Press "Enter" to skip to content

Posts published in “ಆರೋಗ್ಯ”

ಉದರನಿಮಿತ್ತಂ … ಹೊಟ್ಟೆ ಪಕ್ಷದವರಿಗೆ …

ಕೋಲಾ ಕುಡಿಯುತ್ತಿದ್ದೀರಾ ಎಚ್ಚರ!

- ಡಾ| ಡಿ. ಕೆ. ಮಹಾಬಲರಾಜು

ಕೋಲಾ ಪುರಾತನ ಕಾಲದಿಂದ ಬಂದ ಪೇಯವಲ್ಲ. ಇದು ಈಗ ಬಯಸದವರಿಗೂ ಬಲವಂತವಾಗಿ ದೊರೆಯುತ್ತಿರುವ ಪಾನೀಯ. ಬೇಡ ಬೇಡ ಎನ್ನುವವರನ್ನೂ ಮರುಳುಗೊಳಿಸಿ, ಅವರ ಮನೆಯಲ್ಲಿಯೇ ಬೇರೂರುತ್ತಿರುವ ಲಘುಪೇಯ ಇದು. ಇಂದಿನ ಯುವಜನತೆಗಂತೂ ಕೋಲಾವೇ ಸರ್ವಸ್ವ. ಇದೇ ಸಂಸ್ಕೃತಿ.

ವಿದೇಶಗಳಲ್ಲಿರುವ ಭಾರತೀಯರ ಮಾನಸಿಕ ಸಮಸ್ಯೆಗಳು

- ಡಾ| ಸಿ. ಆರ್. ಚಂದ್ರಶೇಖರ್

ಉದ್ಯೋಗವನ್ನೂ, ಒಳ್ಳೆಯ ಭವಿಷ್ಯವನ್ನೂ ಅರಸುತ್ತಾ, ತಾಯ್ನಾಡನ್ನು ಬಿಟ್ಟು, ಹೊರದೇಶಗಳಿಗೆ ಹೋಗುವ ಭಾರತೀಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಪ್ರತಿಭೆಗೆ ಮನ್ನಣೆ, ಕೈತುಂಬಾ ಸಂಬಳ, ಉತ್ತಮ ಮಟ್ಟದ ಜೀವನ ವಿಧಾನಗಳಿರುವ ವಿದೇಶಗಳಲ್ಲಿರುವ ಭಾರತೀಯರು ಸಂತೋಷ, ತೃಪ್ತಿಯಿಂದ ಇರುವರು ಎಂದು ಹೇಳಲಾದೀತೇ? `ನಾವು ಕನಸು ಮನಸಿನಲ್ಲಿ ಊಹಿಸಲಾಗದಷ್ಟು ವೈಭೋಗವನ್ನು ಇಲ್ಲಿ ಕಂಡಿದ್ದೇವೆ. ಹಣವಿದೆ. ಸುಖಕೊಡುವ ವಸ್ತುಗಳಿವೆ. ವಿಸ್ಮಯ ಪಡುವ ವೈಜ್ಞಾನಿಕ ಸಲಕರಣೆಗಳಿವೆ. ಆದರೇನು ಮನಸ್ಸಿಗೆ ನೆಮ್ಮದಿ ಇಲ್ಲ. ಏನೋ ಅತೃಪ್ತಿ ನಮ್ಮನ್ನೂ ಕಾಡುತ್ತದೆ' ಎಂದು ವಿದೇಶಗಳಲ್ಲಿರುವ ಭಾರತೀಯರು ಹೇಳುತ್ತಾರೆ. ಅನೇಕ ರೀತಿಯ ಮಾನಸಿಕ ಒತ್ತಡಗಳು ಅವರನ್ನೂ ಕಾಡುತ್ತವೆ. ಉದಾಹರಣೆಗೆ-

ದೀರ್ಘಾಯುಷ್ಯಕ್ಕಾಗಿ ಉತ್ತಮವಾಗಿ ಉಸಿರಾಡಿ

ಡಾ| ಡಿ.ಕೆ. ಮಹಾಬಲರಾಜು

ಬದುಕಿರುವ ಎಲ್ಲ ಜೀವಿಗಳೂ ಉಸಿರಾಡುತ್ತವೆ ಎಂಬ ವಿಷಯ ಯಾರಿಗೂ ಹೊಸತಲ್ಲ. ಮಾನವನು ಪ್ರತಿನಿಮಿಷಕ್ಕೆ ಹದಿನಾರು ಬಾರಿ ಉಸಿರಾಡುತ್ತಾನೆ. ಉಸಿರಾಟದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳವುದೇ ಇಲ್ಲ. ಏಕೆಂದರೆ ಉಸಿರಾಟ ನಮ್ಮಇಚ್ಛೆಗೆ ಕಾಯದೆ ಅನೈಚ್ಛಿಕವಾಗಿ ನಡೆಯುತ್ತಿರುತ್ತದೆ. ಜಗತ್ತಿನಲ್ಲಿ ಬಹಳಷ್ಟು ಜನರು ಉಸಿರಾಡುತ್ತಿರುವ ಕ್ರಮ ಸರಿಯಿಲ್ಲ. ಹೇಗೋ ಉಸಿರಾಡಿಕೊಂಡು ಬದುಕಿದ್ದಾರೆ ಎಂದು ಆಧುನಿಕ ವೈದ್ಯರು ಆರೋಪಣೆ ಮಾಡುತ್ತಿದ್ದಾರೆ.