ಪದವೀಧರರಿಗೆ ಮತ ಚಲಾಯಿಸಲು ಗೊತ್ತಿಲ್ಲವೇ?
ಇತ್ತೀಚೆಗೆ ಕರ್ನಾಟಕದ ವಿಧಾನ ಪರಿಷತ್ತಿನ ಪದವೀಧರ ಕ್ಷೇತ್ರಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಚುನಾವಣೆಗಳು ಜರುಗಿದವು. ಅದರ ಫಲಿತಾಂಶಗಳನ್ನು ನೋಡಿದಾಗ ಒಂದು ಅಂಶ ನನಗೆ ತುಂಬ ಆಶ್ಚರ್ಯ ಮತ್ತು ದುಃಖವನ್ನುಂಟು ಮಾಡಿದವು. ಅದೆಂದರೆ ಈ ಚುನಾವಣೆಯಲ್ಲಿ ಹಾಕಿದ ಮತಗಳಲ್ಲಿ ಸುಮಾರು ಶೇಕಡ ೧೦ರಷ್ಟು ಮತಗಳು ಅಸಿಂಧು ಎಂದು ಪರಿಗಣಿಸಲ್ಪಟ್ಟಿದ್ದು. ಈ ಚುನಾವಣೆಗಳಲ್ಲಿ ಮತ ಚಲಾಯಿಸುವವರು ಜನಸಾಮಾನ್ಯರಲ್ಲ. ಅನಕ್ಷರಸ್ಥರಂತೂ ಅಲ್ಲವೇ ಅಲ್ಲ. ಅವರೆಲ್ಲರೂ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು. ಹೀಗದ್ದೂ ಮತ ಚಲಾಯಿಸುವುದು ಹೇಗೆ ಎಂದು ಅವರಿಗೆ ತಿಳಿದಿಲ್ಲ ಎಂದರೆ ಅಶ್ಚರ್ಯ ಆಗಬೇಡವೇ? ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಶಿಕ್ಷಕರಾಗಿದ್ದಾರೆ. ಇವರಿಂದ ಶಿಕ್ಷಣ ಪಡೆದರೆ ಆ ವಿದ್ಯಾರ್ಥಿಗಳ ಮಟ್ಟ ಹೇಗಿರಬೇಕು? ನಮ್ಮ ಶಾಲಾ ಕಾಲೇಜುಗಳಲ್ಲಿ ಶಿಕ್ಷಣದ ಮಟ್ಟ ತುಂಬ ಕುಸಿದಿದೆ ಎಂದರೆ ಅದಕ್ಕೆ ಪ್ರತ್ಯೇಕ ಕಾರಣ ಹುಡುಕಬೇಕಾಗಿಲ್ಲ ಅಲ್ಲವೇ?
ಅಂದ ಹಾಗೆ ಈ ಚುನಾವಣೆಯಲ್ಲಿ ಗೆದ್ದವರಲ್ಲಿ ನನ್ನ ಆತ್ಮೀಯರಾದ ಶ್ರೀ ಮನೋಹರ ಮಸ್ಕಿಯವರೂ ಇದ್ದಾರೆ. ಅವರಿಗೆ ನನ್ನ ವೈಯಕ್ತಿಕ ಅಭಿನಂದನೆಗಳು. |