Press "Enter" to skip to content

Posts published in “ಸುದ್ದಿ ಸಮಾಚಾರ”

ಎಲ್ಲೆಲ್ಲಿ ಏನೇನು

ಕನ್ನಡದಲ್ಲಿ .ಭಾರತ ಡೊಮೈನ್ ಹೆಸರು ಈಗ ಲಭ್ಯ

ಜಾಲತಾಣಗಳ (websites) ವಿಳಾಸಗಳು ಇಂಗ್ಲಿಷಿನಲ್ಲೇ ಇರುವುದು ಗೊತ್ತಿರಬಹುದು. ಅವುಗಳನ್ನು ಪ್ರಪಂಚದ ಎಲ್ಲ ಭಾಷೆಗಳಲ್ಲೂ ಲಭ್ಯಗೊಳಿಸುವುದಕ್ಕೆ ಅಂತಾರಾಷ್ಟ್ರೀಯ ಜಾಲತಾಣ ವಿಳಾಸ (Internationalized Domain Name, IDN) ಎನ್ನುತ್ತಾರೆ. ಇವು ಕನ್ನಡದಲ್ಲಿ ಲಭ್ಯವಿರಲಿಲ್ಲ. ಕನ್ನಡದಲ್ಲಿ ಜಾಲತಾಣ ವಿಳಾಸ…

ಕನ್ನಡ ವಿಕಿಪೀಡಿಯ ದಶಮಾನೋತ್ಸವ ಕಾರ್ಯಕ್ರಮ

ಕನ್ನಡ ವಿಕಿಪೀಡಿಯ ಸಮುದಾಯವು ಕನ್ನಡ ವಿಕಿಪೀಡಿಯಕ್ಕೆ ಹತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ದಶಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮ ವಿವರ ೯:೩೦-೧೦:೦೦ ನೋಂದಣಿ ೧೦:೦೦ ರಿಂದ ೧೧:೦೦ ಸಭಾ ಕಾರ್ಯಕ್ರಮ ಸ್ವಾಗತ ಗೀತೆ – ಲಕ್ಷ್ಮಿ…

ಐಸಾನ್ ಧೂಮಕೇತು ಕಾರ್ಯಾಗಾರಕ್ಕೆ ಹಾಜರಾಗಲು ವಿಜ್ಞಾನ ಶಿಕ್ಷಕರು ಹಾಗೂ ವಿಜ್ಞಾನಾಸಕ್ತರಿಗೆ ಆಹ್ವಾನ

ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಐಸಾನ್ ಧೂಮಕೇತು ಕಾರ್ಯಾಗಾರಕ್ಕೆ ಹಾಜರಾಗಲು ವಿಜ್ಞಾನ ಶಿಕ್ಷಕರು ಹಾಗೂ ವಿಜ್ಞಾನಾಸಕ್ತರಿಗೆ ಆಹ್ವಾನ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಭಾರತ…

ಕೊನೆಗೂ ಯುನಿಕೋಡ್ ಜಾರಿ

ಕರ‍್ನಾಟಕ ಸರಕಾರವು ೨೦೦೮ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ| ಚಿದಾನಂದ ಗೌಡರ ಅಧ್ಯಕ್ಷತೆಯಲ್ಲಿ ಕನ್ನಡ ತಂತ್ರಾಂಶ ಸಲಹಾ ಸಮಿತಿಯನ್ನು ನೇಮಿಸಿತ್ತು. ಅದು ೨೦೧೦ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ವರದಿಯಲ್ಲಿ ಸೂಚಿಸಿದ ಒಂದು ಪ್ರಮುಖ…

“ಶುಕ್ರಗ್ರಹದ ಸಂಕ್ರಮ” ವಿಶೇಷ ಕಮ್ಮಟಗಳು

ಬೆಂಗಳೂರು, ಏಪ್ರಿಲ್ ೨೫ (ಕರ್ನಾಟಕ ವಾರ್ತೆ) : ಜೂನ್ ೦೬ ರಂದು ನಡೆಯಲಿರುವ “ಶುಕ್ರಗ್ರಹದ ಸಂಕ್ರಮ “ ಎಂಬ   ವಿಶೇಷ ಖಗೋಳೀಯ ಘಟನೆ ಶತಮಾನಕ್ಕೆ ಒಮ್ಮೆ ನಡೆಯುವಂತಹುದು.   ಚಂದ್ರನ ಬದಲು ಶುಕ್ರಗ್ರಹ ಸೂರ್ಯನ ಮುಂದೆ …

