“ಶುಕ್ರಗ್ರಹದ ಸಂಕ್ರಮ” ವಿಶೇಷ ಕಮ್ಮಟಗಳು
ಬೆಂಗಳೂರು, ಏಪ್ರಿಲ್ ೨೫ (ಕರ್ನಾಟಕ ವಾರ್ತೆ) : ಜೂನ್ ೦೬ ರಂದು ನಡೆಯಲಿರುವ “ಶುಕ್ರಗ್ರಹದ ಸಂಕ್ರಮ “ ಎಂಬ ವಿಶೇಷ ಖಗೋಳೀಯ ಘಟನೆ ಶತಮಾನಕ್ಕೆ ಒಮ್ಮೆ ನಡೆಯುವಂತಹುದು. ಚಂದ್ರನ ಬದಲು ಶುಕ್ರಗ್ರಹ ಸೂರ್ಯನ ಮುಂದೆ ಹಾದು ಹೋಗುವುದು. ಮುಂದೆ ಬರಲಿರುವ ಶುಕ್ರ ಸಂಕ್ರಮ ೨೧೧೭ರಲ್ಲಿ. ಈ ಘಟನೆಯ ವೀಕ್ಷಣೆ ಮತ್ತು ಇದರ ಬಗ್ಗೆ ಸರಿಯಾದ ತಿಳುವಳಿಕೆ ಮೂಡಿಸಲು ತಾರಾಲಯವು ಒಂದು ದಿನದ ವಿಶೇಷ ಕಮ್ಮಟವನ್ನು ಹಮ್ಮಿಕೊಂಡಿದೆ. ಏಪ್ರಿಲ್ ೨೯ ಮತ್ತು ಮೇ ೧೩ ರಂದು ನಡೆಯುವ ಈ ಕಮ್ಮಟಗಳು ವಿಶೇಷವಾಗಿ ಶಿಕ್ಷಕರಿಗೆಂದೇ ಆಯೋಜಿಸಲಾಗಿದೆ. ವೈಜ್ಞಾನಿಕ ಶಿಕ್ಷಣದಲ್ಲಿ ಆಸಕ್ತಿಯುಳ್ಳ ಇತರರೂ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ತಾರಾಲಯದ ಕಚೇರಿ ದೂರವಾಣಿ ಸಂ: ೨೨೩೭೯೭೨೫/೨೨೨೬೬೦೮೪ ಅಥವಾ ವೆಬ್‌ಸೈಟ್ www.taralaya.org ಅನ್ನು ಸಂಪರ್ಕಿಸಬಹುದಾಗಿದೆ.