Press "Enter" to skip to content

ನಗೆಹನಿಗಳು – ೦೧

ರಾಜಕಾರಣ ಪ್ರವೇಶ ಮಾಡುತ್ತಿದ್ದ ಮಗನಿಗೆ ಅಪ್ಪ ಹೇಳಿದ “ಮಗನೇ, ರಾಜಕಾರಣದಲ್ಲಿ ಪ್ರಾಮಾಣಿಕತೆ ಜತೆಗೆ ವಿವೇಚನೆ ಮುಖ್ಯ”
ಮಗ “ಪ್ರಾಮಾಣಿಕತೆ ಎಂದರೆ?”
ಅಪ್ಪ “ಅಂದರೆ ನೀನು ಮಾತುಕೊಟ್ಟರೆ ಅದನ್ನು ಪಾಲಿಸಬೇಕು”
ಮಗ “ಹಾಗಾದರೆ ವಿವೇಚನೆ ಎಂದರೇನು?”
ಅಪ್ಪ “ಮಾತು ಕೊಡದೇ ಇರೋದೆ”

ತಿಮ್ಮನ ಹೆಂಡತಿಯನ್ನು ಡಾಕ್ಟರ್ ಪರೀಕ್ಷೆ ಮಾಡಿ ತಲೆಯಲ್ಲಾಡಿಸಿದರು.
“ಏನೂ ಆಗಿಲ್ಲವಯ್ಯಾ, ಚೆನ್ನಾಗಿಯೇ ಇದ್ದಾರೆ”
“ಇಲ್ಲ ಡಾಕ್ಟರೇ, ನೀವು ಸರಿಯಾಗಿ ನೋಡಲಿಲ್ಲ. ಮಾತನಾಡುವಾಗ ಮಧ್ಯೆ ಮಧ್ಯೆ ನಿಲ್ಲಿಸಿಬಿಡುತ್ತಾಳೆ”
“ಏತಕ್ಕೆ?”
“ಉಸಿರಾಡಲಿಕ್ಕೆ”

ಗಂಡ ಹೆಂಡತಿ ಜಗಳವಾಡುತ್ತಿದ್ದುದನ್ನು ಅವನು ಸ್ನೇಹಿತ ಅಕಸ್ಮಾತ್ ನೋಡಿಬಿಟ್ಟ. ಮಾರನೆ ದಿನ ಆ ಮಿತ್ರ ಜಗಳವಾಡುತ್ತಿದ್ದ ಸ್ನೇಹಿತನನ್ನು ಕೇಳಿದ, “ನಿನ್ನೆ ಹೆಂಡತಿಯೊಡನೆ ಜಗಳವಾಡುತ್ತಿದ್ದೆಯಲ್ಲ, ಕೊನೆಗೆ ಏನಾಯಿತು?”
“ಅವಳು ನನ್ನೆದುರು ಮೊಣಕಾಲೂರಿದಳು”
“ಅದು ಹೇಗೆ ಸಾಧ್ಯವಾಯಿತೋ ಮಹರಾಯ?”
“ನಾನು ಮಂಚದ ಕೆಳಗೆ ನುಸುಳಿದ್ದೆ”

ಕೋರ್ಟಿನಲ್ಲಿ ಪಾಟೀಸವಾಲು ನಡೆದಿತ್ತು. “ನೀವು ಯಾರು?” ಕಟಕಟೆಯಲ್ಲಿ ನಿಂತ ಸಾಕ್ಷಿಯನ್ನು ಪ್ರಶ್ನೆಸಿದ ವಕೀಲ. ಸ್ವರ್ಣಾಭರಣಗಳ ವ್ಯಾಪರ ಮಾಡುತ್ತಿದ್ದ ವ್ಯಾಪರಿ ಒಂದು ಕ್ಷಣವೂ ತಡಮಾಡದೆ ಉತ್ತರಿಸಿದ “ನಿಮಗೆ ಗೊತ್ತೇ ಇರುವ ಹಾಗೆ ನಾನೊಬ್ಬ ಸದ್‌ಗೃಹಸ್ಥ”. “ಸರಿಯಗಿಯೇ ಹೇಳಿದಿರಿ. ಅದಕ್ಕಿಂತ ಮೊದಲು ಏನಾಗಿದ್ದಿರಿ?” ವಕೀಲರಿಂದ ಕೂಡಲೇ ಬಂತು ಎರಡನೆ ಪ್ರಶ್ನೆ.

