Press "Enter" to skip to content

ಕನ್ನಡದಲ್ಲಿ .ಭಾರತ ಡೊಮೈನ್ ಹೆಸರು ಈಗ ಲಭ್ಯ

ಜಾಲತಾಣಗಳ (websites) ವಿಳಾಸಗಳು ಇಂಗ್ಲಿಷಿನಲ್ಲೇ ಇರುವುದು ಗೊತ್ತಿರಬಹುದು. ಅವುಗಳನ್ನು ಪ್ರಪಂಚದ ಎಲ್ಲ ಭಾಷೆಗಳಲ್ಲೂ ಲಭ್ಯಗೊಳಿಸುವುದಕ್ಕೆ ಅಂತಾರಾಷ್ಟ್ರೀಯ ಜಾಲತಾಣ ವಿಳಾಸ (Internationalized Domain Name, IDN) ಎನ್ನುತ್ತಾರೆ. ಇವು ಕನ್ನಡದಲ್ಲಿ ಲಭ್ಯವಿರಲಿಲ್ಲ. ಕನ್ನಡದಲ್ಲಿ ಜಾಲತಾಣ ವಿಳಾಸ ಬಗ್ಗೆ ಹೆಚ್ಚಿನ ತಿಳಿವಳಿಕೆಗೆ ಈ ಲೇಖನ ಓದಬಹುದು. ಭಾರತೀಯ ಭಾಷೆಗಳಲ್ಲಿ .in ಡೊಮೈನ್ ಹೆಸರುಗಳಿಗೆ ಪರ್ಯಾಯವಾದ ಜಾಲತಾಣ ಹೆಸರುಗಳ ಉಸ್ತುವಾರಿಯನ್ನು ನೋಡಿಕೊಳ್ಳುವ NIXI ಯವರ ಜಾಲತಾಣದಲ್ಲಿ ಈಗ ಯಾವ ಯಾವ ಭಾರತೀಯ ಭಾಷೆಗಳಲ್ಲಿ ಇವುಗಳು ಲಭ್ಯ ಎಂಬ ವಿವರವಿದೆ. ಅದರ ಪ್ರಕಾರ ಜಾಲತಾಣಗಳಿಗೆ .ಭಾರತ ಎಂಬ ವಿಳಾಸವು ಈಗ ಅಂದರೆ ಜುಲೈ ೧೫, ೨೦೨೦ ರಿಂದ ಲಭ್ಯವಿದೆ. ಈಗ ವಿಶ್ವಕನ್ನಡ.ಭಾರತ ಮಾದರಿಯಲ್ಲಿ ಜಾಲತಾಣ ವಿಳಾಸ ಪಡೆದುಕೊಳ್ಳಬಹುದು. ಜೊತೆಗೆ ಈಗ ನೀವು ನನಗೆ ಪವನಜ @ ವಿಶ್ವಕನ್ನಡ . ಭಾರತ ಎಂಬ ವಿಳಾಸಕ್ಕೆ ಇಮೈಲ್ ಕೂಡ ಮಾಡಬಹುದು.

Be First to Comment

Leave a Reply

Your email address will not be published. Required fields are marked *