ಒಪ್ಪಣ್ಣನಿಂದ ವಿಷು ವಿಶೇಷ ಸ್ಪರ್ಧೆ – 2012

ಒಪ್ಪಣ್ಣನ ನೆರೆಕರೆ ಪ್ರತಿಷ್ಠಾನ “ಹವ್ಯಕ”ವೆಂದರೆ ದಕ್ಷಿಣಕನ್ನಡ-ಕಾಸರಗೋಡು-ಉತ್ತರಕನ್ನಡ ಜಿಲ್ಲೆಗಳಲ್ಲಿ ಕೇಂದ್ರೀಕೃತವಾದ ಪಂಗಡ. ಹವ್ಯಕರ ಆಡುಭಾಶೆ “ಹವ್ಯಕ ಭಾಶೆ”. ಹಳೆಗನ್ನಡಕ್ಕೆ ಹತ್ತಿರವಾದ ಈ ಭಾಶೆ ಪ್ರಸ್ತುತ ಅನೇಕ ಸ್ಥಳೀಯ ಆವೃತ್ತಿಗಳನ್ನು ಹೊಂದಿದೆ. ಅನೇಕ ಸಾಹಿತಿಗಳು, ಕಲಾವಿದರು, ಚಿಂತಕರು, ರಾಜಕಾರಣಿಗಳು, ಅಧಿಕಾರಿಗಳು…

ಮೈಸೂರಿನಲ್ಲಿ ವಿಂಡೋಸ್ ಫೋನ್ ತಂತ್ರಾಂಶ ತಯಾರಿ ದಿನ

ಮೈಸೂರು ಗೀಕ್ಸ್ ಎಂಬುದು ತಂತ್ರಜ್ಞಾನದ ಬಗ್ಗೆ ಅತಿಯಾಗಿ ಆಸಕ್ತಿ ಹೊಂದಿರುವವ ಬಳಗ. ಈ ಬಳಗ ಆಗಾಗ್ಗೆ ತಂತ್ರಜ್ಞಾನದ ಬಗ್ಗೆ ಒಬ್ಬರಿಗೊಬ್ಬರು ವಿಚಾರವಿನಿಮಯ ಮಾಡಿಕೊಳ್ಳಲು ಸಭೆ ಸೇರುತ್ತಾರೆ. ಚರ್ಚೆ, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುತ್ತಾರೆ. ಈ ಹಿಂದೆ…

ಪರಿಸರ ಪ್ರಶಸ್ತಿಗಾಗಿ ಅರ್ಜಿ-ನಾಮನಿರ್ದೇಶನ ಆಹ್ವಾನ

ಬೆಂಗಳೂರು, ಮಾರ್ಚ್ ೦೬( ಕರ್ನಾಟಕ ವಾರ್ತೆ) :  ಪರಿಸರ ಸಂರಕ್ಷಣೆಗಾಗಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿ-ಸಂಸ್ಥೆಗಳನ್ನು ಗುರುತಿಸಲು ೨೦೧೧-೨೦೧೨ನೇ ಸಾಲಿನ ರಾಜ್ಯ ಪರಿಸರ ಪ್ರಶಸ್ತಿಗಾಗಿ ಅರ್ಜಿ/ನಾಮನಿರ್ದೇಶನಗಳನ್ನು ಅರಣ್ಯ ಮತ್ತು ಪರಿಸರ ಇಲಾಖೆವತಿಯಿಂದ ಆಹ್ವಾನಿಸಲಾಗಿದೆ. ಈ…

