ಋಷಿವಾಕ್ಯದೊಡನೆ ವಿಜ್ಞಾನ ಎಂಬ ಧ್ಯೇಯದೊಂದಿಗೆ ವಿಶ್ವಕನ್ನಡವು ಸುಮಾರು ಹತ್ತು ವರ್ಷಗಳ ಹಿಂದೆ ಅಂದರೆ ೧೯೯೬ರಲ್ಲಿ ಪ್ರಾರಂಭವಾಯಿತು. ಜೀವನದ ಅಂತಿಮ ಗುರಿ ಮೋಕ್ಷಸಾಧನೆ. ಮೋಕ್ಷಕ್ಕೆ ಸಾಧನೆ ಮಾಡಲು ದೇಹದ ಅಗತ್ಯ ಇದೆ. ದೇಹವನ್ನು ಸುಸ್ಥಿತಿಯಲ್ಲಿಡಲು ವಿಜ್ಞಾನ ಬೇಕು. ಇದನ್ನೇ ಡಿವಿಜಿಯವರು ಹೇಳಿದ್ದು. ಜನಸಾಮಾನ್ಯರಿಗೆ ದಾರಿದೀಪವಾಗಿ ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಸ್ವಾಮೀಜಿಯವರಿದ್ದಾರೆ. ಇವರು ಮಠದ, ಪೀಠದ ಸ್ವಾಮಿಯಾಗಿ ಮಾತ್ರವಲ್ಲ, ಹಲವು ಜನಪರ, ಪರಿಸರಪರ ಕಾರ್ಯಗಳಿಂದ ಖ್ಯಾತರಾಗಿದ್ದಾರೆ. ಹೊಸನಗರ ರಾಮಚಂದ್ರಾಪುರ ಮಠ, ಶ್ರೀ ಗುರುಗಳ ಕ್ರಿಯಾಯೋಜನೆಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ಮಠದ ಜಾಲತಾಣದಲ್ಲಿ ಓದಬಹುದು. ಶ್ರೀ ಶ್ರೀ ರಾಘವೇಶ್ವರ ಸ್ವಾಮೀಜಿಯವರನ್ನು ಸಂದರ್ಶಿಸಿ ವಿಶ್ವಕನ್ನಡದ ಓದುಗರ ಪರವಾಗಿ ಕೆಲವು ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಬೇಕೆಂದು ಬಹುದಿನಗಳಿಂದ ಅಂದುಕೊಂಡಿದ್ದೆ. ಅದು ಇತ್ತೀಚೆಗೆ ಈಡೇರಿತು. ಸಂದರ್ಶನ ಇಲ್ಲಿದೆ.
Posts published in “ಪರಿಚಯ”
ಖ್ಯಾತನಾಮರುಗಳ ಪರಿಚಯ ಮತ್ತು ಸಂದರ್ಶನ
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೇಲೆ ಬರಬೇಕಾದರೆ ಒಂದನೇ ತರಗತಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಓದಬೇಕೆಂದೇನೂ ಇಲ್ಲ
- ಡಾ| ಆರ್. ಪೂರ್ಣಿಮಾ
ಇನ್‌ಪೋಸಿಸ್, ವಿಶ್ವ ಉದ್ಯಮ ಕ್ಷೇತ್ರಕ್ಕೆ ಹೊಸದಿಕ್ಕು ತೋರಿಸಿದ ಭಾರತದ ಹೆಮ್ಮೆಯ ಸಂಸ್ಥೆ. ಕನ್ನಡದ ನೆಲದಲ್ಲಿ ಅರಳಿ, ಪ್ರಪಂಚದ ಅಂಗಣದಲ್ಲಿ ದೇಶದ ವಿಜಯ ಪತಾಕೆ ಹಾರಿಸಿದ, ದಾಖಲೆಗಳ ಮೇಲೆ ದಾಖಲೆ ಸ್ಥಾಪಿಸುತ್ತ ಮುನ್ನಡೆಯುತ್ತಿರುವ ಪ್ರತಿಭಾವಂತರ ಕೂಟ. ಇದರ ಜನಕ ದೇಶದ ಶ್ರೀಮಂತ ವ್ಯಕ್ತಿ, ನ್ಯಾಯಬದ್ಧ ಮಾರ್ಗದಲ್ಲಿ ಹಣದ ರಾಶಿಯನ್ನೇ ಕೂಡಿಹಾಕಿದ ಸಾಫ್ಟ್‌ವೇರ್ ಸಂತ ಎನ್. ಆರ್. ನಾರಾಯಣಮೂರ್ತಿ. ಶಾಲಾ ಮಾಸ್ತರರ ಮಗನೊಬ್ಬ ಇಂದು ಪ್ರಪಂಚದ ಗಮನಾರ್ಹ ಉದ್ಯಮಿಯಾಗಿ ಬೆಳೆದು ನಿಂತ ಯಶೋಗಾಥೆ ಇದು.