ಗೂಗ್ಲ್ ಪರ್ವತ ಪ್ರಸವ

ಗೂಗ್ಲ್ ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಕೆಲವು ವ್ಯಕ್ತಿ, ಸಂಸ್ಥೆ, ಕಂಪೆನಿಗಳು ಯಾವಾಗಲೂ ಹಾಗೆಯೇ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೈಕ್ರೋಸಾಫ್ಟ್ ಕಂಪೆನಿ ಹೊಂದಿದ್ದ ಸ್ಥಾನವನ್ನು ಈಗ ಗೂಗ್ಲ್ ಆಕ್ರಮಿಸಿದೆ. ಅಂದರೆ ಗೂಗ್ಲ್ ಮೈಕ್ರೊಸಾಫ್ಟ್ ಕಂಪೆನಿಯನ್ನು ಶ್ರೀಮಂತಿಕೆಯಲ್ಲಿ ಹಿಂದೆ ಹಾಕಿದೆ ಎಂದು ಅರ್ಥವಲ್ಲ. ಪತ್ರಿಕೆ ಮತ್ತು ಅಂತರಜಾಲ ತಾಣಗಳ ಮುಖ ಪುಟಗಳನ್ನು ಆಕ್ರಮಿಸುವುದರಲ್ಲಿ ಈಗ ಗೂಗ್ಲ್ ಎಲ್ಲರಿಗಿಂತ ಮುಂದಿದೆ. ಗೂಗ್ಲ್ ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಈ ಸಮೂಹ ಸನ್ನಿ ಎಷ್ಟರ ಮಟ್ಟಿಗಿದೆಯೆಂದರೆ ಗೂಗ್ಲ್ ಏನೇ ಮಾಡದಿದ್ದರೂ ಅದೂ ಕೂಡ ಸುದ್ದಿಯಾಗುತ್ತದೆ. ಇತ್ತೇಚೆಗಿನ ಒಂದು ಉದಾಹರಣೆಯನ್ನು ಗಮನಿಸೋಣ. ಗೂಗ್ಲ್ ಸದ್ಯದಲ್ಲೇ ಕಾರ್ಯಾಚರಣ ವ್ಯವಸ್ಥೆ (operating system) ತಯಾರಿಸುತ್ತಿದೆ. ಅದನ್ನು ಕಳೆದ ಶುಕ್ರವಾರ (ಜನವರಿ ೬, ೨೦೦೬) ಬಿಡುಗಡೆ ಮಾಡುತ್ತದೆ ಎಂದು ಕೆಲವು ಪತ್ರಿಕೆಗಳು ಮತ್ತು ಅಂತರಜಾಲ ತಾಣಗಳು ಗುಲ್ಲೆಬ್ಬಿಸಿದವು. ಆದರೆ ಕೊನೆಗೆ ಹೊರಬಂದುದು ಏನು ಗೊತ್ತೆ? ಈಗಾಗಲೇ ಅಂತರಜಾಲದಲ್ಲಿ ಉಚಿತವಾಗಿ ದೊರೆಯುತ್ತಿರುವ ಕೆಲವು ತಂತ್ರಾಂಶಗಳು. ಅಷ್ಟೆ!

Leave a Reply