ಮೈಸೂರಿನಲ್ಲಿ ವಿಂಡೋಸ್ ಫೋನ್ ತಂತ್ರಾಂಶ ತಯಾರಿ ದಿನ
ಮೈಸೂರು ಗೀಕ್ಸ್ ಎಂಬುದು ತಂತ್ರಜ್ಞಾನದ ಬಗ್ಗೆ ಅತಿಯಾಗಿ ಆಸಕ್ತಿ ಹೊಂದಿರುವವ ಬಳಗ. ಈ ಬಳಗ ಆಗಾಗ್ಗೆ ತಂತ್ರಜ್ಞಾನದ ಬಗ್ಗೆ ಒಬ್ಬರಿಗೊಬ್ಬರು ವಿಚಾರವಿನಿಮಯ ಮಾಡಿಕೊಳ್ಳಲು ಸಭೆ ಸೇರುತ್ತಾರೆ. ಚರ್ಚೆ, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುತ್ತಾರೆ. ಈ ಹಿಂದೆ ಅಂತಹ ಹಲವರು ಸಭೆಗಳನ್ನು ನಡೆಸಿದ್ದಾರೆ. ಈ ಮಾಲಿಕೆಯಲ್ಲಿ ಮುಂದಿನ ಸಭೆ ಮಾರ್ಚ್ ೧೧ರಂದು ಜರುಗಲಿದೆ. ಈ ಸಲ ಈ ಸಭೆ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ‍್ ಸಯನ್ಸ್ ವಿಭಾಗದ ಸಭಾಗೃಹದಲ್ಲಿ ನಡೆಯಲಿದೆ. ಈ ಸಲ ವೀಮಡೋಸ್ ಫೋನಿಗೆ ತಂತ್ರಾಂಶ ತಯಾರಿ ನಡೆಸುವುದು ಹೇಗೆ ಎಂಬ ಬಗ್ಗೆ ಪ್ರಸೆಂಟೇಶನ್ ಮತ್ತು ಪ್ರಾತ್ಯಕ್ಷಿಕೆಗಳಿವೆ. ಹೆಚ್ಚಿನ ವಿವರಗಳನ್ನು ಮೈಸೂರು ಗೀಕ್ಸ್‌ನವರ ಜಾಲತಾಣದಲ್ಲಿ ಓದಬಹುದು.