eಳೆ - ೨೦ (ಡಿಸೆಂಬರ್ ೧೫, ೨೦೦೨)
ಅಂತರಜಾಲಾಡಿ
ಇಂದು ಗೀತಾಜಯಂತಿ. ಭಗವದ್ಗೀತೆಯಿಂದ ಪ್ರಭಾವಿತರಾಗದವರು ವಿರಳ. ಅಂತರಜಾಲದಲ್ಲಿ ಭಗವದ್ಗೀತೆಯ ತಾಣಗಳು ಹಲವಾರಿವೆ. www.bhagavad-gita.org ತಾಣದಲ್ಲಿ ಹಿಂದಿ, ಇಂಗ್ಲಿಶ್, ಫ್ರೆಂಚ್, ಸ್ಪಾನಿಶ್, ಇತ್ಯಾದಿ ಹಲವು ಭಾಷೆಗಳಲ್ಲಿ ಗೀತೆಯ ಅನುವಾದವನ್ನು ಓದಬಹುದು. ಗೀತೆಯ ಬಹುಮಾಧ್ಯಮ ಆವೃತ್ತಿ www.malkan.com/webgita/index.shtml ತಾಣದಲ್ಲಿದೆ. ಅಡೋಬಿ ಪಿ.ಡಿ.ಎಫ್. ಮತ್ತು ಪೋಸ್ಟ್‌ಸ್ಕ್ರಿಪ್ಟ್ ವಿಧಾನದಲ್ಲಿ, ಮುದ್ರಿಸಬಲ್ಲ ಗೀತೆ www.iconsoftec.com/gita ತಾಣದಲ್ಲಿದೆ. ಇಷ್ಟೆಲ್ಲ ಇದೆ ಅನ್ನುತ್ತೀರಲ್ಲ, ಕನ್ನಡದಲ್ಲಿ ಎಲ್ಲಿದೆ ಎಂದು ಕೇಳುತ್ತಿದ್ದೀರಾ? ಇದೋ ನಿಮಗಾಗಿ www.ourkarnataka.com/religion/gita/gita.htm ತಾಣದಲ್ಲಿ ಕನ್ನಡ ಆವೃತ್ತಿ ಇದೆ. ಇದು ಇನ್ನೂ ಸಂಪೂರ್ಣವಾಗಿಲ್ಲ. ಅದನ್ನು ಪೂರ್ಣಗೊಳಿಸಲು ನೀವೂ ಸಹಾಯ ಮಾಡಬಹುದು.