ಪರಿಸರ ಪ್ರಶಸ್ತಿಗಾಗಿ ಅರ್ಜಿ-ನಾಮನಿರ್ದೇಶನ ಆಹ್ವಾನ

ಬೆಂಗಳೂರು, ಮಾರ್ಚ್ ೦೬( ಕರ್ನಾಟಕ ವಾರ್ತೆ) :  ಪರಿಸರ ಸಂರಕ್ಷಣೆಗಾಗಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿ-ಸಂಸ್ಥೆಗಳನ್ನು ಗುರುತಿಸಲು ೨೦೧೧-೨೦೧೨ನೇ ಸಾಲಿನ ರಾಜ್ಯ ಪರಿಸರ ಪ್ರಶಸ್ತಿಗಾಗಿ ಅರ್ಜಿ/ನಾಮನಿರ್ದೇಶನಗಳನ್ನು ಅರಣ್ಯ ಮತ್ತು ಪರಿಸರ ಇಲಾಖೆವತಿಯಿಂದ ಆಹ್ವಾನಿಸಲಾಗಿದೆ.

ಈ ಪ್ರಶಸ್ತಿ ತಲಾ ೧.೦೦ ಲಕ್ಷ ರೂ.ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.  ಈ ಪ್ರಶಸ್ತಿಯನ್ನು ವ್ಯಕ್ತಿ ಮತ್ತು ಸಂಸ್ಥೆಗಳ (ಸರ್ಕಾರಿ ವಲಯ, ಸರ್ಕಾರೇತರ ಸಂಸ್ಥೆ, ಕಂಪನಿ ಟ್ರಸ್ಟ್‌ಗಳು ಇತರೆ), ಪರಿಸರ ಸಂರಕ್ಷಣೆ ಮತ್ತು ಪರಿಸರ ವ್ಯವಸ್ಥಾಪನೆ ಕ್ಷೇತ್ರಗಳಲ್ಲಿನ ಗಣನೀಯ ಸೇವೆಗಾಗಿ ನೀಡಲಾಗುವುದು.

ಈ ಪ್ರಶಸ್ತಿಗಳನ್ನು   ರಾಜ್ಯದ ಮೂರು ವಲಯಗಳಾದ ಮಲೆನಾಡು, ಕರಾವಳಿ ವಲಯ (ಬೆಳಗಾಂ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಕೊಡಗು,ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳು) ದಕ್ಷಿಣ ವಲಯ (ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳು) ಮತ್ತು ಉತ್ತರ ವಲಯ (ದಾವಣಗೆರೆ, ಚಿತ್ರದುರ್ಗ, ಹಾವೇರಿ, ಧಾರವಾಡ ಗದಗ್, ಬಳ್ಳಾರಿ, ಬಾಗಲಕೋಟೆ, ಬಿಜಾಪುರ, ಬೀದರ್, ಗುಲ್ಬರ್ಗಾ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು)ಗಳ ತಲಾ ಒಬ್ಬರು ವ್ಯಕ್ತಿ ಮತ್ತು ಒಂದು ಸಂಸ್ಥೆಗೆ ನೀಡಲಾಗುವುದು.
ಪ್ರಶಸ್ತಿಗೆ ಆಯ್ಕೆ ಮಾಡುವಾಗ ಈ ಕೆಳಗಿನ ಒಂದು ಅಥವಾ ಉಭಯ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆ, ಆರಂಭ ಶೀಲತೆ, ಯೋಜನೆ ,ಕಾರ್ಯಕ್ರಮಗಳ ಮೂಲಕ ನೀಡಿರುವ ಕೊಡುಗೆಯ ಮೌಲ್ಯ  ನಿರ್ಣಯ ಮಾಡಲಾಗುವುದು.
ಪರಿಸರ ಸಂರಕ್ಷಣೆಯಲ್ಲಿ  ಜೈವಿಕ ವೈವಿಧ್ಯತೆ, ಜೈವಿಕ ವ್ಯವಸ್ಥೆ, ವಾಯು, ಜಲ, ಮಣ್ಣು, ನೈಸರ್ಗಿಕ ಸಸ್ಯರಾಶಿ, ವನ್ಯಜೀವಿ ಇತ್ಯಾದಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ  ಮತ್ತು ಸಹ್ಯ ವ್ಯವಸ್ಥಾಪನೆ ಇತ್ಯಾದಿ ಒಳಗೊಂಡಿರುತ್ತದೆ.
ಪರಿಸರ ವ್ಯವಸ್ಥಾಪನೆ ಯಲಿ  ಸದೃಢ ಮತ್ತು ಗುಣಾತ್ಮಕ ಪರಿಸರ ಅಭ್ಯಾಸಗಳು, ಸಂಸ್ಕರಣೆ ಅಥವಾ ಪದಾರ್ಥಗಳ ಬಳಕೆಯಲ್ಲಿ  ಪರಿಸರ ಮಾಲಿನ್ಯ ಕಡಿಮೆಗೊಳಿಸುವುದು.  ಸಂಪನ್ಮೂಲಗಳ ಸಂರಕ್ಷಣೆ ಮತ್ತು  ಸಹ್ಯ ಅಭಿವೃಧ್ಧಿಯ ಧ್ಯೇಯ ಹೊಂದಿರುವುದು ಇತ್ಯಾದಿ ಒಳಗೊಂಡಿರುತ್ತದೆ.
ವ್ಯಕ್ತಿಯ ಹೆಸರು, ವ್ಯವಹರಿಸಬೇಕಾದ ವಿಳಾಸ, ನಿರ್ವಹಿಸಲಾದ ಯೋಜನೆಗಳು,ಆರ್ಥಿಕ ಸಹಾಯದ ಮೂಲಗಳು, ಪ್ರಶಸ್ತಿ ಪುರಸ್ಕಾರಗಳು ಹಾಗೂ ಪ್ರತಿಪಾದನೆಗೆ ದಾಖಲೆಗಳನ್ನು ಲಗತ್ತಿಸಿ ಸರ್ಕಾರದ ಕಾರ್ಯದರ್ಶಿಗಳು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ (ಜೀವಿಶಾಸ್ತ್ರ ಮತ್ತು ಪರಿಸರ) ಕೊಠಡಿ ಸಂಖ್ಯೆ  ೭೦೮, ೭ನೇ ಮಹಡಿ, ಬಹುಮಹಡಿಗಳ ಕಟ್ಟಡ, ೪ನೇ ಹಂತ, ಬೆಂಗಳೂರು-೫೬೦೦೦೧ ಇವರಿಗೆ ಕಳುಹಿಸಬಹುದಾಗಿದೆ.

Leave a Reply