ರಘುನಾಥ ಚ.ಹ. ಅವರ ಪುಸ್ತಕ ಬಿಡುಗಡೆ

ಬೆಂಗಳೂರು, ೧೭, ೨೦೦೬: ಕವಿ, ಕಥೆಗಾರ ಹಾಗೂ ಪತ್ರಕರ್ತರೂ ಆಗಿರುವ ರಘುನಾಥ ಚ.ಹ. ಅವರ ಹೊಸ ಪುಸ್ತಕ “ಹೊರಗೂ ಮಳೆ ಒಳಗೂ ಮಳೆ” ಬಿಡುಗಡೆ ಕಾರ್ಯಕ್ರಮ ಇಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ನೆರವೇರಿತು. ತಮ್ಮ “ತೇರು” ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ರಾಘವೇಂದ್ರ ಪಾಟೀಲರು ಪುಸ್ತಕದ ಬಿಡಗಡೆ ಮಾಡಿದರು. ಅವರು ಮಾತನಾಡುತ್ತ “ರಘುನಾಥರ ಕಥೆಗಳಲ್ಲಿ ಆದರ್ಶದ ಹುಡಕಾಟ ಇರುವಂತೆ ಕಾಣುತ್ತದೆ. ಕೆಲವೊಮ್ಮ ಈ ಆದರ್ಶದ ಹುಡುಕಾಟದಲ್ಲಿ ಕಥೆಗಾರ ಸೋಲುತ್ತಾನೆ. ಹೆಚ್ಚಿನ ಕಥೆಗಳು ಭಾವಗೀತೆಗಳಂತಿವೆ” ಎಂದರು. ಮಂಜುನಾಥರು ಕಥೆಗಳ ಬಗ್ಗೆ ಮಾತನಾಡಿದರು. ಕಥಾಸಂಕಲನವನ್ನು ಪ್ರಕಟಿಸಿರುವ “ಸಂಚಯ”ದ ಡಿ.ವಿ. ಪ್ರಹ್ಲಾದ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಜಯಪ್ರಕಾಶ ನಾರಾಯಣ ಸ್ವಾಗತ ಭಾಷಣ ಮಾಡಿದರು. ಕೊನೆಯಲ್ಲಿ ಎಸ್. ದಿವಾಕರ ನಡೆಸಿಕೊಟ್ಟ “ಕಥೆಗಳ ಕಥೆಗಳು” ಸಂವಾದ ಕಾರ್ಯಕ್ರಮದಲ್ಲಿ ಅಶೋಕ ಹೆಗಡೆ, ಆನಂದ ಋಗ್ವೇದಿ, ಹಾಗೂ ಇತರರು ಪಾಲ್ಗೊಂಡರು.

Leave a Reply