Press "Enter" to skip to content

Posts published in “ಲೇಖನ”

ವೈವಿಧ್ಯಮಯ ವಿಷಯಗಳ ಬಗ್ಗೆ ವೈವಿಧ್ಯಮಯ ಲೇಖನಗಳು

ಕರ್ನಾಟಕ ಜನಪದ ಕಲೆಗಳು-ಭಾಗ ೧

Untitled Document ಕರ್ನಾಟಕ ಜನಪದ ಕಲೆಗಳು ಭಾಗ ೧ ಸಂ: ಗೊ. ರು. ಚನ್ನಬಸಪ್ಪ [ಪೀಠಿಕೆ:- ಗ್ರಾಮೀಣ ಬದುಕಿನ ಅನಕ್ಷರಸ್ತರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ.…

ಬ್ಲಾಗಿಂಗ್ – ಪರ್ಯಾಯ ಪತ್ರಿಕೋದ್ಯಮ

- ಡಾ. ಯು. ಬಿ. ಪವನಜ

ಇತ್ತೀಚೆಗಿನ ದಿನಗಳಲ್ಲಿ ತುಂಬ ಕೇಳಿಬರುತ್ತಿರುವ ಪದ “ಬ್ಲಾಗ್”. ಅದರ ಹಲವು ಪ್ರತ್ಯಯಗಳೇ ಬ್ಲಾಗಿಂಗ್, ಬ್ಲಾಗರ್, ಇತ್ಯಾದಿ. ಈ ಬ್ಲಾಗ್ ಎಂದರೆ ಏನು? ಬ್ಲಾಗ್ ಎಂದರೆ ಒಂದು ರೀತಿಯಲ್ಲಿ ಸಾರ್ವಜನಿಕ ಸ್ವಗತ ಎನ್ನಬಹುದು. ಎಲ್ಲರಿಗೂ ಓದಲು ಅನುಕೂಲವಾಗುವಂತೆ ಅಂತರಜಾಲದಲ್ಲಿ (ಇಂಟರ್‌ನೆಟ್‌ನಲ್ಲಿ) ಇಟ್ಟಂತಹ ತೆರೆದ ದಿನಚರಿ ಅಥವಾ ಡೈರಿ ಎಂದೂ ಕರೆಯಬಹುದು. ಬ್ಲಾಗ್‌ನ ಕ್ರಿಯಾರೂಪವೇ ಬ್ಲಾಗಿಂಗ್ ಅಂದರೆ ಬ್ಲಾಗ್ ನಡೆಸುವ ಕ್ರಿಯೆ. ಬ್ಲಾಗರ್ ಎಂದರೆ ಬ್ಲಾಗ್ ಬರೆಯುವ ವ್ಯಕ್ತಿ.

