Press "Enter" to skip to content

ಸಿ ಆರ್ ಚಂದ್ರಶೇಖರ್ ಜೊತೆ ಮನೆಯಂಗಳದಲ್ಲಿ ಮಾತುಕತೆ

ಬೆಂಗಳೂರು,ನವಂಬರ್ ೧೯, ೨೦೦೫: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಪ್ರತಿ ತಿಂಗಳು ನಡೆಸುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಖ್ಯಾತ ಮನೋವೈದ್ಯ ಮತ್ತು ಸಾಹಿತಿ ಡಾ. ಸಿ ಆರ್ ಚಂದ್ರಶೇಖರ್ ಭಾಗವಹಿಸಿದ್ದರು. ಜನರು ಕೇಳಿದ ಪ್ರಶ್ನೆಗಳಿಗೆ ಆಸಕ್ತಿಯಿಂದ ಉತ್ತರಿಸಿದರು. ಅವರು ಇದು ತನಕ ಹಲವು ಕಡೆ ಹೇಳಿದ ಮತ್ತು ತಮ್ಮ ಲೇಖನಗಳಲ್ಲಿ ಬರೆದ ವಿಷಯಗಳನ್ನೇ ಮತ್ತೊಮ್ಮೆ ವಿಶದೀಕರಿಸಿದರು. ಅವರ ಎಲ್ಲ ಲೇಖನಗಳನ್ನು ಓದಿದವರಿಗೆ ಹೊಸದೇನೂ ಸಿಕ್ಕಿರಲಿಕ್ಕಿಲ್ಲ. ಆದರೆ ಆಸಕ್ತಿಯಿಂದ ಭಾಗವಹಿಸಿದ ಜನರಿಗೆ ತಮ್ಮ ಹಲವು ಸಮಸ್ಯೆ, ಪ್ರಶ್ನೆಗಳಿಗೆ ಉತ್ತರ ಸಿಕ್ಕಿದಂತಾಗಿರಬಹುದು. ಕೆಲವು ಮಾತುಗಳು-
“ಮಾನಸಿಕ ನೆಮ್ಮದಿಗೆ ಮೂಲ ನೆಮ್ಮದಿಯ ಜೀವನ. ಇದ್ದುದರಲ್ಲಿ ತೃಪ್ತಿ ಪಡಬೇಕು.”
“ಬಹುಪಾಲು ದೈಹಿಕ ಖಾಯಿಲೆಗಳಿಗೆ ಮಾನಸಿಕ ಖಾಯಿಲೆಯೂ ಒಂದು ಕಾರಣ.”
“ಆಸೆಯೇ ದಃಖಕ್ಕೆ ಮೂಲ ಎಂದು ಬುದ್ಧ ಹೇಳಿರಬಹುದು. ಆದರೆ ಮನುಷ್ಯರಿಗೆ ಬದುಕಲು ಆಸರೆಯಾಗಿ ಆಸೆ ಬೇಕೇ ಬೇಕು. ಎಷ್ಟು ಆಸೆ ಬೇಕು ಎಂಬುದಕ್ಕೆ ಮಿತಿ ಇಟ್ಟುಕೊಳ್ಳಬೇಕು. ಆಸೆ, ಮಹದಾಸೆ (ಮಹತ್ವಾಕಾಂಕ್ಷೆ) ಮತ್ತು ದುರಾಸೆ -ಇವುಗಳಲ್ಲಿ ಆಸೆ ಬೇಕು. ಮಹದಾಸೆ ಇದ್ದರೆ ಅಡ್ಡಿಯಿಲ್ಲ. ಆದರೆ ನಿಮ್ಮ ಕರ್ತತ್ವ ಶಕ್ತಿಯ ಮಿತಿಯಲ್ಲಿರಲಿ. ದುರಾಸೆ ಖಂಡಿತ ಬೇಡ.”
“ಮೊಬೈಲ್ ಫೋನ್‌ಗಳನ್ನು ಬಳಸುವುದರಿಂದ ಮೆದುಳಿಗೆ ಹಾನಿಯಾಗುತ್ತದೆ ಎಂಬುದನ್ನು ಇನ್ನೂ ವೈಜ್ಞಾನಿಕವಾಗಿ ಸಾಧಿಸಲಾಗಿಲ್ಲ.”
“ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದು ಅತೀ ಅಗತ್ಯ.”

Be First to Comment

Leave a Reply

Your email address will not be published. Required fields are marked *