ಕನ್ನಡ, ಕನ್ನಡಿಗ, ಕರ್ನಾಟಕ!
Saturday, November 19th, 2005ಡಾ. ಯು.ಬಿ. ಪವನಜ
“ಜೈ! ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ!
ಜೈ! ಸುಂದರ ನದಿವನಗಳ ನಾಡೆ
“ಜೈ! ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ!
ಜೈ! ಸುಂದರ ನದಿವನಗಳ ನಾಡೆ
‘ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವನಕೆ’ ಎಂದು ಡಿವಿಜಿಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೇಳಿದ್ದಾರೆ. ಸಹಸ್ರಾರು ವರ್ಷಗಳಿಂದ ಭಾರತೀಯರು ತಮ್ಮ ‘ಜ್ಞಾನ’ಕ್ಕೆ ವಿಶ್ವವಿಖ್ಯಾತರಾಗಿದ್ದಾರೆ. ವಿಜ್ಞಾನದ ವಿಷಯ ಬಂದಾಗ ಇತ್ತೀಚಿನ ಎರಡು ಶತಮಾನಗಳಲ್ಲಿ ವಿದೇಶೀಯರು ನಮ್ಮನ್ನು ಹಿಂದೆಹಾಕಿ ಬಹುಮುಂದೆ ಹೋಗಿರುವುದು ಸತ್ಯ. ಇದಕ್ಕೆ ಮುಖ್ಯ ಕಾರಣ ನಾವು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ವಿಜ್ಞಾನವನ್ನು ವಿವರಿಸಲು ವಿಶೇಷ
-ಡಾ| ಯು.ಬಿ. ಪವನಜ ಕೆಲವು ಉದಾಹರಣೆಗಳನ್ನು ಗಮನಿಸಿ: ೧. ಮುಂಬಯಿಯಿಂದ ಬೆಂಗಳೂರಿಗೆ ಹೋಗುತ್ತಿರುವ ವಿಮಾನ. ಚಿಕ್ಕಪ್ರಾಯದ ದಂಪತಿಗಳು ಸುಮಾರು ೩ ವರ್ಷ ಪ್ರಾಯದ ಮಗುವಿನ ಜೊತೆ ಕೂತಿದ್ದಾರೆ. ವಿಮಾನ ಪ್ರಯಾಣದ ಸಮಯದಲ್ಲಿ ಗಂಡ ಓದುತ್ತಿದ್ದುದು ಇಂಡಿಯಾ ಟುಡೇ ಪತ್ರಿಕೆ. ದಂಪತಿಗಳು ತಮ್ಮ ನಡುವೆ ಮತ್ತು ಮಗುವಿನೊಡನೆ ಮಾತನಾಡಲು ಉಪಯೋಗಿಸುತ್ತಿದ್ದ ಭಾಷೆ ಇಂಗ್ಲಿಷ್. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಹೊರಬರುತ್ತಿದ್ದಂತೆ ದಂಪತಿಗಳು ತಮ್ಮೊಡನೆ ಹಾಗೂ ಮಗುವಿನೊಡನೆ ಕನ್ನಡ ಭಾಷೆಯಲ್ಲಿ ಮಾತನಾಡುತ್ತಾರೆ. ಹೊರಬಂದು ರಿಕ್ಷಾ ಅ
ಇತ್ತೀಚಿಗೆ ಕನ್ನಡ ಭಾಷೆ ಮಾತನಾಡುವ ಜನರ ನಾಡಾದ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ವಿಚಿತ್ರ ಸಂಗತಿ ನಡೆಯಿತು. ರಾಜ್ಯದ ಬಾಷೆಯಾದ ಕನ್ನಡದಲ್ಲಿ ನೋಂದಣಿ ಫಲಕ ಬರೆಸಿದ ರಿಕ್ಷಾ ಚಾಲಕರ ವಿರುದ್ಧ ಪೋಲೀಸರು ಕ್ರಮ ಕೈಗೊಂಡರು. ನಾಡಿನ ಜನರ ಭಾಷೆಯಲ್ಲಿ ನೋಂದಣಿ ಫಲಕ ಬರೆಸಿದ್ದು ಅವರ ತಪ್ಪು. ಭಾರತದ ಮೋಟಾರು ವಾಹನ ಕಾಯಿದೆ ಪ್ರಕಾರ ವಾಹನಗಳ ನೋಂದಣಿ ಫಲಕ ನಮ್ಮ ಭಾಷೆಯ ಬದಲು ಸಹಸ್ರಾರು ಮೈಲು ದೂರವಿರುವ ಬ್ರಿಟಿಷರ ಭಾಷೆಯಲ್ಲಿರಬೇಕು! ಈ ಕಾಯಿದೆ ಮಾಡಿದವರು ಕೇಂದ್ರ ಸರಕಾರದವರು. ವಾಹನಗಳ ನೋಂದಣಿ ಫಲಕ ಇಂಗ್ಲೀಷ್ ಭಾಷೆಯಲ್ಲಿರಬೇಕು ಎಂದು ಅಧಿಕಾರಿಗಳು, ಮುಖ್ಯವಾಗಿ ಪೋಲೀಸರು ಹೇಳುವುದಕ್ಕೆ ಅವರು ಕೊಡುವ ಕಾರಣ `ಯಾವುದಾದರೂ ವಾಹನ ಅಪಘಾತ ಮಾಡಿ ತಪ್ಪಿಸಿಕೊಂಡು ಹೋದರೆ ಅದರ ನೋಂದಣಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಲು ಇತರ ಭಾಷಿಕರಿಗೆ ಇದು ಸಹಾಯಕಾರಿಯಾಗುತ್ತದೆ’. ಮೇಲ್ನೋಟಕ್ಕೆ ಇದು ತರ್ಕಬದ್ಧವಾಗಿದೆ.
ವಿಶ್ವ ಕನ್ನಡವು ಈಗ ಹೊಚ್ಚ ಹೊಸ ರೂಪ ತಾಳಿ ನಿಮ್ಮ ಮುಂದೆ ಬರುತ್ತಿದೆ. ಈಗ ವಿಶ್ವ ಕನ್ನಡವು ಸಂಪೂರ್ಣವಾಗಿ ಯುನಿಕೋಡ್ ವಿಧಾನದಲ್ಲಿದೆ. ಹಲವು ವರ್ಷಗಳಿಂದ ಶೇಖರಗೊಂಡ ಮಾಹಿತಿಗಳನ್ನು ಯುನಿಕೋಡ್‌ಗೆ ಬದಲಿಸಿ ಹಾಕಬೇಕಾಗಿರುವುದುರಿಂದ ಹಳೆಯ ಲೇಖನಗಳನ್ನು ಪುನಾ ನೋಡಲು ಸ್ವಲ್ಪ ಕಾಯಬೇಕಾಗಿದೆ. ದಿನಕ್ಕೊಂದಿಷ್ಟರಂತೆ ಲೇಖನಗಳನ್ನು ಸೇರಿಸುತ್ತಾ ಹೋಗುತ್ತೇನೆ. ನನಗೆ ಸಹಾಯ ಮಾಡಲು ಉತ್ಸುಕರಾದ ಸ್ವಯಂಸೇವಕರು ಯಾರಾದರೂ ಇದ್ದಲ್ಲಿ ನನ್ನನ್ನು ಸಂಪರ್ಕಿಸಿ.