ಶೀಲಾ “ರೀ ಒಂದು ಸೋಪು ಕೊಡಿ.”
ತಿಮ್ಮ “ಮೇಡಂ ಈ ಸೋಪು ತಗೊಳ್ಳಿ. ಬಟ್ಟೆ ಬೆಳ್ಳಗಾಗುತ್ತೆ.”
ಶೀಲಾ “ಹಾಗಾದ್ರೆ ಅದು ಬೇಡಾ. ನಮ್ಮವರ ಕಪ್ಪುಕೋಟು ಬೆಳ್ಳಗಾದ್ರೆ ಕೋರ್ಟಿಗೆ ಹೋಗುವುದು ಹೇಗೆ?”

ಶೀಲಾ ಪ್ಯಾರಾಚೂಟ್ ಕಂಪನಿಯೊಂದರ ಸೇಲ್ಸ್ ಗರ್ಲ್. ಒಮ್ಮೆ ಗಿರಾಕಿಯೊಬ್ಬರೊಡನೆ ನಡೆದ ಮಾತುಕತೆ.
ಶೀಲಾ “ನೋಡಿ ನಮ್ಮ ಕಂಪನಿಯ ಪ್ಯಾರಾಚೂಟ್ ಚೆನ್ನ್ನಾಗಿ ಬರುತ್ತೆ.”
ಗಿರಾಕಿ “ಹೌದಾ, ಮೇಡಂ ನಾವು ವಿಮಾನದಿಂದ ಧುಮುಕುವಾಗ ನಿಮ್ಮ ಪ್ಯಾರಚೂಟಿನ ಗುಂಡಿ ಅದುಮಿದರೂ ಬಿಚ್ಚಿಕೊಳ್ಳದಿದ್ದರೆ ಏನು ಮಾಡುವುದು?”
ಶೀಲಾ “ತತ್‌ಕ್ಷಣ ಬನ್ನಿ, ಬದಲಾಯಿಸಿ ಕೊಡ್ತೀವಿ.”

ರಾಜರು ಹೋದರು. ರಾಜಧಾನಿ ಎಲ್ಲಿಗೆ ಹೋಗಬೇಕು? ದಿಲ್ಲಿಗೆ ಬಂದ ತಿಂಮ ಒಂದು ಸಲ. ಕರ್ನಾಟಕ ಸಂಘದಲ್ಲಿ ತಿಂಮನ ಭಾಷಣ. ಮುಗಿಯಿತು ಕಾರ್ಯಕ್ರಮ. ತಿಂಮ ಓಡಿ ಬಂದು ಗೋಡೆ ಮುಟ್ಟಿ ಮರಳಿ ಹೋಗುವ ಆಸಾಮಿಯೇ? ಕೆಂಪುಕೋಟೆ ನೋಡಿದ. ತಾಜಮಹಲಿಗೂ ಬಂದ. ಕ್ಷೇತ್ರ ಪುರೋಹಿತರ ಜಾತಿಯ ಗೈಡ್‌ಗಳಿಗೆ ತಾಜಮಹಲ್ ಬಳಿ ಕೊರತೆಯಿಲ್ಲ. ಆ ಮಹೋನ್ನತ ಕಲೆಯ ಬಗ್ಗೆ ದೀರ್ಘವಾದ ಉಪನ್ಯಾಸವನ್ನೇ ಮಾಡಿದ ತಿಂಮನ ದರ್ಶಕ. ಏನೂ ತಿಳಿಯಲಿಲ್ಲ ಕಲಾತೀತನಾದ ತಿಂಮನಿಗೆ. ಪಾಪ! “ಒಂದು ಮಾತನ್ನು ಮಾತ್ರ ಗಮನಿಸಬೇಕು ಸ್ವಾಮಿ”
“ಯಾವುದಯ್ಯಾ ಅದು?” ತಿಂಮ ಕೇಳಿದ.
“ಸಹಸ್ರಾರು ವರ್ಷಗಳಾದವು ಈ ತಾಜಮಹಲನ್ನು ಕಟ್ಟಿ, ಅಲ್ಲವೇ? ಒಂದು ಚಿಕ್ಕ ರಿಪೇರಿ ಇಲ್ಲ . ಸುಣ್ಣಬಣ್ಣವಿಲ್ಲ.”
“ತಿಳಿಯಿತು ಬಿಡು” ಎಂದ ತಿಂಮ “ನಾನಿರುವ ಮನೆಯವನೇ ಇದರ ಮಾಲಿಕನಿರಬೇಕು.”

