ಕೋಡ್ ಕೋಡ್ ಎಲ್ನೋಡಿ ಕೋಡ್
Monday, November 14th, 2005ಕಾರ್ ಕಾರ್ ಹಾಡಿನ ಧಾಟಿಯಲ್ಲಿ…
ಕೋಡ್ ಕೋಡ್ ಕೋಡ್ ಕೋಡ್ ಎಲ್ನೋಡಿ ಕೋಡ್
ಕೋಡ್ ಕೋಡ್ ಕೋಡ್ ಕೋಡ್ ಎಲ್ನೋಡಿ ಕೋಡ್
ಕಾರ್ ಕಾರ್ ಹಾಡಿನ ಧಾಟಿಯಲ್ಲಿ…
ಕೋಡ್ ಕೋಡ್ ಕೋಡ್ ಕೋಡ್ ಎಲ್ನೋಡಿ ಕೋಡ್
ಕೋಡ್ ಕೋಡ್ ಕೋಡ್ ಕೋಡ್ ಎಲ್ನೋಡಿ ಕೋಡ್
ಬಿಲ್ವಿದ್ಯೆ = ಸ್ನೇಹಿತರ ಜೊತೆ ಹೋಟೆಲಿಗೆ ಹೋಗಿ ಚೆನ್ನಾಗಿ ತಿಂದು ಬಿಲ್ಲನ್ನು ಸ್ನೇಹಿತರ ಕೈಲಿ ಕೊಡಿಸುವ ವಿದ್ಯೆ.
ದೊಡ್ಡ ಪರೀಕ್ಷೆ ಬಂದಿತು. ಜಾಣ ವಿದ್ಯಾರ್ಥಿ ಎನಿಸಿಕೊಂಡಿದ್ದ ತಿಂಮ ಸಕಲ ಸಿದ್ಧತೆ ಮಾಡಿಕೊಂಡ.
ಗೊರೂರು ರಾಮಸ್ವಾಮಿ ಅಯ್ಯಂಗಾರ್
ನಾನು ಕೆಲವು ವರುಷಗಳ ಹಿಂದೆ, ಇಂಗ್ಲೆಂಡಿನ ನ್ಯಾಯಾಲಯವೊಂದರಲ್ಲಿ ಒಂದು ಘಟನೆ ನಡೆದುದನ್ನು ಓದಿದ್ದೆ. ಯಾವುದೋ ಮೊಖದ್ದಮೆಯ ವಿಚಾರಣೆಯಾಗಿ, ಅಪರಾಧಿಗೆ ಮರಣದಂಡನೆಯಾಗಿತ್ತು. ವಿಚಾರಣೆ ನಿಷ್ಪಕ್ಷವಾಗಿ ನ್ಯಾಯಬದ್ಧವಾಗಿ ನಡೆದಿರಲಿಲ್ಲವೆಂದು ತೋರುತ್ತದೆ. ಅಪರಾಧಿಯನ್ನು ದಂಡಾಧಿಕಾರಿಗಳು ಎಳೆದುಕೊಂಡು ಹೋಗುತ್ತಿರುವಾಗ, ವಿಚಾರಣೆಯನ್ನು ನಿರೀಕ್ಷಸಲು ಬಂದಿದ್ದ ಒಬ್ಬ ಸಭ್ಯ ಗೃಹಸ್ಥ “ದೇವರ ದಯವಿಲ್ಲದಿದ್ದಲ್ಲಿ; ಅಲ್ಲಿ ಮರಣದಂಡನೆಗೆ ಹೋಗುತ್ತಿರುವವವನು ನಾನೇ ಆಗಿರಬಹುದಾಗಿತ್ತು" ಎಂದು ಉದ್ಗರಿಸಿದ.
ಈಗ ಕೆಲವು ವರುಷಗಳ ಹಿಂದೆ -ಸ್ವರಾಜ್ಯವನ್ನು ಗಳಿಸಿದ ಮೇಲೆ ನಮ್ಮೂರಿನಿಂದ ನಾಲ್ಕು ಮೈಲಿ ದೂರವಿರುವ ಹಳ್ಳಿಯೊಂದರಲ್ಲಿ, ಜಮೀನು ಒತ್ತುವರಿಯ ವಿಷಯದಲ್ಲಿ ನೆರೆಹೊರೆಯ ರೈತರಿಗೆ ಘರ್ಷಣೆಯುಂಟಾಗಿ ಇಬ್ಬರೂ ಒಬ್ಬರನ್ನೊಬ್ಬರು ಬಡಿದರು. ಒಬ್ಬ ರೈತ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮೊಖದ್ದಮೆ ದಾಖಲುಮಾಡಿದ (ಪೋಲೀಸ್ ಕೇಸು). ನನಗೆ ಇಬ್ಬರು ರೈತರು ಆಪ್ತರು. ಇಬ್ಬರು ರೈತರಿಗೂ ರಾಜಿಮಾಡಿಸಲು ನಾನು ಬಹಳ ಪ್ರಯತ್ಮಪಟ್ಟೆ. ರಾಜಿಯಾಗುವ ಘಟ್ಟಕ್ಕೆ ಬಂದಿತ್ತು. ಆದರೆ ಒಬ್ಬ ರೈತನ ಭಾವಮೈದುನ ಪೋಲೀಸ್ ಇಲಾಖೆಯಲ್ಲಿದ್ದ. ಅವನು “ಎದುರಾಳಿ ರೈತನಿಗೆ ಸರಿಯಾಗಿ ಬುದ್ಧಿ ಕಲಿಸುತ್ತೇನೆಂದು" ಮೊಖದ್ದಮೆ ನಡೆಸಲು ತನ್ನ ಭಾವನನ್ನು ಪ್ರೋತ್ಸಾಹಿಸಿದ.
