ಹೆಂಡದ ಬಾಟಲಿಯಲ್ಲಿ ಗಣಕ!

ನಿನ್ನೆ ಅಂತರಜಾಲದಲ್ಲಿ ವಿಹರಿಸುತ್ತಿದ್ದಾಗ ಈ ಸುದ್ದಿ ಕಣ್ಣಿಗೆ ಬಿತ್ತು. ಒಬ್ಬರು ಹೆಂಡದ ಬಾಟಲಿಯೊಳಗೆ ಕಂಪ್ಯೂಟರ್‌ನ ಮದರ್‌ಬೋರ್ಡ್ ನುಸುಳಿಸಿ ಒಂದು ಗಣಕ ತಯಾರಿಸಿದ್ದಾರೆ. ಅಂದರೆ ಗಣಕದ ಎಲ್ಲ ಅಂಗಗಳನ್ನೂ ವಿಸ್ಕಿ ಬಾಟಲಿಯೊಳಗೆ ಅಳವಡಿಸಿದ್ದಾರೆ ಅಂದುಕೊಳ್ಳಬೇಡಿ. ಮೋನಿಟರ್ ಅಂತೂ ಬಾಟಲಿಯಿಂದ ಹೊರಗಿರಲೇ ಬೇಕು ತಾನೆ? ಅದೇ ರೀತಿ ಪವರ್‌ಸಪ್ಲೈ ಕೂಡ ಬಾಟಲಿಯಿಂದ ಹೊರಗಿರಬೇಕು. ಇಷ್ಟೆಲ್ಲ ಕಸರತ್ತು ಮಾಡಿ ಏನು ಸಾಧಿಸಿದಂತಾಯಿತು ಎಂದು ಆಲೋಚಿಸುತ್ತಿದ್ದೀರಾ? “ಕೆಲಸವಿಲ್ಲದ ಬಡಗಿ” ಕೇಳಿದ್ದೀರಿ ತಾನೆ? ಈ ಗಣಕವು ಹೆಂಡ ಕುಡಿದವರಂತೆ ಆಡಿದರೆ ಅದಕ್ಕೆ ಕಾರಣ ಹುಡುಕಬೇಕಾಗಿಲ್ಲ.

Leave a Reply