Press "Enter" to skip to content

ನಂ.1 ಆಗುವುದು ಹೇಗೆ?

ಶೀರ್ಷಿಕೆ ಓದಿದ ತಕ್ಷಣ ನಿಮ್ಮ ಮನದಲ್ಲಿ ಏನು ಆಲೋಚನೆ ಬಂದಿರಬಹುದು ಎಂಬುದನ್ನು ನಾನು ಊಹಿಸಬಲ್ಲೆ. ವ್ಯಕ್ತಿತ್ವ ವಿಕಸನದ ಬಗ್ಗೆ ಕೊರೆಯಲು ಹೊರಟಿದ್ದೇನೆ ಎಂದುಕೊಂಡಿದ್ದೀರಾ? ಖಂಡಿತ ಇಲ್ಲ. ನೀವು ನಿಜವಾಗಿಯೂ ನಂ.1 ಆಗಬೇಕಿದ್ದರೆ ಅದರ ಬಗ್ಗೆ ಮಾರುಕಟ್ಟೆಯಲ್ಲಿ ಬೇಕಾದಷ್ಟು ಪುಸ್ತಕಗಳಿವೆ. ಕೊಂಡು ಓದಬಹದು. ಅವುಗಳನ್ನು ಕೊಂಡರೆ ನೀವು ನಂ.1 ಆಗುತ್ತೀರೋ ಇಲ್ಲವೋ, ಆದರೆ, ಪುಸ್ತಕ ಬರೆದವರು ಮತ್ತು ಪ್ರಕಾಶಿಸಿದವರು ನಂ.1 ಆಗುತ್ತಾರೆ.

ಇರಲಿ. ಅದನ್ನು ಬಿಟ್ಟು ಬಿಡಿ. ಈಗ ವಿಷಯಕ್ಕೆ ಬರೋಣ. ಬೆಂಗಳೂರಿನ ಎಫ್.ಎಂ. ರೇಡಿಯೋ ಕೇಂದ್ರಗಳನ್ನು ಕೇಳಿದ್ದೀರಾ? ಅವರು ಮಾತನಾಡುವ ಕನ್ನಡ, ಕ್ಷಮಿಸಿ, ಕಂಗ್ಲಿಷ್ ಕೇಳಿದ್ದೀರಾ? ಅದರ ಬಗ್ಗೆ ಪ್ರತ್ಯೇಕವಾಗಿ ಬರೆಯುವಷ್ಟಿದೆ. ಈಗಿನ ವಿಷಯ ಅದಲ್ಲ. ಎಲ್ಲ ಎಫ್.ಎಂ ಕೇಂದ್ರದವರೂ ಒಂದು ಮಾತನ್ನು ಖಂಡಿತವಾಗಿ ಹೇಳುತ್ತಾರೆ. ಅದುವೇ “ನೀವು ….. ಕೇಳುತ್ತಿದ್ದೀರಾ. ಇದು ಬೆಂಗಳೂರಿನ ನಂ.1. ಎಫ್.ಎಂ ಚಾನೆಲ್ ಆಗಿದೆ”. ಆದುದರಿಂದ ನಾನು ಹೇಳುವುದು ಇಷ್ಟೆ. ನೀವು ನಂ.1 ಆಗಬೇಕಿದ್ದರೆ ಬೆಂಗಳೂರಿನ ಯಾವುದಾದರೂ ಎಫ್.ಎಂ. ಚಾನೆಲಿನ ರೇಡಿಯೋ ಜಾಕಿ ಆಗದರೆ ಸಾಕು. ಎಲ್ಲ ಚಾನೆಲುಗಳೂ ನಂ.1, ಎಲ್ಲ ರೇಡಿಯೋ ಜಾಕಿಗಳೂ ನಂ.1 🙂

