆಯಾಗಿರುವ ಪದಗಳನ್ನು ಅದು ಓದುತ್ತದೆ. ಅದರಲ್ಲಿ ಬಳಸಲಾದ ಪದವನ್ನು ಆಧರಿಸಿ ಅದು ಅದಕ್ಕೆ ಸರಿಹೊಂದುವ ಜಾಹೀರಾತನ್ನು ಪಕ್ಕದಲ್ಲಿ ತೋರಿಸುತ್ತದೆ. ಆ ಜಾಹೀರಾತಿನ ಮೇಲೆ ಓದುಗರು ಕ್ಲಿಕ್ಕಿಸಿದರೆ ನಿಮಗೆ ಹಣ ಬರುತ್ತದೆ. ಒಂದು ಉದಾಹರಣೆ – ನಿಮ್ಮ ಪುಟದಲ್ಲಿ Beluru ಎಂಬ ಪದ ಬಂದಿದೆ ಎಂದಿಟ್ಟುಕೊಳ್ಳಿ. ಆಗ ಗೂಗ್ಲ್ ಜಾಹೀರಾತು ಕರ್ನಾಟಕ ಪ್ರವಾಸೋದ್ಯಮ, ಪ್ರವಾಸ ಏರ್ಪಡಿಸುವ ಕಂಪೆನಿಗಳ ಜಾಹಿರಾತನ್ನು ತೋರಿಸುತ್ತದೆ. ಆದರೆ ಬೇಲೂರು ಎಂಬ ಪದ ಕನ್ನಡ ಲಿಪಿಯಲ್ಲಿ ಇದ್ದರೆ ಅದು ಇಂತಹ ಜಾಹಿರಾತನ್ನು ತೋರಿಸುವುದಿಲ್ಲ. ಯಾಕೆಂದರೆ ಗೂಗ್ಲ್ ಜಾಹಿರಾತಿನಲ್ಲಿ ಇನ್ನೂ ಕನ್ನಡದ ಪದಗಳನ್ನು ಸೇರಿಸಿಲ್ಲ. ಅದೇ ರೀತಿ ನೀವು ಆಂಡ್ರೋಯಿಡ್‌ಗೆ ಆಪ್ ಮಾಡಿ ವಿತರಿಸುವವರಾದರೆ ನಿಮ್ಮ ಆಪ್‌ನಲ್ಲಿ ಕನ್ನಡದ ಪದಗಳು ಮಾತ್ರ ಇರುವುದಾದರೆ ಆಗ ಜಾಹಿರಾತು ಬರುವುದಿಲ್ಲ ಮತ್ತು ನಿಮಗೆ ಹಣ ಸಂಪಾದನೆ ಆಗುವುದಿಲ್ಲ. ಇದು ಯಾಕೆ ಹೀಗೆ? ಇದಕ್ಕೆ ಉತ್ತರ ಬಲು ಸುಲಭ. ಅಂತರಜಾಲದಲ್ಲಿ ಕನ್ನಡದ ಬಳಕೆ ಎಷ್ಟಿದೆ ಎಂದು ಗೂಗ್ಲ್‌ ವಿಶ್ಲೇಷಣೆ ಮಾಡುತ್ತಿರುತ್ತದೆ. ಅದರ ಪ್ರಕಾರ ಅಂತರಜಾಲದಲ್ಲಿ ಕನ್ನಡದ ಬಳಕೆ ಇನ್ನೂ ಸಾಕಷ್ಟು ಮಟ್ಟದಲ್ಲಿಲ್ಲ.  ಅಂದರೆ ನಾವು ಅಂತರಜಾಲದಲ್ಲಿ ಕನ್ನಡದ ಬಳಕೆ ಜಾಸ್ತಿ ಮಾಡಬೇಕಾಗಿದೆ ಎಂದು ತೀರ್ಮಾನಿಸಬಹುದು.
