ಮಹಾಭಾರತ ಮತ್ತು ತಂತ್ರಾಂಶ ತಯಾರಿ

Saturday, September 5th, 2015

– ಡಾ. ಯು. ಬಿ. ಪವನಜ ಇದೇನು ಶೀರ್ಷಿಕೆ ಈ ರೀತಿ ಇದೆಯಲ್ಲಾ? ಇಮಾಂಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಎಂದು ಕೇಳುತ್ತಿದ್ದೀರಾ? ಸಂಬಂಧವಿದೆ ಸ್ವಾಮೀ. ಸ್ವಲ್ಪ ಓದುವಂತವರಾಗಬೇಕು. ಮಹಾಭಾರತದಲ್ಲಿ ಬರುವ ಒಂದು ಪ್ರಮುಖ ಘಟನೆ ಸುಧನ್ವನಿಗೂ ಅರ್ಜುನನಿಗೂ ನಡೆಯುವ ಯುದ್ಧ. ಮಹಾಭಾರತದ ಯುದ್ಧದ ನಂತರ ನಡೆಯುವ ಅಶ್ವಮೇಧಯಾಗದ ಪ್ರಸಂಗದಲ್ಲಿ ಈ ಕಥೆ ಬರುತ್ತದೆ. ಸುಧನ್ವ ಮತ್ತು ಅರ್ಜುನ ಇಬ್ಬರೂ ಕೃಷ್ಣಭಕ್ತರು. ಇಬ್ಬರೂ ಕೃಷ್ಣನ ಮೇಲೆ ಆಣೆ ಇಟ್ಟು ಒಂದೊಂದು ಪ್ರತಿಜ್ಞೆ ಮಾಡುತ್ತಾರೆ. ಅರ್ಜುನ ಹೇಳುತ್ತಾನೆ – “ಇನ್ನು […]

ಕನ್ನಡದ ಮುಕ್ತ ಜ್ಞಾನಕೋಶಕ್ಕೆ ಹತ್ತು ತುಂಬಿತು

Friday, November 15th, 2013

ಡಾ| ಯು.ಬಿ. ಪವನಜ   ಯುಗಯುಗಾದಿ ಕಳೆದರೂ ನವಂಬರ್ ಮರಳಿ ಬರುತಿದೆ (ಬೇಂದ್ರೆಯವರು ಕ್ಷಮಿಸುತ್ತಾರೆ). ಕನ್ನಡದ ಸ್ಥಿತಿಗತಿಗಳ ಬಗ್ಗೆ ಮತ್ತೊಮ್ಮೆ ಲೇಖನಗಳ ಮಹಾಪೂರದ ಸಮಯ. ಪ್ರತಿ ನವಂಬರ್ ತಿಂಗಳಿಗೆ ಇದನ್ನು ಮತ್ತೆ ಮತ್ತೆ ಓದುವುದು ಎಲ್ಲರಿಗೂ ರೂಢಿಯಾಗಿದೆ. ಅಂತೆಯೇ ಮತ್ತೆ ಮತ್ತೆ ಬರೆಯುವುದು ನಮಗೆ ರೂಢಿಯಾಗಿಬಿಟ್ಟಿದೆ. ಇರಲಿ. ಈಗ ಈ ವಿಷಯದ ಕಡೆಗೆ ಸ್ವಲ್ಪ ಕಣ್ಣು ಹಾಯಿಸೋಣ.   “ಪೆಟ್ರೋಲ್ ಉಳಿಸಬೇಕಾದರೆ ಪೆಟ್ರೋಲ್ ಬಳಸಬಾರದು, ಕನ್ನಡ ಉಳಿಸಬೇಕಾದರೆ?” ಎಂಬ ಮಾತು ಪ್ರತಿ ನವಂಬರ್ ಒಂದರಂದು ಅತ್ತಿಂದಿತ್ತ ಹರಿದಾಡುವ […]

