Press "Enter" to skip to content

ಆರ್‍. ಜಿ. ಹಳ್ಳಿ ನಾಗರಾಜ್ ಅವರಿಗೆ ಗೌತಮ ಪ್ರಶಸ್ತಿ

ಬೆಂಗಳೂರು, ಮೇ ೧೩, ೨೦೦೬: ಬೆಂಗಳೂರಿನ ರಾಜಾಜಿನಗರದ ರಂಗೋತ್ರಿ ಮಕ್ಕಳ ರಂಗಶಾಲೆಯವರು ವಿಶ್ವ ಕನ್ನಡದ ಸಹಾಯಕ ಸಂಪಾದಕರಾದ ಆರ್‍. ಜಿ. ಹಳ್ಳಿ ನಾಗರಾಜ್ ಅವರಿಗೆ ೨೦೦೬ನೆ ಇಸವಿಯ ಗೌತಮ ಪ್ರಶಸ್ತಿ ನೀಡಿ ಗೌರವಿಸಿದರು. ಬೆಂಗಳೂರಿನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬೇಲಿಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಈ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಸಾರಿಗೆ ಸಚಿವರಾದ ಶ್ರೀ ಚೆಲುವರಾಯ ಸ್ವಾಮಿಯವರು ಉಪಸ್ಥಿತರಿದ್ದರು. ರಂಗೋತ್ರಿ ಮಕ್ಕಳ ರಂಗಶಾಲೆಯವರು ಬುದ್ಧ ಪೂರ್ಣಿಮೆಯ ಅಂಗವಾಗಿ ಸಮಾಜದ ಗಣ್ಯರಿಗೆ ಗೌತಮ ಪ್ರಶಸ್ತಿ ಪ್ರದಾನ ಮತ್ತು ಬೆಳದಿಂಗಳ ಕಾವ್ಯ ಸಂಗೀತೋತ್ಸವ ಆಯೋಜಿಸಿದ್ದರು. ೨೦೦೬ನೆ ಸಾಲಿನ ಗೌತಮ ಪ್ರಶಸ್ತಿಗೆ ಪಾತ್ರರಾದವರು – ಡಾ| ಸುಭಾಷ್ ಭರಣಿ, ನಾಗತಿಹಳ್ಳಿ ಚಂದ್ರಶೇಖರ್‍, ಆರ್‍. ಜಿ. ಹಳ್ಳಿ ನಾಗರಾಜ್, ಎಂ. ಎಸ್. ಮೂರ್ತಿ, ಡಾ| ಎಚ್. ಎಂ. ವೆಂಕಟಪ್ಪ, ಬಿ. ಟಿ. ರಾಮಚಂದ್ರ, ಸೂತ್ರಂ ನಾಗರಾಜ ಶಾಸ್ತ್ರಿ, ಶರಣಪ್ಪ ಗೋನಾಳ, ಶಿವಶಂಕರ್‍, ಎಂ. ಆರ್‍. ಮಾಳಿ, ಡಾ| ಕೃಷ್ಣರಾಜ ಭಟ್, ಮಂಜುನಾಥ ಆಚಾರ್ಯ, ಜಿ. ರಾಮಕೃಷ್ಣ ಮತ್ತು ಶ್ರೀದೇವಿ ಮೇಳಗಟ್ಟಿ.

ಯಶವಂತ ಹಳಿಬಂಡಿ, ಡಾ| ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು, ಚಂದ್ರಿಕ ಗುರುರಾಜ್, ಕಿಕ್ಕೇರಿ ಕೃಷ್ಣಮೂರ್ತಿ ಮತ್ತಿತರರು ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು.

ಕಾವ್ಯಗೋಷ್ಠಿಯಲ್ಲಿ ಬಿ.ಟಿ. ಲಲಿತಾ ನಾಯಕ್, ಎಲ್. ಎನ್. ಮುಕುಂದರಾಜ್, ಡಾ| ಎಚ್. ಎಲ್. ಪುಷ್ಪ, ಮತ್ತಿತರರು ತಮ್ಮ ಕವನಗಳನ್ನು ವಾಚಿಸಿದರು.

Be First to Comment

Leave a Reply

Your email address will not be published. Required fields are marked *