ಕೆಲವು ಉತ್ಸಾಹಿ ಕನ್ನಡ ತಂತ್ರಜ್ಞರು ಕೆಲವು ಕನ್ನಡದ ಆಪ್ ಮತ್ತು ಕೀಲಿಮಣೆ ತಂತ್ರಾಂಶಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಅವರಲ್ಲಿ ಕೆಲವರು ಪ್ರಾರಂಭದಲ್ಲಿ ತಮ್ಮ ಆಪ್‌ಗಳಿಗೆ ದರ ನಿಗದಿ ಮಾಡಿದ್ದರು. ಕೊಂಡುಕೊಳ್ಳುವ ಉತ್ಸಾಹಿಗರು ಕಂಡುಬರದಿದ್ದಾಗ ಅವರು ಅವನ್ನು ಉಚಿತ ನೀಡತೊಡಗಿದರು. ಈಗಲಾದರೂ ಅವನ್ನು ಕೊಂಡುಕೊಂಡು ಬಳಸಿದರೆ ಗೂಗ್ಲ್‌ನವರಿಗೆ ಕನ್ನಡದ ಬಳಕೆ ಇದೆ ಎಂಬ ಅರಿವಾಗಿ, ನಾವು ಜಾಹಿರಾತಿನ ಪದಗಳಲ್ಲಿ ಕನ್ನಡದ ಪದಗಳನ್ನು ಸೇರಿಸಬೇಕು ಎಂಬ ತೀರ್ಮಾನಕ್ಕೆ ಬರುತ್ತಾರೆ.
ಕನ್ನಡ ಸಾಹಿತಿಗಳೇ ಇಲ್ಲಿ ಸ್ವಲ್ಪ ಕಿವಿಗೊಡುತ್ತೀರಾ?
ನಿಮ್ಮ ಪುಸ್ತಕ ಅಮೆಝಾನ್‌ನ ಕಿಂಡಲ್‌ನಲ್ಲಿದೆಯೇ? ಇಲ್ಲವಾದಲ್ಲಿ ಯಾಕಿಲ್ಲ ಎಂದು ಯೋಚಿಸಿದ್ದೀರಾ? ನಿಮ್ಮ ಪುಸ್ತಕಗಳನ್ನು ನ್ಯೂಝೀಲಂಡ್, ದಕ್ಷಿಣ ಆಫ್ರಿಕಾ, ಸ್ವೀಡನ್ ಇತ್ಯಾದಿ ಸ್ಥಳಗಳಲ್ಲಿರುವವರು ಓದಬೇಡವೇ? ಯಾಕೆ ಅವರಿಗೆ ಓದಲು ದೊರಕುತ್ತಿಲ್ಲ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಒಂದೇ – ಅಮೆರಿಕದಲ್ಲಿ ಕುಳಿತು ಪಾಲಿಸಿ ತೀರ್ಮಾನ ಮಾಡುವ ಮಂದಿಗೆ (ಗೂಗ್ಲ್, ಮೈಕ್ರೋಸಾಫ್ಟ್, ಅಮೆಝಾನ್, ಅಡೋಬಿ, ಇತ್ಯಾದಿ) ಕನ್ನಡದ ಬಳಕೆದಾರರು ತುಂಬ ಕಡಿಮೆ ಎಂಬ ಭಾವನೆ. ಅದಕ್ಕೆ ಕಾರಣ ಬಹುಮಂದಿ ಅಂತರಜಾಲದಲ್ಲಿ ಕನ್ನಡ ಲಿಪಿಯ ಬದಲು ಕಂಗ್ಲಿಶ್ ಬಳಸುತ್ತಿರುವುದು.
ಬಹುಶಃ ಯಾವ ಕನ್ನಡ ಲೇಖಕನೂ ನನ್ನ ಪುಸ್ತಕ ಯಾಕೆ ಅಮೆಝಾನ್ ಕಿಂಡಲ್‌ನಲ್ಲಿ ಓದಲು ದೊರೆಯುತ್ತಿಲ್ಲ ಎಂದು ಯೋಚಿಸಿರಲಿಕ್ಕಿಲ್ಲ.