ನನ್ನ ಲೈಬ್ರರಿ

Sunday, October 28th, 2012

-ಅಮಿತ್ ಎಂ. ಎಸ್. ಮಾಹಿತಿ ತಂತ್ರಜ್ಞಾನದ ಅಲೆ ಭಾರತದಲ್ಲಿ ತೀವ್ರವಾಗಿದ್ದರೂ ಸಾಹಿತ್ಯ ಸಂಬಂಧಿ ವಿಷಯಗಳಲ್ಲಿ ಅದರ ಬೆಳವಣಿಗೆ ತುಸು ನಿಧಾನ. ಅದರಲ್ಲೂ ಬಲು ಜನಪ್ರಿಯವಾಗಿರುವ ಆನ್‌ಲೈನ್ ಲೈಬ್ರರಿಗೆ ನಾವು ವಿದೇಶಿಗರನ್ನೇ ಅವಲಂಬಿಸಿದ್ದೇವೆ. ಗ್ಲೋಬ್ ಎಥಿಕ್ಸ್, ವೈಡರ್‌ನೆಟ್‌ನಂತಹ ಡಿಜಿಟಲ್ ಲೈಬ್ರರಿಗೆ ಚಂದಾದಾರರಾಗಿರುವ ಪುಸ್ತಕ ಪ್ರಿಯರ ಸಂಖ್ಯೆ ನೋಡಿದಾಗಲೇ ಈ ಲೈಬ್ರರಿಯ ಮಹತ್ವ ಅರಿವಾಗುತ್ತದೆ. ಪುಸ್ತಕವನ್ನು ಕೊಳ್ಳುವ ಮತ್ತು ಅದನ್ನು ನಿರ್ವಹಿಸಬೇಕಾಗದ ತೊಂದರೆಗಳಿಲ್ಲದೆ, ಕಾಗದದ ಬಳಕೆಯಿಲ್ಲದೆ, ಬೇಕಾದಾಗ ಕೊಂಡು ಓದುವ ಅತಿ ಸುಲಭದ `ಇ-ಮಾರ್ಗ` ಆನ್‌ಲೈನ್ ಡಿಜಿಟಲ್ ಲೈಬ್ರರಿ. ಭಾರತದಲ್ಲಿಯೂ […]

ಯೂನಿಕೋಡ್: ಸರ್ಕಾರದ ಮೀನ-ಮೇಷ

Wednesday, February 29th, 2012

ಮಾಹಿತಿ ತಂತ್ರಜ್ಞಾನದಲ್ಲಿ `ಯೂನಿಕೋಡ್` ಅನ್ನು ಕನ್ನಡದ ಶಿಷ್ಟತೆಯೆಂದು ಅಧಿಸೂಚನೆ ಹೊರಡಿಸಬೇಕು ಎನ್ನುವ ಶಿಫಾರಸನ್ನು ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಒಂದು ವರ್ಷ ಸಂದಿದೆ. ಆದರೆ ಶಿಫಾರಸನ್ನು ಅನುಷ್ಠಾನಕ್ಕೆ ತರಲು ರಾಜ್ಯ ಇ-ಆಡಳಿತ ಇಲಾಖೆ ಇನ್ನೂ ಮೀನ-ಮೇಷ ಎಣಿಸುತ್ತಿದೆ. ಕನ್ನಡ ಗಣಕ ಪರಿಷತ್ತು ಅಭಿವೃದ್ಧಿಪಡಿಸಿರುವ `ನುಡಿ`, ಪ್ರಸ್ತುತ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡದ ಶಿಷ್ಟತೆಯಾಗಿ ಬಳಕೆಯಾಗುತ್ತಿದೆ. `ನುಡಿ`ಯನ್ನೇ ಕನ್ನಡದ ಶಿಷ್ಟತೆಯನ್ನಾಗಿ ಬಳಸಬೇಕು ಎಂದು ಸರ್ಕಾರ 2000-01ರಲ್ಲೇ ಅಧಿಸೂಚನೆ ಹೊರಡಿಸಿದೆ. ಇದರ ಅನ್ವಯ ಸರ್ಕಾರದ ಕಂಪ್ಯೂಟರ್ ಕಡತಗಳೆಲ್ಲ […]

