"ತುತ್ತೂರಿ" ಚಿತ್ರದ ಧ್ವನಿಸುರುಳಿ ಬಿಡುಗಡೆ

ಬೆಂಗಳೂರು, ಮೇ ೧೦, ೨೦೦೬: ಸೌಂದರ್ಯ ಆರ್ಟ್ಸ್ ಲಾಂಛನದಲ್ಲಿ ಶ್ರೀಮತಿ ಜಯಮಾಲ ರಾಮಚಂದ್ರ ನಿರ್ಮಿಸಿದ ಪಿ. ಶೇಷಾದ್ರಿಯವರ ನಿರ್ದೇಶನದ ಕನ್ನಡ ಚಲಚಚಿತ್ರ “ತುತ್ತೂರಿ”ಯ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಿನ್ನೆ ಜರುಗಿತು. ತುತ್ತೂರಿ ಚಿತ್ರದ ವೈಶಿಷ್ಟ್ಯವೆಂದರೆ ಅದು ಮಕ್ಕಳ ಚಿತ್ರ. ಅದರಲ್ಲಿ ಮಕ್ಕಳೇ ಪ್ರಮುಖ ಪಾತ್ರಧಾರಿಗಳು. ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ಮತ್ತು ರಾಮಚಂದ್ರ ಅವರ ಛಾಯಾಗ್ರಹಣವಿದೆ. ಧ್ವನಿಸುರುಳಿ ಬಿಡುಗಡೆಯ ಕಾರ್ಯಕ್ರಮದಲ್ಲಿ ನಿರ್ದೇಶಕ ಶೇಷಾದ್ರಿ, ರಾಮಚಂದ್ರ, ಜಯಮಾಲ ಎಲ್ಲ ಭಾಗವಹಿಸಿದ್ದರು. ಧ್ವನಿಸುರುಳಿಯನ್ನು ಆಕಾಶ್ ಆಡಿಯೋದವರು ತಯಾರಿಸಿದ್ದಾರೆ. ಧ್ವನಿಸುರುಳಿಯ ಬಿಡುಗಡೆ ಕಾರ್ಯಕ್ರಮ ವಿನೂತನ ರೀತಿಯಲ್ಲಿ ನೆರವೇರಿತು. ಅನಾಥಾಶ್ರಮದಿಂದ ಬಂದಿದ್ದ ಸುಮಾರು ಮುವತ್ತು ಮಕ್ಕಳು ಧ್ವನಿಸುರುಳಿಯನ್ನು ಬಿಡುಗಡೆ ಮಾಡಿ ವೇದಿಕೆಯಲ್ಲಿದ್ದವರಿಗೆ ಹಂಚಿದರು. ಜಯಮಾಲ, ಶೇಷಾದ್ರಿ, ಆಕಾಶ್ ಆಡಿಯೋ ಪರವಾಗಿ ವೆಂಕಟೇಶ್ ಮತ್ತು ದತ್ತಣ್ಣ ಮಾತನಾಡಿದರು. ಎ. ಎಸ್. ಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.

ತುತ್ತೂರಿ ಚಿತ್ರ ಮೇ ೧೨ ರಂದು ಮೆಜೆಸ್ಟಿಕ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಎಲ್ಲರೂ ತಮ್ಮ ಮಕ್ಕಳನ್ನು ಕರೆದುಕೊಂಡಿ ಬನ್ನಿ ಹಾಗೂ ನಿಮ್ಮ ಪಕ್ಕದ ಮನೆಯವರಿಗೂ ತಿಳಿಸಿ ಎಂದು ಶೇಷಾದ್ರಿ ಕೋರಿಕೊಂಡರು.

ತುತ್ತೂರಿ ಚಿತ್ರದ ಹೆಚ್ಚಿನ ಮಾಹಿತಿಗೆ ಚಿತ್ರದ ಅಂತರಜಾಲ ತಾಣ ನೋಡಿ.

Leave a Reply