ಒಂದು ದಿನ, ನಮ್ಮ ತಾಲ್ಲೂಕಿನ ಒಬ್ಬ ಇನಸ್ಪೆಕ್ಟರು, ನನ್ನ ಮನೆಗೆ ಬಂದು, ನನ್ನ ಸಾಹಿತ್ಯವನ್ನು ಕುರಿತು ತುಂಬ ಪ್ರಶಂಸೆ ಮಾಡಿದರು. ಸಾಹಿತಿಗಳಿರುವ ದೌರ್ಬಲ್ಯಗಳಲ್ಲಿ ಪ್ರಶಂಸೆಯ ಆಶೆ ಹೆಚ್ಚಿನದು. ಎಲ್ಲ ಕಲೆಗಾರರಿಗೂ ಹಾಗೆಯೇ. ನನಗೆ ಪೋಲೀಸಿನವರಾದರೂ ಎಷ್ಟು ಸಾಹಿತ್ಯಾಭಿಮಾನಿಗಳು ಸುಸಂಸ್ಕೃತರು ಎಂದು ಅಭಿಮಾನವುಂಟಾಯಿತು. ಅವರು ಹೀಗೆ ಎರಡು ಮೂರು ಸಲ, ಒಂದೇ ವಾರದಲ್ಲಿ ನನ್ನನ್ನು ಸಂದರ್ಶಿಸಿ, ತುಂಬ ಸ್ನೇಹವನ್ನೇ ಬೆಳೆಸಿದರು. ನಂತರ ಒಂದು ದಿನ “ನಿಮ್ಮಂಥವರ ಸಹವಾಸ ದೊರೆತಿದ್ದು ನನ್ನ ಪುಣ್ಯ. ನಿಮ್ಮದು ಏನು ಜ್ಞಾನ, ಎಂಥ ಸಾಧನೆ, ಎಂಥ ಸೇವೆ, ಛೆ ಛೆ ಅದ್ಭುತ. ನಾನು ಒಂದೆರೆಡು ದಿನ ನಿಮ್ಮ ಜೊತೆಯಲ್ಲಿಯೇ ನಿಮ್ಮ ಸಹವಾಸದಲ್ಲಿಯೇ ಇದ್ದು ನಿಮ್ಮ ನಡವಳಿಕೆ, ಜೀವನಕ್ರಮ, ಪುಸ್ತಕ ಭಂಡಾರ ಎಲ್ಲವನ್ನೂ ನೋಡಬೇಕು. ಇದು ಎಲ್ಲರಿಗೂ ದೊರೆಯುವ ಭಾಗ್ಯವಲ್ಲ" ಎಂದರು. ನನಗೆ ಹಿಗ್ಗೊ ಹಿಗ್ಗು! ಜಾನ್ಸನ್‌ಗೆ ಬಾಸ್ವೆಲ್ ಸಿಕ್ಕಿದಂತೆ ನನಗೊಬ್ಬ ಚರಿತ್ರೆಕಾರನೇ ಸಿಕ್ಕಿದ ಎಂದು ಉಬ್ಬಿದೆ. ನಾನು “ಹಾಗೇ ಆಗಲಿ, ಬನ್ನಿ. ನಿಮಗೆ ಬೇಕಾದಾಗ ಬನ್ನಿ. ನಮ್ಮ ಮನೆಯಲ್ಲಿಯೇ ಇರಿ" ಎಂದೆ. ಎರಡು ದಿನಗಳ ನಂತರ ಸವಾರಿ, ಪೋಲೀಸ್ ಪೇದೆಯ ಕೈಯಲ್ಲಿ “ಹೋಲ್ಡಾಲ್" ಹೊರಿಸಿಕೊಂಡು ನನ್ನ ಮನೆಯಲ್ಲಿ ಬಂದು ಇಳಿಯಿತು. ಹಳ್ಳಿಯಲ್ಲಿ ಒಬ್ಬ ಸಾಮಾನ್ಯನ ಮನೆಯಲ್ಲಿ ಸಬ್‌ಇನಸ್ಪೆಕ್ಟರರು ಬಂದು ಉಳಿದುಕೊಳ್ಳುವುದೆಂದರೆ ಆ ಮನುಷ್ಯ ಘನತೆ ತುಂಬ ಮೇಲೆ ಏರಿದಂತೆಯೆ. ಸರಿ, ಒಂದಿಲ್ಲೊಂದು ನೆಪದಲ್ಲಿ ಊರವರೆಲ್ಲ ಬಂದು, ಸಬ್‌ಇನಸ್ಪೆಕ್ಟರೊಡನೆ ಪೆದ್ದ ನಗೆಯನ್ನು ನಕ್ಕು ಒಂದು ಎರಡು ಮಾತನಾಡಿ ಕೈ ಮುಗಿದು ಹೋದರು. ನಾನಂತು ಬಹುಮಟ್ಟಿಗೆ ನನ್ನ ಮಹಿಮೆಯ ವಿಷಯಕ್ಕೆ ಎಚ್ಚೆತ್ತು, ಜಗತ್ತೆಲ್ಲ ನನ್ನ ಚಲನವಲನಗಳನ್ನು ಈಕ್ಷಿಸುತ್ತಿದೆಯೋ ಎಂಬಂತೆ -ಒಬ್ಬ ನಾಟಕ ಪಾತ್ರಧಾರಿಯಂತೆ -ನನ್ನ ನಡವಳಿಕೆ ಮಾತು ಭಾವ ಎಲ್ಲವನ್ನೂ ಸಬ್‌ಇನಸ್ಟೆಕ್ಟರರ ಮನಸ್ಸಿನಲ್ಲಿ ಅಚ್ಚು ಒತ್ತುವುದಕ್ಕಾಗಿ ಹೇಗೆ ಹೇಗೋ ಆಡಿ ಬಿಟ್ಟೆ. ಸಬ್‌ಇನಸ್ಪೆಕ್ಟರು ನನ್ನ ಮನೆಯಿಂದ ಹೋದ ಕೆಲವು ದಿನಗಳ ನಂತರ, ನನಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಹಿಂದೆ ಹೇಳಿದ, ನಮ್ಮ ನೆರೆ ಹಳ್ಳಿಯ ರೈತರ ವ್ಯಾಜ್ಯದಲ್ಲಿ ನಾನು ಫಿರ್‍ಯಾದಿಯ ಪರ-ಅಂದರೆ ಪೋಲೀಸರ ಪರ-ಸಾಕ್ಷಿಯಾಗಿ ಬರಬೇಕೆಂದು ಆಜ್ಞಾಪತ್ರ ಬಂದಿತು. ಸರ್ಕಾರದ ಪರ ನಾನು ಯಾಕೆ ಸಾಕ್ಷಿ ಎಂದು ನನಗೆ ದಿಗ್ಭ ಮೆಯೇ ಆಯಿತು. ನನ್ನನ್ನು ಯಾರು ಕೇಳಲೂ ಇಲ್ಲ. ನಾನು ಒಪ್ಪಿಯೂ ಇರಲಿಲ್ಲ. ಹಾಗಾದರೆ “ನನ್ನನ್ನು ಕೇಳದೆಯೇ ನನ್ನನ್ನು ಸಾಕ್ಷಿಯಾಗಿ ಮಾಡಬಹುದೇ?" ಎಂದು ಒಬ್ಬ ವಕೀಲರನ್ನು ನಾನು ಕೇಳಿದೆ. ಅವರು “ಮಾಡಬಹುದು. ಪೋಲೀಸಿನವರು ಸಾಕ್ಷ್ಯಗಳನ್ನು ಸಂಗ್ರಹಿಸುವುದೇ ಹಾಗೆ. ಲೋಕಾಭಿರಾಮವಾಗಿ ನೀವು ಅವರಿಗೆ ಏನನ್ನೋ ಹೇಳಿದ್ದರೂ ಅವೆಲ್ಲ ಅಧಿಕೃತ ಸಾಕ್ಷಗಳಾಗುತ್ತವೆ" ಎಂದರು. ನಾನು ನನ್ನ ಉತ್ಸಾಹದಲ್ಲಿ ನನ್ನ ಅತಿಥಿ ಸಬ್‌ಇನಸ್ಪಕ್ಟರನ ಹತ್ತಿರ ಏನೇನು ಹೇಳಿದೆನೊ ಎಂದು ಚಿಂತಾಕ್ರಾಂತನಾದೆ. ಆ ಮೊದಲನೆಯ ವಿಚಾರಣೆಗೆ ನಾನು ಹೋಗಲಿಲ್ಲ. ಮುಂದಲ ವಿಚಾರಣಾದಿನ ಬರುವನೆಂದು ಬರೆದು ಹಾಕಿದೆ.