Press "Enter" to skip to content

ಸ್ಮಾರ್ಟ್‌ಫೋನ್

ಸ್ಮಾರ್ಟ್‌ಫೋನ್ (smartphone) ಅರ್ಥಾತ್ ಚತುರವಾಣಿ ಎಂದರೆ ಮೊಬೈಲ್ ಫೋನಿನ ಕೆಲಸಗಳನ್ನೂ ಮಾಡಬಲ್ಲ ಕಿಸೆಗಣಕ. ಈ ಫೋನುಗಳಲ್ಲಿ ಅಂತರಜಾಲ ನೋಡುವುದು, ಇಮೈಲ್ ಮಾಡುವುದು, ಪದಸಂಸ್ಕರಣೆ, ಜಿಪಿಎಸ್ ಬಳಸಿ ತಾನು ಇರುವ ಸ್ಥಾನ ತಿಳಿಯುವುದು, ಇನ್ನೂ ಏನೇನೋ ಮಾಡಬಹುದು. ಇತ್ತೀಚೆಗೆ ಇಂತಹ ಫೋನುಗಳು ಅಗ್ಗವಾಗುತ್ತ ಜನಸಾಮಾನ್ಯರ ಕೈಗೆಟುಕುವಂತಾಗುತ್ತಿವೆ. ಇಂತಹ ಫೋನುಗಳಿಗೆ ಸಹಸ್ರಾರು ತಂತ್ರಾಂಶಗಳು ಅಂತರಜಾಲದಲ್ಲಿ ಲಭ್ಯವಿವೆ. ಇವುಗಳು ಕೆಲಸ ಮಾಡಲು ಆಂಡ್ರೋಯಿಡ್, ವಿಂಡೋಸ್ ಫೋನ್, ಐಓಎಸ್, ಇತ್ಯಾದಿ ಯಾವುದಾದರೊಂದು ಕಾರ್ಯಾಚರಣೆಯ ವ್ಯವಸ್ಥೆ ಅಗತ್ಯ. ಯಾಕೋ ಏನೋ ಸಿಂಬಿಯನ್ ಫೋನ್‌ಗಳು ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಅಷ್ಟು ಯಶಸ್ಸು ಕಂಡಿಲ್ಲ.

Be First to Comment

Leave a Reply

Your email address will not be published. Required fields are marked *