"ರಮ್ಯ"ದವರ ಧ್ವನಿಸುರುಳಿ-ಸಿಡಿ. ಬಿಡುಗಡೆ

ಬೆಂಗಳೂರು, ಜನವರಿ ೯, ೨೦೦೬: ರಮ್ಯ ಕಲ್ಚರಲ್ ಅಕಾಡೆಮಿ (ರಿ) ಬೆಂಗಳೂರು ಇವರು ಹೊರತಂದಿರುವ “ತರಂಗ ಲೀಲೆ” ಭಾವಗೀತೆಗಳ ಧ್ವನಿಸುರುಳಿ ಮತ್ತು ಸಿ.ಡಿ.ಗಳ ಬಿಡುಗಡೆ ನಗರದ ಸುಚಿತ್ರ ಫಿಲ್ಮ್ ಸೊಸೈಟಿಯ ಆವರಣದಲ್ಲಿರುವ ಪೀರ್ ಬಯಲುರಂಗ ಮಂದಿರದಲ್ಲಿ ಜರುಗಿತು. ಧ್ವನಿಸುರುಳಿ ಮತ್ತು ಸಿಡಿಗಳನ್ನು ಖ್ಯಾತ ಕವಿ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಲೋಕಾರ್ಪಣೆ ಮಾಡಿ ಮಾತನಾಡಿದರು. ವೇದಿಕೆಯಲ್ಲಿ ಮಾ. ಹಿರಣ್ಣಯ್ಯ, ಸಿ.ಡಿ.-ಧ್ವನಿಸುರುಳಿಯಲ್ಲಿ ಅಳವಡಿಸಿರುವ ಹಾಡುಗಳನ್ನು ರಚಿಸಿದ ಕವಿ ಡಾ. ಲಕ್ಷ್ಮೀನಾರಾಯಣ ಭಟ್ಟ, ಮಿಮಿಕ್ರಿ ದಯಾನಂದ, ರಮ್ಯ ಅಕಾಡೆಮಿಯ ಬಾಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದಿವಂಗತ ಮೈಸೂರು ಅನಂತಸ್ವಾಮಿಯವರು ನಿಧನರಾಗಿ ಹನ್ನೊಂದು ವರ್ಷಗಳಾದ ನೆನಪಿನಲ್ಲಿ “ಅನಂತ ನಮನ” ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ರಾಜು ಅನಂತಸ್ವಾಮಿ ಮತ್ತು ಅವರ ತಂಡದವರಿಂದ ಭಾವಗೀತೆಗಳ ಕಾರ್ಯಕ್ರಮವಿತ್ತು. ರಾಜು ಅನಂತಸ್ವಾಮಿ ಮತ್ತು ಅವರ ತಂಡದವರು ಕನ್ನಡ ಗೀತೆಗಳನ್ನು ನೂತನವಾದ ಕವ್ವಾಲಿ ಶೈಲಿಯಲ್ಲಿ ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ರಾಜು ಅನಂತಸ್ವಾಮಿ ಸಂಗೀತ ನಿರ್ದೇಶನದ “ಸವಿತ” ಎಂಬ ಹೆಸರಿನ ಸಿ.ಡಿ.-ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವೂ ಇತ್ತು.

Leave a Reply