ತರಲೆ ಪ್ರಶ್ನೋತ್ತರ – ೦೧

ವಿಚ್ಛೇದನಕ್ಕೆ ಪ್ರಮುಖ ಕಾರಣವೇನು?
ವಿವಾಹ.

ಮದುವೆಗೆ ಮೊದಲು ಮಗು, ವಿವಾಹಕ್ಕೆ ಮೊದಲು ವಿಚ್ಛೇದನ, ಕೆಲಸಕ್ಕೆ ಮೊದಲು ಊಟ ಸಿಗುವ ಸ್ಥಳ ಯಾವುದು?
ನಿಘಂಟು.

ಒಡೆದಾಗ ಹೆಚ್ಚು ಉಪಯೋಗಿ ಯಾವುದು?
ತೆಂಗಿನಕಾಯಿ, ಮೊಟ್ಟೆ.

ಒಂದು ಕೆಲಸ ಆಗಬೇಕಿದ್ದರೆ ಏನು ಮಾಡಬೇಕು?
ನಿಮ್ಮ ಮಕ್ಕಳಿಗೆ ಅದನ್ನು ಮಾಡಬೇಡಿ ಎಂದು ಹೇಳಬೇಕು.

ಲಂಚ ತೆಗೆದುಕೊಳ್ಳುವುದು ತಪ್ಪೇ?
ತೆಗೆದು ಕೊಳ್ಳುವುದು ತಪ್ಪಲ್ಲ, ಸಿಕ್ಕಿಬೀಳುವುದು ತಪ್ಪು.

ಬಿಡುವಿನ ವೇಳೆ ಬೇಕಿದ್ದರೆ ಏನು ಮಾಡಬೇಕು?
ಗಡಿಯಾರವನ್ನು ಕ್ಸೆರಾಕ್ಸ್ ಮಾಡಿ.

ಹಾಲು ಕೆಡದಿರಬೇಕಾದರೆ ಏನು ಮಾಡಬೇಕು?
ಅದನ್ನು ದನದ ಕೆಚ್ಚಲಲ್ಲೇ ಬಿಟ್ಟುಬಿಡಬೇಕು.

ನಾಸ್ತಿಕರಿಗೆ ಸ್ವರ್ಗದಲ್ಲೇನು ಕೆಲಸ?
ವಿರೋಧ ಪಕ್ಷದ ಸದಸ್ಯರಾಗಿ.

ಇಲಿಗೆ ಬಾಲ ಯಾಕೆ ಇದೆ?
ಸತ್ತ ನಂತರ ಹೆಣವನ್ನು ಎಳೆದು ತೆಗೆದುಕೊಂಡು ಹೋಗಲು.

ಸೊಳ್ಳೆ ಯಾಕೆ ಸಂಗೀತ ನುಡಿಸುತ್ತದೆ?
ಕುಡಿದ ರಕ್ತದ ಋಣವನ್ನು ಸಂಗೀತ ಸೇವೆಯ ಮೂಲಕ ತೀರಿಸಲು (ಪಾವೆಂ ಕೃಪೆ).

Leave a Reply