ಕಿಂಡಲ್‌ನಲ್ಲಿ ಪುಸ್ತಕಗಳನ್ನು ಪಿಡಿಎಫ್ ಫೈಲ್ ಆಗಿಸಿ ಲೋಡ್ ಮಾಡಿ ಓದಬಹುದು. ಆದರೆ ಕನ್ನಡ (ಯುನಿಕೋಡ್) ಪಠ್ಯದಲ್ಲೇ ಓದುವಂತಿದ್ದರೆ ಇನ್ನೂ ಹಲವು ಸೌಲಭ್ಯಗಳಿರುತ್ತವೆ –
೧. ಅಕ್ಷರಗಳನ್ನು ದೊಡ್ಡ ಸಣ್ಣ ಮಾಡಬಹುದು. ಅಕ್ಷರಗಳನ್ನು ಸಣ್ಣ ದೊಡ್ಡ ಮಾಡಿದಾಗ ವಾಕ್ಯಗಳು ಮುಂದಿನ ಸಾಲಿಗೆ ಸರಿಯಾಗಿ ಹೊರಳುತ್ತವೆ (wrapping)
೨. ಮಾಹಿತಿಯನ್ನು ಹುಡುಕಬಹುದು. ನಿಮ್ಮ ಪುಸ್ತಕವೊಂದರ ಯಾವುದೋ ಪುಟದಲ್ಲಿರುವ ಯಾವುದೋ ಒಂದು ವಾಕ್ಯ ಅಥವಾ ಪದವನ್ನು ಹುಡುಕಿ ನೇರವಾಗಿ ಆ ಪುಟಕ್ಕೆ ಲಂಘನ ಮಾಡಬಹುದು.
೩. ದೃಷ್ಟಿಶಕ್ತಿವಂಚಿತರು ಸ್ಕ್ರೀನ್ ರೀಡರ್ ತಂತ್ರಾಂಶ ಬಳಸಿ ನಿಮ್ಮ ಪುಸ್ತಕವನ್ನು ಓದಬಹುದು.
ಇಷ್ಟೆಲ್ಲಾ ಸೌಕರ್ಯ ಬೇಡ ಎನ್ನುತ್ತೀರಾ ಸಾಹಿತಿಗಳೇ?
ಆದುದರಿಂದ ಎಲ್ಲ ಕಂಗ್ಲಿಶ್ ಶೂರರಲ್ಲಿ ಮತ್ತೊಮ್ಮೆ ಕೇಳಿಕೊಳ್ಳುತ್ತಿದ್ದೇನೆ -ದಯವಿಟ್ಟು ಕಂಗ್ಲಿಶ್ ಬಳಸಬೇಡಿ, ಕನ್ನಡವನ್ನೇ ಬಳಸಿ.
The post ಕಂಗ್ಲಿಶ್ ಶೂರರಿಗೆ first appeared on Vishva Kannada.
ಮೈಸೂರಿನಲ್ಲಿ ವಿಂಡೋಸ್ ಫೋನ್ ತಂತ್ರಾಂಶ ತಯಾರಿ ದಿನ
The post ಮೈಸೂರಿನಲ್ಲಿ ವಿಂಡೋಸ್ ಫೋನ್ ತಂತ್ರಾಂಶ ತಯಾರಿ ದಿನ first appeared on Vishva Kannada.
