ಮೊಳೆಗಳು ಸಾರ್ ಮೊಳೆಗಳು
Tuesday, August 25th, 2020‘ಥೋಥೋಥೋ! ಈ ವರ್ಲೆ ಕಾಟದಗೆ ಆಗ್ಲಿಲ್ಲಪ್ಪಾ’ ಅಂತ ಅಜ್ಜಿ ಆಗಾಗ ಕೂಗುತ್ತಿದ್ದಳು. ಅಜ್ಜಿಯಷ್ಟೇ ಏನು- ಅಪ್ಪ, ಅಮ್ಮ, ನಾನು -ಎಲ್ಲರೂ ಒಂದಿಲ್ಲೊಂದು ಹೊತ್ತಿನಲ್ಲಿ ವರಲೆ ಹುಳುಗಳನ್ನು ಬೈದುಕೊಂಡವರೇ. ಏಕೆಂದರೆ ವರಲೆ ಹುಳುಗಳ ಗತ್ತು-ಗಮ್ಮತ್ತು ಹಾಗಿತ್ತು ಆಗ. ಮಣ್ಣಿನ ಗೋಡೆಯಿಂದಾದ ನಮ್ಮ ಮನೆ ಅವಕ್ಕೆ ಅರಮನೆಯಾಗಿತ್ತು. ಕಾಡುಮರದ ತೊಲೆಗಳು, ಅಡಿಕೆ ದಬ್ಬೆಯ ರೀಪುಗಳು, ಎಳೆಯ ನಾಟಾದಿಂದ ಮಾಡಿದ್ದ ಮುಂಡಿಗೆಗಳು –ಅವಕ್ಕೆ ಸುಗ್ರಾಸ ಕೂಳು ಒದಗಿಸುತ್ತಿದ್ದವು. ಮಣ್ಣಿನ ಗೋಡೆಯಲ್ಲಿ ಎಲ್ಲಿ ತಟ್ಟಿದರೂ ವರಲೆ ಹುಳುಗಳು ಕೊರೆದ ದೊರಗಿನಿಂದಾಗಿ ಗೋಡೆ ಕಳಚಿಕೊಂಡು […]