Press "Enter" to skip to content

Posts published in “ಲೇಖನ”

ವೈವಿಧ್ಯಮಯ ವಿಷಯಗಳ ಬಗ್ಗೆ ವೈವಿಧ್ಯಮಯ ಲೇಖನಗಳು

ಗೋಕಾಕ ಚಳುವಳಿ

ಗೋಕಾಕ ಆಯೋಗ ರಚನೆಯ ಹಿನ್ನಲೆ

ಗೋಕಾಕ ಆಯೋಗವು ರಚನೆಯಾಗುವ ಹಿಂದೆ ಕರ್ನಾಟಕದ ಪ್ರೌಢಶಾಲೆಗಳಲ್ಲಿ ಕಲಿಸುತ್ತಿದ್ದ ವಿವಿಧ ಭಾಷೆಗಳ ವಿಷಯದಲ್ಲಿ ಒಂದು ವಿವಾದವೆದ್ದಿತ್ತು. ವಿವಿಧ ಮಾಧ್ಯಮದ ಪ್ರೌಢಶಾಲೆಗಳಲ್ಲಿ ಕನ್ನಡ, ಇಂಗ್ಲಿಷು, ತಮಿಳು, ತೆಲುಗು, ಮರಾಠಿ ಮುಂತಾದ ಆಡುಮಾತುಗಳ ಜೊತೆಗೆ ಸಂಸ್ಕೃತವೂ ಪ್ರಥಮ ಭಾಷೆಯಾಗಿತ್ತು. ಪ್ರಾಥಮಿಕ ಶಾಲೆಗಳಲ್ಲಿ ಸಂಸ್ಕೃತ ಕಲಿಯುವ ವ್ಯವಸ್ಥೆ ಇರದಿದ್ದರೂ, ಪ್ರೌಢಶಾಲೆಗಳಲ್ಲಿ ಆ ಭಾಷೆಯನ್ನು ಮೊದಲ ಭಾಷೆಯಾಗಿ ಆರಿಸಿಕೊಂಡ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸದಿಂದ ಶಿಕ್ಷಣ ಪ್ರಾರಂಭವಾಗುತ್ತಿತ್ತು. ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಯು ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಆರಿಸಿಕೊಂಡಿದ್ದರೆ ತುಂಬ ಸುಲಭವಾದ ಪಾಠಗಳನ್ನು ಕಲಿತು, ಸಾಕಷ್ಟು ಹೆಚ್ಚು ಕಲಿತ ಇತರ ಭಾಷೆಗಳ ವಿದ್ಯಾರ್ಥಿಗಳಿಗಿಂತ ತುಂಬ ಹೆಚ್ಚು ಅಂಕಗಳನ್ನು ಪಡೆಯುತ್ತಿದ್ದ. ಅಲ್ಲದೆ, ವಿದ್ಯಾರ್ಥಿಗಳನ್ನು ಆಕರ್ಷಿಸುವ ದೃಷ್ಟಿಯಿಂದ ಸಂಸ್ಕೃತ ಅಧ್ಯಾಪಕರು ತುಂಬ ಧಾರಾಳವಾಗಿ ಅಂಕಗಳನ್ನು ಕೊಡುವ ರೀತಿಯಿತ್ತು. ಈಗಲೂ ಇದೆ.

ಕನ್ನಡ ಚಳುವಳಿ : ಇತಿಹಾಸ ಮತ್ತು ವ್ಯಾಪ್ತಿ

(ಸಂಗ್ರಹ)