ತಂತ್ರಜ್ಞಾನದ ಕಿಟಕಿ ತೆರೆಯಲಿ ಕನ್ನಡಕೆ

Tuesday, February 21st, 2012

ಕನ್ನಡ ಭಾಷೆಯನ್ನು ಇಪ್ಪತ್ತೊಂದನೆಯ ಶತಮಾನದಲ್ಲಿ ಜಗತ್ತಿನ ಎಲ್ಲ ಭಾಷೆಗಳ ಜೊತೆ ಮುಂದೆ ಕೊಂಡುಹೋಗಬೇಕಾಗಿದೆ. ಕನ್ನಡ ಭಾಷೆಯೆಂದರೆ ಕೇವಲ ಪಂಪ, ರನ್ನ, ಜನ್ನ, ಕುಮಾರವ್ಯಾಸರಲ್ಲ. ಹೊಸ ತಂತ್ರಜ್ಞಾನದ ಜೊತೆ ಕನ್ನಡ ಭಾಷೆಯೂ ಸೇರಿಕೊಳ್ಳಬೇಕಾಗಿದೆ. ಈಗಿನ ಕಾಲದಲ್ಲಿ ಎಲ್ಲವೂ ಮಾಹಿತಿ ತಂತ್ರಜ್ಞಾನವನ್ನೇ ಅವಲಂಬಿಸಿರುವುದುರಿಂದ ಅಲ್ಲಿಂದಲೇ ಕನ್ನಡ ಭಾಷೆಯ ಹೊಸಯುಗದ ಪ್ರಾರಂಭ ಆಗಬೇಕಾಗಿದೆ. ಫೆಬ್ರವರಿ ೨೧ ಅಂತಾರಾಷ್ಟ್ರೀಯ ಮಾತೃಭಾಷಾ ದಿನ. ದೈನಂದಿನ ಜೀವನದಲ್ಲಿ ಕನ್ನಡ ಬಳಕೆಯ ಜೊತೆ ತಂತ್ರಜ್ಞಾನದಲ್ಲೂ ಕನ್ನಡ ಹಾಸುಹೊಕ್ಕಾಗಿ ಬೆರೆಯತಕ್ಕದ್ದು. ಈ ತಂತ್ರಜ್ಞಾನದಲ್ಲಿ ಕನ್ನಡವೆಲ್ಲಿದೆ ಸ್ವಲ್ಪ ಗಮನಿಸೋಣ.   […]

ನಮ್ಮ ಭಾಷೆಗೆ e-ಭಾಷ್ಯ

Tuesday, July 19th, 2011

– ಡಾ. ಯು. ಬಿ. ಪವನಜ ಒಂದು ಭಾಷೆಯನ್ನು ವೈಜ್ಞಾನಿಕವಾಗಿ ಪದವಿಂಗಡಣೆ ಮಾಡಿ ಅದಕ್ಕೆ ವ್ಯಾಕರಣಸ್ವರೂಪದ ನಿಗದಿಮಾಡುವ ಕ್ರಿಯೆ ಪ್ರಪಂಚದಲ್ಲೇ ಮೊದಲ ಬಾರಿ ಪ್ರಾರಂಭವಾದುದು ಭಾರತದಲ್ಲಿ. ಇದನ್ನು ಗಣಕ ಮತ್ತ ತಂತ್ರಾಂಶ ಬಳಸಿ ಮಾಡುವ ಕೆಲಸದಲ್ಲಿ ನಾವು ಎಲ್ಲಿದ್ದೇವೆ? ನಮ್ಮ ಭಾಷೆ ಎಲ್ಲಿದೆ? ಸ್ವಲ್ಪ ಪರಿಶೀಲಿಸೋಣ. “ರಾಮನು ರಾವಣನನ್ನು ಕೊಂದನು” “ರಮೇಶನು ಒಂದು ಹೊಸ ಕಾರನ್ನು ಕೊಂಡುಕೊಂಡನು” “ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ ಜರುಗಲಿದೆ” ಹೀಗೆ ಹಲವಾರು ವಾಕ್ಯಗಳನ್ನು ನಾವು ಪ್ರತಿನಿತ್ಯ ಓದುತ್ತಿರುತ್ತೇವೆ ಅಥವಾ ಕೇಳುತ್ತಿರುತ್ತೇವೆ. ಇದು ಮಾಹಿತಿಯುಗ. […]

ಸಾಹಿತಿಗಳೇ, ಕನ್ನಡವ ಸಾಯುತಿ ಮಾಡಬೇಡಿ

Saturday, June 4th, 2011

ಡಾ| ಯು. ಬಿ. ಪವನಜ [೨೦೧೧ರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಕನ್ನಡಪ್ರಭ ಪತ್ರಿಕೆ ಹೊರತಂದ ವಿಶೇಷ ಪುರವಣಿಯಲ್ಲಿ ಪ್ರಕಟಿತ ಲೇಖನ] ಮತ್ತೊಮ್ಮೆ ಸಾಹಿತ್ಯ ಸಮ್ಮೇಳನ ಬಂದಿದೆ. ಪತ್ರಿಕೆಗಳಲ್ಲಿ ಪುರವಣಿಗಳು ಬರುತಿವೆ. ಕನ್ನಡ ಉಳಿಯಲು ಏನು ಮಾಡಬೇಕು ಎಂದು ಮತ್ತೆ ಮತ್ತೆ ಗೀಚುವಿಕೆ ಹಾಗೂ ಕಿರುಚುವಿಕೆ ಮರುಕಳಿಸುತ್ತಿದೆ. ಈ ಸಂದರ್ಭದಲ್ಲಿ ಇಲ್ಲೊಂದು ದೃಷ್ಟಿಕೋನ ಇದೆ. ಇದನ್ನೂ ಸ್ವಲ್ಪ ಗಮನಿಸಿ. ಜನಪ್ರಿಯ ವಿಜ್ಞಾನ ಸಾಹಿತ್ಯದ ಅಗತ್ಯ ‘ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವನಕೆ’ ಎಂದು ಡಿವಿಜಿಯವರು ತಮ್ಮ […]

ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ -ಅಂದು, ಇಂದು, ಮುಂದು

Friday, April 29th, 2011

ಡಾ| ಯು. ಬಿ. ಪವನಜ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎಂಬುದು ಆರಂಭದ ದಿನಗಳಲ್ಲಿ ಗಣಕಗಳಲ್ಲಿ ಕನ್ನಡದ ಬಳಕೆಯಿಂದ ಪ್ರಾರಂಭವಾಯಿತು. ಇದು  ಸುಮಾರು ಮೂರು ದಶಕಗಳ ಹಿಂದಿನ ಕಥೆ. ಪದಸಂಸ್ಕರಣವು (word-processing) ಇದರಲ್ಲಿಯ ಮೊದಲನೆಯದು. ಪತ್ರ, ಲೇಖನ, ದಾಖಲೆಗಳನ್ನು ಬರೆಯಲು, ತಿದ್ದಲು ಇವುಗಳ ಬಳಕೆ ಆಗುತ್ತಿದೆ. ಪದಸಂಸ್ಕರಣದ ಮುಂದುವರೆದ ಸೌಕರ್ಯವೇ ಡಿ.ಟಿ.ಪಿ. (desktop publishing). ಅಂದರೆ ಪಠ್ಯದ ಜೊತೆ ಚಿತ್ರಗಳನ್ನು ಸೇರಿಸಿ ಪುಟವಿನ್ಯಾಸ ಮಾಡುವುದು. ಈಗ ಎಲ್ಲ ಪುಸ್ತಕಗಳು ಮತ್ತು ಪತ್ರಿಕೆಗಳು ಇದೇ ವಿಧಾನದಿಂದ ತಯಾರಾಗುತ್ತಿವೆ. ಕೆ.ಪಿ. ರಾವ್ […]

ಕರ್ನಾಟಕ ಜನಪದ ಕಲೆಗಳು-ಭಾಗ ೧

Friday, January 22nd, 2010

Untitled Document ಕರ್ನಾಟಕ ಜನಪದ ಕಲೆಗಳು ಭಾಗ ೧ ಸಂ: ಗೊ. ರು. ಚನ್ನಬಸಪ್ಪ [ಪೀಠಿಕೆ:- ಗ್ರಾಮೀಣ ಬದುಕಿನ ಅನಕ್ಷರಸ್ತರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ ‘ಜನಪದ’ ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ. […]

ಬ್ಲಾಗಿಂಗ್ – ಪರ್ಯಾಯ ಪತ್ರಿಕೋದ್ಯಮ

Saturday, March 15th, 2008

– ಡಾ. ಯು. ಬಿ. ಪವನಜ

ಇತ್ತೀಚೆಗಿನ ದಿನಗಳಲ್ಲಿ ತುಂಬ ಕೇಳಿಬರುತ್ತಿರುವ ಪದ “ಬ್ಲಾಗ್”. ಅದರ ಹಲವು ಪ್ರತ್ಯಯಗಳೇ ಬ್ಲಾಗಿಂಗ್, ಬ್ಲಾಗರ್, ಇತ್ಯಾದಿ. ಈ ಬ್ಲಾಗ್ ಎಂದರೆ ಏನು? ಬ್ಲಾಗ್ ಎಂದರೆ ಒಂದು ರೀತಿಯಲ್ಲಿ ಸಾರ್ವಜನಿಕ ಸ್ವಗತ ಎನ್ನಬಹುದು. ಎಲ್ಲರಿಗೂ ಓದಲು ಅನುಕೂಲವಾಗುವಂತೆ ಅಂತರಜಾಲದಲ್ಲಿ (ಇಂಟರ್‌ನೆಟ್‌ನಲ್ಲಿ) ಇಟ್ಟಂತಹ ತೆರೆದ ದಿನಚರಿ ಅಥವಾ ಡೈರಿ ಎಂದೂ ಕರೆಯಬಹುದು. ಬ್ಲಾಗ್‌ನ ಕ್ರಿಯಾರೂಪವೇ ಬ್ಲಾಗಿಂಗ್ ಅಂದರೆ ಬ್ಲಾಗ್ ನಡೆಸುವ ಕ್ರಿಯೆ. ಬ್ಲಾಗರ್ ಎಂದರೆ ಬ್ಲಾಗ್ ಬರೆಯುವ ವ್ಯಕ್ತಿ.