ಒಬ್ಬ ಜಗದ್ವಿಖ್ಯಾತ ಗಣಿತಜ್ಞರನ್ನು ಪತ್ರಿಕಾಕರ್ತರು ಸಂದರ್ಶಿಸಿದಾಗ ಒಂದು ಪ್ರಶ್ನೆ ಕೇಳಿದ್ದರು -“ನಿಮಗೆ ಜೀವನದಲ್ಲಿ ಇದುವರೆಗೆ ಬಿಡಸಲಾಗದಂತಹ ಕ್ಲಿಷ್ಟ ಗಣಿತ ಸಮಸ್ಯೆ ಯಾವುದಾದರೂ ಎದುರಾಗಿದೆಯೇ?” ಎಂದು. ಅದಕ್ಕೆ ಅವರು ಉತ್ತರಿಸದರಂತೆ -“ಹೌದು. ಒಂದು ಪೇಸ್ಟಿನ ಜಾಹಿರಾತು ಹೇಳುತ್ತದೆ -75% ಜನರು ನಮ್ಮ ಪೇಸ್ಟ್ ಬಳಸುತ್ತಾರೆ. ಇನ್ನೊಂದು ಪೇಸ್ಟಿನ ಜಾಹಿರಾತು ಘೋಷಿಸುತ್ತದೆ – 80% ಜನರು ನಮ್ಮ ಪೇಸ್ಟ್ ಬಳುಸತ್ತಾರೆ. ಮೂರನೆಯ ಪೇಸ್ಟ್ ಕಂಪೆನಿಯ ಜಾಹಿರಾತು ಹೇಳುತ್ತದೆ -90% ಜನ ನಮ್ಮ ಪೇಸ್ಟ್ ಬಳಸುತ್ತಾರೆ. ಇದು ಹೇಗೆ ಸಾಧ್ಯ? ಒಟ್ಟುಗೂಡಿಸಿದರೆ 100% ಕ್ಕಿಂತ ಜಾಸ್ತಿ ಆಯಿತಲ್ಲ?”.

ನನಗೂ ಇದೇ ಸಮಸ್ಯೆ ಇದೆ. ಎಲ್ಲ ಎಫ್.ಎಂ. ಚಾನೆಲುಗಳೂ ನಂ.1 ಆಗುವುದು ಹೇಗೆ? ಯಾರಾದರೂ ಈ ಸಮಸ್ಯೆಯನ್ನು ಬಿಡಿಸುತ್ತೀರಾ?

ಎಫ್.ಎಂ ಚಾನೆಲುಗಳ ಕನ್ನಡ, ಅಲ್ಲ ಕಂಗ್ಲಿಷ್ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿದ್ದಲಿಂಗಯ್ಯನವರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಒಂದು ಜೋಕು ನೆನಪಿಗೆ ಬಂತು. ಟೆಲಿಫೋನು ಕಂಪೆನಿಯು ಧ್ವನಿಮುದ್ರಿತ ಸಂದೇಶ ಕೇಳಿಸುವುದು ಗೊತ್ತಿದೆ ತಾನೆ? ಅದು ಹೀಗಿದ್ದರೆ ಹೇಗೆ -“ನೀವು ಕಾಲ್ ಮಾಡಿದ ವ್ಯಕ್ತಿ ನಿಮ್ಮ ಕಾಲನ್ನು ಎತ್ತುತ್ತಿಲ್ಲ”?

3 Comments

  1. ritershivaram ritershivaram June 20, 2007

    ಪವನಜ ಅವರೇ,

    ನೀವು ಹೇಳುತ್ತಿರುವುದು ಸರಿಯೆ ಆದರೂ, ನಮ್ಮ ಸುತ್ತ ಮುತ್ತ ಬದುಕು ಸಾಗುತ್ತಿರುವುದೇ ಕಂಗ್ಲೀಷ್ ನಲ್ಲಿ. ಅದನ್ನು ಎಲ್ಲರೂ ಒಪ್ಪಿಕೊಂಡಿದ್ದೇವಲ್ಲ; ಒಪ್ಪಿಕೊಳ್ಳಲೇ ಬೇಕಿದೆ;ಅದು ಅನಿವಾರ್ಯವೇ… ಅಷ್ಟಕ್ಕೂ ನನ್ನ ಅಭಿಪ್ರಾಯದಲ್ಲಿ- ಯಾವುದೇ ವಿದ್ಯೆಯ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಆಗಬೇಕು ನಿಜ; ಆದರೆ ಇಂಗ್ಲೀಷ್ ಕೂಡ ಜತೆ ಜತೆಯಲ್ಲೇ ಸಾಗಬೇಕೆಂಬುದೂ ಅಷ್ಟೇ ಕಠೋರ ಸತ್ಯ!!