ಎರಡು ಸಾವಿರ ವರ್ಷಗಳಿಂದ ಕೋಟ್ಯಂತರ ಜನರಿಗೆ ಬದುಕಿನ ಎಲ್ಲಾ ರಂಗಗಳಲ್ಲಿ ಅಭಿವ್ಯಕ್ತಿ ಮಾಧ್ಯಮವಾಗಿರುವ ನಮ್ಮ ಕನ್ನಡ ಭಾಷೆಯ ಈಗಿರುವ ಕರ್ನಾಟಕ ವ್ಯಾಪ್ತಿಗೂ ಮೀರಿ ಹರಡಿದ್ದ ಕಾಲವೊಂದಿತ್ತು. ನಮ್ಮ ಜನ ಕನ್ನಡವನ್ನು ಹೆಮ್ಮೆಯಿಂದ ಎದೆಗೆ ಅಪ್ಪಿಕೊಂಡಿದ್ದರು. ಈಗ ಅದರ ತೀವ್ರತೆ ಇಳಿದಿದೆ. ನಮ್ಮ ನುಡಿಯ ಬಗ್ಗೆ ಅಭಿಮಾನವನ್ನು ಬಡಿದೆಬ್ಬಿಸುವ ಸಾಮೂಹಿಕ ಪ್ರಯತ್ನವನ್ನೇ ನಾವು `ಕನ್ನಡ ಚಳುವಳಿ' ಎಂದು ಕರೆಯುವುದು.

ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಬರೆವಣಿಗೆ

ಡಾ. ಯು. ಬಿ. ಪವನಜ

ಕುಮಾರವ್ಯಾಸ ತನ್ನ ಭಾರತ ಕಥಾಮಂಜರಿಯಲ್ಲಿ ತನ್ನ ಬಗ್ಗೆ ಹೇಳಿಕೊಳ್ಳುತ್ತಾನೆ "ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ" ಎಂದು. ಇತ್ತೀಚಿಗೆ ಗಣಕಗಳು (ಕಂಪ್ಯೂಟರ್) ಜನಜೀವನದಲ್ಲಿ ಹಾಸುಹೊಕ್ಕಾಗಿ ವ್ಯಾಪಿಸುತ್ತಿವೆ. ಮುಂದಿನ ಪೀಳಿಗೆಯ ಜನರು ಪೆನ್ನು ಪೆನ್ಸಿಲ್ ಉಪಯೋಗಿಸದೆ ಗಣಕಗಳ ಕೀಲಿಮಣೆಯನ್ನು (ಕೀಬೋರ್ಡ್) ಕುಟ್ಟಿಯೇ ಕಲಿಯುತ್ತಾರೆ. ಅವರನ್ನು ಆಧುನಿಕ ಕುಮಾರವ್ಯಾಸರು ಎನ್ನಲು ಅಡ್ಡಿಯಿಲ್ಲ. ಸ್ವಲ್ಪ ಮುಂದುವರೆದು "ಕೀಲಿಮಣೆಯ ಕುಟ್ಟಿಯೇ ಕಲಿತೆನೆಂಬೊಂದಗ್ಗಳಿಕೆ" ಎಂದು ಹೇಳಿದರೂ ಹೇಳಿಯಾರು!

ವಾಟ್ ಎಂದರೆ ಏನು?

ಸ್ಟೀರಿಯೋ ಸಿಸ್ಟಮ್ ಕೊಳ್ಳಲು ಅಂಗಡಿಗೆ ಹೋಗಿದ್ದೀರಾ? ಅಂಗಡಿಯಾತ ಕೇಳುವ ಪ್ರಶ್ನೆ "ನಿಮಗೆ ಎಷ್ಟು ವಾಟ್‌ನ ಸಿಸ್ಟಮ್ ಬೇಕು?". ಅಥವಾ ಆತನೇ ಒಂದೊಂದಾಗಿ ತನ್ನಲ್ಲಿರುವ ಸ್ಟೀರಿಯೋಗಳನ್ನು ತೋರಿಸುತ್ತಾ ಹೋಗುತ್ತಾನೆ. ಪ್ರತಿ ಸ್ಟೀರಿಯೋವನ್ನು ತೋರಿಸುವಾಗಲೂ ಮರೆಯದೆ ಹೇಳುವ ಮಾತು ಅದು ಎಷ್ಟು ವಾಟ್‌ನದು ಎಂದು. "ಸಾರ್, ಇದು 1000 ವಾಟ್, ಇದು 2000 ವಾಟ್,..." ಹೀಗೆ ಗುಣಗಾನ ಸಾಗುತ್ತಿರುತ್ತದೆ. ಹೆಚ್ಚಿನ ಗ್ರಾಹಕರೂ ಸ್ಟೀರಿಯೋ ಕೊಳ್ಳುವಾಗ ಮುಖ್ಯವಾಗಿ ಗಮನಿಸುವುದು ಅದು ಎಷ್ಟು ವಾಟ್‌ನದು ಎಂದು. ಈ ವಾಟ್ ಎಂದರೆ ಏನು?

