ಒಪ್ಪಣ್ಣನಿಂದ ವಿಷು ವಿಶೇಷ ಸ್ಪರ್ಧೆ – 2012

ಒಪ್ಪಣ್ಣನ ನೆರೆಕರೆ ಪ್ರತಿಷ್ಠಾನ

“ಹವ್ಯಕ”ವೆಂದರೆ ದಕ್ಷಿಣಕನ್ನಡ-ಕಾಸರಗೋಡು-ಉತ್ತರಕನ್ನಡ ಜಿಲ್ಲೆಗಳಲ್ಲಿ ಕೇಂದ್ರೀಕೃತವಾದ ಪಂಗಡ.

ಹವ್ಯಕರ ಆಡುಭಾಶೆ “ಹವ್ಯಕ ಭಾಶೆ”. ಹಳೆಗನ್ನಡಕ್ಕೆ ಹತ್ತಿರವಾದ ಈ ಭಾಶೆ ಪ್ರಸ್ತುತ ಅನೇಕ ಸ್ಥಳೀಯ ಆವೃತ್ತಿಗಳನ್ನು ಹೊಂದಿದೆ.

ಅನೇಕ ಸಾಹಿತಿಗಳು, ಕಲಾವಿದರು, ಚಿಂತಕರು, ರಾಜಕಾರಣಿಗಳು, ಅಧಿಕಾರಿಗಳು – ಹವ್ಯಕ ಪಂಗಡದಿಂದ ಬಂದವರಿದ್ದಾರೆ.

 

ಆಧುನಿಕ ಯುಗದಲ್ಲಿ ಅಂತರ್ಜಾಲದಲ್ಲಿ ಒಪ್ಪಣ್ಣನ ನೆರೆಕರೆ http://oppanna.com ಎಂಬ ಹವ್ಯಕ ವೆಬ್-ಸೈಟ್ ಕಳೆದ ನಾಲ್ಕು ವರುಷಗಳಿಂದ ತನ್ನ ಸಾಹಿತ್ಯ ಕಾರ್ಯವನ್ನು ಮಾಡುತ್ತಿದೆ.

http://oppanna.com ಸಾಹಿತಿ-ಚಿಂತಕ-ಬರಹಗಾರರ ಬಳಗವು ಈಗ ಒಪ್ಪಣ್ಣನ ನೆರೆಕರೆ ಪ್ರತಿಷ್ಠಾನ (ರಿ.) ಆಗಿ ಸರಕಾರೀ ಮಾನ್ಯತೆ ಪಡೆದಿದೆ.

ಈಗಾಗಲೇ ಹವ್ಯಕಭಾಷಾ ಸಾಹಿತ್ಯದ ದೃಷ್ಟಿಯಲ್ಲಿ ಅಪಾರ ಕೊಡುಗೆ ಕೊಡುತ್ತಿರುವ ಪ್ರತಿಷ್ಠಾನ, ಮುಂದಿನ ದಿನಗಳಲ್ಲಿ ಸಾಮಾಜಿಕ- ಸಾಂಸ್ಕೃತಿಕ ಕಾರ್ಯಗಳ ಮೂಲಕ ವ್ಯಾಪ್ತಿವಿಸ್ತಾರವನ್ನು ಹೆಚ್ಚಿಸುವ ಯೋಜನೆಗಳು ಇವೆ.
ಈ ಯುಗಾದಿಯ ಪರ್ವಕಾಲದಲ್ಲಿ ಹೊಸ ಆಶಯಗಳ ಚಿಗುರುಗಳಲ್ಲಿ ಮೊದಲನೇ ಹೆಜ್ಜೆ “ವಿಷು ವಿಶೇಷ ಸ್ಪರ್ಧೆ – 2012
ಬನ್ನಿ, ಭಾಗವಹಿಸಿ, ನಿಮ್ಮ ಮಿತ್ರರಿಂಗೂ ತಿಳಿಸಿ…

ವಿಷು ವಿಶೇಷ ಸ್ಪರ್ಧೆ – 2012 ವಿವರಗಳು:

  1. ಪ್ರಬಂಧ:
    ವಿಷಯ – “ಸಾಂಪ್ರದಾಯಿಕ ರೀತಿಲಿ ಯುಗಾದಿ ಆಚರಣೆಯ ಅಗತ್ಯ”
    750 ಶಬ್ದಗಳಿಗೆ ಸೀಮಿತಗೊಳಿಸಿ
  2. ಕಥೆ :
    ವ್ಯಾಪ್ತಿ: “ಸಾಮಾಜಿಕ ಸಾಮರಸ್ಯ”
    750 ಶಬ್ದಗಳಿಗೆ ಸೀಮಿತಗೊಳಿಸಿ
  3. ಕವಿತೆ:
    ಫೋಟೋ: ಲಗತ್ತಿಸಲಾಗಿದೆ
    (ಅಥವಾ, http://oppanna.com/?p=19646 ದಲ್ಲಿಯೂ ಕಾಣಬಹುದು.)
    30 ಸಾಲುಗಳಿಗೆ ಮಿತಿಗೊಳಿಸಿ. ಛಂದೋಬದ್ಧವಾದ ಕವಿತೆಗಳಿಗೆ ಹೆಚ್ಚಿನ ಆದ್ಯತೆ.
  4. ಫೋಟೋ  ಸ್ಪರ್ಧೆ:
    ಪ್ರಕೃತಿ- ಮನುಷ್ಯನ ಬಾಂಧವ್ಯವನ್ನು ಪ್ರತಿಬಿಂಬಿಸುವ ಚಂದದ ಫೊಟೋಕ್ಕೆ ಸೂಕ್ತ ಶೀರ್ಷಿಕೆಯನ್ನೂ ಕೊಟ್ಟು ಕಳುಹಿಸಬೇಕು.
    ಫೋಟೋದ ಗಾತ್ರ: ಅಂಚೆಯಲ್ಲಿ  ಕಳುಹಿಸುವುದಾದರೆ 5×7 ಅಳತೆಯಲ್ಲಿ..
    ಮಿಂಚಂಚೆಯಲ್ಲಿ ಕಳುಹಿಸುವುದಾದರೆ – 1MB ಮಿತಿಯಿರಲಿ.
  5. ಲಘುಬರಹ:
    ಸದಭಿರುಚಿಯ ನೆಗೆಬರಹ ಈ ವಿಭಾಗಕ್ಕೆ ಬರಲಿ
    500 ಶಬ್ದಗಳಿಗೆ ಮಿತಿಗೊಳಿಸಿ.

ನಿಯಮಗಳು:

  • ಎಲ್ಲಾ ಬರಹಗಳೂ ಕಡ್ಡಾಯವಾಗಿ ಹವ್ಯಕ ಭಾಷೆ- ಕನ್ನಡ ಲಿಪಿಯಲ್ಲಿ ಇರಬೇಕು.
  • ಹವ್ಯಕ ಪರಂಪರೆ – ಸಂಸ್ಕೃತಿಯ ಹಿರಿಮೆಗಳ ಬಿಂಬಿಸುವ ಬರಹಗಳಿಗೆ ಆದ್ಯತೆ.
  • ಸ್ಪರ್ಧೆಗೆ ಬರುವ ಯೇವದೇ ಬರಹ / ಫೋಟೋ ಈ ಹಿಂದೆ ಬೇರೆಲ್ಲಿಯೂ ಪ್ರಕಟ ಆಗಿರಬಾರದು.
  • ಸ್ಪರ್ಧೆಗೆ ಬಂದ ಎಲ್ಲಾ ಬರಹ / ಫೋಟೋಗಳ ಸಂಪೂರ್ಣ ಸ್ವಾಮ್ಯ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ದ್ದೇ ಆಗಿರುತ್ತದೆ.
  • ಸ್ಪರ್ಧೆಯ ವಿಚಾರದಲ್ಲಿ ಸಂಘಟಕರ ತೀರ್ಮಾನವೇ ಅಂತಿಮ.
  • ಪ್ರತಿ ವಿಭಾಗಲ್ಲಿಯು ಪ್ರಥಮ ಮತ್ತೆ ದ್ವಿತೀಯ ಎರಡು ಬಹುಮಾನಗಳು ಇರುತ್ತವೆ.
  • ಭಾಗವಹಿಸಲು ಕೊನೆಯ ದಿನಾಂಕ 04-04-2012

ನಿಮ್ಮ ಬರಹ/ಫೋಟೋವನ್ನು ಹೆಸರು, ಸಂಪೂರ್ಣ ವಿಳಾಸ, ಹುಟ್ಟಿದ ತಾರೀಕು, ದೂರವಾಣಿ ಸಂಖ್ಯೆ ಸಹಿತ, ಈ ವಿಳಾಸಕ್ಕೆ ಕಳುಹಿಸಿಕೊಡಿ:

ಅಂಚೆ ವಿಳಾಸ:
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ),
“ಅನುಗ್ರಹ”, ಶಿವಗಿರಿ ನಗರ, ಕುಳಾಯಿ,
ಹೊಸಬೆಟ್ಟು, ಮಂಗಳೂರು.
575019
ಮಿಂಚಂಚೆ ವಿಳಾಸ:
editor@oppanna.com

  • ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆ:
  • ಅಥವಾ  http://oppanna.com ಅಂತರ್ಜಾಲ ಪುಟದಲ್ಲಿ ಲಭ್ಯ.

ವಿಷು ವಿಶೇಷ ಸ್ಪರ್ಧೆ 2012 – ಸಂಚಾಲಕರು:
ರವಿಶಂಕರ ದೊಡ್ಡಮಾಣಿ
doddamani79@gmail.com08547245304

Leave a Reply