    ನಿಮ್ಮ ಉದಾಹರಣೆಯನ್ನೇ ತೆಗೆದುಕೊಳ್ಳೋಣ-"ನೀವು ಕಾಲ್ ಮಾಡಿದ ವ್ಯಕ್ತಿ ನಿಮ್ಮ ಕಾಲನ್ನು ಎತ್ತುತ್ತಿಲ್ಲ…” à²‡à²¦à³ ಆತ ನಿಮ್ಮ à²•à²¾à²²à²¨à³à²¨à³ ಎತ್ತುತ್ತಿಲ್ಲ … ಎಂಬುದು ನಿಮ್ಮ ಅಭಿಪ್ರಾಯವಿರಬಹುದು. ಆದರೆ, ಆ ಸಂದರ್ಭಕ್ಕೆ ಅನುಸಾರವಗಿ ಆತ ನಿಮ್ಮ call ನ್ನು ಎತ್ತುತ್ತಿಲ್ಲ ಎಂಬ (ಕಂಗ್ಷೀಷ್ ಆಧಾರಿತ)ಅರ್ಥವನ್ನು ಪಡೆದಿರುತ್ತದೆ ಅಲ್ಲವೇ…

    -ಎಚ್.ಶಿವರಾಂ

    [http://youthtimes.blogspot.com|LIFE TIMES]

     

     

  2. Pavanaja Pavanaja June 22, 2007

    ಇಂಗ್ಲಿಶ್ ಬೇಕು ಎನ್ನುವುದನ್ನು ನಾನೂ ಒಪ್ಪುತ್ತೇನೆ. ಆದರೆ ಎಲ್ಲಿ ಬೇಕು ಮತ್ತು ಎಷ್ಟು ಬೇಕು ಎಂಬ ಮಿತಿಯ ಪರಿವೆ ಅಗತ್ಯ. ಉದಾಹರಣೆಗೆ ಅಣ್ಣ, ಅಪ್ಪ, ಅಮ್ಮ, ಬೆಳಿಗ್ಗೆ, ಹಾಡು, ಇಷ್ಟವಾದ, ಇತ್ಯಾದಿ ಪದಗಳ ಬದಲಿಗೆ ಈ ಖಾಸಗಿ ಎಫ್.ಎಂ ಚಾನೆಲುಗಳು ಬಳಸುವ ಪದಗಳು -ಬ್ರದರ್, ಫಾದರ್, ಮದರ್, ಮೋರ್ನಿಂಗ್, ಸಾಂಗ್, ಫೇವರಿಟ್, ಇತ್ಯಾದಿ. ಸಾಮನ್ಯವಾಗಿ ಖಾಸಗಿ ಎಫ್.ಎಂ. ಚಾನೆಲುಗಳಲ್ಲಿ ಕೇಳಿ ಬರುವ ವಾಕ್ಯ “ನಾನು ನಿಮ್ಮ ಫೇವರಿಟ್ ಸಾಂಗನ್ನು ನೆಕ್ಸ್ಟ್ ಪ್ಲೇ ಮಾಡುತ್ತೇನೆ”. ಇಲ್ಲಿ ಕನ್ನಡ ಎಲ್ಲಿದೆ ಸ್ವಾಮಿ?

    ಕನ್ನಡ ಮಾಹಿತಿ ತಂತ್ರಜ್ಞಾನ ಸಾಹಿತ್ಯದ ವಿಷಯಕ್ಕೆ ಬಂದಾಗ ಎಲ್ಲಿ ಕನ್ನಡ ಎಲ್ಲಿ ಎಂಗ್ಲಿಶ್ ಎಂಬ ಬಗ್ಗೆ ನನ್ನ ಲೇಖನ ಓದಿ – [http://vishvakannada.com/node/71|http://vishvakannada.com/node/71]

    -ಪವನಜ

  3. ritershivaram ritershivaram June 23, 2007

    ನಿಮ್ಮ ಮಾತು ನಾನು ಒಪ್ಪುತ್ತೇನೆ. ಇಂಥವರಿಗೆ ಈ ಬಗ್ಗೆ ಅರಿವು ಕಾಣಿಸುವುದಾದರೂ ಹೇಗೆ…

    -ಎಚ್.ಶಿವರಾಂ

Leave a Reply

Your email address will not be published. Required fields are marked *