ರಾಜ್ಯಮಟ್ಟದ ಕೃಷಿಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ
ಧಾರವಾಡದ ಪರ್ಯಾಯ ಕೃಷಿಮಾಧ್ಯಮ ಕೇಂದ್ರ ಸ್ಥಾಪಿಸಿರುವ ರಾಜ್ಯಮಟ್ಟದ ಕೃಷಿಪತ್ರಿಕೋದ್ಯಮ ಪ್ರಶಸ್ತಿಗೆ ೨೦೦೫ನೇ ಸಾಲಿಗಾಗಿ ಶಿರಸಿಯ ಸುಬ್ರಹ್ಮಣ್ಯ ಎಮ್. ಹೆಗಡೆ ಹಾಗೂ ಬೆಂಗಳೂರಿನ ವಿ. ಗಾಯತ್ರಿ ಆಯ್ಕೆಯಾಗಿದ್ದಾರೆ.
ಕನ್ನಡದಲ್ಲಿ ಅರ್ಥಪೂರ್ಣ ಕೃಷಿಪತ್ರಿಕೋದ್ಯಮಕ್ಕೆ ಉತ್ತೇಜನ ನೀಡುವುದಕ್ಕಾಗಿ ಕೃಷಿಮಾಧ್ಯಮ ಕೇಂದ್ರ ಎರಡು ವಿಭಾಗಗಳಲ್ಲಿ ಪ್ರಶಸ್ತಿ ನೀಡುತ್ತಿದೆ. ಈ ಬಾರಿ ಕೃಷಿಕರ ವಿಭಾಗದಲ್ಲಿ ಸುಬ್ರಹ್ಮಣ್ಯ ಎಮ್. ಹೆಗಡೆ ಅವರ ‘ಅಡಿಕೆ ತೋಟ – ಬೇರುಹುಳಗಳ ಕಾಟದಿಂದ ರಕ್ಷಣೆ’ (ಸುಜಾತ ಸಂಚಿಕೆ : ಆಗಸ್ಟ್ ೨೦೦೫) ಲೇಖನ ಪ್ರಶಸ್ತಿಗಾಗಿ ಆಯ್ಕೆಯಾಗಿದೆ. ಮುಕ್ತ ವಿಭಾಗದಲ್ಲಿ ವಿ. ಗಾಯತ್ರಿ ಅವರ ಲೇಖನ – ‘ಸಾವಯವ ಬೇಸಾಯದಲ್ಲಿ ರೈತರೇ ನಮ್ಮ ಗುರುಗಳು’ (ಸಹಜ ಸಾಗುವಳಿ : ಜುಲೈ-ಆಗಸ್ಟ್ ೨೦೦೫) ಪ್ರಶಸ್ತಿಗೆ ಆಯ್ಕೆಗೊಂಡಿದೆ.
ಪ್ರಶಸ್ತಿ ತಲಾ ಎರಡು ಸಾವಿರ ರೂಪಾಯಿ ನಗದು ಪುರಸ್ಕಾರ, ಪರಿಸರ ಶಿಲ್ಪ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ ೧೮, ೨೦೦೫ರಂದು ಹುಬ್ಬಳ್ಳಿ ಸಮೀಪದ ಸೂರಶೆಟ್ಟಿಕೊಪ್ಪದಲ್ಲಿ ಜರುಗಲಿದೆ.
ಪರ್ಯಾಯ ಕೃಷಿಮಾಧ್ಯಮ ಕೇಂದ್ರದ ಅಂತರಜಾಲ ತಾಣದ ವಿಳಾಸ –http://www.farmedia.org. ಇದು ಇಂಗ್ಲೀಶ್ ಭಾಷೆಯಲ್ಲಿದೆ.