ನನ್ನ ಗಣಕಾವಲೋಕನ – ೪
ಪಿಡಿಪಿ-11 ರಿಂದ ಪಿಸಿಗೆ
ಈಗ ನಮಗೆ ಸಮಸ್ಯೆ ಎದುರಾಯಿತು. ಬಿಎಆರ್‌ಸಿಯಲ್ಲಿ ಕೆಲವು ಪಿಡಿಪಿ-11 ಗಣಕಗಳಿದ್ದವು. ಆದುದರಿಂದ ಅದರ ಪರಿಣತರೂ ಇದ್ದರು. ಅವರ ಸಹಾಯದಿಂದ ಕೆಲವು ತಿಂಗಳ ಮಟ್ಟಿಗೆ ಉಪಕರಣಕ್ಕೆ ಜೀವ ನೀಡಲು ಸಾಧ್ಯವಾಯಿತು. ಆದರೆ ಇದೇ ಸಮಸ್ಯೆ ಮತ್ತೆ ಮತ್ತೆ ಬಂದಾಗ ನಾವು ಒಂದು  ತೀರ್ಮಾನ ತೆಗೆದುಕೊಂಡೆವು. ಏನೆಂದರೆ ಪಿಡಿಪಿ-11 ಗಣಕವನ್ನು ತೆಗೆದು ಅದರ ಜಾಗದಲ್ಲಿ ಪಿಸಿ ಜೋಡಿಸುವುದು ಎಂದು. ಪಿಡಿಪಿ-11 ರ ಜೊತೆ ಬಂದ ಕ್ರಮವಿಧಿ (program) ಅದೃಷ್ಟಕ್ಕೆ Fortran ಭಾಷೆಯಲ್ಲಿತ್ತು. ಅದನ್ನು ಪಿಸಿಗೆ ಬದಲಾಯಿಸುವುದು ಕಷ್ಟವಿರಲಿಲ್ಲ. ಕೇಬಲ್ ಮತ್ತು ಇತರೆ ಕಾರ್ಡ್‌‌ಗಳನ್ನು ಸಂಪರ್ಕಿಸುವುದು ಹೇಗೆ ಎಂಬ ಸಮಸ್ಯೆ ಇತ್ತು. ಆಗ ಯಾರೋ ಹೇಳಿದರು –ನಮ್ಮ ವಿಭಾಗದ ಇನ್ನೊಂದು ಲ್ಯಾಬಿನ ಮೂಲೆಯಲ್ಲಿ ಒಂದು ಪಿಡಿಪಿ-11 ಗಣಕ ಯಾರೂ ಉಪಯೋಗಿಸದೆ ಮೂಲೆಯಲ್ಲಿ ಬಿದ್ದಿದೆ ಎಂದು. ನಾನು ಅದನ್ನು ಇಟ್ಟ ಜಾಗಕ್ಕೆ ಹೋಗಿ ಆ ಲ್ಯಾಬಿನ ವಿಜ್ಞಾನಿಯವರನ್ನು ವಿಚಾರಿಸಿದೆ. ಅವರಿಗೆ ಅದರ ಬಳಕೆ ಸರಿಯಾಗಿ ಗೊತ್ತಿರಲಿಲ್ಲ. ಎರಡು ಸ್ವಿಚ್‌ಗಳನ್ನು ಒಂದಾದ ನಂತರ ಒಂದರಂತೆ ಆನ್ ಮಾಡಬೇಕು ಎಂದಷ್ಟೆ ತಿಳಿದಿತ್ತು. ಅವರು ಹೇಳಿದಂತೆ ಆನ್ ಮಾಡಿದಾಗ ಅದು ಕೆಲಸ ಮಾಡಲಿಲ್ಲ. ನಾನು ಈ ಸ್ವಿಚ್‌ಗಳು ಏನು ಮಾಡುತ್ತವೆ ಎಂದು ಗಣಕವನ್ನು ಬಿಚ್ಚಿ ನೋಡಿದಾಗ ಆಶ್ಚರ್ಯ ಕಾದಿತ್ತು. ಅದರಲ್ಲಿ ಒಂದು ಸ್ವಿಚ್ ಒಳಗಿನಿಂದ ಎಲ್ಲಿಗೂ ಸಂಪರ್ಕವಿಲ್ಲದೆ ಸುಮ್ಮನೆ ಇತ್ತು. ಅದನ್ನು ಹಲವು ವರ್ಷಗಳಿಂದ ಬಳಸಿದವರಿಗೂ ಆ ಸ್ವಿಚ್ ನಿಜವಾಗಿ ಅಗತ್ಯ ಇರಲಿಲ್ಲ ಎಂದು ತಿಳಿದೇ ಇರಲಿಲ್ಲ.