ಜಂಗಮವಾಣಿಯ ವಿಹಂಗಮ ನೋಟ

- ಡಾ. ಯು. ಬಿ. ಪವನಜ

ಮೋನಪ್ಪ ಬಂಗೇರ ಕರಾವಳಿಯಲ್ಲಿರುವಾತ. ಮೀನು ಹಿಡಿದು ಮಾರಿ ಜೀವನ ನಡೆಸುವವ. ಹಲವು ವರ್ಷಗಳ ಹಿಂದಿನ ಕತೆ. ಮೋನಪ್ಪನಿಗೆ ಕೆಲವೊಮ್ಮೆ ತುಂಬ ಮೀನುಗಳು ಸಿಗುವವು. ತುಂಬ ಸಂತಸದಿಂದ ಆತ ಮೀನುಗಳನ್ನು ಮಾರುಕಟ್ಟೆಗೆ ಒಯ್ದರೆ ಆ ದಿನ ಎಲ್ಲ ಬೆಸ್ತರೂ ತುಂಬ ಮೀನು ತಂದಿರುವುದರಿಂದ ಮೀನುಗಳಿಗೆ ಬೇಡಿಕೆ ಇಲ್ಲ. ಹಿಡಿದ ಮೀನುಗಳನ್ನು ದಾಸ್ತಾನು ಮಾಡಲು ಆತನಲ್ಲಿ ಶ್ಶೆತ್ಯಾಗಾರವಿಲ್ಲ. ಕೊನೆಗೆ ಸಿಕ್ಕಿದ ಬೆಲೆಗೆ ಮೀನುಗಳನ್ನು ಮಾರಬೇಕಾದ ಪರಿಸ್ಥಿತಿ. ಆತನಿರುವ ಊರಿನಿಂದ ಸುಮಾರು ಹತ್ತು ಕಿಲೋಮೀಟರು ದೂರದ ಇನ್ನೊಂದು ಊರಿನಲ್ಲಿ ಮೀನಿಗೆ ಬೇಡಿಕೆ ಇತ್ತು. ಆದರೆ ಅದು ಮೋನಪ್ಪನಿಗೆ ತಿಳಿದಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಯಿಸಿದೆ. ಮೋನಪ್ಪನ ಕೈಗೆ ಮೊಬೈಲ್ ಫೋನು ಬಂದಿದೆ. ಸಮುದ್ರದಲ್ಲಿ ಇರುವಾಗಲೆ ಆತ ಹತ್ತಿರದ ಎರಡು ಮೂರು ಊರುಗಳಿಗೆ ಫೋನಾಯಿಸುತ್ತಾನೆ. ಯಾವ ಮಾರುಕಟ್ಟೆಯಲ್ಲಿ ಮೀನಿಗೆ ಬೇಡಿಕೆ ಇದೆ ಎಂದು ತಿಳಿದುಕೊಳ್ಳುತ್ತಾನೆ. ಎಷ್ಟು ಮೀನಿಗೆ ಬೇಡಿಕೆ ಇದೆ ಎಂಬುದನ್ನೂ ತಿಳಿದುಕೊಳ್ಳುತ್ತಾನೆ. ಮೊಬೈಲ್ ಫೋನಿನಿಂದ ಆತನಿಗೆ ತುಂಬ ಪ್ರಯೋಜನವಾಗಿದೆ. ಎಷ್ಟು ಬೇಕೋ ಅಷ್ಟೇ ಮೀನು ಹಿಡಿದು ಎಲ್ಲಿಗೆ ಬೇಕೋ ಅಲ್ಲಿಗೆ ತೆಗೆದುಕೊಂಡು ಹೋಗಿ ಮಾರುತ್ತಾನೆ. ಹೆಚ್ಚಿಗೆಯಾದ ಮೀನುಗಳನ್ನು ಎಸೆಯುವ ಅಥವಾ ಅತಿ ಕಡಿಮೆ ಬೆಲೆಗೆ ಮಾರುವ ಅಗತ್ಯವಿಲ್ಲ. ಸಮಯವೂ ಉಳಿತಾಯವಾಗುತ್ತದೆ.

ಕಂಪ್ಯೂಟರ್ ಮಾಯಾಲೋಕ; ಕಣ್ಮುಚ್ಚಿರುವ ಲೇಖಕ

- ರಘುನಾಥ ಚ. ಹ.

‘ನನಗೆ ಕಂಪ್ಯೂಟರ್ ಕಲಿಸಲು ನನ್ನ ಮೊಮ್ಮಗಳು ತುಂಬಾ ಪ್ರಯತ್ನಿಸಿದಳು. ಆದರೆ ಅವಳ ಪ್ರಯತ್ನ ಯಶಸ್ವಿಯಾಗಲಿಲ್ಲ'. ಪದಗಳ ವ್ಯುತ್ಪತ್ತಿಯ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ಪ್ರೊ. ಜಿ.ವೆಂಕಟಸುಬ್ಬಯ್ಯನವರ ಅಳಲಿದು. ಹಾಗೆಂದು ವೆಂಕಟಸುಬ್ಬಯ್ಯನವರಿಗೆ ಕಂಪ್ಯೂಟರ್ ಕುರಿತು ಅಥವಾ ಅಂತರ್ಜಾಲವೆಂಬ ವಿಸ್ಮಯದ ಕುರಿತು ಅಲರ್ಜಿಯಿದೆ ಎಂದರ್ಥವಲ್ಲ. ಅವರು ಸಂಪಾದಿಸಿದ ನಿಘಂಟೊಂದು ಅಂತರ್ಜಾಲದಲ್ಲಿದೆ. ಬಹುಶಃ, ಮುದ್ರಣ ರೂಪದ ನಿಘಂಟಿನ ಬಳಕೆಗಿಂತಲೂ ಇಂಟರ್ನೆಟ್‌ನಲ್ಲಿನ ನಿಘಂಟುವಿನ ಬಳಕೆಯೇ ಹೆಚ್ಚಿನ ಪ್ರಮಾಣದಲ್ಲಿದೆ. ಈ ಕುರಿತು ವೆಂಕಟಸುಬ್ಬಯ್ಯನವರಿಗೆ ಖುಷಿಯಿದೆ. ಆದರೆ ಆ ಖುಷಿ ಕಂಪ್ಯೂಟರ್ ಕಲಿಕೆಯಾಗಿ ಮಾರ್ಪಡುತ್ತಿಲ್ಲ.

