Press "Enter" to skip to content

ಕೊನೆಗೂ ಯುನಿಕೋಡ್ ಜಾರಿ

ಕರ‍್ನಾಟಕ ಸರಕಾರವು ೨೦೦೮ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ| ಚಿದಾನಂದ ಗೌಡರ ಅಧ್ಯಕ್ಷತೆಯಲ್ಲಿ ಕನ್ನಡ ತಂತ್ರಾಂಶ ಸಲಹಾ ಸಮಿತಿಯನ್ನು ನೇಮಿಸಿತ್ತು. ಅದು ೨೦೧೦ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ವರದಿಯಲ್ಲಿ ಸೂಚಿಸಿದ ಒಂದು ಪ್ರಮುಖ ಅಂಶವೆಂದರೆ ಕರ‍್ನಾಟಕ ಸರಕಾರವು ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳಲ್ಲಿ ಕನ್ನಡದ ಬಳಕೆಯನ್ನು ಯುನಿಕೋಡ್ ಮೂಲಕವೇ ಮಾಡತಕ್ಕದ್ದು ಎಂದು ಅಧಿಸೂಚನೆ ಹೊರಡಿಸುವುದು. ಕೊನೆಗೂ ಈ ಅಧಿಸೂಚನೆ ಹೊರಟಿದೆ. ಇನ್ನು ಮುಂದೆ ಸರಕಾರದ ಎಲ್ಲ ಕೆಲಸ ಕಾರ‍್ಯಗಳಲ್ಲಿ ಕನ್ನಡ ಭಾಷೆಯನ್ನು ಮಾಹಿತಿ ತಂತ್ರಜ್ಞಾನದ ಮೂಲಕ ಬಳಕೆ ಮಾಡುವಾಗ ಯುನಿಕೋಡ್ ವಿಧಾನದಲ್ಲೇ ಮಾಡತಕ್ಕದ್ದು. ಇದು ಕೇವಲ ಗಣಕಗಳಿಗೆ ಮಾತ್ರವಲ್ಲ, ಎಟಿಎಂ, ಮೊಬೈಲ್, ಅಂತರಜಾಲ ತಾಣ, ಪತ್ರ ವ್ಯವಹಾರ, ಪತ್ರಿಕಾ ಪ್ರಕಟಣೆ -ಹೀಗೆ ಎಲ್ಲ ಅಂಗಗಳಿಗೂ ಅನ್ವಯಿಸುತ್ತದೆ. ಅಧಿಸೂಚನೆಯ ಪ್ರತಿ ಇಲ್ಲಿದೆ.

2 Comments

  1. ವಿ.ರಾ.ಹೆ. ವಿ.ರಾ.ಹೆ. December 12, 2012

    ಅಧಿಸೂಚನೆ ಕೇವಲ ಇಂಗ್ಲೀಷ್ ನಲ್ಲಿರುವುದು ವಿಪರ್ಯಾಸ ಮತ್ತು ಖಂಡನೀಯ !

  2. ಆನಂದ್ ಕುಮಾರ್ ಕೆ.ಎಸ್. ಆನಂದ್ ಕುಮಾರ್ ಕೆ.ಎಸ್. November 2, 2015

    ಅಧಿಸೂಚನೆಯನ್ನ ಕನ್ನಡದಲ್ಲಿ ಯಾಕೆ ಹೊರಡಿಸಿಲ್ಲ ಅದರಲ್ಲೂ ಯಾಕೆ ತಾರತಮ್ಯ

Leave a Reply

Your email address will not be published. Required fields are marked *