ರೈತರ ಆತ್ಮಹತ್ಯೆ ತಡೆಗೆ ಉಪಾಯ: ಗೋ ಆಧಾರಿತ ಕೃಷಿ

ಕಗ್ಗಲಿಪುರ ಗೋಲೋಕದಲ್ಲಿ ರೈತ ಸಮಾವೇಶ

ಬೆಂಗಳೂರು, ಫೆ, ೧೭, ೨೦೦೮: ಗೋ ಆಧಾರಿತ ಸ್ವಾವಲಂಬಿ ಕೃಷಿಯಿಂದ ಮಾತ್ರ ರೈತರ ಆತ್ಮಹತ್ಯೆಗಳನ್ನು ನಿಲ್ಲಿಸಬಹುದು. ಆದುದರಿಂದ ಸರ್ಕಾರಗಳು ಗೋ ಆಧಾರಿತ ಕೃಷಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ರಾಜ್ಯ ಪ್ರಶಸ್ತಿ ವಿಜೇತ ಗೋ ಆಧಾರಿತ ಕೃಷಿಕ ರಮೇಶರಾಜು ಅವರು ಇಲ್ಲಿ ಆಗ್ರಹಿಸಿದರು.

ಕಗ್ಗಲಿಪುರದಲ್ಲಿ ಸಮರ್ಪಣ – ೨೦೦೮

ಬೆಂಗಳೂರು, ಜನವರಿ ೨೭, ೨೦೦೮: ಬೆಂಗಳೂರಿನ ದಕ್ಷಿಣಕ್ಕೆ ಕನಕಪುರ ರಸ್ತೆಗೆ ಹೊಂದಿಕೊಂಡಿರುವ ಕಗ್ಗಲಿಪುರದಲ್ಲಿರುವ ಅಮೃತಧಾರಾ ಗೋಶಾಲೆಯ ಆವರಣದಲ್ಲಿ ಫೆಬ್ರವರಿ ೧೭ರಂದು ಸಮರ್ಪಣ - ೨೦೦೮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನವಾಗಿ ರೈತರ ಸಮಾವೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ಪೂರ್ವಾಹ್ನ ೧೧ ಘಂಟೆಗೆ ರೈತರ ಸಮಾವೇಶವಿರುತ್ತದೆ. ಕನಕಪುರ ತಾಲೂಕಿನ ರೈತರ ಸಮಾವೇಶದಲ್ಲಿ “ಗೋಸಂರಕ್ಷಣೆಯ ಅಗತ್ಯ”, “ಗೋವು ಮತ್ತು ಆರ್ಥಿಕತೆ” ಈ ವಿಷಯಗಳ ಬಗ್ಗೆ ಉಪನ್ಯಾಸ ಮತ್ತು ಚರ್ಚೆಗಳಿರುತ್ತವೆ. ಅಪರಾಹ್ನದ ಕಾರ್ಯಕ್ರಮಗಳಲ್ಲಿ ಗೋವಿಗಾಗಿ ಸದ್ದಿಲ್ಲದೆ ದುಡಿಯುತ್ತಿರುವ ಎಲೆಮರೆಯ ಕಾಯಿಗಳಿಗೆ ಸೇವಾಪುರಸ್ಕಾರ ನೀಡಲಾಗುತ್ತದೆ. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಅಶೀರ್ವಚನದ ನಂತರ ಸಾಂಸ್ಕೃತಿಕ ಕಾರ್ಯಕ್ರಮವಿರುತ್ತವೆ. ಕದ್ರಿ ಗೋಪಾಲನಾಥರ ಶಿಷ್ಯ ಶ್ರೀಧರ ಸಾಗರ ಅವರಿಂದ ಸ್ಯಾಕ್ಸಾಫೋನ್ ವಾದನ, ರವಿಚಂದ್ರ ಮತ್ತು ತಂಡದವರಿಂದ ಕೊಳಲು ಪ್ರಧಾನವಾಗಿರುವ ವಾದ್ಯವೃಂದ ರೂಪಕ ಹಾಗೂ ಹೊಸನಗರದ ಶ್ರೀರಾಮಚಂದ್ರಾಪುರ ಮಠದ ತಂಡದವರಿಂದ ನೃತ್ಯ ರೂಪಕವಿರುತ್ತದೆ. ಕೊನೆಯಲ್ಲಿ ಗೋವುಗಳಿಗೆ ನೀರಾಜನ ಮತ್ತು ದೀಪೋತ್ಸವ ಕಾರ್ಯಕ್ರಮಗಳಿರುತ್ತವೆ. ಸಮಸ್ತರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೋರಲಾಗಿದೆ. ಇಡೀ ದಿನ ಗವ್ಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಗವ್ಯ ಚಿಕಿತ್ಸೆಯ ವ್ಯವಸ್ಥೆ ಇರುತ್ತದೆ.