Press "Enter" to skip to content

ನಾಗೇಶ ಹೆಗಡೆ ಮತ್ತು ಜಿ.ಟಿ.ಎನ್‌ರಿಗೆ ಅಭಿನಂದನೆಗಳು

ಈ ಸಲದ ರಾಜ್ಯೋತ್ಸವ ಪ್ರಶಸ್ತಿಗೆ ಒಂದು ವೈಶಿಷ್ಟ್ಯವಿದೆ. ಸರಕಾರವಿಲ್ಲದೆ ಯಾವುದೇ ರಾಜಕಾರಣಿಯ ವಶೀಲಿಯಿಲ್ಲದೆ ನೀಡಿದ ಪ್ರಶಸ್ತಿಯಿದು. ಈ ಸಲದ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿದ್ದು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರು. ಹೀಗಾಗಿ ಈ ಸಲದ ಪ್ರಶಸ್ತಿಗೆ ಭಾಜನರಾದವರ ಹೆಸರುಗಳಿಗೆ ಯಾವುದೇ ಕಳಂಕವಿಲ್ಲ.

ನನಗೆ ವೈಯಕ್ತಿಕವಾಗಿ ಈ ಸಲದ ಪ್ರಶಸ್ತಿ ತುಂಬ ಸಂತಸವನ್ನು ತಂದಿದೆ. ಅದಕ್ಕೆ ಕಾರಣ ಪ್ರಶಸ್ತಿಗೆ ಭಾಜನರಾದ ನಾಗೇಶ ಹೆಗಡೆ ಮತ್ತು ಜಿ.ಟಿ. ನಾರಾಯಣ ರಾವ್. ಇವರಿಬ್ಬರೂ ಕನ್ನಡ ವಿಜ್ಞಾನ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಜಿ.ಟಿ.ಎನ್ ಬಗ್ಗೆ ನಾನು ಈಗಾಗಲೆ ಇಸ್ಮಾಯಿಲ್ ಅವರ ಬ್ಲಾಗಿನ ಕೆಳಗೆ ಟಿಪ್ಪಣಿ ನಮೂದಿಸಿದ್ದೇನೆ. ನಾಗೇಶ ಹೆಗಡೆಯವರು ಪ್ರಜಾವಾಣಿ ಪತ್ರಿಕೆಯಲ್ಲಿ ಹಲವು ವರ್ಷಗಳಿಂದೆ ವಿಜ್ಞಾನ ವಿಶೇಷ ಹೆಸರಿನ ಅಂಕಣ ಬರೆಯುತ್ತಿದ್ದಾರೆ. ಪ್ರಜಾವಾಣಿಯಲ್ಲಿ ಸಹಾಯಕ ಸಂಪಾದಕರಾಗಿ ಮತ್ತು ಸುಧಾ ವಾರಪತ್ರಿಕೆಯ ಸಂಪಾದಕರಾಗಿಯೂ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ.

ನಾಗೇಶ ಹೆಗಡೆ ಮತ್ತು ಜಿ.ಟಿ.ಎನ್‌ರಿಗೆ ಅಭಿನಂದನೆಗಳು. ಇದು ಕನ್ನಡ ವಿಜ್ಞಾನ ಲೇಖಕರುಗಳೆಲ್ಲರಿಗೆ ಸಂದ ಗೌರವ ಎಂದೂ ಹೇಳಬಹುದು.

Be First to Comment

Leave a Reply

Your email address will not be published. Required fields are marked *