ಇ-ಕನ್ನಡವೇ ಸತ್ಯ, ಇ-ಕನ್ನಡವೇ ನಿತ್ಯ

ಆಡಳಿತದ ಕ್ಷಮತೆಯನ್ನು ಹೆಚ್ಚಿಸುವುದಕ್ಕೆ, ಅಧಿಕಾರಿಗಳಲ್ಲಿ ಉತ್ತರದಾಯಿತ್ವವನ್ನು ಖಾತರಿ ಪಡಿಸುವುದಕ್ಕೆ, ಕೆಂಪು ಪಟ್ಟಿಯನ್ನು ತಪ್ಪಿಸುವುದಕ್ಕೆ...ಹೀಗೆ ಆಡಳಿತದಲ್ಲಿ ಕಾಣಿಸಿಕೊಳ್ಳಬಹುದಾದ ಎಲ್ಲಾ ಸಮಸ್ಯೆಗಳಿಗೂ ಸದ್ಯಕ್ಕೆ ಕಂಡುಕೊಂಡಿರುವ ಪರಿಹಾರ ಇ-ಆಡಳಿತ. ಅಥವಾ ವಿದ್ಯುನ್ಮಾನ ಆಡಳಿತ. ವಿದ್ಯುನ್ಮಾನ ಆಡಳಿತಕ್ಕೆ ಒತ್ತುಕೊಟ್ಟು ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುತ್ತಿರುವ ಭಾರತದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ. ರೈತನ ಭೂಮಿ ದಾಖಲೆಗಳನ್ನೆಲ್ಲಾ ಕಂಪ್ಯೂಟರೀಕರಿಸಲಾಗಿದೆ. ನಕ್ಷೆಗಳನ್ನು ಕಂಪ್ಯೂಟರೀಕರಿಸುವ ಕ್ರಿಯೆ ನಡೆಯುತ್ತಿದೆ. ಬ್ಯಾಂಕುಗಳಂತೂ ಹೆಚ್ಚು ಕಡಿಮೆ ಸಂಪೂರ್ಣವಾಗಿ ಕಂಪ್ಯೂಟರೀಕರಣಗೊಂಡಿವೆ. ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಅದರ ಸಹೋದರ ಸಂಸ್ಥೆಗಳೆಲ್ಲವೂ ಕಂಪ್ಯೂಟರೀಕರಣಗೊಂಡಿವೆ. ನಿರ್ವಾಹಕರು ಅಂಗೈಯಲ್ಲೇ ಇರುವ ಯಂತ್ರವನ್ನು ಬಳಸಿ ಟಿಕೇಟು ಕೊಡುತ್ತಾರೆ. ಮನೆ ಮನೆಗೆ ಬಂದು ವಿದ್ಯುತ್‌ ಬಳಕೆಯ ಮೀಟರ್‌ ಓದುವವರೂ ಈಗ ತಮ್ಮಲ್ಲಿರುವ ಅಂಗೈಯಗಲದ ಯಂತ್ರದಿಂದಲೇ ಬಿಲ್‌ ಮುದ್ರಿಸಿ ಕೊಡುತ್ತಾರೆ. ಹಾದಿ-ಬೀದಿಗೆ ಒಂದರಂತೆ ವಿವಿಧ ಬ್ಯಾಂಕ್‌ಗಳ ಎಟಿಎಂಗಳಿವೆ. ಮಧ್ಯಮ ವರ್ಗದ ಮನೆಯ ಪ್ರತೀ ಸದಸ್ಯರ ಬಳಿಯೂ ಒಂದು ಮೊಬೈಲ್‌ ಇದೆ. ಒಂದು ಕಾಲದಲ್ಲಿ ಟಿ.ವಿ. ಖರೀದಿಸಿದಂತೆ ಈಗ ಜನರು ಕಂಪ್ಯೂಟರ್‌ ಖರೀದಿಸುತ್ತಿ್ದಾರೆ. ಇದರ ಪರಿಣಾಮವಾಗಿ ಸಂವಹನ, ಸಂಪರ್ಕ, ಆಡಳಿತದ ಕ್ಷಮತೆ ಎಲ್ಲವೂ ಹೆಚ್ಚಿವೆ. ಆದರೆ ಕಡಿಮೆಯಾಗಿರುವುದು ಕನ್ನಡ ಮಾತ್ರ. ಹಿಂದಿನ ಪೂರ್ವ ಮುದ್ರಿತ ಬಸ್‌ ಟಿಕೇಟುಗಳಲ್ಲಿ ಕನ್ನಡ ಕಾಣಿಸುತ್ತಿತ್ತು. ಈಗಿನ ತಂತ್ರಜ್ಞಾನ ಸ್ಥಳದಲ್ಲೇ ಮುದ್ರಿಸುವ ಟಿಕೇಟಿನಲ್ಲಿ ಕನ್ನಡ ಸುಳಿವೇ ಇಲ್ಲ. ವಿದ್ಯುತ್‌ ಬಿಲ್‌ನಲ್ಲೂ ಅಷ್ಟೇ. ಬರೇ ರೋಮನ್‌ ಅಕ್ಷರಗಳು, ಇಂಗ್ಲಿಷ್‌ ಭಾಷೆ. ಹೆಚ್ಚಿನ ಎಟಿಎಂಗಳಲ್ಲಿ ಇಂಗ್ಲಿಷ್‌ಗಷ್ಟೇ ಮಣೆ. ಎಸ್‌ಎಂಎಸ್‌ ಮೂಲಕ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಯಾರಿಗಾದರೂ ತಿಳಿಸಬೇಕೆಂದರೆ ಅದನ್ನೂ ರೋಮನ್‌ ಅಕ್ಷರಗಳಲ್ಲಿ ಟೈಪಿಸಿದರಷ್ಟೇ ಎಲ್ಲರಿಗೂ ಓದಲು ಸಾಧ್ಯ ಎಂಬ ಸ್ಥಿತಿ ನಮ್ಮದು.

