ಮೈಕ್ರೋಸಾಫ್ಟ್ ಲೇಸರ್ ಮೌಸ್ – ಲಾಪ್‌ಟಾಪ್‌ಗೋಸ್ಕರ

– ಡಾ. ಯು. ಬಿ. ಪವನಜ

ಮೈಕ್ರೋಸಾಫ್ಟ್ ಕಂಪೆನಿ ತಂತ್ರಾಂಶ (ಸಾಫ್ಟ್ವೇರ್) ತಯಾರಿಕೆಗೆ ಜಗತ್ಪ್ರಸಿದ್ಧ. ಅವರು ಕೆಲವು ಯಂತ್ರಾಂಶಗಳನ್ನೂ (ಹಾರ್ಡ್ವೇರ್) ತಯಾರಿಸುತ್ತಾರೆ. ಅವುಗಳಲ್ಲಿ ಮೌಸ್ಗಳು ಹೆಚ್ಚು ಜನಪ್ರಿಯ. ಮೈಕ್ರೋಸಾಫ್ಟ್ ಮೌಸ್ಗಳ ಪಟ್ಟಿಗೆ ಇತ್ತೀಚೆಗೆ ಆದ ಸೇರ್ಪಡೆ ವೈರ್ಲೆಸ್ ನೋಟ್ಬುಕ್ ಲೇಸರ್ ಮೌಸ್8000. ಇದು ಕೇವಲ ಮೌಸ್ ಅಲ್ಲ. ಇದನ್ನು ಬಳಸಿ ಪವರ್ಪಾಯಿಂಟ್ ಪ್ರೆಸೆಂಟೇಶನ್ಗಳ ದೂರನಿಯಂತ್ರಣ ಮಾಡಬಹುದು. ಅಷ್ಟು ಮಾತ್ರವಲ್ಲ ವಿಂಡೋಸ್ ಮೀಡಿಯಾ ಪ್ಲೇಯರನ್ನು ಕೂಡ ನಿಯಂತ್ರಿಸಬಹುದು.

ಈ ಚಿತ್ರದಲ್ಲಿ ಮೌಸ್ನ ಮೇಲ್ಭಾಗದ ಮತ್ತು ಕೆಳಭಾಗದ ನೋಟಗಳನ್ನು ನೀಡಲಾಗಿದೆ. ಈ ಮೌಸ್ನ ಮೇಲ್ಭಾಗದಲ್ಲಿ ಎಲ್ಲ ಮೌಸ್ಗಳಲ್ಲಿರುವಂತೆ ಎಡ ಕ್ಲಿಕ್, ಬಲಕ್ಲಿಕ್, ಸ್ಕ್ರಾಲ್ ಚಕ್ರಗಳಿವೆ. ಇವುಗಳ ಬಳಕೆ ಸಾಮಾನ್ಯವಾಗಿ ಮೌಸ್ ಬಳಸುವ ಎಲ್ಲರಿಗೆ ತಿಳಿದಿರುತ್ತದೆ. ಉದಾಹರಣೆಗೆ ಒಂದು ಅಂತರಜಾಲ ತಾಣವನ್ನು ಓದುತ್ತಿರುವಾಗ ಸ್ಕ್ರಾಲ್ ಚಕ್ರವನ್ನು ತಿರುಗಿಸುವ ಮೂಲಕ ಪುಟವನ್ನು ಮೇಲಕ್ಕೆ ಯಾ ಕೆಳಕ್ಕೆ ಸರಿಸಿ ಓದಬಹುದು.