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಏಳು ಬೀಳುಗಳು

ಕರ್ನಾಟಕ ಮತ್ತು ಬೆಂಗಳೂರಿಗೆ ಅನ್ವಯಿಸಿದಂತೆ ಒಂದು ಅವಲೋಕನ

ಜಾಗತಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಅದರಲ್ಲೂ ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಹೆಸರು ಮಾಡಿದೆ. ಮಾಹಿತಿ ತಂತ್ರಜ್ಞಾನ ಒಂದು ಉದ್ದಿಮೆಯಾಗಿ ಕಳೆದ ಹತ್ತು ವರ್ಷಗಳಲ್ಲಿ ಯಾರೂ ಎಂದೂ ಕಂಡರಿಯದ ಕೇಳರಿಯದ ಮಟ್ಟಕ್ಕೆ ಅತಿ ವೇಗದಲ್ಲಿ ಏರಿ ಅಷ್ಟೇ ವೇಗದಲ್ಲಿ ಕೆಳಗೆ ಕುಸಿದು ಇದೀಗ ಪುನಃ ಚೇತರಿಸಿಕೊಳ್ಳುತ್ತಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಈ ಎಲ್ಲ ಬೆಳವಣಿಗೆ ಮತ್ತು ಕುಸಿತಗಳಲ್ಲಿ ಬೆಂಗಳೂರು ವಿಶೇಷತಃ ಭಾಗಿಯಾಗಿದೆ.

ಕರ್ನಾಟಕ ಜನಪದ ಕಲೆಗಳು – ಭಾಗ ೮

ಸಂ: ಗೊ. ರು. ಚನ್ನಬಸಪ್ಪ

ಭೂತಾರಾಧನೆ:

ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವಿಶಿಷ್ಟವಾಗಿ ಕಂಡುಬರುವ ಸಂಪ್ರದಾಯ `ಭೂತಾರಾಧನೆ'. ದುಷ್ಟಶಕ್ತಿಗಳಾದ ದೆವ್ವ, ಪೀಡೆ, ಪಿಶಾಚಿಗಳ ತೊಂದರೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅವುಗಳನ್ನು ಒಲಿಸಿಕೊಳ್ಳಲು ಭಯಭಕ್ತಿಯಿಂದ ಪೂಜಿಸುವುದೇ ಭೂತಾರಾಧನೆ.

ಕರ್ನಾಟಕ ಜನಪದ ಕಲೆಗಳು – ಭಾಗ ೭

ಸಂ: ಗೊ. ರು. ಚನ್ನಬಸಪ್ಪ

ಕರಗ:


ಕರಗದ ಕಲೆಯ ಹುಟ್ಟನ್ನು ಕುರಿತು ನಿರ್ದಿಷ್ಟವಾದ ಮಾಹಿತಿ ದೊರೆಯುವುದಿಲ್ಲವಾದರೂ ಕರಗದ ಕಲಾವಿದರು ಕೊಡುವ ಆಧಾರದಿಂದ ಇದರ ಹಿನ್ನಲೆಯ ಬಗ್ಗೆ ಒಂದು ಸ್ಥೂಲ ಕಲ್ಪನೆ ಬರುತ್ತದೆ. ಒಂದು ನಂಬಿಕೆಯ ಪ್ರಕಾರ, ಕುರುಕ್ಷೇತ್ರ ಯುದ್ಧಾನಂತರ ಪಾಂಡವರ ಸ್ವರ್ಗಾರೋಹಣ ಸಂದರ್ಭದಲ್ಲಿ ಪತಿಗಳನ್ನು ಹಿಂಬಾಲಿಸುತ್ತಿದ್ದ ದ್ರೌಪದಿ ಮೂರ್ಛೆ ಹೋದಳು. ಎಚ್ಚರಗೊಂಡು ನೋಡಿದಾಗ ಪತಿಗಳಿಲ್ಲದುದನ್ನು ಕಂಡು ಭಯದಿಂದ ರೋದಿಸುತ್ತಿದ್ದಳು. ಅದೇ ಸಂದರ್ಭಕ್ಕೆ ತಿಮಿರಾಸುರನೆಂಬ ರಕ್ಕಸ ಆಕೆಯನ್ನು ಪೀಡಿಸಲು ಅವನ ನಿಗ್ರಹದ ಸಲುವಾಗಿ ಆಕೆಯಲ್ಲಿ ವಿಶೇಷ ಶಕ್ತಿ ಮೈದಾಳಿತು. ವಿರಾಟರೂಪವನ್ನು ತಾಳಿದ ಆಕೆಯ ತಲೆಯ ಮೇಲೆ ಕುಂಭವನ್ನು ಧರಿಸಿದ್ದಳು. ಅಂದಿನ ಕುಂಭವೇ ಇಂದು ಆರಾಧಿಸಲ್ಪಡುತ್ತಿರುವ `ಕರಗ'! ಎರಡನೆಯ ನಂಬಿಕೆಯಂತೆ, ಮತ್ಸ್ಯಯಂತ್ರವನ್ನು ಭೇದಿಸಿದ ಅರ್ಜುನನನ್ನು ವರಿಸಿದ ದ್ರೌಪದಿ, ನಂತರ ಕುಂತಿಯ ಅಭಿಲಾಷೆಯಂತೆ ಉಳಿದ ನಾಲ್ವರು ಪಾಂಡವರನ್ನು ವಿವಾಹವಾದಳು. ಆ ಸಂದರ್ಭದಲ್ಲಿ ಆನಂದಾತಿಶಯದಿಂದ ಕೈಯಲ್ಲಿದ್ದ ಕಳಸವನ್ನು ತಲೆಯ ಮೇಲೆ ಧರಿಸಿದಳು. ಆ ಕಳಸವೇ ಇಂದಿನ ಆರಾಧನೆಯ `ಕರಗ'!

ಕರ್ನಾಟಕ ಜನಪದ ಕಲೆಗಳು – ಭಾಗ ೬

ಸಂ: ಗೊ. ರು. ಚನ್ನಬಸಪ್ಪ

ಯಕ್ಷಗಾನ:

ಯಕ್ಷಗಾನ ಗೀತ-ವಾದ್ಯ-ನೃತ್ಯಗಳ ಸಮ್ಮಿಶ್ರ ಕಲೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಂiಲ್ಲಿ ಮನೆಮಾತಾಗಿರುವ ಈ ಬಯಲಾಟದ ಕಲೆ ತನ್ನದೇ ಆದ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದಿದೆ. ಬಯಲುನಾಡಿನಲ್ಲಿ ಇದನ್ನು `ಮೂಡಲ ಪಾಯ' ಎಂದು ಕರೆದರೆ ಕರಾವಳಿ ಪ್ರದೇಶದಲ್ಲಿ `ಪಡುವಲ ಪಾಯ' ಎನ್ನುತ್ತಾರೆ. ಪಡುವಲ ಪಾಯದಲ್ಲಿ ತೆಂಕ ತಿಟ್ಟು ಹಾಗೂ ಬಡಗ ತಿಟ್ಟು ಎಂಬ ಎರಡು ಪ್ರಭೇದಗಳಿದ್ದು, ಇವುಗಳು ಮೂಲಸ್ವರೂಪದಲ್ಲಿ ಒಂದೇ ಆಗಿದ್ದರೂ ಬೆಳೆದು ಬಂದ ಪ್ರಾದೇಶಿಕ ಪರಿಸರ ಭಿನ್ನತೆಯಿಂದ ಈ ಹೆಸರುಗಳು ಬಳಕೆಯಲ್ಲಿ ಬಂದಿವೆ. ಇದು ಹವ್ಯಾಸಿ ಕಲೆಯಾಗಿರುವಂತೆ ವೃತ್ತಿಕಲೆಯೂ ಆಗಿದೆ.

