ತರಲೆ ಪ್ರಶ್ನೋತ್ತರ – ೦೨

ಪ್ರ: ಬ್ಯಾಂಕಿನ ಕ್ಯಾಷಿಯರ್ ನಗುವುದಿಲ್ಲವೇಕೆ?
ಉ: ಕೌಂಟರಿನ ಮೇಲೆ ಬೋರ್ಡ್ ಹಾಕಿದ್ದಾರೆ `ನಗದು’ ಎಂದು.

ಪ್ರ: ತಿನ್ನಬಹುದಾದ ನಾಯಿ ಯಾವುದು?
ಉ: ಬಿಸಿನಾಯಿ (hotdog)

ಪ್ರ: `ಹಳೆಯದೆಲ್ಲಾ ಚಿನ್ನ’ ಗಾದೆಯನ್ನು ಯಾವಾಗ ಆದರ್ಶವಾಗಿಟ್ಟುಕೊಳ್ಳಬಾರದು?
ಉ: ಮದುವೆಯಾಗುವಾಗ.

ಪ್ರ: ಸ್ವಚ್ಛ ಮೂಗಿನ ಒಳಗೇನು ಕಾಣಸಿಗುತ್ತದೆ?
ಉ: ಬೆರಳಚ್ಚು.

ಪ್ರ: ಹೊಸತನ್ನು ಹಳತಾಗಿಸಲು ನೀವು ಹೊಸತಾಗಿ ಕೊಂಡು ತರುವ ವಸ್ತು ಯಾವುದು?
ಉ: ತಂಗಳು ಪೆಟ್ಟಿಗೆ (ರೆಫ್ರಿಜರೇಟರ್).

ಪ್ರ: ಹೆಂಡತಿ ಬೈಗುಳ ಕಿವಿಗೆ ಬೀಳದಂತಾಗಲು ಸಹಾಯ ಮಾಡುವ ವಸ್ತು ಯಾವುದು?
ಉ: ಹೆಡ್‌ಫೋನ್.

ಪ್ರ: ಹಿಂದಿಯವರೊಡನೆ ಹಿಂದಿಯಲ್ಲಿ, ತಮಿಳರೊಡನೆ ತಮಿಳಿನಲ್ಲಿ, ಮಲೆಯಾಳಿಗಳೊಡನೆ ಮಲೆಯಾಳಂನಲ್ಲಿ, ತೆಲುಗರೊಡನೆ ತೆಲುಗಿನಲ್ಲಿ, ಕನ್ನಡಿಗರೊಡನೆ ಇಂಗ್ಲೀಷಿನಲ್ಲಿ ಮಾತನಾಡುವವ ಯಾರು?
ಉ: ಬೆಂಗಳೂರು ಕನ್ನಡಿಗ.

ಪ್ರ: ರಾಮನು ಸೀತೆಯನ್ನು ಗಟ್ಟಿಯಾಗಿ ಅಪ್ಪಿ ಹಿಡಿದನು -ಇದುಯಾವ ಕಾಲ?
ಉ: ಚಳಿಗಾಲ.

ಪ್ರ: ಮದುವೆಯಲ್ಲಿ ಮಂಗಲಸೂತ್ರ ಕಟ್ಟುವಾಗ `ಸುಲಗ್ನಾ ಸಾವಧಾನ’ ಎಂದು ಮಂತ್ರ ಹೇಳಲು ಕಾರಣವೇನು?
ಉ: ಮುಂದೆ ಅಪಾಯವಿದೆ, ಸಾವಧಾನವಾಗಿ ಮುಂದುವರಿಯಿರಿ ಎಂದು ಎಚ್ಚರಿಸಲು.

ಪ್ರ: ಮಂಗಲಸೂತ್ರಕ್ಕೆ `ತಾಳಿ’ ಎಂದು ಏಕೆ ಕರೆಯುತ್ತಾರೆ?
ಉ: ನೀವು ಜಿವಮಾನವಿಡೀ `ತಾಳಿ’ ಎಂದು ಹೆಂಗಸರಿಗೆ ತಿಳಿಹೇಳಲು (ಮಾ| ಹಿರಣ್ಣಯ್ಯ ಕೃಪೆ).

ಪ್ರ: ಎಲ್ಲಕ್ಕಿಂತ ಸುಲಭವಾದ ದಾನ ಯಾವುದು?
ಉ: ವಾಗ್ದಾನ.

ಪ್ರ: ಎಲ್ಲಕ್ಕಿಂತ ಶ್ರೇಷ್ಠ ದಾನ ಯಾವುದು?
ಉ: ಮೈದಾನ (ಬೀಚಿ ಕೃಪೆ).

ಪ್ರ: ಪ್ರಪಂಚದಲ್ಲಿ ಎಲ್ಲಕ್ಕಿಂತ ಶ್ರೇಷ್ಠವಾದ ಸಮಯ ಉಳಿತಾಯಕ ಯಾವುದು?
ಉ: ಪ್ರಥಮನೋಟದಲ್ಲೇ ಪ್ರೇಮ.

ಪ್ರ: `ಮದುವೆಗಳು ಸ್ವರ್ಗದಲ್ಲಿ ಮಾಡಲ್ಪಟ್ಟಿವೆ’ ಎಂದು ಯಾಕೆ ಹೇಳುತ್ತಾರೆ?
ಉ: ಅನಂತರ ಅವರು ನರಕದಲ್ಲಿ ಜೀವಿಸುತ್ತಾರೆ -ಅದಕ್ಕೆ.

1 Response to ತರಲೆ ಪ್ರಶ್ನೋತ್ತರ – ೦೨

  1. holeppa

    good

Leave a Reply