ಇಲ್ಲೊಂದು ವಿಷಯ ಹೇಳಬೇಕು. ಬಿಎಆರ್‌ಸಿಯಲ್ಲಿ ನನ್ನ ಹುದ್ದೆ ಇದ್ದುದು ರಸಾಯನಶಾಸ್ತ್ರದ ವಿಜ್ಞಾನಿಯಾಗಿ. ಅಂದರೆ ನಾನು ರಸಾಯನಸಾಸ್ತ್ರದಲ್ಲಿ ಸಂಶೋಧನೆ ಮಾಡಬೇಕು. ಈ ಗಣಕದ ಕೆಲಸಗಳೆಲ್ಲ ಏನಿದ್ದರೂ ಒಂದು ಹಾಬ್ಬಿ ಎಂದೇ ಪರಿಗಣಿಸಲ್ಪಡುತ್ತಿತ್ತು. ಅಂದರೆ ನಾನು ಮಾಡಿದ ಕೆಲಸದಿಂದ ಬಿಎಆರ್‌ಸಿಗೆ ಎಷ್ಟೇ ಪ್ರಯೋಜನವಾದರೂ ನನಗೆ ಅದಕ್ಕಾಗಿ ಯಾವುದೇ ಪ್ರತಿಫಲ ಇರಲಿಲ್ಲ. ಎಲ್ಲ ವಿಜ್ಞಾನಿಗಳಿಂದ ಶಹಬ್ಬಾಸ್ ಎಂದು ಬೆನ್ನು ತಟ್ಟಿಸಿಕೊಂಡಿದ್ದಷ್ಟೇ ಲಾಭ.
ನೋಡಿ – ನನ್ನ ಗಣಕಾವಲೋಕನ –೩, ೨, ೧
The post ನನ್ನ ಗಣಕಾವಲೋಕನ  – ೪ first appeared on Vishva Kannada.
ನನ್ನ ಗಣಕಾವಲೋಕನ–೩
ಬಂತು ಖಾಸಾ ಗಣಕ
ಪಿಸಿ ಏನೋ ಬಂತು. ಅದರಲ್ಲಿ ಏನು ಮಾಡುವುದು. ಆಗ ಬಳಕೆಯಲ್ಲಿದ್ದದ್ದು ಮೈಕ್ರೋಸಾಫ್ಟ್‌ ಡಾಸ್ (MS DOS) ಕಾರ್ಯಾಚರಣೆಯ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್). ಈಗಿನಂತೆ ವಿಂಡೋಸ್, ವರ್ಡ್, ಎಕ್ಸೆಲ್, ಇತ್ಯಾದಿಗಳಿರಲಿಲ್ಲ. ಆ ಪಿಸಿಯ ಸ್ಪೆಸಿಪಿಕೇಶನ್ ಕೇಳಿದರೆ ನಿಮಗೆ ನಗು ಬರಬಹುದು. ಅದರಲ್ಲಿ ೧೦ಮೆಗಾಬೈಟ್‌ನ ಒಂದು ಹಾರ್ಡ್‌‌ಡಿಸ್ಕ್ ಮತ್ತು ೫ ೧/೪ ಇಂಚು ಗಾತ್ರದ ಒಂದು ಫ್ಲಾಪಿ ಡ್ರೈವ್ ಇದ್ದವು. ಅದರ ಸಿಪಿಯು ವೇಗ ಕೇವಲ 8MHz ಆಗಿತ್ತು. ಮೆಮೊರಿ ಕೇವಲ ೧ ಮೆಗಾಬೈಟ್. ಅದರಲ್ಲೂ ಡಾಸ್ ಬಳಸುತ್ತಿದ್ದುದು ೬೪೦ ಕಿಲೋಬೈಟ್ ಮಾತ್ರ.
ನೋಡಿ – ನನ್ನ ಗಣಕಾವಲೋಕನ –೨, ೧
The post ನನ್ನ ಗಣಕಾವಲೋಕನ–೩ first appeared on Vishva Kannada.