ಸ್ಫೂರ್ತಿವನ: ಹೊಸ ಬಗೆಯ ಸಾಫ್ಟ್‌ವೇರ್ ಪಾರ್ಕ್?

- ನಾಗೇಶ ಹೆಗಡೆ

ಬೆಂಗಳೂರಿನಲ್ಲಿ ಒಂದು ‘ನೆನಪಿನ ವನ’ ಸೃಷ್ಟಿಯಾಗುತ್ತಿದೆ. ವಿಸ್ತೀರ್ಣದಲ್ಲಿ ಲಾಲ್‌ಬಾಗನ್ನೂ ಮೀರಿಸುವ ಇದು ಜನರೇ ನಿರ್ಮಿಸುವ ಉದ್ಯಾನವಾಗಲಿದೆ. ಬೆಂಗಳೂರಿನ ಪರಿಸರ ಹದಗೆಡಲು ಸಾಫ್ಟ್‌ವೇರ್ ಕಂಪನಿಗಳೇ ಕಾರಣ ಎಂಬ ಆಪಾದನೆಯನ್ನು ತುಸು ಮಟ್ಟಿಗಾದರೂ ತೊಡದು ಹಾಕುವ ನಿಟ್ಟಿನಲ್ಲಿ ಖ್ಯಾತ ಸಾಫ್ಟ್‌ವೇರ್ ಕಂಪನಿಯೊಂದರ ಉದ್ಯೋಗಿಗಳು ಸ್ವಯಂಸ್ಫೂರ್ತಿಯಿಂದ ಇಲ್ಲಿ ಗಿಡ ನೆಡಲು ಬಂದಿದ್ದಾರೆ. ಈ ಯತ್ನದ ಹಿಂದಿರುವ ಈಶ್ವರ್ ಪ್ರಸಾದ್ ಎಂಬ ಒಬ್ಬ ವ್ಯಕ್ತಿ, ಒಂದು ಶಕ್ತಿಯ ಪರಿಚಯ ಇಲ್ಲಿದೆ.