ಮೇಷ್ಟ್ರು: ಸಿದ್ಧಾ, ಭಾರತ ದೇಶದ ಜನಸಂಖ್ಯೆ ಎಷ್ಟೋ?
ಸಿದ್ದಾ : ತೊಂಭತ್ತಾರು ಕೋಟಿ ತೊಂಭತ್ತಾರು ಲಕ್ಷದ ಒಂದು… ಎರಡು… ಮೂರು…ನಾಲ್ಕು.
ಮೇಷ್ಟ್ರು : ಏನೋ ನಿನ್ನ ಪಿಂಡ. ಒಂದು… ಎರಡು…ಸರಿಯಗಿ ಹೇಳೋ?
ಸಿದ್ದಾ : ಸೆಕೆಂಡಿಗೊಂದು ಮಗು ಹುಟ್ತಾ ಇದ್ರೆ, ಇನ್ನು ಹೇಗೆ ಹೇಳಲಿ ಸಾರ್!

ಹುಚ್ಚರಿಬ್ಬರು ಮಾತನಾಡುತ್ತಿದ್ದರು.
ಮೊದಲನೇ ಹುಚ್ಚ : ಲೋ ನೋಡ್ತಾ ಇರು ಸದ್ಯದಲ್ಲೇ ನಾನು ಭಾರತದ ಪ್ರಧಾನ ಮಂತ್ರಿಯಾಗುತ್ತೇನೆ.
ಎರಡನೇ ಹುಚ್ಚ : ಅದು ಸಾಧ್ಯವಿಲ್ಲ.
ಮೊದಲನೇ ಹುಚ್ಚ : ಏಕೆ ಸಾಧ್ಯವಿಲ್ಲ?
ಎರಡನೇ ಹುಚ್ಚ : ನಾನು ಆ ಸ್ಥ್ಥಾನಕ್ಕೆ ರಾಜಿನಾಮೆ ನೀಡಲು ತಯಾರಿಲ್ಲ.

“ಮಾರಾಟ ಮಾಡುವುದರ ಬಗ್ಗೆ ನಿಮಗೇನಾದರೂ ಅನುಭವವಿದೆಯೇ?” ಎಂದು ಸೇಲ್ಸ್‌ಮ್ಯಾನ್ ಕೆಲಸಕ್ಕೆ ಸಂದರ್ಶನಕ್ಕೆ ಬಂದ ವ್ಯಕ್ತಿಯನ್ನು ಆ ಕಂಪನಿಯ ಸೇಲ್ಸ್ ಮ್ಯಾನೇಜರ್ ಪ್ರಶ್ನಿಸಿದರು. “ಓಹೋ… ಸಾಕಷ್ಟು ಇದೆ ಸಾರ್ … ನಾನು ನನ್ನ ಮನೆ ಮಾರಿದ್ದೇನೆ, ಕಾರು ಮಾರಿದ್ದೇನೆ, ಟಿವಿ. ಮಾರಿದ್ದೇನೆ. ನನ್ನ ಹೆಂಡತಿಯ ಮೈಮೇಲಿನ ಎಲ್ಲ ಆಭರಣಗಳನ್ನೂ ಸಹ…”

Be First to Comment

Leave a Reply

Your email address will not be published. Required fields are marked *