ಈ ಮೌಸ್ನ ವೈಶಿಷ್ಟ್ಯವಿರುವುದು ಅದರ ಕೆಳಭಾಗದಲ್ಲಿರುವ ಹೆಚ್ಚಿನ ಬಟನ್ಗಳಲ್ಲಿ. ಮೈಕ್ರೋಸಾಫ್ಟ್ ಪವರ್ಪಾಯಿಂಟ್ ತಂತ್ರಾಂಶವನ್ನು ಬಳಸಿ ಸ್ಲೈಡ್ ಶೋ ಪ್ರೆಸೆಂಟೇಶನ್ ಸಹಿತ ಭಾಷಣ ಮಾಡುತ್ತಿರುವಾಗ ಇಲ್ಲಿ ನೀಡಿರುವ ಬಟನ್ಗಳನ್ನು ಬಳಸಿ ಹಿಂದಿನ ಯಾ ಮುಂದಿನ ಸ್ಲೈಡ್ಗಳನ್ನು ತೋರಿಸಬಹುದು. ಪರದೆಯಲ್ಲಿ ಮೂಡಿಬಂದಿರುವ ಚಿತ್ರದ ಮೇಲಿನ ವಿಷಯಗಳನ್ನು ಸೂಚಿಸಲು ಲೇಸರ್ ಕಿರಣವೂ ಈ ಮೌಸ್ನಲ್ಲಿದೆ. ಪರದೆಯನ್ನು ತಾತ್ಕಾಲಿಕವಾಗಿ ಅದೃಶ್ಯಗೊಳಿಸಬಹುದು. ಮೌಸ್ನ ಮೇಲ್ಭಾದಲ್ಲಿ ಕೂಡ ಪ್ರಸೆಂಟೇಶನ್ಗೆ ಅನುಕೂಲವಾಗಿಸುವ ಇನ್ನೂ ಎರಡು ಸೌಲಭ್ಯಗಳನ್ನು ನೀಡುವ ಬಟನ್ಗಳಿವೆ. ಶಾಯಿಯನ್ನು ಬಳಸಿ ಗೀಚುವುದು ಮತ್ತು ಒಂದು ನಿರ್ದಿಷ್ಟ ಜಾಗವನ್ನು ಹಿಗ್ಗಿಸಿ ತೋರಿಸುವುದು -ಇವೇ ಆ ಎರಡು ಸವಲತ್ತುಗಳು.

ಲ್ಯಾಪ್ಟಾಪ್ನಲ್ಲಿ ಸಿನಿಮಾ ನೋಡುವ ಅಥವಾ ಹಾಡು ಕೇಳುವವರಿಗೆ ಕೂಡ ಎರಡು ಅನುಕೂಲಕರವಾದ ಬಟನ್ಗಳಿವೆ. ಸ್ಪೀಕರಿನ ವಾಲ್ಯೂಮನ್ನು ಹೆಚ್ಚಿಸುವ ಮತ್ತು ಕಡಿಮೆ ಮಾಡುವ ಬಟನ್ಗಳಿವೆ. ಅಂದರೆ ಒಂದು ಸಭಾ ಕಾರ್ಯಕ್ರಮದಲ್ಲಿ ಲ್ಯಾಪ್ಟಾಪ್ ಬಳಸಿ ಸ್ಲೈಡ್ ಶೋ ಮಾಡುತ್ತಿದ್ದಲ್ಲಿ ಅಥವಾ ಚಲನಚಿತ್ರದ ತುಣುಕು ತೋರಿಸುತ್ತಿದ್ದಲ್ಲಿ ಈ ಮೌಸ್ ನಿಜಕ್ಕೂ ಉಪಯುಕ್ತ. ಭಾಷಣ ನೀಡುವವರು ಸಭೆಯಲ್ಲಿ ಓಡಾಡುತ್ತ ಅಥವಾ ವೇದಿಕೆಯ ಮೇಲೆ ಅತ್ತಿಂದಿತ್ತ ಓಡಾಡುತ್ತ ಮಾತನಾಡಬಹುದು. ಸಭೆಯೆ ಮಧ್ಯದಿಂದಲೇ ಲೇಸರ್ ಕಿರಣ ಬಳಸಿ ಪರದೆಯಲ್ಲಿ ಮೂಡಿಬರುತ್ತಿರುವ ವಿಷಯಗಳ ಮೇಲೆ ಬೆಳಕು ಚೆಲ್ಲಬಹುದು. ಈ ವೈರ್ಲೆಸ್ಮೌಸ್ ಬ್ಲೂಟೂತ್ ತಂತ್ರಜ್ಞಾನವನ್ನು ಬಳಸುತ್ತದೆ. ಸುಮಾರು 30 ಅಡಿಗಳ ವ್ಯಾಪ್ತಿ ಇದಕ್ಕಿದೆ.

Leave a Reply