ವಿಂಡೋಸ್ ವಿಸ್ಟದ ಕಿರು ಪರಿಚಯ

-ಡಾ. ಯು. ಬಿ. ಪವನಜ

ವಿಂಡೋಸ್ ಎಕ್ಸ್‌ಪಿ ಬಿಡುಗಡೆಯಾಗಿ ಸುಮಾರು ಆರು ವರ್ಷಗಳ ನಂತರ ಮೈಕ್ರೋಸಾಫ್ಟ್‌ ಕಂಪೆನಿ ಹೊಸ ಕಾರ್ಯಾಚರಣೆಯ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್) ವಿಂಡೋಸ್ ವಿಸ್ಟ ಹೊರತಂದಿದೆ. ಪ್ರಾರಂಭದಲ್ಲಿ ಲಾಂಗ್‌ಹಾರ್ನ್ ಎಂಬ ಸಂಕೇತನಾಮದಿಂದ ಕರೆಯಲ್ಪಡುತ್ತಿದ್ದ ಇದು ಈಗಷ್ಟೆ ಗಣಕ (ಕಂಪ್ಯೂಟರ್) ತಯಾರಕರಿಗೆ ಲಭ್ಯವಿದೆ. ಜನವರಿ ತಿಂಗಳ ಕೊನೆಯಲ್ಲಿ ಮಾರುಕಟ್ಟೆಗೆ ಇದರ ಅಧಿಕೃತ ಬಿಡುಗಡೆ ಆಗಲಿದೆ.

ಸುವರ್ಣ ಗಣಕನ್ನಡ

- ಡಾ| ಯು. ಬಿ. ಪವನಜ

ಗಣಕಗಳಲ್ಲಿ ಕನ್ನಡದ ಬಳಕೆ ಸುಮಾರು ಮೂರು ದಶಕಗಳ ಹಿಂದೆ ಆರಂಭವಾಯಿತು. ಪದಸಂಸ್ಕರಣವು (word-processing) ಇದರಲ್ಲಿಯ ಮೊದಲನೆಯದು. ಪತ್ರ, ಲೇಖನ, ದಾಖಲೆಗಳನ್ನು ಬರೆಯಲು, ತಿದ್ದಲು ಇವುಗಳ ಬಳಕೆ ಆಗುತ್ತಿದೆ. ಪದಸಂಸ್ಕರಣದ ಮುಂದುವರೆದ ಸೌಕರ್ಯವೇ ಡಿ.ಟಿ.ಪಿ. (desktop publishing). ಅಂದರೆ ಪಠ್ಯದ ಜೊತೆ ಚಿತ್ರಗಳನ್ನು ಸೇರಿಸಿ ಪುಟವಿನ್ಯಾಸ ಮಾಡುವುದು. ಈಗ ಎಲ್ಲ ಪುಸ್ತಕಗಳು ಮತ್ತು ಪತ್ರಿಕೆಗಳು ಇದೇ ವಿಧಾನದಿಂದ ತಯಾರಾಗುತ್ತಿವೆ.

ತೆಲುಗು ತಲೆಗಳ ನಡುವೆ

- ನಾರಾಯಣ ಶಾಸ್ತ್ರಿ

(೧) ರೈಲು ಪಯಣ...ಗೊರಕೆಯೋ ಗೊರಕೆ...!

ನಾನು ಬೆಂಗಳೂರಿನ ಜಯನಗರದ ಸಣ್ಣ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾಗ (Technical Writer ಹಾಗೂ System Maintenance Executive ಆಗಿ) ಜುಲೈ ೨೦೦೪ಲ್ಲಿ ನನಗೆ ನನ್ನ ದಾಯಾದಿಯ ಮೂಲಕ ಹೈದರಾಬಾದಿನ ಇನ್ನೊವಾ ಸಲ್ಯೂಷನ್ಸ್ ಲ್ಲಿ ನೌಕರಿ ಸಿಕ್ಕಿತು. ಆ ಕಂಪನಿಯ ಅಧ್ಯಕ್ಷರು ನನ್ನನ್ನು ಮೊಬೈಲ್ ಮೂಲಕ ಸಂಪರಿಕಿಸಿ ಸ್ವಲ್ಪ ಹೊತ್ತು ಮಾತನಾಡಿಸಿ, ಮೂರು ದಿನಗಳ ನಂತರ ನನಗೆ offer letter ಕೊರಿಯರ್ ಮೂಲಕ ಸಿಕ್ಕಿತು. ನಾನು ನನ್ನ ಸಹಿಯನ್ನು ಹಾಕಿ ಮಂಜೂರು ಮಾಡಿದ.