ಅನರ್ಥಕೋಶ

ಬಿಲ್ವಿದ್ಯೆ = ಸ್ನೇಹಿತರ ಜೊತೆ ಹೋಟೆಲಿಗೆ ಹೋಗಿ ಚೆನ್ನಾಗಿ ತಿಂದು ಬಿಲ್ಲನ್ನು ಸ್ನೇಹಿತರ ಕೈಲಿ ಕೊಡಿಸುವ ವಿದ್ಯೆ.
ಜನಕರಾಜ = (ಹೋಟೆಲಿನ) ಬಿಲ್ಲು ಎತ್ತಿದವನಿಗೆ ಮಗಳನ್ನು ಕೊಡುವವ.
ಆಶ್ವಾಸನೆ = ಹಲ್ಲು ತೊಳೆಯದ ಆಶಾಳ ಬಾಯಿಯಿಂದ ಬರುವ ವಾಸನೆ.
ವೈಣಿಕ = ವೀಣೆ ಬಾರಿಸುವವ ಅರ್ಥಾತ್ ವೀಣಾಳ ಗಂಡ.
ಗಂಧರ್ವ = ದೇವಸ್ಥಾನದಲ್ಲಿ ಗಂಧ ಅರೆಯುವವ.
ಅಷ್ಟೋತ್ತರ = ಎಷ್ಟು ಪ್ರಶ್ನೆಯೋ ಅಷ್ಟೇ ಉತ್ತರ.
ಮರಣೋತ್ತರ = `ನಾನೇಕೆ ಸತ್ತೆ’ ಎಂಬ ಪ್ರಶ್ನೆಗೆ ಯಮ ಕೊಡುವ ಉತ್ತರ.
ವೈಕುಂಠ = ಕುಂಟಿಕೊಂಡು ನಡೆಯುತ್ತಿರುವವನಿಗೆ ಕೇಳುವ ಪ್ರಶ್ನೆ.
ವೈದೇಹಿ = ಭಿಕ್ಷೆ ಬೇಡುತ್ತಿರುವವಳಿಗೆ ಕೇಳುವ ಪ್ರಶ್ನೆ.
ಬರಹ = ನೀರಿಲ್ಲದ ಊರಿನ ಜನರ ಹಾಹಾಕಾರ.
ನರಹರಿ = ಕುಟುಂಬ ಯೋಜನೆ ಶಸ್ತ್ರಚಿಕಿತ್ಸೆ (ತುರ್ತು ಪರಿಸ್ಥಿತಿ ಮತ್ತು ಸಂಜಯ ಗಾಂಧಿ ನೆನಪು ಮಾಡಿಕೊಳ್ಳಿ).
ಗಾಂಧಾರಿ = ನಾಥೂರಾಮ ಗೋಡ್ಸೆ.
ತಿಲಾಂಜಲಿ = ಅಂಜಲಿ ಎಂಬಾಕೆ ಎಳ್ಳು ಬೀರಿದ್ದು.
ತಿಲೋತ್ತಮೆ = ಉತ್ತಮ ಎಳ್ಳು ಮಾರುವಾಕೆ.
ನಿರ್ವಾಹಕಿ = ನೀರು ತರುವಾಕೆ.
ಅಭಿಯಂತರ = ಅಭಿಪ್ರಾಯ ತಿಳಿಸುವ ಯಂತ್ರ (Voting Machine).
ಧನಂಜಯ = ದುಡ್ಡೇ ದೊಡ್ಡಪ್ಪ ಎನ್ನುವವ (ಬ್ಯಾಂಕ್ ಮ್ಯಾನೇಜರ್?).
ದುಶ್ಯಾಶನ = ಕೆಟ್ಟ ಕಾನೂನು.
ನಕುಲ = ಜಾತಿಯಿಲ್ಲದವ.
ಅನಾಮಧೇಯ = ನಾಮವಿಲ್ಲದ ದೆವ್ವ.
ಗಾಯತ್ರಿ = ಮೂರು ಸಲ ಗಾಯ ಮಾಡಿಕೊಂಡವಳು.
ವಿಧಾತ್ರಿ = ಮೂರು ರೀತಿಯಲ್ಲಿ ವ್ಯವಹರಿಸುವವಳು.
ವಿಮರ್ಶಕ = ಕವಿಯಾಗಲು ಪ್ರಯತ್ನಿಸಿ ಸೋತವ.
ದಶರಥ = ಹೆಂಡತಿಗೆ ಮಾತು ಕೊಟ್ಟು ಸಿಕ್ಕಿಹಾಕಿಕೊಳ್ಳುವವ.
ಭರತ = ಬೇರೆಯವರ ಚಪ್ಪಲಿ ಕೊಂಡೊಯ್ಯುವವ.
ಸಂಪಾದಕರು = ಚೆನ್ನಾಗಿ ಬೆಳೆದ ಕರು.

3 Responses to ಅನರ್ಥಕೋಶ

  1. Chandrashekar

    Thumba thumba chennagide.. Anuvaada madidavarige koti koti namana….

  2. Anil

    Chenagide. Kelavondu parvagilla ansatte.

  3. admin

    @Chandrashekar – “koti koti namana” ಅಂದ್ರೆ ಕೋತಿ ಕೋತಿ ನಮನ? 🙂

    -ಪವನಜ

Leave a Reply