ಕೊಳನೂದುವ ಚದುರನ್ಯಾರೆ ಪೇಳಮ್ಮಯ್ಯ

ಶ್ರೀ ವ್ಯಾಸರಾಯರು

ಕೊಳಲನೂದುವ ಚದುರನ್ಯಾರೆ ಪೇಳಮ್ಮಯ್ಯ
ತಳಿರಂದದಿ ಪೊಳೆವ ಕರ ಪಿಡಿದು
ನಾರದಿ ತುಂಬಿತು ಗೋವರ್ಧನಗಿರಿ
ಯಾದವಕುಲ ಘನ ಒರೆದಿತು ಖಗಕುಲ
ಸಾಧಿಸಿನೋಡಲು ಕೃಷ್ಣನ ಈಗಲೆ
ಸಾಧ್ಯವೇನೇ ಬೃಂದಾವನದೊಳು
ಮೇವು ಮರೆತವು ಗೋವುಗಳೆಲ್ಲವು
ಸಾವಧಾನದಿ ಹರಿದಳು ಯಮುನಾ
ಆವ ಕಾಯುತಲಿ ಗೋವುಗಳ ಮರೆತರು
ಹಾವಭಾವದಲಿ ಬೃಂದಾವನದೊಳು
ಸುರರು ಸುರಿದರಾಕಾಶದಿ ಸುಮಗಳ
ಸರಿದು ಪೋಗಿ ನೋಡೆ ಬೃಂದಾವನದೊಳು
ಸಾರಿ ಸಾರಿ ಶ್ರೀ ಕೃಷ್ಣನು ಈಗಲೆ
ತುರುಗಳ ಕಾಯುತ ಕದಂಬವನದೊಳು

Leave a Reply