ಕರ್ನಾಟಕ ಜನಪದ ಕಲೆಗಳು – ಭಾಗ ೫

ಸಂ: ಗೊ. ರು. ಚನ್ನಬಸಪ್ಪ

ಸೂತ್ರದ ಗೊಂಬೆಯಾಟ:

ಜನಪದ ಕಲಾಕ್ಷೇತ್ರದ ಅದರಲ್ಲೂ ಜನಪದ ರಂಗಭೂಮಿಯ ಒಂದು ಚಮತ್ಕಾರಯುತ ಆಕರ್ಷಕ ಕಲೆ ಸೂತ್ರದ ಗೊಂಬೆ. ಹೆಸರೇ ಹೇಳುವಂತೆ ಇಲ್ಲಿ ಸೂತ್ರ, ಗೊಂಬೆ ಮತ್ತು ಸೂತ್ರಧಾರ ಪ್ರಮುಖ. ಜೀವಂತ ವ್ಯಕ್ತಿಗಳಿಗೆ ಬದಲಾಗಿ ಗೊಂಬೆಗಳನ್ನು ಸೂತ್ರದ ಹಿಡಿತದಲ್ಲಿ ತನ್ನ ಕೈಚಳಕದಿಂದ ಆಡಿಸಿ ತೋರಿಸುವ ಸೂತ್ರಧಾರನ ಕಲಾಕುಶಲತೆ ಮೆಚ್ಚತಕ್ಕದ್ದು. ವಿಶೇಷವೆಂದರೆ ಸೂತ್ರಧಾರ ತೆರೆಯ ಮರೆಯಲ್ಲೇ ಇದ್ದು ಕೇವಲ ಗೊಂಬೆಗಳಿಂದ ಅಭಿನಯ ಪ್ರದರ್ಶನ ಮಾಡಿಸುವುದು. ದೂರದಿಂದ ನೋಡುವ ಪ್ರೇಕ್ಷಕರಿಗೆ ರಂಗ ಸಜ್ಜಿಕೆಯ ಮೇಲೆ ಪಾತ್ರದ ಸಂದರ್ಭಕ್ಕನುಗುಣವಾಗಿ ಗೊಂಬೆಗಳು ಬಂದು ಪ್ರದರ್ಶನ ನೀಡಿ ಹೋಗುವುದು ಮಾತ್ರ ಕಾಣುತ್ತದೆ. ಸೂತ್ರದ ಹಿಡಿತದಲ್ಲಿ ಆಡುತ್ತಿರುವುದು ಕಾಣಿಸುವುದಿಲ್ಲ. ಆಧುನಿಕ ರೀತಿಯ ಚಲನಚಿತ್ರಗಳ ಪ್ರವೇಶವಾಗುವ ಮೊದಲು ಕಾಲಿರಿಸಿದ ಮೂಕಿ ಚಿತ್ರಗಳನ್ನು ನೆನಪಿಗೆ ತರುವ ಈ ಕಲೆ ಆ ಚಿತ್ರಗಳಿಗಿಂತ ಅನೇಕ ಪಾಲು ಆಕರ್ಷಕ ರೀತಿಯಲ್ಲಿ ಕಂಡು ಬರುತ್ತದೆ. ಈ ಕಲೆಯನ್ನು `ಪುತ್ಥಳಿ ಗೊಂಬೆಯಾಟ'ವೆಂದೂ ಕರೆಯುತ್ತಾರೆ.